ಮಂಗಳೂರು ಪೊಳಲಿ ಜಾತ್ರೆ ಪೊಳಲಿ ಚೆಂಡಿಗೇ ಫೇಮಸ್!
– ಪೊಳಲಿ ಚೆಂಡಿನ ರಹಸ್ಯವೇನು?
– ಇದರ ವಿಶೇಷತೆಯೇನು?
NAMMUR EXPRESS NEWS
ಮಂಗಳೂರು: ಪೊಳಲಿ ರಾಜರಾಜೇಶ್ವರಿ ಕ್ಷೇತ್ರ ಜಾತ್ರೆ ಅಂದರೆ ಪೊಳಲಿ ಚೆಂಡಿನ ಮೂಲಕವೇ ಫೇಮಸ್!. ಐದು ದಿನಗಳ ಚೆಂಡಿನ ಆಟದಲ್ಲಿ ಬಳಸುವ ಚರ್ಮದ ಚೆಂಡಿಗೆ ವಿಶೇಷ ಪ್ರಾತಿನಿಧ್ಯ ಇದೆ. ಈ ಪೊಳಲಿ ಚೆಂಡಿಗೂ ರಾಣಿ ಅಬ್ಬಕ್ಕನ ಊರಿಗೂ ಅವಿನಾಭಾವ ಸಂಬಂಧ ಇದೆ.
– ಮೂಡಬಿದ್ರೆಯಲ್ಲಿ ತಯಾರಾಗಿ ಪೊಳಲಿಗೆ ಬರುವ ಚೆಂಡು!
ಪೊಳಲಿ ರಾಜರಾಜೇಶ್ವರಿ ದೇವಿಯ ಜಾತ್ರೆಯಲ್ಲಿ ಆಡುವ ಪೊಳಲಿ ಚೆಂಡು ತಯಾರಾಗೋದು ಮೂಡಬಿದ್ರೆಯಲ್ಲಿ!.
ಪೊಳಲಿ ಚೆಂಡು ನಡೆಯುವ ಒಂದು ದಿವಸ ಮೊದಲು ಈ ಚೆಂಡನ್ನೂ ಅದ್ಧೂರಿಯಾಗಿ ಪೊಳಲಿಗೆ ತೆಗೆದುಕೊಂಡು ಬರಲಾಗುತ್ತದೆ. ಹೀಗೇ ಬರುವ ದಾರಿಯಲ್ಲಿ ಪುತ್ತಿಗೆ ಮಾರ್ಗವಾಗಿ ಬಂದು ಮಳಲಿಯ ಮೂಲಕ ಪೊಳಲಿಗೆ ತರಲಾಗುತ್ತದೆ. ಮಳಲಿಯ ಕಡಪುಕರಿಯ ಗಾಣಿಗ ಸಮಾಜದವರು ಈ ಚೆಂಡನ್ನು ಪೊಳಲಿಗೆ ತರುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಸಾಕಷ್ಟು ಸಂಪ್ರದಾಯದೊಂದಿಗೆ ಭಕ್ತಿ ಪೂರ್ವಕವಾಗಿ ಈ ಚೆಂಡನ್ನು ಪೊಳಲಿಗೆ ತರಲಾಗುತ್ತದೆ.
– ರಾಣಿ ಅಬ್ಬಕ್ಕನಿಗೆ ಇದೆ ಪೊಳಲಿ ಚೆಂಡಿನ ನಂಟು!
ಇತಿಹಾಸ ಪ್ರಕಾರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ಮೂಡಬಿದ್ರೆಯ ಪುತ್ತಿಗೆ ಚೌಟ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಕಾಲಾ ನಂತರದಲ್ಲಿ ಆಡಳಿತದ ಅಧಿಕಾರ ಬದಲಾದರೂ ಪೊಳಲಿ ಜಾತ್ರೆಯ ಚೆಂಡು ಮೂಡಬಿದ್ರೆಯಿಂದ ಬರುವುದು ನಿಂತಿಲ್ಲ. ಹೀಗೆ ಮೂಡಬಿದ್ರೆಯಿಂದ ಬರುವ ಪೊಳಲಿ ಚೆಂಡು ಮಳಲಿಯಲ್ಲಿರುವ ರಾಣಿ ಅಬ್ಬಕ್ಕನ ಮಣೀಲ್ ಅರಮನೆಗೆ ತರಲಾಗುತ್ತಿತ್ತು. ಅರಮನೆಯಲ್ಲಿ ರಾಣಿಯರಿಗೆ ಚೆಂಡು ತೋರಿಸಿ ಬಳಿಕ ಊರ ಜನರು ಸಂಭ್ರಮದೊಂದಿಗೆ ಚೆಂಡನ್ನು ಪೊಳಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಅನ್ನೋ ಇತಿಹಾಸ ಇದೆ. ಇದು ಈಗಲೂ ಮುಂದುವರೆಸಿಕೊಂಡು ಬರಲಾಗುತ್ತಿದ್ದು, ಅಬ್ಬಕ್ಕನ ಕಾಲಾನಂತರ ಮಳಲಿಯ ಕಟ್ಟೆಮಾರು ಮನೆಗೆ ಬರುವ ಸಂಪ್ರದಾಯ ಸಾಂಕೇತಿಕವಾಗಿ ನಡೆಯುತ್ತದೆ.
ತುಳುನಾಡಿನ ಐತಿಹಾಸಿಕ ರಾಜರಾಜೇಶ್ವರಿ ಸನ್ನಿಧಿ ಪೊಳಲಿ ಪೂಜೆಯ ಮಹತ್ವ ಮಾತ್ರವಲ್ಲದೆ ಚೆಂಡೆಯ ಮಹತ್ವವು ಅದ್ಭುತವಾಗಿದೆ.
‘ಪುರಲ್ದ ಚೆಂಡ್’ ಕೂಡ ಈ ತಿಂಗಳ ಧಾರ್ಮಿಕ ಹಬ್ಬದಲ್ಲಿ ಪ್ರಮುಖ ಆಕರ್ಷಣೆ.
ಪದ್ಮನಾಭ ಅವರ ನಿರಂತರ ಚೆಂಡು ಸೇವೆ!
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಇಲ್ಲಿ 18 ವರ್ಷದ ಐತಿಹಾಸಿಕತೆ ಹೊಂದಿದೆ. ಜಿಲ್ಲೆಯ ಪ್ರಸಿದ್ಧ ಪೊಳಲಿ ಸೇರಿದಂತೆ ಸುಮಾರು 18 ಕ್ಷೇತ್ರಗಳಿಗೆ ವಾರ್ಷಿಕ ಹಬ್ಬಗಳಿಗೆ ಚರ್ಮದ ಚೆಂಡು ಪೂರೈಸುತ್ತಿದ್ದಾರೆ. ಪೊಳಲಿ ಚೆಂಡು ಅದರಲ್ಲಿ ಅತೀ ದೊಡ್ಡದು.
ಅಮೃತೇಶ್ವರ ದೇವಸ್ಥಾನ ವಾಮಂಜೂರು, ಸೋಮನಾಥೇಶ್ವರ ದೇವಸ್ಥಾನ, ಬೆಳುವಾಯಿ ಮತ್ತಿತರ ಹಬ್ಬಗಳಲ್ಲಿ ಪದ್ಮನಾಭ ಅವರು ವಿವಿಧ ಗಾತ್ರದ ಚೆಂಡುಗಳನ್ನು ಪೂರೈಸುತ್ತಾರೆ.
ಹೀಗೆ, ಜನವರಿಯಿಂದ ಪುದುವಿಗೆ, ಕಾಟೆಬಾಗಿಲು, ಮೂಡಬಿದರೆ ಆಧಿಶಕ್ತಿ ಮಹಾದೇವಿ ಮತ್ತು ಮಹಾಕಾಳಿ ದೇವಸ್ಥಾನಗಳು, ಮಾಲ್ಲೂರು, ಅಂಟಾಡಿ, ಇರುವೈಲು, ಮುಚ್ಚೂರು, ಮನಾರಡು, ಆಲಿಯೂರು, ಅಶ್ವತಪುರ, ಪಾಳದ್ಕ್, ಮುಂತಾದ ಸ್ಥಳಗಳಿಗೆ ಪದ್ಮನಾಭ ಅವರು ಹಾಕುತ್ತಿರುವ ಚೆಂಡು ಸೇವೆಯನ್ನು ತಮ್ಮ ಧಾರ್ಮಿಕ ಸೇವೆ ಎಂದು ಪರಿಗಣಿಸುತ್ತಾರೆ, ಅದನ್ನು ವ್ಯಾಪಾರದಂತೆ ನೋಡುತ್ತಿಲ್ಲ.
