ಹಂಗಾರಖಂಡ ಗ್ರಾಮಸ್ಥರಿಂದ ಶ್ರಮಾದಾನ,ಎಲ್ಲರ ಮೆಚ್ಚುಗೆ
* ರಸ್ತೆ ಸೇರಿದಂತೆ ರಸ್ತೆ ಅಕ್ಕಪಕ್ಕ ಸ್ವಚ್ಛ,ಮಳೆಗಾಲದ ಶ್ರಮಾದಾನ ಕೆಲಸ
* ಊರಿನ 40 ಕ್ಕೂ ಅಧಿಕ ಗ್ರಾಮಸ್ಥರಿಂದ ಮಾದರಿ ಕೆಲಸ
NAMMUR EXPRESS NEWS
ಸಿದ್ದಾಪುರ: ತಾಲೂಕಿನ ಹಂಗಾರಖಂಡ ಗ್ರಾಮದ ಗ್ರಾಮಸ್ಥರೆಲ್ಲ ಸೇರಿ ಗ್ರಾಮದಲ್ಲಿ ಮಳೆಗಾಲದ ಶ್ರಮಾದಾನ ಮಾಡಿದ್ದಾರೆ.
ಜೂ.22 ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಗ್ರಾಮದ 40 ಕ್ಕೂ ಹೆಚ್ಚು ಜನರು ಸೇರಿ ಸಂಜೆ 4 ಗಂಟೆಯ ವರೆಗೆ ಗ್ರಾಮದ ತ್ಯಾಗಲಿಯಿಂದ ಹಂಗಾರಖಂಡದ ವರೆಗೆ,ಸಾಸ್ಮೆಕಟ್ಟೆ,ಗವಿನ ಕಟ್ಟೆ,ಹಂಗರಖಂಡ ಪ್ರಾಥಮಿಕ ಶಾಲೆ,ಇಡುಕೈ ವರೆಗೆ ರಸ್ತೆ ಹಾಗೂ ರಸ್ತೆಯ ಅಕ್ಕಪಕ್ಕ ಗಿಡಗಂಟಿಗಳನ್ನು ತೆಗೆದು ಸ್ವಚ್ಛ ಮಾಡಿ,ಚರಂಡಿ ಸ್ವಚ್ಛ ಮಾಡುವುದರ ಮೂಲಕ ಗ್ರಾಮದಲ್ಲಿ ಮಳೆಗಾಲದ ಶ್ರಮಾದಾನ ಮಾಡಿದರು. ಹಾಗೆಯೇ ವಿದ್ಯುತ್ ಲೈನ್ಗೆ ತಾಗುವಂತಹ ಗಿಡ,ಮರದ ರೆಂಬೆಕೊಂಬೆಗಳನ್ನು ಕಡಿಯುವ ಕೆಲಸವನ್ನು ಗ್ರಾಮದ ಎಲ್ಲಾ ನಾಗರೀಕರು ಒಮ್ಮನಿಸಿನಿಂದ ಸೇರಿ ಮಾಡಿದ್ದಾರೆ. ಶ್ರೀನಾಗ ಚೌಡೇಶ್ವರಿ ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಈ ಮಾದರಿ ಶ್ರಮಾದಾನ ಕಾರ್ಯಕ್ರಕ್ಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
