Categories
ರಾಜಕೀಯ

ಮುರುಘಾಮಠಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ

  • ಡಿ ಕೆ ಶಿವಕುಮಾರ್, ಬಿ ಕೆ ಹರಿಪ್ರಸಾದ್ ಸಾಥ್
  • ಮುರುಘಾ ಶ್ರೀಗಳಿಂದ ರಾಹುಲ್ ಗಾಂಧಿಗೆ ಸನ್ಮಾನ

NAMMUR EXPRESS NEWS
ಚಿತ್ರದುರ್ಗ: ಸಿದ್ಧರಾಮೋತ್ಸವ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಬುಧವಾರ ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಿದ್ದಾರೆ.
ಬುಧವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಚಿತ್ರದುರ್ಗಕ್ಕೆ ಬಂದಿಳಿದ ರಾಹುಲ್ ಗಾಂಧಿ ಮುರುಘಾ ಮಠಕ್ಕೆ ಭೇಟಿ ನೀಡಿ ಡಾ. ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಏಐಸಿಸಿ ಪ್ರದಾನ ಕಾರ್ಯದರ್ಶಿ ವೇಣುಗೋಪಾಲ್. ಕಾರ್ಯಧ್ಯಕ್ಷ ಸಲೀಂ ಆಹಮ್ಮದ್, ರಾಜ್ಯ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕರಾದ ಡಾ.ಅರ್.ಎಂ.ಮಂಜುನಾಥಗೌಡ, ಚಿತ್ರದುರ್ಗ ಡಿಸಿಸಿ ಅಧ್ಯಕ್ಷ ತಾಜ್ ಪೀರ್, ಪಿಸಿಸಿ ಪ್ರದಾನ ಕಾರ್ಯದರ್ಶಿ ಪಿ.ಓ.ಶಿವಕುಮಾರ್, ಶಿವಮೊಗ್ಗ ಜಿಲ್ಲಾ ವಕ್ತಾರ ಎಂ.ರಮೇಶ್ ಶಂಕರಘಟ್ಟ ಇದ್ದರು. ಇನ್ನು ರಾಹುಲ್ ಗಾಂಧಿಗೆ ಮುರುಘಾಶ್ರೀಗಳು ಹಾರ ಶಾಲು ಹಾಕಿ ಬಸವಣ್ಣನವರ ಫೋಟೊ ನೀಡಿ ಸನ್ಮಾನಿಸಿದರು.
ರಾಹುಲ್ ಗಾಂಧಿ ಅವರು ಮಠದ ಸ್ವಾಮೀಜಿಗಳ ಜೊತೆಗೆ ಸಂವಾದ ನಡೆಸಲಿದ್ದಾರೆ. ನಂತರ ಸಿದ್ದರಾಮಯ್ಯ ಅವರ ಜನ್ಮದಿನದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Categories
ಶಿಕ್ಷಣ

6342 ಬ್ಯಾಂಕ್ ಆಫೀಸರ್‌ಗಳ ಹುದ್ದೆಗೆ ಐಬಿಪಿಎಸ್ ಅಧಿಸೂಚನೆ

NAMMUR EXPRESS NEWS
ಬೆಂಗಳೂರು: ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 2023-24ನೇ ಸಾಲಿನ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಪ್ರೊಬೆಷನರಿ ಆಫೀಸರ್ ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆ ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಈ ಬಾರಿ 12 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಒಟ್ಟು 6342 ಹುದ್ದೆಗಳನ್ನು ಭರ್ತಿ ಮಾಡಲು ಐಬಿಪಿಎಸ್ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸು ತಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 02ರಿಂದ ಅವಕಾಶ ನೀಡಲಾಗಿದೆ. ಕೆನರಾ ಬ್ಯಾಂಕ್ 2500
ಹುದ್ದೆಗಳಿಗೆ, ಯುಕೋಬ್ಯಾಂಕ್ 2094 ಆಫೀಸರ್‌ಗಳನ್ನು ಐಬಿಪಿಎಸ್ ಮೂಲಕ ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ. ಕಳೆದ ವರ್ಷ 4135 ಹುದ್ದೆಗಳಿಗೆ ನೇಮಕ ನಡೆಸಿರುವ ಐಬಿಪಿಎಸ್ ಈ ಬಾರಿ 6342 ಹುದ್ದೆಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ನೇಮಕ ಸಂಬಂಧ ಇದೇ ಅಕ್ಟೋಬರ್‌ನಲ್ಲಿ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನವೆಂಬರ್‌ನಲ್ಲಿ ನಡೆಸಲಾಗುವುದು ಎಂದು ಐಬಿಪಿಎಸ್ ತಿಳಿಸಿದೆ.

Categories
ಜಿಲ್ಲಾ ವಾರ್ತೆ

ಕಂಡಿಲ್ ಮೋಟರ್ಸ್
ಎಪಿ ರಸ್ತೆ ತೀರ್ಥಹಳ್ಳಿ
ವರಮಹಾಲಕ್ಷ್ಮೀ ಹಬ್ಬದ ವಿಶೇಷ ಕೊಡುಗೆ

  • ವಿಶೇಷ ಎಕ್ಸ್‌ಚೇಂಜ್ ಆಫರ್
  • ಪ್ರತಿ ವಾಹನ ಖರೀದಿಗೆ 20 ಗ್ರಾಂ ಬೆಳ್ಳಿನಾಣ್ಯ
    ಸಂಪರ್ಕಿಸಿ: 9008625488, 08181-227999
    0% ಬಡ್ಡಿದರದಲ್ಲಿ ಸುಲಭ ಸಾಲ ಸೌಲಭ್ಯ
Categories
Uncategorized

ಆರಗ ಗೃಹ ಸಚಿವರಾಗಿ 1 ವರ್ಷ

ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ

ಅಭಿನಂದನೆಗಳು

ಅರಗ ಜ್ಞಾನೇಂದ್ರ ಗೃಹ ಮಂತ್ರಿಯಾಗಿ ಒಂದು ವರ್ಷ ಪೂರೈಸಿದ್ದು ಇದೀಗ ತೀರ್ಥಹಳ್ಳಿ ಕ್ಷೇತ್ರ ಸೇರಿದಂತೆ ರಾಜ್ಯದ ಹಲವೆಡೆ ಅವರಿಗೆ ಶುಭಾಶಯಗಳ ಮಹಾಪುರ ಹರಿದು ಬರುತ್ತಿದೆ.

ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿ, ಪ್ರಾಮಾಣಿಕ, ಕಪ್ಪುಚುಕ್ಕೆ ಇಲ್ಲದ ಬಿಜೆಪಿ ಮುಖಂಡನಾಗಿ, ಜನರ ಕಷ್ಟ ಸುಖಗಳಿಗೆ ಜತೆಯಾದವರು. ಮತ್ತಷ್ಟು ಅಭಿವೃದ್ಧಿ ಕೆಲಸ ಆಗಲಿ, ಜ್ಞಾನೇಂದ್ರ ಅವರಿಗೆ ಇನ್ನಷ್ಟು ಸೇವೆ ಮಾಡುವ ಅವಕಾಶ ಸಿಗಲಿ.

ಶುಭಾಶಯ ಕೋರುವವರು

ಬಿಜೆಪಿ ಕಾರ್ಯಕರ್ತರು, ಮುಖಂಡರು, ತೀರ್ಥಹಳ್ಳಿ ಕ್ಷೇತ್ರ

ಆರಗ ಜ್ಞಾನೇಂದ್ರ ಅವರಿಗೆ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದಲ್ಲಿ ಅಭಿನಂದನಾ ಜಾಹೀರಾತು ಹಾಕಿಸಲು ಕರೆ ಮಾಡಿ

ಜಾಹೀರಾತು ಸಂಖ್ಯೆ: 9480181535

Categories
ಬೆಂಗಳೂರು

4 ತಿಂಗಳಲ್ಲಿ ಕೊರೋನಾ ಪ್ರಕರಣ ಭಾರಿ ಏರಿಕೆ

  • ನಿರಂತರ ಏರಿಕೆ ಕಾಣುತ್ತಿರುವ ಹೊಸ ಪ್ರಕರಣ
  • ಆದರೆ ಸೋಂಕು ಸಾಮಾನ್ಯ ಜ್ವರದ ಮಟ್ಟಕ್ಕೆ ಇಳಿಕೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ ಎರಡು ಸಾವಿರದಷ್ಟಿದ್ದ ಹೊಸ ಪ್ರಕರಣಗಳ ಸಂಖ್ಯೆ ಜುಲೈ ಮಾಸದಲ್ಲಿ 40 ಸಾವಿರಕ್ಕೆ ಸಮೀಪಿಸಿದೆ. ಆದರೆ ಸೋಂಕಿನ ತೀವ್ರತೆ ಕಡಿಮೆ ಇದ್ದು ಕೋವಿಡ್ ಸಾಮಾನ್ಯ ವೈರಲ್ ಜ್ವರದ ಮಟ್ಟಕ್ಕೆ ಇಳಿದಿದೆ ಎಂದು ತಜ್ಞರು ಹೇಳುತ್ತಾರೆ.
ಹೊಸ ಅಪಾಯಕಾರಿ ತಳಿಗಳು ಕಂಡುಬಂದಿಲ್ಲ. ಆದ್ದರಿಂದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಮತ್ತು ಲಸಿಕೆ ಪಡೆಯುವುದರಿಂದ ಸೋಂಕು ಹರಡುವುದನ್ನು ಹತೋಟಿಗೆ ತರಬಹುದು, ಬೇರೆ ಕಠಿಣ ಕ್ರಮದ ಕಠಿಣ ಕ್ರಮದ ಅಗತ್ಯವಿಲ್ಲ ಎಂದು ಸಾಂಕ್ರಾಮಿಕ ತಜ್ಞರು
ವಿವರಿಸುತ್ತಾರೆ. ರಾಜ್ಯದಲ್ಲಿ ಕೋವಿಡ್ ವೇಗವಾಗಿ ಹಬ್ಬಲು ಪ್ರಾರಂಭಿಸಿದ 2020ರ ಜುಲೈ ತಿಂಗಳ ಬಳಿಕದ ಕನಿಷ್ಠ ಪ್ರಕರಣ 2022ರ ಏಪ್ರಿಲ್‌ನಲ್ಲಿ ದಾಖಲಾಗಿತ್ತು. ಆದರೆ ಆ ಬಳಿಕ ನಿರಂತರವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಇದೀಗರಾಜಕೀಯ ಸಮಾರಂಭಗಳು, ಹಬ್ಬಹರಿದಿನಗಳು ಕಳೆಗಟ್ಟುತ್ತಿರುವ ಆಗಸ್ಟ್ ಹೊತ್ತಿಗೆ ಸೋಂಕಿತರ ಸಂಖ್ಯೆ ಮತ್ತು ಮರಣದ ಸಂಖ್ಯೆಯೂ ಏರಿದೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ.ಎಂ.ಕೆ.ಸುದರ್ಶನ್ ಅವರು, ಕೋವಿಡ್ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಆಸ್ಪತ್ರೆಯ ದಾಖಲೀಕರಣ ಕಡಿಮೆಯೇ ಇದೆ. ಜುಲೈನಲ್ಲಿ 29 ಮಂದಿ ಮೃತರಾಗಿದ್ದು ಈ ಪೈಕಿ 26 ಮಂದಿ ಸಹ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಸೋಂಕಿತರ ಸಂಖ್ಯೆ ಪತ್ತೆ ಆಗುತ್ತಿದ್ದರೂ ಸೋಂಕಿನ ಗುಣ ಲಕ್ಷಣ ಗಂಭೀರವಾಗಿಲ್ಲ. ಜಗತ್ತಿನ ಯಾವುದೇ ಭಾಗದಲ್ಲಿ ಕೋವಿಡ್ ತೀವ್ರತೆ ಹೆಚ್ಚಿಸುವ ತಳಿ ಸದ್ಯಕ್ಕೆ ವರದಿ ಆಗಿಲ್ಲ. ಆದ್ದರಿಂದ ಜನರು ಈ ಬಗ್ಗೆ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ. ಹೊಸ ಕಠಿಣ ಕ್ರಮಗಳ ಅಗತ್ಯ ಕೂಡ ಇಲ್ಲ ಎಂದು ಹೇಳುತ್ತಾರೆ.

Categories
ಜಿಲ್ಲಾ ವಾರ್ತೆ

ಕಾಂಗ್ರೆಸ್ ಗೆ ಅಮೃತ ಮಹೋತ್ಸವ

  • ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಧ್ಯ ಕರ್ನಾಟಕದ ಜಿಲ್ಲೆಗಳ ನಾಯಕರಿಗೆ ಸಿಕ್ಕ ದೊಡ್ಡ ಬೂಸ್ಟ್

NAMMUR EXPRESS NEWS
ದಾವಣಗೆರೆ : ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಆ.3ರಂದು ನಡೆಯುವ ಸಿದ್ದರಾಮಯ್ಯ ಅಮೃತ ಮಹೋತ್ಸವವು ಹಳೆ ಮೈಸೂರು-ಉತ್ತರ ಕರ್ನಾಟಕ – ಮಲೆನಾಡು-ಬಯಲು ಜಿಲ್ಲೆಗಳ ಕಾಂಗ್ರೆಸ್ ಮುಖಂಡರಿಗೆ ಶಕ್ತಿ ತುಂಬುವ ಜೊತೆಗೆ ಅನೇಕರ ರಾಜಕೀಯ ಮರು ಹುಟ್ಟಿಗೂ ವೇದಿಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.
ಸಿದ್ದರಾಮಯ್ಯ ಕೇವಲ ಅಹಿಂದ ವರ್ಗದ ನಾಯಕನಲ್ಲ, ಎಲ್ಲಾವರ್ಗದ ಜನ ಮೆಚ್ಚುವಂತಹ ಆಡಳಿತ ನೀಡಿದ್ದ ವ್ಯಕ್ತಿ. ಈ ಹಿನ್ನೆಲೆಯಲ್ಲಿ ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ನಾಯಕರು, ಭವಿಷ್ಯದ ನಾಯಕರ ರಾಜಕೀಯ ಜೀವನಕ್ಕೆ ಸಿದ್ದರಾಮಯ್ಯ ಅಮೃತ ಮಹೋತ್ಸವವು ರಾಜಕೀಯ ದಿಕ್ಸೂಚಿ ಯಾಗುವುದು ಅಷ್ಟೇ ನಿಶ್ಚಿತ.
ಚುನಾವಣೆಗೆ ರಣಕಹಳೆ: ಅಮೃತ ಮಹೋತ್ಸವಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ, ಮಲ್ಲಿಕಾರ್ಜುನಖರ್ಗೆ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಗಮಿಸಲಿದ್ದಾರೆ. ಇಡೀ ಸಮಾರಂಭದ ಕೇಂದ್ರ ಬಿಂದುವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ಜನ್ಮದಿನಕ್ಕೆ ಶುಭಾರೈಸುವ ಮೂಲಕಮಧ್ಯ ಕರ್ನಾಟಕದಿಂದಲೇ ಕಾಂಗ್ರೆಸ್ ನಾಯಕರು ಮುಂಬರುವ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸುವ ಸಾಧ್ಯತೆಯೂ ಇಲ್ಲದಿಲ್ಲ.
ಉತ್ತಾಹ ನೂರ್ಮಡಿ: ವಿಧಾನಸಭೆ ಚುನಾವಣೆಗೆ ಪೂರ್ವದಲ್ಲೇ ಕಾಕತಾಳಿಯವೆಂಬಂತೆ ಕಾಂಗ್ರೆಸ್‌ಗೆ ಶಕ್ತಿ ಪ್ರದರ್ಶನಕ್ಕೆ ಅಮೃತ ಮಹೋತ್ಸವ ಒಂದು ಅವಕಾಶವಾಗಿ ಮೂಡಿ ಬಂದಿದೆ. ಕಾಂಗ್ರೆಸ್ಸಿನ ಬದ್ಧವೈರಿ ಬಿಜೆಪಿಯ ತಂತ್ರಗಾರಿಕೆಯಿಂದಾಗಿ ಅಧಿಕಾರವನ್ನು ಕಳೆದುಕೊಂಡಕಾಂಗ್ರೆಸ್‌ ಮರೆತಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ರಂಗೇರುವಂತೆ ಲಕ್ಷಾಂತರ ಕಾರ್ಯಕರ್ತರಲ್ಲಿ ಅಮೃತ ಮಹೋತ್ಸವವು ಅಮೃತವಾಗಿ ಹೊರ ಹೊಮ್ಮಿದರೂ ಅಚ್ಚರಿ ಇಲ್ಲ. ಕಾರ್ಯಕ್ರಮಕ್ಕೆ ವ್ಯಕ್ತವಾಗುತ್ತಿರುವ ಬೆಂಬಲ ಗಮನಿಸಿದರೆ ಕಾಂಗ್ರೆಸ್ಸಿನ ಉತ್ಸಾಹ ನೂರ್ಮಡಿಯಾಗುವುದರಲ್ಲಿ ಅನುಮಾನವೂ ಇಲ್ಲ.
ಕಳೆದ ಎರಡು ವಾರಗಳಿಂದಲೂ ರಾಜ್ಯವ್ಯಾಪಿ ಈ ಸಿದ್ದರಾಮಯ್ಯ ಅಮೃತಮಹೋತ್ಸವದ್ದೇ ಚರ್ಚೆ. ಅದರಲ್ಲೂ ದಾವಣಗೆರೆ ಜಿಲ್ಲಾದ್ಯಂತ ಸಮಾರಂಭಕ್ಕೆ ಪಕ್ಷದಮುಖಂಡರು, ಪದಾಧಿಕಾರಿ, ಕಾರ್ಯಕರ್ತರಾದಿಯಾಗಿ ಇದು ತಮ್ಮದೇ ಕಾರ್ಯಕ್ರಮವೆಂಬಂತೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅಮೃತ ಮಹೋತ್ಸವ ಹೆಸರಿಗೆ ತಕ್ಕಂತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾಲಿಗೆ ಅಮೃತವಾಗಲಿದೆಯೆಂಬ ವಿಶ್ವಾಸವನ್ನು ಹಳ್ಳಿಯಿಂದ ದಿಲ್ಲಿವರೆಗಿನ ನಾಯಕರು ವ್ಯಕ್ತಪಡಿಸುತ್ತಿದ್ದಾರೆ. ಇಡೀ ಕಾರ್ಯಕ್ರಮದ ಸಿದ್ಧತೆಗೆ ಕೈ ಟೊಂಕಕಟ್ಟಿನಿಂತವರ ಉತ್ಸಾಹನೋಡುವಂತಿತ್ತು.
ಕೃಪಾಕಟಾಕ್ಷಕ್ಕಾಗಿ ಪ್ರಯತ್ನ: ರಾಜಕೀಯ ಸ್ಥಾನಮಾನ ಬಯಸುತ್ತಿರುವ ಆಕಾಂಕ್ಷಿಗಳು, ಭವಿಷ್ಯದ ನಾಯಕರು, ಅವಕಾಶ ವಂಚಿತ ಮುಖಂಡರು, ಮೀಸಲು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು, ಯುವ ಮುಖಂಡರು ತಮ್ಮ ನಾಯಕರ ಕೃಪಾಕಟಾಕ್ಷಕ್ಕಾಗಿ ಪ್ರಯತ್ನ ನಡೆಸಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ ಮತ್ತೆ ಪ್ರಾಬಲ್ಯ ಸಾಧಿಸುವುದು, ಶಿವಮೊಗ್ಗದಲ್ಲೂ ಕೈ ಹಿಡಿತ ಬಲಪಡಿಸುವುದುಕಾಂಗ್ರೆಸ್ಸಿನ ಲೆಕ್ಕಾಚಾರ.ನಾಡಿನ ಮೂಲೆ ಮೂಲೆಯಿಂದಲೂ ಪಕ್ಷದ ಮುಖಂಡರು,
ಕಾರ್ಯಕರ್ತರು, ಹಿತೈಷಿಗಳು, ಸಿದ್ದರಾಮಯ್ಯ ಅನುಯಾಯಿಗಳುದಾವಣಗೆರೆಯತ್ತ ಆಗಮಿಸುತ್ತಿ ರುವುದು ಶ್ರಾವಣಮಾಸದಲ್ಲಿ ಕಾಂಗ್ರೆಸ್‌ ಪಾಳೆಯಕ್ಕೆ ಶುಭ ಸೂಚನೆಯಾಗಿ, ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ.
ಬಿಡುವಿಲ್ಲದ ದಶಕಗಳಿಂದಲೂ ಸಿದ್ದರಾಮಯ್ಯ ಜೊತೆಗೆ ಗುರುತಿಸಿಕೊಂಡ ನಾಯಕರೂ ಕಳೆದ 2-3 ವಾರಗಳಿಂದಲೂ ಬಿಡುವಿಲ್ಲದೇ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದು, ಆ.3ರಂದು ನಡೆಯುವ ಯಶಸ್ವಿ ಕಾರ್ಯಕ್ರಮಕಣ್ಣುಂಬಿಕೊಳ್ಳುವ ತವಕದಲ್ಲಿದ್ದಾರೆ. ಅಮೃತ ಮಹೋತ್ಸವದ ಬಗ್ಗೆ ಜನರಿಂದ ವ್ಯಕ್ತವಾಗುತ್ತಿರುವ ಕುತೂಹಲ ಸ್ವತಃ ಸಿದ್ದರಾಮಯ್ಯನವರಿಗೂ ಪುಳಕಿತರನ್ನಾಗಿಸಿದೆ. ತಮ್ಮ ತಮ್ಮ ನಾಯಕರಿಗೆ ಮುಖಂಡರು ಕಾರ್ಯಕ್ರಮದ ಸರ್ವಸಿದ್ಧತೆಗಳ ಬಗ್ಗೆ ಇಂಚಿಂಚು ಮಾಹಿತಿ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅಭಿಮಾನಿಗಳು ವೀಡಿಯೋ ಕಾಲ್ ಮಾಡಿ, ಫೋಟೋ ತೆಗೆದುಕೊಂಡು ಸೋಷಿಯಲ್ ಮೀಡಿಯಾಗಳಲ್ಲೂ ಹರಿ ಬಿಡುತ್ತಿದ್ದಾರೆ. ಇಡೀ ಊರು, ಜಿಲ್ಲೆ ಸಿದ್ದರಾಮಯ್ಯನವರ ಪ್ಲೆಕ್ಸ್ ಬ್ಯಾನರ್, ಕಟೌಟ್‌ಗಳಿಂದ ರಾರಾಜಿಸುತ್ತಿದೆ. ಪ್ರಮುಖ ವೃತ್ತ, ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ರಸ್ತೆಗಳಲ್ಲಿ ಪ್ಲೆಕ್ಸ್‌ಗಳು ಗಮನ ಸೆಳೆಯುತ್ತಿವೆ.
‘ಒಟ್ಟಾರೆ, ಬಿಜೆಪಿ ತಂತ್ರಗಾರಿಕೆಯಿಂದ ವಿಪಕ್ಷ ಸ್ಥಾನದಲ್ಲಿ ಕೂತಿರುವಕಾಂಗ್ರೆಸ್‌ ಪಕ್ಷವುಮೈ ಕೊಡವಿ, ಮತ್ತೆ ಚುನಾವಣೆಯನ್ನು ಎದುರಿಸಲು ದಾವಣಗೆರೆಯಲ್ಲಿ ಶಕ್ತಿ ತುಂಬುವ ಕೆಲಸವಂತೂ ಆಗಲಿದೆ. ಈಗಾಗಲೇ ಎಲ್ಲಾನಾಯಕರು ಇತ್ತ ಕಡೆ ಬರುತ್ತಿದ್ದು, ರಾಹುಲ್ ಗಾಂಧಿ, ಖರ್ಗೆ, ವೇಣುಗೋಪಾಲ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಏನು ಸಂದೇಶ ನೀಡುತ್ತಾರೆಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಅಲ್ಲದೇ, ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಹುಲಿಯಾ ಜೊತೆಗೆ ಮತ್ತಷ್ಟು ಹೊಸ ಘೋಷಣೆ, ಬಿರುದುಗಳನ್ನು ಸಿದ್ದರಾಮಯ್ಯ ಅಭಿಮಾನಿಗಳು ದಯಪಾಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

Categories
ಜಿಲ್ಲಾ ವಾರ್ತೆ

ಕೆಲವು ದಿನಗಳ ಬಿಡುವು ಬಳಿಕ ಮುಂಗಾರು ಆರ್ಭಟ

  • ಅರ್ಧ ರಾಜ್ಯ ತತ್ತರ, 550ಕ್ಕೂ ಹೆಚ್ಚು ಮನೆ ಜಲಾವೃತ
  • ಮಳೆಯಬ್ಬರಕ್ಕೆ11 ಬಲಿ, 30ಕ್ಕೂ ಅಧಿಕ ಕೆರೆ ಕೋಡಿ

NAMMUR EXPRESS NEWS
ಬೆಂಗಳೂರು :ಹಲವು ದಿನಗಳ ಬಿಡುವಿನ ಬಳಿಕ ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮತ್ತೆ ಮಳೆ ಅಬ್ಬರಿಸಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಮನೆ ಯೊಂದರ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿ ಆಗಿದ್ದು ಸೇರಿ. ರಾಜ್ಯದಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಮಂಗಳವಾರ ಒಟ್ಟು 11 ಮಂದಿ ಬಲಿಯಾಗಿದ್ದಾರೆ. ಭಟ್ಕಳವೊಂದರಲ್ಲೇ 400ಕ್ಕೂ ಹೆಚ್ಚು ಸೇರಿ ರಾಜ್ಯಾದ್ಯಂತ 550ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಬಿಡದೆ ಸುರಿದ ಮಳೆಯಿಂದಾಗಿ ರಾಜ್ಯಾದ್ಯಂತ 30ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದಿದ್ದು, ಬೆಂಗಳೂರು-ಮೈಸೂರು, ಭಟ್ಕಳ-ಪುಣೆ ಹೆದ್ದಾರಿ ಸೇರಿ 18ಕ್ಕೂ ಕಡೆ ರಸ್ತೆಸಂಪರ್ಕ ಕಡಿತಗೊಂಡಿದೆ. ನೂರಾರು ಹೆಕ್ಟೇರ್ ‘ರೈತರ ಹೊಲಗಳಿಗೆ ನೀರು ನುಗ್ಗಿ ಭಾರೀ ಹಾನಿಯಾಗಿದೆ. ಮಳೆಯಬ್ಬರ ಹಿನ್ನೆಲೆಯಲ್ಲಿ ಗದಗ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳು ಹಾಗೂ ಭಟ್ಕಳ, ಬೈಂದೂರು, ಕುಂದಾಪುರ ತಾಲ್ಲೂಕು ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.
ನಾಲ್ವರು ನೀರು ಪಾಲು: ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿದ ಪರಿಣಾಮ ವಿಜಯನಗರ ಜಿಲ್ಲೆಯ ಗರಗ-ನಾಗಲಾಪುರದಲ್ಲಿ ಹಳ್ಳ ದಾಟಲು ಹೋದರೈತ ಬೊಮ್ಮಪ್ಪ(55), ತುಮಕೂರು ಜಿಲ್ಲೆಶಿರಾದ ಚೆನ್ನನಕುಂಟೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹಳ್ಳದಾಟುವಾಗ ಶಿಕ್ಷಕ ಆರೀಫ್ ಉಲ್ಲಾ(55), ಬಳ್ಳಾರಿಯ ಸಂಡೂರು ತಾಲ್ಲೂಕಿನ ಅಂಕಮನಾಳದಲ್ಲಿ ಬೈಕ್‌ನಲ್ಲಿ ಸೇತುವೆ ದಾಟುವಾಗ ಕೃಷ್ಣಕುಮಾರ್ ಮತ್ತು ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಕೆಲ್ಲೂರು ಹೊಸಕೋಟೆ ಸೇತುವೆಯಲ್ಲಿ ಬೈಕ್‌ನಿಂದ ಕೆಳಗೆ ಬಿದ್ದ ಹೆಲ್ಮೆಟ್ ಎತ್ತಿಕೊಳ್ಳಲು ಹೋಗಿ ಕಾರ್ತಿಕ್ (17) ನೀರುಪಾಲಾಗಿದ್ದಾರೆ.

Categories
ಅಂತಾರಾಷ್ಟ್ರೀಯ ಸುದ್ದಿ

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ವಿದ್ವಂಸಕ ಕೃತ್ಯ ಶಂಕೆ

  • ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ
  • ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನಕಣ್ಣಿಡಲು ಸೂಚನೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಕೆಲವು ಸಮಾಜ ಘಾತುಕ ಶಕ್ತಿಗಳು ಸ್ವಾತಂತ್ರ್ಯ ದಿನಾಚರಣೆ ಮುನ್ನ ವಿದ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ. ಆ.15ರ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಮಂಗಳೂರು, ಉಡುಪಿ, ಕಾರವಾರ (ಭಟ್ಕಳ), ಮಡಿಕೇರಿ, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಕಡೆ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಬೇಕೆಂದು ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೇಂದ್ರ ಗುಪ್ತಚರ ವಿಭಾಗವು ಗೃಹ ಇಲಾಖೆಗೆ ಸೂಚನೆ ಕೊಟ್ಟಿದ್ದು,ಕೆಲವು ಸಮಾಜಘಾತುಕ ಶಕ್ತಿಗಳು ಸ್ವಾತಂತ್ರ್ಯ ದಿನಾಚರಣೆ ಮುನ್ನ ವಿದ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿ ಕುಳಿತಿವೆ.ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನಕಣ್ಣಿಡಬೇಕು.ಗುಪ್ತಚರ ವಿಭಾಗ ಅಂತರಿಕ ಭದ್ರತೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ಗೃಹ ಇಲಾಖೆಯು ಸೂಚನೆ ಕೊಟ್ಟಿದೆ ಎಂದು ತಿಳಿದುಬಂದಿದೆ ಇತ್ತಿಚೆಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಐಸಿಸ್‌ ಉಗ್ರಗಾಮಿ ಸಂಘಟನೆಗಳ ಪರ ಒಲವು ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಬೆಂಗಳೂರಿನಲ್ಲಿ ಬಂಧಿಸಿದ್ದ ಕಾಶ್ಮೀರದ ಉಗ್ರ ಹಾಗೂ ಕಳೆದ ಭಾನುವಾರ ರಾಷ್ಟ್ರೀಯ ತನಿಖಾ ದಳ (ಎನ್‌ ಐಎ) ನಡೆಸಿದ ದಾಳಿ ವೇಳೆ ಕೆಲವು ಶಂಕಿತರನ್ನು ವಿಚಾರಣೆಗೊಳಪಡಿಸಿತ್ತು.
ಈ ವೇಳೆ ಕಾಶ್ಮೀರ, ಜಮ್ಮು,ರಾಜಸ್ಥಾನ, ಉತ್ತರಪ್ರದೇಶ,ದೆಹಲಿ ಮತ್ತಿತರ ಕೆರೆ, ಕೆಲವು ಶಂಕಿತರು ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ಬೀಡು ಬಿಟ್ಟಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ವಿದ್ವಂಸಕ ಕೃತ್ಯ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಎಚ್ಚರಿಸಿದೆ.
ವಿಶೇಷವಾಗಿ ಯುವಿಎ ಹಾಗೂ ಆಫ್ರಿಕಾ ರಾಷ್ಟ್ರಗಳಿಂದ ಆಗಮಿಸುವ ಜನಗಳ ಮೇಲೆ ಕಣ್ಣಿಡಬೇಕು ವಿಮಾನ ನಿಲ್ದಾಣದಲ್ಲಿ ಬರುವ ಪ್ರತಿಯೊಬ್ಬ ಪ್ರಯಾಣಿಕರ ಮಾಹಿತಿಯನ್ನು ಕಲೆ ಹಾಕಬೇಕು ಅವರು ಯಾವ ಕಾರಣಕ್ಕಾಗಿ ಬಂದಿದ್ದಾರೆ.ಎಲ್ಲಿ ವಾಸ್ತವ್ಯ ಹೂಡಲಿದ್ದಾರೆ.ಕರ್ತವ್ಯ ನಿರ್ವಹಿಸುವ ಸ್ಥಳ ಸೇರಿದಂತೆ ಇಂಚಿಂಚು ಮಾಹಿತಿಯನ್ನು ಕಲೆ ಹಾಕುವಂತೆ ಸೂಚಿಸಿದೆ.
ಅಲ್ಲದೇ ವಿಮಾನ ನಿಲ್ದಾಣ ಬಂದರು ಸೇರಿದಂತೆ ಮತ್ತಿತರ ಕಡೆ ಹದ್ದಿನ ಕಣ್ಣಿಡಬೇಕು,ಯಾವುದೆ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರೆ ತಕ್ಷಣವೇ ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸುವಂತೆ ಸಲಹೆ ಮಾಡಿದೆ.
ಕರ್ನಾಟಕದ ಪ್ರಮುಖ ಸ್ಥಳಗಳಾದ ವಿಧಾನಸೌಧ,ಹೈಕೋರ್ಟ್‌ ವಿಕಾಸ ಸೌಧ ಉದ್ಯೋಗ ಸೌಧ, ಮುಖ್ಯಮಂತ್ರಿಗಳ ನಿವಾಸ,ರಾಜಭವನ,ಕೆಂಪೇಗೌಡ ಬಸ್‌ ನಿಲ್ದಾಣ,ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ,ಮೆಟ್ರೋ ರೈಲ್ವೇ ನಿಲ್ದಾಣ,ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳು,ಐಟಿಬಿಟಿ ಕಂಪನಿಗಳು,ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಕೆಆರ್‌ಎಸ್‌, ತುಂಗಭದ್ರ,ಭದ್ರಾ,ಕಬಿನಿ ಸೇರಿದಂತೆ ಪ್ರವಾಸಿ ತಾಣಗಳು,ಧಾರ್ಮಿಕ ಕೇಂದ್ರ ಗಳಲ್ಲೂ
ಭದ್ರತೆ ಹೆಚ್ಚಿಸಬೇಕೆಂದು ಗೃಹ ಇಲಾಖೆ ಸೂಚನೆ ಕೊಟ್ಟದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಸಚಿವ ಆರಗ – ಜ್ಞಾನೇಂದ್ರ ಅವರು ಹಿರಿಯ ಪೋಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಭದ್ರತೆ ಕೈಗೊಳ್ಳಬೇಕೆಂದು ಸೂಚನೆ ಈ ನೀಡಿದ್ದಾರೆ.ಯಾವುದೇ ಕಾರಣಕ್ಕೂ ಭದ್ರತೆಯಲ್ಲಿ ಒಂದಿಷ್ಟು ಲೋಪವಾಗದಂತೆ ಕಟ್ಟೆಚ್ಚರ ವಹಿಸಬೇಕು,ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Categories
ರಾಜಕೀಯ

ಸಿದ್ದರಾಮಯ್ಯ ಜನ್ಮದಿನದಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ!

  • ಕೇಕ್ ತಿನ್ನಿಸಿ ಸಂಭ್ರಮ ಆಚರಿಸಿದ ಎಲ್ಲಾ ನಾಯಕರು
  • ಡಿಕೆಶಿ, ಹರಿಪ್ರಸಾದ್ ಸೇರಿ ಬಹುತೇಕ ನಾಯಕರು ಹಾಜರ್

NAMMUR EXPRESS NEWS
ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ 75ನೇ ಜನ್ಮದಿನಾಚರಣೆಯನ್ನು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಮಂಗಳವಾರ ತಡ ರಾತ್ರಿಯೇ ಇಲ್ಲಿನ ವಿಮಾನ ನಿಲ್ದಾಣದ ಎದುರಿಗೆ ಇರುವ ಫಾರ್ಚೂನ್ ಹೊಟೇಲ್ ನಲ್ಲಿ ಆಚರಿಸಿ ಸಂಭ್ರಮಿಸಿದರು.
ಸಿದ್ಧರಾಮಯ್ಯ ಅವರು ಕೇಕ್ ಕತ್ತರಿಸುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ಧರಾಮಯ್ಯ ಅವರಿಗೆ ಕೇಕ್ ತಿನಿಸಿ ಜನ್ಮದಿನ ಶುಭಾಶಯ ಕೋರಿದರು.
ಎಲ್ಲರೂ ಹ್ಯಾಪಿ ಬರ್ತ್ ಡೇ ಎಂದು ಶುಭಾಶಯ ಕೋರುತ್ತಿರುವಾಗಲೇ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ಯುನಿಟಿ ಕೇಕ್ ಎಂದು ಹೇಳುವ ನಗೆ ಚಟಾಕಿ ಹಾರಿಸಿದರು.
ಪಕ್ಷದ ಹಿರಿಯ ನಾಯಕರಾದ ಆರ್.ವಿ ದೇಶಪಾಂಡೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ , ಮಾಜಿ ಸಚಿವ ಎಂ.ಬಿ ಪಾಟೀಲ್ , ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಸೇರಿದಂತೆ ಅನೇಕ ಮುಖಂಡರಿದ್ದರು.
ದಾವಣಗೆರೆಯಲ್ಲಿ ಸಿದ್ಧರಾಮೋತ್ಸವ ಕಾರ್ಯಕ್ರಮಕ್ಕೂ ಮುನ್ನವೇ ಸಿದ್ಧರಾಮಯ್ಯ ಅವರಿಗೆ ಅವರ ರಾಜಕೀಯ ಒಡನಾಡಿಗಳು ಹೊಟೇಲ್ ನಲ್ಲಿ ಕೇಕ್ ಕತ್ತರಿಸಿ ಜನ್ಮದಿನದ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.

Categories
ಜಿಲ್ಲಾ ವಾರ್ತೆ

ಚುನಾವಣಾ ಆಯೋಗದಿಂದ ರಾಷ್ಟ್ರವ್ಯಾಪಿ ಆಧಾರ್-ವೋಟರ್ ಐಡಿ ಲಿಂಕ್ ಅಭಿಯಾನ ಪ್ರಾರಂಭ!

  • ಆಧಾರ್-ವೋಟರ್ ಐಡಿ ಲಿಂಕ್‌ನ ಉದ್ದೇಶ

NAMMUR EXPRESS NEWS
ಮತದಾರರ ಗುರುತಿನ ಚೀಟಿಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಭಾರತದ ಚುನಾವಣಾ ಆಯೋಗ ಅಭಿಯಾನವನ್ನು ಪ್ರಾರಂಭಿಸಿದೆ. ರಾಷ್ಟ್ರವ್ಯಾಪಿ ಈ ಅಭಿಯಾನವನ್ನು ಕೈಗೊಳ್ಳುವಂತೆ ಆಯೋಗವು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ಹೇಳಿದೆ. “ಚುನಾವಣಾ ಆಯೋಗದ ಸೂಚನೆಯ ಮೇರೆಗೆ, ಮತದಾರರ ಪಟ್ಟಿಯಲ್ಲಿ ದಾಖಲಾಗಿರುವ ಮತದಾರರಿಂದ ಸ್ವಯಂಪ್ರೇರಿತವಾಗಿ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸುವ ಪ್ರಕ್ರಿಯೆಯು ಆಗಸ್ಟ್ 1ರಿಂದ ಪ್ರಾರಂಭವಾಗಲಿದೆ’ ಎಂದು ಉತ್ತರ ಪ್ರದೇಶದ ಸಿಇಒ ಅಜಯ್ ಕುಮಾರ್ ಶುಕ್ಲಾ ಹೇಳಿದ್ದಾರೆ.
ಮಾಜಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಆಧಾರ್ ವಿವರಗಳನ್ನು ಹಂಚಿಕೊಳ್ಳುವುದು ಸ್ವಯಂಪ್ರೇರಿತವಾಗಿರುತ್ತದೆ, ಆದರೆ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಲಿಂಕ್ ಮಾಡದಿರಲು ಸರಿಯಾದ ಕಾರಣವನ್ನು ನೀಡಬೇಕಾಗುತ್ತದೆ ಎಂದು ಪಿಟಿಐ ವರದಿಯೊಂದರಲ್ಲಿ ತಿಳಿಸಿದ್ದಾರೆ.
ಸರ್ಕಾರವು ಜೂನ್‌ನಲ್ಲಿ ನಕಲಿ ನಮೂದುಗಳನ್ನು ತೆಗೆದುಹಾಕಲು ಮತ್ತು ಸೇವಾ ಮತದಾರರಿಗೆ ಚುನಾವಣಾ ಕಾನೂನನ್ನು ಲಿಂಗ ತಟಸ್ಥಗೊಳಿಸಲು ಮತದಾರರ ಪಟ್ಟಿಯೊಂದಿಗೆ ಆಧಾರ್ ವಿವರಗಳನ್ನು ಲಿಂಕ್ ಮಾಡುವ ಅವಕಾಶ ಮಾಡಿಕೊಡಲು ಮತದಾರರ ನೋಂದಣಿ ನಿಯಮಗಳನ್ನು ತಿದ್ದುಪಡಿ ಮಾಡಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಉಲ್ಲೇಖಿಸಿ ಪಿಟಿಐ ವರದಿ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ ಚುನಾವಣಾ ಕಾನೂನುಗಳ (ತಿದ್ದುಪಡಿ) ಕಾಯಿದೆ, 2021 ರ ನಿಬಂಧನೆಗಳಿಗೆ ಅನುಗುಣವಾಗಿ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಘೋಷಿಸುವ ಅಧಿಸೂಚನೆಗಳನ್ನು ಕೇಂದ್ರ ಕಾನೂನು ಸಚಿವಾಲಯದ ಶಾಸಕಾಂಗ ಇಲಾಖೆ ಪ್ರಕಟಿಸಿದೆ.
ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು, 2022 ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಅಸ್ತಿತ್ವದಲ್ಲಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡಲು ಹೊಸ ನಮೂನೆ “6B” ಅನ್ನು ಪರಿಚಯಿಸಲಾಗಿದೆ.
ಆಧಾರ್-ವೋಟರ್ ಐಡಿ ಲಿಂಕ್‌ನ ಉದ್ದೇಶ :
ಆಧಾರ್ ಕಾರ್ಡ್ ಹೊಂದಿಲ್ಲದವರು, ಜಾಬ್ ಕಾರ್ಡ್‌, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಪ್ಯಾನ್ ಕಾರ್ಡ್‌ನಂತಹ ಇತರ ಪುರಾವೆಗಳನ್ನು ಹಂಚಿಕೊಳ್ಳುವ ಆಯ್ಕೆಯನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ.
ಮತದಾರರ ಗುರುತನ್ನು ಸ್ಥಾಪಿಸಲು ಮತ್ತು ಮತದಾರರ ಪಟ್ಟಿಯಲ್ಲಿನ ನಮೂದುಗಳನ್ನು ದೃಢೀಕರಿಸಲು ಮತ್ತು ಒಂದೇ ಕ್ಷೇತ್ರದಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಒಂದು ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಬಾರಿ ಹೆಸರನ್ನು ನೋಂದಾವಣಿ ಆಗಿದ್ದನ್ನು ತಿಳಿಯಲು ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಲಿಂಕ್‌ ಮಾಡಲಾಗುತ್ತದೆ ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ಶ್ರೀಕಾಂತ್ ದೇಶಪಾಂಡೆ ಸುದ್ದಿ ಸಂಸ್ಥೆಯಾದ ಎಎನ್ ಐ ಗೆ ತಿಳಿಸಿದ್ದಾರೆ.