ಪಿಯುಸಿ ಫಲಿತಾಂಶದಲ್ಲಿ ರಿಪ್ಪನ್ ಪೇಟೆ ಕಾಲೇಜಿಗೆ ಶೇ73% ಫಲಿತಾಂಶ
– 19 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ಕಾಲೇಜ್‌ಗೆ ಕೀರ್ತಿ ತಂದಿದ್ದಾರೆ
– ಅಮೃತ : ಸರ್ಕಾರಿ ಪದವಿ ಪೂರ್ವ ಕಾಲೇಜು ಶೇಕಡ 95% ಫಲಿತಾಂಶ
NAMMUR EXPRESS NEWS
ರಿಪ್ಪನ್ ಪೇಟೆ : ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇ 73 ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಭಾರಿ ಪ್ರಾಚಾರ್ಯ ವಾಸುದೇವ ತಿಳಿಸಿದ್ದಾರೆ. ಕಾಲೇಜ್‌ನಿಂದ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 249 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪಬ್ಲಿಕ್ ಪರೀಕ್ಷೆಗೆ ಕುಳಿತ್ತಿದ್ದು 180 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 73 ರಷ್ಟು ಫಲಿತಾಂಶ ಬಂದಿದೆ.
ಕಲಾ ವಿಭಾಗದಲ್ಲಿ ಶೇ. 77.33 ರಷ್ಟು ಮತ್ತು ವಿಜ್ಞಾನ ವಿಭಾಗದಲ್ಲಿ ಶೇ. 67.50 ರಷ್ಟು ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 73.40 ರಷ್ಟು ಫಲಿತಾಂಶ ಪಡೆಯುವುದರೊಂದಿಗೆ ಕಲಾ ವಿಭಾಗದಲ್ಲಿ 3 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 7 ವಿದ್ಯಾರ್ಥಿ ಹಾಗೂ ವಾಣಿಜ್ಯ ವಿಭಾಗದಲ್ಲಿ 8 ವಿದ್ಯಾರ್ಥಿಗಳು ಆತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಕಾಲೇಜ್‌ನ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಹೆಚ್ಚಿಸಿದ್ದಾರೆಂದರು.
ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಚನ್ ಪಡೆದ ವಿದ್ಯಾರ್ಥಿಗಳು
ಮೆಲೀನ್ ಎಸ್ ದಂಡಿನ್ 555 , ರಿಯಾನಾ 540 , ಪ್ರಣತಿ ಪಿ 537 , ಸುಶ್ಮಿತಾ ಎ ಕೆ 537 , ಹೃತಿಕ್ ಎಸ್ 529 , ನಜ್ಮಾ 526 , ಫರ್ಹಾನಾ ಹೆಚ್ ಎಂ 510 ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾದಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು
ಕಮಲಾ ಎಲ್ 564 , ನಯನಾ ಕೆ ಸಿ 561 , ಹೇಮಾ ಜೆ ಎ 538 , ನೂತನಾ 537 , ಯಶಸ್ವಿನಿ ಯು 529 , ಪ್ರಜ್ಞಾ ಕೆ ಎನ್ 528 , ದೇವಕಿ ಕೆ ಪಿ 526 , ಪೂಜಾ ಕೆ ಆರ್ , 523 , ಸಿಂಚನಾ 523 ಅಂಕ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು
ಶುಭಾ ಎ ರಾವ್ 572 , ತನುಶ್ರೀ 556 , ಜೀವನ್ ಎಂ 523 ಅಂಕ ಪಡೆದಿದ್ದಾರೆ.
– ಅಮೃತ : ಸರ್ಕಾರಿ ಪದವಿ ಪೂರ್ವ ಕಾಲೇಜು ಶೇಕಡ 95% ಫಲಿತಾಂಶ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರತಿಷ್ಠಿತ ಸರಕಾರಿ ಪದವಿಪೂರ್ವ ಕಾಲೇಜು ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜು 2025ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಯಲ್ಲಿ ಫಲಿತಾಂಶ ಶೇಕಡಾ 95% ಫಲಿತಾಂಶ ಪಡೆದುಕೊಂಡಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 151 ವಿದ್ಯಾರ್ಥಿಗಳಲ್ಲಿ 143 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. 25ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇದರಲ್ಲಿ ಕಲಾ ವಿಭಾಗ 94.12%, ವಿಜ್ಞಾನ ವಿಭಾಗ ದಲ್ಲಿ 95.31%, ವಾಣಿಜ್ಯ ವಿಭಾಗ 94.34% ಫಲಿತಾಂಶ ಬಂದಿದೆ.
ಕಾಲೇಜಿನ ಹಂತದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ನಿರಂಜನ್ ಕೆ ಎಸ್ – 559 ವಿಜ್ಞಾನ
ಸೃಜನ್ ಹೆಚ್ – 558- ವಾಣಿಜ್ಯ
ವೀಣಾ ಎಂ ಡಿ – 567– ಕಲಾ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ.
ಅತ್ಯುತ್ತಮವಾದ ಫಲಿತಾಂಶಗಳನ್ನು ಪಡೆದುಕೊಳ್ಳುವುದರ ಮೂಲಕ ಕಾಲೇಜಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗಕ್ಕೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಸಕ ಆರಗ ಜ್ಞಾನೇಂದ್ರ ಉಪಾಧ್ಯಕ್ಷ ಸೋಮಶೇಖರ್ ಮತ್ತು ಸದಸ್ಯರು ಕಾಲೇಜು ಅಭಿವೃದ್ಧಿ ಸಮಿತಿ. ಹಾಗೂ ಕಾಲೇಜಿನ ಪ್ರಾಚಾರ್ಯ ಮಹಮದ್ ನಜಹತ್ ಉಲ್ಲಾ ಅಭಿನಂದನೆ ಸಲ್ಲಿಸಿದ್ದಾರೆ.
