ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಸಪ್ರಶ್ನೆ ಕಾರ್ಯಕ್ರಮ 2025
- ತೀರ್ಥಹಳ್ಳಿ ತಾಲ್ಲೂಕಿನ ಪ್ರಾಥಮಿಕ ,ಪ್ರೌಢಶಾಲೆ ,ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ
- ನವೆಂಬರ್ ಮೊದಲ ಅಥವಾ ಎರಡನೇ ಭಾನುವಾರ ಸ್ಪರ್ಧೆ
- ನಿಯಮಗಳೇನು…? ಹೇಗೆ ಸ್ಪರ್ಧೆ… ಇಲ್ಲಿದೆ ಮಾಹಿತಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ, ತೀರ್ಥಹಳ್ಳಿ ತಾಲ್ಲೂಕಿನ ಪ್ರಾಥಮಿಕ ,ಪ್ರೌಢಶಾಲೆ ,ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಸಪ್ರಶ್ನೆ ಸ್ಪರ್ಧೆಯನ್ನು ನವೆಂಬರ್ ಮೊದಲ ಅಥವಾ ಎರಡನೇ ಭಾನುವಾರ ನಡೆಸಲಾಗುತ್ತದೆ.
ಕಳೆದ ಸಾಲಿನಲ್ಲಿ ನೀಡಿದ 1501 ಸಾಂಸ್ಕೃತಿಕ ರಸಪ್ರಶ್ನೆ ಪುಸ್ತಕದ ಜೊತೆಗೆ ಈ ವರ್ಷ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳುವ ಉದ್ದೇಶದಿಂದ ಆಯಾ ಹಂತದ ವಿದ್ಯಾರ್ಥಿಗಳಿಗೆ ಅವರ ಪಠ್ಯಪುಸ್ತಕದೊಂದಿಗೆ ಒಂದು ವಸ್ತುನಿಷ್ಠ ಪುಸ್ತಕವನ್ನು ಹೆಸರಿಸಲಾಗುತ್ತದೆ .ಇದು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗೂ ಸಹಕಾರಿ ಆಗಲಿದೆ. ಈ ಸ್ಪರ್ಧೆಗೆ ಶಾಲೆಯಿಂದ ಶಿಕ್ಷಕರು ಎರಡು ಮಕ್ಕಳನ್ನು ಆಯ್ಕೆ ಮಾಡಿ ವಾಟ್ಸಪ್ ಗ್ರೂಪಿಗೆ ಸೇರಿಸಬಹುದಾಗಿದೆ. ಅದರಲ್ಲಿ ವಿಶೇಷ ಪ್ರಶ್ನೆಗಳ ಮಾಹಿತಿ ಹಾಗೂ ಅಣಕು ರಸ ಪ್ರಶ್ನೆ ಸ್ಪರ್ಧೆಯ ಕುರಿತು ಮಾಹಿತಿ ನೀಡಲಾಗುವುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನ ಕೂಡ ಇರುತ್ತದೆ.
ನಿಯಮಗಳು ಏನು?
1. ಪ್ರತಿ ತಂಡದಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳ ಒಂದು ತಂಡದಲ್ಲಿ ಎರಡು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿರುತ್ತದೆ.
2. ಒಂದು ಶಾಲೆಯಿಂದ ಒಂದು ತಂಡ ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ.
3. ಪ್ರಶ್ನೆಗಳು ಕನ್ನಡದಲ್ಲಿ ಮಾತ್ರ ಲಭ್ಯವಿರುತ್ತದೆ.
4. ಪ್ರಾಥಮಿಕ ಸುತ್ತು ಹಾಗೂ ಮುಖ್ಯ ಸುತ್ತು ಮೂಲಕ ಎರಡು ಹಂತದಲ್ಲಿ ಆಯ್ಕೆ ನಡೆಯುತ್ತದೆ.
5. ಸ್ಪರ್ಧೆಗಳು ಟಿ.ಎಸ್.ಟಿ ಹಾಲ್ ಕುವೆಂಪು ಲೇಔಟ್ ತೀರ್ಥಹಳ್ಳಿ ಇಲ್ಲಿ ಏರ್ಪಡಿಸಲಾಗುತ್ತದೆ.
6. ಪುಸ್ತಕದೊಂದಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ.
7. ಸಾರ್ವಜನಿಕವಾಗಿ ತಂಡದಲ್ಲಿ ಪಿ.ಯು.ಸಿ/ಪದವಿ/ ಉದ್ಯೋಗದ ನಿರೀಕ್ಷೆಯಲ್ಲಿ ತಯಾರಿ ನಡೆಸುತ್ತಿರುವ ವ್ಯಕ್ತಿಗಳು ಭಾಗವಹಿಸಬಹುದು. ಸರ್ಕಾರದಿಂದ ಅಥವಾ ಸರ್ಕಾರದ ಅನುದಾನದಿಂದ ವೇತನ ಪಡೆಯುವ ನೌಕರರು, ಶಾಲೆಯಲ್ಲಿ ಬೋಧನೆಯಲ್ಲಿ ತೊಡಗಿಕೊಂಡ ಶಿಕ್ಷಕರಿಗೆ ಅವಕಾಶವಿಲ್ಲ. ಅವರು ಪ್ರೇಕ್ಷಕರಾಗಬಹುದು. ಇವರ ಕೌಶಲ್ಯ ಮಕ್ಕಳನ್ನು ಸಿದ್ಧಪಡಿಸಲು ಅವಕಾಶ ಸಿಗಲಿ ಎಂದು ನಮ್ಮ ಆಶಯ.
ಸಂಪರ್ಕಿಸಿ
ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತೀರ್ಥಹಳ್ಳಿ.
9535744812
