ತೀರ್ಥಹಳ್ಳಿ ಸಹ್ಯಾದ್ರಿ ಕಾಲೇಜು, ಶಾಲೆ ದಾಖಲೆ ಸಾಧನೆ!
– ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 22 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
– ಜಿಲ್ಲಾಮಟ್ಟಕ್ಕೆ ಅನೇಕ ವಿದ್ಯಾರ್ಥಿಗಳು: ಅಭಿನಂದನೆಗಳು
ತೀರ್ಥಹಳ್ಳಿ : ಒಂದೇ ಕಾಲೇಜಿನ 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿಯ ಸಹ್ಯಾದ್ರಿ ಸಂಸ್ಥೆಯ ವಿದ್ಯಾರ್ಥಿಗಳು ದಾಖಲೆಯ ಸಾಧನೆ ಮಾಡಿದ್ದಾರೆ. ಸೆಪ್ಟೆಂಬರ್ 22 – 23ರಂದು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯಶಾಲಿಯಾಗುವ ಮೂಲಕ ಒಂದೇ ಕಾಲೇಜಿನ 22 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ..
ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
ಬಾಲಕಿಯರ ವಾಲಿಬಾಲ್ – ಪ್ರಥಮ ಸ್ಥಾನ – ಸೃಷ್ಟಿ, ಧೃತಿ, ನವ್ಯ, ಶಿವಾನಿ, ಅನಾನ್, ಮೌಲ್ಯ, ಶ್ರಾವ್ಯ
ಬಾಲಕರ ಪ್ರೋಬಾಲ್ – ದ್ವಿತೀಯ ಸ್ಥಾನ – ಅಂಶುಲ್, ಪೂರ್ವಾಜ್, ಜಗತ್, ಶಯನ್, ಮೊಹಮ್ಮದ್ ಅಹನ್
ಬಾಲಕಿಯರ ಪ್ರೋಬಾಲ್ – ಆದ್ವಿ, ಕವಿಶ್ರೀ, ಮಾನ್ಯ
ಅಥ್ಲೆಟಿಕ್ಸ್ ವಿಭಾಗ: ಲಕ್ಷ್ಮಿ- 800 ಮೀ ಪ್ರಥಮ, 400 ಮೀಟರ್ ಹರ್ಡಲ್ ದ್ವಿತೀಯ, 200 ಮೀಟರ್ ದ್ವಿತೀಯ, ಅಂಶುಲ್ – ಗುಂಡು ಎಸೆತ ಪ್ರಥಮ, ಸಂಜಯ್ ಕೆ.ಟಿ – ಎತ್ತರ ಜಿಗಿತ ಪ್ರಥಮ., ಕಿರಣ್ ಕುಮಾರ್ – 400 ಮೀಟರ್ ಹರ್ಡಲ್ ದ್ವಿತೀಯ., ಭರತ್ – ಲಾಂಗ್ ಜಂಪ್ ದ್ವಿತೀಯ., ಆಜ್ಞಾ – ತ್ರಿಬಲ್ ಜಂಪ್ ದ್ವಿತೀಯ ಸ್ಥಾನ ಪಡೆದಿದ್ದಾರೆ.ಈ ಉದಯೋನ್ಮುಖ ಕ್ರೀಡಾ ಸಾಧಕ ಪ್ರತಿಭೆಗಳನ್ನು ಹಾಗೂ ಇವರನ್ನು ತರಬೇತಿಗೊಳಿಸುವ ಮೂಲಕ ರಾಜ್ಯಮಟ್ಟದ ಕ್ರೀಡಾಪಟುಗಳನ್ನಾಗಿ ತರಬೇತಿಗೊಳಿಸಿದ ದೈಹಿಕ ಶಿಕ್ಷಣ ನಿರ್ದೇಶಕರಾದ ಜಗದೀಶ್ ಎಂ.ಎಸ್ ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ತರಬೇತುದಾರರಾದ ಸಿರಾಜುದ್ದೀನ್ ಇವರನ್ನು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.
ಕ್ರೀಡಾ ಕೂಟದಲ್ಲಿ 26 ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಕ್ರೀಡಾ ಕೂಟ ಸಹ್ಯಾದ್ರಿ ಹಿರಿಯ ಪ್ರಾಥಮಿಕ ಶಾಲೆಯ 26 ಮಕ್ಕಳು ಜಿಲ್ಲಾ ಮಟ್ಟಕ್ಕೆ ಪಿ.ಎಂ.ಶ್ರೀ ಸರ್ಕಾರಿ ಪ್ರೌಢಶಾಲೆ, ಹಿರೇಗದ್ದೆಯ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿ ಸಹ್ಯಾದ್ರಿ ಆಂಗ್ಲ ಮಾದ್ಯಮ, ಕುಶಾವತಿ ಶಾಲೆಯ 26 ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗುವ ಮೂಲಕ ಶಾಲೆಗೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿರುತ್ತಾರೆ.
ವಿಜೇತ ವಿದ್ಯಾರ್ಥಿಗಳ ವಿವರ:
ಬಾಲಕಿಯರ ವಾಲೀಬಾಲ್ : ಮಾನ್ಯ ಮತ್ತು ತಂಡ – ವಿನ್ನರ್ಸ್
ಬಾಲಕರ ಬಾಲ್ ಬ್ಯಾಡ್ಮಿಂಟನ್ – ಸ್ಪಂದ ಮತ್ತು ತಂಡ – ವಿನ್ನರ್ಸ್
ಬಾಲಕರ ವಾಲೀಬಾಲ್ – ಆಶ್ರಯ್ ಮತ್ತು ತಂಡ – ರನ್ನರ್ಸ್
600 ಮೀ 400 ಮೀ ಮತ್ತು ತಟ್ಟೆ ಎಸೆತದಲ್ಲಿ ಆಶ್ರಯ್ ಮತ್ತು ಪ್ರಣವ್ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಹೆಚ್.ಆರ್. ಶ್ರೀಧರ್ ಇವರನ್ನು ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು ಮುಖ್ಯೋಪಾಧ್ಯಾಯಿನಿಯವರು ಹಾಗೂ ಸಹ ಶಿಕ್ಷಕ ವೃಂದ ಮತ್ತು ಪೋಷಕ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿರುತ್ತಾರೆ.
