ದಸರಾ ಸಭೆಯಲ್ಲಿ ಎಲ್ಲಾ ಪಕ್ಷದ ನಾಯಕರ ಶಾಂತಿ ಮಂತ್ರ!
* ಜ್ಞಾನೇಂದ್ರ, ಕಿಮ್ಮನೆ, ಮಂಜುನಾಥ ಗೌಡ ನೇತೃತ್ವದಲ್ಲಿ ಸಭೆ
* ರಾಜಕೀಯ ಬಿಡಿ.. ಎಲ್ಲರೂ ರಾಮೇಶ್ವರನ ಸೇವೆ ಮಾಡೋಣ
* 15 ಲಕ್ಷ ವೆಚ್ಚದಲ್ಲಿ ದಸರಾ ಆಚರಣೆಗೆ ಸಭೆಯಲ್ಲಿ ನಿರ್ಧಾರ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರರದಲ್ಲಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ನಡೆದ ದಸರಾ ಸಭೆ ತೀರ್ಥಹಳ್ಳಿ ಘನತೆಯನ್ನು ಎತ್ತಿ ಹಿಡಿಯಿತು. ಎಲ್ಲಾ ಪಕ್ಷದ ನಾಯಕರ ಶಾಂತಿ ಮಂತ್ರ ಮಾದರಿ ಆಯಿತು.
ಶಾಸಕ ಜ್ಞಾನೇಂದ್ರ, ನಾಯಕರಾದ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ ಗೌಡ ನೇತೃತ್ವದಲ್ಲಿ ಸಭೆಯಲ್ಲಿ ಶ್ರೀ ರಾಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಕೂಡ ಹಾಜರಿದ್ದರು.
ತಹಸೀಲ್ದಾರ್ ರಂಜಿತ್, ಇ. ಓ ಶೈಲಾ, ಗೀತಾ ರಮೇಶ್, ಸಚ್ಚಿoದ್ರ ಹೆಗ್ಡೆ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ನಾಗರಾಜ್ ಸೇರಿ ಹಲವರಿದ್ದರು.
* ರಾಜಕೀಯ ಬಿಡಿ.. ಎಲ್ಲರೂ ರಾಮೇಶ್ವರನ ಸೇವೆ ಮಾಡೋಣ
ರಾಮೇಶ್ವರನ ಸೇವೆ ಎಲ್ಲರಿಂದಲೂ ಆಗಬೇಕು. ರಾಜಕೀಯ ಬಿಟ್ಟು ಎಲ್ಲರು ಸೇರಿ ದಸರಾ ಆಚರಿಸೋಣ. ಪ್ರಜ್ಞಾವಂತರ ಕ್ಷೇತ್ರವಾದ ತೀರ್ಥಹಳ್ಳಿಯಲ್ಲಿ ಈ ಬಾರಿ ಅತ್ಯಂತ ವೈಭವದಿಂದ, ವಿಜೃಂಭಣೆಯಿಂದ ದಸರಾ ಆಚರಿಸೋಣ ಯಾವುದೇ ಗೊಂದಲ ಸೃಷ್ಟಿ ಆಗಬಾರದು ಎಂದು ಕರೆ ನೀಡಿದರು.
ಸಹಕಾರ ನಾಯಕ ಆರ್ ಎಂ ಮಂಜುನಾಥ್ ಗೌಡ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಇಬ್ಬರೂ ಮಾತನಾಡಿ, ತೀರ್ಥಹಳ್ಳಿ ಪ್ರತಿಷ್ಠೆ, ಗೌರವವನ್ನು ರಾಜ್ಯದಲ್ಲಿ ಪಡೆದಿದೆ. ಗೊಂದಲ ಸೃಷ್ಟಿ ಮಾಡದೇ ನಾಡಹಬ್ಬವನ್ನು ಆಚರಿಸೋಣ. 15 ಲಕ್ಷ ಖರ್ಚು ಬರಬಹುದು. ನಾವೆಲ್ಲರೂ ಒಗ್ಗಟ್ಟಾಗಿ ಹಬ್ಬವನ್ನು ಆಚರಿಸೋಣ ಎಂದರು.
