Categories
ಬೆಂಗಳೂರು

ಸಾಧಕ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ!

  • ಹೃದಯಾಘಾತದಿಂದ ವಿಧಿವಶ
  • ಕನ್ನಡ ಪತ್ರಿಕೋದ್ಯಮದ ರೆಬೆಲ್ ಸ್ಟಾರ್

ಬೆಂಗಳೂರು: ಕನ್ನಡ ಪತ್ರಿಕೋದ್ಯಮ, ತನಿಖಾ ಮಾಧ್ಯಮದ ಭೀಷ್ಮ, ಬರಹಗಾರ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.


62 ವರ್ಷದ ರವಿ ಬೆಳಗೆರೆ( 1958-2020) ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಹಾಯ್​ ಬೆಂಗಳೂರು ಕಚೇರಿಯಲ್ಲಿ ರಾತ್ರಿ ಊಟ ಮುಗಿಸಿ, ನಿದ್ರೆ ಮಾಡುತ್ತಿದ್ದಾಗ ಅಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಪತ್ರಿಕೋದ್ಯಮದ ಕಂಡ ಸಾಧಕ ಮರೆಯಾಗಿದ್ದಾನೆ.


ಕನಕಪುರ ಮುಖ್ಯ ರಸ್ತೆಯ ಗುಬ್ಳಾಳದ ಕರಿಶ್ಮಾ ಹಿಲ್ಸ್​ನ ರವಿ ಬೆಳಗೆರೆಯವರ ನಿವಾಸದಲ್ಲಿ ಮೃತದೇಹವನ್ನು ಇರಿಸಲಾಗಿದೆ. ರವಿ ಬೆಳಗೆರೆಯವರ ಕನಸಿನ ಕೂಸಾಗಿದ್ದ ಪದ್ಮನಾಭನಗರದ ಪ್ರಾರ್ಥನಾ ಶಾಲೆಯ ಅವರಣಕ್ಕೆ ಮೃತದೇಹವನ್ನು ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗಿದೆ.


ಬನಶಂಕರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಅಂತ್ಯ ಸಂಸ್ಕಾರ ನನಡೆಯಲಿದೆ. ರವಿ ಬೆಳಗೆರೆಯವರು ಮೊದಲ ಪತ್ನಿ ಲಲಿತಾ, ಎರಡನೇ ಪತ್ನಿ ಯಶೋಮತಿ, ನಾಲ್ವರು ಮಕ್ಕಳಾದ ಕರ್ಣ, ಭಾವನಾ ಬೆಳಗೆರೆ, ಚೇತನಾ ಬೆಳಗೆರೆ, ಹಿಮವಂತ ಬೆಳಗೆರೆ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು, ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಪ್ರಾರ್ಥನಾ ಸ್ಕೂಲ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಾಯ್ ಬೆಂಗಳೂರು ಪತ್ರಿಕೆ ಮೂಲಕ ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಸಾಧನೆ ಮಾಡಿದ್ದರು.


1958ರ ಮಾರ್ಚ್ 15ರಂದು ಬಳ್ಳಾರಿಯಲ್ಲಿ ಜನಿಸಿದ ರವಿ ಬೆಳಗೆರೆ ಲಂಕೇಶ್​ ಪತ್ರಿಕೆ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ಬಳಿಕ ಹಾಯ್ ಬೆಂಗಳೂರು ಪತ್ರಿಕೆ, ಓ ಮನಸೇ ಮ್ಯಾಗಜಿನ್ ಪ್ರಕಟಿಸಿದ್ದರು. ಅನೇಕ ಪ್ರಸಿದ್ಧ ಕಾದಂಬರಿಗಳು, ಕತೆಗಳು, ಅನುವಾದಿಗಳು, ಜೀವನಚರಿತ್ರೆಗಳನ್ನು ಬರೆದಿದ್ದಾರೆ.
ನೇರ ಮಾತು ಮೂಲಕ ಪ್ರಸಿದ್ಧರಾದ ಬೆಳಗೆರೆ ಇದೀಗ ನೆನಪಾಗಿ ಉಳಿಯಲಿದ್ದಾರೆ.
ರಾಜ್ಯದ ಎಲ್ಲಾ ಸುದ್ದಿಗಾಗಿ NAMMUR EXPRESS ವೀಕ್ಷಿಸಿ..!

Categories
ಬೆಂಗಳೂರು

ರಾಜ್ಯ ಡಿಜಿಟಲ್ ಮಾಧ್ಯಮದಲ್ಲಿ ಹೊಸ ಹೆಜ್ಜೆ


ಶೀಘ್ರದಲ್ಲಿ ಮನೆ ಮನೆಗೆ…
ಅತೀ ಹೆಚ್ಚು ವೀಕ್ಷಕರ ಗರಿ

ನಿಮ್ಮ ಊರಿನ, ನಿಮ್ಮ, ರಾಜ್ಯದ ಎಲ್ಲಾ ಮಹತ್ವದ, ನಿಖರ, ವಿಶ್ಲೇಷಿತ, ವಿಭಿನ್ನ ಸುದ್ದಿ, ಲೈವ್ ಸುದ್ದಿಗಾಗಿ
nammurexpress.in ಕ್ಲಿಕ್ ಮಾಡಿ. ಪ್ರತಿ ದಿನ ಸುದ್ದಿ ಪಡೆಯಿರಿ. ರಾಜ್ಯದ ವಿಭಿನ್ನ ಡಿಜಿಟಲ್ ಮಾಧ್ಯಮ ಸುದ್ದಿ ಸಂಸ್ಥೆ
ನಿಮ್ಮ ಊರಿನ ಮತ್ತು ರಾಜ್ಯದ ಎಲ್ಲಾ ಸುದ್ದಿಗಳಿಗಾಗಿ “ಓಂಒಒUಖ ಇಘಿPಖಇSS” ಫೇಸ್ಬುಕ್ ಮತ್ತು ಯೂಟ್ಯೂಬ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿರಿ. ಶೇರ್ ಮಾಡಿರಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ.
ಶೀಘ್ರದಲ್ಲಿ ಚಾನೆಲ್, ಆಪ್, ನ್ಯೂಸ್ ನೆಟ್ವರ್ಕ್, ಆಡ್ಸ್ ಹೌಸ್ ಶುರುವಾಗಲಿದೆ

Categories
ಬೆಂಗಳೂರು

ವಿಜಯೇಂದ್ರ ವಿಧಾನ ಸಭಾ ಅಖಾಡಕ್ಕೆ…?!

  • ಬಸವ ಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ?

ಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಜೊತೆಗೆ ಸಿಎಂ ಪುತ್ರ ವಿಜಯೇಂದ್ರ ಅವರೂ ಗೆದ್ದಿದ್ದಾರೆ. ಈ ನಡುವೆ ವಿಜಯೇಂದ್ರ ಪವರ್ ಮತ್ತೊಮ್ಮೆ ಸಾಭೀತಾಗಿದೆ.


ಈ ನಡುವೆ ಹೊಸದೊಂದು ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಯಡಿಯೂರಪ್ಪ ಅವಧಿಯಲ್ಲೇ ಮಗ ವಿಜಯೇಂದ್ರ ಅವರನ್ನು ರಾಜಕೀಯ ಅಖಾಡಕ್ಕೆ ತರಲು ಮಾಸ್ಟರ್ ಪ್ಲಾನ್ ಮಾಡಲಾಗುತ್ತಿದೆ. ಬಹುತೇಕ ಲಿಂಗಾಯತ ಸಮಾಜ ಹೆಚ್ಚಿರುವ ಬಸವ ಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಆದರೆ ಇದು ಸುಳ್ಳೋ ಸತ್ಯವೋ ಈ ಬಗ್ಗೆ ಸ್ವತಃ ಬಿಎಸ್‍ವೈ ಸ್ಪಷ್ಟನೆ ನೀಡಿದ್ದಾರೆ.


ವಿಜಯೇಂದ್ರ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಈಗ ಸ್ಪರ್ಧಿಸುವುದಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ವರಿಷ್ಠರು ಅಪೇಕ್ಷಿಸಿದರೆ ಸ್ಪರ್ಧಿಸಲಿದ್ದಾರೆ,” ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ವಿಜಯೇಂದ್ರ ಈಗಲೇ ಸಿದ್ಧರಾಗಿದ್ದಾರೆ ಎನ್ನಲಾಗಿದೆ.

Categories
ಬೆಂಗಳೂರು

ಅರಳಿತು ಕಮಲ..ಎರಡೂ ಸ್ಥಾನ ಬಿಜೆಪಿ ಪಾಲು!

  • ಆರ್.ಆರ್.ನಗರ ಮುನಿರತ್ನ ಮತ್ತೆ ಬಾಸ್
  • ಮೊದಲ ಬಾರಿಗೆ ಶಿರಾದಲ್ಲಿ ಖಾತೆ ಓಪನ್
  • ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಮುಖಭಂಗ

ಬೆಂಗಳೂರು: ರಾಜ್ಯದಲ್ಲಿ ನಡೆದ ಬೆಂಗಳೂರು ನಗರದ ಆರ್.ಆರ್.ನಗರ ಮತ್ತು ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಪ್ರತಿ ಪಕ್ಷಗಳ ಗೆಲುವಿನ ಆಸೆಗೆ ತಣ್ಣೀರು ಎರಚಿದೆ.
ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‍ನ ಕುಸುಮಾ ಅವರಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ನಿಂದ ಎರಡು ಬಾರಿ ಗೆಲುವು ಸಾಧಿಸಿದ್ದ ಮುನಿರತ್ನ ಅವರು ಈ ಬಾರಿ ಬಿಜೆಪಿ ಸೇರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.


ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಮುನಿರತ್ನ ಅವರು ಅಂತಿಮವಾಗಿ 57,672 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಬಿಜಿಪಿಯ ಮುನಿರತ್ನ ಅವರು ಒಟ್ಟು 1,25,665 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು 67,993 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಖಾತೆ ಓಪನ್!: ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಇದೆ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿಯ ರಾಜೇಶ್ ಗೌಡ ಅವರು 72,739 ಮತಗಳನ್ನ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ 60,321 ಮತ್ತು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ 34,707 ವೋಟ್‍ಗಳನ್ನ ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 12,418 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿ ಜೆಡಿಎಸ್-ಕಾಂಗ್ರೆಸ್ ತಿಕ್ಕಾಟ ಬಿಜೆಪಿಗೆ ಪ್ಲಸ್ ಆಗಿದೆ.


ಇಲ್ಲೂ ಬಿಜೆಪಿ: ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರ ಗೆಲುವು ಸಾಧಿಸಿದ್ದಾರೆ.


ಎಸ್ ವಿ ಸಂಕನೂರು 23,857 ಮತಗಳನ್ನು ಪಡೆದರೆ, ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಆರ್.ಎಂ.ಕುಬೆರಪ್ಪ 12,448, ಪಕ್ಷೇತರ ಅಭ್ಯರ್ಥಿ ಬಸವರಾಜ್ ಗುರಿಕಾರ್ 6,188 ಮತಗಳನ್ನು ಪಡೆದುಕೊಂಡಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು ಯಡಿಯೂರಪ್ಪ ಖುರ್ಚಿ ಭದ್ರವಾಗಿದೆ. ಜೊತೆಗೆ ಸಂಪುಟ ವಿಸ್ತರಣೆ ಹಾದಿ ಸುಗಮವಾಗಿದೆ.

Categories
ಹುಬ್ಬಳ್ಳಿ

ಮಾಜಿ ಸಚಿವ ವಿನಯ್‍ಗೆ ಜೈಲೋ..ಬೇಲೋ..?

  • ಚುರುಕು ಪಡೆದ ಯೋಗೇಶ ಗೌಡ ಕೊಲೆ ಕೇಸ್
  • ಜಾಮೀನು ಪ್ರಕ್ರಿಯೆಗೆ ಕರೋನಾ ಅಡ್ಡಿ..!

ಹುಬ್ಬಳ್ಳಿ: ಮಳೆ ನಿಂತ್ರೂ ಮರದಿಂದ ನೀರು ಬೀಳೋದು ನಿಲ್ಲೋದಿಲ್ಲ ಅನ್ನೋ ಹಾಗೇ ಜಿಪಂ ಸದಸ್ಯ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನವಾದರೂ ಸಿಬಿಐ ಡ್ರಿಲ್ ಮಾತ್ರ ನಿಂತಿಲ್ಲ..!


ಸಿಬಿಐ ಅಧಿಕಾರಿಗಳು ಸುದೀರ್ಘ ಮೂರು ದಿನಗಳ ತನಿಖೆಯ ಬಳಿಕ ಧಾರವಾಡದ 3ನೇ ಹೆಚ್ಚುವರಿ ನ್ಯಾಯಾಲಯ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು 14 ದಿನ ಮುದ್ದೆ ಮುರಿಯುವ ಹಾಗೆ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ವಿನಯ ಪರ ನ್ಯಾಯವಾದಿ ಬಾಹುಬಲಿ ಧನವಾಡೆ ಜಾಮೀನು ಅರ್ಜಿ ಸಲ್ಲಿಸಿದರು.


ಆದರೆ, ಕುಲಕರ್ಣಿ ಜಾಮೀನು ಪ್ರಕ್ರಿಯೆಗೆ ಸದ್ಯ ಕರೋನಾ ವೈರಸ್ ಅಡ್ಡಿಯಾಗಿದೆ. ಕೋವಿಡ್ 19 ನಿಯಮಾವಳಿ ಪ್ರಕಾರ ಯಾವುದೇ ಅರ್ಜಿಯನ್ನು ನ್ಯಾಯಾಧೀಶರು ನೇರವಾಗಿ ವಿಚಾರಣೆ ಮಾಡದೇ ಆ ಅರ್ಜಿಯನ್ನು ಸ್ಯಾನಿಟೈಸ್ ಮಾಡಿಸಿ 24 ಗಂಟೆಯ ಬಳಿಕವೇ ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದಾರೆ. ಹೀಗಾಗಿ ಬುಧವಾರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಈ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ್ದ ವಿನಯ ಪರ ವಕೀಲರಿಗೆ ಹಾಗೂ ಕೈ ಕಾರ್ಯಕರ್ತರಿಗೆ ಕೊಂಚ ನಿರಾಸೆಯನ್ನುಂಟು ಮಾಡಿದೆ.


ಮುತಗಿಗೆ ಸಖತ್ ಡ್ರಿಲ್: ಮಂಗಳವಾರ ಬೆಳಗ್ಗೆ 9 ಗಂಟೆ ಹೊತ್ತಿಗೆ ಧಾರವಾಡದ ಉಪನಗರ ಠಾಣೆಗೆ ಆಮಿಸಿದ ಸಿಬಿಐ ಅಧಿಕಾರಿ ರಾಕೇಶ ರಂಜನ್ ನೇತೃತ್ವದ ತಂಡ, ತನಿಖೆಯ ಇಕ್ಕಳವನ್ನು ಮತ್ತಷ್ಟು ಬಿಗಿಗೊಳಿಸಿತು. ಮೊನ್ನೆಯಷ್ಟೇ ವಿಚಾರಣೆಗೊಳಪಟ್ಟಿದ್ದ ವಿನಯ ಕುಲಕರ್ಣಿ ಮಾವ ಚಂದ್ರಶೇಖರ ಇಂಡಿ ಹಾಗೂ ಆಪ್ತ ಕಾರ್ಯದರ್ಶಿ ಸೋಮಶೇಖರ ನ್ಯಾಮಗೌಡ ಅವರ ಹೇಳಿಕೆ ಆಧಾರದ ಮೇಲೆ ಇಂದು ಯೋಗೇಶಗೌಡ ಕೊಲೆ ಪ್ರಕರಣದ ಎ1 ಆರೋಪಿ ಬಸವರಾಜ ಮುತಗಿ ಅವರನ್ನು ಠಾಣೆಗೆ ಕರೆಯಿಸಿ ಸಖತ್ ಡ್ರಿಲ್ ಮಾಡಿದ್ದಾರೆ.


ಚಂದ್ರಶೇಖರ ಮತ್ತು ನ್ಯಾಮಗೌಡ ಹೇಳಿಕೆ ಹಿನ್ನೆಲೆಯಲ್ಲಿ ಮುತಗಿ ಸಾಕಷ್ಟು ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದು ಎಲ್ಲ ಪ್ರಶ್ನೆಗಳಿಗೆ ಮುತಗಿ ತಡಬಡಿಸಿದ್ದು ಮೂಲಗಳಿಂದ ಗೊತ್ತಾಗಿದೆ. ಬಳಿಕ ಮಧ್ಯಾಹ್ನ 12.30ರ ಹೊತ್ತಿಗೆ ವಿನಯ ಕುಲಕರ್ಣಿ ಅತ್ಯಾಪ್ತ ಶ್ರೀಷ ಪಾಟೀಲ್ ಅವರನ್ನೂ ಕರೆಯಿಸಿ ವಿಚಾರಣೆಗೊಳಪಡಿಸಿದ್ದಾರೆ.
ಢವಢವ!: ಯೋಗೇಶ ಗೌಡ ಕೊಲೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಚುರುಕು ಪಡೆಯುತ್ತಲೇ ಸಾಗಿದ್ದು ಕೈ ನಾಯಕರಿಗೆ ಹಾಗೂ ಪೆÇಲೀಸ್ ಅಧಿಕಾರಿಗಳಲ್ಲಿಯೂ ಢವಢವ ಹೆಚ್ಚಿಸಿದೆ. ಬುಧವಾರ ಬೆಳಗ್ಗೆ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ವಿನಯಗೆ ಬೇಲಾ ಅಥವಾ ಜೈಲಾ ಎಂಬುದು ತೀರ್ಮಾನವಾಗಲಿದೆ.


ಪಿಐ ಚನ್ನಕೇಶ ಹೈಕೋರ್ಟ್ ಮೊರೆ: ಯೋಗೇಶ ಗೌಡ ಕೊಲೆ ಕೇಸ್‍ನಲ್ಲಿ ಸಿಬಿಐನಿಂದ ಬಂಧನದ ಭೀತಿಯಲ್ಲಿರುವ ಪ್ರಕರಣ ನಡೆದ ಸಂದರ್ಭದಲ್ಲಿ ತನಿಖಾಧಿಕಾರಿಯಾಗಿದ್ದ ಚನ್ನಕೇಶ ಟಿಂಗರೀಕರ, ಜಾಮೀನು ಕೋರಿ ಹೈಕೋರ್ಟ್ ಮೇಟ್ಟಿಲೇರಿದ್ದಾರೆ.
ಸಿಬಿಐ ನ್ಯಾಯಾಲಯದಲ್ಲಿ ಈಗಾಗಲೇ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಟಿಂಗರೀಕರ, ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಇದೀಗ ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ಬಂಧನದ ಭೀತಿಯಿಂದ ವೈದ್ಯಕೀಯ ರಜೆಯ ಮೇಲೆ ಟಿಂಗರೀಕರ ತೆರಳಿದ್ದಾರೆ.

Categories
ಮಲ್ನಾಡ್

ಸಿಗಂದೂರು ಹೋರಾಟಕ್ಕೆ ಸಿಡಿದೆದ್ದ ಈಡಿಗರು!

  • ಸಾವಿರಾರು ಜನರಿಂದ ತೀರ್ಥಹಳ್ಳಿಯಲ್ಲಿ ಬೃಹತ್ ಹೋರಾಟ
  • ಸರ್ಕಾರದಿಂದ ಹೋರಾಟ ಹತ್ತಿಕ್ಕುವ ಯತ್ನ?

ತೀರ್ಥಹಳ್ಳಿ: ಈಡಿಗ ಸಮುದಾಯದ ಕುಲದೈವ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಹೊರಟಿರುವ ಧಮನಕಾರಿ ನೀತಿಯನ್ನು ಖಂಡಿಸಿ ತೀರ್ಥಹಳ್ಳಿಯಲ್ಲಿ ಬೃಹತ್ ಹೋರಾಟ ನಡೆದಿದ್ದು, ಈಡಿಗ ಸಮುದಾಯದ ಸಾವಿರಾರು ಮಂದಿ ಭಾಗವಹಿಸಿದ್ದರು.

“ಶ್ರೀ ಸಿಗಂದೂರು ಉಳಿಸಿ” ಹೋರಾಟ ತೀರ್ಥಹಳ್ಳಿಯ ಕೋಳಿಕಾಲು ಗುಡ್ಡದ ಈಡಿಗರ ಭವನದಲ್ಲಿ ಬೃಹತ್ ಸಭೆ ನಡೆಸಿ ಶುರು ಮಾಡಲಾಯಿತು. ತೀರ್ಥಹಳ್ಳಿ ಮತ್ತು ಹೊಸ ನಗರ ತಾಲೂಕಿನ ಮೂಲೆ ಮೂಲೆಯಿಂದ ಈಡಿಗ ಸಮುದಾಯದ ಜನ ಆಗಮಿಸಿದ್ದರು. ಸುಮಾರು 1100 ಮಂದಿ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಈಡಿಗ ಬಲ ಪ್ರದರ್ಶನ ಕೂಡ ಮಾಡಿದರು.


ಈಡಿಗರ ಸಂಘದಿಂದ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ಡಿವೈಎಸ್‍ಪಿ ಮತ್ತು ಪೊಲೀಸ್ ಉನ್ನತ ಅಧಿಕಾರಿಗಳ ಸರ್ಕಾರದ ಆದೇಶದ ಮೇರೆಗೆ ತಡೆಯುವ ಯತ್ನ ಮಾಡಿದರು. ಆದರೆ ಹೋರಾಟಗಾರರು ಮೆರವಣಿಗೆ ನಡೆಸಿದರು.


ಅಡಿಕೆ ಮತ್ತು ಕೃಷಿ ಸಮಯವಾದರೂ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಈಡಿಗ ಸಮುದಾಯ ಸಿಗಂದೂರು ಹೋರಾಟಕ್ಕೆ ಕೈ ಜೋಡಿಸಿತು. ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪಕ್ಷಾತೀತವಾಗಿ ನಡೆದ ಹೋರಾಟಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬೆಂಬಲ ವ್ಯಕ್ತಪಡಿಸಿದರು. ಇಡೀ ಸಭೆಯಲ್ಲಿ ಸಿಗಂದೂರು ಪರ ದನಿ ಕೇಳಿಬಂತು. ಇದೇ ಮೊದಲ ಬಾರಿಗೆ ಈಡಿಗ ಯುವ ಸಮುದಾಯ ಅತೀ ಹೆಚ್ಚಿನ ಸಂಖ್ಯೆ ಅಂದರೆ ಸುಮಾರು 400 ಮಂದಿ ಯುವ ಜನತೆ ಭಾಗಿಯಾಗಿದ್ದು, ಈಡಿಗ ಸಂಘಟನೆಯ ಹೊಸ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಈಡಿಗ ಹೋರಾಟದ ಸಂಪೂರ್ಣ ವರದಿ nammurexpress.in ನಲ್ಲಿ ವೀಕ್ಷಿಸಿ.

Categories
ಮಲ್ನಾಡ್

ಮಂಜುನಾಥ ಗೌಡರ ರೈತ ನಡಿಗೆ ಸಕ್ಸಸ್!

  • 42 ಕಿ.ಮೀ ನಡಿಗೆ: 3000 ಮಂದಿ ಸಾಥ್
  • ಮಲೆನಾಡಲ್ಲಿ ಪ್ರತಿಧ್ವನಿಸಿದ ಕಸ್ತೂರಿ ರಂಗನ್ ಹೋರಾಟ
  • ಡಿ.31ರ ಗಡುವಿಗೆ ಬ್ರೇಕ್ ಹಾಕುತ್ತಾ ಹೋರಾಟದ ಕಿಚ್ಚು

ತೀರ್ಥಹಳ್ಳಿ: ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಸಾರಥ್ಯದಲ್ಲಿ ಕಸ್ತೂರಿ ರಂಗನ್ ವರದಿ ಮತ್ತು ಅಕೇಶಿಯಾ ನೆಡುತೋಪು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ 3 ದಿನಗಳ 42 ಕಿ.ಮೀ ಪಾದಯಾತ್ರೆ ಸೋಮವಾರ ತೆರೆ ಕಂಡಿದೆ. ಈ ನಡುವೆ ಈ ಹೋರಾಟ ಯಶಸ್ವಿ ಕೂಡ ಆಡಗಿದೆ.


ಸೋಮವಾರ ತಾಲೂಕು ಕಚೇರಿ ಎದುರು ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ವರದಿ ವಿರುದ್ಧದ ಆಕ್ರೋಶ ಹೆಚ್ಚಾಗಿದೆ. ಬಿದರಗೋಡಿನಿಂದ ತೀರ್ಥಹಳ್ಳಿವರೆಗಿನ ಪಾದಯಾತ್ರೆಯಲ್ಲಿ ಸುಮಾರು 3000 ಂಂದಿ ಭಾಗಿಯಾಗಿದ್ದಾರೆ.


ಮಲೆನಾಡಿನ ಜನರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡಬಾರದು. ಎಲ್ಲಾ ರಾಜಕಾರಣಿಗಳು ಪಕ್ಷಾತೀತವಾಗಿ ಈ ಬಗ್ಗೆ ಹೋರಾಟ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಯಿತು. ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ, ನಾಯಕರಾದ ಮಧು ಬಂಗಾರಪ್ಪ, ಬೇಳೂರು ಗೋಪಾಲಹೃಷ್ಣ, ಪರಿಸರಹೋರಾಟಗಾರರಾದ ಕಲ್ಕುಳಿ ವಿಠಲ ಹೆಗ್ಡೆ, ಕಲ್ಲಹಳ್ಳ ಶ್ರೀಧರ್, ಅಶೋಕ್ ಕೆ.ಎಲ್ ಮುಂತಾದವರು ಮಂಜುನಾಥ ಗೌಡರ ಈ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಈ ಹೋರಾಟ ಮುಂದುವರಿಸಬೇಕೆಂಬ ಸಲಹೆ ಕೂಡ ನೀಡಿದರು.
ಸಹಕಾರಿ ನಾಯಕ ಮಂಜುನಾಥ ಗೌಡರ ಈ ಪಾದಯಾತ್ರೆಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಯಿತು. ಜೊತೆಗೆ ಸಹಕಾರಿ ವಲಯದ ಎಲ್ಲಾ ನಾಯಕರು ಈ ಹೋರಾಟಕ್ಕೆ ಕೈಜೋಡಿಸಿದರು.


ಡಿ.31ರ ಗಡುವು: ಕೇಂದ್ರ ಸರ್ಕಾರ ಡಿ.31ರ ಗಡುವು ನೀಡಿದೆ. ಈ ಹೋರಾಟದಿಂದ ಮಲೆನಾಡಿನಲ್ಲಿ ಮತ್ತೆ ಹೋರಾಟದ ಕಿಚ್ಚು ಹೆಚ್ಚಿದೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಹೋರಾಟದ ಸ್ವರೂಪ ಪಡೆಯಲಿದೆ. ಈ ಪಾದಯಾತ್ರೆ ಮೂಲಕ ಮಂಜುನಾಥ ಗೌಡ ಮುಖ್ಯವಾಹಿನಿಗೆ ಬಂದಿದ್ದು, ರಾಜಕೀಯ ಮತ್ತು ಸಹಕಾರ ಕ್ಷೇತ್ರದಲ್ಲಿ ಮತ್ತಷ್ಟು ಬಲ ನೀಡಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Categories
ಮಲ್ನಾಡ್

ಬಿಜೆಪಿ ನಾಯಕ ಮದನ್ ಅವರಿಗೆ ಮಹತ್ವದ ಹುದ್ದೆ!

  • ರಾಜ್ಯ ನೀರು ಸರಬರಾಜು, ಒಳಚರಂಡಿ ನಿಗಮದ ನಿರ್ದೇಶಕ
  • ಸರ್ಕಾರದಿಂದ ನೇಮಕ

ಬೆಂಗಳೂರು: ಮಲೆನಾಡಿನ ಯುವ ನಾಯಕರಾಗಿ, ಸಮಾಜ ಸೇವೆ ಮೂಲಕ ಹೆಸರು ಮಾಡಿದ್ದ ಯುವ ಉದ್ಯಮಿ, ಬಿಜೆಪಿ ರಾಜ್ಯ ನಾಯಕ ಆರ್.ಮದನ್ ಅವರಿಗೆ ರಾಜ್ಯ ಸರ್ಕಾರ ಮಹತ್ವದ ಹುದ್ದೆ ನೀಡಿದೆ.
ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ನಿರ್ದೇಶಕರಾಗಿ ಸರಕಾರ ನೇಮಕ ಆದೇಶ ಹೊರಡಿಸಿದೆ.


ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮುಂಚೂಣಿ ನಾಯಕರಾಗಿರುವ ಮದನ್ ಅವರು, ಈ ಹಿಂದೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನಮನ ಗೆದ್ದಿದ್ದರು. ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಶ್ರಮಿಸಿದ್ದರು. ಇದೀಗ ಅವರಿಗೆ ಮಹತ್ವದ ಹುದ್ದೆ ಸಿಕ್ಕಿದ್ದು, ಅಭಿಮಾನಿಗಳು ಶುಭಾಶಯ ಸಲ್ಲಿಸಿದ್ದಾರೆ.

Categories
ಮಲ್ನಾಡ್

ಮಂಜುನಾಥ ಗೌಡರ ಪಾದಯಾತ್ರೆ ಇಂದು ಅಂತ್ಯ!

  • ಸಾವಿರ ಜನ ಸೇರುವ ನಿರೀಕ್ಷೆ
  • ಮೊದಲ ಪಾದಯಾತ್ರೆಯಲ್ಲೇ ಜಯ
  • ಬಿಜೆಪಿ ನಾಯಕರು ಕಾಣಲೇ ಇಲ್ಲ!

ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಹಕಾರಿ ನಾಯಕ ಮಂಜುನಾಥ ಗೌಡ ಸಾರಥ್ಯದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಇಂದು ಮುಕ್ತಾಯವಾಗಲಿದೆ. ಬಹುತೇಕ ಯಶಸ್ವೀಯಾಗಿರುವ ಪಾದಯಾತ್ರೆ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ.
ಮೊದಲ ದಿನ ಬಿದರಗೋಡಿನಿಂದ ನಾಲೂರು ತಲುಪಿದ್ದ ಪಾದಯಾತ್ರೆ ಭಾನುವಾರ ನಾಲೂರುನಿಂದ ಶಿವರಾಜಪುರಕ್ಕೆ ಬಂದಿದೆ. ಇದೀಗ ಶಿವರಾಜ ಪುರದಿಂದ ತೀರ್ಥಹಳ್ಳಿ ತಾಲೂಕು ಕಚೇರಿಗೆ ಪಾದಯಾತ್ರೆ ಬರಲಿದ್ದು, ಸುಮಾರು 1000 ಜನ ಸೇರುವ ನಿರೀಕ್ಷೆ ಇದೆ.


ದೇವಸ್ಥಾನದಲ್ಲಿ ಪೂಜೆ!: ಶಿವರಾಜಪುರ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಪಾದಯಾತ್ರೆ ಪಟ್ಟಣಕ್ಕೆ ಬರಲಿದೆ.ಎಲ್ಲಾರನ್ನು ಮಂಜುನಾಥ ಗೌಡ ಸ್ವಾಗತಿಸಿದ್ದಾರೆ.
ಆಗುಂಬೆ ಹೋಬಳಿಯಲ್ಲಿ ನಡೆದ ಪಾದಯಾತ್ರೆಗೆ ಎಲ್ಲಾ ಪಕ್ಷದ ಮುಖಂಡರು ಸಾಥ್ ನೀಡಿದ್ದರು.


ಮೇಗರವಳ್ಳಿಯಲ್ಲಿ ಕರವೇ ಸಾಥ್: ಮೇಗರವಳ್ಳಿಯ ಅರೆಕಲ್ ವೃತ್ತದ ಬಳಿ ಕರವೇಯಿಂದ ಸ್ವಾಗತಿಸಲಾಯಿತು. ಮೇಗರವಳ್ಳಿ ಅರಣ್ಯ ಇಲಾಖೆ ಕಚೇರಿ ಎದುರು ಸಭೆ ನಡೆಸಿದ್ದು ಕರವೇ ನಾಯಕರಾದ ಪಟೇಲ್ ವೆಂಕಟೇಶ್ ಹೆಗ್ಡೆ, ಹರ್ಷೇನ್ದ್ರ ಕುಮಾರ್ ಸೇರಿ ಅನೇಕರು ಇದ್ದರು. ಸುಮಾರು 40 ಕಿಮೀ ಪಾದಯಾತ್ರೆ ಮುಗಿದಿದ್ದು ಇಂದು 11 ಗಂಟೆಗೆ ಬೃಹತ್ ಬಹಿರಂಗ ಸಭೆ ನಡೆಯಲಿದೆ. ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ. ಎಲ್ಲಾ ಹೋಬಳಿಯ ಕಾಂಗ್ರೆಸ್ ನಾಯಕರೂ ಭಾಗಿಯಾಗುವ ಸಾಧ್ಯತೆ ಇದೆ. ಆದರೆ ಬಿಜೆಪಿ ನಾಯಕರು ಎಲ್ಲಿಯೂ ಕಾಣಿಸಿಕೊಂಡಿಲ್ಲ.!.


Categories
ಹುಬ್ಬಳ್ಳಿ

ಕೊಲೆ: ಸಾಕ್ಷ್ಯ ನಾಶಕ್ಕೆ ಕೋಟಿ-ಕೋಟಿ ಹಣ!

  • ಸಚಿವರಾಗಿದ್ದ ಕುಲಕರ್ಣಿಗೆ ಸಾಥ್ ನೀಡಿದ್ದ ಅಧಿಕಾರಿಗಳು….

ಹುಬ್ಬಳ್ಳಿ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ ಗೌಡ ಕೊಲೆ ಪ್ರಕರಣದ ತನಿಖೆ ಈಗ ಮತ್ತೊಂದ ಹಂತಕ್ಕೆ ತಲುಪಿದ್ದು, ಸಾಕ್ಷಿ ನಾಶಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಕೋಟಿ-ಕೋಟಿ ಹಣ ಸುರಿದಿದ್ದಾರೆ ಎಂಬ ಮಾಹಿತಿಯನ್ನು ಸಿಬಿಐ ಅಧಿಕಾರಿಗಳು ಕಲೆ ಹಾಕಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಕೆಎಎಸ್ ಅಧಿಕಾರಿ ಸೋಮಶೇಖರ ನ್ಯಾಮಗೌಡರ ವಿಚಾರಣೆಯನ್ನು ಸಿಬಿಐ ಭಾನುವಾರವೂ ಮುಂದುವರೆಸಿದೆ.


ಸಚಿವರ ಆಪ್ತರಾಗಿದ್ದರು…: ವಿನಯ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಲಿಂಗ ನ್ಯಾಮಗೌಡ, ವಿನಯ ಕುಲಕರ್ಣಿ ಸಚಿವರಾಗಿದ್ದ ವೇಳೆ ಆಪ್ತ ಕಾರ್ಯದರ್ಶಿಯಾಗಿದ್ದರು. ಸೋಮಲಿಂಗ ನ್ಯಾಮಗೌಡ ಅವರನ್ನು ಕಳೆದ ಮೂರು ದಿನಗಳಿಂದ ಸಿಬಿಐನಿಂದ ವಿಚಾರಣೆ ನಡೆಸಲಾಗಿದೆ. ವಿನಯ ಹಾಗೂ ಸೋಮಲಿಂಗ ಇಬ್ಬರನ್ನೂ ಮುಖಾಮುಖಿ ವಿಚಾರಣೆ ಮಾಡಿದ್ದ ಸಿಬಿಐ ಅಧಿಕಾರಿಗಳು ಮತ್ತೇ ವಿಚಾರಣೆಗಾಗಿ ಸಿಎಆರ್ ಮೈದಾನಕ್ಕೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.


2 ಕೋಟಿ ರೂ. ಹಣ: ಸಾಕ್ಷ ನಾಶಪಡಿಸಲು ದೊಡ್ಡ ಮಟ್ಟದ ಹಣ ನೀಡಿದ ಆರೋಪದ ಹಿನ್ನೆಲೆಯಲ್ಲಿ ನ್ಯಾಮಗೌಡ ವಿಚಾರಣೆ ನಡೆಸಲಾಗುತ್ತಿದೆ. ಒಂದೇ ದಿನ 2 ಕೋಟಿ ರೂ. ವರ್ಗಾವಣೆಯಾಗಿದ್ದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ಸದ್ಯ ನ್ಯಾಮಗೌಡ ಅವರನ್ನು ವಿಚಾರಣೆಗೊಳಪಡಿಸಲಾಗಿದ್ದು ಯಾರ್ಯಾರಿಗೆ ಹಣ ಸಂದಾಯವಾಗಿದೆ ಮತ್ತು ಯಾವ ಕಾರಣಕ್ಕೆ ದುಡ್ಡು ನೀಡಲಾಗಿತ್ತು ಎಂಬ ಮಾಹಿತಿಯನ್ನು ಸಿಬಿಐ ಕೆದಕುತ್ತಿದೆ.


ಯಾರು ಈ ಸೋಮಶೇಖರ ?: ಸೋಮಶೇಖರ ನ್ಯಾಮಗೌಡ ಕೆಎಎಸ್ ಅಧಿಕಾರಿ. ವಿನಯ ಕುಲಕರ್ಣಿಯವರ ಕಾಲೇಜು ದಿನಗಳ ಸಹಪಾಠಿಯೂ ಹೌದು. ಸದ್ಯ ಹಾವೇರಿ ಜಿಲ್ಲೆಯ ಬ್ಯಾಡಗಿ ಎಪಿಎಂಸಿ ಕಾರ್ಯದರ್ಶಿ. ಅಲ್ಲದೇ, ವಿನಯ ಸಚಿವರಾಗಿದ್ದಾಗ ಹುಬ್ಬಳ್ಳಿ ಎಪಿಎಂಸಿ ಜಂಟಿ ಕಾರ್ಯದರ್ಶಿಯಾಗಿದ್ದ ಈ ನ್ಯಾಮಗೌಡನನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ವಿನಯ ನೇಮಕ ಮಾಡಿಕೊಂಡಿದ್ದರು.


2 ಕೋಟಿ ರೂ. ಹಣದಲ್ಲಿ ರೂಮ್ ಬುಕ್ಕಿಂಗ್, ಟಿಕೆಟ್ ಬುಕ್ಕಿಂಗ್ ಯಾವೆಲ್ಲ ಕಡೆ ಹಣ ಸಾಗಣೆಯಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೇ, ಸೋಮಶೇಖರ ನ್ಯಾಮಗೌಡನ ವಾಹನ ಚಾಲಕನಾಗಿದ್ದ ಪುಂಡಲೀಕ ಮೊರಬದ ಎಂಬುವನನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


ಜಿಪಂ ಎಇಇ ಸಹಾ ವಿಚಾರಣೆಗೆ : ಸಿಬಿಐ ತನಿಖಾಧಿಕಾರಿ ರಾಕೇಶ ರಂಜನ್ ನೇತೃತ್ವದ ತಂಡ ಧಾರವಾಡ ಜಿಪಂ ಎಇಇ ಆಗಿರುವ ಎಸ್.ಎನ್. ಗೌಡರನ್ನು ಸಹಾ ವಿಚಾರಣೆಗೊಳಪಡಿಸಿದೆ. ಈ ಎಸ್.ಎನ್. ಗೌಡರ್ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಚುನಾವಣೆ ವೇಳೆ ಫ್ಲೈಯಿಂಗ್ ಸ್ಕ್ಯಾಡ್ ಆಗಿದ್ದರು. ಚುನಾವಣೆ ವೇಳೆ ನಡೆದ ವಿಷಯಗಳ ಕುರಿತು ಮತ್ತು ಈ ಸಮಯದಲ್ಲಿ ಯೋಗೇಶಗೌಡ ವಿರುದ್ಧ ನೀತಿ ಸಂಹಿತೆ ಪ್ರಕರಣ ದಾಖಲಿಸಿದ್ದರ ಬಗ್ಗೆ, ವಿನಯ ಕುಲಕರ್ಣಿ ಒತ್ತಡದ ಹಿನ್ನೆಲೆಯನ್ನೂ ಸಿಬಿಐ ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಸಿಬಿಐ ಇನ್ನೂ ಯಾರ್ಯಾರಿಗೆ ಗಾಳ ಹಾಕುತ್ತದೆ ಎಂಬುದನ್ನು ಕಾದುನೋಡಬೇಕಿದೆ.