Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿ ದಸರಾ ಶುರು: ಎಲ್ಲೆಡೆ ಹಬ್ಬದ ರಂಗು!

ತೀರ್ಥಹಳ್ಳಿ ದಸರಾ ಶುರು: ಎಲ್ಲೆಡೆ ಹಬ್ಬದ ರಂಗು!
– ಮಹಿಳಾ ದಸರಾ, ಯುವ ದಸರಾ, ಹುಲಿ ಹೆಜ್ಜೆ
– ಸೆ. 29ರಿಂದ ಅ.2ರ ತನಕ ಅದ್ದೂರಿ ದಸರಾ ನೋಡ ಬನ್ನಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಶ್ರೀ ರಾಮೇಶ್ವರ ದಸರಾ ಉತ್ಸವ ಸಮಿತಿ ವತಿಯಿಂದ ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈಗಾಗಲೇ ಇಡೀ ತೀರ್ಥಹಳ್ಳಿಯಲ್ಲಿ ಸಂಭ್ರಮ ಕಂಡು ಬರುತ್ತಿದೆ.
ದಸರಾ ಹಬ್ಬವು ಸೆ.29ರ ಸೋಮವಾರದಿಂದ ಅ.2ರ ತನಕ ನಡೆಯಲಿದ್ದು, ಹಾಸ್ಯ ಕವಿಗೋಷ್ಠಿ, ಯುವ ದಸರಾ, ಮಹಿಳಾ ದಸರಾ, ಯುವ ಸೌರಭ, ಕಲಾ ದಸರಾ, ತೀರ್ಥಹಳ್ಳಿ ಸಾಂಸ್ಕೃತಿಕ ವೈವಿದ್ಯ, ಸ್ತಬ್ದ ಚಿತ್ರ, ಜಾನಪದ ಮೆರವಣಿಗೆ, ನೃತ್ಯ ವೈಭವ ಹಾಗೂ ಹುಲಿ ಹೆಜ್ಜೆ, ಗ್ರಾಮೀಣ ಕ್ರೀಡಾಕೂಟ ಈ ಬಾರಿ ಜನ ಮನ ಸೆಳೆಯಲಿದೆ. ಈಗಾಗಲೇ ಕುಶಾವತಿ ಪಾರ್ಕ್, ರಾಮೇಶ್ವರ ದೇಗುಲ, ಕೆಸರುಗದ್ದೆ ಓಟದ ಜಾಗ ಸಿದ್ಧವಾಗಿದೆ.

ಕೊಪ್ಪ ಸರ್ಕಲ್ ಬಳಿ ಅದ್ಭುತವಾದ ಉಗ್ರನರಸಿಂಹ ವಿಗ್ರಹ

ಕೊಪ್ಪ ಸರ್ಕಲ್ ಬಳಿ ಅದ್ಭುತವಾದ ಉಗ್ರನರಸಿಂಹ ವಿಗ್ರಹ ಮಹಾದ್ವಾರದೊಂದಿಗೆ ನವರಾತ್ರಿಯ ಮೊದಲದಿನದಿಂದ ಅನಾರವರಣಗೊಂಡಿದೆ. ಹಿಂದೂ ಸಂಘಟನೆ ಯುವಕರು ಸೇರಿ ಮಾಡಿರುವ ಈ ಕಲಾಕೃತಿ ಸಾವಿರಾರು ಜನರ ಆಕರ್ಷಣೆ ಕೇಂದ್ರವಾಗಿದೆ. ಜತೆಗೆ ಸೆಲ್ಫಿ ಪಾಯಿಂಟ್ ಆಗಿದೆ.

ಗಮನ ಸೆಳೆಯಲಿದೆ ಕವಿಗೋಷ್ಠಿ!

ದಸರಾ ಕವಿಗೋಷ್ಠಿ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಕವಿಗಳು ಭಾಗವಹಿಸಿದ್ದಾರೆ. ಹಾಸ್ಯ ಕವಿಗೋಷ್ಠಿ ಆಯೋಜನೆಗೊಂಡಿದ್ದು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಈ ಕಾರ್ಯಕ್ಕೆ ನೆರವಾಗಲಿದೆ. ತೀರ್ಥಹಳ್ಳಿ ಕನ್ನಡ ಸಾಹಿತ್ಯ ಪರಿಷತ್ ಈ ಕಾರ್ಯಕ್ರಮಕ್ಕೆ ಸಹಯೋಗವಿದೆ. ಸೆ.27ರಂದು ದೇವಸ್ಥಾನದ ಅವರಣದಲ್ಲಿ ತೀರ್ಥಹಳ್ಳಿ ತಾಲ್ಲೂಕು ಮಟ್ಟದ 15 ವರ್ಷದ ವಯೋಮಾನದ ಒಳಗಿನ ಮಕ್ಕಳ ಗುಂಪು ಭಜನಾ ಸ್ಪರ್ಧೆ ನಡೆಯಿತು.

ಮೊದಲ ಬಾರಿಗೆ ಯುವ ದಸರಾ ಮತ್ತು ಮಹಿಳಾ ದಸರಾ!

ಯುವ ದಸರಾ ಮತ್ತು ಮಹಿಳಾ ದಸರಾದ ಆಯೋಜನೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ದಿನಾಂಕ:- 28-09-2025 ರ ಭಾನುವಾರ ಬೆಳಿಗ್ಗೆ 11.00 ಗಂಟೆಯಿಂದ ತೀರ್ಥಹಳ್ಳಿಯ ಕುರುವಳ್ಳಿಯ ರಿಂಗ್ ರೋಡ್ ಸಮೀಪ ನಿರ್ಮಾಣ ಮಾಡಲಾದ ಕೆಸರುಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು. ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಕೆಸರು ಗದ್ದೆ ಓಟ ಮತ್ತು ಗಿರಿಗಿಟ್ಟೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಕಿರುತೆರೆಯ ನಟ ತೀರ್ಥಹಳ್ಳಿಯ ಪ್ರತಿಭೆ ಹುಲಿ ಕಾರ್ತಿಕ್ ನೆರವೇರಿಸಲಿದ್ದಾರೆ.

– ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮ

ದಿನಾಂಕ:-29-09-2025 ರ ಸೋಮವಾರ ಕುಶಾವತಿಯ ನೆಹರು ಪಾರ್ಕಿನಲ್ಲಿ ನಿರ್ಮಾಣವಾದ ಬೃಹತ್ ವೇದಿಕೆಯಲ್ಲಿ “ಯುವ ದಸರಾ” ದ “ಯುವ ಸೌರಭ” ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.ಶಿವಮೊಗ್ಗ ಜಿಲ್ಲೆಯ ಅನೇಕ ಯುವ ಪ್ರತಿಭೆಗಳು ಈ ವೇದಿಕೆಯಲ್ಲಿ ತಮ್ಮ ಕಾರ್ಯಕ್ರಮ ನೀಡಲಿದ್ದಾರೆ. ದಸರಾ -2025 ರ ಸಂಚಾಲಕರಾಗಿ ಸಂದೇಶ್ ಜವಳಿ, ಅಮರ್‌ನಾಥ ಶೆಟ್ಟಿ ಕೆಲಸ ಮಾಡುತ್ತಿದ್ದಾರೆ.
ಮೊಟ್ಟ ಮೊದಲಬಾರಿಗೆ ಈ ಬಾರಿ ದಸರಾ ಉತ್ಸವಕ್ಕೆ ವಿಶೇಷ ಮೆರಗು ನೀಡುವ ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನಗಳ “ಕಲಾ ದಸರಾ” ಕುಶಾವತಿ ನೆಹರು ಪಾರ್ಕಿನಲ್ಲಿ ಆಯೋಜನೆಗೊಂಡಿದ್ದು ತೀರ್ಥಹಳ್ಳಿಯ ಅನೇಕ ಕಲಾವಿದರ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿದೆ. ದಿ:-29-09-2025 ರಿಂದ ನಾಲ್ಕು ದಿನಗಳ ಕಾಲ ನಡೆಯುವ ಈ ಕಲಾ ಪ್ರದರ್ಶನವನ್ನು ಬೆಂಗಳೂರಿನ ಖ್ಯಾತ ಪಿಡಿಲಿಟಿಸ್ ಮಾಲೀಕ ಅಚ್ಚುತ್ ಗೌಡ ರವರು ಉದ್ಘಾಟಿಸಲಿದ್ದಾರೆ.

ಮಹಿಳಾ ಕಲಾವಿದರಿಗೆ ಅವಕಾಶ

ಮಹಿಳಾ ದಸರಾ“ದಿನಾಂಕ:- 30-09-2025 ರ ಮಂಗಳವಾರ ತೀರ್ಥಹಳ್ಳಿಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ಮಹಿಳಾ ದಸರಾ ಆಯೋಜನೆಗೊಂಡಿದ್ದು ಈ ಕಾರ್ಯಕ್ರಮದಲ್ಲಿ ಮಹಿಳಾ ಹುಲಿನೃತ್ಯ, ಶಾಸ್ತ್ರೀಯ, ಜಾನಪದ ಮತ್ತು ಯೋಗನೃತ್ಯ ಹಾಗೂ ಪ್ಯಾಶನ್ ಶೋ ಕಾರ್ಯಕ್ರಮ ಕುಶಾವತಿ ನೆಹರು ಪಾರ್ಕಿನ ವೇದಿಕೆಯಲ್ಲಿ ನಡೆಯಲಿದೆ.
ತೀರ್ಥಹಳ್ಳಿ ಸಾಂಸ್ಕೃತಿಕ ವೈವಿಧ್ಯ: ದಿನಾಂಕ:- 01-10-2025 ರ ಬುಧವಾರ ಕುಶಾವತಿ ನೆಹರು ಪಾರ್ಕಿನ ವೇದಿಕೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಉದಯೋನ್ಮುಖ ಕಲಾವಿದರ ಶಾಸ್ತ್ರೀಯ ನೃತ್ಯ, ರೂಪಕಗಳು, ಜಾನಪದ ನೃತ್ಯ, ಸಂಗೀತ, ಕಾರ್ಯಕ್ರಮ ನಡೆಯಲಿದೆ.

ವಿಜಯದಶಮಿಯ ಸಂಪ್ರದಾಯಿಕ ದಸರಾ

“ದಿನಾಂಕ:-02-10-2025 ರ ಗುರುವಾರ ಮಧ್ಯಾಹ್ನ 2.00 ಗಂಟೆಗೆ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಿಂದ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವವು ಚಾಮುಂಡೇಶ್ವರಿ ದೇವಿಯ ಅಂಬಾರಿಯೊಂದಿಗೆ ಕರ್ನಾಟಕದ ಸುಪ್ರಸಿದ್ದ ಜಾನಪದ ಕಲಾ ತಂಡಗಳ ಮತ್ತು ಆಕರ್ಷಕ ಸ್ಥಬ್ಧಚಿತ್ರಗಳ ಸಾಂಪ್ರದಾಯಿಕ ಭಜನಾ ನೃತ್ಯಗಳೊಂದಿಗೆ ಮೆರವಣಿಗೆಯಲ್ಲಿ ಕುಶಾವತಿಯ ನೆಹರು ಉದ್ಯಾನವನಕ್ಕೆ ತೆರಳಿ ಬನ್ನಿ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ.5.30 ಗಂಟೆಗೆ ಉಡುಪಿಯ ವಿದೂಷಿ ಡಾ| ಮಂಜರಿ ಚಂದ್ರ ಪುಷ್ಪರಾಜ್ ನಿರ್ದೇಶನದ ಸೃಷ್ಟಿನೃತ್ಯ ಕಲಾಕುಟಿರ (ರಿ) ಇವರ ಪ್ರಸ್ತುತಿಯ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸಂಪ್ರದಾಯದಂತೆ ಗೌರವಿಸುವ ಕಾರ್ಯಕ್ರಮವಿರುತ್ತದೆ.

ಜಾನಪದ ಹುಲಿ ಕುಣಿತ ಹುಲಿ ಹೆಜ್ಜೆ

ಮಲೆನಾಡಿನ ಸಾಂಪ್ರದಾಯಿಕ ಜಾನಪದ ಹುಲಿ ಕುಣಿತ ಹುಲಿಹೆಜ್ಜೆ“ಸಂಜೆ 8.00 ಗಂಟೆಗೆ ಸರಿಯಾಗಿ ಕುಶಾವತಿಯ ದಸರಾ ವೇದಿಕೆಯಲ್ಲಿ ಮಲೆನಾಡಿನ ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರದ ಅಕರ್ಷಕ ಹುಲಿಕುಣಿತದ ಸ್ಪರ್ಧೆ ಹುಲಿಹೆಜ್ಜೆ ನಡೆಯಲಿದೆ.
ದಸರಾ ಸಮಿತಿಯ ಸಂಚಾಲಕರಗಳಾದ ಸಂದೇಶ್ ಜವಳಿ, ಅಮರನಾಥ್ ಶೆಟ್ಟಿ,, ವಿಶ್ವನಾಥ್ ಶೆಟ್ಟಿ, ಹೆದ್ದೂರ್ ನವೀನ್, ವಿದಾತ ಅನಿಲ್, ಬಿ, ಗಣಪತಿ, ಕೆಸ್ತೂರು ಮಂಜುನಾಥ್, ಸೊಪ್ಪುಗುಡ್ಡೆ ರಾಘವೇಂದ್ರ, ಚಂದವಳ್ಳಿ ಸೋಮಶೇಖರ್,, ರಾಘವೇಂದ್ರ ಶೆಟ್ಟಿ, ವಾದಿರಾಜ್ ಭಟ್, ಬಿ ಗಣಪತಿ, ಕುಕ್ಕೆ ಪ್ರಶಾಂತ್, ಗೀತಾ ರಮೇಶ್‌, ವರಲಕ್ಷ್ಮಿ, ನಯನ ಶೆಟ್ಟಿ, ಗೀತಾ ರಾಘವೇಂದ್ರ ಸೇರಿ ದಸರಾ ಎಲ್ಲಾ ಸಮಿತಿ ಸದಸ್ಯರು ಹಾಜರಿದ್ದು ಕಾರ್ಯಕ್ರಮದ ಮಾಹಿತಿ ನೀಡಿದರು.

ದಸರಾಗೆ ವಿದ್ಯುತ್ ಬೆಳಕಿನ ಅಲಂಕಾರ!

ತೀರ್ಥಹಳ್ಳಿ ಪಟ್ಟಣದಲ್ಲಿ ದಸರಾಗೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗುತ್ತಿದೆ. ಎಲ್ಲೆಡೆ ದಸರಾ ಸಂಭ್ರಮ ಜೋರಾಗಿದೆ. ಯುವ ದಸರಾ ಸಂಚಾಲಕರಾದ ಶಿವು ಹೊದಲ, ಅಂಜುರ ಕುಡುಮಲ್ಲಿಗೆ, ಪ್ರೇಮ್ ಯಡೂರು ಸೇರಿ ಅನೇಕರು ಗ್ರಾಮೀಣ ಕ್ರೀಡೆಗೆ ವೇದಿಕೆ ಸಿದ್ಧ ಮಾಡಿದ್ದಾರೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.