Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಭಾರೀ ಶೋಧ!

ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಭಾರೀ ಶೋಧ!

  • ತೀರ್ಥಹಳ್ಳಿಯಲ್ಲಿ ಶೋಧ ಕಾರ್ಯಾಚರಣೆ
  • ಮಂಗಳೂರಲ್ಲಿ ಓರ್ವ ಅರೆಸ್ಟ್: ಇನ್ನೋರ್ವ ನಾಪತ್ತೆ
  • ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು..?

NAMMUR EXPRESS NEWS
ಶಿವಮೊಗ್ಗ : ಐಎಸ್‌ಐಎಸ್‌ ಉಗ್ರ ಸಂಘಟನೆ ಜೊತೆ
ಸಂಬಂಧ ಹೊಂದಿರುವ ಮೂವರು ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಐಸಿಸ್ ಉಗ್ರ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಶಿವಮೊಗ್ಗದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ವಿದ್ಯಾರ್ಥಿ ಯಾಸಿನ್ ಹಾಗೂ ಮಂಗಳೂರು ಮೂಲದ ಮಾಜ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊರ್ವನನ್ನು ಮಂಗಳೂರಲ್ಲಿ ಅರೆಸ್ಟ್ ಮಾಡಲಾಗಿದೆ. ಬಾಂಬ್‌ ಬ್ಲಾಸ್ಟ್‌ ಸೇರಿದಂತೆ ಉಗ್ರ ಚಟುವಟಿಕೆಗೆ ತರಬೇತಿ ನೀಡಲಾಗುತ್ತಿದೆ ಎನ್ನುವ ಆಘಾತಕಾರಿ ಮಾಹಿತಿ ತಿಳಿದುಬಂದಿದೆ.ಮಾಜ್ ಮುನೀರ್‌ ಅಹಮ್ಮದ್‌ ,(22)ಮಂಗಳೂರು ಮತ್ತು ಸಯ್ಯದ್‌ ಯಾಸೀನ್‌ ಬೈಲು, (21) ಸಿದ್ದೇಶ್ವರ ನಗರ, ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?

ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಇಂತಹ ವ್ಯಕ್ತಿಗಳಿರುವುದು ಆಶ್ಚರ್ಯಕರ. ಈ ಹಿಂದೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿದಾಗ ಕೆಲವರು ಪ್ರಶ್ನೆ ಮಾಡಿದ್ದರು. ಈಗ ಉತ್ತರ ಸಿಕ್ಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ತಪ್ಪಿಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿಸಿದರು.
ಬಂಧಿತರ ವಿಚಾರಣೆ ನಡೆಯುತ್ತಿದೆ. ಇದರ ಹಿಂದೆ ಇನ್ನೆಷ್ಟು ಜನರಿದ್ದಾರೆ ಅನ್ನುವುದು ಕೂಲಂಕಷ ತನಿಖೆಯಿಂದ ಗೊತ್ತಾಗಬೇಕಿದೆ. ಇಬ್ಬರ ವಿರುದ್ಧ ಯುಎಪಿಎ ಅಡಿ ಕೇಸ್ ದಾಖಲಾಗಿದೆ. ಇಬ್ಬರನ್ನು ಬಂಧಿಸಿರುವ ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ತಿಳಿಸುತ್ತೇನೆ. ಪೊಲೀಸರು ರಾಜ್ಯದಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ. ಹಾಗಾಗಿ ಇವರೆಲ್ಲ ಸಿಕ್ಕಿ ಬೀಳುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಮಂಗಳೂರಲ್ಲಿ ಓರ್ವ ಅರೆಸ್ಟ್!
ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಶಂಕಿತ ಉಗ್ರರನ್ನು ಶಿವಮೊಗ್ಗದಲ್ಲಿ ಬಂಧಿಸಿದ ಬೆನ್ನಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಮಂಗಳೂರು ಮೂಲದ ಮಾಜ್ ಮುನೀರ್ ಅಹ್ಮದ್ ಮತ್ತು ನಾಪತ್ತೆಯಾಗಿರುವ ಶಂಕಿತ ಉಗ್ರ ಮೊಹಮ್ಮದ್ ಶರೀಕ್‌ ಜೊತೆ ನಂಟು ಹೊಂದಿದ್ದ ಮಂಗಳೂರಿನ ಅನ್ಸರ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಅಜ್ಞಾತ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಬಂಧಿತರ ಶಂಕಿತರ ಸಂಖ್ಯೆ ಮೂರಕ್ಕೇರಿದ್ದು, ತಲೆಮರೆಸಿಕೊಂಡಿರುವ ಶಿವಮೊಗ್ಗ ಮೂಲದ ಮತ್ತೋರ್ವನ ಬಂಧನಕ್ಕೆ ತನಿಖೆ ಮುಂದುವರಿದಿದೆ.

ತೀರ್ಥಹಳ್ಳಿ ಮೂಲದ ಮತ್ತೊಬ್ಬ ಸಿಕ್ಕಿಲ್ಲ!

ತೀರ್ಥಹಳ್ಳಿಯ ಭೂಗತ ಶಂಕಿತ ಉಗ್ರ ಮತೀನ್ ತಲೆಮರೆಸಿಕೊಂಡು ಎರಡು ವರ್ಷಗಳು ಕಳೆದಿವೆ. ಈತನ ಸುಳಿವು ಇನ್ನೂ ಸಿಕ್ಕಿಲ್ಲ.  ಈ ವ್ಯಕ್ತಿ ತೀರ್ಥಹಳ್ಳಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದು ಪತ್ತೆ ಆಗಿತ್ತು, ಸದ್ಯ ಈ ವ್ಯಕ್ತಿಯ ಬಂಧನಕ್ಕೆ ಎನ್​ಐ ಮುಂದಾಗಿದೆ. ಅದರಂತೆ ಈತನ ಕುರಿತು ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಮತೀನ್ ತಮಿಳುನಾಡಿನ ಹಿಂದೂ ಕಾರ್ಯಕರ್ತನ ಹತ್ಯೆಯ ಆರೋಪಿ ಆಗಿದ್ದಾನೆ.

Categories
ಶಿಕ್ಷಣ

ಡಿಸೆಂಬರ್ ವೇಳೆಗೆ ಶಾಲೆಗಳಲ್ಲಿ ಭಗವದ್ಗೀತೆ

ಡಿಸೆಂಬರ್ ವೇಳೆಗೆ ಶಾಲೆಗಳಲ್ಲಿ ಭಗವದ್ಗೀತೆ

  • ಸರ್ಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ: ಬಿ.ಸಿ.ನಾಗೇಶ್ ಮಾಹಿತಿ

NAMMUR EXPRESS NEWS
ಬೆಂಗಳೂರು: ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣ ಪಠ್ಯದಲ್ಲಿ ಭಗವದ್ಗೀತೆ ಬೋಧನೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿಯ ಪ್ರಾಣೇಶ್‌ ಹಾಗೂ ರವಿಕುಮಾರ್ ಪ್ರಶ್ನೆಗೆ ಉತ್ತರ ನೀಡಿದ ಅವರು, ಶಾಲಾ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆ ಪ್ರತ್ಯೇಕವಾಗಿ ಬೋಧಿಸುವ ವಿಚಾರ ಸರ್ಕಾರದ ಮುಂದೆ ಇಲ್ಲ. ಆದರೆ ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡುತ್ತೇವೆ. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡುತ್ತೇವೆ. ಡಿಸೆಂಬರ್ ವೇಳೆಗೆ ನೈತಿಕ ಶಿಕ್ಷಣ ಶಾಲೆಗಳಲ್ಲಿ ಜಾರಿಗೆ ತರುತ್ತೇವೆ ಎಂದರು.


ಈ ವೇಳೆ ಮಾತನಾಡಿದ ಸದಸ್ಯ ಪ್ರಾಣೇಶ್ ಶಾಲಾ ಪಠ್ಯಪುಸ್ತಕದಲ್ಲಿ ಭಗದ್ಗೀತೆ ಬೋಧಿಸುವ ಪ್ರಸ್ತಾಪ ಇಲ್ಲ ಅಂತ ಸರ್ಕಾರ ಹೇಳುತ್ತಿದೆ. ಹಿಂದೆ ಸರ್ಕಾರ ಭಗದ್ಗೀತೆ ಬೋಧನೆ ಮಾಡಲು ಸಮಿತಿ ರಚನೆ ಮಾಡುವುದಾಗಿ ಹೇಳಿತ್ತು. ಸರ್ಕಾರಕ್ಕೆ ಭಗವದ್ಗೀತೆ ಬೋಧಿಸಲು ಮುಜುಗರ ಇದೆಯಾ? ಇದಕ್ಕೆ ಯಾರ ವಿರೋಧವೂ ಇರುವುದಿಲ್ಲ. ಮೊದಲು ಇದ್ದ ಆಸಕ್ತಿ ಇದ್ದಕ್ಕಿದ್ದಂತೆ ಈಗ ಯಾಕಿಲ್ಲ ಅಂತ ಪ್ರಶ್ನೆ ಮಾಡಿದರು. ಅಲ್ಲದೇ ಬಾಬಾ ಬುಡನ್ ಗಿರಿಗೆ ದತ್ತಾಪೀಠ ಅಂತ ಹೆಸರು ಇಡಬೇಕು ಅಂತ ಒತ್ತಾಯ ಮಾಡಿದರು.


ಇದಕ್ಕೆ ಉತ್ತರ ನೀಡಿದ ಸಚಿವರು, ಪಠ್ಯದಲ್ಲಿ ಸೇರ್ಪಡೆ ಇಲ್ಲ ಅಂತ ಹೇಳಿದ್ದೇವೆ. ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡುತ್ತೇವೆ. ಡಿಸೆಂಬರ್ ವೇಳೆಗೆ ನೈತಿಕ ಶಿಕ್ಷಣ ಶಾಲೆಗಳಲ್ಲಿ ಪ್ರಾರಂಭ ಮಾಡುತ್ತೇವೆ. ಇತಿಹಾಸದ ತಪ್ಪುಗಳನ್ನು ಪಠ್ಯದಲ್ಲಿ ಸರಿ ಮಾಡುವ ಕೆಲಸ ಮಾಡ್ತಿದ್ದೇವೆ. ಬಾಬಾ ಬುಡನ್ ಗಿರಿ ಹೆಸರು ಈಗಾಗಲೇ ದತ್ತಾತ್ರೇಯ ಪೀಠ ಅಂತ ಬದಲಾವಣೆ ಮಾಡಲಾಗಿದೆ ಅಂತ ತಿಳಿಸಿದರು.

Categories
ಮಲ್ನಾಡ್ ಶಿವಮೊಗ್ಗ

ಕೋಮು ಸಂಘರ್ಷ: ರಾಜ್ಯಕ್ಕೆ ಶಿವಮೊಗ್ಗ ಟಾಪ್!

ಕೋಮು ಸಂಘರ್ಷ: ರಾಜ್ಯಕ್ಕೆ ಶಿವಮೊಗ್ಗ ಟಾಪ್!

  • ರೌಡಿಸಂ ಕೇಸ್ ಕರಾವಳಿಯ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ
  • ರಾಜ್ಯದಲ್ಲಿ ಹೆಚ್ಚಿದ ಕೋಮು ಗಲಭೆ: ಅಭಿವೃದ್ಧಿ ಹಿನ್ನಡೆ?!

NAMMUR EXPRESS NEWS
ರಾಜ್ಯದಲ್ಲಿ ಕೋಮು ಗಲಭೆ ಪ್ರಕರಣದಲ್ಲಿ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಮುಂಚೂಣಿಯಲ್ಲಿವೆ. ಧರ್ಮದ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲು ಸಾಲಾಗಿ ಮೂರು ಸರಣಿ ಕೊಲೆಗಳು ನಡೆದಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದ ಮಸೂದ್ ಹಾಗೂ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಹಾಗೂ ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಹತ್ಯೆ ನಡೆದಿದೆ. ಇನ್ನು ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ ಕೂಡ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ.


ಶಿವಮೊಗ್ಗದಲ್ಲಂತೂ ಸ್ವಾತಂತ್ರ್ಯ ಅಮೃತಮಹೋತ್ಸವದ ದಿನದಂದು ವೀರ ಸಾವರ್ಕರ್ ಫೋಟೋ ಅಳವಡಿಸುವ ವಿಚಾರವಾಗಿಯೂ ನಡೆದ ಘರ್ಷಣೆಯಲ್ಲಿ ಇಬ್ಬರ ಮೇಲೆ ಕೊಲೆ ಯತ್ನ ನಡೆದಿತ್ತು. ಈ ಎಲ್ಲಾ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯದಲ್ಲಿ ಕೋಮು ಸಂಘರ್ಷದ ಪ್ರಕರಣಗಳಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳು ಮುಂಚೂಣಿಯಲ್ಲಿವೆ.
ಕೋಮು ಗಲಭೆ ಪ್ರಕರಣಗಳಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳು ಅಗ್ರ ಸ್ಥಾನದಲ್ಲಿದ್ದರೆ ರೌಡಿಸಂ ಪ್ರಕರಣಗಳಲ್ಲಿ ಉಡುಪಿ ಹಾಗೂ ಕೋಲಾರ ಜಿಲ್ಲೆಗಳು ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಇಲ್ಲಿಯವರೆಗೆ 242 ಪ್ರಕರಣಗಳು ಕೋಮುಗಲಭೆಯ ಕಾರಣಕ್ಕೆ ದಾಖಲಾಗಿದೆ, ಮೊದಲನೇ ಸ್ಥಾನವನ್ನು ಪಡೆದಿರುವ ಶಿವಮೊಗ್ಗದಲ್ಲಿ ಇಲ್ಲಿಯವರೆಗೆ 57 ಪ್ರಕರಣಗಳು ದಾಖಲಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 46 ಕೋಮು ಸಂಘರ್ಷದ ಪ್ರಕರಣಗಳು ದಾಖಲಾಗಿವೆ.


ನಂತರದ ಸ್ಥಾನಗಳಲ್ಲಿ ಬಾಗಲಕೋಟೆ, ದಾವಣಗೆರೆ, ಹಾವೇರಿ ಜಿಲ್ಲೆಗಳು ಸ್ಥಾನ ಪಡೆದಿದ್ದು ಈ ಜಿಲ್ಲೆಗಳಲ್ಲಿ ಕ್ರಮವಾಗಿ 26, 18 ಹಾಗೂ 18 ಕೋಮು ಸಂಘರ್ಷದ ಪ್ರಕರಣಗಳು ದಾಖಲಾಗಿದೆ. ಕಳೆದ ಐದು ವರ್ಷಗಳಲ್ಲಿ ಮಂಡ್ಯ ಉತ್ತರ ಕನ್ನಡ, ರಾಮನಗರ, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಮಾತ್ರ ಯಾವುದೇ ರೀತಿಯ ಕೋಮು ಸಂಘರ್ಷದ ಪ್ರಕರಣಗಳು ದಾಖಲಾಗಿಲ್ಲ.
ಉಡುಪಿ ಜಿಲ್ಲೆ ರೌಡಿಸಂ ಪ್ರಕರಣಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನವನ್ನು ಪಡೆದಿದ್ದು ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 431 ಪ್ರಕರಣಗಳು ದಾಖಲಾಗಿವೆ. ಇತ್ತ ಕೋಲಾರದಲ್ಲಿ 165 ಪ್ರಕರಣಗಳು ದಾಖಲಾಗಿವೆ. ಈ ಪಟ್ಟಿಯಲ್ಲಿ ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮೂರು ಹಾಗೂ ನಾಲ್ಕನೇ ಸ್ಥಾನವನ್ನು ಪಡೆದಿದ್ದು ಕ್ರಮವಾಗಿ 156 ಮತ್ತು 152 ರೌಡಿಸಂ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇನ್ನುಳಿದಂತೆ ಕಲಬುರಗಿಯಲ್ಲಿ 97 ಹಾಗೂ ಬೆಂಗಳೂರು ನಗರದಲ್ಲಿ 60 ರೌಡಿಸಂ ಪ್ರಕರಣಗಳು ವರದಿಯಾಗಿದೆ.


ರಾಜ್ಯದಲ್ಲಿ 3 ವರ್ಷಕ್ಕೆ ನಾಲ್ಕು ಕೊಲೆಗಳು ಧರ್ಮ ಸಂಘರ್ಷದ ಕಾರಣಕ್ಕೆ ಸಂಭವಿಸಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1, ಮಂಗಳೂರು ನಗರದಲ್ಲಿ 1, ಗದಗದಲ್ಲಿ 1 ಹಾಗೂ ಶಿವಮೊಗ್ಗದಲ್ಲಿ 1 ಹತ್ಯೆ ಪ್ರಕರಣ ಸಂಭವಿಸಿದೆ. ಇಷ್ಟು ಮಾತ್ರವಲ್ಲದೇ ಕೋಮು ಸಂಘರ್ಷದ ಸಂದರ್ಭದಲ್ಲಿ ಮಧ್ಯ ಪ್ರವೇಶಕ್ಕೆ ಯತ್ನಿಸಿದ ಪೊಲೀಸರ ಪೈಕಿ 380 ಪೊಲೀಸರು ಗಾಯಗೊಂಡಿದ್ದಾರೆ.

Categories
ಮಲ್ನಾಡ್

ಕಮ್ಮರಡಿ ಬಳಿ ಮೋರಿಗೆ ಬಿದ್ದ ಕಾರು!

  • ವಿದ್ಯುತ್ ಕಂಬಕ್ಕೆ ಡಿಕ್ಕಿ: ಕೂದಲೆಳೆ ಅಂತರದಲ್ಲಿ ಪಾರು
  • ಚಾಲಕನ ಅಜಾಗೃತಿಯಿಂದ ಅಪಘಾತ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕಮ್ಮರಡಿ ಸಮೀಪದ ಅರೆಕಲ್ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವನಿಗೆ ಗಂಭೀರ ಗಾಯಗೊಂಡಿದ್ದಾನೆ.
ರಸ್ತೆ ತಿರುವಿನಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಘಟನೆ ನಡೆದಿದ್ದು ಕಾರು ಮೋರಿಗೆ ಬಿದ್ದಿದೆ. ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಾರು ಚಾಲಕನ ಅಜಾಗೃತಿಯ ಡ್ರೈವಿಂಗ್ ಕಾರಣ ಎನ್ನಲಾಗಿದೆ. ಗಾಯಗೊಂಡವರು ಶಿವಮೊಗ್ಗದವರು ಎಂದು ತಿಳಿದು ಬಂದಿದೆ.

ಮಲೆನಾಡಲ್ಲಿ ಮತ್ತೆ ಮಳೆ: ಅಡಿಕೆಗೆ ಕೊಳೆ!

ಮಲೆನಾಡಲ್ಲಿ ಮಳೆ ಅಬ್ಬರ ಮತ್ತೆ ಹೆಚ್ಚಿದೆ. ಒಂದು ವಾರದಿಂದ ಮಳೆ ಕಡಿಮೆಯಾಗಿ ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿತ್ತು. ಕೊಳೆಯಿಂದಾಗಿ ಅನೇಕರ ತೋಟದಲ್ಲಿ ಕಾಯಿಗಳು ಉದುರುತ್ತಿವೆ. ಈಗ ಮಳೆ ಹೆಚ್ಚಳದಿಂದ ಮತ್ತಷ್ಟು ಉದುರುವ ಸಾಧ್ಯತೆ ಇದೆ.

ನರಸಿಂಹರಾಜ ಪುರದಲ್ಲಿ ಕಳ್ಳರು ಅರೆಸ್ಟ್!

ನ.ರಾ.ಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮದಲ್ಲಿ ಮನೆಯಲ್ಲಿ ಕಳ್ಳತನ ಮಾಡಿದ್ದ ಎರಡು ಜನ ಆರೋಪಿಗಳನ್ನು PSI ನ.ರಾ.ಪುರ ಪೊಲೀಸ್ ಠಾಣೆ ನೇತೃತ್ವದ ಪೊಲೀಸ್ ತಂಡ ದಸ್ತಗಿರಿ ಮಾಡಿ, ರೂ. 60,000 ರೂ ಬೆಲೆಯ ಚಿನ್ನಾಭರಣಗಳು, ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಮನೆಗೆ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಕಳ್ಳತನ ಮಾಡಿದ್ದರು.

Categories
ರಾಜಕೀಯ ರಾಜ್ಯ

ಡಿಕೆಶಿಗೆ ಮತ್ತೊಂದು ಸಂಕಷ್ಟ..!

ಡಿಕೆಶಿಗೆ ಮತ್ತೊಂದು ಸಂಕಷ್ಟ..!

  • ಐಟಿ ಅಧಿಕಾರಿಗಳ ಪರ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌

NAMMUR EXPRESS
ನವದೆಹಲಿ: ಸೋಮವಾರ ಡಿಕೆಶಿ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ. ಈ ಬೆನ್ನಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಡಿಕೆ ಶಿವಕುಮಾರ್ ಅವರಿಗೆ ಕಾನೂನು ಕ್ರಮ ಜರುಗಿಸುವಂತಿಲ್ಲ ಎಂದು ಹೈಕೋರ್ಟ್ ಅಂದು ಕೇಸ್ ರದ್ದು ಮಾಡಿತ್ತು.


ಆದರೆ ಇದೀಗ ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದೆ. ಈಗಲ್ ಟನ್ ರೆಸಾರ್ಟ್ ನಲ್ಲಿ ಐಟಿ ಅಧಿಕಾರಿಗಳು 2018ರಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣ ನಡೆಸುತ್ತಿರುವಾಗಲೇ ಡಿಕೆ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಐಟಿ ಅಧಿಕಾರಿಗಳ ವಿಚಾರಣೆಗೆ ತಡೆ ತಂದಿದ್ದರು.


ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪ್ರಕರಣವನ್ನು ವಜಾ ಮಾಡಿ, ಡಿಕೆಶಿಗೆ ಬಿಗ್ ರಿಲೀಫ್ ನೀಡಿತ್ತು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಸೋಮವಾರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪಿಗೆ ತಡೆ ನೀಡಿದೆ. ಇದರಿಂದ ಡಿಕೆಶಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

Categories
ಕೃಷಿ ಬೆಂಗಳೂರು ಮಲ್ನಾಡ್ ರಾಜ್ಯ

ಸೆ.20ಕ್ಕೆ ರಾಜಧಾನಿಯಲ್ಲಿ ಮಲೆನಾಡಿಗರ ಹೋರಾಟ..!

ಸೆ.20ಕ್ಕೆ ರಾಜಧಾನಿಯಲ್ಲಿ ಮಲೆನಾಡಿಗರ ಹೋರಾಟ..!

  • ಮಲೆನಾಡು ಜನಪರ ಒಕ್ಕೂಟದಿಂದ ಪ್ರತಿಭಟನೆ
  • ಮಲೆನಾಡಿಗರನ್ನು ಉಳಿಸಿ ಹೋರಾಟಕ್ಕೆ ನೀವು ಬೆಂಬಲಿಸಿ..!

NAMMUR EXPRESS NEWS
ಬೆಂಗಳೂರು: ಸಹ್ಯಾದ್ರಿ ಕಣಿವೆಯನ್ನು ದೂರದಿಂದ ವೀಕ್ಷಿಸುವ ಸೊಬಗು ಪ್ರವಾಸಿಗರಿಗೆ ಆನಂದ ನೋಟ. ಒಮ್ಮೆಯಾದರೂ ಇಲ್ಲಿನ ಪ್ರಾಕೃತಿಕ ರಮಣೀಯ ಸೌಂದರ್ಯ ಸವಿಯುವ ಎಲ್ಲಿಲ್ಲದ ತವಕ. ಬೋರ್ಗರೆದು ಸುರಿಯುವ ಮಳೆ, ಜರಿಗಳ ಜುಳುಜುಳು ನಾದ ಕಿವಿಗೆ ಇಂಪು. ಕಣ್ಣಿಗೆ ತಂಪು. ಆಕಾಶದೆತ್ತರಕ್ಕೆ ತಲೆಎತ್ತಿ ನಿಂತ ಮರಗಳ ಸಾಲುಗಳು ಅಬ್ಬಾ ಎಂದೆನಿಸುವಷ್ಟು ವಿಸ್ಮಯ. ದೂರದ ಕಣಿವೆ ಕಾಡಿನ ವರ್ಣನೆ ಹೆಚ್ಚಾದಂತೆ ಕಣ್ಣಂಚಲ್ಲಿ ತುಂಬಿಕೊಳ್ಳುವ ತುಡಿತವೂ ಹೆಚ್ಚುತ್ತದೆ. ಮಲೆನಾಡು ಕಣಿವೆಯ ಸಂಸ್ಕೃತಿ ವಿವಿಧ ಭಾಷೆ, ನೆಲ, ಜಲದ ಸಂಸ್ಕಾರವನ್ನು ಜಗತ್ತಿಗೆ ಸಾರಿದೆ. ಇಲ್ಲಿನ ನೆಲವಾಸಿಗಳ ಮನೆಯ ಮುಂಭಾಗದ ತುಳಸಿಕಟ್ಟೆ ಅಥವಾ ಗಿಡವೂ ಕೂಡ ತನ್ನದಲ್ಲ ಎಂಬ ಕಟುಸತ್ಯವನ್ನು ಅರಿತುಕೊಂಡಾಗ ಕೋಪ ತಡೆಯಲು ಸಾಧ್ಯವೇ ಇಲ್ಲ. ಮಲೆಗಳನ್ನು ವರ್ಣಿಸುವವರಿಗೆ ಎಕ್ಕಡ ತೋರಿಸಬೇಕು ಎಂಬ ಒಳಗಿನ ಆತಂಕ ಎಚ್ಚರಗೊಳ್ಳುವಂತೆ ಮಾಡುತ್ತದೆ.


ಕಾಡು ಉಳಿಸುವ ವಿಶ್ವಮಟ್ಟದ ಹೋರಾಟ ಸಫಲತೆ ಪಡೆಯಬೇಕು ಅದು ಅಕ್ಷರಶಃ ಸತ್ಯ, ನಿಜವಾದ ಹೋರಾಟ ಮಾಡುವವರ ಬಗ್ಗೆ ನಮ್ಮ ಗೌರವ ಕೊಟ್ಟೆ ತೀರುತ್ತೇವೆ. ಆದರೆ ಅರಣ್ಯ ಉಳಿಸುವ ಯೋಜನೆಯ ಹಿಂದೆ ಸಂಪತ್ತು ಕಬಳಿಕೆಯ ಹುನ್ನಾರ ಇಟ್ಟುಕೊಂಡು ವಿದೇಶಿ ಹಣಕ್ಕಾಗಿ ಹಲ್ಲುಗಿಂಜುವ ಸರ್ಕಾರ, ಗುತ್ತಿಗೆದಾರ, ಬಹುರಾಷ್ಟ್ರೀಯ ಕಂಪನಿಗಳ ಒಳಗಿರುವ ಯೋಚನೆಗಳನ್ನು ಅರಿಯದ ಮೂರ್ಖರು ಮಲೆನಾಡಿಗರಲ್ಲ. ಈಗಾಗಲೇ ಲಕ್ಷಾಂತರ ಹೆಕ್ಟೇರ್ ಅರಣ್ಯ, ಸಾಗುವಳಿ ಪ್ರದೇಶ ಕಳೆದುಕೊಂಡಿರುವ ಸಹ್ಯಾದ್ರಿ ತಪ್ಪಲಿನ ವಾಸಿಗಳಿಗೆ ಹಿಂದಿರುವ ದುರಾಲೋಚನೆ ಅರ್ಥವಾಗಿದೆ ಮತ್ತು ಇಂದಿನ ಯೋಜನೆಗಳ ಸ್ಥಿತಿಗತಿ ಅರ್ಥ ಮಾಡಿಸುತ್ತಿದೆ. ಯಾವ ಅರಣ್ಯ ಉಳಿಸುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆಯೋ ಅದೆ ಅರಣ್ಯವನ್ನು ಮಲೆಗಳ ಕುಡಿಗಳು ಸಾವಿರಾರು ವರ್ಷಗಳಿಂದ ರಕ್ಷಿಸಿಕೊಂಡು ಬಂದಿದೆ. ಬೃಹತ್ ನಗರಗಳಲ್ಲಿ ಇದ್ದ ಕಾಡು, ಹಳ್ಳ, ಕೆರೆ, ಜರಿಗಳನ್ನು ನುಂಗಿ ನೀರು ಕುಡಿದಿರುವ ಉದ್ಯಮಿಗಳಿಗೆ ಮಲೆನಾಡು ಭಕ್ಷ್ಯ ಭೋಜನದಂತೆ ಕಂಡರೂ ತಪ್ಪಿಲ್ಲ.


ಈ ಮೇಲಿನ ಪೀಠಿಕೆ ಸ್ವಲ್ಪ ಆಯಾಸ ಅನ್ನಿಸಿದ್ದರೂ ಕೂಡ ಸತ್ಯಕ್ಕೆ ದೂರವಾಗಿಲ್ಲ. ಯಾವ ಯೋಜನೆಯಿಂದ ವಿದ್ಯುತ್ ನೀಡುತ್ತೇವೆ ಎನ್ನುತ್ತಿದ್ದರೋ ಅದರಿಂದ ಅಷ್ಟು ಪ್ರಮಾಣದ ವಿದ್ಯುತ್ ಲಭ್ಯವಿಲ್ಲ ಎಂಬ ಸತ್ಯ ಇದೀಗ ಜಗಜಾಹೀರಾಹಿದೆ. ಕಾಡು ಪ್ರಾಣಿಗಳ ವಾಸ ಸ್ಥಳ ಎನ್ನುತ್ತಿದ್ದ ಮನುಷ್ಯ ಬೃಹತ್ ನಗರದಲ್ಲಿ ವಾಸವಾಗಿದ್ದರೂ ಪ್ರಾಣಿಗಳ ಉಪಟಳ ನಿಂತಿಲ್ಲ. ಇಂತಹ ಸಾವಿರಾರು ಉದಾಹರಣೆಗಳು ನಮ್ಮ ಮುಂದೆ ಇದೆ. ಇವೆಲ್ಲವನ್ನು ಮನದಲ್ಲಿ ಇಟ್ಟುಕೊಂಡು ಮಲೆನಾಡು ಜನಪರ ಒಕ್ಕೂಟ ಮಲೆನಾಡನ್ನು ಆತಂಕದಿಂದ ಉಳಿಸುವ ಯೋಜನೆ ರೂಪಿಸಿದೆ.
ಸೆಪ್ಟೆಂಬರ್ 20 ರ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಬೇಡಿಕೆ ಆಗ್ರಹಿಸಿ ಒಂದು ದಿನದ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ. ಸರ್ಕಾರ ಬೇಡಿಕೆಯನ್ನು ಶೀಘ್ರ ಪರಿಹರಿಸದೇ ಇದ್ದರೆ ಅನಿರ್ದಿಷ್ಟ ಅವಧಿ ಮುಷ್ಕರ ನಡೆಸುವುದಾಗಿ ಒಕ್ಕೂಟ ಎಚ್ಚರಿಕೆ ನೀಡಿದೆ.

ಬೇಡಿಕೆಗಳ ಮುಖ್ಯಾಂತ ಹೀಗಿದೆ:

  • ಅತೀ ಹೆಚ್ಚು ಮಳೆ ಬೀಳುವ ಪ್ರದೇಶವನ್ನು ವಿಶೇಷ ಕೃಷಿ ವಲಯ ಘೋಷಣೆಗೆ ಆಗ್ರಹ.
  • ಕೆಎಂಎಫ್ ಸಂಪರ್ಕದ ವಿಶೇಷ ಹಾಲಿನ ಘಟಕ ಸ್ಥಾಪನೆ.
  • ಭೂ ಪರಿವರ್ತನೆ ಆಧಾರದಲ್ಲಿ ವಿಧಾನಸಭೆ, ಲೋಕಸಭೆ ಕ್ಷೇತ್ರ ವಿಂಗಡಣೆ.
  • ಆಡಿಕೆ ಎಲೆಚುಕ್ಕೆ ರೋಗ ಸಂಶೋಧನೆ, ಲಸಿಕೆಗೆ ಬೇಡಿಕೆ.
  • ಜನಜೀವನಕ್ಕೆ ತೊಂದರೆಯಾಗಿರುವ ಯೋಜನೆ ಪ್ರಸ್ತಾವನೆ ನಿರಾಕರಣೆ, ಭೂ ಮಂಜೂರಾತಿ ನಿಯಮ ಸಡಿಲಿಕೆ.
  • 50, 53, 57 ಮತ್ತು 94ಸಿ, 94ಸಿಸಿ ದರಖಾಸ್ತು ಮಂಜೂರಾತಿಗೆ ನಿರ್ದೇಶನ.
  • ಭೂ ಮಂಜೂರಾತಿ ಕಾಲಮಿತಿ 25 ವರ್ಷಕ್ಕೆ ತಗ್ಗಿಸುವುದು.
  • ಕರ್ನಾಟಕ ಅರಣ್ಯ ಕಾಯ್ದೆ ಕಲಂ 4 ರಿಂದ 17ರವರೆಗಿನ ಪ್ರಸ್ತಾವನೆ, ನಿರ್ವಹಣೆ ಪುನರ್ ಸರ್ವೆಗೆ ಆಗ್ರಹ.
  • ಪ್ರತೀವರ್ಷ ಏಪ್ರಿಲ್ 15 ಮಲೆನಾಡು ದಿನ ಆಚರಣೆಗೆ ಬೇಡಿಕೆ.
  • ಅಡಿಕೆ ಬೆಳೆಗಾರರ ರಕ್ಷಣೆಗಾಗಿ ಗೋರಖ್ ಸಿಂಗ್ ವರದಿ ಅನುಷ್ಠಾನಕ್ಕೆ ಆಗ್ರಹ.
  • ಮಲೆನಾಡಿನ ಆಟೋ, ಗೂಡ್ಸ್‌ ಗಳಿಗೆ ಸಬ್ಸಿಡಿ ಇಂಧನ ಪೂರೈಕೆ.
  • ಬಂದೂಕು ಪರವಾನಿಗೆ ಸರಳೀಕರಣಕ್ಕೆ ಆಗ್ರಹ.

Categories
ಬೆಂಗಳೂರು ರಾಜಕೀಯ ರಾಜ್ಯ

ಜಿಪಂ ಚುನಾವಣೆ ಸದ್ಯಕ್ಕೆ ನಡೆಯಲ್ಲ!

ಜಿಪಂ ಚುನಾವಣೆ ಸದ್ಯಕ್ಕೆ ನಡೆಯಲ್ಲ!

  • ಸದಸ್ಯರ ಸಂಖ್ಯೆಹೆಚ್ಚಳಕ್ಕೆ ವಿಧೇಯಕ ಮಂಡನೆ
  • ತಾಲೂಕು ಪಂಚಾಯತ್ ಚುನಾವಣೆ ಕೂಡ ನಡೆಯಲ್ಲ?

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರವು ಗ್ರಾಮೀಣ ಜನಸಂಖ್ಯೆಯ ಆಧಾರದ ಮೇಲೆ ಮತ್ತೊಮ್ಮೆ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಪರಿಷ್ಕರಣೆಗೆ ಮುಂದಾಗಿದೆ. ಹೀಗಾಗಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಸದ್ಯಕ್ಕೆ ನಡೆಯುವ ಸಾಧ್ಯತೆಗಳಿಲ್ಲ.
ಗುರುವಾರ ವಿಧಾನಸಭೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ – 2022 ಮಂಡಿಸಿದೆ.
ಕಳೆದ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ – 2022 ಮಂಡಿಸಿ ಅಂಗೀಕಾರ ಪಡೆದಿತ್ತು. ಬಳಿಕ ಈ ತಿದ್ದುಪಡಿ ಕಾಯ್ದೆಯ ಸೆಕ್ಷನ್ 121 ಮತ್ತು ಸೆಕ್ಷನ್ 160 ರ ತಿದ್ದುಪಡಿಗೆ ಸುಗ್ರೀವಾಜ್ಞೆ ತಂದಿತ್ತು. ಈ ಸುಗ್ರೀವಾಜ್ಞೆಗೆ ಕಾಯ್ದೆ ಸ್ವರೂಪ ನೀಡಲು ಮತ್ತೊಮ್ಮೆ ತಿದ್ದುಪಡಿ ವಿಧೇಯಕ ಮಂಡಿಸಿದೆ.
ಈ ಮೂಲಕ ಮತ್ತೆ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಹೆಚ್ಚಾಗಲಿದ್ದು ಇದು ಮುಂದೆ ಕ್ಷೇತ್ರ ಪುನರ್ ವಿಂಗಡನೆ ಮತ್ತು ಮೀಸಲಾತಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ.

ಜಿಪಂ, ತಾಪಂ ಸ್ಥಾನ ಹೆಚ್ಚಳ!

ತಿದ್ದುಪಡಿ ಕಾಯ್ದೆಗೆ ತರುತ್ತಿರುವ ಸುಗ್ರೀವಾಜ್ಞೆಯಲ್ಲಿ 7 ಲಕ್ಷ ಗ್ರಾಮೀಣ ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ಕನಿಷ್ಠ 20 ಮಂದಿ ಜಿಲ್ಲಾ ಪಂಚಾಯತ್ ಸದಸ್ಯರಿರಬೇಕು ಎಂಬ ನಿಯಮವನ್ನು 25 ಜಿಲ್ಲಾ ಪಂಚಾಯಿತಿ ಸದಸ್ಯರು ಎಂದು ತಿದ್ದುಪಡಿ ತರಲಾಗಿದೆ. 7 ರಿಂದ 9.5 ಲಕ್ಷ ಜನ ಸಂಖ್ಯೆಗೆ 28 ಜಿಲ್ಲಾ ಪಂಚಾಯತ್ ಸದಸ್ಯರು ಇರಬೇಕು. ಅದೇ ರೀತಿ 2.30 ಲಕ್ಷ ಗ್ರಾಮೀಣ ಜನಸಂಖ್ಯೆಗೆ ಕನಿಷ್ಠ 12 ತಾಲ್ಲೂಕು ಪಂಚಾಯತ್ ಸದಸ್ಯರು ಇರಬೇಕು ಎಂಬ ಅಂಶ ತರಲಾಗಿದೆ.

Categories
ತೀರ್ಥಹಳ್ಳಿ ಮಲ್ನಾಡ್

ಕೂಲಿಕಾರನ ಮನೆಗೆ ನುಗ್ಗಿದ ಕಳ್ಳರು!

ಕೂಲಿಕಾರನ ಮನೆಗೆ ನುಗ್ಗಿದ ಕಳ್ಳರು!

  • ಬೀರುವಿನಲ್ಲಿದ್ದ ಹಣ, ಬೆಳ್ಳಿ ಕಾಲು ಚೈನ್ ಕಳ್ಳತನ
  • ಕೈಮರ ಸಮೀಪದ ಸುಣ್ಣದ ಮನೆಯಲ್ಲಿ ಘಟನೆ
  • ಅಡಿಕೆ ಕೊಯ್ಲು ವೇಳೆ ರೈತರೇ ಎಚ್ಚರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಣ್ಣದ ಮನೆಯಲ್ಲಿ ಶನಿವಾರ ಮನೆಗೆ ನುಗ್ಗಿದ ಕಳ್ಳರು ಬಾಗಿಲು ಒಡೆದು ಬೀರುನಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾರೆ.
ಕೂಲಿ ಕೆಲಸ ಮಾಡುವ ಸುರೇಶ ಸುಣ್ಣದ ಮನೆ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು ಸುಮಾರು 6000 ರೂ ದುಡ್ಡು ಮತ್ತು 5000 ಮೌಲ್ಯದಬೆಳ್ಳಿ ಕಾಲು ಚೈನ್ ಕದಿಯಲಾಗಿದೆ.
ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಡಿಕೆ ಸಮಯ: ಕಳ್ಳರ ಬಗ್ಗೆ ಎಚ್ಚರ

ಮಲೆನಾಡಲ್ಲಿ ಅಡಿಕೆ ಸುಲಿತ ಶುರುವಾಗಲು ದಿನ ಗಣನೆ ಆರಂಭವಾಗಿದೆ. ಆರ್ಥಿಕ ಹಿಂಜರಿತ ಕಾರಣ ಜನರ ಕೈಯಲ್ಲೂ ದುಡ್ಡಿಲ್ಲ. ಇನ್ನೊಂದು ಕಡೆ ಉದ್ಯೋಗ ಇಲ್ಲ. ಹೀಗಾಗಿ ಕಳ್ಳತನ ಹೆಚ್ಚಾಗುತ್ತಿದೆ. ಆದ್ದರಿಂದ ಅಡಿಕೆ ಕೊಯ್ಲು ಅವಧಿಯಲ್ಲಿ ಜನ ಎಚ್ಚರ ವಹಿಸಬೇಕಿದೆ. ಕಳೆದ ವರ್ಷವೂ ನಮ್ಮೂರ್ ಎಕ್ಸ್ಪ್ರೆಸ್ ಈ ಬಗ್ಗೆ ನಿರಂತರ ಜಾಗೃತಿ ಅಭಿಯಾನ ಕೈಗೊಂಡಿತ್ತು.

Categories
ರಾಜ್ಯ

ಅಕ್ಟೋಬರ್‌ನಲ್ಲಿ ಅರ್ಧ ತಿಂಗಳು ಬ್ಯಾಂಕ್ ಬಾಗಿಲು

ಅಕ್ಟೋಬರ್‌ನಲ್ಲಿ ಅರ್ಧ ತಿಂಗಳು ಬ್ಯಾಂಕ್ ಬಾಗಿಲು

  • ಅತೀ ಹೆಚ್ಚು ಹಬ್ಬ ಬರೋದು ಈ ತಿಂಗಳಲ್ಲೇ..!
  • ಬ್ಯಾಂಕ್ ಕೆಲಸಕ್ಕೆ ಈಗಲೇ ಪ್ಲಾನ್ ಮಾಡಿಕೊಳ್ಳಿ
  • ರಾಜ್ಯಾದ್ಯಂತ 15 ದಿನ ಬೃಹತ್ ಆರೋಗ್ಯ ಅಭಿಯಾನ

NAMMUR EXPRESS NEWS
ನವ ದೆಹಲಿ: ಅಕ್ಟೋಬರ್ ತಿಂಗಳು ಅರ್ಧಕ್ಕಿಂತ ಹೆಚ್ಚು ದಿನ ಬ್ಯಾಂಕ್ ಕ್ಲೋಸ್ ಆಗಿರಲಿದೆ.
ಅಕ್ಟೋಬರ್ 2, 2022 ರಂದು ಮಹಾತ್ಮಾ ಗಾಂಧಿಯವರ ಜನ್ಮದಿನದ ಸಂದರ್ಭದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ, ಮಹಾಸಪ್ತಮಿ, ಭಾನುವಾರವೂ ಆಗಿರುತ್ತದೆ. ಹಾಗಾಗಿ ಬ್ಯಾಂಕ್ ಕೂಡ ಬಂದ್ ಆಗಲಿದೆ.
ಮಹಾಷ್ಟಮಿಯ ಕಾರಣ ಅಕ್ಟೋಬರ್ 3, 2022 ರಂದು ಸೋಮವಾರ ಬ್ಯಾಂಕ್ ಮುಚ್ಚಿರುತ್ತದೆ.
ಮಹಾನವಮಿಯ ಕಾರಣ ಅಕ್ಟೋಬರ್ 4, 2022 ರಂದು ಮಂಗಳವಾರ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಅಕ್ಟೋಬರ್ 5, 2022 ರಂದು ವಿಜಯ ದಶಮಿಯಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಭಾನುವಾರದಿಂದ ಬುಧವಾರದವರೆಗೆ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಮುಚ್ಚಿರುತ್ತದೆ ಪೂಜೆಯ ಮೊದಲು ಎಲ್ಲಾ ಕೆಲಸಗಳನ್ನು ಮಾಡಿ ಇಲ್ಲದಿದ್ದರೆ ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ಅಕ್ಟೋಬರ್ 8, 2022, ತಿಂಗಳ ಎರಡನೇ ಶನಿವಾರದಂದು ಬ್ಯಾಂಕ್ ಅನ್ನು ಮುಚ್ಚಲಾಗುತ್ತದೆ. 9ನೇ ಅಕ್ಟೋಬರ್, 2022, ಭಾನುವಾರ, ಇಕೆ ಭಾನುವಾರ, ಕೋಜಗರಿ ಲಕ್ಷ್ಮಿ ಪೂಜೆಯ ಮೇಲೆ, ಬ್ಯಾಂಕ್‌ಗಳು ಸಹ ಮುಚ್ಚಲ್ಪಡುತ್ತವೆ.
16ನೇ ಅಕ್ಟೋಬರ್, 2022 ರಂದು, ಭಾನುವಾರದಂದು, ಈ ಕಾರಣಕ್ಕಾಗಿ ಬ್ಯಾಂಕ್ ಮುಚ್ಚಿರುತ್ತದೆ. ಅಕ್ಟೋಬರ್ 22, 2022, ತಿಂಗಳ ನಾಲ್ಕನೇ ಶನಿವಾರ, ಈ ದಿನವೂ ಬ್ಯಾಂಕ್ ಮುಚ್ಚಿರುತ್ತದೆ. 23ನೇ ಅಕ್ಟೋಬರ್, 2022, ಭಾನುವಾರ, ಈ ಕಾರಣಕ್ಕಾಗಿ ಬ್ಯಾಂಕ್ ಮುಚ್ಚಿರುತ್ತದೆ. ಕಾಳಿ ಪೂಜೆಯ ಸಂದರ್ಭದಲ್ಲಿ ಅಕ್ಟೋಬರ್ 24, 2022 ರಂದು ಸೋಮವಾರ ಬ್ಯಾಂಕ್ ಮುಚ್ಚಿರುತ್ತದೆ.
ಇದೇ ಕಾರಣಕ್ಕಾಗಿ ಬ್ಯಾಂಕ್ ಅನ್ನು ಅಕ್ಟೋಬರ್ 25, 2022 ರಂದು ಮುಚ್ಚಲಾಗಿದೆ. 30ನೇ ಅಕ್ಟೋಬರ್, 2022 ರಂದು ಭಾನುವಾರ ಬ್ಯಾಂಕ್ ಮುಚ್ಚಿರುತ್ತದೆ.


ರಾಜ್ಯಾದ್ಯಂತ 15 ದಿನಗಳ ಬೃಹತ್ ಆರೋಗ್ಯ ಅಭಿಯಾನ: ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2, ಗಾಂಧಿ ಜಯಂತಿಯವರೆಗೆ 15 ದಿನಗಳ ಬೃಹತ್ ಆರೋಗ್ಯ ಅಭಿಯಾನವನ್ನು ರಾಜ್ಯ ಸರ್ಕಾರವು ಕೈಗೆತ್ತಿಕೊಳ್ಳುತ್ತಿದೆ.


ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಪ್ರಕಾರ, ಮಕ್ಕಳಿಂದ ಹಿಡಿದು ಮುದುಕರವರೆಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಭಿಯಾನವನ್ನು ಉದ್ಘಾಟಿಸಲಾಗುವುದು.
ಶುಕ್ರವಾರ ಎಲ್ಲ ಜಿಲ್ಲೆಗಳ ಡಿಎಚ್‌ಒಗಳು ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಎಲ್ಲ ಉನ್ನತ ಅಧಿಕಾರಿಗಳೊಂದಿಗೆ ಸಚಿವ ಸುಧಾಕ‌ರ್ ವಿಡಿಯೋ ಕಾನ್ಫರೆನ್ಸ್ ನಡೆಸಿ, ಪ್ರಾಥಮಿಕ ಆರೋಗ್ಯ ಉಪಕೇಂದ್ರಗಳಿಂದ ಹಿಡಿದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳವರೆಗೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ 15 ದಿನಗಳ ಅಭಿಯಾನದಲ್ಲಿ ವಿವಿಧ ಆರೋಗ್ಯ ನಿಯತಾಂಕಗಳು ಮತ್ತು ರೋಗಗಳ ತಪಾಸಣೆಗೆ ಗಮನ ಹರಿಸಲು ಸೂಚನೆಗಳನ್ನು ನೀಡಿದರು.


ಈ ಸಂದರ್ಭದಲ್ಲಿ ರಕ್ತಹೀನತೆ, ಥೈರಾಯ್ಡ್, ಆಡಿಯೊಮೆಟ್ರಿ, ಕಣ್ಣಿನ ಪೊರೆ ಮತ್ತು ಇತರ ಸಾಂಕ್ರಾಮಿಕವಲ್ಲದ ರೋಗಗಳು ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. ಜೊತೆಗೆ ಮಕ್ಕಳ ಲಸಿಕೀಕರಣ, ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಲಸಿಕಾ ದರವನ್ನು ಹೆಚ್ಚಿಸುವುದು, ರಕ್ತದಾನ ಮತ್ತು ಅಂಗಾಂಗ ದಾನವನ್ನು ಉತ್ತೇಜಿಸುವುದು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ವಿತರಿಸುವುದು ಮತ್ತು ಆರೋಗ್ಯ ತಪಾಸಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಮುಂತಾದವುಗಳನ್ನು ಒಳಗೊಂಡಿದೆ. ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ವೃದ್ಧರಿಗೆ ಕನ್ನಡಕಗಳನ್ನು ನೀಡಲು ಕೂಡಾ ಸರ್ಕಾರ ಯೋಜಿಸಿದೆ.
ಪ್ರಸ್ತುತ, ಕರ್ನಾಟಕದಲ್ಲಿ ಒಟ್ಟು 35 ಲಕ್ಷ ಆಯುಷ್ಮಾನ್ ಭಾರತ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಅಭಿಯಾನದ ಅಂತ್ಯದ ವೇಳೆಗೆ 1 ಕೋಟಿ ಗುರಿ ತಲುಪಲು ಹೆಚ್ಚುವರಿಯಾಗಿ 65 ಲಕ್ಷ ಕಾರ್ಡ್‌ಗಳನ್ನು ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆಶಾ ಕಾರ್ಯಕರ್ತೆಯರಿಗೆ ಗುರಿ ನಿಗದಿ ಪಡಿಸಿ ಜನರನ್ನು ಆರೋಗ್ಯ ತಪಾಸಣೆ ನಡೆಸಲು ಮನವೊಲಿಸುವಂತೆ ಸೂಚನೆಗಳನ್ನು ನೀಡಲಾಗಿದೆ. ಮಹಿಳೆಯ ಆರೋಗ್ಯ ರಕ್ಷಣೆಗೆ ಹೆಚ್ಚು ಮಹತ್ವ ನೀಡಿರುವ ಸರ್ಕಾರ ಮಹಿಳೆಯರಿಗಾಗಿ ಯೋಗ, ಧ್ಯಾನ ಮತ್ತು ಪ್ರಾಣಾಯಾಮದಂತಹ ಹಲವಾರು ಉಪಕ್ರಮಗಳನ್ನು ಹಮ್ಮಿಕೊಂಡಿದೆ.

Categories
ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿ ಪಟ್ಟಣದ ಬಳಿ ಭೀಕರ ಆಕ್ಸಿಡೆಂಟ್!

ತೀರ್ಥಹಳ್ಳಿ ಪಟ್ಟಣದ ಬಳಿ ಭೀಕರ ಆಕ್ಸಿಡೆಂಟ್!

  • ಚರಂಡಿಗೆ ಬಿದ್ದ ಕಾರು: ಓರ್ವನಿಗೆ ಗಂಭೀರ ಗಾಯ
  • ಮೇಲಿನ ಕುರುವಳ್ಳಿ ಬಳಿ ದನಕ್ಕೆ ಕಾರು ಡಿಕ್ಕಿ: ಎರಡು ದನಗಳ ಸಾವು..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸಮೀಪದ ಬದನೆ ಹಿತ್ಲು ಬಳಿ ಶನಿವಾರ ಮತ್ತೊಂದು ಅಪಘಾತ ಸಂಭವಿಸಿದ್ದು ಕಾರೊಂದು ಚರಂಡಿಗೆ ಬಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಶಿವಮೊಗ್ಗ ಕಡೆ ಕಾರು ಹೊರಟಿದ್ದು ಒಬ್ಬರಿಗೆ ಗಂಭೀರ ಗಾಯಗೊಂಡಿದ್ದು ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮೊನ್ನೆ ಮೊನ್ನೆ ತಾನೇ ಕಾಲೇಜು ವಿದ್ಯಾರ್ಥಿಗಳ ಕಾರು ಕೂಡಾ ಅಪಘಾತವಾಗಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು. ತೀರ್ಥಹಳ್ಳಿ ಮುಖಾಂತರ ಶಿವಮೊಗ್ಗಕ್ಕೆ ಹೋಗುತ್ತಿದ್ದವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಕುಂಬಾರದಡಿಗೆ ಬಳಿ ಎರಡು ದನ ಸಾವು!: ತೀರ್ಥಹಳ್ಳಿ ಪಟ್ಟಣದ ಮೇಲಿನ ಕುರುವಳ್ಳಿ ಸಮೀಪದಲ್ಲಿ ಸ್ಕಾರ್ಪಿಯೋ ವಾಹನವೊಂದು ರಸ್ತೆಯಲ್ಲಿ ಮಲಗಿದ್ದ ದನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ದನಗಳು ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕನಿಗೂ ಸಣ್ಣ ಪುಟ್ಟ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.