Categories
ಶಿಕ್ಷಣ

ಕಾರ್ಕಳ ಕ್ರಿಯೇಟಿವ್‌ ಕಾಲೇಜಿನಲ್ಲಿ “ಮಕ್ಕಳ ದಿನಾಚರಣೆ” ಸಂಭ್ರಮ!

  • ನೆಹರೂ ಭಾವಚಿತ್ರಕ್ಕೆ ಪುಷ್ಪ ನಮನ

NAMMUR EXPRESS NEWS
ಕಾರ್ಕಳ: ಕಾರ್ಕಳ ಕ್ರಿಯೇಟಿವ್‌ ಕಾಲೇಜಿನಲ್ಲಿ “ಮಕ್ಕಳ ದಿನಾಚರಣೆ”ಯನ್ನು ಆಚರಿಸಲಾಯಿತು.
ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದ ಮಕ್ಕಳ ನೆಚ್ಚಿನ ಚಾಚಾ ನೆಹರು ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು.
ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಮಾತನಾಡಿ,ರಾಷ್ಟ್ರಕಂಡ ಮಹಾನ್‌ ಚೇತನ ಮಕ್ಕಳನ್ನು ಕಂಡರೆ ಅತೀವ ಪ್ರೀತಿಯಿದ್ದ ಕಾರಣ ತನ್ನ ಜನ್ಮದಿನವನ್ನೇ ಮಕ್ಕಳ ದಿನವನ್ನಾಗಿ ಆಚರಿಸುವಂತೆ ಹೇಳಿದ್ದು ನೆಹರೂ ಅವರ ಧೀಮಂತ ವ್ಯಕ್ತಿತ್ವ ತಿಳಿಸುತ್ತದೆ. ಆದ್ದರಿಂದ ನಮ್ಮ ಹಿರಿಯರು ಹಾಕಿಕೊಟ್ಟ ಉತ್ತಮ ಮಾರ್ಗದಲ್ಲಿ ಸಾಗೋಣ ಎಂದು ಕರೆ ನೀಡಿದರು.
ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ, ಅಶ್ವಥ್‌ ಎಸ್‌ ಎಲ್‌, ಅಮೃತ್‌ ರೈ ಹಾಗೂ ಉಪನ್ಯಾಸಕರಾದ ರಾಜೇಶ್‌ ಶೆಟ್ಟಿ, ವಿನಾಯಕ ಜೋಗ್‌, ರಾಮಕೃಷ್ಣ ಹೆಗಡೆ, ಮಹೇಶ್‌ ಶೆಣೈ, ನಿಧಿ ಶೆಟ್ಟಿ, ಗಿರೀಶ್‌ ಭಟ್‌ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರಕಾಶ್‌, ರುವಿಟಾ ಡಿಸೋಜ, ಸಾರ್ವಜನಿಕ ಸಂಪರ್ಕ ಅಧಿಕಾರಿ ಲಿಶನ್‌ ಗೌಡ, ವಿದ್ಯಾರ್ಥಿ ನಿಲಯ ಪಾಲಕರು ಉಪಸ್ಥಿತರಿದ್ದರು.

Categories
Uncategorized

ಹಾಲಿನ ದರ ಏರಿಕೆ: ಮುಖ್ಯಮಂತ್ರಿ ಮಧ್ಯಪ್ರವೇಶ

  • ನ.20ರವರೆಗೆ ಏರಿಕೆ ಇಲ್ಲ: ಕೆಎಂಎಫ್ ನಿರ್ಧಾರ
  • ಹಾಲಿನ ದರ ಏನು ಎತ್ತ..?

NAMMUR EXPRESS NEWS
ಬೆಂಗಳೂರು: ಮಂಗಳವಾರದಿಂದ ಹಾಲು ಮತ್ತು ಮೊಸರು ದರವನ್ನು ಹೆಚ್ಚಿಸುವ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಿರ್ಧಾರಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಾತ್ಕಾಲಿಕ ತಡೆ ಹಾಕಿದ್ದಾರೆ. ಮುಖ್ಯಮಂತ್ರಿ ನಿರ್ದೇಶನದ ನಂತರ, ಹಾಲು ಮತ್ತು ಮೊಸರಿನ ಬೆಲೆಗಳನ್ನು ಪರಿಷ್ಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನವೆಂಬರ್ 20 ರವರೆಗೆ ಕಾಯಲು ಕೆಎಂಎಫ್ ನಿರ್ಧರಿಸಿದೆ.
ಸೋಮವಾರ ಮಧ್ಯರಾತ್ರಿಯೊಳಗೆ ಬೆಲೆ ಏರಿಕೆ ಮಾಡಲು ಕೆಎಂಎಫ್ ನಿರ್ಧರಿಸಿದ ಸುದ್ದಿ ತಿಳಿದ ಮುಖ್ಯಮಂತ್ರಿ ಬೊಮ್ಮಾಯಿ, ನವೆಂಬರ್ 20ರ ವರೆಗೆ ಬೆಲೆ ಏರಿಕೆ ಮಾಡದಂತೆ ಘಟಕವನ್ನು ಕೇಳಿಕೊಂಡಿದ್ದಾರೆ. ಕೆಎಂಎಫ್ ಸದಸ್ಯರೊಂದಿಗೆ ಸಭೆ ನಡೆಸಿದ ಬಳಿಕ ನಿರ್ಧರಿಸುವುದಾಗಿ ಹೇಳಿರುವ ಅವರು, ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಸಿಎಂ ಮಧ್ಯಪ್ರವೇಶದಿಂದ ಬೆಲೆ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದ್ದು, ಹಿಂದಿನ ದರದಲ್ಲಿಯೇ ಹಾಲು ಸರಬರಾಜು ಮಾಡಲಾಗುವುದು.
ಕರ್ನಾಟಕದ ಹೈನುಗಾರರಿಗೆ ಸಹಾಯ ಮಾಡಲು ಹಾಲು ಮತ್ತು ಮೊಸರಿನ ಬೆಲೆಯನ್ನು ಹೆಚ್ಚಿಸಬೇಕು. ಈ ಹೆಚ್ಚುವರಿ ಮೊತ್ತವು ನೇರವಾಗಿ ರೈತರಿಗೆ ಸಲ್ಲುತ್ತದೆ ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹವಾಮಾನ ಪರಿಸ್ಥಿತಿಯಿಂದಾಗಿ ಜಾನುವಾರುಗಳ ಮೇವು ಮತ್ತು ಹುಲ್ಲು ದೊರೆಯುವುದು ಇವುಗಳ ಬೆಲೆ ಏರಿಕೆಯಾಗಿರುವುದರಿಂದ ಹೈನುಗಾರರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Categories
ರಾಜಕೀಯ

ತೀರ್ಥಹಳ್ಳಿಗೆ ಅರ್ಜಿ ಹಾಕಿದ ಮಂಜುನಾಥ ಗೌಡ!

  • ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಣ ಈಗ ರಂಗು
  • ಕಿಮ್ಮನೆ- ಮಂಜುನಾಥ ಗೌಡ ಒಂದಾಗಲ್ವಾ..?!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಸ್ಥಾನಕ್ಕೆ ಸಹಕಾರಿ ನಾಯಕ ಡಾ.ಮಂಜುನಾಥ ಗೌಡ ಅರ್ಜಿ ಹಾಕಿದ್ದಾರೆ.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಣ ಈಗ ರಂಗಾಗಿದ್ದು ಕಿಮ್ಮನೆ- ಮಂಜುನಾಥ ಗೌಡ ಒಂದಾಗಲ್ವಾ..?! ಎಂಬ ಕುತೂಹಲ ಮೂಡಿದೆ.
2023ರ ವಿಧಾನಸಭಾ ಚುನಾವಣೆಗೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಆಕಾಂಕ್ಷಿಯಾಗಿ ಆರ್ ಎಂ ಮಂಜುನಾಥ ಗೌಡ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

Categories
ಮಲ್ನಾಡ್

ವಿನಯ್ ಗುರೂಜಿ ಬಗ್ಗೆ ಅಪಪ್ರಚಾರದ ವಿರುದ್ಧ ಭಕ್ತವೃಂದದ ಹೋರಾಟ!

  • ಶಿವಮೊಗ್ಗದಲ್ಲಿ ಭಾರೀ ಪ್ರತಿಭಟನೆ: ತಪ್ಪಿತಸ್ಥರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು

NAMMUR EXPRESS NEWS
ಶಿವಮೊಗ್ಗ/ಚಿಕ್ಕಮಗಳೂರು: ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಅವಧೂತ ವಿನಯ್ ಗುರೂಜಿ ಕುರಿತ ಕೆಲಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿರುವ ಸಾಮಾಜಿಕ ಮಾಧ್ಯಮ ಪೇಜ್ ಹಾಗೂ ಕೆಲ ನಕಲಿ ಪೇಜ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿ ಶಿವಮೊಗ್ಗದಲ್ಲಿ ವಿನಯ್ ಗೂರೂಜಿ ಭಕ್ತವೃಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕೆಲವು ಸಾಮಾಜಿಕ ಜಾಲ ತಾಣ ಮಾಧ್ಯಮಗಳು, ಫೇಸ್ಬುಕ್ ನಕಲಿ ಪೇಜ್ಗಳು ಗುರೂಜಿ ವಿರುದ್ಧ ಇಲ್ಲ ಸಲ್ಲದ ಸುದ್ದಿ ಪ್ರಕಟ ಮಾಡಿ ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿವೆ. ಇದು ಗುರೂಜಿ ಅವರ ಭಕ್ತರಿಗೆ ನೋವುಂಟು ಮಾಡಿದೆ. ಆದ್ದರಿಂದ ಸರ್ಕಾರ ತಕ್ಷಣ ಇಂತಹ ನಕಲಿ ಸಾಮಾಜಿಕ ಜಾಲ ತಾಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ವಿನಯ್ ಗುರೂಜಿ ಭಕ್ತರು ಶಿವಪ್ಪ ನಾಯಕ ಪ್ರತಿಮೆ ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಸಿದರು.

ಸಾವಿರಾರು ಬಡವರಿಗೆ ಅನುಕೂಲ
ಸಾವಿರಾರು ಭಕ್ತರ ಕಷ್ಟಕ್ಕೆ ನೆರವಾಗಿ ಅನೇಕ ಭಾಗಗಳಲ್ಲಿ ಸಾವಿರಾರು ಜನರಿಗೆ ಅರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ನೆರವಾಗಿದ್ದಾರೆ. ಮನೆ, ಮದುವೆ, ದೇವಸ್ಥಾನ, ಆಶ್ರಮ, ಗೋ ಶಾಲೆಗಳಿಗೆ ನೆರವು ನೀಡುತ್ತಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲೂ ಗುರೂಜಿ ಅವರ ಸಾವಿರಾರು ಭಕ್ತರಿದ್ದು, ಸಾಮಾಜಿಕ, ಧಾರ್ಮಿಕ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವನ್ನು ಸಹಿಸಲಾಗದೆ ಅವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಭಕ್ತರು ಪ್ರತಿಭಟನೆ ವೇಳೆ ದೂರಿದರು.
ಕೆಲವು ನಕಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ಸುಳ್ಳು ಸುದ್ದಿ ಅವರ ಲೈಕ್ ಜಾಸ್ತಿ ಮಾಡಿಸಿಕೊಂಡು ಹಣ ಗಳಿಕೆ ಉದ್ದೇಶವಾಗಿದೆ. ಭಕ್ತರು ಇಂತಹ ಸುಳ್ಳು ಸುದ್ದಿ ನಂಬಬಾರದು ಎಂದು ಮನವಿ ಮಾಡಿದರು.

Categories
ಆರೋಗ್ಯ

ಅಯ್ಯೋ ದುಬಾರಿ ಆಯ್ತು ಹಾಲು..!

  • ಪ್ರತಿ ಲೀಟರ್ ನಂದಿನಿ ಹಾಲಿಗೆ 3 ರೂ. ಹೆಚ್ಚಳ
  • ನಾಳೆಯಿಂದಲೇ ಜಾರಿ: ಗ್ರಾಹಕರಿಗೆ ಜೇಬಿಗೆ ಕತ್ತರಿ

NAMMUR EXPRESS NEWS
ಬೆಂಗಳೂರು: ಪ್ರತಿ ಲೀಟರ್ ನಂದಿನಿ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ.
ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸಲು ರಾಜ್ಯ ಹಾಲು ಮಹಾಮಂಡಳ (ಕೆಎಂಎಫ್) ನಿರ್ಧರಿಸಿದೆ. ಕೆಎಂಎಫ್‌ನ ವಾರ್ಷಿಕ ಸಭೆಯಲ್ಲಿ ಹಾಲಿನ ಮಾರಾಟ ದರ ಹೆಚ್ಚಿಸುವ ಸಂಬಂಧ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ದರ ಏರಿಕೆಗೆ ಒಲವು ವ್ಯಕ್ತಪಡಿಸಿದ್ದರು. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರ ಬೆಲೆ ಏರಿಕೆಗೆ ಅನುಮೋದನೆ ನೀಡಿದೆ. 69ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಕಾರ್ಯಕ್ರಮದಲ್ಲಿ ಬೆಲೆ ಏರಿಕೆಯನ್ನು ಪ್ರಕಟಿಸಲಾಯಿತು.

ಯಾವುದಕ್ಕೆ ಎಷ್ಟು..?

ನಂದಿನಿ ಹಾಲಿನ ದರ 3 ರೂಏರಿಕೆ ಮಾಡಲಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಹೊಸದರ ಜಾರಿಯಾಗಲಿದ್ದು, ಮಂಗಳವಾರ ಬೆಳಗ್ಗೆಯಿಂದ ಲೀಟರ್ ಹಾಲಿನ ಮೇಲೆ 3 ರೂ. ಏರಿಕೆಯಾಗಲಿದೆ. ನಂದಿನಿ ಹಾಲು, ಮೊಸರು ತಲಾ 3 ರೂಪಾಯಿ ಹೆಚ್ಚಳವಾಗಿದ್ದು, ಕೆ ಎಂ ಎಫ್ ಹಾಲಿನ ದರ ಪರಿಷ್ಕರಣೆ ಮಾಡಿದೆ. ಟೋನ್ ಹಾಲಿಗೆ 40 ರೂ., ಹೋಮೋಜಿನೈಸ್ ಟೋನ್ ಹಾಲು 41 ರೂ, ಹೋಮೋಜಿನೈಸ್ ಹಸುವಿನ ಹಾಲು 45 ರೂ., ಸ್ಪೆಷನ್ ಹಾಲು 46 ರೂ., ಶುಭಂ ಹಾಲು 46 ರೂ., ಹೋಮೋಜಿನೈಸ್ ಸ್ಟ್ಯಾಂಡಡೈಸ್ಟರ್ ಹಾಲು 47 ರೂ., ಸಮೃದ್ಧಿ ಹಾಲು 51 ರೂ., ಸಂತೃಪ್ತಿ ಹಾಲು 53 ರೂ, ಡಬಲ್ ಡೋನ್ಸ್ ಹಾಲು 39 ರೂ. ನಿಗದಿಪಡಿಸಲಾಗಿದೆ. ಅದೇ ರೀತಿ ಪ್ರತಿ ಲೀಟರ್ ಮೊಸರಿನ ಬೆಲೆ 45ರಿಂದ 48 ರೂ.ಗೆ ಏರಿಕೆಯಾಗಿದೆ.

Categories
ಶಿವಮೊಗ್ಗ

ಆಟೋ ದರ: 1.5 ಕಿಮಿ ದೂರಕ್ಕೆ 40 ರೂ. ನಿಗದಿ

  • ಶಿವಮೊಗ್ಗ ಜಿಲ್ಲೆಯಲ್ಲಿ ಆಟೋದರ ಪರಿಷ್ಕರಣೆ
  • 1.5 ಕಿಮಿ.ದೂರದವರೆಗಿನ ನಂತರದ ದೂರಕ್ಕೆ 20 ರೂ.
  • ಸಮವಸ್ತ್ರ, ಆಟೋ ಮೀಟರ್ ಕಡ್ಡಾಯ

NAMMUR EXPRESS NEWS
ಶಿವಮೊಗ್ಗ: ಆಟೋ ದರ ಶಿವಮೊಗ್ಗ ಜಿಲ್ಲೆಯಲ್ಲಿ ನಿಗದಿಯಾಗಲಿದೆ. 1.5 ಕಿಮಿ ದೂರಕ್ಕೆ 40 ರೂ. ನಿಗದಿ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಆಟೋದರ ಪರಿಷ್ಕರಣೆ ಮಾಡಲಾಗಿದ್ದು 1.5 ಕಿಮಿ.ದೂರದವರೆಗಿನ ನಂತರದ ದೂರಗಳಿಗೆ 20 ರೂ. ನಿಗದಿಪಡಿಸಲಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಆಟೋ ದರ ನಿಗದಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ 1.5 ಕಿ.ಮಿ ದೂರದವರೆಗೆ 40 ರೂ. ನಿಗದಿಗೆ ಅನುಮತಿ ನೀಡಲಾಯಿತು. 1.5 ಕಿಮಿ.ದೂರದವರೆಗಿನ ನಂತರದ ದೂರಗಳಿಗೆ 20 ರೂ. ಜಾರಿಯಾಗಲಿದೆ.
ಸಮವಸ್ತ್ರ ಕಡ್ಡಾಯ!: ಆಟೋಚಾಲಕರಿಗೆ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಹಲವು ಬಾರಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ ದರ ಏರಿಕೆಗೆ ಮನವಿ ಸಲ್ಲಿಸಿತ್ತು. ಈ ಮನವಿ ಈ ಹಿಂದ…

Categories
ಸಿನಿಮಾ

ಕೆಜಿಎಫ್ 2, ಪುಷ್ಪ ದಾಖಲೆ ಅಳಿಸಲಿದೆ ಕಾಂತಾರ!

  • ಕನ್ನಡದ ಸಿನಿಮಾ ಕಾಂತಾರ ಈಗ ಭಾರತದ ನಂ.1 ಸಿನಿಮಾ
  • ಹಣ ಗಳಿಕೆಯಲ್ಲೂ ನಂ.1 ಆಗುವತ್ತ ಕಾಂತಾರ

NAMMUR EXPRESS NEWS
ಬೆಂಗಳೂರು: ಕಾಂತಾರ ಸಿನಿಮಾ ಈಗ ಜಾಗತಿಕವಾಗಿ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನೊಂದು ಕಡೆ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಭಾರತದಲ್ಲಿ ಅತೀ ಹೆಚ್ಚು ಟಿಕೆಟ್ ಸೇಲ್ ಮಾಡಿದ ಚಿತ್ರ ಎಂಬ ಖ್ಯಾತಿಗೂ ಪಾತ್ರವಾಗಿದೆ. ಈ ಚಿತ್ರ ಕರ್ನಾಟಕದಲ್ಲಿ 1 ಕೋಟಿಗೂ ಟಿಕೆಟ್ ಗಳು ಮಾರಾಟವಾಗಿ ಈಗ ಹೊಸ ದಾಖಲೆಯನ್ನು ನಿರ್ಮಿಸಿದೆ.ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಶೀಘ್ರ್ರದಲ್ಲೇ ಅತಿ ಹೆಚ್ಚು ಬಾಕ್ಸ್ ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಸದ್ಯಕ್ಕೆ ಕಾಂತಾರ ಕರ್ನಾಟಕದಲ್ಲಿ ಒಟ್ಟು 152.90 ಕೋಟಿ ಗಳಿಸುವ ಮೂಲಕ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಇನ್ನೊಂದೆಡೆಗೆ ಒಟ್ಟು 155 ಕೋಟಿ ನಿವ್ವಳದೊಂದಿಗೆ ಕೆಜಿಎಫ್ ಚಾಪ್ಟರ್ 2 ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಚಿತ್ರವು ಕೇವಲ 2.10 ಕೋಟಿಗಳಷ್ಟು ಹಿಂದೆ ಇದ್ದು, ಶೀಘ್ರದಲ್ಲೇ ಈ ದಾಖಲೆಯನ್ನು ಮುರಿಯಲಿದೆ.

Categories
ಬೆಂಗಳೂರು

ಧರ್ಮಸ್ಥಳಕ್ಕೆ ಕರು ಕೊಡಲು 360 ಕಿಮೀ ನಡೆದ ಯುವಕ!

  • ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಕರು ನಡೆದಲ್ಲೇ ನಡೆದ
  • ಕಂಪನಿ ಕೆಲಸದ ಜತೆ ಹೈನುಗಾರಿಕೆ ಮಾಡಿ ಗೆದ್ದ
  • ಕಳಸದ ಶ್ರೇಯಾಂಸ್ ಜೈನ್ ಎಂಬ ಯುವಕನ ಸಾಹಸಗಾಥೆ

NAMMUR EXPRESS NEWS
ಕಳಸ: ಮಲೆನಾಡಿನ ಯುವಕನೊಬ್ಬ ತನ್ನ ಬೆಲೆ ಬಾಳುವ ಹಸುವನ್ನು ಬೆಂಗಳೂರಿನಿಂದ ಕಾಲ್ನಡಿಗೆಯಲ್ಲೇ 360 ಕಿ.ಮೀ ಕ್ರಮಿಸಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಒಪ್ಪಿಸಿದ ಅಪರೂಪದ ಘಟನೆ ನಡೆದಿದೆ. ಅಲ್ಲದೆ ಈ ಯುವಕನ ಸಾಹಸ, ಸಾಧನೆ, ಛಲ ಕೂಡ ಎಲ್ಲರಿಗೂ ಪ್ರೇರಣೆ..!
ಕಳಸದ ಹಿರೇಬೈಲ್ ಗ್ರಾಮದ ಶ್ರೇಯಾಂಸ್ ಜೈನ್ ತಮ್ಮ ಮನೆಯಲ್ಲಿ ಸಾಕುತ್ತಿರುವ ಮೊದಲ ಗಿರ್ ಹಸುವನ್ನು ಶ್ರೀ ಧರ್ಮಸ್ಥಳ ದೇವಸ್ಥಾನಕ್ಕೆ ಅರ್ಪಿಸುವುದಾಗಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಈಗ ಮೊದಲ ಕರುವನ್ನು ಬರೋಬ್ಬರಿ ಎರಡು ವರ್ಷಗಳ ಬಳಿಕ 360 ಕಿ.ಮೀ. ಗಿರ್ ಎತ್ತು ಜೊತೆ ನಡೆದುಕೊಂಡು ಬಂದು ಧರ್ಮಸ್ಥಳಕ್ಕೆ ಅರ್ಪಿಸಿದ್ದಾರೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗಿರ್ ಹಸುವಿಗೆ ತಿನ್ನಲು ಫಲಹಾರ ನೀಡುವ ಮೂಲಕ ಬರಮಾಡಿಕೊಂಡರು. ಶ್ರೇಯಾಂಸ್ ಬೆಂಗಳೂರಿನ ಜಿಗಣಿಯವರು. ಲಾಕ್‌ಡೌನ್ ವೇಳೆ ಕಂಪನಿ ಕೆಲಸವನ್ನು ನಂಬದೆ ದನ ಸಾಕಿ ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡಿದ್ದರು. ಜೈನ್ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.ಯುವಕ/ಯುವತಿಯರು ಕಾಲ್ನಡಿಗೆಯಲ್ಲೇ ದೇಶ ಸುತ್ತುವುದನ್ನು ನೋಡಿದ್ದೇವೆ. ಆದರೆ ದೇವರ ಕೆಲಸಕ್ಕಾಗಿ ಕಾಲ್ನಡಿಗೆಯಲ್ಲಿ ಇಂತಹದ್ದೊಂದು ಸಾಹಸ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಜೊತೆಗೆ ಹಲವರಿಗೆ ಪ್ರೇರಣೆ ಆಗಿದೆ.

ಧರ್ಮಸ್ಥಳದ ಪರಮ ಭಕ್ತ.!

ಜೈನ್ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮ ಭಕ್ತ. ಅಷ್ಟೇ ಅಲ್ಲ, ಧರ್ಮಸ್ಥಳದ ಸಿದ್ದವನದ ಹಳೆಯ ವಿದ್ಯಾರ್ಥಿ, ಹೀಗಾಗಿ ಮಂಜುನಾಥ ಸ್ವಾಮಿ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಆ ಯುವಕ ಶ್ರೀಕ್ಷೇತ್ರಕ್ಕೆ ಗಿರ್ ತಳಿಯ ಕರುವನ್ನು ದಾನವಾಗಿ ಕೊಟ್ಟಿದ್ದಾನೆ. ಅಚ್ಚರಿ ಅಂದ್ರೆ ಬೆಂಗಳೂರಿನಿಂದ ಕರುವಿನ ಜೊತೆ ನಡೆದುಕೊಂಡೇ ಬಂದು ಕ್ಷೇತ್ರಕ್ಕೆ ಅರ್ಪಿಸಿದ್ದಾನೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗಿರ್ ಕರುವಿಗೆ ತಿನ್ನಲು ಫಲಹಾರ ನೀಡುವ ಮೂಲಕ ಬರಮಾಡಿಕೊಂಡರು.

ಕರು ನಡೆದಲ್ಲೇ ನಡೆದ: 1000 ರೂ ಮಾತ್ರ ಖರ್ಚು
ಬಾಡಿಗೆ ಮನೆಯಲ್ಲೇ ದನ ಸಾಕಿದ್ದ ಸಹಾಸಿ ಯುವಕ
ಬೆಂಗಳೂರಿನ ತನ್ನ ಬಾಡಿಗೆ ಮನೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ದನ ಸಾಕುವ ಯೋಚನೆಯನ್ನು ಮಾಡಿದ್ದರು. ಖಾಲಿ ಸೈಟ್‌ನಲ್ಲೇ ದನ ಸಾಕಲು ಮುಂದಾಗಿ ಹೈನುಗಾರಿಕೆಗೆ ಮುಂದಡಿಯಿಟ್ಟರು.
ಮಂಜುನಾಥ ಸ್ವಾಮಿಗೆ ಮೊದಲ ಕರು ಭೀಷ್ಮನನ್ನು ಅರ್ಪಿಸುವ ಸಂಕಲ್ಪ ಕೂಡ ಮಾಡಿದ್ದರು. ಕರು ನಡೆಸಿಕೊಂಡು ಬಂದೇ ಅರ್ಪಿಸಲು ಚಿಂತಿಸಿದ್ದರು. ಅದರಂತೆ ಬೆಂಗಳೂರಿನಲ್ಲಿ ಹೈನುಗಾರಿಕೆ ಆರಂಭಿಸಿದ ಶ್ರೇಯಾಂಸ್ ಜೈನ್ ತನ್ನ ಮನೆಯ ಮೊದಲ ಕರುವನ್ನು ಮಂಜುನಾಥ ಸ್ವಾಮಿಗೆ ಅರ್ಪಿಸಬೇಕೆಂದು ಮನದಲ್ಲಿ ಅಂದುಕೊಂಡರು. ತಾನು ಹೋಗುವಲ್ಲಿ ಕರು ನಡೆಯುವ ಬದಲು ಕರು ಹೋದಲ್ಲಿ ತಾನು ಹೋಗುವ ನಿರ್ಧಾರ ಮಾಡಿಕೊಂಡಿದ್ದರು. ಕರು ಹಳ್ಳಿರಸ್ತೆಗಳಲ್ಲಿ ನಡೆದು ಸಾಗಿದರೆ ಸುತ್ತಮುತ್ತಲು ಹುಲ್ಲು ಸಿಗುತ್ತದೆ. ಇದರಿಂದ ಭೀಷ್ಮನಿಗೂ ಆಹಾರದ ವ್ಯವಸ್ಥೆ ಆಗುತ್ತದೆ ಎಂದು ಯೋಜನೆ ರೂಪಿಸಿ ಗರಿಷ್ಠ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಹಾದು ಬಂದಿದ್ದಾರೆ. ಇದೀಗ ಸತತ 36 ದಿನಗಳ ಕಾಲ ಪ್ರಯಾಣಿಸಿ ಧರ್ಮಸ್ಥಳವನ್ನು ತಲುಪಿದ್ದಾರೆ. ಆದರೆ ಈ ವೇಳೆ ಒಂದು ದಿನವೂ ಕೂಡ ಕಚೇರಿಗೆ ಶ್ರೇಯಾಂಸ್ ರಜೆ ಹಾಕಿಲ್ಲ, ಮುಂಜಾನೆ ಹೊತ್ತಲ್ಲಿ ನಡೆದು ನಂತರ ವರ್ಕ್ ಪ್ರಂ ಹೋಮ್ ನಡಿ ಕೆಲಸ ನಿರ್ವಹಿಸುತ್ತಾ ಸಾಗಿದ್ದು ಅಚ್ಚರಿ. ಇನ್ನು 360 ಕಿಲೋಮೀಟರ್ ನಡಿಗೆಗೆ ಖರ್ಚಾಗಿದ್ದು 1000 ರೂ. ಏಕೆಂದರೆ ಕರುವಿನ ಜೊತೆ ಸಾಗುತ್ತಿದ್ದ ಶ್ರೇಯಾಂಸ್‌ಗೆ ಜನರು ಪ್ರೀತಿಯಿಂದ ಹಲವೆಡೆ ಊಟ ತಿಂಡಿ, ಅಕ್ಕಿ ಬೆಲ್ಲ ಫಲಹಾರವನ್ನು ನೀಡಿದ್ದಾರೆ.
ಪ್ರತಿ ಊರಿನಲ್ಲೂ ಕೂಡ ಕರುವಿನ ಆರೋಗ್ಯ ತಪಾಸಣೆ ಮಾಡಲಾಗುತ್ತಿತ್ತು. ಅಲ್ಲದೇ ಕೆಲವೆಡೆ ದೃಷ್ಟಿ ತೆಗೆಯುವ ಕೆಲಸವನ್ನು ಊರಿನವರು ಮಾಡಿ ಗೋ ಪ್ರೀತಿ ಮೆರೆದಿದ್ದಾರೆ.

Categories
ಶಿಕ್ಷಣ

ನ.16ರೊಳಗೆ ನೀಟ್ ಕೌನ್ಸೆಲಿಂಗ್ ಮುಕ್ತಾಯ?

  • ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಗಡುವು
  • ವೈದ್ಯಕೀಯ ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ

NAMMUR EXPRESS NEWS
ನವದೆಹಲಿ: ನ. 16 ರೊಳಗೆ ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಕ್ಕೆ ನಡೆಸುವ ಎರಡನೇ ಸುತ್ತಿನ ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶುಕ್ರವಾರ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ್ದು, ನವೆಂಬರ್ 16 ರ ಗಡುವು ನೀಡಲಾಗಿದೆ.
ಈ ಕುರಿತ ಅಂಕಿ ಅಂಶಗಳನ್ನು ಅದೇ ದಿನ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಗೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ ನೀಟ್ ಪಿಜಿ ಎರಡನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಕೇಂದ್ರ ಸರ್ಕಾರ ಕೊನೆಯ ಸುತ್ತಿನ ಕೌನ್ಸೆಲಿಂಗ್ ನಡೆಸಬಹುದು. ಹೀಗಾಗಿ ಎರಡನೇ ಸುತ್ತಿನ ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನವೆಂಬರ್ 16ರೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದೆ.

Categories
ಕೃಷಿ

ರೈತರ ಸಂಕಷ್ಟ ತಪ್ಪಿಸಲು ಸರ್ಕಾರ ಕ್ರಮ

  • ಸಿ ಎಂ ಬಸವರಾಜ ಬೊಮ್ಮಾಯಿ ಹೇಳಿಕೆ
  • ರೈತರ ಸಾಲಕ್ಕಿಲ್ಲ ಜಪ್ತಿ, ಹರಾಜು

NAMMUR EXPRESS NEWS
ಬೆಂಗಳೂರು : ರೈತರ ಸಾಲದ ಮೇಲೆ ಜಪ್ತಿ, ಹರಾಜು ಮಾಡದ ರೀತಿಯಲ್ಲಿ ಕಾನೂನನ್ನು ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೃಷಿ ಮೇಳದ ಅಂಗವಾಗಿ ಶನಿವಾರ ಜಿಕೆವಿಕೆ ಆವರಣದಲ್ಲಿ 125 ಸಾಧಕ ಕೃಷಿಕರನ್ನು ಸನ್ಮಾನಿಸಿ ಮಾತನಾಡಿದ ಅವರು, ರೈತರ ಸಾಲ ಮರುಪಾವತಿಯಾಗದಿದ್ದಾಗ ಸಮಯಾವಕಾಶ ಕೊಟ್ಟು ಸಹಾಯ ಮಾಡಬೇಕೆ ಹೊರತು ಯಾವುದೇ ಜಪ್ತಿ ಅಥವಾ ಹರಾಜು ಮಾಡಬಾರದೆಂದು ಸರ್ಕಾರ ಹಾಗೂ ಇತರ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಇಲಾಖೆಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿವೆ ಎಂದರು. ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಜಾರಿಯಾಗಿದೆ. ನ.1 ಇದರಿಂದ ಈಗಾಗಲೇ ಯಶಸ್ವಿನಿ ಯೋಜನೆ ಮರು ಜಾರಿಗೆ ತರಲಾಗಿದೆ. ದುಡಿಯುವ ವರ್ಗಕ್ಕೆ ಬಲ ತುಂಬಲಾಗುತ್ತಿದ್ದೇವೆ. ಕೃಷಿ ಮೇಲೆ ಅವಲಂಬಿತರಾಗಿರುವ ಶೇ.60 ಎಷ್ಟು ಜನರು ಅಭಿವೃದ್ಧಿ ಹೊಂದರೆ, ದೇಶವು ಅಭಿವೃದ್ಧಿಯಾಗುತ್ತದೆ. ಜನವರಿ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ನಡೆಸಲಾಗುವುದು ಎಂದರು.