Categories
ಜಿಲ್ಲಾ ವಾರ್ತೆ

ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ತುಳು ಸಿನಿಮಾ!

  • ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರದಲ್ಲಿ ಬಿಡುಗಡೆ
  • ತುಳು ಕಲಾವಿದರ ಹೊಸ ಪ್ರಯೋಗ

NAMMUR EXPRESS NEWS
ತೀರ್ಥಹಳ್ಳಿ: ತುಳುನಾಡಿನ ಖ್ಯಾತ ಕಲಾವಿದರ ಸೂಪರ್ ಹಿಟ್ ಕಾಮಿಡಿ ಎಂಟರ್ಟೈನರ್, ಯಶಸ್ವಿ 11ನೇ ವಾರ ಪೂರೈಸಿರುವ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ತುಳು ಚಿತ್ರ
ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರದಲ್ಲಿ ತೆರೆ ಕಂಡಿದೆ. ತುಳುನಾಡ ಖ್ಯಾತ ರಾಹುಲ್ ಅಮೀನ್ ನಿರ್ದೇಶಿಸಿದ್ದಾರೆ
ಆನಂದ್ ಎನ್ ಕುಮಾರ್ ನಿರ್ಮಿಸಿದ್ದಾರೆ. ಬಿ.ಅಶೋಕ್ ಕುಮಾರ್, ಪವನ್ ಕುಮಾರ್, ಸುಹಾನ್ ಪ್ರಸಾದ್ – ನಿತಿನ್ ರಾಜ್ ಶೆಟ್ಟಿ, ಅರ್ಪಿತ್ ಅಡ್ಯಾರ್-ಅಜಯ್ ಬಾಳಿಗ-ಸೀತಾರಾಮ ಶೆಟ್ಟಿ
ವಿಷ್ಣು ಪ್ರಸಾದ್.ಪಿ-ಜಾಕೋಬ್ ಜಾನ್ಸನ್ – ಸ್ರಾಜನ್ ಕುಮಾರ್ – ಚೇತನ್ ಡಿಸೋಜ, ಜೀತೇಶ್ ಕುಮಾರ್ – ಪ್ರಸನ್ನ ಶೆಟ್ಟಿ ಬೈಲೂರು – ನವೀನ್ ಶೆಟ್ಟಿ ಮುಂತಾದವರು ಸಿನಿಮಾದಲ್ಲಿ ಕೈ ಜೋಡಿಸಿದ್ದಾರೆ.

ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರ ಸೇರಿದಂತೆ ಕರಾವಳಿಯ ಹಲವೆಡೆ ಚಿತ್ರ ಪ್ರದರ್ಶನ ಕಾಣುತ್ತಿದೆ. ಸರ್ವರೂ ಚಿತ್ರ ನೋಡಲು ಪ್ರದರ್ಶಕರು ಮನವಿ ಮಾಡಿದ್ದಾರೆ.

Categories
ಜಿಲ್ಲಾ ವಾರ್ತೆ

ಒಂದೂವರೆ ಲಕ್ಷಕ್ಕೆ ಮಾರಾಟವಾದ ಮೂರು ವರ್ಷದ ಟಗರು!

  • 90 ಕೆಜಿ ತೂಕದ ಟಗರು
  • ಮೂಡಲಗಿ ತಾಲ್ಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ನಡೆದ ಘಟನೆ

NAMMUR EXPRESS NEWS
ಮೂಡಲಗಿ : ಮೂಡಲಗಿ ತಾಲ್ಲೂಕಿನ ಧರ್ಮಟ್ಟಿ ಗ್ರಾಮದ ಕುರಿಗಾಯಿಯೊಬ್ಬರಿಂದ ಮೂರು ವರ್ಷದ ಟಗರನ್ನು ಒಂದು ಲಕ್ಷ ಐವತ್ತೈದು ಸಾವಿರ ರೂ.ಗಳಿಗೆ ಗದ್ದನಕೇರಿ ಗ್ರಾಮದ ವ್ಯಕ್ತಿಯೋರ್ವ ಖರೀದಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಧರ್ಮಟ್ಟಿ ಗ್ರಾಮದ ಕುರಿಗಾಹಿ ಲಕ್ಷ್ಮಣ ಸಿದ್ಧಿಂಗಪ್ಪ ಕೊರಕಪೂಜೇರ ಎಂಬುವರಿಂದ ಗದ್ದನಕೇರಿ ಗ್ರಾಮದ ಯಮನಪ್ಪ ಸಂಗೊಂದಿಯವರು ಖರೀದಿ ಮಾಡಿದರು.
ಮೂರು ವರ್ಷದ ಡೆಕ್ಕನಿ ತಳಿಯ 90 ಕೆಜಿ ತೂಕದ ಈ ಟಗರಿಗೆ ಮಾಲೀಕ, ಪ್ರತಿದಿನ 2 ಲೀಟರ್ ಹಾಲು, 5 ತತ್ತಿ, ಚಪಾತಿ, ಗೋಧಿ, ಕೆಂಪಹುರಳಿ, ಕಾರೀಕ, ಶೇಂಗಾ ಜೊತೆಗೆ ಒಣ ಹಾಗೂ ಹಸಿ ಮೇವು ನೀಡುತ್ತಿದ್ದರು. ಜಾತ್ರೆ ಹಬ್ಬಗಳಲ್ಲಿ ಜರುಗುವ ಟಗರಿನ ಸ್ಪರ್ಧೆಗಳಲ್ಲಿ ಭಾಗವಹಿಸುವ ಉದ್ದೇಶದಿಂದ ಟಗರುಗಳನ್ನು ಮೇಯಿಸುವದು ಧರ್ಮಟ್ಟಿ ಗ್ರಾಮದಲ್ಲಿ ಸಾಮಾನ್ಯವಾಗಿದೆ.
ಈ ಟಗರು ನಾಗನೂರ, ಚಿಗಡೊಳ್ಳಿ, ಕುರಬಗಟ್ಟಿ, ಬಿಸನಕೊಪ್ಪ, ಮುಸಗುಪ್ಪಿ ಗ್ರಾಮಗಳ ಕಾಳಗದಲ್ಲಿ ಜಯಶಾಲಿಯಾಗಿದೆ.

Categories
ರಾಜಕೀಯ

ಸಿದ್ದರಾಮೋತ್ಸವದಲ್ಲಿ ತೀರ್ಥಹಳ್ಳಿ ನಾಯಕರು!

  • ವೇದಿಕೆ ಬಳಿ ಇದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್
  • ಡಿಕೆಶಿ ಜತೆ ಇದ್ದ ಡಾ.ಆರ್.ಎಂ.ಮಂಜುನಾಥ ಗೌಡ
  • ತೀರ್ಥಹಳ್ಳಿ ಕ್ಷೇತ್ರದಿಂದ ನೂರಾರು ವಾಹನದಲ್ಲಿ ಪಯಣ

NAMMUR EXPRESS NEWS
ಸಿದ್ದರಾಮೋತ್ಸವದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಇಬ್ಬರು ನಾಯಕರು ಗಮನ ಸೆಳೆದರು.
ಒಂದು ಕಡೆ ಕಿಮ್ಮನೆ ರತ್ನಾಕರ್ ಅವರು ಆಯೋಜಕ ಸಮಿತಿಯಲ್ಲಿ ಕಾಣಿಸಿಕೊಂಡರೆ ಡಾ.ಆರ್ ಎಂ ಮಂಜುನಾಥ ಗೌಡ ಅವರು ಡಿಕೆಶಿ ಜತೆ ಕಾಣಿಸಿಕೊಂಡರು. ಮುರುಘ ಮಠದಲ್ಲಿ ಡಿಕೆಶಿ ಅವರು ಮಂಜುನಾಥ ಗೌಡ ಅವರನ್ನು ರಾಹುಲ್ ಗಾಂಧಿ ಅವರಿಗೆ ವೆರಿ ಇಂಪಾರ್ಟೆಟ್ಸ್ ಲೀಡರ್ ಎಂದು ಪರಿಚಯ ಮಾಡಿಕೊಟ್ಟರು. ಇನ್ನು ತೀರ್ಥಹಳ್ಳಿಯಿಂದಲೂ ನೂರಾರು ಮಂದಿ ವಾಹನಗಳಲ್ಲಿ ದಾವಣಗೆರೆಗೆ ತೆರಳಿದ್ದರು.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಸದಸ್ಯರು, ಯುವ ನಾಯಕರು, ಪ್ರಮುಖ ನಾಯಕರು ಭಾಗಿಯಾಗಿದ್ದರು.

Categories
ಜಿಲ್ಲಾ ವಾರ್ತೆ

ಮೇಲಿನ ಕುರುವಳ್ಳಿಯಲ್ಲಿ 25ನೇ ವರ್ಷದ ಗಣೇಶೋತ್ಸವ

ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಅಣ್ಣಪ್ಪ ಆಯ್ಕೆ

ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ಶ್ರೀ ವಿದ್ಯಾಗಣಪತಿ ಸೇವ ಸಮಿತಿ ವತಿಯಿಂದ 25 ವರ್ಷದ ಬೆಳ್ಳಿಹಬ್ಬ ಸಂಭ್ರಮಾಚರಣೆ ನಡೆಯಲಿದ್ದು ಅದ್ದೂರಿ ಗಣೇಶೋತ್ಸವಕ್ಕೆ ಸಾರಥಿಯಾಗಿ ಅಣ್ಣಪ್ಪ ಮೇಲಿನ ಕುರುವಳ್ಳಿ ಆಯ್ಕೆಯಾಗಿದ್ದಾರೆ.
ಮೊಟ್ಟ ಮೊದಲ ಬಾರಿಗೆ ಮೇಲಿನ ಕುರುವಳ್ಳಿಯಲ್ಲಿ 9 ದಿನಗಳ ಗಣೇಶೋತ್ಸವವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಅಣ್ಣಪ್ಪ ಮೇಲಿನ ಕುರುವಳ್ಳಿ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ಶುಭಕೋರುವವರು

ಪೂರ್ಣೇಶ್ ಪೂಜಾರಿ ಮೇಲಿನ ಕುರುವಳ್ಳಿ
ಪ್ರಮೋದ್ ಪೂಜಾರಿ ಕುರುವಳ್ಳಿ
ಪ್ರವೀಣ್ ಮಂಡಗದ್ದೆ

Categories
ಜಿಲ್ಲಾ ವಾರ್ತೆ

ತೀರ್ಥಹಳ್ಳಿ ಸಂತೆ ಮಾರ್ಕೆಟ್ ಕೊಳಕು ಕೇಳೋರು ಯಾರು?

  • ಸಂತೆ ನಡೆದ ಬಳಿಕ ಕೊಳೆತು ನಾರುವ ತರಕಾರಿ, ಕಸ ಕಡ್ಡಿ
  • ಸಾರ್ವಜನಿಕರಲ್ಲಿ ಕಾಯಿಲೆ ಹರಡುವ ಭೀತಿ: ಪಟ್ಟಣ ಪಂಚಾಯತ್ ನಿರ್ಲಕ್ಷ್ಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯ ದಿಂದ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಸಂತೆ ನಡೆದ ಬಳಿಕ ಅ ಪ್ರದೇಶದಲ್ಲಿ ಕೊಳೆತುನಾರುವ ತರಕಾರಿಗಳು ಹಾಗೂ ಎಲ್ಲಿ ಬೇಕಂದರೆ ಅಲ್ಲಿ ಕಸ ಕಡ್ಡಿಗಳು ಗೋಣಿಚೀಲಗಳು ಬಿದ್ದಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರ ಸಂತೆಗೆ ತೀರ್ಥಹಳ್ಳಿ ತಾಲೂಕಿನ ಮೂಲೆ ಮೂಲೆಯಿಂದ ಜನ ಬರುತ್ತಾರೆ. ಆದರೆ ಸಂತೆ ಮಾರ್ಕೆಟ್ ಕೊಳಕು ಇದೀಗ ಅನೇಕರ ಅಸಹನೆಗೆ ಕಾರಣವಾಗಿದೆ. ಸಂತೆ ಮಾರ್ಕೆಟ್ ಕಸ ವಿಲೇವಾರಿ ಸರಿಯಾಗಿ ಮಾಡದೇ ಇರುವುದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಆಡಳಿತ ವರ್ಗದವರು ಸದಸ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜನರು ಓಡಾಡುವ ಪ್ರದೇಶದಲ್ಲಿ ಕೊಳೆತು ನಾರುವ ತರಕಾರಿಗಳು ಹಾಗೂ ಕಸ ಕಡ್ಡಿ ಇರುವುದರಿಂದ ಜನರಿಗೆ ಕಾಯಿಲೆಗಳು ಹರಡುವ ಭೀತಿ ಹೆಚ್ಚಾಗಿದೆ. ಈ ಮಾರ್ಕೆಟ್ ಪ್ರದೇಶವನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯವನ್ನು ಕಾಪಾಡುವಂತ ಕರ್ತವ್ಯ ಪಟ್ಟಣ ಪಂಚಾಯಿತಿಯ ಮೇಲೆ ಇದೆ. ಇದನ್ನು ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Categories
ವ್ಯವಹಾರ

ಗಾಯತ್ರಿ ಜ್ಯೂವೆಲ್ಲರ್ಸ್ನಲ್ಲಿ ಉದ್ಯೋಗ ಅವಕಾಶ

  • ತೀರ್ಥಹಳ್ಳಿಯ ಪ್ರತಿಷ್ಠಿತ ಆಭರಣ ಮಳಿಗೆ

ತೀರ್ಥಹಳ್ಳಿಯ ಪ್ರತಿಷ್ಠಿತ ಜ್ಯೂವೆಲ್ಲರ್ಸ್ ಗಾಯತ್ರಿ
ಜ್ಯೂವೆಲ್ಲರ್ಸ್ನಲ್ಲಿ ಕೆಲಸಕ್ಕೆ ಹುಡುಗರು ಮತ್ತು ಹುಡುಗಿಯರು ಬೇಕಾಗಿದ್ದಾರೆ.

ಆಕರ್ಷಕವಾದ ಸ್ಯಾಲರಿ ಕೊಡಲಾಗುವುದು

ಆಸಕ್ತಿ ಇರುವವರು ತಮ್ಮ ಬಯೋಡೇಟಾದೊಂದಿಗೆ ಮಳಿಗೆಗೆ ಬಂದು ಸಂಪರ್ಕಿಸಿ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಗಾಯತ್ರಿ ಜ್ಯೂವೆಲ್ಲರ್ಸ್, ತೀರ್ಥಹಳ್ಳಿ

9480725917
9482384131
9448014572
08181-229920
08181-228820

Categories
ಜಿಲ್ಲಾ ವಾರ್ತೆ

ತುಂಗಾಕಾಲೇಜು ನೂತನ ಪ್ರಾಂಶುಪಾಲರಾಗಿ ಡಾ.ಕೆ.ಅಂಜನಪ್ಪ ಅಧಿಕಾರ ಸ್ವೀಕಾರ

  • ಪ್ರಾಂಶುಪಾಲರಾಗಿದ್ದ ಪ್ರೊ.ನಟರಾಜ್ ನಿವೃತ್ತಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಮೇಜರ್ ಡಾ.ಕೆ.ಅಂಜನಪ್ಪ ಆಗಸ್ಟ್‌1 ರಂದು ಅಧಿಕಾರ ಸ್ವೀಕರಿಸಿದರು. ತುಂಗಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಅವರು ಎನ್‌ಸಿಸಿ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನೂತನ ಪ್ರಾಂಶುಪಾಲರನ್ನು ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿವೃಂದ ಅಭಿನಂದಿಸಿ ಶುಭ ಹಾರೈಸಿದ್ದಾರೆ.
ನಟರಾಜ್ ಅರಳಸುರಳಿ ನಿವೃತ್ತಿ: ತುಂಗಾ ಮಹಾವಿದ್ಯಾಲಯದಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ, ಸಂಸ್ಥೆಯ ಪ್ರಾಂಶುಪಾಲ ರಾಗಿ ಅನನ್ಯ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿದ್ದ ನಟರಾಜ್ ಅರಳಸುರಳಿ ಜುಲೈ 30ರಂದು ವಯೋ ನಿವೃತ್ತಿ ಹೊಂದಿದರು. ಕಾಲೇಜು ಆಡಳಿತ ಮಂಡಳಿ-ಸಿಬ್ಬಂದಿವರ್ಗ ಶ್ರೀಮತಿ ಶ್ರೀ ನಟರಾಕ್ ಅವರನ್ನು ಸನ್ಮಾನಿಸಿ ಆತ್ಮೀಯ ಬೀಳ್ಕೊಡುಗೆ ನೀಡಿದರು.

Categories
Uncategorized

ಎಂ.ಎ.ನಟರಾಜ್ ಮಂಗಳ ಅವರಿಗೆ ಪದೋನ್ನತಿ

  • ಬಳ್ಳಾರಿ ಎಸ್ಪಿಯಾಗಿ ಪದೋನ್ನತಿ
  • ತೀರ್ಥಹಳ್ಳಿ ತಾಲೂಕಿಗೆ ಮತ್ತೊಂದು ಗರಿ

NAMMUR EXPRESS NEWS
ಎಂ.ಎ ನಟರಾಜ್ ಮಂಗಳ ಇವರು ಡಿವೈಎಸ್ಪಿ ಹುದ್ದೆಯಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಪದನ್ನೋತಿ ಹೊಂದಿದ್ದಾರೆ.
ಮೂಲತಃ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದ ಶ್ರೀ ಅಣ್ಣಪ್ಪ ಗೌಡ ಮತ್ತು ಶ್ರೀಮತಿ ಕಮಲಮ್ಮ ಅವರ ಸುಪುತ್ರ ಎಂಎ ನಟರಾಜ್ ಅವರು ಪಿಎಸ್ಐ ಮೂಲಕ ಪೋಲಿಸ್ ಇಲಾಖೆಗೆ ಸೇರಿ ಶೃಂಗೇರಿ,ಸಾಗರ,ದಾವಣಗೆರೆ ಚಿತ್ರದುರ್ಗ,ಬೆಂಗಳೂರು ಸುರತ್ಕಲ್, ಮಂಗಳೂರಿನಲ್ಲಿ ಪೋಲಿಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕ ಮೆಚ್ಚುಗೆಯ ಪಾತ್ರರಾಗಿದ್ದು, ಇಲಾಖೆಯ ಪ್ರಶಂಸೆಗೂ ಕಾರಣರಾಗಿದ್ದಾರೆ
ಎಂ ಎ ನಟರಾಜ್ ಅವರು ಶೃಂಗೇರಿ ಸಮೀಪದ ಮೆಣಸಿನಹಾಡ್ಯದಲ್ಲಿ ನಡೆದ ನಕ್ಸಲ್ ನಾಯಕ ಸಾಕೆತ್ ರಾಜನ್ ಎನ್ಕೌಂಟರ್ ಮಾಡಿದ ಒ
ತಂಡದ ಮುಖ್ಯಸ್ಥರಾಗಿದ್ದರು ಎನ್ನುವುದು ಸಹ ತೀರ್ಥಹಳ್ಳಿ ಜನತೆಗೆ ಅತ್ಯಂತ ಪ್ರಶಂಸನೀಯ ವಿಚಾರ.
ಪ್ರಸ್ತುತ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಬಳ್ಳಾರಿ ಜಿಲ್ಲೆಗೆ ನಿಯೋಜನೆಗೊಂಡಿದ್ದಾರೆ.

Categories
ಜಿಲ್ಲಾ ವಾರ್ತೆ

‘ಕಠಿಣ ಶ್ರಮ, ಏಕಾಗ್ರತೆಯಿಂದ ಯಶಸ್ಸು’

NAMMUR EXPRESS NEWS
ಹೆಬ್ರಿ: ಕಠಿಣ ಪರಿಶ್ರಮ, ಸಮಯಪಾಲನೆ ಹಾಗೂ ಏಕಾಗ್ರತೆಯಿಂದ ವಿಷಯ ಮನನ ಮಾಡಿದಾಗ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲು ಸಾಧ್ಯ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಉಪನ್ಯಾಸಕ ಡಾ. ಸಿ.ಕೆ. ಮಂಜುನಾಥ್ ಹೇಳಿದರು.
ಹೆಬ್ರಿಯ ಎಸ್‌ಆರ್ ಪದವಿಪೂರ್ವ ಕಾಲೇಜಿನಲ್ಲಿ ನೀಟ್, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಡೆದ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಸ್‌ಆರ್ ಸಮೂಹ ಶಿಕ್ಷಣ ಸಂಸ್ಥೆಯ
ಅಧ್ಯಕ್ಷ ಎಚ್‌. ನಾಗರಾಜ ಶೆಟ್ಟಿ ಅಧ್ಯಕ್ಷತೆ ಮಾತನಾಡಿ ‘ವಿದ್ಯಾರ್ಥಿಗಳ ಕೌಶಲ, ಪ್ರತಿಭೆಯನ್ನು ಗುರುತಿಸಿ ಹೊರ ತೆಗೆಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಹೆತ್ತವರ ತ್ಯಾಗವನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ಓದಿನತ್ತ ಹೆಚ್ಚು ಗಮನ ನೀಡಬೇಕು. ವಿದ್ಯಾರ್ಥಿಗಳು ಸ್ವಪ್ರಯತ್ನದಿಂದಲೂ ಉತ್ತಮ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಉಪನ್ಯಾಸಕರು ಸಿದ್ಧರಾಗಿರುತ್ತಾರೆ’ ಎಂದರು.
ಉಪ ಪ್ರಾಂಶುಪಾಲ ಗುರುಪ್ರಸಾದ್‌ ಭಟ್, ನೀಟ್ ಸಿಇಟಿ ಸಮನ್ವಯಾಧಿಕಾರಿ ಹರಿಪ್ರಸಾದ್ ಇದ್ದರು. ಉಪನ್ಯಾಸಕಿ ಭಾಗ್ಯಶ್ರೀ ಐತಾಳ್ ನಿರೂಪಿಸಿದರು.

Categories
ಜಿಲ್ಲಾ ವಾರ್ತೆ

ಸಾಹಿತ್ಯದಿಂದ ಬದುಕಿಗೆ ಬೆಳಕಾಗಲಿ, ಸಂಸ್ಥೆಯೂ ಬೆಳಗಲಿ

  • ಡಾ. ಶೇಖರ ಅಜೆಕಾರು ಹೇಳಿಕೆ

NAMMUR EXPRESS NEWS
ಹೆಬ್ರಿ : ಕದಿಯಲಾಗದ ವಿದ್ಯೆ, ಬದುಕು ಕಟ್ಟುವ ವಿದ್ಯೆ ಎಲ್ಲರಿಗೂ ಸಿಗಬೇಕಿದೆ. ಆ ಮೂಲಕ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಹೆಬ್ರಿಯ ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯು ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತಿದೆ. ಸಾಹಿತ್ಯದಿಂದ ಬದುಕಿಗೆ ಬೆಳಕಾಗಲಿ, ಸಂಸ್ಥೆಯೂ ಬೆಳಗಲಿ ಎಂದು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಾಹಿತಿ ಡಾ. ಶೇಖರ ಅಜೆಕಾರು ಹೇಳಿದರು. ಹೆಬ್ರಿಯ ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜು.30ರಂದು ಕನ್ನಡ ಸಾಹಿತ್ಯ ಸಂಘ ಹಾಗೂ ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಇಂದು 100ರೊಂದಿಗೆ ಸೆಣಸಾಟ ಮಾಡಬೇಕಿದೆ, ನಮಗೆ ನಾವೇ ಆದರ್ಶವಾಗಿ ವಿದ್ಯೆಯ ಮೂಲಕ ಬದುಕನ್ನು ಕಟ್ಟಿಕೊಂಡು ಅತ್ಯಂತ ಸರಳ ಜೀವನ ನಡೆಸಬೇಕಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಎಸ್. ಆರ್. ಸಂಸ್ಥೆಯಲ್ಲಿ ಕಲಿಯುವ ಭಾಗ್ಯ ದೊರೆತ ತಾವೆಲ್ಲ ಭಾಗ್ಯವಂತರು. ಆ ಪುಣ್ಯದ ಫಲದಿಂದ ವಿಶೇಷ ಸಾಧನೆ ಮಾಡಬೇಕಿದೆ, ಹುಟ್ಟುವಾಗ ನಾವು ವಿಶ್ವ ಮಾನವರಾಗಿದ್ದೆವು, ಈಗ ಅಲ್ಪಮಾನವರಾಗುತ್ತಿರುವುದು ದುರಂತ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ರಿ ಎಸ್. ಅರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ ಯಶಸ್ಸಿನ ಹಿಂದೆ ಪರಿಶ್ರಮದ ಬೆಲೆಯಿದೆ, ಯಶಸ್ಸಿಗಾಗಿ ಕಷ್ಟ ಪಡಬೇಕು. ಎಲ್ಲರ ಜತೆ ಬೆರೆತಾಗ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ಪ್ರತಿಭೆಗೆ ವೇದಿಕೆ ಸಿಗಲು ತಾಳ್ಮೆ ಹಾಗೂ ಏಕಾಗ್ರತೆ ಬಹುಮುಖ್ಯ ಎಂದರು.
ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ವರ್ಷಾ ಸಿ. ಶೆಟ್ಟಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ದೀಪಕ್ ಎನ್. ದುರ್ಗ ಉಪಸ್ಥಿತರಿದ್ದರು. ದೀಪಕ್ ದುರ್ಗಾ ಸ್ವಾಗತಿಸಿ, ಆಕಾಂಕ್ಷ ಅತಿಥಿಗಳ ಪರಿಚಯ ವಾಚಿಸಿದರು. ಅಮೃತ ನಿರೂಪಿಸಿ ಕೀರ್ತನಾ ವಂದಿಸಿದರು