Categories
ರಾಜ್ಯ

ಹೇಮಾವತಿ ನದಿಗೆ ವಿಷ? ಸಾವಿರಾರು ಮೀನು ಬಲಿ..!

ಟಾಪ್ 6 ನ್ಯೂಸ್ ಕರ್ನಾಟಕ

ಹೇಮಾವತಿ ನದಿಗೆ ವಿಷ? ಸಾವಿರಾರು ಮೀನು ಬಲಿ..!
– ಕೊಪ್ಪಳ, ಬೀದ‌ರ್ : ಇಬ್ಬರು ವಿದ್ಯಾರ್ಥಿನಿಯರ ಆತ್ಮಹತ್ಯೆ
– ಚನ್ನಪಟ್ಟಣ: ಕಾರು-ಕ್ಯಾಂಟರ್ ನಡುವೆ ಡಿಕ್ಕಿಯಾಗಿ ಮೂವರ ಸಾವು..!!
– ಆನ್‌ಲೈನ್‌ನಲ್ಲಿ ಮೊಬೈಲ್ ಆರ್ಡರ್ ಬಂತು 6 ಸೋಪ್!
– ಬೆಳಗಾವಿ: ಅತ್ತೆ ಮೇಲೆ ಅಳಿಯನಿಂದ ಹಲ್ಲೆ..!!
– ಶಿರಸಿ: ಅಡಿಕೆ ಸುಲಿಯುವ ಮಿಷನ್ ಗೆ ಸೀರೆ ಸಿಲುಕಿ ಮಹಿಳೆ ಸಾವು!

NAMMUR EXPRESS NEWS
ಕೊಟ್ಟಿಗೆಹಾರ: ಹೇಮಾವತಿ ನದಿಗೆ ಕಿಡಿಗೇಡಿಗಳು ವಿಷ ಹಾಕಿದ್ದರಿಂದ ಸಾವಿರಾರು ಮೀನುಗಳು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿ ನಡೆದಿದೆ. ಸುಮಾರು 2 ಕಿ. ಮೀ. ನದಿ ದಡದಲ್ಲಿ ಸಾವಿರಾರು ಮೀನುಗಳು ತೇಲುತ್ತಿರುವುದು ಕಂಡುಬಂದಿದೆ. ಕಿಡಿಗೇಡಿಗಳು ನದಿಗೆ ವಿಷ ಮಿಶ್ರಣ ಮಾಡಿರುವ ಅನುಮಾನ ವ್ಯಕ್ತವಾಗಿದೆ.

– ಕೊಪ್ಪಳ, ಬೀದ‌ರ್ : ಇಬ್ಬರು ವಿದ್ಯಾರ್ಥಿನಿಯರ ಆತ್ಮಹತ್ಯೆ

ಕೊಪ್ಪಳ / ಬೀದರ್: 8ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ 3
ಅಂಕ ಬಂದಿದ್ದಕ್ಕೆ ಮನನೊಂದು ಕೊಪ್ಪಳದಲ್ಲಿ ಓರ್ವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಂದೆಡೆ ಪೋಷಕರು ಮೊಬೈಲ್‌ ಹೆಚ್ಚು ಬಳಸಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಬೀದರ್‌ನಲ್ಲಿ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಕೊಪ್ಪಳದ ನಿರೀಕ್ಷಾ ಕಾರೇಕಲ್ (14), ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ಸೋನಿ ಸಂತೋಷ (15) ಆತ್ಮಹತ್ಯೆ ಮಾಡಿಕೊಂಡವರು.

– ಚನ್ನಪಟ್ಟಣ: ಕಾರು-ಕ್ಯಾಂಟರ್ ನಡುವೆ ಡಿಕ್ಕಿಯಾಗಿ ಮೂವರ ಸಾವು..!!

ಚನ್ನಪಟ್ಟಣ: ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ
ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ 10 ಗಂಟೆಗೆ ತಾಲೂಕಿನ ತಿಟ್ಟಮಾರನಹಳ್ಳಿ ಬಳಿಯ ಬೈಪಾಸ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಸಂಭವಿಸಿದೆ. ಶಿವಪ್ರಕಾಶ್ (37), ಪುಟ್ಟಗೌರಮ್ಮ (72), ಶಿವರತ್ನ (50) ಸಾವನ್ನಪ್ಪಿದ್ದಾರೆ, ನಟರಾಜು, ಸುಮಾ, ನಾಗೇಶ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಂಡ್ಯದಲ್ಲಿ ಸಂಬಂಧಿಕರೊಬ್ಬರ ಕಾರ್ಯಕ್ರಮಕ್ಕಾಗಿ ಶಿವಪ್ರಕಾಶ್ ಕಾರಿನಲ್ಲಿ ಕುಟುಂಬದೊಂದಿಗೆ ತೆರಳುತ್ತಿದ್ದರು. ತಿಟ್ಟಮಾರನಹಳ್ಳಿ ಸರ್ವೀಸ್ ರಸ್ತೆಯಲ್ಲಿ ಎದುರುಗಡೆಯಿಂದ ಹೆಂಚುಗಳನ್ನು ತುಂಬಿದ್ದ ಟೆಂಪೊ ಬಂದು ಮುಖಾಮುಖಿಯಾಗಿ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಆನ್‌ಲೈನ್‌ನಲ್ಲಿ ಮೊಬೈಲ್ ಆರ್ಡರ್ ಬಂತು 6 ಸೋಪ್!

ತುರುವೇಕೆರೆ: ಅಮೆಜಾನ್‌ನಲ್ಲಿ ಸುಮಾರು ₹32000 ಬೆಲೆಯ ವಿವೋ ವಿ 50 ಫೋನ್ ಬುಕ್ ಮಾಡಿದ್ದ ಗೃಹಿಣಿಯೊಬ್ಬರಿಗೆ ಮೊಬೈಲ್ ಬದಲಾಗಿ ಪಾರ್ಸೆಲ್ ನಲ್ಲಿ ಆರು ಸೋಪ್ ಬಂದಿರುವ ಘಟನೆ ತುರುವೇಕೆರೆ ತಾಲೂಕಿನಲ್ಲಿ ನಡೆದಿದೆ. ಪಾರ್ಸೆಲ್ ತಂದ ವೇಳೆ ಗೃಹಿಣಿ ನನಗೆ ಮೊಬೈಲ್ ಬಾಕ್ಸ್ ಓಪನ್ ಮಾಡಲು ಬರುವುದಿಲ್ಲ ಎಂದು ಹೇಳಿ ಡೆಲಿವರಿ ಬಾಯ್ ಬಳಿಯೇ ಪಾರ್ಸೆಲ್ ಓಪನ್ ಮಾಡಿಸಿ ವಿಡಿಯೋ ಮಾಡಿದ್ದಾರೆ. ಆದರೆ ಬಾಕ್ಸ್‌ ತೆರೆದಾಗ ಮೊಬೈಲ್ ಬದಲಿಗೆ ಸೋಪ್ ಕಂಡು ಗೃಹಿಣಿ, ಡೆಲಿವರಿ ಬಾಯ್ ಆಘಾತಕ್ಕೊಳಗಾಗಿದ್ದಾರೆ.

– ಬೆಳಗಾವಿ: ಅತ್ತೆ ಮೇಲೆ ಅಳಿಯನಿಂದ ಹಲ್ಲೆ..!!

ಬೆಳಗಾವಿ : ಸಾರ್ವಜನಿಕವಾಗಿ ಬಟ್ಟೆ ಹರಿದು ಅತ್ತೆ ಮೇಲೆ ಅಳಿಯ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ನಡೆದಿದೆ. ಅಳಿಯ ಭೈರು ಮೇತ್ರಿ‌ ಹಾಗೂ ಕುಟುಂಬಸ್ಥರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಹರಿದ ನೈಟಿಯಲ್ಲೇ ಮಹಿಳೆ ಕಮಿಷನರ್​ ಕಚೇರಿಗೆ ತೆರಳಿ, “ನನ್ನ ಅಳಿಯ ಹಾಗೂ ಅವರ ಕುಟುಂಬಸ್ಥರು ನನ್ನ ಬಟ್ಟೆ ಹರಿದು, ರಸ್ತೆಯಲ್ಲಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ” ಎಂದು ದೂರು ನೀಡಿದ್ದಾರೆ. ಮಹಿಳೆಯ ಪುತ್ರಿ ಗರ್ಭಿಣಿಯಿದ್ದ, 12 ದಿನಗಳ ಹಿಂದೆ ಮಗಳಿಗೆ ಹೆರಿಗೆಯಾಗಿತ್ತು. ಗಂಡು ಮಗು ಜನಿಸುವಂತೆ ಪತ್ನಿಯನ್ನು ಕಳುಹಿಸುವಂತೆ ಪತಿ ಒತ್ತಾಯ ಮಾಡುತ್ತಿದ್ದನು. 4 ತಿಂಗಳ ಬಳಿಕ ಕಳುಹಿಸ್ತೇವೆ ಎಂದು ಅತ್ತೆ, ಅಳಿಯನಿಗೆ ಹೇಳಿದ್ದಾರೆ. ಇಷ್ಟಕ್ಕೆನೇ ಅಳಿಯ, ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆ ಮತ್ತು ಇಬ್ಬರು ಬಾಲಕಿಯರು ಸೇರಿದಂತೆ ಐವರ ಮೇಲೆ ಹಲ್ಲೆ ಮಾಡುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

– ಶಿರಸಿ : ಅಡಿಕೆ ಸುಲಿಯುವ ಮಿಷನ್ ಗೆ ಸೀರೆ ಸಿಲುಕಿ ಮಹಿಳೆ ಸಾವು!

ಶಿರಸಿ: ಅಡಿಕೆ ಸುಲಿಯುವ ಯಂತ್ರಕ್ಕೆ ಸೀರೆ ಸಿಲುಕಿ ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ಉತ್ತರಕನ್ನಡದ ಶಿರಸಿಯಲ್ಲಿ ನಡೆದಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೆಗಡೆ ಹೊಸಬಾಳೆ ಅವರ ಪತ್ನಿ ಶೋಭಾ ಹೊಸಬಾಳೆ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮನೆಯಲ್ಲಿ ಅಡಿಕೆ ಕೊಯ್ಲಿನ ಕೆಲಸ ಮಾಡಲು ಇತರ ಕೆಲಸದವರನ್ನೂ ನೇಮಕ ಮಾಡಿಕೊಂಡಿದ್ದರು. ಕೆಲಸವನ್ನು ಗಮನಿಸಲು ಶೋಭಾ ಹೋಗಿದ್ದಾರೆ. ಆಗ ಅವರ ಸೀರೆ ಅಡಿಕೆ ಸುಲಿಯುವ ಮಿಷಿನ್ ಗೆ ಸಿಲುಕಿಕೊಂಡಿದ್ದು ತಕ್ಷಣವೇ ಯಂತ್ರ ಅವರನ್ನು ಎತ್ತಿ ಬಿಸಾಡಿದ್ದು ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.