ಹರ್ಕ್ಯುಲಸ್ ಪಿಲ್ಲರ್ ಹಿಡಿದು ವಿಶ್ವ ದಾಖಲೆ ನಿರ್ಮಿಸಿದ ಭಾರತೀಯ ಹೀರೋ!
– ಶಕ್ತಿ ಕ್ಷೇತ್ರದಲ್ಲಿ ಭಾರತೀಯನ ಸಾಧನೆ
– ಎರಡು ನಿ. 11 ಸೆಕೆಂಡು ಕಾಲ ಹಿಡಿದಿಟ್ಟು ದಾಖಲೆ ಸೃಷ್ಟಿಸಿದ ಅಥ್ಲೀಟ್ ವಿಸ್ಪಿ ಖರಾಡಿ!
NAMMUR EXPRESS NEWS
ನವದೆಹಲಿ: ಶಕ್ತಿ ಸಾಧನೆಯಲ್ಲಿ, ಭಾರತೀಯ ಅಥ್ಲೀಟ್ ವಿಸ್ಪಿ ಖರಾಡಿ ಅವರು ಹರ್ಕ್ಯುಲಸ್ ಪಿಲ್ಲರ್ಸ್ ಅನ್ನು ಹಿಡಿದಿಟ್ಟುಕೊಂಡು ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಹೌದು ಇದೊಂದು ಅಸಾಧಾರಣ ಸಾಧನೆಯಾಗಿದ್ದು, ವಿಶ್ವದಾದ್ಯಂತ ಗಮನ ಸೆಳೆದಿದ ಸಂಗತಿಯಾಗಿದೆ.
ಫಿಟ್ನೆಸ್ ತಜ್ಞ ಮತ್ತು ಹೆಸರಾಂತ ವಿಸ್ಪಿ ಖರಡಿ, ಎರಡು ಬೃಹತ್ ಹರ್ಕ್ಯುಲಸ್ ಪಿಲ್ಲರ್‌ಗಳನ್ನು ಎರಡು ನಿಮಿಷ ಮತ್ತು 11 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಈ ಪ್ರದರ್ಶನವು ಗುಜರಾತ್‌ನ ಸೂರತ್‌ನಲ್ಲಿ ನಡೆದಿದ್ದು, ಇದೊಂದು ಗಿನ್ನಿಸ್ ದಾಖಲೆಯಾಗಿದೆ.
ವಾಸ್ತುಶಿಲ್ಪದ ರಚನೆಗಳನ್ನು ಹೋಲುವಂತೆ ವಿನ್ಯಾಸಗೊಳಿಸಿದ ಹಾರ್ಕ್ಯುಲಸ್ ಕಂಬಗಳು, 123 ಇಂಚುಗಳಷ್ಟು ಎತ್ತರ ಮತ್ತು 20.5 ಇಂಚುಗಳಷ್ಟು ವ್ಯಾಸವನ್ನು ಹೊಂದಿದ್ದು, 160 ಕೆ. ಜಿ ತೂಕವಿರುವ ಕಂಬವಾಗಿದೆ.
ಹಗ್ಗಕ್ಕೆ ಜೋಡಿಸಲಾದ ಕಂಬಗಳನ್ನು ಎರಡು ನಿಮಿಷಕ್ಕೂ ಹೆಚ್ಚು ಕಾಲ ಹಿಡಿಯುವ ಮೂಲಕ ಖರಡಿ ಅವರು ಗಿನ್ನಿಸ್ ದಾಖಲೆಯಲ್ಲಿ ಅವರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಕ್ತಿ ಕ್ಷೇತ್ರದಲ್ಲಿ ಒಬ್ಬ ಭಾರತೀಯನನ್ನು ವಿಶ್ವಾದ್ಯಂತ ಪ್ರಶಂಸಿಸುತ್ತಿರುವುದು ಅಪಾರ ಹೆಮ್ಮೆಯ ವಿಚಾರವಾಗಿದೆ.
