Categories
Uncategorized ಉಡುಪಿ ಕರಾವಳಿ ಚಿಕ್ಕಮಗಳೂರು ತೀರ್ಥಹಳ್ಳಿ ಬೆಂಗಳೂರು ಮಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ಚಿನ್ನದ ಬೆಲೆ ಗಗನಕ್ಕೆ..!

ಚಿನ್ನದ ಬೆಲೆ ಗಗನಕ್ಕೆ..!
– ಅಮೆರಿಕಾ ಸರ್ಕಾರದ ಶಟ್‌ಡೌನ್ ಭಾರಿ ಬೆಲೆ ಏರಿಕೆಗೆ ಕಾರಣ
– ಬೆಳ್ಳಿಯ ಬೇಡಿಕೆ ಹೆಚ್ಚಳದಿಂದ ಬೆಲೆ ಏರಿಕೆ

NAMMUR EXPRESS NEWS
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡಿದ್ದು, ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಮೂಡಿಸಿದೆ. ಚಿನ್ನಾಭರಣ ಪ್ರಿಯರಲ್ಲಿ ಚಿನ್ನದ ಬೆಲೆ ಏರಿಕೆ ದಿಗಿಲು ಮೂಡಿಸಿದೆ. ಇದಕ್ಕೆಲ್ಲಾ ವಿಶ್ವದ ದೊಡ್ಡಣ್ಣ ಅಮೆರಿಕ ಸರ್ಕಾರದ ಶಟ್‌ಡೌನ್‌ ಪರಿಸ್ಥಿತಿಯೇ ಕಾರಣ ಎಂದು ವಿಶ್ಲೇಷಿಸಲಾಗ್ತಿದೆ. ಇಂದು ಬರೋಬ್ಬರಿ 1250 ರೂಪಾಯಿ ಹೆಚ್ಚಳ ಕಂಡಿದೆ.

10 ಗ್ರಾಂ ಬೆಲೆ ಎಷ್ಟು?
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 1250 ರೂಪಾಯಿ ಹೆಚ್ಚಳ ಆಗಿ, 1,22,020 ರುಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1150 ರೂ ಹೆಚ್ಚಳ ಆಗಿ, 1,11,850 ರೂಪಾಯಿಗೆ ಏರಿಕೆ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,202 ರೂ ಇದೆ. ಬೆಳ್ಳಿಯ ಬೆಲೆ ಕೂಡಾ ಬರೋಬ್ಬರಿ 1000 ರೂಪಾಯಿ ಏರಿಕೆ ಆಗಿದ್ದು ಹೀಗಾಗಿ ಕೆಜಿ ಬೆಲೆ 1,57,000 ರೂ ಆಗಿದೆ.

– ಬೆಲೆ ಹೆಚ್ಚಳಕ್ಕೆ ಕಾರಣ:-

ಅಮೆರಿಕದ ಫೆಡರಲ್ ರಿಸರ್ವ್‌ನಿಂದ ಮತ್ತಷ್ಟು ಬಡ್ಡಿದರ ಕಡಿತದ ನಿರೀಕ್ಷೆಗಳು ಮತ್ತು ಚಿನ್ನದ ಮೇಲಿನ ಹೂಡಿಕೆಯ ಬೇಡಿಕೆ ಬೆಲೆ ಹೆಚ್ಚಳಕ್ಕೆ ನೇರ ಕಾರಣವಾಗಿದೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ಆರ್ಥಿಕ ಮತ್ತು ರಾಜಕೀಯ ಅನಿಶ್ಚಿತತೆಗಳು, ಅಮೆರಿಕದಲ್ಲಿ ಸರ್ಕಾರಿ ಕಾರ್ಯಾಚರಣೆ ಸ್ಥಗಿತಗೊಂಡಿರುವುದು ಉದ್ಯೋಗ ನಷ್ಟದ ಅಪಾಯವನ್ನು ಹೆಚ್ಚಿಸಿದೆ. ಈ ಸ್ಥಗಿತವು ಏಳನೇ ದಿನಕ್ಕೆ ತಲುಪಿದ್ದು, ಆರ್ಥಿಕ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಬೆಳ್ಳಿಯ ಬೇಡಿಕೆ ಕೂಡಾ ಶೇಕಡಾ 16 ರಷ್ಟು ಏರಿಕೆಯಾಗಿದೆ. ಈ ವರ್ಷ ಅಮೆರಿಕದ ಫೆಡ್‌ನಿಂದ ಇನ್ನೂ ಎರಡು 25 ಬೇಸಿಸ್ ಪಾಯಿಂಟ್ ಬಡ್ಡಿದರ ಕಡಿತದ ಸಾಧ್ಯತೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಬೆಂಬಲಿಸುತ್ತಿದೆ. ಚಿನ್ನವು ಈ ಗರಿಷ್ಠ ಮಟ್ಟದಿಂದ ಹಿಂಜರಿಕೆ ಕಂಡರೆ, ಮಾರುಕಟ್ಟೆಗೆ ಪ್ರವೇಶಿಸಲು ಬಯಸುವ ಹೂಡಿಕೆದಾರರಿಗೆ ಇದು ಖರೀದಿ ಅವಕಾಶವನ್ನು ನೀಡಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.