Categories
ಬೆಂಗಳೂರು

ಪಂಚಾಯಿತಿ ಅಧ್ಯಕ್ಷರ ಅಧಿಕಾರ ಅವಧಿ ಹೆಚ್ಚಳ?!

ಪಂಚಾಯಿತಿ ಅಧ್ಯಕ್ಷರ ಅಧಿಕಾರ ಅವಧಿ ಹೆಚ್ಚಳ?!
– ಕಾಯ್ದೆ ತಿದ್ದುಪಡಿಗೆ ಪ್ರಸ್ತಾಪ: ಸಿಎಂ ಸೂಚನೆ
– ಗ್ರಾಪಂ, ತಾಪಂ, ಜಿಪಂ ಅಧ್ಯಕ್ಷರಿಗೆ 5 ವರ್ಷ ಅಧಿಕಾರ
– ಶೀಘ್ರದಲ್ಲಿ ಪಿಡಿಓಗಳ ವರ್ಗಾವಣೆ?

NAMMUR EXPRESS NEWS
ಬೆಂಗಳೂರು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಅಧಿಕಾರದ ಅವಧಿಯನ್ನು ಐದು ವರ್ಷಗಳಿಗೆ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ತರುವ ಇದೀಗ ಅಂತಿಮ ಹಂತಕ್ಕೆ ಬಂದಿದೆ.
ಪ್ರಸ್ತಾವವನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಗೆ ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಹಿಂದಿನ ಅವಧಿಯಲ್ಲಿ ರೂಪಿಸಿದ್ದ ಕಾಯ್ದೆಯಂತೆ ಪಂಚಾಯಿತಿ ಅಧ್ಯಕ್ಷರಿಗೆ ಐದು ವರ್ಷಗಳ ಅಧಿಕಾರ ಅವಧಿ ನೀಡಲು ಕಾಯ್ದೆಗೆ ಪುನಃ ತಿದ್ದುಪಡಿ ತರುವ ವಿಷಯ ಸಭೆಯಲ್ಲಿ ಪ್ರಸ್ತಾಪವಾಗಿದೆ.
ಈ ವಿಷಯವನ್ನು ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಮಂಡಿಸಿ. ಶಾಸಕರ ಅಭಿಪ್ರಾಯ ಆಲಿಸಿದ ಬಳಿಕ ಮುಂದುವರಿಯೋಣ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ರೀತಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲೂ ಪ್ರತಿ 21,000 ಜನಸಂಖ್ಯೆಗೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರ ರಚಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಶೀಘ್ರದಲ್ಲಿ ಪಿಡಿಓಗಳ ವರ್ಗಾವಣೆ?

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆಗೆ ಶಾಸಕರಿಂದ ಮನವಿಗಳು ಬರುತ್ತಲೇ ಇವೆ. ಮುಂದಿನ ವರ್ಷದಿಂದ ಕೌನ್ಸೆಲಿಂಗ್‌ ಮೂಲಕ ಪಿಡಿಒಗಳ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕಾ ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ರಾಜ್ಯ

ಕರ್ನಾಟಕ ಟಾಪ್ ನ್ಯೂಸ್

ಕುಂದಾಪುರದ ಯುವಕನಿಗೆ ಯಮನಾದ ಇಂಜೆಕ್ಷನ್!
– ಶಿವಮೊಗ್ಗದಲ್ಲಿ ಡೆಂಘೀ ಜ್ವರ ಅಲರ್ಟ್!
– ಶಿಕಾರಿಪುರದಲ್ಲಿ ಗಲಾಟೆ ವೇಳೆ ಓರ್ವನ ಕೊಲೆ
– ಚಿಕ್ಕಮಗಳೂರು: ಜಿಂಕೆ ಬೇಟೆಯಾಡಿದವರ ಸೆರೆ
– ಕರಾವಳಿ ಪೊಲೀಸ್ ಪಡೆಯ ಇಬ್ಬರು ಸಮುದ್ರಪಾಲು

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ಡೆಂಘೀಜ್ವರ ಕಾಟ ಶುರುವಾಗುತ್ತಿದೆ. ಮನೆ, ಹೋಟೆಲ್ ಇನ್ನಿತರ ಕಡೆಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ಸಂಗ್ರಹಿಸುವ ಕಾರಣ ಡೇಂಘೀ ಭಯ ಶುರುವಾಗಿದೆ. ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜನವರಿಯಿಂದ ಆಗಸ್ಟ್ 20ರವರೆಗೆ ಜಿಲ್ಲೆಯಲ್ಲಿ ಒಟ್ಟು 163 ಡೆಂಘೀ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಮುಂದಿನ ತಿಂಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನೀರನ್ನು ಕುದಿಸಿ ಕುಡಿಯಬೇಕು. ಹೆಚ್ಚು ದಿನ ಒಂದೇ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಸಂಗ್ರಹಣ ತೊಟ್ಟಿ, ಪಾತ್ರೆಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಬಳಸಬೇಕು ಎಂದು ಅರಿವು ಮೂಡಿಸಲಾಗುತ್ತಿದೆ. ಆದರೂ, ನೀರಿನ ಕೊರತೆ ಹೀಗೆಯೇ ಮುಂದುವರಿದರೆ, ಜನರಿಗೆ ಇನ್ನಷ್ಟು ಸಮಸ್ಯೆಯಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಿಕಾರಿಪುರದಲ್ಲಿ ಹಾಡಹಗಲೇ ಕೊಲೆ

ಶಿಕಾರಿಪುರ ತಾಲೂಕು ಪಟ್ಟಣದ ಕೆ.ಎಚ್.ಪಿ ಕಾನೂನಿನಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಗಲಾಟೆ ಇದೀಗ ಓರ್ವನ ಬಲಿ ಪಡೆದಿದೆ. ಜಾಫರ್ ಬಿನ್ ಸಬ್ಜನ್ ಸಾಬ್(32) ಎಂದುಹೇಳಲಾಗುತ್ತಿದ್ದು, ಪ್ರಕರಣ ಸಂಬಂಧ ಶಿಕಾರಿಪುರ ಟೌನ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ತನಿಖೆ ನಡೆಸುತ್ತಿದ್ದಾರೆ.

ಕಾಫಿ ತೋಟದಲ್ಲಿ ಶಿಕಾರಿ: ಜಿಂಕೆ ಮಾಂಸದ ಜತೆ ಅರೆಸ್ಟ್!

ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮುತ್ತೊಡಿ ಪ್ರಾದೇಶಿಕ ವ್ಯಾಪ್ತಿಯ ಸಂಗಮ ಕಾಫಿ ತೋಟದಲ್ಲಿ ಜಿಂಕೆ ಬೇಟೆಯಾಡಿ ಬಾಡೂಟಕ್ಕೆ ತಯಾರಿ ನಡೆಸುತ್ತಿದ್ದಾಗ ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿಕಾರಿ ಮಾಡಿದ ಆರೋಪದ ಮೇಲೆ ಮೊಹಮ್ಮದ್ ಶಕೀಲ್ ಸೇರಿದಂತೆ 6 ಜನ ಬಂಧನಕ್ಕೀಡಾಗಿದ್ದಾರೆ. 8 ಕೆಜಿ ಜಿಂಕೆ ಮಾಂಸ, ನಾಡಬಂದೂಕು ವಶಪಡಿಸಿಕೊಳ್ಳಲಾಗಿದೆ.ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮೇಲಿನ ಹುಲುವತ್ತಿ ಗ್ರಾಮದ ಸಂಗಮ ಕಾಫಿ ಎಸ್ಟೇಟ್ ಮೇಲೆ ಮತ್ತೋಡಿ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ ಮಂಗಳೂರು ಮೂಲದ 6 ಜನ ಪ್ರವಾಸಿಗರು ಸೇರಿದಂತೆ ಎಸ್ಟೇಟ್ ಸಿಬ್ಬಂದಿ ಶಕೀಲ್ ನನ್ನ ಬಂಧಿಸಿ 8 ಕೆ.ಜೆ ಜಿಂಕೆ ಮಾಂಸ,ಶಿಕಾರಿಗೆಬಳಸುತ್ತಿದ್ದ ಬಂದೂಕನ್ನ ವಶ ಪಡಿಸಿಕೊಂಡಿದ್ದಾರೆ.

ಕರಾವಳಿ ಪೊಲೀಸ್ ಪಡೆಯ ಇಬ್ಬರು ಸಮುದ್ರಪಾಲು

ಕರಾವಳಿ ಪೊಲೀಸ್ ರಕ್ಷಣಾ ಬೋಟ್ ನ ನೌಕರರಾದ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ರಾಜೇಶ್ (35) ಮತ್ತು ರಕ್ಷಣಾ ಬೋಟ್ ನ ಸಿಬ್ಬಂದಿ ಸನೀಶ್ (32) ಸಮುದ್ರ ಪಾಲಾಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.ನೀಲೇಶ್ವರಂ ತೈಕ್ಕಡಪ್ಪುರಂ ಬೋಟ್ ಜೆಟ್ಟಿಯ ಪಶ್ಚಿಮ ಭಾಗದಲ್ಲಿ ಈ ಘಟನೆ ನಡೆದಿದೆ. ದಡದಿಂದ ಸಮುದ್ರಕ್ಕೆ ಈಜುತ್ತಾ ಬಲೆ ಹಿಡಿದು ಮೀನು ಹಿಡಿಯುತ್ತಿದ್ದಾಗ ರಾಜೇಶ್ ಅಕಸ್ಮಿಕವಾಗಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.ರಾಜೇಶ್‌ನನ್ನು ರಕ್ಷಿಸುವ ವೇಳೆಕಾಸರಗೋಡು ಸಮುದ್ರ ರಕ್ಷಣಾ ಸಿಬ್ಬಂದಿ ಸನೀಷ್ ಕೂಡ ನೀರುಪಾಲಾಗಿದ್ದಾರೆ.

ಕುಂದಾಪುರದ ಯುವಕನಿಗೆ ಯಮನಾದ ಇಂಜೆಕ್ಷನ್!

ಜ್ವರ ಕಡಿಮೆಯಾಗಲೆಂದು ವೈದ್ಯರು ನೀಡಿದ ಚುಚ್ಚುಮದ್ದು ದೇಹದ ಒಳ ಸೇರುತ್ತಿದ್ದಂತೆ ಅಡ್ಡ ಪರಿಣಾಮ ಬೀರಿದ ಹಿನ್ನಲೆಯಲ್ಲಿ ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿರುವ ಕುಂದಾಪುರ ತಾಲ್ಲೂಕಿನ ಹೊಸಂಗಡಿ ಸಮೀಪದ ಬೆದ್ರಳ್ಳಿ ನಿವಾಸಿ ದಿ. ಚಂದ್ರ ಶೆಟ್ಟಿ ಎಂಬುವವರ ಪುತ್ರ ಅಮರ್ ಶೆಟ್ಟಿ(31) ಮೃತಪಟ್ಟ ಘಟನೆ ನಡೆದಿದೆ. ದುಬೈನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಅಮ‌ ಶೆಟ್ಟಿ ಒಂದು ವರ್ಷದ ಹಿಂದಷ್ಟೇ ತವರೂರಿಗೆ ಹಿಂದಿರುಗಿದ್ದ ಅಮರ್ ಬೆಂಗಳೂರಿನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು. ಆಗಸ್ಟ್ 18ರ ಸಂಜೆ ಅಮರ್ ಶೆಟ್ಟಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬಾಳಿ ಬದುಕಬೇಕಾದ ಮನೆಯ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಮೃತನ ಅಂತ್ಯಸಂಸ್ಕಾರವನ್ನು ತಾಯಿ ಮನೆ ಶಂಕರನಾರಾಯಣದ ಹದ್ದೂರಿನಲ್ಲಿ ನಡೆಸಲಾಗಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಯುವ ಕ್ರೀಡಾಪಟು ನಂದಿ ವಿಧಿವಶ

ತೀರ್ಥಹಳ್ಳಿಯ ಯುವ ಕ್ರೀಡಾಪಟು ನಂದಿ ವಿಧಿವಶ
– ರಾಷ್ಟ್ರೀಯ ಖೋ ಖೋ ಕ್ರೀಡೆಯಲ್ಲಿ ರಾಜ್ಯ ಪ್ರತಿನಿಧಿಸಿದ್ದ ಆಟಗಾರ
– ದೀರ್ಘಕಾಲದ ಅನಾರೋಗ್ಯಕ್ಕೆ ಬಲಿಯಾದ ಯುವಕ

NAMMUR EXPRESS NEWS
ತೀರ್ಥಹಳ್ಳಿ: ರಾಷ್ಟ್ರೀಯ ಖೋ ಖೋ ಆಟಗಾರ ತೀರ್ಥಹಳ್ಳಿ ವಿನಯ್ ಅನಾರೋಗ್ಯದ ಸಾವಿನ ಪ್ರಕರಣದ ನಡುವೆ ಇದೀಗ ತೀರ್ಥಹಳ್ಳಿ ಮೂಲದ ಮತ್ತೋರ್ವ ಖೋ ಖೋ ರಾಷ್ಟ್ರೀಯ ಕ್ರೀಡಾಪಟು ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.
ಕೆ.ಸಿ, ಸ್ಟ್ರೀಟ್ಸ್ ನಿವಾಸಿ ನಂದಿ ನಿಧನರಾಗಿದ್ದಾರೆ.10 ನೇ ತರಗತಿವರೆಗೂ ಜೂನಿಯರ್ ಹೈ ಸ್ಕೂಲ್ ಶಿಕ್ಷಣ ಪಡೆದು ನಂತರ ತುಂಗಾ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಇವರು ನಂತರ ಡಿಗ್ರಿ ಹಾಗೂ ಎಂ. ಬಿ, ಎ ಆಳ್ವಾಸ್ ಶಿಕ್ಷಣ ಸಂಸ್ಥೆ ಯಲ್ಲಿ ಶಿಕ್ಷಣ ಪಡೆದಿದ್ದು ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಪಟು , ರಾಷ್ಟ್ರಿಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖೋ ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ದೀರ್ಘ ಕಾಲ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಮರಣ ಹೊಂದಿದ್ದಾರೆ.
ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಸದ್ಯಸರು ಹಾಗೂ ಆಟಗಾರರು ಕ್ರೀಡಾಪಟು ನಂದಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಉಡುಪಿ ಮಂಗಳೂರು

ಕರಾವಳಿಯಲ್ಲಿ ಮತ್ತೆ ಕಡಿಮೆಯಾಯ್ತು ಮಳೆ!

ಕರಾವಳಿಯಲ್ಲಿ ಮತ್ತೆ ಕಡಿಮೆಯಾಯ್ತು ಮಳೆ!
– ಬಿಸಿಲು, ಸೆಕೆ ಹೆಚ್ಚಳ: ಜನರಿಗೆ ಕಿರಿಕಿರಿ
– ಮಳೆ ಇಲ್ಲದಿದ್ದರೆ ಮುಂದೆ ನೀರಿಗೆ ಬರಗಾಲ!

NAMMUR EXPRESS NEWS
ಮಂಗಳೂರು/ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮಳೆ ತೀವ್ರತೆ ಮತ್ತೆ ಕಡಿಮೆಯಾಗಿದೆ. ಭಾನುವಾರ ದಿನವಿಡೀ ಮೋಡ, ಬಿಸಿಲಿನ ವಾತಾವರಣ ಇತ್ತು. ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆ ವರೆಗೆ ಸಾಮಾನ್ಯ ಮಳೆಯಾಗಿದ್ದು, ಬಳಿಕ ಕಡಿಮೆಯಾಗಿದೆ. ಸೋಮವಾರ ಬೆಳಿಗ್ಗೆ ಮಳೆಯಾಗಿದೆ. ಎರಡು ದಿನಗಳ ಉತ್ತಮ ಮಳೆಯಿಂದ ಸಂತಸಗೊಂಡಿದ್ದ ರೈತರು ಮತ್ತೆ ಮಳೆ ಇಳಿಮುಖವಾಗುವ ಲಕ್ಷಣ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ಸೆಕೆಯೂ ಹೆಚ್ಚಾಗುತ್ತಿದೆ. ಭಾನುವಾರ ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 29.2 ಡಿ.ಸೆ, ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮಳೆ ಇಲ್ಲದೆ ಜನ ಕಂಗಾಲು!

ಮಳೆ ಇಲ್ಲದ ಕಾರಣ ಮುಂದೆ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಬಿಸಿಲಿನ ಝಳ ಹೆಚ್ಚಿದೆ.
ರೈತರು ಕೂಡ ಮಳೆ ಇಲ್ಲದಿದ್ದರೆ ಜಮೀನು ನಾಟಿ ಕಷ್ಟ ಆಗಲಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಗದಗ

ನಾಗರ ಪಂಚಮಿಯಂದೇ ನಾಗ ಪವಾಡ!

ನಾಗರ ಪಂಚಮಿಯಂದೇ ನಾಗ ಪವಾಡ!
– ನಾಗರ ಪಂಚಮಿ ಹಬ್ಬದಂದೇ 2 ಹಾವು ಪ್ರತ್ಯಕ್ಷ!
– ನೀರು ಕುಡಿಸಿ ಸೆರೆ ಹಿಡಿದ ಉರಗ ತಜ್ಞ
– ಇಲ್ಲಿ ಜೀವಂತ ಹಾವುಗಳಿಗೆ ನಡೆಯುತ್ತೆ ಜಲಾಭಿಶೇಕ!
– ಗರ್ಭಗುಡಿಯಿಂದ ಹೊರಬಂದ ನಾಗರಾಜ!

NAMMUR EXPRESS NEWS
ಗದಗ: ನಾಗರ ಪಂಚಮಿ ದಿನವೇ ಎರಡು ಕಡೆ ಪ್ರತ್ಯಕ್ಷವಾದ ನಾಗರ ಹಾವಿಗೆ ನೀರು ಕುಡಿಸುವ ಮೂಲಕ ಉರಗ ತಜ್ಞ ಸಾಗರ ಧರಣಿ ಎನ್ನುವವರ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದು ಎಲ್ಲ ಪ್ರೀತಿಗೆ ಪಾತ್ರನಾಗಿದ್ದಾನೆ. ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದ ಜಂಟ್ಲಿ ಬಸವೇಶ್ವರ ದೇವಸ್ಥಾನದ ಹೊಸಮನಿ ಎಂಬುವರ ಮನೆಯಲ್ಲಿ ಸುಮಾರು 5/6 ಅಡಿ ಉದ್ದದ ನಾಗರ ಹಾವು ಪ್ರತ್ಯಕ್ಷವಾಗಿದೆ. ಹಾವು ನೋಡಿದ ಮನೆಯವರು ಗಾಬರಿಗೊಂಡಿದ್ದಾರೆ. ದೂರದಿಂದಲೇ ಭಕ್ತಿಯಿಂದ ಪೂಜೆ ಮಾಡಿ ಹೊರ ಹೋಗುವಂತೆ ಪ್ರಾರ್ಥಿಸಿದ್ದಾರೆ.

ಕೂಡಲೇ ಸಾಗರ ಅವರಿಗೆ ಪೋನ್ ಮುಖಾಂತರ ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಾಗರ ಮನೆಯಲ್ಲಿ ಪ್ರತ್ಯಕ್ಷವಾಗಿದ್ದ ಸೆಪ್ಟಿಕಲ್ ಕೋಬ್ರಾ ಎನ್ನಲಾಗುವ ನಾಗರಹಾವನ್ನು ತಮ್ಮ ಚಾಣಾಕ್ಷತದಿಂದ ತನ್ನ ಹಿಡಿತಕ್ಕೆ ತೆಗೆದುಕೊಂಡು ಕೆಲಹೊತ್ತು ಆಟವಾಡಿಸಿ ಬಾಟಲಿಯಿಂದ ನೀರು ಕುಡಿಸಿ ಬಳಿಕ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾನೆ. ಕೆಲ ಹೊತ್ತಿನ ಬಳಿಕ ಕುಂದ್ರಳ್ಳಿ ತಾಂಡಾದ ಮನೆಯಲ್ಲಿ ನಾಗರ ಹಾವು ಬಂದಿದೆ ಎಂಬ ಸುದ್ದಿ ತಿಳಿದು ಅಲ್ಲಿಗೂ ತೆರಳಿದ ಸಾಗರ ಧರಣಿ ಅದನ್ನು ಸಹ ಕ್ಷಣಾರ್ಧದಲ್ಲಿಯೇ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾನೆ. ಯುವಕನ ಧೈರ್ಯ ಮತ್ತು ಬುದ್ದಿವಂತಿಕೆಯಿಂದ ಹಾವನ್ನು ಹಿಡಿಯುತ್ತಿರುವದನ್ನು ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೀವಂತ ಹಾವುಗಳಿಗೆ ನಡೆಯುತ್ತೆ ಪೂಜೆ ಜಲಾಭಿಶೇಕ!

ಉಡುಪಿಯ ಮಜೂರಿನಲ್ಲಿ ಜೀವಂತ ನಾಗರ ಹಾವಿಗೆ ಜಲಾಭಿಷೇಕ, ಆರತಿ ಪೂಜೆ ಪುನಸ್ಕಾರಗಳು ನೆರವೇರಿತು. ನಾಗರ ಪಂಚಮಿಯ ಪ್ರಯುಕ್ತ ಜೀವಂತ ನಾಗರ ಹಾವಿಗೆ ಜಲಾಭಿಷೇಕ ಮತ್ತು ಆರತಿ ಕಾರ್ಯಕ್ರಮ ಸೋಮವಾರ ಬೆಳಗ್ಗೆ ನಡೆಸಲಾಯಿತು. ಮಜೂರಿನ ಉರಗ ತಜ್ಞ ಗೋವರ್ಧನ್ ಭಟ್ ಗಾಯಗೊಂಡ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಹವ್ಯಾಸವನ್ನು ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ರಿಕ್ಷಾ ಅಡಿಗೆ ಬಿದ್ದ ಹಾವನ್ನು ರಕ್ಷಿಸಿ, ಶುಶೂಷೆ ನೀಡುತ್ತಿದ್ದಾರೆ. ಮತ್ತೊಂದು ಹಾವನ್ನು ನಾಯಿ ಕಚ್ಚಿ ಗಾಯಗೊಳಿಸಿತ್ತು. ಎರಡು ಹಾವುಗಳಿಗೆ ಗೋವರ್ಧನ್ ಭಟ್ ರವರು ಶುಶೂಷೆ ನೀಡುತ್ತಿದ್ದಾರೆ. ಆ ಹಾವುಗಳಿಗೆ ಜಲಾಭಿಷೇಕ ನೆರವೇರಿಸಿ ಆರತಿ ಎತ್ತಿದ್ದಾರೆ.

ಅಂತೂ ಗರ್ಭಗುಡಿಯಿಂದ ಹೊರಬಂದ ನಾಗರಾಜ!

ಉತ್ತರ ಕನ್ನಡ ಗೋಕರ್ಣ ಮಹಾಬಲೇಶ್ವರ ಮಂದಿರದಲ್ಲಿ ಹಲವು ದಿನಗಳಿಂದ ಗರ್ಭಗುಡಿ ಬಾಗಿಲಿನ ಮೇಲೆ ಠಿಕಾಣಿ ಹೂಡಿದ್ದ ನಾಗರಹಾವು ಅಂತೂ ತಾನಾಗಿಯೇ ಹೊರಗೆ ಹೋಗಿದ್ದು ಆತಂಕ ದೂರವಾಗಿದೆ. ಐದು ದಿನಗಳ ಹಿಂದೆ ಸಂಜೆ ದೇವರ ದರ್ಶನಕ್ಕೆ ಭಕ್ತರನ್ನು ಬಿಡುವ ಸಮಯದಲ್ಲಿ ಕಾಣಿಸಿಕೊಂಡಿತ್ತು. ನಂತರ ಹೊರ ತೆಗೆದು ಸುರಕ್ಷಿತವಾಗಿ ಬಿಡಲು ಉರಗ ತಜ್ಞರಾದ ಅಶೋಕ ನಾಯ್ಕ ತದಡಿ, ಸ್ನೇಕ್ ಬಾಬಣ್ಣ ನಿರಂತರ ಪ್ರಯತ್ನಿಸಿದ್ದರು. ಆದರೂ, ಬಾಗಿಲ ಮೇಲ್ಬಾಗದ ಚಿಕ್ಕ ಸಂಧಿಯಲ್ಲಿ ಹಾವು ಸೇರಿಕೊಂಡ ಕಾರಣ ಹೊರತರಲಾಗಲಿಲ್ಲ.

ಉರಗ ತಜ್ಞರು ಗದ್ದಲವಿದ್ದಾಗ ಹಾವು ಹೊರ ಬರುವುದಿಲ್ಲ ಮತ್ತು ಯಾರಿಗೂ ತೊಂದರೆ ನೀಡುವುದಿಲ್ಲ” ಎಂಬ ಭರವಸೆ ನೀಡಿದ್ದರು. ಅದರಂತೆ ನಿತ್ಯ ಭಕ್ತರು ದರ್ಶನ ಪಡೆದು ಬರುತ್ತಿದ್ದರೂ ಯಾವುದೇ ತೊಂದರೆ ನೀಡಿರಲಿಲ್ಲ . ಮಂದಿರದವರು ಸಹ ತೀವ್ರ ನಿಗಾ ಇಟ್ಟಿದ್ದರು. ಹಲವು ದಿನ ಒಂದೇ ಸ್ಥಳದಲ್ಲಿ ಉಳಿದುಕೊಂಡಿದ್ದ ಹಾವು ಶನಿವಾರ ಬೆಳಗಿನ ಜಾವ ಹೊರ ಹೋಗಿದ್ದು ದೇವಸ್ಥಾನದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೂಲಕ ದೇವಸ್ಥಾನ ಆಡಳಿತದವರಿಗೆ ಮತ್ತು ಸಿಬ್ಬಂದಿ ಆತಂಕ ದೂರವಾಗಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಉಡುಪಿ

ಸೌಜನ್ಯ ಪ್ರಕರಣವೀಗ ಆಣೆ ಪ್ರಮಾಣಕ್ಕೆ ಬಂತು!

ಸೌಜನ್ಯ ಪ್ರಕರಣವೀಗ ಆಣೆ ಪ್ರಮಾಣಕ್ಕೆ ಬಂತು!
– ಆರೋಪ ಪ್ರತ್ಯಾರೋಪ: ದೇವರ ಮುಂದೆ ಆಣೆ ಪ್ರಮಾಣ

NAMMUR EXPRESS NEWS
ಉಡುಪಿ: ಧರ್ಮಸ್ಥಳ ಸಮೀಪ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇದೀಗ ಕರಾವಳಿಯಲ್ಲಿ ಹೋರಾಟಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ನ್ಯಾಯ ಸಿಗಲಿಲ್ಲ ಎಂದು ಕುಟುಂಬವೂ ಹೋರಾಟಕ್ಕಿಳಿದಿದೆ. ಈ ನಡುವೆ ಈ ಪ್ರಕರಣ ಆಣೆ ಪ್ರಮಾಣಕ್ಕೂ ಬಂದು ನಿಂತಿದೆ. ನಾವು ಸೌಜನ್ಯಾ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಸಲುವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹಲವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನೆ ನಡೆಸುತ್ತಿರುವುದಾಗಿ ಉಡುಪಿ ಜಿಲ್ಲೆಯ ಪತ್ರಕರ್ತ ವಸಂತ್ ಗಿಳಿಯಾರ್ ಎನ್ನುವವರು, ದಕ್ಷಿಣಕನ್ನಡ ಜಿಲ್ಲೆಯ ಹಿಂದೂ ಮುಖಂಡ ಮಹೇಶ್‌ ಶೆಟ್ಟಿ ತಿಮರೋಡಿ ಎನ್ನುವವರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಈ ಮಧ್ಯೆ ಉಡುಪಿ ಜಿಲ್ಲೆಯ ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಎಂಬವರು ಪತ್ರಕರ್ತ ವಸಂತ್ ಗಿಳಿಯಾರ್ ವಿರುದ್ಧ ಆರೋಪ ಮಾಡಿದ್ದಾರೆ.

ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪತ್ರಿಕೆಯಲ್ಲಿ 2016 ರಲ್ಲಿ ವಸಂತ್ ಗಿಳಿಯಾರ್ ಐದು ಲಕ್ಷ ರೂ. ಪಡೆದಿದ್ದರು. ಅಲ್ಲದೆ ಆ ವರದಿ ಇದ್ದ ಪತ್ರಿಕೆ ಇನ್ನೊಬ್ಬರಿಗೆ ತಲುಪಿಸಿದ್ದೂ ಗೊತ್ತು ಎಂದು ದಿನೇಶ್ ಗಾಣಿಗ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ನಡೆದ ಸಂಘರ್ಷ ಇದೀಗ ಆಣೆ-ಪ್ರಮಾಣದ ಹಂತಕ್ಕೆ ತಲುಪಿದೆ. ಉಡುಪಿ ಜಿಲ್ಲೆಯ ಕೋಟತಟ್ಟು ಪಡುಕೆರೆ ನಾಗಬನ ಹಾಗೂ ಯಕ್ಷಿ ಸನ್ನಿಧಾನದಲ್ಲಿ ಇವರಿಬ್ಬರು ತೆಂಗಿನಕಾಯಿ ಮುಟ್ಟಿ ಪ್ರಮಾಣ ಮಾಡಿದ್ದು, ಇಬ್ಬರಲ್ಲಿ ಯಾರು ಸರಿ ಎಂದು ದೇವರೇ ತೋರಿಸಲಿ ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ತೀರ್ಥಹಳ್ಳಿ

ನಾಗಬನಗಳಲ್ಲಿ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ

ನಾಗಬನಗಳಲ್ಲಿ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ
– ನಾಗಬನಗಳಲ್ಲಿ ಅರಿಶಿಣ, ಹೂಗಳಿಂದ ಸಿಂಗಾರ
– ತೀರ್ಥಹಳ್ಳಿ ತಾಲೂಕಿನ ಎಲ್ಲೆಡೆ ಆಚರಣೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಿದ್ದಾರೆ. ಭಕ್ತರು ಹಣ್ಣು-ಕಾಯಿ, ಹೂವು, ಅರಿಶಿಣ, ಎಳ್ಳುಂಡೆ, ತಂಬಿಟ್ಟು ಉಂಡೆ, ಎಳೆನೀರು, ಸೇರಿದಂತೆ ವಿಧ ವಿಧದ ಪೂಜಾ ಸಾಮಗ್ರಿಗಳೊಂದಿಗೆ ನಾಗಬನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಬಾಳೆ ಕೊನೆ ತಂದು ದೇವರಿಗೆ ತನು ಎರೆದು ನಾಗದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಸೋಮವಾರದ ದಿನ ನಾಗರ ಪಂಚಮಿ ಹಬ್ಬ ಬಂದಿರುವುದರಿಂದ ಭಕ್ತರು ಈಶ್ವರ ದೇವಸ್ಥಾನಗಳಿಗೂ ಭೇಟಿ ನೀಡುತ್ತಿದ್ದಾರೆ. ಬೆಳಿಗ್ಗೆಯಿಂದಲೇ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಕುಟುಂಬ ಸಮೇತ ಶ್ರದ್ಧಾ ಭಕ್ತಿಯಿಂದ ನಾಗಬನಗಳಿಗೆ ಭೇಟಿ ನೀಡಿ ನಾಗದೇವರ ಕಲ್ಲಿಗೆ ಹಾಲು ಎರೆದು ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ನಾಗರ ಪಂಚಮಿಯಂದೇ ಬಂದ ಕಾಳಿಂಗ!

ತೀರ್ಥಹಳ್ಳಿ ತಾಲೂಕು ಬೀಳುಕೊಪ್ಪ ಅಮರಾವತಿ ಕೃಷ್ಣಮೂರ್ತಿ ಇವರ ಮನೆಯ ಸಮೀಪ ನಾಗರಪಂಚಮಿಯ ದಿವಸದಂದು ಸ್ನೇಕ್ ಚಂದ್ರು ಮತ್ತು ಶೌರ್ಯ ಟೀಮ್ ಕೈಮರದ ಸದಸ್ಯರು ಸೇರಿ 6 ಅಡಿ ಉದ್ದದ ಕಾಳಿಂಗ ಸರ್ಪವನ್ನು ಬೆಳಗ್ಗೆ ಹಿಡಿದು ಕಾಡಿಗೆ ಬಿಡಲಾಯಿತು.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಚಿಕ್ಕಮಗಳೂರು

ಮೂಡಿಗೆರೆಯಲ್ಲಿ ಜೋಡಿ ಹುಲಿ ಪ್ರತ್ಯಕ್ಷ!

ಮೂಡಿಗೆರೆಯಲ್ಲಿ ಜೋಡಿ ಹುಲಿ ಪ್ರತ್ಯಕ್ಷ!
– ಬಣಕಲ್ ದಾಸರಹಳ್ಳಿಯಲ್ಲಿ ರಸ್ತೆ ದಾಟುತ್ತಿದ್ದ ಹುಲಿಗಳು
– ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಪುಂಡಾಟ!

NAMMUR EXPRESS NEWS
ಮೂಡಿಗೆರೆ: ಜೋಡಿ ಹುಲಿಗಳು ರಸ್ತೆ ದಾಟುತ್ತಿದ್ದ ಘಟನೆ ಮೂಡಿಗೆರೆ ಬಣಕಲ್ ದಾಸರಹಳ್ಳಿ ರಸ್ತೆಯಲ್ಲಿನಡೆದಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ ವಿವಿಧ ಭಾಗದಲ್ಲಿ ಇದಕ್ಕೂ ಮುಂಚೆ ಚಿರತೆಗಳ ಹೆಜ್ಜೆ ಗುರುತು ಸಾರ್ವಜನಿಕರಿಗೆ ಕಂಡು ಬಂದಿದ್ದವು. ಆದರೇ ಈಗ ಕಾಡು ಬಿಟ್ಟು ಜನನಿಬಿಡ ಪ್ರದೇಶದಲ್ಲಿ ಜೋಡಿ ಹುಲಿ ಪ್ರತ್ಯಕ್ಷವಾಗಿರುವುದು ಆತಂಕ ಮತ್ತಷ್ಟು ಹೆಚ್ಚಿಸಿದೆ. ಮತ್ತಿಕಟ್ಟೆ ನಿವಾಸಿ ಸುದರ್ಶನ್ ಎಂಬುವವರು ಮುಂಜಾನೆ ಕೆಲಸಕ್ಕೆ ಹೋಗುತ್ತಿದ್ದ ಸಮಯದಲ್ಲಿ ಎರಡು ಬಾರಿ ಗಾತ್ರದ ಜೋಡಿ ಹುಲಿಗಳು ದಾಸರಹಳ್ಳಿಯ ಬಳಿ ರಸ್ತೆ ದಾಟುತ್ತಿದ್ದನ್ನು ನೋಡಿ ವೇಗವಾಗಿ ಕಾರನ್ನು ಹಿಂಬದಿ ಚಲಾಯಿಸಿದ್ದಾರೆ. ಅದೃಷ್ಟವಶತ್ ಅವರು ಸ್ವಲ್ಪ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಜೋಡಿ ಹುಲಿ ಉಮೇಶ್ ಗೌಡರ ತೋಟದಲ್ಲಿ ಮರೆಯಾಗಿದೆ ಎಂದು ತಿಳಿಸಿದರು.ಇದರಿಂದ ಕಾಫಿ ತೋಟದಲ್ಲಿ ಕೂಲಿ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು ಎಚ್ಚರದಿಂದ ಇರಬೇಕು ಎಂದು ಎಚ್ಚರಿಸಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಪುಂಡಾಟ!

ಚಾರ್ಮಾಡಿ ಘಾಟಿ ಪರಿಸರದಲ್ಲಿ ಪ್ರವಾಸಿಗರ ಮೋಜು, ಮಸ್ತಿ, ಪುಂಡಾಟ ಮುಂದುವರಿದಿದೆ. ಚಾರ್ಮಾಡಿ ಘಾಟಿಯಲ್ಲಿ ವಾಹನ ನಿಲ್ಲಿಸಿ, ಪ್ರಕೃತಿ ವೀಕ್ಷಣೆಗೆ ಅವಕಾಶ ಇಲ್ಲದಿದ್ದರೂ, ಈ ಬಗ್ಗೆ ಗಮನಹರಿಸದ ಪ್ರವಾಸಿಗರು ಇವುಗಳ ವೀಕ್ಷಣೆ ನೆಪದಲ್ಲಿ ವಾಹನಗಳನ್ನು ಅಡ್ಡಾಡಿದ್ದ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡುವುದು, ಅಪಾಯಕಾರಿ, ಗುಡ್ಡ, ಬೆಟ್ಟ, ಜಾರುವ ಬಂಡೆ, ತಡೆಗೋಡೆ, ಏರಿ ಮದ್ಯ ಸೇವನೆ ಮಾಡುವುದು, ಕುಣಿಯುವುದು ಕಂಡು ಬರುತ್ತಿದೆ. ಅದರಲ್ಲೂ ವೀಕೆಂಡ್ ಸಮಯದಲ್ಲಿ ಇದು ಹೆಚ್ಚಾಗಿದೆ. ಇದೀಗ ಪೊಲೀಸ್ ಬೀಟ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಮಲ್ನಾಡ್ ಶಿವಮೊಗ್ಗ

ಟಾಪ್ ನ್ಯೂಸ್ ಮಲ್ನಾಡ್

– ಶಿವಮೊಗ್ಗ: ಗಾಂಧೀ ಪ್ರತಿಮೆ ಧ್ವಂಸ!
– ಶಿಕಾರಿಪುರ: ಸ್ನೇಹಿತನ ಸಾವು ಸುದ್ದಿ ಕೇಳಿ ಹೃದಯಾಘಾತ
– ಹೊಸನಗರ : ಹೊಳೆಗೆ ಉರುಳಿ ಬಿದ್ದ ಕಂಟೈನರ್ ಲಾರಿ
– ಕಿರಿಕ್ ಕೀರ್ತಿ ದಂಪತಿ ವಿಚ್ಛೇದನ!
– ಕಡೂರು : ಶಾಸಕರ ಆಪ್ತನ ಕಾರಿಗೆ ಇಬ್ಬರು ಬಲಿ!

NAMMUR EXPRESS NEWS
ಸರ್ಕಲ್​ನಲ್ಲಿದ್ದ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಕೆಡವಿ ಹಾಕಿದ ಘಟನೆ ಸಂಬಂಧ ಹೊಳೆಹೊನ್ನೂರಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಮಹಾತ್ಮಗಾಂಧಿ ಸರ್ಕ್​​ಲ್​ನಲ್ಲಿ ಮಹಾತ್ಮ ಗಾಂಧಿಜಿಯವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಪ್ರತಿಮೆ ಸುತ್ತ ಮಂಟಪವನ್ನು ಸಹ ನಿರ್ಮಿಸಿ, ವಿಶೇಷವಾದ ಗೌರವವನ್ನು ನೀಡಲಾಗುತ್ತಿತ್ತು.
ಭಾನುವಾರ ರಾತ್ರಿ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಗಾಂಧಿಜಿಯವರ ಪ್ರತಿಮೆಯನ್ನು ಕೆಡವಿದ್ದಾರೆ. ಮೂರ್ತಿಯನ್ನು ಧ್ವಂಸಗೊಳಿಸಿದಷ್ಟೆ ಅಲ್ಲದೆ, ಅದನ್ನು ಬೀಳಿಸಿ ಪುಡಿ ಮಾಡಿದ್ಧಾರೆ. ದುಷ್ಕರ್ಮಿಗಳ ಕೃತ್ಯ ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಇನ್ನೂ ಇವತ್ತು ಬೆಳಗ್ಗೆ ವಿಚಾರ ತಿಳಿಯುತ್ತಲೇ ಪ್ರತಿಮೆ ಬಳಿಯಲ್ಲಿ ನೂರಾರು ಮಂದಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಮೆಯನ್ನು ಬೀಳಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಬಂದಿದ್ದು, ಪರಿಶೀಲನೆ ನಡೆಸ್ತಿದ್ದಾರೆ.

ಸ್ನೇಹಿತನ ಸಾವು ಸುದ್ದಿ ಕೇಳಿ ಹೃದಯಾಘಾತ!

ಶಿರಾಳಕೊಪ್ಪದ ನಡುವೆ ಇರುವ ಕೆಎಸ್ಆರ್ ಟಿಸಿ ಬಸ್ ಡಿಪೋ ಬಳಿ ಎರಡು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಓರ್ವನನ್ನ ಮಣಿಪಾಲ್ ಗೆ ದಾಖಲಾಗಿಸಲಾಗಿದೆ. ಈ ಘಟನೆ ಮತ್ತೊಂದು ಹೃದಯ ವಿದ್ರಾವಕ ಘಟನೆಗೆ ದಾರಿಯಾಗಿದೆ. ಅಪಘಾತದಲ್ಲಿ ಗಾಯಗೊಂಡ ಇನ್ನಿಬ್ಬರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವನ್ನಪ್ಪಿದ ಯುವಕನನ್ನ ಆನಂದ್ (30) ಎಂದು ಗುರುತಿಸಲಾಗಿದೆ. ಮಂಡಿ ಚಿಪ್ಪು ಕಳೆದುಕೊಂಡಿರುವ ಯುವನನ್ನ ಮೊಹ್ಮದ್ ಮಲ್ಲಿಕ್ (19) ಎಂದು ಗುರುತಿಸಲಾಗಿದೆ. ತಲೆಗೆ ಮತ್ತು ದವಡೆ ಜ್ವಾ ಭಾಗದಲ್ಲಿ ಹೊಡೆತ ಬಿದ್ದಿರುವ ನವರಾಜ್ ಎಂಬ ಯುವಕ ಮತ್ತು ಜಾವೀದ್ ಎಂಬ 30 ವರ್ಷದ ಯುವಕನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ‌ ದಾಖಲಿಸಲಾಗಿದೆ.
ಆನಂದ್ ಮತ್ತು ನವರಾಜ್ ಸ್ನೇಹಿತನ ಹುಟ್ಟುಹಬ್ಬದ ಕೇಕ್ ತರಲು ಹೊರಟಿದ್ದ ವೇಳೆ ಶಿಕಾರಿಪುರದಿಂದ ಪುಣೇದಹಳ್ಳಿಗೆ ವಾಪಾಸಾಗುವಾಗ ನಿನ್ನೆ ರಾತ್ರಿ 8-30 ರ ಸಮಯದಲ್ಲಿ ಕೆಎಸ್ ಆರ್ ಟಿಸಿ ಡಿಪೋ ಬಳಿ ಪುಣೇದಹಳ್ಳಿಯಿಂದ ಶಿಕಾರಿಪುರಕ್ಕೆ ಬರುತ್ತಿದ್ದ‌ ಜಾವೇದ್ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಆನಂದ ಸ್ಥಳದಲ್ಲಿಯೇ ಸಾವನ್ನಪ್ಪಿದ ವಿಷಯ ತಿಳಿದ ಪುಣೇದಹಳ್ಳಿಯ ಗ್ರಾಮದ ಯುವಕ ಸಾಗರ್ ಎಂಬಾತನಿಗೆ ಹೃದಯಾಘಾತವಾಗಿದೆ.

ಹೊಳೆಗೆ ಉರುಳಿ ಬಿದ್ದ ಕಂಟೈನರ್ ಲಾರಿ

ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಲಾರಿಯೊದು ಹೊಳೆಗೆ ಉರುಳಿ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ನಡೆದಿದೆ. ಕುಂದಾಪುರ ಕಡೆಯಿಂದ ಮಾಸ್ತಿಕಟ್ಟೆಗೆ ಬರುತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹುಲಿಕಲ್ ಗ್ರಾಮದ ಹೊಳೆಗೆ ಉರುಳಿಬಿದ್ದಿದ್ದು ಅದೃಷ್ಟವಶಾತ್ ಚಾಲಕ ಪಾರಾಗಿದ್ದಾನೆ.

ಶಾಸಕ ಶಿವಲಿಂಗೇಗೌಡ ಆಪ್ತನ ಕಾರು, ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು

ಕಾರು, ಬೈಕ್ ನಡುವೆ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೇಮಗಿರಿ ಗೇಟ್ ಬಳಿ ನಡೆದಿದೆ. ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್‌ಶಾಸಕ ಶಿವಲಿಂಗೇಗೌಡ ಅವರ ಆಪ್ತ ಬಾಣಾವರ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾಗಿದ್ದ ಬಿಳಿ ಚೌಡಯ್ಯ ಎಂಬುವವರಿಗೆ ಸೇರಿದ ಕಾರುಇದಾಗಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸ್ವಿಫ್ಟ್ ಕಾರಿನಲ್ಲಿ ಸಿಲುಕಿಕೊಂಡಿದೆ. ಘಟನೆ ಬಳಿಕ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಿರಿಕ್ ಕೀರ್ತಿ ದಂಪತಿ ವಿಚ್ಛೇದನ!

ಕನ್ನಡ ಅವತರಣಿಕೆಯ ಬಿಗ್ ಬಾಸ್ ಶೋನ ಮಾಜಿ ಸ್ಪರ್ಧಿ ಹಾಗೂ ನಿರೂಪಕ ಕಿರಿಕ್ ಕೀರ್ತಿ ಅವರು ತಮ್ಮ ಪತ್ನಿ ಅರ್ಪಿತಾ ಅವರಿಗೆ ವಿಚ್ಛೇದನ ನೀಡಿದ್ದಾರೆ. ಈ ವಿಷಯವನ್ನು ಕೀರ್ತಿ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ‘ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜತೆಗಿನ ಪತಿ-ಪತ್ನಿ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ’ ಎಂದು ಕಿರಿಕ್ ಕೀರ್ತಿ ವಿಚ್ಛೇದನ ಆಗಿರುವುದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. 2016ರಲ್ಲಿ ಕನ್ನಡ ಬಿಗ್‌ಬಾಸ್ ಶೋನಲ್ಲಿ ಕಿರಿಕ್ ಕೀರ್ತಿ ಅವರು ರನ್ನರ್‌ಅಪ್ ಆಗಿ ಗಮನ ಸೆಳೆದಿದ್ದರು. ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಭದ್ರಾವತಿ ತಾಲೂಕು ಶಂಕರಘಟ್ಟ ಮೂಲದವರು.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಕರಾವಳಿ

ಕರಾವಳಿಯಲ್ಲಿ ನಾಗರ ಪಂಚಮಿ ಸಂಭ್ರಮ

ಕರಾವಳಿಯಲ್ಲಿ ನಾಗರ ಪಂಚಮಿ ಸಂಭ್ರಮ
– ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ವಿಶೇಷ ಆಚರಣೆ
– ಹೂವು, ಹಣ್ಣು, ಹಾಲಿಗೆ ಡಿಮ್ಯಾಂಡ್!

NAMMUR EXPRESS NEWS
ನಾಗನಿಗೂ ಕರಾವಳಿಗೂ ಅವಿನಾಭಾವ ಸಂಬಂಧ. ನಾಗದೇವರ ಆರಾಧನೆ ಹಲವು ಭಾಗಗಳಲ್ಲಿ ಹಲವು ವಿಧಗಳಲ್ಲಿ ನಡೆಯುತ್ತದೆ. ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನಾಗನಿಗೆ ವಿಶೇಷ ಸ್ಥಾಮಾನವಿದೆ. ಕರಾವಳಿಯ ಎಲ್ಲೆಡೆ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಮುಂಜಾನೆಯಿಂದಲೇ ಆಚರಣೆ ಮಾಡಲಾಗುತ್ತಿದೆ. ನಾಗರ ಕಟ್ಟೆ, ನಾಗ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಉಡುಪಿ, ದಕ್ಷಿಣ ಕನ್ನಡದ ಹೆಚ್ಚಿನ ಮನೆಗಳಲ್ಲಿ ನಾಗಬನವಿರುತ್ತದೆ. ಈ ದಿನ ನಾಗನಿಗೆ ತಂಬಿಲ, ನಾಗನ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವಿದೆ. ತುಳುನಾಡಿನಲ್ಲಿ ನಾಗರ ಪಂಚಮಿಯಂದು ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಸೇರಿದಂತೆ ಹಲವು ಕಡೆ ನಾಗಾರಾಧನೆಗೆ ಹೆಸರುವಾಸಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಲಿದೆ. ಹೀಗೆ ಹತ್ತು ಹಲವು ವಿಶೇಷ ಪೂಜೆ ಸಲ್ಲಿಸಿ ಸರ್ಪ ದೇವನ ಕೃಪೆಗೆ ಪಾತ್ರರಾಗುತ್ತಾರೆ.

ಕುಕ್ಕೆಯಲ್ಲಿ ವಿಶೇಷ ಪೂಜೆ

ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯದ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಮಣ್ಯದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!