Categories
ಕರಾವಳಿ

ಕಾಡಿನಲ್ಲಿದ್ದ ಚಿರತೆಯನ್ನು ಬಲೆ ಹಾಕಿ ಹಿಡಿದು ಕೊಂದು ತಿಂದ ಪಾಪಿಗಳು


-ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಕ್ರೂರ ಘಟನೆ


ತಿರುವನಂತಪುರಂ: ತಮಿಳುನಾಡಿನ ಊಟಿಯಲ್ಲಿ ದುಷ್ಕರ್ಮಿಗಳು ಆನೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆಯ ಬೆನ್ನಲ್ಲೇ ಮತ್ತೊಂದು ಮೂಕ ಪ್ರಾಣಿಯ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ. ಕಾಡಿನಲ್ಲಿ ಓಡಾಡಿಕೊಂಡಿದ್ದ ಚಿರತೆಯನ್ನು ಬಲೆ ಹಾಕಿ ಹಿಡಿದ ಪಾಪಿಗಳು ಅದರ ಮಾಂಸವನ್ನೂ ತಿಂದು ತೇಗಿದ್ದಾರೆ.
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇಂತದ್ದೊಂದು ಕ್ರೂರ ಘಟನೆ ನಡೆದಿದೆ. ವಿನೋದ್ ಹೆಸರಿನ ವ್ಯಕ್ತಿಯ ಹೊಲದಲ್ಲಿ ಬಲೆ ಹಾಕಿಡಲಾಗಿದೆ. ಆ ಬಲೆಗೆ ಚಿರತೆ ಸಿಕ್ಕುಬಿದ್ದಿದೆ. ಅದನ್ನು ಕಂಡ ವಿನೋದ್, ತಕ್ಷಣ ತನ್ನ ಸ್ನೇಹಿತರಾದ ಕುರಿಕೋಸ್, ಬೀನು, ಕುಂಜಪ್ಪನ್ನನ್ನು ಕರೆಸಿಕೊಂಡಿದ್ದಾನೆ. ಎಲ್ಲರು ಒಟ್ಟಾಗಿ ಸೇರಿ ಚಿರತೆಯನ್ನು ಕೊಂದಿದ್ದಾರೆ. ಸುಮಾರು 50 ಕೆಜಿ ತೂಕವಿದ್ದ ಚಿರತೆಯ ಮಾಂಸವನ್ನು ಅಡುಗೆ ಮಾಡಿಕೊಂಡು ತಿಂದಿದ್ದಾರೆ. ಅದರ ಚರ್ಮ, ಉಗುರು, ಹಲ್ಲನ್ನು ತೆಗೆದಿಟ್ಟುಕೊಂಡಿದ್ದಾರೆ. ಅದನ್ನೆಲ್ಲ ಮಾರಾಟ ಮಾಡಿ ಹಣ ಸಂಪಾದಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.


ಈ ವಿಚಾರ ಅರಣ್ಯಾಧಿಕಾರಿಗಳಿ ತಿಳಿದುಬಂದಿದ್ದು, ತಕ್ಷಣವೇ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ 10 ಕೆಜಿ ಚಿರತೆ ಮಾಂಸ, ಅದರ ಹಲ್ಲು, ಉಗುರು ಮತ್ತು ಚರ್ಮವನ್ನು ವಶ ಪಡಿಸಿಕೊಳ್ಳಲಾಗಿದೆ. (ಏಜೆನ್ಸೀಸ್)

Categories
ಶಿಕ್ಷಣ

ವಿದ್ಯಾರ್ಥಿಗಳ ಗಮನಕ್ಕೆ..!

  • ಮೇ ತಿಂಗಳಿನಲ್ಲಿ “PUC” ಜೂನ್ ನಲ್ಲಿ “SSLC” ಪರೀಕ್ಷೆ
    -ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ದ್ವೀತಿಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳಿಗೆ ದಿನಾಂಕಗಳನ್ನ ನಿಗದಿ ಮಾಡಲಾಗಿದ್ದು, ‘ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಜೂನ್ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನ ಆಯೋಜನೆ ಮಾಡಲಾಗುತ್ತೆ’ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ‘ಈಗಾಗಲೇ ಶೇಕಡಾ 30ರಷ್ಟು ಪಠ್ಯ ಕಡಿಮೆ ಮಾಡಲಾಗಿದೆ. ಮುಂದಿನ ತರಗತಿ ಕಲಿಕೆಗೆ ಕೊರತೆಯಾಗದಂತೆ ಪಠ್ಯ ವಿಷಯ ಕಡಿಮೆ ಮಾಡಿದ್ದೇವೆ. ಕೋವಿಡ್ ಕಾರಣದಿಂದ ಪರೀಕ್ಷೆಗೆ ಶಾಲಾ ಮಕ್ಕಳ ಹಾಜರಾತಿ ಕಡ್ಡಾಯವಲ್ಲ. ಇನ್ನು ಪರೀಕ್ಷೆಗಳನ್ನ ಯಾವ ರೀತಿ ನಡೆಸಬೇಕು ಅಂತ ಎಸ್ಎಸ್ಎಲ್ಸಿ ಮತ್ತು ಪಿಯು ಬೋಡ್೯ಗಳು ತೀಮಾ೯ನಿಸುತ್ತವೆ ಎಂದರು.

Categories
ಶಿಕ್ಷಣ

ಶಿಕ್ಷಕ ನೇಮಕಾತಿ ನಿಯಮದಲ್ಲಿ ಬದಲು!

-ಪ್ರೌಢಶಾಲೆ ಶಿಕ್ಷಕರಾಗಲು ಪಿಜಿ ಕಡ್ಡಾಯ
-ಬಿಎಡ್, ಸಿಇಟಿ, ಪದವಿ ಅಂಕಗಳೂ ಪರಿಗಣನೆ

ಬೆಂಗಳೂರು: ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿದ್ಯಾರ್ಹತೆಯನ್ನು ಪದವಿಯಿಂದ ಸ್ನಾತಕೋತ್ತರ ಪದವಿಗೆ ಪರಿಷ್ಕರಿಸಲು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಸಮಗ್ರ ಅಧ್ಯಯನ ನಡೆಸಿ ಕರಡು ರಚನೆಗೆ ನಾಲ್ಕು ವಿಭಾಗವಾರು ತಂಡಗಳನ್ನು ನೇಮಕ ಮಾಡಲಾಗಿದೆ.

ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ನಲ್ಲಿ ಕಡ್ಡಾಯವಾಗಿ ತಲಾ ಶೇಕಡ 50 ರಷ್ಟು ಅಂಕ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಸಿಇಟಿಯಲ್ಲಿ ಪಡೆದ ಶೇಕಡ 60 ರಷ್ಟು ಅಂಕ, ಪದವಿಯ ಶೇಕಡ 20 ರಷ್ಟು, ಹಾಗೂ ತಲಾ ಶೇಕಡ 10 ರಷ್ಟು ಸ್ನಾತಕೋತ್ತರ ಪದವಿ ಮತ್ತು ಬಿಎಡ್ ನಲ್ಲಿ ಪಡೆದ ಅಂಕಗಳನ್ನು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.

ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪದವೀಧರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶಿಸಲಾಗಿದೆ. ಪ್ರಸ್ತುತ ಪ್ರೌಢಶಾಲೆ ಶಿಕ್ಷಕರಾಗಲು ಬಿಎಡ್ ಜೊತೆಗೆ ಯಾವುದಾದರೂ ಪದವಿ ಕಡ್ಡಾಯವಾಗಿದೆ. ಇನ್ನು ಮುಂದೆ, ಸ್ನಾತಕೋತ್ತರ ಪದವಿ ಕಡ್ಡಾಯವಾಗಲಿದೆ.

Categories
ಮಲ್ನಾಡ್

ತುಂಗಾ ನದಿಗೆ ಬಿದ್ದು ಇಬ್ಬರು ಬಾಲಕರ ಸಾವು!

  • ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಶವ ಪತ್ತೆ
  • ಮೋಜು ಮಸ್ತಿಯೇ ಪ್ರಾಣಕ್ಕೆ ಎರವಾಯ್ತು? !


    ತೀರ್ಥಹಳ್ಳಿ: ನೀರಿನಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಸಾವನ್ನು ಕಂಡಿದ್ದಾರೆ.
    ತೀರ್ಥಹಳ್ಳಿಯ ತುಂಗಾ ನದಿ ಸಮೀಪದ ರಾಮ ಮಂಟಪದ ಬಳಿ ಶುಕ್ರವಾರ ಸ್ನೇಹಿತನ ಹುಟ್ಟು ಹಬ್ಬದ ಪಾರ್ಟಿ ಮಾಡಿ ಎಣ್ಣೆ ಕುಡಿದಿದ್ದಾರೆ. ಒಟ್ಟು 4 ಜನ ಸ್ನೇಹಿತರು ಇದ್ದರು ಎನ್ನಲಾಗಿದೆ.

    ಪಾರ್ಟಿ ಬಳಿಕ ನೀರಿಗೆ ಇಳಿದು ಸ್ನಾನ ಮಾಡಲು ಹೋಗಿದ್ದಾರೆ. ಈ ವೇಳೆ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.

    ಹೊಸನಗರ ತಾಲೂಕು ಮಾಸ್ತಿಕಟ್ಟೆ ಪೆಟ್ರೋಲ್ ಬಂಕ್ ಹಿಂಭಾಗದ ರಾಜು ಎಂಬುವರ ಪುತ್ರ ನೀಲಕಂಠ(17), ಶೃಂಗೇರಿ ತಾಲೂಕಿನ ಕೈಮರ ಕಿರಣ್(17)ಮೃತಪಟ್ಟಿದ್ದು, ಕಟ್ಟೆಹಕ್ಕಲುವಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಆನಂದಗಿರಿ ಸರ್ಕಾರಿ ಐಟಿಐ ಹುಡುಗರು ಎನ್ನಲಾಗಿದೆ. ಹುಟ್ಟು ಹಬ್ಬದ ಪಾರ್ಟಿ ಮಾಡಿದವನು ಶಿವಮೊಗ್ಗದ ಹುಡುಗ ಎಂದು ತಿಳಿದು ಬಂದಿದೆ.

    ಪೋಲೀಸರಿಂದ ಪತ್ತೆ!: ಶುಕ್ರವಾರ ಪಾರ್ಟಿ ಮಾಡಿ ಬಳಿಕ ಈ ಘಟನೆ ನಡೆದಿದೆ.. ಮನೆಗೆ ಬಾರದ ಹಿನ್ನೆಲೆ ಸಂಜೆಯಿಂದ ಹುಡುಕಿದಾಗ ನದಿ ತೀರದಲ್ಲಿ ಬ್ಯಾಗ್ ಪತ್ತೆಯಾಗಿದೆ. ಬಳಿಕ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿ, ಶನಿವಾರ ಬೆಳಗ್ಗೆ ಎರಡು ಶವ ಪತ್ತೆಯಾಗಿದೆ. ಇಬ್ಬರ ಮೃತ ದೇಹ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಯಲ್ಲಿ ಇಡಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
Uncategorized

ಗಣರಾಜ್ಯೋತ್ಸವದ ಪರೇಡ್ನಲ್ಲಿ ಗಮನ ಸೆಳೆಯಲಿದೆ ರಾಮ ದೇವಾಲಯದ ಪ್ರತಿಕೃತಿ


-ದೀಪೋತ್ಸವದ ದರ್ಶನ, ರಾಮಾಯಣ ಮಹಾಕಾವ್ಯದ ವಿವಿಧ ಕಥೆಗಳ ಪ್ರದರ್ಶನಉತ್ತರಪ್ರದೇಶ ಸರ್ಕಾರ ಸಿದ್ಧತೆ.


ನವದೆಹಲಿ: ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ನಲ್ಲಿ ಪ್ರಾಚೀನ ನಗರ ಅಯೋಧ್ಯೆಯ ಪರಂಪರೆ, ರಾಮ ದೇವಾಲಯದ ಪ್ರತಿರೂಪ, ‘ದೀಪೋತ್ಸವ’ದ ದರ್ಶನ ಮತ್ತು ರಾಮಾಯಣ ಮಹಾಕಾವ್ಯದ ವಿವಿಧ ಕಥೆಗಳನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ ನಡೆಸಿದೆ.
ಸ್ತಬ್ಧಚಿತ್ರದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಕುಳಿತಿರುವ ಪ್ರತಿಕೃತಿ ಇರಲಿದ್ದು, ಹಿಂಭಾಗದಲ್ಲಿ ದೇವಾಲಯದ ಪ್ರತಿಕೃತಿ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿಯ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ 17 ರಾಜ್ಯಗಳ ಸಂಸ್ಕೃತಿ, ಪರಂಪರೆ ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ.

Categories
ಬೆಂಗಳೂರು

ಕ್ಲಾಸ್ ಮಾಸ್ ಸಿನಿಮಾ “ಶ್ಯಾಡೋ”

-ಫೆಬ್ರವರಿ 5 ರಂದು ರಿಲೀಸ್
-ಬೇರ್ ಬಾಡಿಯಲ್ಲಿ ವಿನೋದ್ “ಪ್ರಭಾಕರ್ ಫೈಟ್”

ಎಲ್ಲರ ಬಹು ನಿರೀಕ್ಷಿತ “ಶ್ಯಾಡೋ” ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದು, ವಿಭಿನ್ನ ರೀತಿಯ ಕಥೆಯಾಗಿದ್ದು, ರವಿಗೌಡ ನಿರ್ದೇಶನದ ಸಿನಿಮಾ ಇದಾಗಿದೆ.
ಹೆಚ್ಚಾಗಿ ಮಾಸ್ ಸಿನಿಮಾ ನಟನೆ ಮಾಡುತ್ತಿದ್ದ, ನನಗೆ “ಶ್ಯಾಡೋ” ಸಿನಿಮಾ ಕ್ಲಾಸ್ ಮತ್ತು ಮಾಸ್ ಸಿನಿಮಾ ಆಗಿರುವುದರಿಂದ ಒಂದು ರೀತಿಯ ಹೊಸ ಅನುಭವ ಸಿಕ್ಕಿದೆ. ಸಿನಿಮಾ ಅಂದುಕೊಂಡಿದಕ್ಕಿಂತ ಅಚ್ಚು ಕಟ್ಟಾಗಿ ಸಿನಿಮಾ ಮೂಡಿಬಂದಿದೆ. ಇಲ್ಲಿಯೂ ಬೇರ್ ಬಾಡಿ ಫೈಟ್ ಸೀನ್ ಕಾಣಬಹುದು” ಎಂದು ವಿನೋದ್ ಹೇಳಿಕೊಂಡಿದ್ದಾರೆ.


ಫೆಬ್ರವರಿ 5 ರಂದು ಸಿನಿಮಾ ಬಿಡುಗಡೆ ಆಗಲಿದೆ. ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಲೋಕೇಶ್ ಈ ಸಿನಿಮಾದಲ್ಲಿ ಹಾಸ್ಯನಟನ ಪಾತ್ರ ನಿಭಾಯಿಸಿದ್ದು, “ಇಡೀ ಕುಟುಂಬ ನೋಡುವ ಸಿನಿಮಾ ಇದು. ವಿನೋದಣ್ಣ ಮಾಸ್ ಗೂ ಸೈ, ಕ್ಲಾಸ್ಗೂ ಸೈ ಎನಿಸುವಂತೆ ನಟಿಸಿದ್ದಾರೆ.
ಇನ್ನು ಈ ಚಿತ್ರದಲ್ಲಿ ವಿನೋದ್ಗೆ ಜೋಡಿಯಾಗಿ ಶೋಭಿತಾ ರಾಣಾ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಶ್ರವಣ್, ಸತ್ಯದೇವ್ ಸೇರಿ ಹಲವರು ಈ ಸಿನಿಮಾದಲ್ಲಿದ್ದಾರೆ.

Categories
ಸಿನಿಮಾ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ


-30 ಲಕ್ಷ ರೂ ದೇಣಿಗೆ ನೀಡಿದ ನಟ ಪವನ್ ಕಲ್ಯಾಣ್

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈಗ ದೇಶಾದ್ಯಂತ ದೇಣಿಗೆ ಸಂಗ್ರಹ ಕಾರ್ಯ ಕೂಡ ಜೋರಾಗಿ ನಡೆಯುತ್ತಿದೆ. ಈಗಾಗಲೇ ಅನೇಕ ರಾಜಕೀಯ ಗಣ್ಯರು, ಸಿನಿಮಾ ತಾರೆಯರು ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಈಗ ಆ ಸಾಲಿಗೆ ತೆಲುಗು ನಟ, ಜನ ಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಕೂಡ ಸೇರಿಕೊಂಡಿದ್ದಾರೆ. ಮಂದಿರ ನಿರ್ಮಾಣಕ್ಕಾಗಿ ಅವರು 30 ಲಕ್ಷ ರೂ. ದೇಣಿಗೆ ನೀಡಿದ್ದಾರೆ.


ನಟ, ಜನ ಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಶುಕ್ರವಾರ (ಜ.22) 30 ಲಕ್ಷ ರೂ.ಗಳ ಚೆಕ್ ಅನ್ನು ಅಯೋಧ್ಯ ರಾಮ ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ. ಮಾಜಿ ಸಚಿವ ಕಾಮಿನೇನಿ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಚೆಕ್ ಅನ್ನು ಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟವರಿಗೆ ನೀಡಿದ್ದಾರೆ. ಜೊತೆಗೆ ಪವನ್ 11 ಸಾವಿರ ರೂ.ಗಳ ಇನ್ನೊಂದು ಚೆಕ್ ಅನ್ನು ನೀಡಿದ್ದಾರೆ. ಇದು ಅವರ ಸಿಬ್ಬಂದಿ ನೀಡಿದ ಹಣವಾಗಿದೆ ಎನ್ನಲಾಗಿದೆ.

Categories
ರಾಜಕೀಯ

ತಣ್ಣಗಾಗದ ಮಾಧುಸ್ವಾಮಿ, ಸುಧಾಕರ್, ಶಂಕರ್ ಬಂಡಾಯ!

-ಖಾತೆ ಮರುಹಂಚಿಕೆ


ಬೆಂಗಳೂರು: ಖಾತೆ ಮರುಹಂಚಿಕೆ ಆದರೂ ಬಿಜೆಪಿಯಲ್ಲಿಮತ್ತೆ ಅಸಮಾಧಾನ ಮುಂದುವರಿದಿದೆ.


ಖಾತೆ ಮರು ಹಂಚಿಕೆ ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ್ದು ಅತೃಪ್ತರ ಜೊತೆಗಿನ ಸಿಎಂ ಬಿಎಸ್ ಯಡಿಯೂರಪ್ಪ ಮಾತುಕತೆ ಫಲಿಸಲಿಲ್ಲ. ಕೆ. ಸುಧಾಕರ್, ಜೆ.ಸಿ ಮಾಧುಸ್ವಾಮಿ ಹಾಗೂ ಆರ್. ಶಂಕರ್ ಅಸಮಾಧಾನ ಮುಂದುವರಿದಿದೆ.
ವೈದ್ಯಕೀಯ ಶಿಕ್ಷಣದ ಜೊತೆಗೆ ಹಜ್ ಹಾಗೂ ವಕ್ಫ್ ಇಲಾಖೆ ಕೊಟ್ಟರೂ ಜೆ.ಸಿ ಮಾಧುಸ್ವಾಮಿ ಸಣ್ಣ ನೀರಾವರಿ ಖಾತೆ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಇನ್ನು ಕೆ. ಸುಧಾಕರ್ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಖಾತೆ ಒಬ್ಬರಿಗೆ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.


ಪೌರಾಡಳಿತ ಖಾತೆಯಿಂದ ತೃಪ್ತಿ ಹೊಂದಿದ್ದ ಆರ್. ಶಂಕರ್ ಅವರಿಂದ ಆ ಖಾತೆಯನ್ನು ವಾಪಸ್ ಪಡೆದು ಅವರಿಗೆ ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ನೀಡಿದಕ್ಕಾಗಿ ಅಸಮಾಧಾನಗೊಂಡಿದ್ದಾರೆ. ಸರ್ಕಾರಿ ಕಾರನ್ನು
ಅತೃಪ್ತಿ ಹೊಂದಿರುವ ಸಚಿವರ ಜೊತೆಗೆ ಸಿಎಂ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆ ಇದೆ.

Categories
ಆರೋಗ್ಯ

ಭಾರತೀಯ ಕೊವ್ಯಾಕ್ಸಿನ್ ಲಸಿಕೆ ಸಂಪೂರ್ಣ ಸುರಕ್ಷಿತ!


-ಪ್ರತಿಷ್ಠಿತ ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್ ನಿಂದ ಸರ್ಟಿಫಿಕೇಟ್


ದೆಹಲಿ: ಭಾರತೀಯ ಕೊರೊನಾ ಲಸಿಕೆ ಕುರಿತು ದೇಶದಲ್ಲಿ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದವು. ಲಸಿಕೆಗಳ ಅದರಲ್ಲೂ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿದ ಕೊವ್ಯಾಕ್ಸಿನ್ ಲಸಿಕೆಯ ಬಗ್ಗೆ ಹಲವರು ಸಂದೇಹ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಪ್ರತಿಷ್ಠಿತ ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್ನಲ್ಲಿ ಈ ಕುರಿತು ಮಾಹಿತಿ ನೀಡಿದೆ. ಕೊವ್ಯಾಕ್ಸಿನ್ ಲಸಿಕೆ ಸುರಕ್ಷಿತ ಎಂದು ಲ್ಯಾನ್ಸೆಟ್ ಅಭಿಪ್ರಾಯಪಟ್ಟಿದೆ.


ಕೊವ್ಯಾಕ್ಸಿನ್ ಲಸಿಕೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಈ ಲಸಿಕೆ ಸುರಕ್ಷಿತವೂ ಆಗಿದೆ ಎಂದು ಹೇಳಿರುವ ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್ ಕೊವ್ಯಾಕ್ಸಿನ್ ಕುರಿತಾಗಿ ಎದ್ದಿದ್ದ ಗೊಂದಲವನ್ನು ಬಗೆಹರಿಸಿದೆ. ಈ ಮಧ್ಯೆ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸುತ್ತಿರುವ ಮೂಗಿನ ಮೂಲಕ ನೀಡಬಹುದಾದ ಕೊರೊನಾ ಲಸಿಕೆಯ ಮೊದಲ ಹಂತದ ವೈದ್ಯಕೀಯ ಪರೀಕ್ಷೆಗೂ ಅನುಮತಿ ಸಿಕ್ಕಿರುವುದು ಮತ್ತಷ್ಟು ನಿರೀಕ್ಷೆಗಳಿಗೆ ಕಾರಣವಾಗಿದೆ.

Categories
ಬೆಂಗಳೂರು

ಕಾಲಿವುಡ್ನ ನಟ ವಿಜಯ್ ಸೇತುಪತಿ


-ಕನ್ನಡದ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ನಟನೆ
-ಇದು ಬಿಗ್ ಬಜೆಟ್ನ ಸಿನಿಮಾ

ತಮ್ಮ ಸಹನೆ ನಟನೆಯ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ ನಟ ವಿಜಯ್ ಸೇತುಪತಿ. ಸ್ಯಾಂಡಲ್ವುಡ್ ನ ಸ್ಟಾರ್ ನಿರ್ದೇಶಕರೊಬ್ಬರ ಸಿನಿಮಾದಲ್ಲಿ ನಟಿಸಲಿದ್ದಾರೆ. ಎಂಬ ಮಾಹಿತಿ ಬರುತ್ತಿದೆ.
ರಾಕಿಂಗ್ ಸ್ಟಾರ್’ ಯಶ್ ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದ ಮೇಲೆ “ಪ್ರಶಾಂತ್ ನೀಲ್” ಈಗ ನಟ ಪ್ರಭಾಸ್ಗೆ ಸಿನಿಮಾ ಮಾಡಲಿದ್ದಾರೆ. ಅದಕ್ಕೆ ‘ಸಲಾರ್’ ಅಂತ ಶೀರ್ಷಿಕೆ ಇಡಲಾಗಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ ಕೂಡ ಆರಂಭಗೊಳ್ಳಲಿದೆ. ಕನ್ನಡದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯೇ ಈ ಸಿನಿಮಾಕ್ಕೂ ಬಂಡವಾಳ ಹೂಡಲಿದೆ. ದೊಡ್ಡ ಬಜೆಟ್ನಲ್ಲಿ ಸಿದ್ಧಗೊಳ್ಳಲಿರುವ ಈ ‘ಸಲಾರ್’ನಲ್ಲಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಅನ್ನೋದು ಲೇಟೆಸ್ಟ್ ನ್ಯೂಸ್!
ಮೂಲಗಳು ನೀಡುವ ಮಾಹಿತಿ ಪ್ರಕಾರ, ‘ವಿಜಯ್ ಸೇತುಪತಿ ಇಲ್ಲಿ ವಿಲನ್ ಪಾತ್ರ ಮಾಡಲಿದ್ದಾರೆ. ಚಿತ್ರೀಕರಣವು ಸೇತುಪತಿ ಮತ್ತು ಪ್ರಭಾಸ್ ಅವರ ಕಾಂಬಿನೇಷನ್ ದೃಶ್ಯಗಳಿಂದಲೇ ಆರಂಭಗೊಳ್ಳಲಿದೆ.