Categories
Uncategorized ಕರಾವಳಿ

“ಕಾಪುವಿನ ಅಮ್ಮ ನಮ್ಮೆಲ್ಲರನ್ನು ಕಾಯುತ್ತಾಳೆ” ಹುಕ್ಕೇರಿ ಶ್ರೀ

  • ಹುಕ್ಕೇರಿ ಶ್ರೀ ಕಾಪು ಹೊಸ ಮಾರಿಗುಡಿ ಹೊಸ ಬ್ರಹ್ಮಕಲಶೋತ್ಸವ ದಲ್ಲಿ ಭಾಗಿ

ಕಾಪು: ಸಂಪೂರ್ಣ ಇಳಕಲ್‌ ಶಿಲೆಯಲ್ಲಿ ಕಾಪು ಹೊಸ ಮಾರಿಗುಡಿಯು ಸುಂದರವಾಗಿ ಮೂಡಿ ಬಂದಿದೆ. ಇದು ಅಮ್ಮನ ಪವಾಡವಾಗಿದೆ. ದಂಡಿನ ಮಾರಿಯಾಗಿ ಕಾಪುವಿಗೆ ಬಂದ ಮಾರಿಯಮ್ಮ ದೇವಿ ಪ್ರಪಂಚಕ್ಕೆ ಅಮ್ಮಳಾಗಿ, ನಮ್ಮೆಲ್ಲರನ್ನೂ ಕಾಯುತ್ತಾಳೆ ಎಂಬುದು ದೃಢಪಟ್ಟಿದೆ ಎಂದು ಬೆಳಗಾವಿ ಹುಕ್ಕೇರಿ ಶ್ರೀ ಗುರು ಶಾಂತೇಶ್ವರಿ ಸಂಸ್ಥಾನ ಹಿರೇಮಠದ ಶ್ರೀ ಚಂದ್ರ ಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ. 25ರಂದು ಮಹಾದೇವಿ ಪ್ರೌಢಶಾಲಾ ಮೈದಾನದಲ್ಲಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಕ್ಷೇತ್ರ ಸಂದರ್ಶಿಸಿದರು.

ಶ್ರೀ ಹೊಸಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ, ಗೌರವಾಧ್ಯಕ್ಷ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಉದ್ಯಮಿ ನಾರಾಯಣ ಶೆಟ್ಟಿ ಎರ್ಮಾಳು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್‌, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉದಯ ಸುಂದರ ಶೆಟ್ಟಿ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ ಬಾಲಾಜಿ ಸ್ವಾಗತಿಸಿದರು. ವೇದಿಕೆ ಸಮಿತಿಯ ಅಶೋಕ್‌ ಪಕಳ ಕಾರ್ಯಕ್ರಮ ನಿರೂಪಿಸಿ, ದಾಮೋದರ ಶರ್ಮ ವಂದಿಸಿದರು.

ವಿಶೇಷತೆಗಳು
ಶ್ರೀ ಕ್ಷೇತ್ರ ತಿರುಪತಿ, ಕೇರಳ ಅನಂತಪದ್ಮನಾಭ ಸನ್ನಿಧಿ, ಕೊಲ್ಹಾಪುರ ಮಹಾಲಕ್ಷ್ಮೀ ಕ್ಷೇತ್ರ, ಗೋಕರ್ಣ, ಕೊಲ್ಲೂರು, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಹೊರನಾಡು ದೇವಸ್ಥಾನಗಳ ಪ್ರಧಾನ ಅರ್ಚಕರು ಆಗಮಿಸಿ ಪ್ರಸಾದ ನೀಡಿದರು. ಸ್ಪೀಕರ್‌ ಯು. ಟಿ. ಖಾದರ್‌ 5 ವಾಹನಗಳಲ್ಲಿ ಹೊರೆಕಾಣಿಕೆ ಕಳುಹಿಸಿಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.