Categories
ರಾಜಕೀಯ

ಬಿಜೆಪಿ ನಿದ್ದೆಗೆಡಿಸಿದ ಲೋಕ್ ಪೋಲ್ ಸಮೀಕ್ಷೆ!

  • ಕಾಂಗ್ರೆಸ್‌ಗೆ ಬಹುಮತ, ಜೆಡಿಎಸ್ ಅಷ್ಟಕಷ್ಟೇ
  • ಕಾಂಗ್ರೆಸ್ ಪಕ್ಷಕ್ಕೆ 116 -122 ಸ್ಥಾನ ಬರುತ್ತೆ ಎಂದ ಸಮೀಕ್ಷೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಲೋಕ್‌ಪೋಲ್ ಎಂಬ ಹೆಸರಿನಲ್ಲಿ ಸಂಸ್ಥೆಯೊಂದು ಮಾಡಿದ ಸಮೀಕ್ಷೆ ಜೆಡಿಎಸ್ ಮತ್ತು ಬಿಜೆಪಿಯ ನಿದ್ದೆಗೆಡಿಸಿದ್ದರೆ ಕಾಗ್ರೆಸ್ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಲೋಕ್‌ಪೋಲ್ ಸಮೀಕ್ಷೆ ಪ್ರಕಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸರಳ ಬಹುಮತ ಬರಲಿದೆ. ಕಾಂಗ್ರೆಸ್ 116 ರಿಂದ 122 ಸ್ಥಾನಗಳು ಪಡೆಯಬಹುದು ಎಂದು ಅಂದಾಜಿಸಲಾಗಿದ್ದು, ಈ ಸಮೀಕ್ಷೆಯನ್ನು ಆಧರಿಸಿಯೇ ಕಾಂಗ್ರೆಸ್ ಚುನಾವಣಾ
ತಂತ್ರಗಾರಿಕೆಯನ್ನ ರೂಪಿಸುತ್ತಿದೆ.
ಆಡಳಿತರೂಢ ಬಿಜೆಪಿ 140ಕ್ಕೂ ಸ್ಥಾನಗಳನ್ನ ಗೆಲ್ಲುವ ವಿಶ್ವಾಸದಲ್ಲಿದ್ದರೂ ಸಮೀಕ್ಷೆಯ ಪ್ರಕಾರ ಸಿಗುವುದು ಬರೀ 77 ರಿಂದ 83 ಸ್ಥಾನ. ಜೆಡಿಎಸ್‌ಗೆ 21 ರಿಂದ 27 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ. 1 ರಿಂದ 4 ಪಕ್ಷೇತರರು ಗೆಲುವು ಸಾಧಿಸಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಶೇಕಡಾವಾರು ಮತ: ಬಿಜೆಪಿಗೆ ಶೇ ಶೇ.33 ರಿಂದ 36ರಷ್ಟು ಮತಗಳು, ಕಾಂಗ್ರೆಸ್‌ಗೆ ಶೇ.39 ರಿಂದ 42 ಮತ ಸಿಗಬಹುದು. ಜೆಡಿಎಸ್ ಶೇ. 15 ರಿಂದ 18ರಷ್ಟು ಮತ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಈ ಬಾರಿ ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ನಿರಾಸೆ ಉಂಟಾಗಲಿದೆ. ಲೋಕ್‌ಪೋಲ್ ಸಮೀಕ್ಷೆ ಪ್ರಕಾರ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ 10 ರಿಂದ 13 ಸ್ಥಾನ, ಕಾಂಗ್ರೆಸ್‌ಗೆ 21-24 ಹಾಗೂ ಜೆಡಿಎಸ್‌ಗೆ 14- 17 ಸ್ಥಾನಗಳು ಸಿಗಬಹುದು. ಕರಾವಳಿ ಭಾಗದಲ್ಲಿ ಬಿಜೆಪಿಗೆ 14 ರಿಂದ 17, ಕಾಂಗ್ರೆಸ್‌ಗೆ 7 ರಿಂದ 10 ಹಾಗೂ ಜೆಡಿಎಸ್‌ಗೆ 1 ಸ್ಥಾನ ದೊರಕಬಹುದು ಎನ್ನಲಾಗಿದೆ. ಬಿಜೆಪಿಗೆ ಬೆಂಗಳೂರು ವ್ಯಾಪ್ತಿಯಲ್ಲೂ ಕಹಿ ಸುದ್ದಿ ಇದೆ. ಬೆಂಗಳೂರಿನಲ್ಲಿ ಬಿಜೆಪಿಗೆ 11 ರಿಂದ 14, ಕಾಂಗ್ರೆಸ್‌ಗೆ 19 ರಿಂದ 23 ಹಾಗೂ ಜೆಡಿಎಸ್‌ಗೆ 1ರಿಂದ 4 ಸ್ಥಾನಗಳು ಸಿಗಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ 9ರಿಂದ 13, ಕಾಂಗ್ರೆಸ್ 24 ರಿಂದ 27 ಹಾಗೂ ಜೆಡಿಎಸ್ 2 ಸ್ಥಾನ ಗೆಲ್ಲಬಹುದು. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ 27ರಿಂದ 30, ಕಾಂಗ್ರೆಸ್ 19 ರಿಂದ 22 ಹಾಗೂ ಜೆಡಿಎಸ್‌ಗೆ 1 ಸ್ಥಾನ ಗೆಲ್ಲಬಹುದು ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ 10 ರಿಂದ 13, ಕಾಂಗ್ರೆಸ್‌ಗೆ 7ರಿಂದ 10 ಹಾಗೂ ಜೆಡಿಎಸ್‌ಗೆ 1 ಸ್ಥಾನ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ತಂತ್ರಗಾರಿಕೆಯನ್ನ ರೂಪಿಸುತ್ತಿದೆ.

Categories
ಆರೋಗ್ಯ

ಸುಡು ಬಿಸಿಲು, ರಾತ್ರಿ ಚಳಿ ಚಳಿ..!

  • ಹವಾಮಾನ ವೈಪರೀತ್ಯದಿಂದ ಜನ ಕಂಗಾಲು
  • ಅನಾರೋಗ್ಯ ಹೆಚ್ಚಳ: ಆಸ್ಪತ್ರೆಗಳು ಫುಲ್ ಫುಲ್

NAMMUR EXPRESS NEWS
ಬೆಂಗಳೂರು: ಅಯ್ಯೋ ಹಗಲು ವೇಳೆ ಎಲ್ಲೆಲ್ಲೂ ಬಿಸಿಲೋ ಬಿಸಿಲು. ಬಿಸಿಲಿನ ಝಳವನ್ನೂ ತಡೆಯೋಕೆ ಸಾಧ್ಯವೇ ಇಲ್ಲ ಎಂಬಷ್ಟು ಮೈಸುಡುವ ಬಿಸಿಲಿನ ಜೊತೆಗೆ ಸೆಕೆಯ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಶಿವರಾತ್ರಿ ಮುಗಿದರೂ ಚಳಿ ಬಿಟ್ಟಿಲ್ಲ.
ಮೈ ಕೊರೆಯುವ ಚಳಿ ಜನರಿಗೆ ಗಾಬರಿ ಹುಟ್ಟಿಸಿದೆ. ಚಳಿ ಕಾರಣ ಅನಾರೋಗ್ಯ ಹೆಚ್ಚಳವಾಗುತ್ತಿದೆ. ಮಕ್ಕಳು ಸೇರಿ ಎಲ್ಲರೂ ಜ್ವರ, ಶೀತದಿಂದ ಬಳಲುತ್ತಿದ್ದಾರೆ.
ಕರಾವಳಿಯ ಜನತೆ ಬಿಸಿಲಿನ ಧಗೆಗೆ ಹೈರಾಣಾಗಿದ್ದರೆ ಬೆಂಗಳೂರು ಮತ್ತೆ ಕೆಲ ಕಡೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೆಳಗ್ಗೆ ಮತ್ತು ರಾತ್ರಿ ತಂಪು ವಾತಾವರಣದ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಈ ನಡುವೆ ಈ ಹವಾಮಾನದ ಪರಿಣಾಮ ಅನಾರೋಗ್ಯ ಸಮಸ್ಯೆಗಳು ಹೆಚ್ಚು ಕಂಡುಬರುತ್ತಿವೆ.
ಒಂದೆಡೆ ಮೈ ಸುಡುವ ಬಿಸಿಲಿನ ಶಾಖ ಮತ್ತೊಂದೆಡೆ ಎಚ್3ಎನ್2 ವೈರಸ್ ಹರಡುವಿಕೆ ಹೆಚ್ಚಾಗುತ್ತಿದೆ.

ಆಸ್ಪತ್ರೆಗಳು ಫುಲ್ ಫುಲ್: ಅರೋಗ್ಯ ಸಿಬ್ಬಂದಿ ಕೊರತೆ

ರಾಜ್ಯದಲ್ಲಿ ಹವಾಮಾನ ಏರುಪೇರು ಕಾರಣ ಜನರಲ್ಲಿ ಅನಾರೋಗ್ಯ ಹೆಚ್ಚಳವಾಗಿದೆ. ಎಲ್ಲೆಡೆ ಆಸ್ಪತ್ರೆಗಳು ಜನರಿಂದ ತುಂಬಿ ಹೋಗಿವೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ.

Categories
ತೀರ್ಥಹಳ್ಳಿ

ಪುನೀತ್ ಜನ್ಮ ದಿನದಂದು ಪುನೀತ್ ನೆನಪಿನೋತ್ಸವ-2023

  • ತೀರ್ಥಹಳ್ಳಿ ತಾಲೂಕು ಕಲ್ಲುಕೊಡಿಗೆಯಲ್ಲಿ ಕಾರ್ಯಕ್ರಮ
  • ರಕ್ತದಾನ, ನೇತ್ರದಾನ, ಅರೋಗ್ಯ ಶಿಬಿರ, ಸಾಧಕರಿಗೆ ಸನ್ಮಾನ, ಸಂಗೀತ ಸಂಜೆ
  • ಸಿನಿಮಾ ನಟ ನಟಿಯರು, ಪ್ರಸಿದ್ಧ ಗಾಯಕರಿಂದ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ವಿಶ್ವ ಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್, ಕಲ್ಲುಕೊಡಿಗೆ ಕುಪ್ಪಳಿ ಹಾಗೂ ಬೆಕ್ಕನೂರು ಸಮಸ್ತ ಗ್ರಾಮಸ್ಥರ ಸಹಯೋಗದಲ್ಲಿ ಮಾ.17ರಂದು ದಿನವಿಡಿ ಪುನೀತ್ ನೆನಪಿನೋತ್ಸವ-2023 ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಮಾ.17, ಶುಕ್ರವಾರ ಸಮುದಾಯ ಭವನ,ಮುಸ್ಸಿನಕೊಪ್ಪ, ಕಲ್ಲುಕೊಡಿಗೆ ಆವರಣದಲ್ಲಿ ಬೆಳಿಗ್ಗೆ 8:30ಕ್ಕೆ ಪುನೀತ್ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ, ನೇತ್ರದಾನ ಶಿಬಿರ, ಉಚಿತ ಅರೋಗ್ಯ ಶಿಬಿರ ಆಯೋಜನೆ ಮಾಡಲಾಗಿದೆ. ಬೆಕ್ಕನೂರು ಗ್ರಾಮಸ್ಥರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು, ಸರ್ವರೂ ರಕ್ತದಾನ ಮಾಡಬಹುದು. ಬೆಳಿಗ್ಗೆ 8:30ಕ್ಕೆ ದೇವಂಗಿ, ಹಿರೇಕೊಡಿಗೆ ಗ್ರಾಮ ಪಂಚಾಯತ್ ಮಟ್ಟದ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜನೆ ಮಾಡಲಾಗಿದೆ.
ಸುಮಾರು 29 ಮಂದಿ ಸ್ಥಳೀಯ ಸಾಧಕರು, ಸೇವಕರಿಗೆ ಸನ್ಮಾನ ಮಾಡಲಾಗುತ್ತದೆ.
ನಾಡಿನ ಖ್ಯಾತ ಸಿನಿಮಾ ತಾರೆಯರು, ಕಲಾವಿದರು, ಗಾಯಕರರು, ಕಾಮಿಡಿ ಕಲಾವಿದರು, ನೃತ್ಯ ಕಲಾವಿದರ ಪುನೀತ್ ಸಂಗೀತ ಸಂಜೆ ಮತ್ತು ವಿಶೇಷ ಕಾರ್ಯಕ್ರಮ
“ಪುನೀತ್ ಮ್ಯೂಸಿಕ್ ನೈಟ್ಸ್” ಆಯೋಜನೆ ಮಾಡಲಾಗಿದೆ.ಶ್ರೀ ಧರ್ಮಶ್ರೀ ಯುವಕ ಸಂಘ, ಎಲ್ಲಾ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳು ಹಾಗೂ ಶ್ರೀ ಧರ್ಮಸ್ಥಳ ಸ್ವ ಸಹಾಯ ಸಂಘಗಳು, ಬೆಕ್ಕನೂರು ಸಮಸ್ತ ಗ್ರಾಮಸ್ಥರು, ಎಲ್ಲಾ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಹಕಾರ ಹಾಗೂ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸರ್ವರನ್ನು ಸ್ವಾಗತಿಸಲಾಗಿದೆ.

Categories
ಬೆಂಗಳೂರು ರಾಜ್ಯ

ವಯೋವೃದ್ಧರು, ವಿಕಲ ಚೇತನರಿಗೆ ಮನೆಯಿಂದಲೇ ಮತದಾನ!?

  • ಮತಗಟ್ಟೆಗೆ ಎತ್ತಿಕೊಂಡು ಅಥವಾ ಹೊತ್ತುಕೊಂಡು ಬರುವ ಅವಶ್ಯಕತೆ ಇಲ್ಲ
  • ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ?

NAMMUR EXPRESS NEWS
ಬೆಂಗಳೂರು: ವಯೋವೃದ್ಧರು ಮತ್ತು ವಿಕಲ ಚೇತನರನ್ನು ಈ ಸಲ ಮತಗಟ್ಟೆಗೆ ಎತ್ತಿಕೊಂಡು ಅಥವಾ ಹೊತ್ತುಕೊಂಡು ತರುವ ಅಗತ್ಯ ಇಲ್ಲ. 80 ವರ್ಷಕ್ಕೂ ಮೇಲ್ಪಟ್ಟವರಿಗೆ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಶೇಷ ಚೇತನ ಮತದಾರರು ಬಯಸಿದರೆ ಮನೆಯಿಂದಲೂ ಮತದಾನ ಮಾಡುವ ಸೌಲಭ್ಯ ಒದಗಿಸಲಿದ್ದೇವೆ. ಅಧಿಸೂಚನೆ ಹೊರಡಿಸಿದ 5 ದಿನಗಳೊಳಗೆ ಫಾರ್ಮ್ 12ಡಿ ಲಭ್ಯವಿರುತ್ತದೆ. ಇದರಿಂದ 80 ವರ್ಷಕ್ಕೂ ಮೇಲ್ಪಟ್ಟವರು ಅಥವಾ ವಿಶೇಷ ಚೇತನ ಮತದಾರರು ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಬಹುದು ಎಂದರು.


80 ವರ್ಷ ಮೇಲ್ಪಟ್ಟವರನ್ನು ಮತದಾನ ಕೇಂದ್ರಕ್ಕೆ ಬರುವಂತೆ ಚುನಾವಣಾ ಆಯೋಗ ಪ್ರೋತ್ಸಾಹಿಸುತ್ತಿದ್ದರೂ, ಬರಲು ಸಾಧ್ಯವಾಗದವರು ಈ ಸೌಲಭ್ಯವನ್ನು ಪಡೆಯಬಹುದು ಎಂದು ಅವರು ಹೇಳಿದರು. ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುವುದು ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡಲಾಗುವುದು ಎಂದು ಕುಮಾರ್ ವಿವರಿಸಿದರು. “ಮನೆಯಿಂದ ಮತದಾನದ ಸೌಲಭ್ಯ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳಿಗೆ ತಿಳಿಸಲಾಗುವುದು ಎಂದು ಅವರು ಹೇಳಿದರು. ವಿಶೇಷ ಚೇತನರಿಗಾಗಿ ‘ಸಕ್ಷಮ್’ ಮೊಬೈಲ್ ಆ್ಯಪ್ ಪರಿಚಯಿಸಲಾಗಿದೆ. ಇದರಲ್ಲಿ ಲಾಗಿನ್ ಆಗಿ ಮತದಾನದ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಮತ್ತೊಂದು ‘ಸುವಿಧಾ’ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮತ್ತು ಅಫಿಡವಿಟ್‌ಗೆ ಇದು ಆನ್‌ಲೈನ್ ಪೋರ್ಟಲ್ ಆಗಿದೆ.

ಅಭ್ಯರ್ಥಿಗಳು ಸಭೆ, ಕ್ಯಾಲಿಗಳಿಗೆ ಅನುಮತಿ ಪಡೆಯಲು ‘ಸುವಿಧಾ’ ಪೋರ್ಟಲ್ ಬಳಸಬಹುದಾಗಿದೆ. ಮತದಾರರ ಅನುಕೂಲಕ್ಕಾಗಿ ನೋ ಯುವರ್ ಕ್ಯಾಂಡಿಡೇಟ್ (ಕೆವೈಸಿ) ಎಂಬ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಿ ಟಿಕೆಟ್ ನೀಡಲಾಗಿದೆ ಎಂಬುದನ್ನು ರಾಜಕೀಯ ಪಕ್ಷಗಳು ತಮ್ಮ ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮತದಾರರಿಗೆ ತಿಳಿಸಬೇಕು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದೂರು ಸಲ್ಲಿಸಲು ಆಯೋಗವು ಇ-ವಿಜಿಲ್ ಆ್ಯಪ್ ಪರಿಚಯಿಸಿದೆ. ಇದಕ್ಕೆ ಪ್ರತಿಕ್ರಿಯಿಸಲು 100 ನಿಮಿಷ ಬೇಕಾಗುತ್ತದೆ ಎಂದರು “ಇದು ಉಲ್ಲಂಘನೆ ರೆಕಾರ್ಡ್ ಮಾಡಲು, ವರದಿ ಮಾಡಲು ಮತ್ತು ಪರಿಹರಿಸಲು ಒಂದೇ ಆ್ಯಪ್ ಆಗಿದ್ದು, 100 ನಿಮಿಷಗಳಲ್ಲಿ ಕುಂದುಕೊರತೆ ಪರಿಹರಿಸುತ್ತದೆ ಎಂದು ಅವರು ತಿಳಿಸಿದರು.

Categories
ಶಿಕ್ಷಣ

ರಾಷ್ಟ್ರ ಮಟ್ಟದಲ್ಲೂ ಸಾಧನೆ ಮಾಡಿದ ಕ್ರಿಯೇಟಿವ್ ಕಾಲೇಜು!

  • ಐಐಟಿ ಬಾಂಬೆ ನಡೆಸಿದ ಪರೀಕ್ಷೆಯಲ್ಲಿ ಇಶಾನ್ ಅವರಿಗೆ ರ್‍ಯಾಂಕ್
  • ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಆಡಳಿತ ಮಂಡಳಿ ಅಭಿನಂದನೆ

NAMMUR EXPRESS NEWS
ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಇಶಾನ್ ಪಿ ಸುಬ್ಬಾಪುರ್ ಮಠ್ ಐಐಟಿ ಬಾಂಬೆ ನಡೆಸಿದ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆಯುವ ಮೂಲಕ ನಾಡಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವೃತ್ತಿ ಶಿಕ್ಷಣ ತರಬೇತಿ ನೀಡುವ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆ IIT ಬಾಂಬೆಯವರು ನಡೆಸಿದ UCEED ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಇಶಾನ್ ಪಿ ಸುಬ್ಬಾಪುರ 95.53 ಅಂಕ ಗಳಿಸಿ ಆಲ್ ಇಂಡಿಯಾ ರಾಂಕ್ ನಲ್ಲಿ 1919ನೇ ಸ್ಥಾನ ಪಡೆದಿರುತ್ತಾನೆ. IITಯಲ್ಲಿ ಡಿಸೈನ್ಸ್ ಕೋರ್ಸ್ ಪ್ರವೇಶಾತಿಗಾಗಿ ಜನವರಿ 2023ರಲ್ಲಿ ನಡೆದ ಪರೀಕ್ಷೆಯಲ್ಲಿ ಇಶಾನ್ ಅತ್ಯುತ್ತಮ ಅಂಕಗಳಿಸುವ ಮೂಲಕ ಸಂಸ್ಥೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿರುತ್ತಾನೆ. ವಿದ್ಯಾರ್ಥಿಯ ಈ ಸಾಧನೆಗೆ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಲಿಶನ್ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.

Categories
ಬೆಂಗಳೂರು

ವಂಚಕ ಜಿಲ್ಲಾಧಿಕಾರಿಗಳನ್ನು ಜೈಲಿಗಟ್ಟಲು ಆದೇಶ!

  • ತಪ್ಪು ಮಾಹಿತಿ, ಅಕ್ರಮ, ಹಗರಣಕ್ಕೆ ಹೈಕೋರ್ಟ್ ಕಡಿವಾಣ
  • ರಾಜ್ಯದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

NAMMUR EXPRESS NEWS
ಬೆಂಗಳೂರು: ರಾಜ್ಯದ 200 ಕ್ಕೂ ಅಧಿಕ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸದಿದ್ದರೆ, 319 ಗ್ರಾಮಗಳಿಗಷ್ಟೇ ಸಶಾನ ಜಾಗ ಒದಗಿಸಬೇಕಿದೆ ಎಂದು ತಪ್ಪು ಮಾಹಿತಿ ನೀಡಿರುವ ಎಲ್ಲ ಜಿಲ್ಲಾಧಿಕಾರಿ ಹಾಜರಾಗಬೇಕು ಎಂದು ತಾಕೀತು ಮಾಡಿರುವ ಹೈಕೋರ್ಟ್, ತಪ್ಪು ಮಾಹಿತಿ ನೀಡುವ ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದೆ ಗ್ರಾಮಗಳಿಗೆ ಅಗತ್ಯ ಭೂಮಿ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ನಿವಾಸಿ ಮಹಮದ್‌ ಇಕಾರ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ, ನೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಜ10ರಂದು ಸರ್ಕಾರ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,903 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಮೀನು ಒದಗಿಸಲಾಗಿದೆ. 319 ಗ್ರಾಮಗಳಿಗೆ ಸ್ಥಾನ ಸೌಲಭ್ಯ ಒದಗಿಸಬೇಕಾಗಿದೆ. ಒಟ್ಟು 1,394 ಬೇಚರಾಕ್ (ಜನ ವಸತಿ ಇಲ್ಲದೆ ಗ್ರಾಮಗಳಿವೆ. ಎಂದುವಿವರಿಸಲಾಗಿತ್ತು. ಅದನ್ನು ಪರಿಗಣಿಸಿದ್ದ ನ್ಯಾಯಪೀಠ, ಸರ್ಕಾರದ ವರದಿ ಪರಿಶೀಲಿಸಿ ವಸ್ತುಸ್ಥಿತಿ ಮಾಹಿತಿ ತಿಳಿಸುವಂತೆ ಮೂಲಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶಿಸಿತ್ತು.
ನ್ಯಾಯಾಲಯಕ್ಕೆ ವಂಚನೆ ಎಸಗಿರುವ ಜಿಲ್ಲಾಧಿಕಾರಿಗಳನ್ನು ಗುರುವಾರ ಪ್ರಾಧಿಕಾರದ ಪರ ವಕೀಲರು, ಸರ್ಕಾರದ ಅಂಕಿ-ಅಂಶಗಳಿಗೂ ಮತ್ತು ಪ್ರಾಧಿಕಾರ ಸಂಗ್ರಹಿಸಿದ ಮಾಹಿತಿಗೂ ವ್ಯತ್ಯಾಸವಿದೆ, ರಾಜ್ಯದಲ್ಲಿ ಇನ್ನೂ 2,141 ಗ್ರಾಮಗಳಲ್ಲಿ ಸ್ಥಶಾನಕ್ಕೆ ಜಾಗ ಒದಗಿಸಬೇಕಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದೇ ವೇಳೆ ಸರ್ಕಾರಿ ವಕೀಲರು ಸಹ, ಪ್ರಕರಣದಲ್ಲಿ ಸರ್ಕಾರದಿಂದ ತಪ್ಪಾಗಿದೆ, ಕೆಲ ಜಿಲ್ಲಾಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. ಇದರಿಂದ ಕೋ‌ಗೊಂಡ ನ್ಯಾಯಪೀಠ, ತಪ್ಪ ಮಾಹಿತಿ ನೀಡಿದ ಎಲ್ಲ ಜಿಲ್ಲಾಧಿಕಾರಿಗಳು ಮಾ.16 ಕ್ಕೆ ವಿಚಾರಣೆಗೆ ಹಾಜರಾಗಬೇಕು ಎಂದು ನಿರ್ದೇಸಿತು,

ಲಂಚ ಪಡೆಯುವಾಗ ಮಹಿಳಾ ಅಧಿಕಾರಿ ಅರೆಸ್ಟ್!

ಮಡಿಕೇರಿ: ಅಧೀನ ಅಧಿಕಾರಿಯೊಬ್ಬರಿಂದ 50,000 ರೂಪಾಯಿಲಂಚ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಪೂರ್ಣಿಮಾ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಇಲಾಖೆಯಿಂದ 1.60 ಲಕ್ಷ ವೆಚ್ಚದಲ್ಲಿ ಎರಡು ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.ಇದರಲ್ಲಿ ಒಂದು ಲಕ್ಷ ರೂಪಾಯಿ ಹಣವನ್ನು ತನಗೆ ನೀಡಬೇಕು ಎಂದು ಆರೋಪಿ ಪೂರ್ಣಿಮಾ ತನ್ನ ಅಧೀನ ಅಧಿಕಾರಿಯನ್ನು ಪೀಡಿಸುತ್ತಿದ್ದರು. ಹಣ ನೀಡದೇ ಇದ್ದರೆ ಅಮಾನತುಪಡಿಸಲಾಗುವುದು ಎಂದು ಬೆದರಿಕೆಯನ್ನೂ ಒಡ್ಡಿದ್ದರು. ಮೊದಲಿಗೆ ಮುಂಗಡವಾಗಿ 50 ಸಾವಿರ ರೂಪಾಯಿ ಇಲಾಖೆಯಿಂದ 1.60 ಲಕ್ಷ ವೆಚ್ಚದಲ್ಲಿ ಎರಡು ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.
ಇದರಲ್ಲಿ ಒಂದು ಲಕ್ಷ ರೂಪಾಯಿ ಹಣವನ್ನು ತನಗೆ ನೀಡಬೇಕು ಎಂದು ಆರೋಪಿ ಪೂರ್ಣಿಮಾ ತನ್ನ ಅಧೀನ ಅಧಿಕಾರಿಯನ್ನು ಪೀಡಿಸುತ್ತಿದ್ದರು. ಹಣ ನೀಡದೇ ಇದ್ದರೆ ಅಮಾನತುಪಡಿಸಲಾಗುವುದು ಎಂದು ಬೆದರಿಕೆಯನ್ನೂ ಒಡ್ಡಿದ್ದರು. ಮೊದಲಿಗೆ ಮುಂಗಡವಾಗಿ 50 ಸಾವಿರ ರೂಪಾಯಿ ನೀಡುವಂತೆ ಕೇಳಿದ್ದರು. ಈ ಹಣವನ್ನು ಅರಣ್ಯ ಭವನದ ಮುಂಭಾಗ ಇರುವ ತಮ್ಮ ಜೀಪಿನಲ್ಲಿ ಇಡುವಂತೆ ಪೂರ್ಣಿಮಾ ಸೂಚಿಸಿದ್ದರು.
ಅದರಂತೆ ಅಧೀನ ಅಧಿಕಾರಿಯು ಗುರುವಾರ ಸಂಜೆ ಜೀಪಿನಲ್ಲಿ ಲಂಚದ ಹಣ ಹಾಕುತ್ತಿದ್ದಂತೆ ಪೂರ್ಣಿಮಾ ಅವರನ್ನು ಬಂಧಿಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಮೈಸೂರು ವಿಭಾಗದ ಲೋಕಾಯುಕ್ತ ಎಸ್.ಪಿ ಸುರೇಶ್‌ಬಾಬು ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಮೈಸೂರಿನ ಡಿವೈಎಸ್‌ಪಿ ಕೃಷ್ಣಯ್ಯ, ಮಡಿಕೇರಿಯ ಡಿವೈಎಸ್‌ಪಿ ಪವನಕುಮಾರ್ ಹಾಗೂ ಇನ್‌ಸ್ಪೆಕ್ಟರ್‌ಗಳಾದ ಲೋಕೇಶ್, ಜಯರತ್ನಾ ಸಿಬ್ಬಂದಿಯಾದ ಲೋಕೇಶ್, ಮಂಜುನಾಥ, ಸಲಾಹುದ್ದೀನ್, ದೀಪಿಕಾ, ಅರುಣ್‌ಕುಮಾರ್, ಶಶಿ, ತ್ರಿವೇಣಿ, ಪ್ರಕಾಶ್, ಲೋಕೇಶ್ ಕಾರ್ಯಾಚರಣೆ ತಂಡದಲ್ಲಿದ್ದರು.

Categories
Uncategorized

ರಾಜ್ಯದಲ್ಲಿ 5, 8ನೇ ತರಗತಿ ಪಬ್ಲಿಕ್ ಪರೀಕ್ಷೆ ರದ್ದು

  • ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ 5 ಹಾಗೂ 8ನೇ ತರಗತಿ ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ.
ರಾಜ್ಯ ಪರೀಕ್ಷಾ ಮಂಡಳಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿತ್ತು. ಆದರೆ ಹೈಕೋರ್ಟ್‌ ಏಕಸದಸ್ಯ ಬೋರ್ಡ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.ಮುಂದಿನ 2022-23ನೇ ಸಾಲಿನಿಂದ 5ನೇ ತರಗತಿ 8ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ಪಬ್ಲಿಕ್ ನಡೆಸಲು ಮತ್ತು ಸಾಕ್ಷರತಾ ನಿರ್ಧರಿಸಿತ್ತು. ರಾಜ್ಯ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಅನುದಾನರಹಿತ ಈ ಬೆನ್ನಲ್ಲೇ ಮತ್ತು ತರಗತಿಯ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಹೈಕೋರ್ಟ್‌ ಪೀಠ ಆದೇಶ ಹೊರಡಿಸಿದೆ.

Categories
ಆರೋಗ್ಯ ಮಂಗಳೂರು

ಮಂಗಳೂರಲ್ಲಿ ದೇಶದಲ್ಲೇ ಅತೀ ಹೆಚ್ಚು ತಾಪ!

  • ಮಂಗಳೂರುನಲ್ಲಿ ದಾಖಲು: ಮತ್ತಷ್ಟು ಹೆಚ್ಚುತ್ತಿರುವ ಉಷ್ಣತೆ
  • ಮಲೆನಾಡಲ್ಲೂ ಬಿಸಿಲು ಹೆಚ್ಚಳ: ಬತ್ತಿದ ನೀರಿನ ಸೆಲೆ

NAMMUR EXPRESS NEWS
ಮಂಗಳೂರು/ಶಿವಮೊಗ್ಗ: ದೇಶದಲ್ಲೇ ದಾಖಲೆಯ ಗರಿಷ್ಠ ತಾಪಮಾನ ಮಂಗಳೂರುನಲ್ಲಿ ದಾಖಲಾಗಿದ್ದು ಜನ ಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ. ಇನ್ನು ಮಲೆನಾಡಲ್ಲಿ ಕೂಡ ಬಿಸಿಲಿನ ಝಳ ಜನರನ್ನು ಕಂಗಾಲಾಗಿಸಿದೆ.
ಬಿಸಿಲ ದಗೆಗೆ ಕಾಡ್ಗಿಚ್ಚುಗಳು ಹೆಚ್ಚಾಗುತ್ತಿತ್ತು. ಇತ್ತ ತೀವ್ರವಾದ ತಾಪಮಾನದಿಂದಾಗಿ ಅನಾರೋಗ್ಯವೂ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಬೆಂಕಿ ಅವಘಡಗಳು ಕೂಡ ಹೆಚ್ಚಾಗಿವೆ.
ಮಾ, 2ರಂದು ದೇಶದಲ್ಲೇ ಗರಿಷ್ಠ ಎನಿಸಿಕೊಂಡ ಸರಿ ಸುಮಾರು 37 ಡಿ.ಸೆ ನಷ್ಟು ತಾಪಮಾನ ಮಂಗಳೂರುನಲ್ಲಿ ದಾಖಲಾಗಿದ್ದು. ಬುಧವಾರ 38.8 ಡಿ.ಸೆ ತಾಪಮಾನ ದಾಖಲಾಗಿದೆ.
2010 ರಿಂದ ಇಲ್ಲಿಯವರೆಗೆ ದಾಖಲೆಯಾದ ಉಷ್ಣತೆಯಲ್ಲಿ ಅತೀ ಹೆಚ್ಚು ಉಷ್ಣತೆ ಇದಾಗಿದೆ. ದೇಶದಲ್ಲೇ ಅತೀ ಹೆಚ್ಚು ತಾಪಮಾನ ಮಂಗಳೂರುನಲ್ಲಿ ದಾಖಲಾಗಿದೆ.
ಕರಾವಳಿ ಹಾಗೂ ಮಲೆನಾಡಲ್ಲಿ ಬಿಸಿಲ ಬೇಗೆ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇದ್ದು ಇನ್ನು ತಾಪಮಾನ 2 ರಿಂದ 3 ಡಿ.ಸೆ ನಷ್ಟು ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏರುತ್ತಿರುವ ತಾಪಮಾನ ಮಕ್ಕಳ ಮೇಲೆ ಬಾರಿ ಪರಿಣಾಮ ಬಿರುತ್ತಿದ್ದು ಪ್ರತಿಯೊಬ್ಬರು ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆಯನ್ನು ಪಾಲಿಸಬೇಕಾಗಿದೆ. ಅನಾರೋಗ್ಯ ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆ ತೋರಿಸಬೇಕಿದೆ.

ಬತ್ತಿ ಹೋದ ನೀರಿನ ಸೆಲೆ!

ಮಲೆನಾಡಿನ ಹಳ್ಳ, ಕೊಳ್ಳಗಳು ಬಿಸಿಲಿನ ತಾಪ ಹೆಚ್ಚಾಗಿದ್ದು ಹಳ್ಳ ಕೊಳ್ಳಗಳು, ನದಿಗಳು, ನೀರಿನ ಸೆಲೆಗಳು ಸಂಪೂರ್ಣ ಬತ್ತಿ ಹೋಗಿವೆ. ಬೇಸಿಗೆ ಆರಂಭಕ್ಕೆ ಹೀಗಾದರೆ ಮುಂದೆ ಏನು ಎಂಬ ಆತಂಕ ಎದುರಾಗಿದೆ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.

Categories
ಶಿಕ್ಷಣ

ಮೇ ಮೊದಲ ವಾರ ದ್ವಿತೀಯ ಪಿಯುಸಿ ಫಲಿತಾಂಶ

  • 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರ್: ಶಿಕ್ಷಣ ಸಚಿವ ನಾಗೇಶ್ ಮಾಹಿತಿ

NAMMUR EXPRESS NEWS
ತಿಪಟೂರು: ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು ಸುಸೂತ್ರವಾಗಿ ನಡೆಯುತ್ತಿದೆ. ರಾಜ್ಯದ 1109 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ. ತಿಪಟೂರಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಬಳಿಕ ನಾಗೇಶ್ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಮಾ.9ರಿಂದ ಪರೀಕ್ಷೆ ಆರಂಭವಾಗಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಕಲ್ಲಡ್ಕ: ದ್ವಿತೀಯ ಪಿಯುಸಿ ಪರೀಕ್ಷೆ ದಿನವೇ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.
ಬಾಳ್ತಿಲ ಗ್ರಾಮ ಪಂಚಾಯತ್ ಬಳಿಯ ನಿವಾಸಿ ಚಂದ್ರಶೇಖರ್ ಗೌಡ ಮತ್ತು ಸೌಮ್ಯ ದಂಪತಿ ಪುತ್ರಿ ವೈಷ್ಣವಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಕಲ್ಲಡ್ಕ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವೈಷ್ಣವಿ ಕಾಲೇಜಿಗೆಂದು ಹೊರಟು ಏನೋ
ಮರೆತು ಹೋಗಿದ್ದೇನೆಂದು ವಾಪಾಸ್ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Categories
ರಾಜಕೀಯ

ಬಿಜೆಪಿ ಜನಾಭಿಪ್ರಾಯಕ್ಕೆ ಸಿದ್ಧತೆ..!

  • ಮಾ.16 ರಂದು ಬಿಜೆಪಿ ಪ್ರನಾಳಿಕೆಗಾಗಿ ಜನಾಭಿಪ್ರಾಯದ ಸಂಗ್ರಹದ ಅಭಿಯಾನಕ್ಕೆ ಚಾಲನೆ
  • ಪ್ರತಿ ಕ್ಷೇತ್ರದಲ್ಲೂ ನಡೆಯಲಿದೆ ಕಾರ್ಯಕ್ರಮ
  • ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಡಾ. ಧನಂಜಯ ಸರ್ಜಿ

NAMMUR EXPRESS NEWS
ಶಿವಮೊಗ್ಗ: ಮಾ.16 ರಿಂದ ಬಿಜೆಪಿ ಪ್ರನಾಳಿಕೆಗಾಗಿ ಜನಾಬಿಪ್ರಾಯ ಸಂಗ್ರಹ ಅಭಿಯಾನ ಆರಂಭವಾಗಲಿದ್ದು ಅಂದು ರಾಯಲ್ ಆರ್ಕಿಡ್ ನಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಲಿದ್ದಾರೆ ಎಂದು ಪ್ರನಾಳಿಕೆ ಸಮಿತಿಯ ಜಿಲ್ಲಾಧ್ಯಕ್ಷ ವೈದ್ಯಡಾ.ಧನಂಜಯ್ ಸರ್ಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರದ ಯೋಜನೆಗಳನ್ನ ಜನರಿಗೆ ಮುಟ್ಟಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. 273 ಬೂತ್ ಗಳಿಗೂ ಜನರನ್ನ ಸಂಪರ್ಕಿಸಿ ಸರ್ಕಾರದ ಮಾಹಿತಿ ತಿಳಿಸಲಾಗುವುದು. 2016 ರ ನಂತರ 100 ಕೋಟಿ ಮನೆಗಳು ನಿರ್ಮಾಣವಾಗಿದೆ. ಜಲಜೀವನ್ ಮಿಷನ್, ನಗರದಲ್ಲಿ ವ್ಯವಸ್ಥೆಗಳಿವೆ. ವಿದ್ಯುತ್ ಚ್ಛಕ್ತಿ ಇಲ್ಲದ ಮನೆಗಳಿಗೆ ವಿದ್ಯುತ್ ಪೂರೈಕೆ ಇವುಗಳನ್ನ ಮಾಹಿತಿ ನೀಡಲಾಗುವುದು ಎಂದರು.
ವ್ಯಾಕ್ಸಿನೇಷನ್ ಹಂಚಿಕೆ, ಆಪರೇಷನ್ ಗಂಗಾ, ಹೈವೆ ಕಾಮಗಾರಿ, 3500 ಕೋಟಿ ಹಣ ಹೈವೆಗೆ ಹರಿದು ಬರುತ್ತಿದೆ ಈ ಹಿಂದೆ 800 ಕೋಟಿ ಹರಿದು ಬರುತ್ತಿತ್ತು. 59 ಲಕ್ಷ ಜನ ರೈತರಿಗೆ 6000 ಕಿಸಾನ್ ಸಮ್ಮಸನ್ ಯೋಜನೆ ತಲುಪಿಸಲಾಗುತ್ತಿದೆ. ಡಬ್ಬಲ್ ಇಂಜಿನ್ ಸರ್ಕಾರದಿಂದ ಅನುಕೂಲವಾಗಿದೆ. ಇದನ್ನ ಜನರೊಂದಿಗೆ ಚರ್ಚಿಸುವ ಕೆಲಸ ಮಾಡಲಾಗುವುದು ಎಂದರು.
ಶಿವಮೊಗ್ಗದ ವಿಮಾನನಿಲ್ದಾಣ, ರೈಲ್ವೆ ಅಭಿವೃದ್ಧಿ, ಬಿಜೆಪಿಯೇ ಭರವಸೆ ಎಂಬ ಘೋಷಣೆ ಅಡಿ ಸರ್ಕಾರ ಅಭಿವೃದ್ಧಿ ಕೆಲಸ ಮಾಡ್ತಾ ಇದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅಭಿಯಾನ ಮಾಡಲಾಗುತ್ತಿದೆ. ದೇವಸ್ಥಾನ, ಕೃಷಿ ಮಾರ್ಕೆಟ್ ಮೊದಲಾದ ಕಡೆ ಜನ ಸೇರುವ ಜಾಗದಲ್ಲಿ ಜನರೊಂದಿಗೆ ಚರ್ಚೆ ಮಾಡಲಾಗುತ್ತಿದೆ.