ಕೆಸರು ಗದ್ದೆ ಕ್ರೀಡಾಕೂಟ ಸೂಪರ್!
– ಸಾವಿರಾರು ಜನ ಭಾಗಿಯಾಗಿ ಸಂಭ್ರಮ: ಸಾಧಕರಿಗೆ ಗೌರವ ಸಮರ್ಪಣೆ
– ತೀರ್ಥಹಳ್ಳಿಯಲ್ಲಿ ಇದೇ ಮೊದಲ ಬಾರಿಗೆ ಕೆಸರು ಗದ್ದೆ ಕ್ರೀಡಾಕೂಟ
NAMMUR EXPRESS NEWS
ತೀರ್ಥಹಳ್ಳಿ: ಯುವ ದಸರಾ ಮತ್ತು ಮಹಿಳಾ ದಸರಾದ ಆಯೋಜನೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ಸಾವಿರಾರು ಜನರ ಭಾಗವಹಿಸುವಿಕೆಯಲ್ಲಿ ಸಂಭ್ರಮದಿಂದ ನಡೆಯಿತು. ಪಕ್ಷಾತೀತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಣ್ಣಿನ ಗದ್ದೆಯಲ್ಲಿ ಆಟ ಆಡಿ ತೀರ್ಥಹಳ್ಳಿ ಜನ ಸಂಭ್ರಮಿಸಿದರು.
ತೀರ್ಥಹಳ್ಳಿಯಲ್ಲಿ ಮೊದಲ ಬಾರಿಗೆ ನಡೆದ ಕೆಸರುಗದ್ದೆ ಕ್ರೀಡಾಕೂಟ ಭರ್ಜರಿ ಯಶಸ್ಸು ಕಂಡಿದ್ದು, ರೈನ್ ಡ್ಯಾನ್ಸ್, ಹಗ್ಗಜಗ್ಗಾಟ, ಗಿರಗಿಟ್ಟೆ, ಗದ್ದೆ ಓಟ ಗಮನ ಸೆಳೆಯಿತು.
ಶ್ರೀ ರಾಮೇಶ್ವರ ದಸರಾ ಉತ್ಸವ ಸಮಿತಿ-2025ರ ಮಹಿಳಾ ಮತ್ತು ಯುವ ದಸರಾ ಸಮಿತಿ ಕುರುವಳ್ಳಿಯ ಬೈಪಾಸ್ ರಸ್ತೆಯಲ್ಲಿ ಈ ಕ್ರೀಡಾ ಕೂಟ ನಡೆದಿದ್ದು ರಾತ್ರಿವರೆಗೆ ನಡೆಯಿತು.
ಶಾಸಕ ಆರಗ ಜ್ಞಾನೇಂದ್ರ ಕ್ರೀಡಾಕೂಟ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ, ಹಾಕಿ ಆಟಗಾರ್ತಿ ಪೂಜತಾ ಶುಭ ಹಾರೈಸಿದರು. ಯುವ ದಸರಾವನ್ನು ಹೊದಲ ಶಿವು. ಪ್ರೇಮ್ ಯಡೂರು, ಅಂಜೂರ ಕುಡುಮಲ್ಲಿಗೆ, ಪೂರ್ಣೇಶ್ ಪೂಚಾರಿ, ಮಹಿಳಾ ದಸರಾವನ್ನು ನಯನಾ ಜಯಪ್ರಕಾಶ್ ಶೆಟ್ಟ, ಗೀತಾ ರಮೇಶ್, ಜ್ಯೋತಿ ಮೋಹನ್, ಜ್ಯೋತಿ ಗಣೇಶ್, ಮಂಜುಳಾ ನಾಗೇಂದ್ರ, ಗೀತಾ ರಾಘವೇಂದ್ರ, ವರಲಕ್ಷ್ಮೀ, ರಾಮೇಶ್ವರ ದೇವಸ್ಥಾನ ಉತ್ಸವ ಸಮಿತಿ ಮುಂತಾದವರ ಸಹಕಾರದಲ್ಲಿ ವಿಶೇಷವಾಗಿ ನಡೆಯಿತು.
ಗೆದ್ದವರು ಯಾರು?
ಯುವಕರ ಹಗ್ಗಜಗ್ಗಾಟದಲ್ಲಿ ಯುವ ಕೇಸರಿ ಪ್ರಥಮ, ಪ್ರಥಮ ಬಹುಮಾನ ಕೇಸರಿ ಪಡೆ’ ದ್ವಿತೀಯ, ಕ್ಯಾತೋಲಿಕ್ ಚರ್ಚ್ ಅಸೋಸಿಯೇಷನ್ ತೃತೀಯ, ರೈತರ ಮಕ್ಕಳು ಕೊಳವಾಡಿ ನಾಲ್ಕನೇ ಬಹುಮಾನ, ಮಹಿಳೆಯರ ಹಗ್ಗಾಜಗ್ಗಾಟ ಶಿವಶಕ್ತಿ ಮಹಿಳಾ ತಂಡ ಯಡೂರು ಪ್ರಥಮ, ಮಾರಿಕಾಂಬಾ ಮಹಿಳಾ ತಂಡ ದ್ವಿತೀಯ, ಶ್ರೀ ದುರ್ಗಾ ಶಕ್ತಿ, ನೆನಪು ತಂಡ ತೀರ್ಥಹಳ್ಳಿ ತೃತಿಯಾ ಹಾಗೂ ನಾಲ್ಕನೇ ಬಹುಮಾನಕ್ಕೆ ಭಾಜನರಾಗಿದ್ದಾರೆ.
ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ:
ಶ್ರೀ ರಾಮೇಶ್ವರ ದೇವರ ದಸರಾ ಕಾರ್ಯಕ್ರಮದ ಪ್ರಯುಕ್ತ ಯುವ ದಸರಾ ಸಮಿತಿ ವತಿಯಿಂದ ಇಂದು ತೀರ್ಥಹಳ್ಳಿಯ ಕುಶಾವತಿಯ ನೆಹರೂ ಪಾರ್ಕ್ ನಲ್ಲಿ ನಿರ್ಮಿಸಲಾಗಿರುವ ಭವ್ಯ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ಯುವಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೆಸರು ಗದ್ದೆ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಸಮರ್ಪಣೆ ನಡೆಯಲಿದೆ.