Categories
ಬೆಂಗಳೂರು

ಶಿವಮೊಗ್ಗದ ದುರಂತಕ್ಕೆಸಂತಾಪ ವ್ಯಕ್ತಪಡಿಸಿದ ರಾಷ್ಟ್ರಪತಿ


-ದುರ್ಘಟನೆಗೆ ಬೇಸರ ತೋರಿದ ರಾಮನಾಥ್ ಕೋವಿಂದ್


ಶಿವಮೊಗ್ಗದಲ್ಲಿ ಸಂಭವಿಸಿದ ದುರಂತ ಘಟನೆಗೆ ದೇಶದಾದ್ಯಂತ ಎಲ್ಲರೂ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿಯೂ ಸಹಾ ಸಂತಾಪ ಸೂಚಿಸುವ ಮೂಲಕ ಮೃತರ ಕುಟುಂಬಕ್ಕೆ ರಾಜ್ಯಸರ್ಕಾರದ ನೆರವು ನೀಡುವಂತೆ ಮಾಡಿದ್ದಾರೆ.


ಹಾಗೆಯೇ ಶಿವಮೊಗ್ಗದಲ್ಲಿ ಸಂಭವಿಸಿದ ಭಾರೀ ಸ್ಫೋಟದ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೇಸರ ವ್ಯಕ್ತಪಡಿಸಿದ್ದು, ಇದೊಂದು ದುರದೃಷ್ಟದ ಘಟನೆ ಎಂದು ಹೇಳಿ, ನನ್ನ ಪ್ರಾರ್ಥನೆ ಮೃತರ ಕುಟುಂಬದೊಂದಿಗಿದೆ. ಇನ್ನು ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದು ರಾಷ್ಟ್ರಪತಿ ಹೇಳಿದ್ದಾರೆ.

Categories
ಬೆಂಗಳೂರು

“ಗರುಡ ರಾಮ್” ಎಂದೇ ಫೇಮಸ್ ಆದ ರಾಮಚಂದ್ರ ರಾಜು

-ಕೆಜಿಎಫ್ ನಲ್ಲಿ ಮುಖ್ಯ ವಿಲನ್ ಆಗಿ ಕಾಣಿಸಿಕೊಂಡಿದ್ದ ನಟ
-ಈಗ ಮೋಹನ್ಲಾಲ್ ಸಿನಿಮಾದಲ್ಲಿ ನಟಿಸುವ ಚಾನ್ಸ್

ಸಾಮಾನ್ಯವಾಗಿ ನಟ ರಾಮಚಂದ್ರರಾಜು ಎಂದಾಕ್ಷಣ ಯಾರು ಎಂಬುದು ತತ್ಷಣಕ್ಕೆ ನೆನಪಿಗೆ ಬರುವುದು ಕಷ್ಟವಾಗಬಹುದು. ಅದೇ “ಗರುಡ ರಾಮ್” ಎಂದಾಕ್ಷಣವೇ ಕೆಜಿಎಫ್ ಚಿತ್ರಣ ಕಣ್ಮುಂದೆ ಬರುತ್ತದೆ. ಏಕೆಂದರೆ ಗರುಡ ನಿರ್ವಹಿಸಿದ್ದ, ಪಾತ್ರ ಎಲ್ಲರ ಮನದಂಚಿನಲ್ಲಿನಲ್ಲಿ ಉಳಿದಿದೆ. ದೇಶಾದ್ಯಂತ ಖ್ಯಾತಿಗಳಿಸಿರುವ “ಗರುಡ” ಈಗ ಪರಭಾಷೆಯಲ್ಲೂ ಭಾರೀ ಅವಕಾಶಗಳು ಹರಿದು ಬರುತ್ತಿದೆ. ಈಗ ಮಾಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.
ಬಿ. ಉನ್ನಿಕೃಷ್ಣನ್ ನಿರ್ದೇಶನ ಹಾಗೂ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ಸಿನಿಮಾ “ಆರಾಟ್ಟು” ಈ ಸಿನಿಮಾಗೆ ಮಹತ್ವದ ಪಾತ್ರವೊಂದಕ್ಕೆ ರಾಮ್ ಸೆಲೆಕ್ಟ್ ಆಗಿದ್ದಾರೆ. ಸದ್ಯಕ್ಕೆ ಮೋಹನ್ ಲಾಲ್ ಜೊತೆಗೆ ಇರುವ ಪೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

Categories
ಆರೋಗ್ಯ

ಚೆಂಡು ಹೂ ಬಗ್ಗೆ ನಿಮಗೆಷ್ಟುಗೊತ್ತು!

  • ಮಾರಿಗೋಲ್ಡ್ ಹೂವಲ್ಲಡಗಿದೆ ಆರೋಗ್ಯ ಗುಟ್ಟು
  • ಮನೆಯ ಉದ್ಯಾನದಲ್ಲಿದೆ ಔಷಧ

ಚೆಂಡು ಹೂವು ಅಥವಾ ಮಾರಿಗೋಲ್ಡ್ ಹೂವನ್ನು ಮನೆಯ ಅಲಂಕಾರ ಮಾಡಲು ಅತ್ಯಂತ ಸುಂದರ. ಹಾಗೆಯೇ ಇದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆಯಬಹುದು ಎನ್ನುವುದು ಗಮನದಲ್ಲಿರಲಿ.
ಈ ಹೂವನ್ನು ಚರ್ಮದ ಅಲರ್ಜಿಗೆ ಹಾಗೂ ಕಜ್ಜಿಯಂಥ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತದೆ. ಮೂತ್ರಪಿಂಡದ ಸಮಸ್ಯೆಗಳನ್ನು ದೂರಮಾಡುವ ಗುಣ ಇದರಲ್ಲಿದೆ. ಈ ಹೂವಿನ ಕಷಾಯವನ್ನು ತಯಾರಿಸಿ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲು ಕರಗಿ ಹೋಗುತ್ತದೆ.
ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣವಿದ್ದು ಮೊಡವೆಗಳನ್ನು ನಿವಾರಿಸುತ್ತದೆ. ಕಣ್ಣಿನ ನೋವು, ಬಾವು ಸಮಸ್ಯೆಗಳನ್ನೂ ಇದು ಗುಣಪಡಿಸುತ್ತದೆ.
ಇದರ ಹೂವಿನ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ. ಮಾರಿಗೋಲ್ಡ್ ಹೂವಿನ ಚಹಾ ಸೇವನೆಯಿಂದ ಅಲ್ಸರ್ ಹಾಗೂ ಹೊಟ್ಟೆಯೊಳಗಿನ ಗಾಯ ನಿವಾರಣೆಯಾಗುತ್ತದೆ. ಕೆಲವೊಮ್ಮೆ ಮೂಗಿನಿಂದ ರಕ್ತಸ್ರಾವವಾದರೆ ಅದ ನಿವಾರಣೆಗೂ ಈ ಹೂವಿನ ರಸವನ್ನು ಬಳಸಲಾಗುತ್ತದೆ.

Categories
ಬೆಂಗಳೂರು

ಶಿವಮೊಗ್ಗ ಗಣಿಗಾರಿಕೆ ಸ್ಥಳದಲ್ಲಿ ಸ್ಫೋಟ: ಕಿಚ್ಚ ಸುದೀಪ್ ಪ್ರತಿಕ್ರಿಯೆ

  • ಸಂತಾಪ ಸೂಚಿಸಿದ ಅಭಿನಯ ಚಕ್ರವರ್ತಿ
  • ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಕಿಚ್ಚನ ಮನವಿ

ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ಸಂಭವಿಸಿದ ಭಾರಿ ಸ್ಫೋಟಕ್ಕೆ ಇಡೀ ಜಿಲ್ಲೆ ಬೆಚ್ಚಿಬಿದ್ದಿದೆ.
ಈ ದುರಂತ ಘಟನೆ ಬಗ್ಗೆ ರಾಜಕೀಯ ಗಣ್ಯರು ಪ್ರತಿಕ್ರಿಯೆ ನೀಡಿ, ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಇದೀಗ ಈ ಅವಘಡದ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಮೃತ ಬಡ ಕಾರ್ಮಿಕರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಜೊತೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.
ಶಿವಮೊಗ್ಗದ ಹುಣಸೋಡಿನಲ್ಲಿ ಮೃತಪಟ್ಟ ಕಾರ್ಮಿಕರ ಅತ್ಮಕ್ಕೆ ಶಾಂತಿಸಿಗಲಿ, ಪ್ರತಿ ಪ್ರಾಣವು ಅಮೂಲ್ಯ ಸರ್ಕಾರ ಅಗತ್ಯ ಕ್ರಮತಗೆದು ಕೊಳ್ಳಲಿ’ ಎಂದು ಹೇಳಿದ್ದಾರೆ. ಜೊತೆಗೆ ಮೊದಲು ಮಾನವನಾಗು ಎಂದು ಹ್ಯಾಷ್ ಟ್ಯಾಗ್ ಹಾಕಿ ಬರೆದುಕೊಂಡಿದ್ದಾರೆ.

Categories
ರಾಜಕೀಯ

ಖಾತೆ ಹಂಚಿಕೆಯಲ್ಲಿ ಮತ್ತೆ ಬದಲಾವಣೆ!

  • ಬಂಡಾಯ ಸಚಿವರ ಒತ್ತಡಕ್ಕೆ ಮಣಿದ ಬಿಎಸ್ವೈ

    ಬೆಂಗಳೂರು: ಖಾತೆ ಹಂಚಿಕೆ ಹಾಗೂ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಸಚಿವರ ಬಂಡಾಯಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಮಣಿದಿದ್ದಾರೆ. ಇದೀಗ ಮತ್ತೆ ಖಾತೆ ಹಂಚಿಕೆಯಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಲಾಗಿದೆ.

ಜೆ.ಸಿ ಮಾಧುಸ್ವಾಮಿ ಅವರಿಗೆ ವೈದ್ಯಕೀಯ ಶಿಕ್ಷಣದ ಜೊತೆಗೆ ಹಜ್ ಹಾಗೂ ವಕ್ಫ್ ಇಲಾಖೆಯನ್ನು ನೀಡಲಾಗಿದೆ. ಅರವಿಂದ ಲಿಂಬಾವಳಿಗೆ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ನೀಡಲಾಗಿದೆ. ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಮೊದಲು ಮಾಧುಸ್ವಾಮಿಗೆ ನೀಡಲಾಗಿತ್ತು.
ಅಬಕಾರಿ ಖಾತೆ ನೀಡಿದ್ದಕ್ಕೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಪೌರಾಡಳಿತ ಹಾಗೂ ಸಕ್ಕರೆ ಇಲಾಖೆಯನ್ನು ನೀಡಲಾಗಿದೆ. ಇನ್ನು ಕೆ. ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆಯನ್ನು ನೀಡಲಾಗಿದೆ. ಈ ಹಿಂದೆ ಅವರಿಗೆ ತೋಟಗಾರಿಕೆ ಹಾಗೂ ಸಕ್ಕರೆ ಇಲಾಖೆಯನ್ನು ನೀಡಲಾಗಿತ್ತು.

ಇನ್ನು ಸಚಿವ ಆರ್ ಶಂಕರ್ಗೆ ಪೌರಾಡಳಿತದ ಬದಲಾಗಿ ತೋಟಗಾರಿಕೆಯನ್ನು ನೀಡಲಾಗಿದೆ. ಜೊತೆಗೆ ಕೆ.ಸಿ ನಾರಾಯಣ ಗೌಡ ಅವರಿಗೆ ಯುವ ಜನ ಹಾಗೂ ಕ್ರೀಡೆ ಜೊತೆಗೆ ಮುಖ್ಯಮಂತ್ರಿ ಬಳಿ ಇದ್ದ ಯೋಜನಾ ಇಲಾಖೆ ಖಾತೆಯನ್ನು ನೀಡಲಾಗಿದೆ.

ಕೆ. ಸುಧಾಕರ್ಗೆ ನೀಡಲಾಗಿದ್ದ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಖಾತೆಯನ್ನು ಬದಲಾವಣೆ ಮಾಡಬಾರದು ಎಂದು ಅವರು ಪಟ್ಟು ಹಿಡಿದಿದ್ದರು. ಆದರೆ ಅವರ ಒತ್ತಡಕ್ಕೆ ಸಿಎಂ ಮಣಿದಿಲ್ಲ. ವೈದ್ಯಕೀಯ ಶಿಕ್ಷಣ ಖಾತೆಯನ್ನು ಮಾಧುಸ್ವಾಮಿಗೆ ಅವರಲ್ಲೇ ಮುಂದುವರಿಸಲಾಗಿದೆ.

Categories
ಮಲ್ನಾಡ್

ಅಪಾಯದಲ್ಲಿದೆಯಾ ‘ಭದ್ರಾ ಡ್ಯಾಂ’.!?

  • ಜನರಲ್ಲಿ ಮೂಡಿದ ಆತಂಕ!
  • ಪವಿತ್ರ ರಾಮಯ್ಯ ಅವರಿಂದ ಸ್ಥಳ ಪರಿಶೀಲನೆ

ಶಿವಮೊಗ್ಗ: ಹುಣಸೋಡು ಗ್ರಾಮದ ಬಳಿ ಕ್ವಾರಿಯಲ್ಲಿ ಗುರುವಾರ ರಾತ್ರಿ ಭಾರಿ ಪ್ರಮಾಣದ ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಘಟನೆಯಲ್ಲಿ ಐದಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಈ ನಡುವೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಪವಿತ್ರ ರಾಮಯ್ಯ ಘಟನೆ ನಡೆದ ರಾತ್ರಿಯೇ ಭದ್ರಾ ಡ್ಯಾಂಗೆ ಭೇಟಿ ನೀಡಿ ಪವಿತ್ರ ರಾಮಯ್ಯ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಪವಿತ್ರ ರಾಮಯ್ಯ ಸದ್ಯದ ಮಟ್ಟಿಗೆ ಯಾವುದೇ ಅಪಾಯ ಕಂಡು ಬಂದಿಲ್ಲ ಎಂದು ತಿಳಿಸಿದರು. ಇನ್ನೂ ಒಂದು ವೇಳೆ ಭದ್ರಾ ಅಣೆಕಟ್ಟೆಗೆ ತೊಂದರೆ ಯಾಗಿದ್ದರೆ ತರಿಕೇರೆ, ಭದ್ರವಾತಿ, ಶಿವಮೊಗ್ಗ ಜಿಲ್ಲೆಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು, ಇದರಿಂದ ನೂರಾರು ಹಳ್ಳಿಗಳು ಜಲಾವೃತ್ತವಾಗುತ್ತಿದ್ದವು. ಸದ್ಯದ ಮಟ್ಟಿಗೆ ಅಪಾಯ ಇಲ್ಲವಾದರೂ ಸ್ಥಳಕ್ಕೆ ತಜ್ಞರು ಬಂದು ಪರಿಶೀಲನೆ ನಡೆಸುವ ತನಕ ಜಿಲ್ಲೆಯಲ್ಲಿ ಯಾರೂ ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯವಾಗುವುದಿಲ್ಲಎಂದು ಸ್ಥಳೀಯ ಜನರು ಹೇಳಿದ್ದಾರೆ.

Categories
ಮಲ್ನಾಡ್

ಶಿವಮೊಗ್ಗ ಸ್ಪೋಟ ಪ್ರಕರಣ, ಪರಿಹಾರ ಘೋಷಿಸಿದ ಸಿ.ಎಂ

.
-ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ
-ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಭರವಸೆ

ಬೆಂಗಳೂರು, ಜ. 22: ಶಿವಮೊಗ್ಗದ ಸಮೀಪ ನಡೆದ ಸ್ಪೋಟ ಪ್ರಕರಣವನ್ನು ಸಿಎಂ ಯಡಿಯೂರಪ್ಪ ಅವರು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿದ್ದಾರೆ. ಹಾಗೂ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ಈ ಸಂದರ್ಭ ಘೋಷಣೆ ಮಾಡಿದ್ದಾರೆ.


ಗೃಹ ಕಚೇರಿ ಕೃಷ್ಣಾದಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಶಿವಮೊಗ್ಗದ ಕಲ್ಲು ಕ್ವಾರಿ ಸ್ಪೋಟ ಪ್ರಕರಣದ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಕಳೆದ ರಾತ್ರಿ ಶಿವಮೊಗ್ಗ ಸಮೀಪ ಹುಣಸೋಡು ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಸ್ಪೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಐದು ಜನರು ಮೃತರಾಗಿದ್ದಾರೆ. ನಮ್ಮ ಲೋಕಸಭಾ ಸದಸ್ಯ ರಾಘವೇಂದ್ರ ಘಟನಾ ಸ್ಥಳದಲ್ಲಿದ್ದು, ಎಲ್ಲವನ್ನು ವಿಚಾರಿಸುತ್ತಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ತೆಗೆದುಕೊಳ್ಳುತ್ತೇವೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Categories
ಬೆಂಗಳೂರು

ಫ್ಯಾನ್ ಇಂಡಿಯಾ ಸ್ಟಾರ್ “ರಾಕಿಂಗ್ ಸ್ಟಾರ್”


-ಭಾರತದ ಅತೀ ದುಬಾರಿ ಸಿನಿಮಾದಲ್ಲಿ ನಟಿಸುತ್ತಾರಾ? “ಯಶ್”

ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಎಲ್ಲರಲ್ಲಿದೆ. ಇದರ ಬೆನ್ನಲ್ಲೇ ಈಗ ಕಾಲಿವುಡ್ನ ಜನಪ್ರಿಯ ನಿರ್ದೇಶಕ ಶಂಕರ್ ಅವರ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲು ಯಶ್ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
‘ರಾಕಿಂಗ್ ಸ್ಟಾರ್’ ಯಶ್ ಈಗ ಬರೀ ಸ್ಯಾಂಡಲ್ವುಡ್ ಮಾತ್ರವಲ್ಲ, ಪ್ಯಾನ್ ಇಂಡಿಯಾಗೆ ಸ್ಟಾರ್ ಆಗಿದ್ದಾರೆ. ಕಾಲಿವುಡ್, ಟಾಲಿವುಡ್, ಬಾಲಿವುಡ್ನಲ್ಲೂ ಅವರಿಗೆ ಫ್ಯಾನ್ಸ್ ಇದ್ದಾರೆ. ಹಾಗಾಗಿ, ಸಹಜವಾಗಿಯೇ ಅವರ ಮುಂದಿನ ಸಿನಿಮಾಗಳ ಮೇಲೆ ಎಲ್ಲರ ಕಣ್ಣು ಇರುತ್ತದೆ.


ಯಶ್ ನಟನೆಯ ಚಿತ್ರ ಈಗ ರಿಲೀಸ್ಗೆ ರೆಡಿ ಇರುವುದರಿಂದ ಅವರ ಮುಂದಿನ ಚಿತ್ರದ ಪ್ರಕಟಣೆಗಾಗಿ ಅಭಿಮಾನಿಗಳು ಕಾದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ತಮಿಳು ನಿರ್ದೇಶಕ ಶಂಕರ್ ಅವರ ಮುಂದಿನ ದೊಡ್ಡ ಸಿನಿಮಾದಲ್ಲಿ ನಟಿಸಲು ಯಶ್ ಒಪ್ಪಿಕೊಂಡಿದ್ದಾರೆ ಎಂದು ಚೆನ್ನೈ ಮೂಲದಿಂದ ಸುದ್ದಿಯೊಂದು ಬಂದಿದೆ. ಇದು ಅಂತಿಂಥ ಸಿನಿಮಾ ಅಲ್ಲ, ಮೂಲಗಳ ಪ್ರಕಾರ ಇದುವರೆಗೆ ಭಾರತೀಯ ಚಿತ್ರರಂಗದಲ್ಲಿಇಷ್ಟು ದೊಡ್ಡ ಮಟ್ಟದ ಸಿನಿಮಾ ಬಂದಿಲ್ಲ. ಐತಿಹಾಸಿಕ ಸಿನಿಮಾ ಇದಾಗಿದ್ದು, ಸಮರದ ಕಥೆ ಹೊಂದಿದೆ
ಈ ಸಿನಿಮಾ 2022ರಲ್ಲಿ ಪ್ರಾರಂಭವಾಗಲಿದ್ದು, 2027ರಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಸ್ಕ್ರಿಪ್ಟ್ ಕೆಲಸದಲ್ಲಿ ಶಂಕರ್ ತಮ್ಮನ್ನು ಈಗಾಗಲೇ ತೊಡಗಿಸಿಕೊಂಡಿದ್ದು, ಜನಪ್ರಿಯ ನಟರ ಜತೆ ಮಾತುಕತೆ ನಡೆದಿದೆ. ಯಶ್ ಈ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ

Categories
ಮಲ್ನಾಡ್

ಶಿವಮೊಗ್ಗ ಕ್ವಾರಿ ಸ್ಫೋಟ ಪ್ರಕರಣ ತನಿಖೆಗೆ!


-ಘಟನಾ ಸ್ಥಳಕ್ಕೆ ಸಿಎಂ ಭೇಟಿ.?!


ಬೆಂಗಳೂರು: ಶಿವಮೊಗ್ಗದ ಹುಣಸೋಡು ಬಳಿ ಸಂಭವಿಸಿದ ಭಾರಿ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ನೀಡಿದ್ದಾರೆ. ಈ ಭಾರೀ ಅನಾಹುತದಲ್ಲಿ 8ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಇದು ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ. ಹಿರಿಯ ಅಧಿಕಾರಿಗಳೊಂದಿಗೆ ಸಿ.ಎಂ.

ತಡರಾತ್ರಿಯಿಂದಲೇ ಸಂಪರ್ಕದಲ್ಲಿದ್ದು, ಅಗತ್ಯ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೆಲ್ಲರೂ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುರ್ಘಟನೆಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಪ್ರಕರಣದ ತನಿಖೆ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆಗ್ರಹಿಸಿದ್ದಾರೆ.

Categories
ಬೆಂಗಳೂರು

ಹ್ಯಾಪಿ ಬರ್ತ್ ಡೇ ನಿಖಿಲ್..!


ಯುವ ಜನತಾದಳದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರಿಗೆ ಹುಟ್ಟು ಹಬ್ಬದ ಸಂಭ್ರಮ.
ಜೆಡಿಎಸ್ ಕಟ್ಟುವ ಹೊಣೆ ಹೊತ್ತಿರುವ ಯುವ ನಾಯಕನಿಗೆ ಎಲ್ಲೆಡೆಯಿಂದ ಜನ್ಮದಿನದ ಶುಭಾಶಯ ವ್ಯಕ್ತವಾಗುತ್ತಿದೆ.