ತ್ಯಾಗಲಿ ಸೊಸೈಟಿಯಲ್ಲಿ ಯಶಸ್ವಿಯಾಗಿ ನಡೆದ “ಬೆಟ್ಟ ಜಾಗೃತಿ ಅಭಿಯಾನ”
* ವೃಕ್ಷ ಲಕ್ಷ ಅಭಿಯಾನ ಹಾಗೂ ಬೆಟ್ಟ ಜಾಗೃತಿ ಅಭಿಯಾನ
* ಅಭಿಯಾನದ ಮಾಹಿತಿ ಪಡೆದ ರೈತ ಬಾಂಧವರು
NAMMMUR EXPRESS NEWS
ಸಿದ್ದಾಪುರ: ತಾಲೂಕಿನ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಾಣಿಕಟ್ಟಾದಲ್ಲಿ,ಬುಧವಾರ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಾಣಿಕಟ್ಟಾ ಮತ್ತು ಅಗ್ರಗಣ್ಯ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ ನಾಣಿಕಟ್ಟ ಇವುಗಳ ಸಂಯುಕ್ತ ಆಶ್ರಯದಲ್ಲಿ, ಸಂಘದ ಅಧ್ಯಕ್ಷರಾದ ಶ್ರೀ ನಾರಾಯಣ ಬಿ ಹೆಗಡೆ ಮತ್ತೀಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ನೇತೃತ್ವದಲ್ಲಿ “ವೃಕ್ಷ ಲಕ್ಷ ಆಂದೋಲನ, ಕರ್ನಾಟಕ” ಬೆಟ್ಟ ಜಾಗೃತಿ ಅಭಿಯಾನದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.”ವೃಕ್ಷ ಲಕ್ಷ” ಆಂದೋಲನ ಅಭಿಯಾನದ ತಜ್ಞ ಪ್ರಮುಖರಾದ ಅನಂತ ಹೆಗಡೆ ಅಶೀಸರ,ಬಾಲಚಂದ್ರ ಹೆಗಡೆ ಸಾಯಿಮನೆ,ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ರೈತರು,ತೋಟಗಾರರು ಬೆಟ್ಟ ಬಳಕೆದಾರರು,ಎಲ್ಲರ ಜತೆಗೆ ಸಮಾಲೋಚನೆ ಚರ್ಚೆ ನಡೆಸಿ, ತಮ್ಮ ಅತ್ಯಮೂಲ್ಯ ಅವಶ್ಯ ಸಲಹೆ ತಿಳಿದುಕೊಳ್ಳುವುದರ ಜೊತೆಗೆ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಿ ತಮಗೆ ತಿಳಿದ ಕೆಲವು ಮಹತ್ವದ ವಿಷಯಗಳ ಮಾಹಿತಿ ನೀಡಿದರು.ಸಹಕಾರಿ ಸಂಘದ ನಿರ್ದೇಶಕರಾದ ಎಂ ಆರ್ ಹೆಗಡೆ ಬಾಳೇಜಡ್ಡಿ, ಸಚ್ಚಿದಾನಂದ ಜಿ ಹೆಗಡೆ, ನಾಗರಾಜ ರಾಮ ನಾಯ್ಕ ಹಂಗಾರಖಂಡ, ವಸಂತ ಕೆ ಹೆಗಡೆ ತ್ಯಾಗಲಿ,ಬಾಲಚಂದ್ರ ಹೆಗಡೆ, ರಿಚರ್ಡ್ಸ್ ಕೆ ಸಿಲ್ವಾ, ಮತ್ತು ಊರಿನ ಹಿರಿಯರು, ಪ್ರಮುಖರು,ಹಾಗೂ ,ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಸುಧಾಕರ ಜಿ ಹೆಗಡೆ ಮತ್ತು ಎಲ್ಲಾ ಸಿಬ್ಬಂದಿಗಳು, ಅಗ್ರಗಣ್ಯ ರೈತ ಸಂಘದ ನಿರ್ದೇಶಕರು,ಸದಸ್ಯರು & ಸಿಬ್ಬಂದಿಗಳು, ತ್ಯಾಗಲಿ – ನಾಣಿಕಟ್ಟಾ, ಕಾನ್ಸೂರು – ಕೊಡ್ಸರ,ಭಾಗದ ರೈತರು,ತೋಟಿಗರು,ಬೆಟ್ಟ ಬಳಕೆದಾರರು ಹಾಜರಿದ್ದು “ಲಕ್ಷ ವೃಕ್ಷ” ಅಭಿಯಾನ ಸಭೆಯ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
