Categories
ಕರಾವಳಿ

ಯಕ್ಷಗಾನದ ಇನ್ನಷ್ಟು ಅಭಿವೃದ್ಧಿ ಹಾಗೂ ಏಳ್ಗೆಗೆ ಸಮಾಜದ ಸಂಘಟಿತ ಪ್ರಯತ್ನ ಅಗತ್ಯ – ಪಟ್ಲ ಸತೀಶ್‌ ಶೆಟ್ಟಿ

ಉಡುಪಿ: ಯಕ್ಷಗಾನದ ಇನ್ನಷ್ಟು ಅಭಿವೃದ್ಧಿ ಹಾಗೂ ಏಳ್ಗೆಗೆ ಸಮಾಜದ ಸಂಘಟಿತ ಪ್ರಯತ್ನ ಅಗತ್ಯ ಎಂದು ಭಾಗವತರೂ ಆದ ಯಕ್ಷದ್ರುವ ಪಟ್ಲ ಫೌಂಡೇಶನ್‌ ಸಂಸ್ಥಾಪಕ ಪಟ್ಲ ಸತೀಶ್‌ ಶೆಟ್ಟಿ ಹೇಳಿದರು.

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಮತ್ತು ಶಿವಪಾಡಿ ವೈಭವ ಆಚರಣ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ “ಶಿವಪಾಡಿ ವೈಭವ’ದಲ್ಲಿ ಮಂಗಳವಾರ ಸಂಜೆ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಿವ ಮಂಗಳ ಸ್ವರೂಪಿ ಅವನ ಆಶೀರ್ವಾದ ಶಿವರಾತ್ರಿಯ ಪರ್ವಕಾಲದಲ್ಲಿ ಎಲ್ಲರಿಗೂ ಸಿಗಲಿ ಎಂದು ಆಶಿಸಿದರು.

ಎಂಐಟಿ ನಿರ್ದೇಶಕ ಡಾ| ಸೋಮಶೇಖರ ಭಟ್‌ ಅಧ್ಯಕ್ಷತೆ ವಹಿಸಿ, ಮನುಷ್ಯ, ಜೀಜಂತುಗಳನ್ನು ಕಾಪಾಡಿಕೊಂಡು ಹೋಗುವ ದೈವಿಕ ಶಕ್ತಿಯೊಂದಿದೆ. ಅದನ್ನು ನಾವು ಅರಿತು ಮುನ್ನೆಡೆದಾಗ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎಂದರು.

ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ಕರಾವಳಿ ದೈವ, ದೇವರನ್ನು ಹೆಚ್ಚೆಚ್ಚು ಆರಾಧಿಸುವ ನಾಡು. ನಮ್ಮಲ್ಲಿ ಹೈನುಗಾರಿಕೆಗೂ ವಿಶೇಷವಾದ ಒತ್ತು ನೀಡಲಾಗುತ್ತದೆ ಎಂದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.