ವಿಜಯದೇವ್, ವಿಶ್ವನಾಥ್ ಗದ್ದೆಮನೆ ಅವರಿಗೆ ಮಲೆನಾಡು ರತ್ನ ಪ್ರಶಸ್ತಿ
– ರಾಜಧಾನಿಯಲ್ಲಿ ಅ.12ರಂದು ಮಲೆನಾಡು ಹಿತರಕ್ಷಣಾ ಸಮಿತಿಯಿಂದ ಪ್ರಶಸ್ತಿ
– ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ವಿನಯ್ ಗುರೂಜಿ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ
NAMMUR EXPRESS NEWS
ತೀರ್ಥಹಳ್ಳಿ: ಬೆಂಗಳೂರಿನ ಮಲೆನಾಡು ಹಿತ ರಕ್ಷಣಾ ಸಮಿತಿಯು ಪ್ರದಾನ ಮಾಡುವ ‘ ಮಲೆನಾಡು ರತ್ನ’ ಪ್ರಶಸ್ತಿಗೆ ತೀರ್ಥಹಳ್ಳಿ ತಾಲೂಕಿನ ಹಿರಿಯ ಸಹಕಾರಿ, ಸಹ್ಯಾದ್ರಿ ಸಂಸ್ಥೆಗಳ ಸಂಸ್ಥಾಪಕರಾದ ಬಸವಾನಿ ವಿಜಯದೇವ ಹಾಗೂ ಯುವ ಉದ್ಯಮಿ,ವಕೀಲರು,ಸಮಾಜ ಸೇವಕರೂ ಆದ ವಿಶ್ವನಾಥ್ ಗದ್ದೆಮನೆಯವರು ಆಯ್ಕೆಗೊಂಡಿದ್ದಾರೆ.
ಅಕ್ಟೋಬರ್ 12ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಡಾ|| ರಾಜಕುಮಾರ್ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಜರುಗಲಿರುವ ತನ್ನ 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಸಮಾರಂಭದಲ್ಲಿ ಡಿಸಿಎಂ. ಡಿಕೆ ಶಿವಕುಮಾರ್, ಅವಧೂತ ವಿನಯ ಗುರೂಜಿ, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಮಹಾಲಕ್ಷ್ಮಿಪುರ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯರಾದ ಡಾ| ಆರತಿ ಕೃಷ್ಣ ಭಾಗವಹಿಸುವರು.
ಮಲೆನಾಡ ಹಿರಿಯ ಸಹಕಾರಿ ವಿಜಯ್ ದೇವ್
ಮಲೆನಾಡು ಹಿತ ರಕ್ಷಣಾ ಸಮಿತಿಯು ಪ್ರತಿ ವರ್ಷವೂ ಕೊಡಮಾಡುವ ಮಲೆನಾಡು ರತ್ನ ಪ್ರಶಸ್ತಿಗೆ ತೀರ್ಥಹಳ್ಳಿಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರೂ,ತೀರ್ಥಹಳ್ಳಿ ಸಹ್ಯಾದ್ರಿ ಸಮೂಹ ಸಂಸ್ಥೆಗಳ ಅಧ್ಯಕ್ಷರೂ, ರಾಜ್ಯ ಭೂ ಬ್ಯಾಂಕ್ ನಿರ್ದೇಶಕರೂ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರೂ, ತೀರ್ಥಹಳ್ಳಿ ಭೂ ಬ್ಯಾಂಕ್ ಅಧ್ಯಕ್ಷರೂ ಆದ ಬಸವಾನಿ ವಿಜಯದೇವ್ ಆಯ್ಕೆಗೊಂಡಿದ್ದಾರೆ. ಅವರಿಗೆ ಶುಭಾಶಯಗಳು.
ಸಮಾಜ, ಶಿಕ್ಷಣ ಸೇವೆ ಮೂಲಕ ಜನರ ಮನಗೆದ್ದ ಯುವ ಉದ್ಯಮಿ!
ಮಲೆನಾಡಿನಲ್ಲಿ ವಿಶ್ವನಾಥ್ ಗದ್ದೆಮನೆಯವರು ತಮ್ಮ ಸಮಾಜ ಸೇವೆಯ ಮೂಲಕ ಬಡ,ಮಧ್ಯಮ ವರ್ಗದ ಜನರಿಗೆ ಸಹಕಾರಿಯಾಗಿದ್ದು, ಸಾವಿರಾರು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಯುವ ಉದ್ಯಮಿ ವಿಶ್ವನಾಥ್ ಅವರು ಮಲೆನಾಡ ಹೆಮ್ಮೆ. ಅವರಿಗೆ ಪ್ರತಿಷ್ಠಿತ ಮಲೆನಾಡು ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
