ಕ್ಷಯ ರೋಗದ ಅರಿವು ಮೂಡಿಸಿದ ಜ್ವಾಲಾಮಾಲಿನಿ ಜೆಸಿಐ ಘಟಕ
* ನರ್ಸಿಂಗ್ ವಿದ್ಯಾರ್ಥಿಗಳಿಗೆ ರೋಗದ ಬಗ್ಗೆ ಅರಿವು ಹಾಗೂ ರಸ ಪ್ರಶ್ನೆ ಕಾರ್ಯಕ್ರಮ
* ಮೊಬೈಲ್ ತೊರೆದು ಜ್ಞಾನ ಹೆಚ್ಚಿಸಿಕೊಳ್ಳಲು ಗಮನ ಕೊಡಿ – ಸಾರ್ಥಕ್ ಗೌಡ
NAMMMUR EXPRESS NEWS
ಎನ್ ಆರ್ ಪುರ: ಇಲ್ಲಿನ ಜ್ವಾಲಾಮಾಲಿನಿ ಜೆಸಿಐ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪುಷ್ಪ ಆಸ್ಪತ್ರೆಯ ಆವರಣದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ‘ಕ್ಷಯ ರೋಗದ ಅರಿವು ಮತ್ತು ರಸಪ್ರಶ್ನೆ ಕಾರ್ಯಕ್ರಮ’ವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಡಿ.ಆರ್.ಟಿ.ಬಿ. ಮೇಲ್ವಿಚಾರಕ ಎಚ್ ಕೆ ಕೃಷ್ಣಮೂರ್ತಿ ಮಾಹಿತಿ ನೀಡಿದರು.
ಕ್ಷಯ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಗಾಳಿ ಮೂಲಕ ಹರಡುವ ಮಾರಣಾಂತಿಕ ಕಾಯಿಲೆಯಾಗಿದೆ.ಕ್ಷಯರೋಗದ ಪ್ರಮುಖ ಲಕ್ಷಣಗಳೆಂದರೆ ಸಂಜೆಯ ವೇಳೆಯಲ್ಲಿ ಜ್ವರ, ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫದಲ್ಲಿ ರಕ್ತ, ತೂಕ ಕಡಿಮೆಯಾಗುವುದು, ಈ ಕಾಯಿಲೆ ನಿಯಂತ್ರಣಕ್ಕೆ ಲಸಿಕೆ ಕೂಡ ಲಭ್ಯವಿದ್ದು, ಸರ್ಕಾರದ ‘ನಿಶ್ಚಯ ಪೋಷನ್’ ಯೋಜನೆಯಡಿ ಪ್ರತಿ ತಿಂಗಳು ಪೌಷ್ಟಿಕ ಆಹಾರಕ್ಕಾಗಿ ಪ್ರತಿಯೊಬ್ಬ ಕ್ಷಯರೋಗಿಗೆ ₹2 ಸಾವಿರ ಧನ ಸಹಾಯ ನೀಡಲಾಗುತ್ತದೆ’ ಎಂದು ತಿಳಿಸಿದರು.
ಪುಷ್ಪ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಪ್ರಿನ್ಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಜೆಸಿಐ ಘಟಕದ ಅಧ್ಯಕ್ಷ ಸಾರ್ಥಕ್ ಗೌಡ ಮಾತನಾಡಿ, ‘ಪ್ರತಿದಿನ ಹೊಸತನ್ನು ಕಲಿಯಲು, ಹೊಸ ಹೊಸ ಬಗೆಗಳನ್ನು ಅರಿತುಕೊಳ್ಳಲು ಪುಸ್ತಕ ಎಲ್ಲರಿಗೂ ಒಳ್ಳೆಯ ಸ್ನೇಹಿತ, ಈ ನಿಟ್ಟಿನಲ್ಲಿ ಮೊಬೈಲ್ ತೊರೆದು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಓದಿನ ಕಡೆ ಗಮನ ಹರಿಸಬೇಕು ಎಂದರು.
ಸಿಸ್ಟರ್ ಜಸ್ಟಿನ್ ಜೆಸಿಐ ಸಪ್ತಾಹದ ಪ್ರಧಾನ ನಿರ್ದೇಶಕ ಜಾಯ್, ಕಾರ್ಯದರ್ಶಿ ಮಿಥುನ್, ಪವನ್ ಕರ್, ಸುಹಾಸ್ ಭಾಗವಹಿಸಿದ್ದರು. ತಾಲ್ಲೂಕು ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್ನರ್, ವಿದ್ಯಾರ್ಥಿನಿಯರಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. 36 ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.
ಸೆಲ್ಯೂಟ್ ಟು ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಜಿಲ್ಲಾ ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಎಚ್.ಕೆ.ಕೃಷ್ಣಮೂರ್ತಿ ಮತ್ತು ಪುಷ್ಪ ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಸಿಸ್ಟರ್ ಜೋಳಿ ಜೋಸ್ ಅವರನ್ನು ಸನ್ಮಾನಿಸಲಾಯಿತು.
