Categories
Uncategorized ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ಬೆಳ್ತಂಗಡಿ ಮಂಗಳೂರು

ಕಾಂತಾರ ಚಾಪ್ಟರ್ 1 ಕಾರ್ಕಳದ ರಮಿತಾ ಶೈಲೇಂದ್ರ ಮಿಂಚಿಂಗ್!

ಕಾಂತಾರ ಚಾಪ್ಟರ್ 1 ಕಾರ್ಕಳದ ರಮಿತಾ ಶೈಲೇಂದ್ರ ಮಿಂಚಿಂಗ್!
– ರುಕ್ಕಿಣಿ ವಸಂತ್ ಹೀರೋಯಿನ್ ತಾಯಿ ರಾಜಮಾತೆಯ ಪಾತ್ರ
– ಸಮಾಜ ಸೇವೆಗೂ ಸೈ… ನಟನೆಗೂ ಸೈ..!

NAMMUR EXPRESS NEWS
ಕರಾವಳಿ: ಕಾಂತಾರ ಚಾಪ್ಟರ್ 1 ಸಿನಿಮಾ ಕನ್ನಡ ಚಿತ್ರ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಲು ಸಿದ್ಧವಾಗಿದ್ದು, ನಾಡಿನ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಅದರಲ್ಲೂ ಕರಾವಳಿ ಭಾಗದ ಅನೇಕರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ರುಕ್ಕಿಣಿ ವಸಂತ್ ಹೀರೋಯಿನ್ ಆಗಿದ್ದು, ಅವರು ‘ಕನಕವತಿ’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅವರ ತಾಯಿಯಾಗಿ ರಾಜಮಾತೆಯ ಪಾತ್ರದಲ್ಲಿ ಕಾರ್ಕಳದ ಶ್ರೀಮತಿ ರಮಿತಾ ಶೈಲೇಂದ್ರ ಕಾಣಿಸಿಕೊಳ್ಳಲಿದ್ದಾರೆ.
ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬ‌ರ್ 2ರಂದು ಬಿಡುಗಡೆಗೊಳ್ಳಲಿದೆ. ಶ್ರೀಮತಿ ರಮಿತಾ ಶೈಲೇಂದ್ರ ತಮ್ಮ ಸಮಾಜ ಸೇವೆಯಿಂದ ಕರಾವಳಿಯಲ್ಲಿ ಚಿರಪರಿಚಿತರಾಗಿದ್ದಾರೆ. ರಮಿತಾ ಶೈಲೇಂದ್ರ ಅವರು ಬಹುಮುಖ ಪ್ರತಿಭೆ, ಅಲ್ಲದೆ ಯಕ್ಷ ರಂಗಾಯಣ ಕಲಾವಿದೆ ಕೂಡ ಆಗಿದ್ದಾರೆ.ಈಗಾಗಲೇ ಇವರ ನಟನೆ ಎಲ್ಲೆಡೆ ಗಮನ ಸೆಳೆದಿದೆ. ರಮಿತಾ ಶೈಲೇಂದ್ರ ಅವರಿಗೆ ಶುಭಾಶಯಗಳು.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.