Categories
Uncategorized ರಾಜ್ಯ

ಕಲಬುರಗಿ : ಆಟ ಆಡಲು ಹೋದ ಇಬ್ಬರು ಮಕ್ಕಳು ಟ್ಯಾಂಕಿಗೆ ಬಿದ್ದು ಸಾವು…!!

ಟಾಪ್ 3 ನ್ಯೂಸ್

ಕಲಬುರಗಿ : ಆಟ ಆಡಲು ಹೋದ ಇಬ್ಬರು ಮಕ್ಕಳು ಟ್ಯಾಂಕಿಗೆ ಬಿದ್ದು ಸಾವು…!!
– ಚಾಮರಾಜನಗರ: ಮದುವೆಗೆ ವಧು ಸಿಗದಿದ್ದಕ್ಕೆ ಕಂಬ ಹತ್ತಿದ್ದವ ಕರೆಂಟ್ ಹೊಡೆದು ಸಾವು..!
– ಬೆಂಗಳೂರು: ಹೂಡಿಕೆ ನೆಪದಲ್ಲಿ ಶಿಕ್ಷಕಿಗೆ ₹53 ಲಕ್ಷ ವಂಚಿಸಿದ ಸೈಬ‌ರ್ ವಂಚಕರು

NAMMUR EXPRESS NEWS
ಕಲಬುರಗಿ : ತಾಲೂಕಿನ ಕೋಳಕೂರ ಗ್ರಾಮದಲ್ಲಿ ಮಕ್ಕಳಿಬ್ಬರು ಮನೆ ಮುಂದಿನ ಸೆಪ್ಟಿಕ್ ಟ್ಯಾಂಕ್‌ ನಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ತಿಪ್ಪಣ್ಣ ಜಡಿ ಅವರ ಮಗ ಗಿರೀಶ್ (3) ಹಾಗೂ ಅವರ ಸಹೋದರಿ ಐಶ್ವರ್ಯ ಹೇರೂರ ಅವರ ಒಂದೂವರೆ ವರ್ಷದ ಮಗಳು ಶ್ರೇಷ್ಠ ಮೃತಪಟ್ಟವರು. ಬೆಳಗಿನ ಉಪಾಹಾರ ಸೇವಿಸಿದ ನಂತರ ಇವರು ಹೊರಗಡೆ ಆಡಲು ಹೋದಾಗ ಈ ಅವಘಡ ಸಂಭವಿಸಿದೆ.
ಅರ್ಧ ಗಂಟೆ ಕಳೆದರೂ ಮಕ್ಕಳು ಕಾಣಿಸದಿದ್ದಾಗ ಮನೆಯವರು ಹಾಗೂ ಅಕ್ಕಪಕ್ಕದವರು ಎರಡೂವರೆ ತಾಸು ಹುಡುಕಿದ್ದಾರೆ. ಎಲ್ಲಿಯೂ ಸಿಗದ ಕಾರಣಕ್ಕೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದಾಗ ತಕ್ಷಣವೇ ಬಂದು ಮಾಹಿತಿ ಕಲೆ ಹಾಕಿದರು, ಮನೆ ಮುಂದಿನ ಟ್ಯಾಂಕ್ ಇರುವ ವಿಷಯ ತಿಳಿದು ಅದರಲ್ಲಿ ನೋಡಿದಾಗ ಮಕ್ಕಳು ಮೃತಪಟ್ಟಿದ್ದವು.
ತಿಪ್ಪಣ್ಣ ಜಡಿ ಅವರ ಸಹೋದರಿ ಐಶ್ವರ್ಯ ಎರಡನೇ ಹೆರಿಗೆಗೆ ತವರು ಮನೆಗೆ ಆಗಮಿಸಿದ್ದಳು. ಮೊದಲನೆ ಮಗಳು ಶ್ರೇಷ್ಠ ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ತಿಪ್ಪಣ್ಣ ಜಡಿಯವರ ಮೂರು ಮಕ್ಕಳಲ್ಲಿ ಕೊನೆಯ ಮಗ ಗಿರೀಶ್ ಮೃತಪಟ್ಟಿದ್ದಾನೆ.

– ಚಾಮರಾಜನಗರ: ಮದುವೆಗೆ ವಧು ಸಿಗದಿದ್ದಕ್ಕೆ ಕಂಬ ಹತ್ತಿದ್ದವ ಕರೆಂಟ್ ಹೊಡೆದು ಸಾವು..!

ಚಾಮರಾಜನಗರ : ಮದುವೆಗೆ ವಧು ಸಿಗಲಿಲ್ಲ ಎಂದು ಮನ ನೊಂದು ಹೈಟೆನ್ನನ್ ತಂತಿ ಮುಟ್ಟಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಟಿಸಿ ಹುಂಡಿ ಗ್ರಾಮದಲ್ಲಿ ನಡೆದಿದೆ. ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿ (27) ಆತ್ಮಹತ್ಯೆಗೆ ಶರಣಾದ ಯುವಕ. ಈತ ಮದುವೆಗೆ ಹುಡುಗಿ ಸಿಗುತ್ತಿಲ್ಲ ಎಂದು ಖಿನ್ನನಾಗಿದ್ದ. ಮದ್ಯದ ಗೀಳಿಗೆ ದಾಸನಾಗಿದ್ದ ಈತ ಕೆಲ ತಿಂಗಳ ಹಿಂದೆ ಮದ್ಯೆ ಸೇವನೆ ಬಿಟ್ಟಿದ್ದ. ಬಳಿಕ, ಈತನಿಗೆ ಹುಡುಗಿ ಹುಡುಕಲಾಗುತ್ತಿತ್ತು. ಈ ಮಧ್ಯೆ, ಮನೆ ಚಿಕ್ಕದು, ಜಮೀನಿಲ್ಲ ಎಂಬ ಕಾರಣಕ್ಕೆ 2 ಸಂಬಂಧ ಮುರಿದು ಬಿದ್ದವು. ಇದರಿಂದ ಆತ ಮತ್ತಷ್ಟು ವಿಚಲಿತನಾಗಿದ್ದ. ಮಂಗಳವಾರ ಬೆಳಗ್ಗೆ ಆತ ಹೈಟೆನ್ನನ್ ಕಂಬ ಏರಿರುವ ವಿಚಾರವನ್ನು ಸ್ಥಳೀಯರು ಆತನ ತಾಯಿಗೆ ತಿಳಿಸಿದರು. ತಾಯಿ ಕಣ್ಣೀರು ಹಾಕುತ್ತಾ ಕೆಳಗಿಳಿ ಎಂದು ಪರಿಪರಿಯಾಗಿ ಕೂಗಿದರು. ಆದರೆ, ಮಾತು ಕೇಳದ ಆತ ಕೈ ಮೇಲೆತ್ತಿ ತಂತಿ ಮುಟ್ಟಿ, ಕೊನೆಯುಸಿರೆಳೆದ.

– ಬೆಂಗಳೂರು: ಹೂಡಿಕೆ ನೆಪದಲ್ಲಿ ಶಿಕ್ಷಕಿಗೆ ₹53 ಲಕ್ಷ ವಂಚಿಸಿದ ಸೈಬ‌ರ್ ವಂಚಕರು

ಬೆಂಗಳೂರು : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ ಶಿಕ್ಷಕಿಯೊಬ್ಬರನ್ನು ಸಂಪರ್ಕಿಸಿರುವ ದುಷ್ಕರ್ಮಿಗಳು ಅಧಿಕ ಲಾಭದ ಅಮಿಷವೊಡ್ಡಿ ಆಕೆಯಿಂದ ₹53 ಲಕ್ಷ ಪಡೆದು ವಂಚಿಸಿದ ಆರೋಪದಡಿ ವೈಟ್ ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸವನಗರ ನಿವಾಸಿ ತ್ರಿಶಾ ವಂಚನೆಗೆ ಒಳಗಾದ ಶಿಕ್ಷಕಿ. ಇವರು ನೀಡಿದ ದೂರಿನ ಮೇರೆಗೆ ಮಾಹಿತಿ ತಂತಜ್ಞಾನ ಕಾಯ್ದೆ, ಬಿ ಎನ್ ಎಸ್ ಕಲಂ 318(4), 319(2) ಅಡಿ ಎಫ್ ಐ ಆ‌ರ್ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜನವರಿಯಲ್ಲಿ ಅಪರಿಚಿತ ವ್ಯಕ್ತಿ ‘ಡ್ರಿಮ್ ಎಕ್ಸ್ ಚೇಂಜ್ ಗ್ರೂಪ್-5’ ವಾಟ್ಸಾಪ್ ಗ್ರೂಪ್‌ಗೆ ತ್ರಿಶಾ ಅವರ ಮೊಬೈಲ್ ಸಂಖ್ಯೆ ಸೇರಿಸಿದ್ದಾನೆ. ಈ ಗ್ರೂಪ್‌ನಲ್ಲಿ ಕೆಲ ಕಾಲ ಷೇರು ಮಾರುಕಟ್ಟೆ ಹಾಗೂ ಷೇರುಗಳ ಬಗ್ಗೆ ತಿಳಿಸಲಾಗಿದೆ. ಬಳಿಕ ತ್ರಿಶಾ ಅವರ ಮೊಬೈಲ್ ಸಂಖ್ಯೆಯನ್ನು ‘ಗೋಪಾಲ ವಿಐಪಿ ಸರ್ವಿಸ್ ಗ್ರೂಪ್-88’ ವಾಟಾಪ್ ಗ್ರೂಪ್‌ಗೆ ಜಾಯಿನ್ ಮಾಡಲಾಗಿದೆ. ಅಪರಿಚಿತರು ತ್ರಿಶಾ ಅವರ ಮೊಬೈಲ್‌ಗೆ ಕರೆ ಮಾಡಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿದ್ದಾರೆ.
ವಿವಿಧ ಹಂತಗಳಲ್ಲಿ ₹53 ಲಕ್ಷ ವರ್ಗಾವಣೆ: ಇದನ್ನು ನಂಬಿದ ತ್ರಿಶಾ
ಅಪರಿಚಿತರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು 53 ಲಕ್ಷ ವರ್ಗಾಯಿಸಿದ್ದಾರೆ. ಇನ್ನೂ ಹೆಚ್ಚಿನ ಹೂಡಿಕೆಗೆ ಒತ್ತಡ ಆರಂಭಿಸಿದ್ದಾರೆ. ಆದರೆ ಇದಕ್ಕೆ ತ್ರಿಶಾ ಒಪ್ಪಿಲ್ಲ. ಈಗ ಹೂಡಿಕೆ ಮಾಡಿದ ಹಣ ವಾಪಸ್‌ಗೆ ಒತ್ತಡ ಹಾಕಿದ್ದಾರೆ. ಒಪದೆ ಕರೆ ಕಡಿತ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.