ಶೃಂಗೇರಿ ಶ್ರೀಶಾರದಾ ಶರನ್ನವರಾತ್ರಿಗೆ ಭರದ ಸಿದ್ಧತೆ
* ಪೂರ್ವ ಸಿದ್ಧತಾ ಸಭೆ ಕರೆದ ಶ್ರೀಮಠದ ಆಡಳಿತಾಧಿಕಾರಿಗಳು
* ಶರನ್ನವರಾತ್ರಿಯ ಬೀದಿ ಉತ್ಸವ,ಭದ್ರತೆ ಬಗ್ಗೆ ಚರ್ಚೆ
NAMMMUR EXPRESS NEWS
ಶೃಂಗೇರಿ: ಜಗತ್ಪ್ರಸಿದ್ಧ ಶೃಂಗೇರಿ ಶರನ್ನವರಾತ್ರಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಈ ಸಂಬಂಧ ಪೂರ್ವಭಾವಿ ಸಭೆಯನ್ನು ಶ್ರೀಮಠದ ಆಡಳಿತಾಧಿಕಾರಿಗಳಾದ ಪಿ.ಮುರಳಿ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಸಭೆಯಲ್ಲಿ ಸೆ.22 ಆರಂಭಗೊಳ್ಳಲಿರುವ ಶ್ರೀಶಾರದಾ ಶರನ್ನವರಾತ್ರಿ ಉತ್ಸವದ ಬಗ್ಗೆ ಹಾಗೂ 12 ದಿನ ನಡೆಯುವ ಬೀದಿ ಉತ್ಸವ ಹಾಗೂ ರಥೋತ್ಸ ಮತ್ತು ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಸಂಘ-ಸಂಸ್ಥೆ,ಗ್ರಾ ಪಂ ಗಳು ಭಾಗವಹಿಸುವ ಬಗ್ಗೆ ಮತ್ತು ಉತ್ಸವ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ವಿಚಾರಗಳನ್ನು ಚರ್ಚಿಸಲಾಯಿತು. ಸಭೆಯಲ್ಲಿ ಸಾರ್ವಜನಿಕರು,ಸಂಘ-ಸಂಸ್ಥೆಗಳ ಪ್ರತಿನಿಧಿಗಳು,ಗ್ರಾ ಪಂ ಅಧ್ಯಕ್ಷರು,ಸದಸ್ಯರು ಪಾಲ್ಗೊಂಡು ಪೂರ್ವಸಿದ್ಧತೆಯ ಬಗ್ಗೆ ಮಾಹಿತಿ ನೀಡಿದರು.
ಶರನ್ನವರಾತ್ರಿಯ ಅಂಗವಾಗಿ ಶ್ರೀಮಠದಲ್ಲಿ ಹಮ್ಮಿಕೊಂಡಿರುವ ವಿಶೇಷ ಪೂಜೆ,ಸಾಂಸ್ಕೃತಿಕ ಕಾರ್ಯಕ್ರಮ,ಹಲವು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿ ಎಲ್ಲರೂ ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಯಿತು.
ಶ್ರೀಮಠದ ಆಡಳಿತಾಧಿಕಾರಿಡಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಗದ್ಗುರುಗಳ ಆಪ್ತಸಹಾಯಕಾರದ ವೇ ಬ್ರ ಶ್ರೀಕೃಷ್ಣಮೂರ್ತಿಯವರು,ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ,ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೆಚ್ ಎಸ್ ವೇಣುಗೋಪಾಲ್,ಜೆಡಿಎಸ್ ರಾಜ್ಯ ಉಪಾದ್ಯಕ್ಷರಾದ ಸುಧಾಕರ್ ಶೆಟ್ಟಿಯವರುಗಳು ಭಾಗವಹಿಸಿದ್ದರು.
* ಶರನ್ನವರಾತ್ರಿಗಾಗಿ ಸಿದ್ಧಗೊಳ್ಳುತ್ತಿರುವ ಶೃಂಗೇರಿ
ಶೃಂಗೇರಿಯಲ್ಲಿ ಸೆ.22 ರಿಂದ ಅ.03ರ ವರೆಗೆ ನಡೆಯಲಿರುವ ವಿಜೃಂಭಣೆಯ ಜಗತ್ಪ್ರಸಿದ್ಧ ಶ್ರೀಶಾರದಾ ಶರನ್ನವರಾತ್ರಿಗಾಗಿ ಶ್ರೀಶಾರದಾ ಪೀರ ಸೇರಿದಂತೆ ದೇವಾಲಯದ ಸ್ವಾಗತ ಗೋಪುರವು ಸುಣ್ಣಬಣ್ಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಶೃಂಗೇರಿಯಲ್ಲಿ ಶರನ್ನವರಾತ್ರಿಯ ಕಳೆಗಟ್ಟುತ್ತಿದೆ.
ಒಂಭತ್ತು ದಿನಗಳು ಒಂಭತ್ತು ವಿಶೇಷ ಅಲಂಕಾರದಲ್ಲಿ ಭಕ್ತರನ್ನು ಹರಸಲಿರುವ ಶ್ರೀಶಾರದೆ ಹಾಗೂ ನಿತ್ಯ ನಡೆಯುವ ಜಗದ್ಗುರುಗಳ ದರ್ಬಾರ್ ಸೇರಿದಂತೆ ವಿಜೃಂಭಣೆಯಿಂದ ನಡೆಯುವ ಶ್ರೀಶಾರದಾಂಬ ಮಹಾರಥೋತ್ಸವ ಹಾಗೂ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಳ್ಳಲು ತಾಲೂಕಿನ ಜನರೂ ಸೇರಿದಂತೆ ರಾಜ್ಯ,ಹೊರ ರಾಜ್ಯ,ವಿದೇಶದ ಲಕ್ಷಾಂತರ ಜನ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.
* ಯಾವತ್ತು,ಯಾವ ಗ್ರಾ ಪಂ ಜನರಿಂದ ರಾಜಬೀದಿ ಉತ್ಸವದಲ್ಲಿ ನಿರ್ವಹಣೆ
12 ದಿನಗಳ ಕಾಲ ನಡೆಯಲಿರುವ ವಿಜೃಂಭಣೆಯ ಶಾರದಾ ಶರನ್ನವರಾತ್ರಿ ಉತ್ಸವದಲ್ಲಿ ದಿನವೂ ಸಂಜೆ ಬೀದಿ ಉತ್ಸವ ನಡೆಯಲಿದ್ದು,ಯಾವತ್ತು ಯಾವ ಗ್ರಾ ಪಂ ವ್ಯಾಪ್ತಿಯ ಭಕ್ತರು ಭಜನೆ,ಸ್ತಬ್ಧ ಚಿತ್ರಗಳು,ಸಾಂಸ್ಕೃತಿಕ ತಂಡಗಳೊಡನೆ ಪಾಲ್ಗೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನಿಸಲಾಗಿದೆ. ಅದರ ವೇಳಾಪಟ್ಟಿ ಆಲ್ಲಿದೆ
1. 22-09-2025 ಸೋಮವಾರ, ಅಡ್ಡಗದ್ದೆ ಗ್ರಾ ಪಂ
2. 23-09-2025 ಮಂಗಳವಾರ, ಮೆಣಸೆ ಗ್ರಾ ಪಂ
3. 24-09-2025 ಬುಧವಾರ, ಕೂತಗೋಡು ಗ್ರಾ ಪಂ
4. 25-09-2025 ಗುರುವಾರ, ವಿದ್ಯಾರಣ್ಯಪುರ ಗ್ರಾ ಪಂ
5. 26-09-2025 ಶುಕ್ರವಾರ, ಧರೆಕೊಪ್ಪ ಗ್ರಾ ಪಂ
6. 27-09-2025 ಶನಿವಾರ, ನೆಮ್ಮಾರು ಗ್ರಾ ಪಂ
7. 28-09-2025 ಭಾನುವಾರ, ಬೇಗಾರು ಗ್ರಾ ಪಂ
8. 29-09-2025 ಸೋಮವಾರ, ಶೃಂಗೇರಿ ಪಟ್ಟಣ ಪಂಚಾಯಿತಿ
9. 30-09-2025 ಮಂಗಳವಾರ, ಮರ್ಕಲ್ (ಕಿಗ್ಗ ) ಗ್ರಾ ಪಂ
10. 01-10-2025 ಬುಧವಾರ, ಕೆರೆ ಗ್ರಾ ಪಂ
11. 02-10-2025 ಗುರುವಾರ, ಸಮಸ್ತ ಭಕ್ತಾಧಿಗಳು
12. 03-10-2025 ಶುಕ್ರವಾರ, ಮಹಾರಥೋತ್ಸವ ಮತ್ತು ಅಡ್ಡ ಪಲ್ಲಕ್ಕಿ ಮಹೋತ್ಸವ.
