Categories
ಕೃಷಿ

ಗೋವು ಸಾಕಲು ಸರ್ಕಾರಿ ನೌಕರರ ವೇತನ ಕಟ್!

  • ‘ಪುಣ್ಯಕೋಟಿ ದತ್ತು ಯೋಜನೆ’ಗೆ ವೇತನ ಕಡಿತ
  • ಡಿ ವರ್ಗದ ನೌಕರರಿಗೆ ವಿನಾಯಿತಿ..ಯಾರಿಗೆ ಎಷ್ಟು?

NAMMUR EXPRESS NEWS
ಬೆಂಗಳೂರು: ಗೋಶಾಲೆಯಲ್ಲಿ ಹಸುಗಳನ್ನು ಪೋಷಿಸುವ ಸರ್ಕಾರದ ಮಹತ್ವಾಕಾಂಕ್ಷಿ ‘ಪುಣ್ಯಕೋಟಿ ದತ್ತು ಯೋಜನೆ’ಗೆ ನೌಕರರ ವೇತನದಿಂದ ದೇಣಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರ ಬುಧವಾರ (ನ.16) ಮಂಜೂರಾತಿ ನೀಡಿದೆ.
ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ವಂತಿಗೆ ಕಡಿತಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಇತ್ತೀಚೆಗೆ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ, ಈ ಮಂಜೂರಾತಿ ನೀಡಲಾಗಿದೆ. ವಂತಿಗೆ ಕೊಡಲು ಇಚ್ಛೆ ಇಲ್ಲದವರು, ಪತ್ರವನ್ನು ಇದೇ 25ರ ಒಳಗೆ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿಗಳಿಗೆ ಲಿಖಿತವಾಗಿ ನೀಡಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ. ಆದರೆ, ಸಂಘ ಸಲ್ಲಿಸಿದ್ದ ಪ್ರಸ್ತಾವ ಮತ್ತು ಸರ್ಕಾರದ ಮಂಜೂರಾತಿಗೆ ನೌಕರರ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.
ಪ್ರಸಕ್ತ ಸಾಲಿನ (2022-23) ಬಜೆಟ್‌ನಲ್ಲಿ ‘ಪುಣ್ಯಕೋಟಿ’ ದತ್ತು ಯೋಜನೆಯನ್ನು ಮುಖ್ಯಮಂತ್ರಿ ಘೋಷಿಸಿದ್ದರು. ಅಲ್ಲದೆ, ಈ ಯೋಜನೆಯ ಧೈಯೋದ್ದೇಶಕ್ಕೆ ಪೂರಕವಾಗಿ ಗೋವುಗಳನ್ನು ಪೋಷಿಸುವ ಕಾರ್ಯಕ್ಕೆ ಸರ್ಕಾರದ ಹಾಗೂ ಸರ್ಕಾರದ ಇತರ ಅವಿಭಾಜ್ಯ ಅಂಗಗಳಾದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ ನೌಕರರು ನೆರವು ನೀಡಬೇಕು ಎಂದು ಮನವಿ ಮಾಡಿದ್ದರು.
ಇತ್ತೀಚೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ನಿಯೋಗ, ನೌಕರರ ವೇತನದಿಂದ ಹಣ ಕಡಿತ ಮಾಡಿ ಈ ಯೋಜನೆಗೆ 100 ಕೋಟಿ ದೇಣಿಗೆ ನೀಡುವ ಪತ್ರವನ್ನು ನೀಡಿದ್ದರು.
‘ನೌಕರರ ಸಂಘ ಈ ಹಿಂದೆ ಪ್ರವಾಹ, ಕೋವಿಡ್, ಭೂಕಂಪದಂಥ ಸಂದರ್ಭದಲ್ಲಿಯೂ ಸರ್ಕಾರದ ನೆರವಿಗೆ ನಿಂತಿದೆ. ಇದೊಂದು ಉತ್ತಮ ಯೋಜನೆ. ನೆರವು ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದರು. ಹೀಗಾಗಿ, ರಾಜ್ಯದಲ್ಲಿರುವ 107 ಸಂಘಗಳ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ, ಒಮ್ಮತದಿಂದ ಈ ತೀರ್ಮಾನ ತೆಗೆದುಕೊಂಡಿದ್ದೇವೆ. 7ನೇ ವೇತನ ಆಯೋಗ ರಚಿಸುವ ಮೂಲಕ ನೌಕರರ ಪರ ಸರ್ಕಾರ ನಿಂತಿದೆ. ಅದಕ್ಕೆ ಪೂರಕವಾಗಿ ನಾವೂ ಸ್ಪಂದಿಸಿದ್ದೇವೆ. ಹಾಗೆಂದು, ವಂತಿಗೆ ನೀಡುವಂತೆ ಯಾರಿಗೂ ಬಲವಂತ ಇಲ್ಲ. ಶೇ 95ರಷ್ಟು ನೌಕರರು ವೇತನದಿಂದ ದೇಣಿಗೆ ನೀಡುವ ವಿಶ್ವಾಸವಿದೆ’ ಎಂದು ಅಧ್ಯಕ್ಷ ಷಡಾಕ್ಷರಿ ತಿಳಿಸಿದ್ದಾರೆ.

ನೌಕರರ ಅಸಮಾಧಾನ!
‘ಸರ್ಕಾರ 7ನೇ ವೇತನ ಆಯೋಗ ರಚಿಸಿದ ಆದೇಶ ಇನ್ನೂ ಬಂದಿಲ್ಲ. ಆದರೆ, ಪುಣ್ಯಕೋಟಿ ಯೋಜನೆಗೆ ವೇತನದಿಂದ ವಂತಿಗೆ ಕಡಿತಗೊಳಿಸುವ ಆದೇಶ ತರಾತುರಿಯಲ್ಲಿ ಬಂದಿದೆ. ಇದು ನಮ್ಮ ದುರಾದೃಷ್ಟ’ ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಎಂದು ಪಿ. ಗುರುಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಎಸ್‌ಸಿ, ಎಸ್‌ಟಿ ನೌಕರರ ಸಂಘ ಅಸಮ್ಮತಿ ‘ರಾಜ್ಯದಲ್ಲಿ ನಮ್ಮ ಸಂಘ ಕೂಡಾ ಬಲಿಷ್ಠವಾದುದು. ಯೋಜನೆಗೆ ವೇತನದಿಂದ ದೇಣಿಗೆ ಕಟಾಯಿಸುವ ಬಗ್ಗೆ ನಮ್ಮ ಜೊತೆ ರಾಜ್ಯ ಸರ್ಕಾರಿ ನೌಕರರ ಸಂಘವಾಗಲಿ, ಇತರ ಅಧಿಕಾರಿಗಳಾಗಲಿ ಸಮಾಲೋಚನೆ ನಡೆಸಿಲ್ಲ. ಹೀಗಾಗಿ, ವೇತನ ಕಟಾಯಿಸುವುದಕ್ಕೆ ನಮ್ಮ ಸಮ್ಮತಿ ಎಂದು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಹೇಳಿದ್ದಾರೆ.

ಯಾರಿಂದ ಎಷ್ಟು ಮೊತ್ತ?

ವೃಂದ; ಮೊತ್ತ (₹ಗಳಲ್ಲಿ)
‘ಎ’ ವೃಂದ; 11,000
‘ಬಿ’ ವೃಂದ; 4,000
‘ಸಿ’ ವೃಂದ; 4,00
‘ಡಿ’ ವೃಂದ; ವಿನಾಯಿತಿ

Categories
Uncategorized

ಪಡಿತರ ಕಾರ್ಡ್ ಇರುವವರಿಗೆ ಸಿಹಿ ಸುದ್ದಿ

  • ಇನ್ಮುಂದೆ ಪಿಒಎಸ್ ಸಾಧನ ಅಳವಡಿಕೆ ಕಡ್ಡಾಯ
  • ದೇಶಾದ್ಯಂತ ಹೊಸ ನಿಯಮ ಜಾರಿ

NAMMUR EXPRESS NEWS
ನವದೆಹಲಿ: ಒಂದು ಕಡೆ, ಸರ್ಕಾರವು ಉಚಿತ ಪಡಿತರದ ಅವಧಿಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿದೆ. ಮತ್ತೊಂದೆಡೆ, ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ’ ಅನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ, ಇದರ ನಂತರ ಆನ್ಸೆನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಅಂದರೆ ಪಿಒಎಸ್ ಸಾಧನವನ್ನು ಎಲ್ಲಾ ಅಂಗಡಿಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ, ಫಲಾನುಭವಿಗಳಿಗೆ ಸರಿಯಾದ ಪ್ರಮಾಣದ ಆಹಾರ ಧಾನ್ಯಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಸೈಲ್ಗಳೊಂದಿಗೆ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಇಪಿಒಎಸ್) ಸಾಧನಗಳನ್ನು ಅಳವಡಿಕೆ ಮಾಡಲು ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆಯ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಇದರ ನಂತರ, ಎಲ್ಲಾ ಕೋಟಾದಾರರು ಎಲೆಕ್ಟ್ರಾನಿಕ್ ಮಾಪಕಗಳನ್ನು ಇಟ್ಟುಕೊಳ್ಳುವುದು ಈಗ ಕಡ್ಡಾಯವಾಗಿದೆ.
ಸರ್ಕಾರದ ಈ ಆದೇಶದ ನಂತರ, ಈಗ ದೇಶದ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ಆನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಅಂದರೆ ಪಿಒಎಸ್ ಸಾಧನಗಳನ್ನು ಸೂಚನೆ ನೀಡಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಫಲಾನುಭವಿಗೆ ಯಾವುದೇ ಸಂದರ್ಭದಲ್ಲೂ ಕಡಿಮೆ ಪಡಿತರ ದೊರೆಯದಂತೆ ನೋಡಿಕೊಳ್ಳಲು ಹೈಬ್ರಿಡ್ ಮಾದರಿಯ ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ಪಡಿತರ ವಿತರಕರಿಗೆ ಒದಗಿಸಲಾಗಿದೆ. ನೆಟ್ವರ್ಕ್ ಇಲ್ಲದಿದ್ದರೆ ಈ ಯಂತ್ರಗಳು ಆನ್ ಲೈನ್ ಮೋಡ್ ಮತ್ತು ಆಫ್ ಲೈನ್ ನಲ್ಲಿ ಕಾರ್ಯನಿರ್ವಹಿಸುತ್ತವೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಟಿಪಿಡಿಎಸ್) ಕಾರ್ಯಾಚರಣೆಯ ಪಾರದರ್ಶಕತೆಯನ್ನು ಸುಧಾರಿಸುವ ಮೂಲಕ ಕಾಯ್ದೆಯ ಸೆಕ್ಷನ್ 12 ರ ಅಡಿಯಲ್ಲಿ ತೂಕವಿರುವ ಆಹಾರ ಧಾನ್ಯವನ್ನು ಸುಧಾರಿಸುವ ಪ್ರಕ್ರಿಯೆಯನ್ನು ಮುಂದುವರಿಸುವ ಪ್ರಯತ್ನವಾಗಿದೆ ಎಂದು ಸರ್ಕಾರ ಹೇಳಿದೆ.

Categories
ಕೃಷಿ

ಅಂತೂ ಬಂತು ಎಲೆ ಚುಕ್ಕಿ ಅಧ್ಯಯನ ಸಮಿತಿ!

  • ಮುಂದಿನ ವಾರ ಕರ್ನಾಟಕಕ್ಕೆ ಆಗಮನ
  • ಅಡಿಕೆ ರೋಗ ಅಧ್ಯಯನಕ್ಕೆ ಕೇಂದ್ರದ ಸಮಿತಿ
  • ಆಡಿಕೆಗೆ ರೋಗ, ಸರ್ಕಾರ ನಿಮ್ಮ ಜೊತೆಯಿದೆ: ಸಿಎಂ

NAMMUR EXPRESS NEWS
ಶಿವಮೊಗ್ಗ/ ಬೆಂಗಳೂರು: ರಾಜ್ಯದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆಚುಕ್ಕೆ ರೋಗ ರಾಜ್ಯದ ರೈತರ ಕಂಗೆಡಿಸಿರುವ ನಡುವೆ ಈ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳಲು ಇದೀಗ ಸಮಿತಿ ಮುಂದಿನ ವಾರ ಕರುನಾಡಿಗೆ ಆಗಮಿಸಲಿದೆ.
ಕೇಂದ್ರ ಸರಕಾರದ ಏಳು ಮಂದಿ ತಜ್ಞರನ್ನು ಒಳಗೊಂಡ ತಜ್ನರ ಸಮಿತಿ, ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದೆ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
ಮಲೆನಾಡು ಹಾಗೂ ಕರಾವಳಿ ಭಾಗದ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ, ಕೇಂದ್ರ ಸರಕಾರ, ತಕ್ಷಣ ಸ್ಪಂದಿಸಿದ್ದು, ಅಡಿಕೆ ಬೆಳೆಗೆ ಎದುರಾಗಿರುವ ರೋಗ ನಿವಾರಣೆಗೆ, ತಜ್ನರ ಸಮಿತಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿ ಎಂದು ಹಾರೈಸಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯ ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾದ, ಎಲೆ ಚುಕ್ಕೆ ರೋಗಕ್ಕೆ ಪರಿಹಾರ ಬಯಸಿ, ನಿಕಟಪೂರ್ವ ಮುಖ್ಯಮಂತ್ರಿಗಳೂ ಹಾಗೂ ಹಿರಿಯ ಬಿಜೆಪಿ ನಾಯಕರಾದ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ, ಕೇಂದ್ರ ಕೃಷಿ ಸಚಿವ ನರೆಂದ್ರ ಸಿಂಗ್ ತೋಮರ್ ಅವರನ್ನು ನವದೆಹಲಿಯಲ್ಲಿ ನಿಯೋಗ, ಭೇಟಿಯಾಗಿ ಮನವಿ ಸಲ್ಲಿಸಿದ್ದು, ಕೇಂದ್ರ ಸರಕಾರ, ಸಮಸ್ಯೆಯ ಪರಿಹಾರಕ್ಕೆ ಪೂರಕವಾಗಿ ಸ್ಪಂದಿಸಿ ಸಮಿತಿ ರಚಿಸಿದೆ ಎಂದರು.

20 ಸಾವಿರ ಹೆಕ್ಟೇರ್ ತೋಟ ರೋಗಕ್ಕೆ ಬಲಿ!

ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದ ಅಡಿಕೆ ತೋಟಗಳು ಎಲೆ ಚುಕ್ಕೆ ರೋಗಕ್ಕೆ ಬಲಿಯಾಗಿದ್ದು ಕಾಡ್ಗಿಚ್ಚಿನಂತೆ, ಇತರೆಡೆ ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಆರಗ ನ.22ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿಗೆ ಆಗಮಿಸುವ, ಸಂಶೋಧನಾ ತಜ್ಞರನ್ನು ಭೇಟಿಯಾಗಿ ಪರಿಸ್ಥಿತಿಯ ಮನವರಿಕೆ ಮಾಡಿಕೊಡುವೆ ಎಂದು ತಿಳಿಸಿದ್ದಾರೆ.
ದೆಹಲಿಯಿಂದ ಆಗಮಿಸುವ ತಜ್ಞರು, ವಿವಿದೆಡೆ ರೋಗ ಬಾಧಿತ ಅಡಿಕೆ ಬೆಳೆಯನ್ನು, ವೀಕ್ಷಣೆ ಮಾಡುವುದಲ್ಲದೆ, ರೈತರ ಜತೆ ಸಂವಾದವನ್ನೂ ನಡೆಸಲಿದ್ದಾರೆ.
ಸರಿಸುಮಾರು ಐವತ್ತು ಲಕ್ಷ ಜನರಿಗೆ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಜೀವನೋಪಾಯ ಕಲ್ಪಿಸಿಕೊಟ್ಟಿ ರುವ ಅಡಿಕೆ ಬೆಳೆ, ನಮ್ಮ ಭಾಗದ ರೈತರ ಆರ್ಥಿಕ ಜೀವನಾಡಿಯಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದಲ್ಲಿ, ರೈತ ಸಮುದಾಯದ ಜೀವನಾಡಿಯಾದ, ಅಡಿಕೆ ಬೆಳೆ, ಎಲೆ ಚುಕ್ಕೆ ರೋಗದಿಂದ, ನಲುಗಿದ್ದು, ನಿಯಂತ್ರಣ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನೇತೃತ್ವದ ನಿಯೋಗದಲ್ಲಿ ಶಿವಮೊಗ್ಗ ಸಂಸದ ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಕೃಷ್ಣ ಭಟ್ ಸೇರಿದಂತೆ ಇತರ ಗಣ್ಯರೂ ಕೇಂದ್ರಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದರು.

ಅಡಿಕೆ ಎಲೆಚುಕ್ಕಿ ರೋಗಕ್ಕೆ ಸರ್ಕಾರದ ಮದ್ದು

ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ ಹಾಗೂ ಪ್ರಮುಖ ಆದಾಯ ಮೂಲವಾದ ಅಡಿಕೆ ಬೆಳೆಗೆ ತಗಲಿರುವ ಎಲೆಚುಕ್ಕಿ ರೋಗವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯಸರ್ಕಾರದಿಂದ ರೂ. 10 ಕೋಟಿಯನ್ನು ರೋಗ ತಡೆಗಟ್ಟಲು ಔಷಧಿ ಸಿಂಪಡಣೆಗೆ ಬಿಡುಗಡೆ ಮಾಡಲಾಗಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಜಿಲ್ಲೆಯ ಕಡೂರು ಹಾಗೂ ತರೀಕೆರೆ ತಾಲ್ಲೂಕುಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿಗಳು ಕಡೂರಿನ ಪಿಟಿಎಸ್ ತರಬೇತಿ ಕೇಂದ್ರದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಎಲೆಚುಕ್ಕಿ ರೋಗವು ದೊಡ್ಡಪ್ರಮಾಣದಲ್ಲಿ ಹರಡುತ್ತಿದ್ದು, ಈ ರೋಗದಿಂದ ಇಳುವರಿ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತಿದೆ ಎಂದ ಅವರು ಈ ರೋಗ ನಿವಾರಣೆಗೆ ವಿಶ್ವವಿದ್ಯಾಲಯಗಳ ತಂಡ, ಕೃಷಿ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅವರು ವರದಿ ನೀಡಿದ ನಂತರ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Categories
ಮಲ್ನಾಡ್

ಕುವೆಂಪು ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿ ಡಾ.ಬಿ.ಎಲ್.ಶಂಕರ್

  • ಕನ್ನಡದ ಖ್ಯಾತ ಚಿಂತಕ ಶಂಕರ್ ಅವರ ಆಯ್ಕೆ
  • ಕುವೆಂಪು ಪ್ರತಿಷ್ಠಾನಕ್ಕೆ ಹೊಸ ಸ್ಪರ್ಶ ನಿರೀಕ್ಷೆ

NAMMUR EXPRESS NEWS
ತೀರ್ಥಹಳ್ಳಿ: ಪ್ರತಿಷ್ಠಿತ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ನೂತನ ಅಧ್ಯಕ್ಷ ರಾಗಿ ಖ್ಯಾತ ಚಿಂತಕ ಡಾ.ಬಿ.ಎಲ್.ಶಂಕರ್ ಆಯ್ಕೆಯಾಗಿದ್ದಾರೆ. ಪಠ್ಯ ಪುಸ್ತಕಗಳ ವಿವಾದದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಖ್ಯಾತ ಸಾಹಿತಿ,
ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ ಹಂಪಾ ನಾಗರಾಜಯ್ಯ ರಾಜೀನಾಮೆ ಸಲ್ಲಿಸಿದ್ದರು. ಅವರ ಮನ ಒಲಿಕೆ ವಿಫಲವಾದ ಹಿನ್ನಲೆಯಲ್ಲಿ ಕುವೆಂಪು ಪ್ರತಿಷ್ಠಾನದ ಸದಸ್ಯರು ಸಭೆ ಸೇರಿ ಕ್ರಿಯಾಶೀಲ ಚಟುವಟಿಕೆಯ ಸಾಹಿತ್ಯ ಪ್ರೇಮಿ ಡಾ.ಬಿ.ಎಲ್ ಶಂಕರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಕುವೆಂಪು ಟ್ರಸ್ಟ್‌ನಲ್ಲಿ ಹಿರಿಯ ರಾಜಕಾರಣಿಗಳಾದ ಕಾಗೋಡು ತಿಮ್ಮಪ್ಪ, ಡಿ.ಬಿ.ಚಂದ್ರೇಗೌಡ, ಹಿರಿಯ ಸಾಹಿತಿ ಕಮಲಾ ಹಂಪನಾ, ಸ್ಥಳೀಯರಾದ ಡಿ.ಎಂ. ಮನುದೇವ್, ಕೆ.ಟಿ.ನಾರಾಯಣಮೂರ್ತಿ, ಕಡಿದಾಳ್ ಪ್ರಕಾಶ್‌ ಸೇರಿದಂತೆ ಹಲವು ಪ್ರಮುಖರು ಕಾರ್ಯನಿರ್ವಹಿಸುತ್ತಿದ್ದಾರೆ.
ಡಿಸೆಂಬರ್ 29ರಂದು ಕುವೆಂಪು ಜನ್ಮದಿನ ಆಚರಣೆ ಹಿನ್ನಲೆಯಲ್ಲಿ ಕುವೆಂಪು ಪ್ರತಿಷ್ಠಾನ ಪ್ರತಿ ವರ್ಷ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಕುವೆಂಪು ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದ್ದು ದೇಶದ ಅತ್ಯುನ್ನತ ಸಾಹಿತಿಗಳನ್ನು ಆಯ್ಕೆ ಮಾಡಿ 5 ಲಕ್ಷ ರೂ.ನಗದು ಪ್ರಶಸ್ತಿ ಫಲಕಗಳ ಜೊತೆ ಈ ಪ್ರಶಸ್ತಿ ಕೊಡಲಾಗುತ್ತಿದೆ.
ಈ ಹೊತ್ತಿನಲ್ಲಿ ಪ್ರತಿಷ್ಠಾನಕ್ಕೆ ನೂತನ ಅಧ್ಯಕ್ಷರ ಪ್ರವೇಶವಾಗಿದ್ದು ಚಟುವಟಿಕೆಗಳು ಮತ್ತಷ್ಟು ಮೆರಗು ಪಡೆದುಕೊಳ್ಳುವ ಸಾಧ್ಯತೆಯಿದೆ.
ಕುವೆಂಪು ಪ್ರತಿಷ್ಟಾನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಮೂಡಿಗೆರೆಯಲ್ಲಿರುವ ಪೂರ್ಣಚಂದ್ರ ತೇಜಸ್ವಿ ಟ್ರಸ್ಟ್‌ನ ಅಧ್ಯಕ್ಷ ಸ್ಥಾನಕ್ಕೆ ಬಿ.ಎಲ್.ಶಂಕರ್‌ ರಾಜೀನಾಮೆ ಸಲ್ಲಿಸಿದ್ದಾರೆ.
ಬೆಂಗಳೂರಿನ ವಿಶ್ವವಿಖ್ಯಾತ ಚಿತ್ರಕಲಾ ಪರಿಷತ್‌ ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್ ಯಶಸ್ವಿ ಕಾರ್ಯನಿರ್ವಹಣೆ ಮಾಡಿ ಜನಮನ್ನಣೆ ಗಳಿಸಿದ್ದಾರೆ.

Categories
ಮಲ್ನಾಡ್

ಸ್ವಾಮಿಯೇ ಶರಣಂ ಅಯ್ಯಪ್ಪ..!

  • ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ
  • ಮಂಗಳವಾರದಿಂದ ಪೂಜಾ ವಿಧಿ ವಿಧಾನ ಶುರು

NAMMUR EXPRESS NEWS
ಶಬರಿಮಲೆ: ಸ್ವಾಮಿಯೇ ಶರಣಂ ಅಯ್ಯಪ್ಪ..!.
ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಸ್ವಾಮಿಯ ದರ್ಶನ ಆರಂಭವಾಗಿದೆ. ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಭಕ್ತರು ಆಗಮಿಸುತ್ತಿದ್ದಾರೆ.
ಕರೋನಾ ಆತಂಕದ ಬಳಿಕ ಶಬರಿಮಲೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಮಂಗಳವಾರ ಶಬರಿಮಲೆಯಲ್ಲಿ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದು ಬುಧವಾರ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಭಕ್ತರಿಂದ ದರ್ಶನ ಆರಂಭವಾಗುತ್ತಿದೆ.
ಕಾರ್ತಿಕ ಮಾಸದ ಸಂಕ್ರಮಣದಂದು ಭಕ್ತರು ಮಾಲೆಯನ್ನು ಹಾಕುತ್ತಾರೆ. ಡಿ. 27ರಂದು ಮಂಡಲ ಪೂಜೆ ನಡೆಯಲಿದ್ದು ಬಳಿಕ ಇನ್ನೊಂದಾವರ್ತಿಯಲ್ಲಿ ಮಕರಸಂಕ್ರಮಣ ದರ್ಶನಕ್ಕೆ ತೆರೆಯಲಾಗುತ್ತದೆ. ಡಿಸೆಂಬರ್ ಮೊದಲೆರಡು ವಾರಗಳಲ್ಲಿಯೂ ವಿವಿಧೆಡೆ ಶಿಬಿರಗಳ ಮೂಲಕ ಮಾಲೆ ಧರಿಸುತ್ತಾರೆ. ಈ ಸಂದರ್ಭ ವ್ರತಧಾರಿಗಳಲ್ಲದೆ ಮನೆಯ ಇತರ ಸದಸ್ಯರೂ ಸಸ್ಯಾಹಾರವನ್ನು ಸ್ವೀಕರಿಸಿರುವುದರಿಂದ ಒಟ್ಟಾರೆ ತರಕಾರಿ, ಹಣ್ಣುಗಳ ಬಳಕೆ ಜಾಸ್ತಿಯಾಗುತ್ತಿದೆ.

ಯಾತ್ರೆ ಹೇಗೆ ಎತ್ತ..?, ವಾಹನ ಎಲ್ಲಿ ನಿಲ್ಲಿಸಬೇಕು?

ಚೆಂಗನ್ನೂರಿನಿಂದ ನೀಲಕಲ್ ವರೆಗೆ ಸ್ಪಾಟ್ ಬುಕಿಂಗ್ ಮಾಡುವ 12 ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 15 ಆಸನಗಳಿಗಿಂತ ಕಡಿಮೆ ಇರುವ ವಾಹನಗಳಿಗೆ ಪಂಪೆ ವರೆಗೆ ಹೋಗಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯದ ವಾಹನಗಳಿಗೆ ನೀಲಕಲ್ ವರೆಗೆ ಮಾತ್ರ ಪ್ರವೇಶವಿದೆ. ಅಲ್ಲಿ ಭಕ್ತರು ಇಳಿದು ಸರಕಾರಿ ಬಸ್‌ಗಳಲ್ಲಿ ತೆರಳಬೇಕು. ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ನಿತ್ಯ 1 ಲಕ್ಷ ಭಕ್ತರಿಗೆ ಅವಕಾಶ!

ಶಬರಿಮಲೆಯಲ್ಲಿ ನಿತ್ಯ ಒಂದು ಲಕ್ಷ ಭಕ್ತರಿಗೆ ದರ್ಶನಾವಕಾಶ ಸಿಗುವ ಸಾಧ್ಯತೆ ಇದೆ. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಸಂಘಟನೆ 18 ರಾಜ್ಯಗಳಲ್ಲಿ 4,000ಕ್ಕೂ ಹೆಚ್ಚು ಕಡೆ, ಕರ್ನಾಟಕ ರಾಜ್ಯದ 22 ಜಿಲ್ಲೆಗಳಲ್ಲಿ ಅಸ್ತಿತ್ವಕ್ಕೆ ಬಂದಿವೆ. ”ಹರಿವರಾಸನಂ’ ಹಾಡು ರಚನೆಯಾಗಿ ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ ಕರಾವಳಿ ಎರಡೂ ಜಿಲ್ಲೆಗಳ ಮಟ್ಟದ ಕಾರ್ಯಕ್ರಮ ಡಿ.11ರಂದು ಮಂಗಳೂರಿನಲ್ಲಿ ನಡೆಯಲಿದೆ. ರಾಜ್ಯದ ಪ್ರತಿ ತಾಲೂಕು ಜಿಲ್ಲೆಯಲ್ಲಿ ಭಕ್ತರು ಮಾಲೆ ಧರಿಸಲಿದ್ದಾರೆ.

Categories
ಆರೋಗ್ಯ

ರಾಜ್ಯಾಧ್ಯಂತ 108 ಆಂಬುಲೆನ್ಸ್ ಸೇವೆ ಸ್ಥಗಿತ?

  • ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಠಿ ಆತಂಕ ಸಾಧ್ಯತೆ
  • 2 ತಿಂಗಳ ಸಂಬಳ ಬಾಕಿ: ಗುರುವಾರದಿಂದಲೇ ಬಂದ್ ಸಾಧ್ಯತೆ: ಸರ್ಕಾರ ಸಮಸ್ಯೆ ಬಗೆಹರಿಸಲಿ…!

NAMMUR EXPRESS NEWS
ಬೆಂಗಳೂರು: 108 ಆಂಬುಲೆನ್ಸ್ ಸಿಬ್ಬಂದಿ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಗುರುವಾರದಿಂದ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಗುರುವಾರ ದಿಂದ ರಾಜ್ಯಾಧ್ಯಂತ ಆಂಬುಲೆನ್ಸ್ ಸೇವೆ ಸ್ಥಗಿತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
108 ಆಂಬುಲೆನ್ಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವಯ್ಯ ಅವರು ಮಾತನಾಡಿ, ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ಆಂಬುಲೆನ್ಸ್ ಸೇವೆ ಒದಗಿಸುತ್ತಿರುವಂತ ಜಿವಿಕೆ ವೇತನವನ್ನು ಬಾಕಿ ಉಳಿಸಿಕೊಂಡಿದೆ. ವೇತನವಿಲ್ಲದೇ ನೌಕರರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಈ ಹಿಂದೆ ಅನೇಕ ಬಾರಿ ವೇತನ ಬಿಡುಗಡೆಗೆ ಕೋರಿದ್ದರೂ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆಯೊಳಗೆ ಸಂಬಳ ನೀಡದೇ ಇದ್ದರೇ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸೋದಾಗಿ ಎಚ್ಚರಿಸಿದ್ದಾರೆ.
ನಮಗೆ ಬಾಕಿ ವೇತನ ನೀಡಬೇಕು. ಗುರುವಾರದ ಒಳಗೆ ನೀಡದೇ ಇದ್ದರೇ ರಾಜ್ಯಾಧ್ಯಂತ ಆಂಬುಲೆನ್ಸ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಆಂಬುಲೆನ್ಸ್ ಸೇವೆ ಸ್ಥಗಿತದಿಂದ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾದರೇ ಅದಕ್ಕೆ ಜಿವಿಕೆ ಸಂಸ್ಥೆಯೇ ನೇರ ಕಾರಣ ಎಂಬುದಾಗಿ ಹೇಳಿದರು. ಮತ್ತೊಂದೆಡೆ ಮುಷ್ಕರ, ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವಂತ ಎಚ್ಚರಿಕೆ ನೀಡಿರುವಂತ ನೌಕರರೊಂದಿಗೆ ಆರೋಗ್ಯ ಸಚಿವ ಡಾ.ಕೆ ಸುಧಾಕ‌ರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಮುಂದುವರೆಸಿಕೊಂಡು ಹೋಗುವಂತೆ, ಬಾಕಿ ವೇತನ ಬಿಡುಗಡೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿಯೂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳು 108 ತಂತ್ರಜ್ಞಾನ ಸೇವೆ ವ್ಯತ್ಯಾಸ ಉಂಟಾಗಿ ಸಾವಿರಾರು ಮಂದಿಗೆ ತೊಂದರೆ ಉಂಟಾಗಿತ್ತು. ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂಬುದು ನಮ್ಮೂರ್ ಎಕ್ಸ್ ಪ್ರೆಸ್ ಮನವಿ.

Categories
ರಾಜಕೀಯ

ಕೋಟ ಶ್ರೀನಿವಾಸ್ ಪೂಜಾರಿ ಆರೋಗ್ಯ ಏರುಪೇರು

  • ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ
  • ವಿಶ್ರಾಂತಿಗೆ ಸೂಚಿಸಿದ ವೈದ್ಯರು

NAMMUR EXPRESS NEWS
ಉಡುಪಿ: ಹಿರಿಯ ಬಿಜೆಪಿ ನಾಯಕ, ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತುರ್ತು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯರ ಸಲಹೆಯಂತೆ 4-5 ದಿನಗಳ ಕಾಲ ಸಾರ್ವಜನಿಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಯಾವುದೇ ಕೆಲಸಗಳಿಗಾಗಿ ಆಪ್ತ ಸಹಾಯಕರನ್ನು ಮತ್ತು ದೂರವಾಣಿ ಮೂಲಕ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಸರಳ ನಾಯಕರಾಗಿ, ಹಿಂದುಳಿದ ವರ್ಗದ ನಾಯಕರಾಗಿ ಶ್ರೀನಿವಾಸ್ ಪೂಜಾರಿ ಅವರ ಆರೋಗ್ಯ ಸುಧಾರಣೆ ಆಗಲಿ ಎಂಬ ಹಾರೈಕೆ ಜನರಿಂದ ವ್ಯಕ್ತವಾಗುತ್ತಿದೆ.

Categories
ರಾಜಕೀಯ

ಶಿವಮೊಗ್ಗ ಜಿಲ್ಲೆ: ಕಾಂಗ್ರೆಸ್ ಆಕಾಂಕ್ಷಿಗಳಾಗಿ ಯಾರ್ಯಾರ ಅರ್ಜಿ?

  • ತೀರ್ಥಹಳ್ಳಿ, ಸಾಗರದಲ್ಲೇ ಪೈಪೋಟಿ ಹೆಚ್ಚು
  • ಪಕ್ಷಕ್ಕೆ ಅರ್ಜಿ ಸಲ್ಲಿಸಲು 5 ದಿನ ಅವಧಿ ವಿಸ್ತರಣೆ

NAMMUR EXPRESS NEWS
ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ನಿಗದಿ ಮಾಡಿದ್ದ ದಿನಾಂಕದಿಂದ ಐದು ದಿನ ಅರ್ಜಿ ಸಲ್ಲಿಸಲು ಅವಧಿಯನ್ನ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ನ.21 ಕೊನೆಯ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಸೊರಬ, ಮತ್ತು ಭದ್ರಾವತಿಯಲ್ಲಿ ತಲಾ ಒಬ್ಬರು ಅರ್ಜಿಸಲ್ಲಿಸಿದ್ದಾರೆ. ತೀರ್ಥಹಳ್ಳಿ ಮತ್ತು ಸಾಗರ ವಿಧಾನ ಸಭಾ ಕ್ಷೇತ್ರದಿಂದ ಆರ್.ಎಂ.ಮಂಜುನಾಥ್ ಗೌಡ, ಕಿಮ್ಮನೆ ರತ್ನಾಕರ್, ಕಡ್ತುರ್ ದಿನೇಶ್ ಅರ್ಜಿ ಸಲ್ಲಿಸಿದ್ದಾರೆ.
ಸಾಗರದಿಂದ ಬೇಳೂರು ಗೋಪಾಲಕೃಷ್ಣ, ರಾಜನಂದಿನಿ, ಕಾಗೋಡು ತಿಮ್ಮಪ್ಪ, ಕಲಗೋಡು ರತ್ನಾಕರ್, ಬಿ.ಆರ್ ಜಯಂತ್ ಅರ್ಜಿ ಸಲ್ಲಿಸಿದ್ದಾರೆ.
ಶಿಕಾರಿಪುರದಲ್ಲಿ ದರ್ಶನ್ ಉಳ್ಳಿ, ಕವುಲೆ ಗಂಗಾಧರ್, ನಿರ್ಮಲಾ ಪಾಟೀಲ್, ರಾಘವೇಂದ್ರ ನಾಯ್ಕ್, ಪಿಒ ಪುಷ್ಪ ಶಿವಕುಮಾರ್, ನಾಗರಾಜ್ ಗೌಡ, ಗೋಣಿ ಮಲ್ಲೇಶ್ ಹಾಗೂ ಮಹಾಲಿಂಗಪ್ಪ ಅರ್ಜಿ ಸಲ್ಲಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಹೆಚ್ ಸಿ ಯೋಗೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಮರಿಯಪ್ಪ, ವೈಹೆಚ್ ನಾಗರಾಜ್, ಲೇಔಟ್ ಇಮ್ಮಿಯಾಜ್ ಖಾನ್, ಶಿಮ್ ಜೋಸೆಫ್, ವಕೀಲ ನರಸಿಂಹ ಮೂರ್ತಿ (ಬಾಬಣ್ಣ), ಎಸ್ ಪಿ ದಿನೇಶ್, ಲಗನ್ ಸತ್ಯನಾರಾಯಣ್ ಅರ್ಜಿ ಸಲ್ಲಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಿಂದ ಆರ್ ಸಿ ನಾಯ್ಕ್ , ಪಲ್ಲವಿ, ರವಿಕುಮಾರ್, ಬಲ್ಲೇವ್ ಕೃಷ್ಣ, ಕೃಷ್ಣ, ಶ್ರೀನಿವಾಸ್ ಕರಿಯಣ್ಣ ಅನಿತಾಕುಮಾರಿ, ದಿ.ಬಸವಣ್ಣಪ್ಪರ ಮಗ ದಿನೇಶ್, ಶಂಕರ್, ನಾರಾಯಣ ಸ್ವಾಮಿ ಅರ್ಜಿ ಸಲ್ಲಿಸಿದ್ದಾರೆ.

Categories
ರಾಜ್ಯ

ಶರಾವತಿ ಸಂತ್ರಸ್ತರ ಸಮಸ್ಯೆ: ಕಾಂಗ್ರೆಸ್ ಹೋರಾಟ

  • ನ.28ರಂದು ಬೃಹತ್ ಪ್ರತಿಭಟನೆ: ಸರ್ಕಾರದ ಗಮನ ಸೆಳೆಯಲು ಯತ್ನ
  • ಮಲೆನಾಡಿನ ಎಲ್ಲಾ ನಾಯಕರು ಹಾಜರ್

NAMMUR EXPRESS NEWS
ಶಿವಮೊಗ್ಗ: ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್‌ ಜಾಗೃತ ಸಮಿತಿ ಬೃಹತ್ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದೆ.
ನಾಡಿಗೆ ಬೆಳಕು ಕೊಟ್ಟು ಕತ್ತಲಲ್ಲಿ ಬದುಕು ಕಾಣುತ್ತಿರುವ ಸಂತ್ರಸ್ತರ ಸಮಸ್ಯೆಯನ್ನು ಬಿಜೆಪಿ ಸರ್ಕಾರ ಸೃಷ್ಟಿಸಿದೆ. ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಒತ್ತಾಯಿಸಿ ನಾವು ನ.28ರಂದು ಶಿವಮೊಗ್ಗದಲ್ಲಿ ಸಂತ್ರಸ್ತರ ಬೃಹತ್ ಸಮಾವೇಶವನ್ನು ಆಯೋಜಿಸಿದ್ದೇವೆ. ಈ ಸಮಾವೇಶಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಆಗಮಿಸುತ್ತಾರೆ ಎಂದರು.
ಸಮಿತಿಯ ಸಂಚಾಲಕ ಆರ್. ಪ್ರಸನ್ನಕುಮಾರ್ ಮಾತನಾಡಿ, ಸಂತ್ರಸ್ತರ ಬದುಕು ದುಸ್ತರವಾಗಿದೆ. ಕಾಂಗ್ರೆಸ್ ಸರ್ಕಾರ ಸಂತ್ರಸ್ತರ ಪರವಾಗಿ ಇತ್ತು. ಸುಮಾರು 58 ಡಿನೋಟಿಫಿಕೇಷನ್‌ ಮಾಡುವ ಮೂಲಕ ಸಂತ್ರಸ್ತರ ಬದುಕಲ್ಲಿ ಬೆಳಕು ಮೂಡಿಸಿತ್ತು. ಆದರೆ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಎರಡು ನೋಟಿಫಿಕೇಷನ್ನಿಗೆ ಸಂಬಂಧಿಸಿದಂತೆ ರದ್ದಾಗಿರುವುದನ್ನೇ ಇಟ್ಟಕೊಂಡು ಉಳಿದೆಲ್ಲಾ ಡಿನೋಟಿಫಿಕೇಷನ್ ರದ್ದುಮಾಡಿ ನೋಟಿಫಿಕೇಷನ್ ಮಾಡಿ ಸಂತ್ರಸ್ತರನ್ನು ಅತಂತ್ರರನ್ನಾಗಿ ಮಾಡಿದೆ ಎಂದು ದೂರಿದರು.
ಸಮಿತಿಯ ಮತ್ತೊಬ್ಬ ಮುಖಂಡ ಮಧು ಬಂಗಾರಪ್ಪ ಮಾತನಾಡಿ, ಧಮ್, ತಾಕತ್ ಇದ್ದರೆ ಮುಖ್ಯಮಂತ್ರಿಗಳು ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಲಿ. ಅವರು ಪದೇಪದೇ ಧಮ್ ಬಗ್ಗೆ ಮಾತನಾಡುತ್ತಾರೆ. ಅವರ ಧಮ್ ಅನ್ನು ಈಗ ಸಮಸ್ಯೆ ಬಗೆಹರಿಸುವುದಕ್ಕೆ ಎತ್ತಲಿ. ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಲಿ. ಬಿಜೆಪಿ ಸರ್ಕಾರ ಹೇಳಿಕೆ ಕೊಟ್ಟರೆ ಪ್ರಯೋಜನವಿಲ್ಲ, ಸಂತ್ರಸ್ತರ ಪರವಾಗಿ ಬಿಜೆಪಿ ಸರ್ಕಾರ ಮೇಲ್ಮನವಿ ಸಲ್ಲಿಸಿಲ್ಲ. ರೈತರನ್ನು ಒಕ್ಕಲೆಬ್ಬಿಸುತ್ತಲೇ ಇದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಜನಾಂದೋಲನವನ್ನೇ ಹಮ್ಮಿಕೊಂಡಿದೆ. ಇದರ ಜೊತೆಗೆ ಮಲೆನಾಡು ಭಾಗದ ಸಮಸ್ಯೆಗಳನ್ನು ಇಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ. ಇದು ರಾಜಕಾರಣವಲ್ಲ, ಬದುಕಿನ ಪ್ರಶ್ನೆ ಎಂದರು.

ಸಂತ್ರಸ್ತರ ಕಣ್ಣೀರು ಒರೆಸುವ ನಾಟಕ: ಕಿಮ್ಮನೆ

ಮಾಜಿ ಸಚಿವ ಹಾಗೂ ಸಮಿತಿಯ ಮುಖಂಡ ಕಿಮ್ಮನೆ ರತ್ನಾಕರ್ ಮಾತನಾಡಿ, ಬಿಜೆಪಿ ಸರ್ಕಾರ ಸಮಸ್ಯೆಯನ್ನು ಜೀವಂತವಾಗಿ ಇಟ್ಟುಕೊಂಡಿದೆ. ಕಾಂಗ್ರೆಸ್ ಸರ್ಕಾರ ಸಂತ್ರಸ್ತರ ಪರವಾಗಿ ಮಾಡಿದ ಕಾಯಿದೆಗಳನ್ನೆಲ್ಲ ವಜಾ ಮಾಡಲು ಅನುಕೂವಾಗುವಂತೆ ಹೊಸ ಕಾಯಿದೆಯನ್ನೇ ಮಾಡಿದೆ. ಸಂತ್ರಸ್ತರ ಕಣ್ಣೀರು ಒರೆಸುವ ತಂತ್ರಗಾರಿಕೆ ಮಾಡುತ್ತಿದೆ. ಕೇಂದ್ರದ ಮೇಲೆ ಎತ್ತಿಹಾಕುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆಯೇಕೆ ಎಂದು ಅರ್ಥವಾಗುತ್ತಿಲ್ಲ. ಅರಣ್ಯ ಕಾಯಿದೆಗೆ ತಿದ್ದುಪಡಿ ಮಾಡಿದರೆ ಸಾಕು. ಮೋದಿಯನ್ನು ಮಧ್ಯ ತರುವ ಅಗತ್ಯವೇ ಇಲ್ಲ. ಯಾವುದೋ ಕಾರ್ಪೊರೇಷನ್ ವ್ಯಾಪ್ತಿಗೆ ಬರುವ ಕಾನೂನನ್ನು ಬಡವರ ಬದುಕಿಗೆ ತರುವುದು ಅರ್ಥವಿಲ್ಲ ಎಂದರು.
ಈ ಸರ್ಕಾರಕ್ಕೆ ಬಡವರ ಬದುಕು ಬೇಡ. ಬಣ್ಣ ಬೇಕು. ಬಣ್ಣವನ್ನು ಇಟ್ಟುಕೊಂಡು ಬಣ್ಣಿಸುವ ಬಿಜೆಪಿ ಸರ್ಕಾರಕ್ಕೆ ಸಮಸ್ಯೆಗಳೇ ಗೊತ್ತಿಲ್ಲ. ಜಾತಿ, ಧರ್ಮದ ಆಧಾರದಲ್ಲಿ ಮನುಷ್ಯರ ಭಾವನೆಗಳನ್ನು ಕೆರಳಿಸಿ ಶಾಂತಿಯನ್ನು ಕದಡಿ ಅಭಿವೃದ್ಧಿಯನ್ನೇ ಕಡೆಗಣಿಸುತ್ತಿರುವ ಈ ಬಿಜೆಪಿ ಸರ್ಕಾರಕ್ಕೆ ನಾವು ತಕ್ಕ ಪಾಠ ಕಲಿಸುತ್ತೇವೆ. ಶರಾವತಿ ಸಂತ್ರಸ್ತರ ಸಮಸ್ಯೆಯನ್ನೇ ನಾವು ಮುಂದಿಟ್ಟುಕೊಂಡು ಇದನ್ನು ಮುಂದಿನ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿಯೇ ಸಂತ್ರಸ್ತರ ಸಮಸ್ಯೆ ಪರಿಹರಿಸವ ಘೋಷಣೆ ಮಾಡುತ್ತೇವೆ ಎಂದರು. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಈ ಸರ್ಕಾರಕ್ಕೆ ಮಾನ ಮರ್ಯಾದೆ ಎಂಬುದೇ ಇಲ್ಲ ಈಗಾಗಲೇ ಶರಾವತಿ ಸಂತ್ರಸ್ತರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ನಾಲ್ಕೂವರೆ ವರ್ಷವಾದರೂ ಸಮಸ್ಯೆ ಬಗ್ಗೆ ಮಾತನಾಡದ ಮಲೆನಾಡಿನ ಬಿಜೆಪಿ ಶಾಸಕರು ಇದ್ದಕ್ಕಿದ್ದಂತೆ ಸಂತ್ರಸ್ತರ ಪರವಾಗಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದರು.
ನಮ್ಮಹೋರಾಟ ಐತಿಹಾಸಿಕ ರೂಪ ಪಡೆಯುವುದರಲ್ಲಿ ಆಶ್ಚರ್ಯವೇ ಇಲ್ಲ. ನೇಣು ಇಲ್ಲವೇ ಹೋರಾಟ ಎಂಬ ನಿರ್ಧಾರಕ್ಕೆ ಸಂತ್ರಸ್ತರು ಬಂದಿದ್ದಾರೆ.
ಈಗಾಗಲೇ ದಯಾಮರಣಕ್ಕೆ ಸಂತ್ರಸ್ತರು ಅರ್ಜಿ ಹಾಕಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆಗಡುಕ ಬಿಜೆಪಿ ಸರ್ಕಾರದ ವಿರುದ್ಧ ಮಾಡು ಇಲ್ಲವೆ ಮಡಿ ಹೋರಾಟವನ್ನು ನಾವು ಆರಂಭಿಸಿದ್ದೇವೆ. ನ.28ರಂದು ಈ ಬೃಹತ್ ಹೋರಾಟಕ್ಕೆ ಕರೆಕೊಟ್ಟಿದ್ದೇವೆ. ಎತ್ತು ಗಾಡಿ, ಮಕ್ಕಳು, ಮರಿ ಹೀಗೆ ಕುಟುಂಬ ಸಮೇತ ನ.28ರಂದು ಮಲೆನಾಡಿನ ಎಲ್ಲ ಹಳ್ಳಿಗಳ ರಸ್ತೆಗಳು ಶಿವಮೊಗ್ಗಕ್ಕೆ ಸೇರಿಕೊಳ್ಳುತ್ತವೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ಈ ಹೋರಾಟಕ್ಕೆ ಸುಮಾರು 1ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜಿವಾಲಾ, ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್, ಸಂತ್ರಸ್ತರ ಜಾಗೃತಿ ಸಮಿತಿಯ ಮುಖ್ಯ ರೂವಾರಿ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಆಯನೂರಿನಿಂದ ಪಾದಯಾತ್ರೆ ಆರಂಭ

ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ನ.28ರಂದು ಆಯನೂರಿನಿಂದ ಪಾದಯಾತ್ರೆ ಆರಂಭವಾಗುತ್ತದೆ. ಶಿವಮೊಗ್ಗದ ಸಮೀಪ ರಾಜ್ಯ ನಾಯಕರು ಈ ಪಾದಯಾತ್ರೆಯಲ್ಲಿ ಹೆಜ್ಜೆಹಾಕಲಿದ್ದಾರೆ. ಸಂಜೆ 4 ಗಂಟೆಗೆ ಪ್ರತಿಭಟನಾ ಸಭೆ ನಡೆಯುತ್ತದೆ ಜಿಲ್ಲೆಯಲ್ಲಿಯೇ ಬಹುದೊಡ್ಡ ಹೋರಾಟ ಇದಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿ.ಎ. ರಮೇಶ್ ಹೆಗ್ಡೆ, ಕಲಗೋಡು ರತ್ನಾಕರ್, ಅನಿತಾಕುಮಾರಿ, ಎಸ್.ಪಿ. ದಿನೇಶ್, ಧರ್ಮರಾಜ್, ರೇಖಾ ರಂಗನಾಥ್. ಎನ್‌. ರಮೇಶ್ ಜಿ.ಡಿ. ಮಂಜುನಾಥ್‌, ಇಕ್ಕೇರಿ ರಮೇಶ್, ವಿಜಯಕುಮಾರ್, ನಗರದ ಮಹಾದೇವಪ್ಪ ಸೇರಿದಂತೆ ಮೊದಲಾದವರಿದ್ದರು.

Categories
ರಾಜಕೀಯ

ತೀರ್ಥಹಳ್ಳಿಗೆ ಸಿಎಂ ನ.27ಕ್ಕೆ ಆಗಮನ!

  • 280 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ
  • 10 ರಿಂದ 12 ಸಾವಿರ ಜನ ಸೇರುವ ನಿರೀಕ್ಷೆ

NAMMUR EXPRESS NEWS
ತೀರ್ಥಹಳ್ಳಿ: ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿಗೆ ತೀರ್ಥಹಳ್ಳಿ ಸಜ್ಜುಗೊಂಡಿದೆ.
ನವೆಂಬರ್ 27ರ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಥಹಳ್ಳಿಗೆ ಬರುತ್ತಿದ್ದಾರೆ. ಸಿಎಂ ಆದ ತರುವಾಯ ಮೊದಲ ಬಾರಿಗೆ ತೀರ್ಥಹಳ್ಳಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಬೊಮ್ಮಾಯಿ ಅವರಿಗೆ ಭರ್ಜರಿ ಸ್ವಾಗತ ನೀಡಲು ಕ್ಷೇತ್ರ ಬಿಜೆಪಿ ಘಟಕ ಸರ್ವ ರೀತಿಯ ತಯಾರಿ ಆರಂಭಿಸಿದೆ.
ವಿಧಾನಸಭೆ ಚುನಾವಣೆಗೆ ಕೇವಲ ಐದು ತಿಂಗಳು ಬಾಕಿ ಉಳಿದಿದ್ದು ಬಿಜೆಪಿ ಸಿಎಂ ಭೇಟಿ ಕಾರ್ಯಕ್ರಮಕ್ಕೆ ಭರ್ಜರಿ ಜನ ಸೇರಿಸಲು ಸಿದ್ಧತೆ ನಡೆದಿದೆ.

ಯಾವ ಯಾವ ಯೋಜನೆಗೆ ಚಾಲನೆ

  • 280 ಕೋಟಿ ಮೊತ್ತದ ವಿವಿಧ ಕಾಮಗಾರಿಗೆ ಚಾಲನೆ:
  • 232 ಕೋಟಿ ವೆಚ್ಚದ ಜಲಜೀವನ್ ಮಿಷನ್ ಯೋಜನೆ
  • 5 ಕೋಟಿ ವೆಚ್ಚದ ಪ ಪಂ ಕಾರ್ಯಾಲಯ ಉದ್ಘಾಟನೆ
  • 10 ಕೋಟಿ ವೆಚ್ಚದ ತಾ. ಪಂ ಕಟ್ಟಡ
  • 9 ಕೋಟಿ ವೆಚ್ಚದ ಡಿಗ್ರಿ ಕಾಲೇಜು ಕಟ್ಟಡ
  • 4 ಕೋಟಿ ವೆಚ್ಚದ ಪೊಲೀಸ್ ಸ್ಟೇಷನ್, ವಸತಿಗೃಹ
  • 3 ಕೋಟಿ ವೆಚ್ಚದ ಅಗ್ನಿಶಾಮಕ ಘಟಕ
  • 15 ಕೋಟಿ ವೆಚ್ಚದ ಐಟಿಐ ಕಟ್ಟಡ
  • 6.5 ಕೋಟಿ ವೆಚ್ಚದ ನಗರೋಸ್ಥಾನ ಕಾಮಗಾರಿ
  • 2 ಕೋಟಿ ವೆಚ್ಚದ ರಾಮೇಶ್ವರ ದೇವಸ್ಥಾನದ ಬಳಿ ಕಲ್ಯಾಣ ಮಂದಿರ ನಿರ್ಮಾಣ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು.