Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್ 

•ಉಡುಪಿ: ಮಹಿಳೆಯಿಂದ ಚಿನ್ನದಂಗಡಿಗಳಿಗೆ ವಂಚನೆ
•ಪುತ್ತೂರು: ಟ್ಯಾಂಕ್ ನಲ್ಲಿ ನೀಲಿ ಬಣ್ಣದ ನೀರು
•ಬೆಳ್ತಂಗಡಿ: ಶವ ಹೂತು ಹಾಕಿದ ಕೇಸ್ ನ್ಯಾಯಾಲಯಕ್ಕೆ!
•ದಕ್ಷಿಣ ಕನ್ನಡ: ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
* ಬಂಟ್ವಾಳ: ಕಲ್ಲಡ್ಕದ ವ್ಯಕ್ತಿ ನಾಪತ್ತೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಶಿರ್ವಾದ ಫರೀದಾ ಎಂಬ ಮಹಿಳೆ ಚಿನ್ನದಂಗಡಿಯಲ್ಲಿ ಆಭರಣವನ್ನು ಖರೀದಿಸಿ, ಹಣವನ್ನು ಪಾವತಿಸದೆ ಮಾಲೀಕರಿಗೆ ವಂಚನೆ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಉಡುಪಿಯ ಸುತ್ತಮುತ್ತಲ ಮೂರು ಅಂಗಡಿಗಳಲ್ಲಿ ಸುಮಾರು 9.74.043 ಮೌಲ್ಯದ 98. 565 ಗ್ರಾಮ್ ನಷ್ಟು ಚಿನ್ನವನ್ನು ಪ್ರತಿ ಬಾರಿ ಬೇರೆ ಬೇರೆ ಅಂಗಡಿಗಳಿಗೆ ಕರೆ ಮಾಡಿ “ಮನೆಯಲ್ಲಿ ಕಾರ್ಯಕ್ರಮವಿದೆ ನನಗೆ ಬರಲಾಗುವುದಿಲ್ಲ ಬದಲಿಗೆ ಸಂಬಂಧಿಕರೊಬ್ಬರನ್ನು ಕಳುಹಿಸುತ್ತೇನೆ ವಾಟ್ಸಪ್ ಮೂಲಕ ಆಭರಣಗಳ ಫೋಟೋವನ್ನು ತೆಗೆದು ಕಳುಹಿಸಿ, ಆಯ್ಕೆ ಮಾಡಿ ತಿಳಿಸುತ್ತೇನೆ ಮತ್ತು ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನೀಡಿ ನಾನು ಹಣವನ್ನು ಕಳುಹಿಸುತ್ತೇನೆ” ಎಂದು ಹೇಳುತ್ತಿದ್ದರು. ಅದೇ ರೀತಿ ಮಾಲೀಕರು ನಂಬಿ ಆಕೆಯ ಹೆಸರನ್ನು ಹೇಳಿ ಬಂದ ವ್ಯಕ್ತಿಗೆ ಆಭರಣಗಳನ್ನು ತೋರಿಸಿ, ಅವನು ವಾಟ್ಸಪ್ ಮೂಲಕ ಫರೀದಾಗೆ ಕಳುಹಿಸಿ, ಆಕೆ ಆಯ್ಕೆ ಮಾಡಿದ ಬಳಿಕ ಕಳುಹಿಸಿ ಕೊಡುತ್ತಿದ್ದರು. ಇದೇ ರೀತಿ ಹಲವಾರು ಚಿನ್ನದ ಅಂಗಡಿಗಳಿಗೆ ಬೇರೆ ಬೇರೆ ವ್ಯಕ್ತಿಗಳನ್ನು ಕಳುಹಿಸಿ, ಆಭರಣಗಳನ್ನು ಖರೀದಿಸಿ, ಹಣವನ್ನು ಪಾವತಿಸದೆ ಟೋಪಿ ಹಾಕಿದ್ದಾರೆ ಎನ್ನಲಾಗಿದೆ. ಆಭರಣ ಅಂಗಡಿಗಳ ಮಾಲೀಕರ ದೂರಿನ ಆಧಾರದ ಮೇಲೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ಅಜ್ಜಿಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟ್ಯಾಂಕ್ ನ ನೀರು ನೀಲಿ ಬಣ್ಣಕ್ಕೆ ತಿರುಗಿದ್ದು, ಮುಟ್ಟಿದ ತಕ್ಷಣ ತುರಿಕೆ ಪ್ರಾರಂಭವಾಗುತ್ತಿರುವುದು ಶಾಲೆಯ ಸಿಬ್ಬಂದಿಗಳು ಮತ್ತು ಮಕ್ಕಳಲ್ಲಿ ಆತಂಕವನ್ನು ಮೂಡಿಸಿದೆ. ಶಾಲೆಗೆ ಸಂಬಂಧಿಸಿದಂತೆ ಎರಡು ನೀರಿನ ಟ್ಯಾಂಕ್ ಗಳಿದ್ದು, ಒಂದರಲ್ಲಿ ಸಂಗ್ರಹಿಸಿಟ್ಟಿರುವ ನೀರನ್ನು ಕುಡಿಯಲು ಮತ್ತು ಅಡುಗೆ ಮಾಡಲು ಬಳಸುತ್ತಿದ್ದರು, ಮತ್ತೊಂದರ ನೀರನ್ನು ಕೈ ಕಾಲು ತೊಳೆಯಲು, ಶೌಚಾಲಯಕ್ಕಾಗಿ ಉಪಯೋಗಿಸುತ್ತಿದ್ದರು. ಬೆಳಿಗ್ಗೆ ಶಾಲೆಗೆ ಬಂದ ಮಕ್ಕಳು ಮಳೆಯಿಂದಾಗಿ ಕೈಕಾಲು ಕೆಸರಾದ ಕಾರಣ ಕಾಲು ತೊಳೆದುಕೊಳ್ಳಲು ಹೋದಾಗ ನೀರು ನೀಲಿಯಾಗಿ ಕಂಡು ಬಂದಿದೆ. ಕೂಡಲೇ ಶಿಕ್ಷಕರು ಮಕ್ಕಳು ತಿಳಿಸಿದ ವಿಚಾರವನ್ನು ಶಾಲೆಯ ಸಮಿತಿಯವರ ಗಮನಕ್ಕೆ ತಂದರು. ವಿಷಯ ಊರಿನಲ್ಲಿ ಹರಿದಾಡುತ್ತಿದ್ದಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಆರೋಗ್ಯ ಇಲಾಖೆಯವರು ಭೇಟಿ ನೀಡಿದ್ದು, ನೀರನ್ನು ಸಂಗ್ರಹಿಸಿಕೊಂಡು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿದ್ದಾರೆ. ಅಲ್ಲದೆ ತಿಳಿಯದೆ ಆ ನೀರಿನಲ್ಲಿ ಮೊದಲಿಗೆ ಕೈ ಕಾಲು ತೊಳೆದುಕೊಂಡ ವಿದ್ಯಾರ್ಥಿಗಳ ಮೈಯಲ್ಲಿ ತುರಿಕೆ ಆರಂಭಗೊಂಡಿರುವುದು ಕಂಡುಬಂದಿದೆ.

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶವಗಳನ್ನು ಒಂದು ಸ್ಥಳದಲ್ಲಿ ಹೂತು ಹಾಕಲಾಗಿದೆ, ಅದನ್ನು ನಾನು ತೋರಿಸುತ್ತೇನೆ ಎಂದು ಅಸ್ಥಿಪಂಜರವನ್ನು ಸಾಕ್ಷಿಯಾಗಿ ತಂದು ದೂರು ನೀಡಿದ ಪವನ್ ದೇಶಪಾಂಡೆಯನ್ನು ಬೆಳ್ತಂಗಡಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ಜುಲೈ 11 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜೊತೆಗೆ ಅಸ್ಥಿಪಂಜರವನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸತ್ಯ ಹೊರಬೀಳಲು ನಾವು ದೂರುದಾರನೊಂದಿಗೆ ಸಹಕಾರ ನೀಡಲಿದ್ದೇವೆ, ಸಾಕ್ಷಿಗಳು ನಾಶವಾಗುವ ಸಾಧ್ಯತೆಯಿದ್ದು, ಆದಷ್ಟು ಬೇಗ ದೂರುದಾರನು ಹೂತು ಹಾಕಿರುವ ಮೃತದೇಹಗಳನ್ನು ಹೊರತೆಗೆಯಲು ಸರಿಯಾದ ಕ್ರಮ ಕೈಗೊಳ್ಳಬೇಕಾಗಿದ್ದು, ಅದು ಪೊಲೀಸರ ಕರ್ತವ್ಯವಾಗಿದೆ ಆರೋಪಿ ಯಾರು ಎನ್ನುವುದು ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ, ಆದರೆ ಅದು ನಮಗೆ ದೊರೆತಿಲ್ಲ. ನ್ಯಾಯಾಲಯದಲ್ಲಿ ಮತ್ತು ತನಿಖಾಧಿಕಾರಿಗಳ ಬಳಿಯಲ್ಲಿ ಇದೆ ಎಂದು ವಕೀಲರಾದ ಪವನ್ ಶ್ಯಾಮ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ: ಮುಳಿಹಿತ್ಲು ಗ್ರಾಮದ ಆಟೋ ಚಾಲಕರಾದ ವಾಮನ ನಾಯಕ್ ಅವರು ಜಪ್ಪಿನಮೊಗರುವಿನ ಚಂದ್ರಹಾಸ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ನೀಡಿದ ಮಾಹಿತಿಯ ಆಧಾರದ ಮೇಲೆ ಜಪ್ಪು ಮಾರುಕಟ್ಟೆ ರಸ್ತೆಯಲ್ಲಿ ಬಿದ್ದಿದ್ದ ಚಂದ್ರಹಾಸ ಅವರ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಮತ್ತು ಹತ್ತು ಗ್ರಾಂ ತೂಕವಿದ್ದ ಚಿನ್ನದ ಬ್ರಾಸ್ಲೈಟ್ ಅನ್ನು ಅವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ವಾಮನ ನಾಯಕ ಅವರ ಸಮಾಜಮುಖಿ ಕೆಲಸಕ್ಕೆ ಜನರಿಂದ ಅಪಾರ ಮೆಚ್ಚುಗೆ ವ್ಯರ್ಥವಾಗಿರುವುದಷ್ಟೇ ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಆಟೋ ಚಾಲಕರ ಸಂಘದವರು ವಾಮನ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲು ನಿರ್ಧರಿಸಿದ್ದೇವೆ ಎಂದು ಅಧ್ಯಕ್ಷರಾದ ವಿಷ್ಣುಮೂರ್ತಿ ಅವರು ಹೇಳಿಕೆ ನೀಡಿದ್ದಾರೆ.

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಗ್ರಾಮದ ನಿವಾಸಿ ರಮೇಶ್ ಪೈ ಎನ್ನುವವರ ಪತ್ನಿ ಮತ್ತು ಮಕ್ಕಳು ಉಜಿರೆ ಹಾಗೂ ಬೆಂಗಳೂರುಗಳಲ್ಲಿ ನೆಲೆಸಿದ್ದು, ರಮೇಶ್ ತಮ್ಮ ತಾಯಿಯೊಂದಿಗೆ ವಾಸವಾಗಿದ್ದರು. ಪತ್ನಿ ಮತ್ತು ಮಕ್ಕಳು ತಿಂಗಳಿಗೊಮ್ಮೆ ಬಂದು ರಮೇಶ್ ಮತ್ತು ಅವರ ತಾಯಿಯನ್ನು ನೋಡಿಕೊಂಡು ಹೋಗುತ್ತಿದ್ದರು. ತಾಯಿಯು ಸರಿಯಾಗಿ ಊಟ ಮಾಡುತ್ತಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ರಮೇಶ್ ಅವರ ಸಹೋದರ ಉಮೇಶ್ ಕಲ್ಲಡ್ಕಕ್ಕೆ ಬಂದು ಹೋಗಿದ್ದರು. ಉಮೇಶ್ ತಾಯಿ ಮತ್ತು ಅಣ್ಣ ರಮೇಶ್ ರನ್ನು ಮಾತನಾಡಿಸಿಕೊಂಡು, ಮಧ್ಯಾಹ್ನ ಹೋಟೆಲ್ ಒಂದರಲ್ಲಿ ಊಟ ಮಾಡಿಕೊಂಡು, ಮರಳಿ ಮನೆಗೆ ಹೋದಾಗ ರಮೇಶ್ ಅವರು ಇರಲಿಲ್ಲ. ರಾತ್ರಿಯಾದರೂ ಅವರು ಮನೆಗೆ ಮರಳಿ ಬರಲಿಲ್ಲ. ರಮೇಶ್ ಅವರ ಪತ್ನಿಗೆ ಮಕ್ಕಳಿಗೆ ಮತ್ತು ಕುಟುಂಬದ ಸದಸ್ಯರಿಗೆ, ಪರಿಚಯಸ್ತರಿಗೆ ಕರೆ ಮಾಡಿ ಕೇಳಿದರು ಯಾವ ಸುಳಿವು ಸಿಗಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.