Categories
Uncategorized ಬೆಂಗಳೂರು

ಯುಗಾದಿ ಸಂಭ್ರಮ ಎಲ್ಲೆಡೆ ಶುರು!

ಯುಗಾದಿ ಸಂಭ್ರಮ ಎಲ್ಲೆಡೆ ಶುರು!
– ಹಬ್ಬಕ್ಕೆ ಬಸ್, ರೈಲು ಎಲ್ಲಾ ಫುಲ್ ರಶ್
– ಸತತ 4 ದಿನದ ರಜೆಯಿಂದ ಊರಿಗೆ ಪಯಣ

NAMMUR EXPRESS NEWS
ಬೆಂಗಳೂರು: ಯುಗಾದಿ ಸಂಭ್ರಮ ಎಲ್ಲೆಡೆ ಶುರುವಾಗಿದ್ದು, ಊರಿಗೆ ತೆರಳಿ ಕುಟುಂಬದವರು ಹಾಗೂ ಬಂಧು ಬಾಂಧವರೊಂದಿಗೆ ಯುಗಾದಿ ಹಬ್ಬವನ್ನ ಆಚರಿಸಬೇಕೆಂದು ಎಲ್ಲರೂ ಊರಿಗೆ ಪಯಣ ಬೆಳೆಸುತ್ತಿದ್ದಾರೆ.
ಯುಗಾದಿ ಹಬ್ಬವನ್ನು ಆಚರಣೆ ಮಾಡಲು ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಹಬ್ಬಕ್ಕೆ ಖಾಸಗಿ, ಸರ್ಕಾರಿ ಬಸ್ ಬುಕ್ ಆಗಿವೆ. ರೈಲು ಕೂಡ ರಶ್ ಆಗಿದೆ. ಭಾರೀ ಟ್ರಾಫಿಕ್ ಇರುವ ಕಾರಣ ಊರಿಗೆ ಹೋಗುವವರು ಸರಿಯಾದ ಪ್ಲಾನ್ ಅನ್ನ ಮಾಡಿಕೊಂಡು ಹೋಗುವುದು ಉತ್ತಮ.
ರಾಜ್ಯದ ಎಲ್ಲೆಡೆ ಸಂಭ್ರಮ :ರಾಜ್ಯದ ಎಲ್ಲೆಡೆ ಸಂಭ್ರಮ ಕಂಡು ಬರುತ್ತಿದೆ. ಬಟ್ಟೆ, ಚಿನ್ನ, ಹೊಸ ವಸ್ತು, ವಾಹನ ಖರೀದಿ ಜೋರಾಗಿದೆ. ಎಲ್ಲೆಡೆ ಹಬ್ಬಕ್ಕೆ ಸಿದ್ಧತೆ ನಡೆಯುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.