Categories
ತೀರ್ಥಹಳ್ಳಿ

ತುಳುನಾಡು ಸಿರಿ ಸೌಹಾರ್ದ ಸಹಕಾರಿಯಿಂದ ಉಚಿತ ಅರೋಗ್ಯ ಶಿಬಿರ

ತುಳುನಾಡು ಸಿರಿ ಸೌಹಾರ್ದ ಸಹಕಾರಿಯಿಂದ ಉಚಿತ ಅರೋಗ್ಯ ಶಿಬಿರ
– ಸೆ.12ರಂದು ತೀರ್ಥಹಳ್ಳಿಯಲ್ಲಿ ಆಯೋಜನೆ
– ಷೇರುದಾರರು, ಜನತೆ ಸದುಪಯೋಗಪಡಿಸಿಕೊಳ್ಳಲು ರಾಘವೇಂದ್ರ ಶೆಟ್ಟಿ ಮನವಿ

NAMMUR EXPRESS NEWS
ತೀರ್ಥಹಳ್ಳಿ: ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ ತೀರ್ಥಹಳ್ಳಿ ತಾಲ್ಲೂಕು ಇವರ ಆಶ್ರಯದಲ್ಲಿ
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಭಾಗಿತ್ವದಲ್ಲಿ 12 ಸೆಪ್ಟೆಂಬರ್ 2023 ಮಂಗಳವಾರ ತೀರ್ಥಹಳ್ಳಿಯಲ್ಲಿ
ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅಂದೇ ಷೇರುದಾರರ ಸಭೆ ನಡೆಯಲಿದೆ.
ಮಣಿಪಾಲ ನುರಿತ ತಜ್ಞರಿಂದ ಸಮಾಲೋಚನೆ ರಕ್ತದ ಸಕ್ಕರೆ ಅಂಶದ ಪರೀಕ್ಷೆ (GRBS) | ಬಿಪಿ (BP) ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆ ಮತ್ತು ಸಲಹೆ ಇರಲಿದೆ. 12 ಸೆಪ್ಟೆಂಬರ್ ಮಂಗಳವಾರ ಸಮಯ ಬೆಳಗ್ಗೆ 8-00 ರಿಂದ ಮಧ್ಯಾಹ್ನ 1-00ರವರೆಗೆ ತೀರ್ಥಹಳ್ಳಿ ಮಾಧವ ಮಂಗಲ ಸಭಾಭವನ, ತುಂಗಾತೀರ ಇಲ್ಲಿ ಆರೋಗ್ಯ ಶಿಬಿರ ನಡೆಯಲಿದೆ.
ಷೇರುದಾರ ಸದಸ್ಯರು ಹಾಗೂ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ ತೀರ್ಥಹಳ್ಳಿ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಮತ್ತು ಎಲ್ಲಾ ನಿರ್ದೇಶಕರು ಮನವಿ ಮಾಡಿದ್ದಾರೆ.

ಶಿಬಿರದಲ್ಲಿ ಲಭ್ಯವಿರುವ ಚಿಕಿತ್ಸಾ ವಿಭಾಗಗಳು

1. ಚರ್ಮ ರೋಗ ತಪಾಸಣಾ ವಿಭಾಗ
2, ಕಿವಿ, ಮೂಗು, ಗಂಟಲು ತಪಾಸಣಾ ವಿಭಾಗ
3. ಸಮುದಾಯ ದಂತ ಚಿಕಿತ್ಸಾ ವಿಭಾಗ
4. ಕೀಲು ಮತ್ತು ಮೂಳೆ ತಪಾಸಣಾ ವಿಭಾಗ
5. ಸ್ತ್ರೀ ರೋಗ ತಪಾಸಣಾ ವಿಭಾಗ
6. ಜನರಲ್ ಮೆಡಿಸಿನ್

ಶಿಬಿರಕ್ಕೆ ನೋಂದಾವಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9448617498, 9480282858 9741626317 9113231844

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಬೆಂಗಳೂರು

63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!

63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!
– ಪ್ರೀತಿಸಿ ನಂಬಿಸಿ ವಂಚಿಸಿದ್ದಾರೆ ಎಂದು ಠಾಣೆ ಮೆಟ್ಟಿಲೇರಿದ್ದಾರೆ ಅಜ್ಜಿ
– ಅಯ್ಯೋ ಏನಿದು ವಿಚಿತ್ರ ಕೇಸ್..?..ಸುದ್ದಿ ಓದಿ..!

NAMMUR EXPRESS NEWS
ಬೆಂಗಳೂರು: 63ರ ಅಜ್ಜಿಯನ್ನು ಲವ್ ಮಾಡಿ ವಂಚಿಸಿದ್ರಾ 70ರ ಅಜ್ಜ..?, ಹೌದು. ಇಂತಹ ವಿಚಿತ್ರ ಘಟನೆ ಬೆಂಗಳೂರಲ್ಲಿ ನಡೆದಿದೆ. ವೃದ್ದೆ ನೀಡಿರುವ ದೂರಿನನ್ವಯ ಪೂರ್ವ ವಿಭಾಗದ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರೆಯ ಪತಿ ಹಾಗೂ ಆರೋಪಿ ಲೋಕನಾಥನ್ ಪತ್ನಿ ಸಾವನ್ನಪ್ಪಿದ್ದು, ಐದು ವರ್ಷಗಳ ಹಿಂದೆ ಇಬ್ಬರಿಗೂ ಪರಿಚಯವಾಗಿತ್ತು. ಆರೋಪಿ ತನ್ನ ಮಗನ ಮದುವೆಗೆ ವಧು ಹುಡುಕುತ್ತಿದ್ದಾಗ ವೃದ್ಧೆಯ ಪರಿಚಯವಾಗಿತ್ತು. ಮದುವೆಯನ್ನು ಇಬ್ಬರೂ ಸಹ ಜತೆ ನಿಂತು ಮಾಡಿದ್ದರು. ನಂತರ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಇಬ್ಬರೂ ಸಹ ಮೈಸೂರು, ದಾವಣೆಗೆರೆ, ಬೆಳಗಾವಿ ಅಂತಾ ಪ್ರವಾಸಕ್ಕೂ ಹೋಗಿದ್ದರು. ಅದೇ ಸಂದರ್ಭದಲ್ಲಿ ತನ್ನನ್ನು ಮದುವೆಯಾಗುವಂತೆ ದೂರುದಾರೆ ಆರೋಪಿಗೆ ಕೇಳಿದ್ದರು.

ಆರಂಭದಲ್ಲಿ ಸಮ್ಮತಿಸಿದ್ದ ಆರೋಪಿ, ನಂತರ ಆಕೆಯನ್ನು ನಿರ್ಲಕ್ಷ್ಯಿಸಲಾರಂಭಿಸಿದ್ದ. ಅಲ್ಲದೇ ತಾನು ಕರೆದಾಗ ಮಾತ್ರ ಬರಬೇಕು ಇಲ್ಲವಾದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವೃದ್ದ ಮಹಿಳೆ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಿನ ಬೆಳಗಾದರೆ ಯುವಕ ಯುವತಿಯರ ಪ್ರೀತಿ ಪ್ರೇಮ ಅಂತ ಜೀವನ ಹಾಳು ಮಾಡಿಕೊಂಡಿರುವ ಉದಾಹರಣೆ ನಡುವೆ ಈ ಪ್ರಕರಣ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಚಿಕ್ಕಮಗಳೂರು

ಈ ದೇಗುಲದಲ್ಲಿ ಸ್ಕರ್ಟ್ ಮಿಡಿ, ಪ್ಯಾಂಟ್ ಧರಿಸಂಗಿಲ್ಲ!

ಈ ದೇಗುಲದಲ್ಲಿ ಸ್ಕರ್ಟ್ ಮಿಡಿ, ಪ್ಯಾಂಟ್ ಧರಿಸಂಗಿಲ್ಲ!
-ಚಿಕ್ಕಮಗಳೂರು ದೇವೀರಮ್ಮ ದೇಗುಲದಲ್ಲಿ ನಿಯಮ
– ಕಡೂರಲ್ಲಿ ಹೋರಿ ತಿವಿದು ಓರ್ವ ಸಾವು: ಕೇಸ್
– ಅಜ್ಜಂಪುರ: ಅತ್ತೆ, ಅಳಿಯ ಒಂದೇ ದಿನ ಸಾವು

NAMMUR EXPRESS NEWS
ಪ್ರಸಿದ್ಧ ಚಿಕ್ಕಮಗಳೂರು ದೇವಿರಮ್ಮನ ದೇಗುಲಕ್ಕೆ ಡ್ರೆಸ್‌ ಕೋಡ್ ಆದೇಶ ಜಾರಿಯಾಗಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಲು ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ. ಇನ್ನು ಮುಂದೆ ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ಬಿಂಡಿಗ ದೇವಿರಮ್ಮನ ದೇವಾಲಯದಲ್ಲಿ ಸ್ಕರ್ಟ್, ಮಿಡಿ, ಸ್ಟೀವ್‌ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ. ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್‌ಗೂ ನೀಷೇಧ ಹೇರಲಾಗಿದೆ.

ಮಲೆನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಈ ದೇವಾಲಯಕ್ಕೆ ದೀಪಾವಳಿ ವೇಳೆ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿವರ್ಷ ಲಕ್ಷಾಂತರ ಭಕ್ತರು ದೇವಿರಮ್ಮನ ಬೆಟ್ಟ ಹತ್ತುತ್ತಾರೆ. ಮಧ್ಯರಾತ್ರಿಯೇ ಪಿರಮಿಡ್ ಆಕಾರದ ಬೆಟ್ಟ ಹತ್ತಿ ಭಕ್ತಿ ಸಮರ್ಪಿಸುತ್ತಾರೆ. ಮಕ್ಕಳಿಂದ ವೃದ್ಧರವರೆಗೂ ಬೆಟ್ಟ ಹತ್ತಿ ಬೆಟ್ಟದ ತಾಯಿಗೆ ಕೈಮುಗಿಯುತ್ತಾರೆ. ಯುವಕ-ಯುವತಿಯರೂ ಬರುತ್ತಾರೆ. ಅವರಲ್ಲಿ ಪ್ರೇಮಿಗಳು ಸಹಾ ಇರುತ್ತಾರೆ. ಯಾರೇ ಬಂದರೂ ಸಾಂಪ್ರದಾಯಿಕ ಉಡುಗೆಯಲ್ಲೇ ಬರಬೇಕೆಂದು ದೇವಾಲಯ ಸೂಚನೆ ನೀಡಿದೆ. ದೇವಾಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಕೂಡ ನಿಷೇಧ ಮಾಡಲಾಗಿದೆ.

ಎತ್ತು ತಿವಿದು ಯುವ ರೈತ ಸಾವು, ದೂರು ದಾಖಲು

ಯುವ ರೈತನೋರ್ವನನ ಮೇಲೆ ಎತ್ತು ದಾಳಿ ಮಾಡಿ ಬಲಿ ಪಡೆದುಕೊಂಡಿದ್ದು, ಇದೀಗ ಎತ್ತಿನ ಮಾಲೀಕನ ವಿರುದ್ಧ ದೂರು ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವಿ. ಸಿದ್ದರಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಅರುಣ್ (29) ಮೃತ ದುರ್ದೈವಿ. ಅರುಣ್, ಹೊಲಕ್ಕೆ ತೆರಳುತ್ತಿದ್ದ ವೇಳೆ ಎತ್ತು ಏಕಾಏಕಿ ದಾಳಿ ಮಾಡಿದೆ. ಕೊಂಬಿನಿಂದ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅರುಣ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಆಗಸ್ಟ್ 21ರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಎತ್ತಿನ ಮಾಲೀಕ ಕೃಷ್ಣಪ್ಪ ಎಂಬುವರ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತ್ತೆ, ಅಳಿಯ ಒಂದೇ ದಿನ ಸಾವು

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಗಡೀಹಳ್ಳಿ ಗ್ರಾಮದಲ್ಲಿ ಅತ್ತೆ ಮತ್ತು ಅಳಿಯ ಒಂದೇ ದಿನ ಮೃತಪಟ್ಟಿದ್ದಾರೆ. ಗ್ರಾಮದ ರಾಮಕ್ಕ (85) ವಯೋಸಹಜ ಅನಾರೋಗ್ಯದಿಂದ ಭಾನುವಾರ ಸಂಜೆ ಮೃತಪಟ್ಟರು. ಸಂಜೆ 6.30 ರ ವೇಳೆಗೆ ಅವರ ಅಳಿಯ(ಮಗಳ ಗಂಡ) ಫಕೀರಪ್ಪ (68) ತಮ್ಮ ಮನೆಯಲ್ಲಿ ಅನಾರೋಗ್ಯದಿಂದ ನಿಧನರಾದರು. ರಾಮಕ್ಕನಿಗೆ ಒಬ್ಬ ಪುತ್ರ, ನಾಲ್ವರು ಪುತ್ರಿಯರಿದ್ದಾರೆ. ಫಕೀರಪ್ಪ ಅವರಿಗೆ ನಾಲ್ವರು ಗಂಡು, ಒಬ್ಬ ಪುತ್ರಿ ಇದ್ದಾರೆ. ಒಂದೇ ದಿನ ಇಬ್ಬರ ಸಾವು ಅವರ ಕುಟುಂಬಸ್ಥರು, ಸಂಬಂಧಿಕರಲ್ಲಿ ಶೋಕ ತರಿಸಿತ್ತು. ಮೃತರ ಅಂತ್ಯಕ್ರಿಯೆ ಸೋಮವಾರ ನಡೆಯಿತು.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ಚಂದ್ರಯಾನ ಯಶಸ್ಸಿಗೆ ಕುಕ್ಕೆಯಲ್ಲಿ ಸೇವೆ!
– ಸೌಜನ್ಯ ಪ್ರಕರಣ: ಮಕ್ಕಳ ಆಯೋಗ ಎಂಟ್ರಿ!
– ಬೆಳ್ತಂಗಡಿ: ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜೈಲು
– ಬಸ್ ಅಲ್ಲಿ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ
– ನಾಗರ ಪಂಚಮಿ: 7 ಲಕ್ಷದ ಹಸುಗಳ ದಾನ!
– ಮೂಡಬಿದಿರೆಯಲ್ಲಿ ಅನೈತಿಕ ಪೊಲೀಸ್ ಗಿರಿ?!

NAMMUR EXPRESS NEWS
ಧರ್ಮಸ್ಥಳ : ಧರ್ಮಸ್ಥಳ ಸೌಜನ್ಯ ಪ್ರಕರಣದ ಇದೀಗ ಮತ್ತೊಂದು ಘಟ್ಟಕ್ಕೆ ಬಂದಿದೆ. ಆ.21 ರಂದು ಸೌಜನ್ಯ ಮೃತ ಪಟ್ಟ ಸ್ಥಳ ಹಾಗೂ ಮನೆಗೆ ಮಕ್ಕಳ ರಕ್ಷಣಾ ಆಯೋಗ ಭೇಟಿ ನೀಡಿದೆ. ಈ ವೇಳೆ ಸ್ಥಳ ಪರಿಶೀಲನೆ ನಡೆಸಿ ನಂತರ ಸೌಜನ್ಯ ಕುಟುಂಬಸ್ಥರ ಬಳಿ ಈ ಪ್ರಕರಣದ ಬಗ್ಗೆ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗನಗೌಡ ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅನ್ಯಾಯಕ್ಕೊಳಗಾದ ಕುಟುಂಬದ ಪರವಾಗಿ ನಿಲ್ಲುವ ಭರವಸೆಯನ್ನು ಆಯೋಗ ನೀಡಿದೆ.
‘ಸೌಜನ್ಯ ಪ್ರಕರಣವನ್ನು ಕಾನೂನಾತ್ಮಕವಾಗಿ ಮುಂದುವರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು
ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಪರಿಶೀಲನೆ ಬಳಿಕ ಮನವರಿಕೆ, ಘಟನೆ ನಡೆದ ಸ್ಥಳದಲ್ಲಿ ಶಾಲಾ ಕಾಲೇಜು ಮಕ್ಕಳು ನಡೆದುಕೊಂಡು ಹೋಗುತ್ತಿದ್ದಾರೆ. ಅವರ ಅನುಕೂಲಕ್ಕೆ ಆ ಜಾಗದಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸಲು ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಗೆ ಸೂಚನೆ ನೀಡಿದ್ದೇವೆ. ಸೌಜನ್ಯ ಸಹೋದರ ಸಹೋದರಿಯರ ಹೊರಗೆ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲು ಶಿಫಾರಸ್ಸು ಮಾಡಲಾಗುವುದು’ ಎಂದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗನ ಗೌಡ ಹೇಳಿದರು.

ಬೆಳ್ತಂಗಡಿ: ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜೈಲು

ಬೆಳ್ತಂಗಡಿ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿ ಆಕೆಯ ಮಾನಭಂಗಕ್ಕೆ ಯತ್ನಿಸಿದ ಆರೋಪ ಎದುರಿಸುತ್ತಿದ್ದ ಮದ್ರಸಾ ಶಿಕ್ಷಕನಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಧರ್ಮಸ್ಥಳ-ಪುತ್ತೂರು ಕೆಎಸ್ಆರ್‌ಟಿಸಿ ಬಸ್ ಉಪ್ಪಿನಂಗಡಿ ಸಮೀಪದ ಇಳಂತಿಲ ಕಡವಿನಬಾಗಿಲು ಎಂಬಲ್ಲಿ ಹೋಗುತ್ತಿದ್ದ ವೇಳೆ ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾಗಿ ಪ್ರಕರಣ ದಾಖಲಾಗಿತ್ತು. ಈ ಆರೋಪದಡಿ ಮೂಡಿಗೆರೆ ತಾಲೂಕಿನ ಬಣ್ಣ ಮೂಲದ ಮದ್ರಸಾ ಶಾಲೆಯ ಶಿಕ್ಷಕ ಮುಹಮ್ಮದ್ ಸೈಫುಲ್ಲಾನನ್ನು ಪೊಲೀಸರು ಬಂಧಿಸಿದ್ದರು.

ತನಿಖೆ ಪೂರ್ಣಗೊಳಿಸಿದ ಬಳಿಕ ಆರೋಪಿ ವಿರುದ್ಧ ಪೊಲೀಸರು ಬೆಳ್ತಂಗಡಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ದೇವರಾಜ ಎಚ್.ಎಂ. ಅವರು ಆರೋಪಿ ಮುಹಮ್ಮದ್ ಸೈಫುಲ್ಲಾ ಅಪರಾಧಿ ಎಂದು ಘೋಷಿಸಿದ್ದು ಆತನಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದ್ದಾರೆ.

ನಾಗರ ಪಂಚಮಿ: 7 ಲಕ್ಷದ ಹಸುಗಳ ದಾನ!

ಸುಬ್ರಹ್ಮಣ್ಯ: ನಾಗರಪಂಚಮಿಯಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ಷೇತ್ರದ ಭಕ್ತ ಮತ್ತು ಹೈದರಾಬಾದ್‌ನ ಎಎಂಆರ್‌ ಗ್ರೂಪ್‌ನ ಆಡಳಿತ ನಿರ್ದೇಶಕ ಎ. ಮಹೇಶ್‌ ರೆಡ್ಡಿ ಸುಮಾರು 7 ಲಕ್ಷ ರೂ. ಮೌಲ್ಯದ ಪುಂಗನೂರು ತಳಿಯ 4 ಗೋವುಗಳನ್ನು ದಾನವಾಗಿ ನೀಡಿದರು. ಶ್ವೇತ ವರ್ಣದ ಹಾಲು ಕರೆಯುವ 3 ಗೋವುಗಳು ಹಾಗೂ 1 ಕರುವನ್ನು ದೇವಸ್ಥಾನದ ನಾಗಪ್ರತಿಷ್ಠಾ ಮಂಟಪದ ಬಳಿಗೆ ತಂದು ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಿ ವೈದಿಕ ವಿಧಿ ವಿಧಾನಗಳ ಮೂಲಕ ದೇಗುಲಕ್ಕೆ ಹಸ್ತಾಂತರಿಸಲಾಯಿತು.

ಮಹೇಶ್‌ ರೆಡ್ಡಿ ಈ ಹಿಂದೆ 27 ಲಕ್ಷ ರೂ. ವೆಚ್ಚದಲ್ಲಿ ಭೋಜನ ಪ್ರಸಾದ ತಯಾರಿ ಮತ್ತು ಲಡ್ಡು ಪ್ರಸಾದ ತಯಾರಿ ಯಂತ್ರೋಪಕರಣಗಳನ್ನು ಹಾಗೂ ಷಣ್ಮುಖ ಪ್ರಸಾದ ಭೋಜನ ಶಾಲೆಗೆ ಭೋಜನ ಪ್ರಸಾದ ವಿತರಣೆಗೆ ಗಾಡಿಗಳನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು.

ಚಂದ್ರಯಾನ ಯಶಸ್ಸಿಗೆ ಕುಕ್ಕೆಯಲ್ಲಿ ಸೇವೆ!

ಸುಬ್ರಹ್ಮಣ್ಯ: ಬಾಹ್ಯಾಕಾಶ ಸಂಶೋಧನ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆಯ ಚಂದ್ರಯಾನ 3 ನೌಕೆಯು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ನಾಗರಪಂಚಮಿಯ ಶುಭದಿನವಾದ ಸೋಮವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇಗುಲದ ಆಡಳಿದ ಮಂಡಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವರಿಗೆ ಇಸ್ರೋ ಹೆಸರಿನಲ್ಲಿ ಸೇವೆ ನೆರವೇರಿಸಲಾಯಿತು. ಸುಬ್ರಹ್ಮಣ್ಯನಿಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಇಸ್ರೋ ಸಂಸ್ಥೆಯ ಪರವಾಗಿ ನಾಗರಾಜನಿಗೆ ಹಾಲು ಅರ್ಪಿಸಿದರು.

ಮೂಡಬಿದಿರೆಯಲ್ಲಿ ಅನೈತಿಕ ಪೊಲೀಸ್ ಗಿರಿ?!

ಸಹಪಾಠಿಯೊಂದಿಗೆ ಮಾತನಾಡಿದ್ದಕ್ಕೆ ಯುವಕನೋರ್ವನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಅನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ಸೋಮವಾರ ರಾತ್ರಿ ಮೂಡುಬಿದಿರೆಯ ರಾಜೀವ ಗಾಂಧಿ ಸಂಕೀರ್ಣದ ಎದುರು ನಡೆದಿದೆ.
ಘಟನೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪೆಟ್ಟು ತಿಂದಿದ್ದ ಹುಡುಗನನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಬೆಂಗಳೂರು

ಭ್ರಷ್ಟರಿಗೆ ಮತ್ತೆ ಲೋಕಾಯುಕ್ತ ಗಾಳ!

ಭ್ರಷ್ಟರಿಗೆ ಮತ್ತೆ ಲೋಕಾಯುಕ್ತ ಗಾಳ!
– ರಾಜ್ಯದ 14 ಕಡೆ ಲೋಕಾಯುಕ್ತ ದಾಳಿ
– ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ 14 ಕಡೆ ಮತ್ತೆ ಲೋಕಾಯುಕ್ತ ದಾಳಿ

NAMMUR EXPRESS NEWS
ಬೆಂಗಳೂರು: ರಾಜ್ಯದ 14 ಕಡೆ ಲೋಕಾಯುಕ್ತರು ದಾಳಿ ನಡೆಸಿದ್ದು ಅನೇಕ ಭ್ರಷ್ಟರಿಗೆ ಗಾಳ ಹಾಕಿದ್ದಾರೆ.
ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಕೇಳಿಬಂದ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಆಗಸ್ಟ್ 17ರಂದು ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕದ 48 ಕಡೆಗಳಲ್ಲಿ ದಾಳಿ ಮಾಡಿ ಭ್ರಷ್ಟ ಅಧಿಕಾರಿಗಳಿಂದ ಕೋಟಿ-ಕೋಟಿ ಹಣ ಹಾಗೂ ಆಸ್ತಿ ಪಾಸ್ತಿ ಪತ್ತೆ ಮಾಡಿದ್ದು, ಇದೀಗ ಮತ್ತೆ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರೆಸಿದ್ದು, ಒಂದು ವಾರದಲ್ಲಿ ಇದು ಎರಡನೇ ದಾಳಿಯಾಗಿದೆ.
ಇತ್ತೀಚಿಗೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಹೆಚ್ಚಿಗೆ ತೊಡಗಿಸಿಕೊಂಡಿದ್ದು ಈ ದಾಳಿ ಇದೀಗ ಮಹತ್ವ ಪಡೆದಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ರಾಜ್ಯ

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್
– ಗೃಹಲಕ್ಷ್ಮಿ ಆಯ್ತು, ವರಮಹಾಲಕ್ಷ್ಮಿ ಹಬ್ಬಕ್ಕೂ ಗಿಫ್ಟ್!
– ಅರಿಶಿಣ, ಕುಂಕುಮ, ಹಸಿರು ಬಳೆ ನೀಡಲು ಸುತ್ತೋಲೆ
– ಮುಜರಾಯಿ ದೇಗುಲಗಳಲ್ಲಿ ವಿಶೇಷ ಉಡುಗೊರೆ

NAMMUR EXPRESS NEWS
ಬೆಂಗಳೂರು: ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಈಗಾಗಲೇ ಎರಡು ಗ್ಯಾರಂಟಿಗಳನ್ನು ಜನರಿಗೆ ನೀಡಿದೆ. ಮೂರನೇ ಗ್ಯಾರಂಟಿ ಜಾರಿಗೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ನಡುವೆ ಮತ್ತೊಂದು ಗ್ಯಾರಂಟಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಹೌದು, ವರಮಹಾಲಕ್ಷ್ಮಿ ಹಬ್ಬದ ದಿನ ಮಹಿಳೆಯರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ ನೀಡುವಂತೆ ಸುತ್ತೋಲೆ ಹೊರಡಿಸಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ಹಸಿರು ಗಾಜಿನ ಬಳೆ, ಅರಿಶಿಣ, ಕುಂಕುಮ ದೇವರ ಮುಂದೆ ಪೂಜೆ ಮಾಡಿ ಕೊಡುವಂತೆ ಆದೇಶ ಹೊರಡಿಸಲಾಗಿದೆ. ಆಗಸ್ಟ್ 25ನೇ ತಾರೀಖು ಶುಕ್ರವಾರ ರಾಜ್ಯದಾದ್ಯಂತ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಗುತ್ತದೆ. ಹಬ್ಬದ ದಿನ ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತರಿಗೆ ಸರ್ಕಾರದ ಕುಂಕುಮ ಭಾಗ್ಯ ನೀಡಲು ಮುಂದಾಗಿದೆ.

ಧಾರ್ಮಿಕ ದತ್ತ ಇಲಾಖೆ ಆಯುಕ್ತರು ಆದೇಶವನ್ನು ಹೊರಡಿಸಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಆದೇಶದಲ್ಲಿ ಏನಿದೆ?

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಬಹಳ ಮಹತ್ವ ಪೂರ್ಣವಾದ ಸ್ಥಾನವನ್ನು ನೀಡಿ ಗೌರವಿಸಲಾಗುತ್ತಿದ್ದು, ಪ್ರತೀ ವರ್ಷ ವರಮಹಾಲಕ್ಷ್ಮಿ ವ್ರತ, ಸ್ವರ್ಣಗೌರೀ ವ್ರತ ಮತ್ತು ನವರಾತ್ರಿಗಳಲ್ಲಿಯೂ ಸಹ ಸ್ತ್ರೀ ದೇವತೆಯನ್ನು ಪೂಜಿಸಿ ಆರಾಧಿಸಲಾಗುತ್ತದೆ. ಆದರಂತೆ ಪ್ರತಿ ವರ್ಷದ ಶ್ರಾವಣ ಮಾಸದ ಶುಕ್ಲಪಕ್ಷದ ಪೌರ್ಣಮಿಯ ಮೊದಲ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತ ಆಚರಿಸುವುದು ಪುರಣೋಕ್ತವಾಗಿದ್ದು, ಆ ದಿನ ಶ್ರೀವರ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿ ಪ್ರಸಾದವನ್ನು ನೈವೇದ್ಯ ಮಾಡಿ, ಪ್ರಸಾದವನ್ನು ಸ್ವೀಕರಸಿದಲ್ಲಿ ಸಕಲ ಸೌಭಾಗ್ಯಗಳೂ ಅಷ್ಟ ಐಶ್ವರ್ಯಗಳೂ ಚತುರ್ವಿದ ಫಲ್ಯಗಳೂ, ಧನ ಧಾನ್ಯಾಧಿಗಳು ಲಭಿಸುತ್ತವೆ ಎಂದು ಹೇಳಲ್ಪಟ್ಟಿರುವುದರಿಂದ ಆ ದಿನ ಮಹಿಳೆಯರು ಬಹಳ ಭಕ್ತಿಭಾವಗಳಿಂದ ಮನೆಯಲ್ಲಿ ಶುದ್ಧಿಯಾಗಿ ವರಮಹಾಲಕ್ಷ್ಮಿಯನ್ನು ಪೂಜೆ ಮಾಡಿ, ದೇವಾಲಯಗಳಿಗೆ ದೇವರ ದರ್ಶನಾರ್ಥಿಯಾಗಿ ಬಂದು ದೇವರ ಪ್ರಸಾದಗಳಾದ ಅರಿಶಿನ, ಕುಂಕುಮ, ಹೂವು ಮುಂತಾದ ಪ್ರಸಾದಗಳನ್ನು ಸ್ವೀಕರಿಸುವ ಸಂಪ್ರದಾಯವು ಸಹ ಇರುತ್ತದೆ.

ಆದ್ದರಿಂದ ನಾಡಿನ ಸಮಸ್ತ ಮಹಿಳೆಯರನ್ನು ಗೌರವಿಸುವ ಸಲುವಾಗಿ ಹಾಗೂ ವರಮಹಾಲಕ್ಷ್ಮಿಯವರ ಕೃಪಾಕಟಾಕ್ಷವು ಲಭಿಸಲೆಂದು ಅಧಿಸೂಚಿತ ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ಆಯಾಯ ದೇವಾಯಗಳ ವತಿಯಿಂದ ಉತ್ತಮ ಗುಣಪಟ್ಟದ ಕಸ್ತೂರಿ, ಅರಿಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡುವುದು ಸೂಕ್ತವಾಗಿರುತ್ತದೆ. ಪ್ರಸಾದ ರೂಪವಾದ ಅರಿಶಿಣ ಕುಂಕುಮವನ್ನು ಕಾಗದದ ಲಕೋಟೆಗಳಲ್ಲಿ ಸರ್ಕಾರದ ಲಾಂಛನದೊಂದಿಗೆ ದೇವಾಲಯ ಹೆಸರನ್ನು ಮುದ್ರಿಸಿ, ಲಕೋಟೆಯನ್ನು ತಯಾರಿಸಿಕೊಂಡು ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ನೀಡುವುದು ಎಂಬ ಸೂಚನೆಯನ್ನು ನೀಡಲಾಗಿದೆ.

Categories
ಶಿವಮೊಗ್ಗ

ಶಿವಮೊಗ್ಗದಲ್ಲಿ ಆಪರೇಷನ್ ಕಾಂಗ್ರೆಸ್ ಶುರು!

ಶಿವಮೊಗ್ಗದಲ್ಲಿ ಆಪರೇಷನ್ ಕಾಂಗ್ರೆಸ್ ಶುರು!
– ಆಯನೂರು ಮಂಜುನಾಥ್, ನಾಗರಾಜ್ ಗೌಡ ಸೇರಿ ಅನೇಕರು ಕಾಂಗ್ರೆಸ್ ಕಡೆಗೆ
– ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ?.. ಅನೇಕರು ಪಕ್ಷಕ್ಕೆ ಬರ್ತಾರಾ?

NAMMUR EXPRESS NEWS
ಶಿವಮೊಗ್ಗ: ರಾಜ್ಯದಲ್ಲಿ ಲೋಕ ಸಭೆ ಚುನಾವಣೆ ನಡುವೆ ಭಾರೀ ರಾಜಕೀಯ ಜಂಗಿಕುಸ್ತಿ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷದ ನಾಯಕರು ಜೆಡಿಎಸ್ ಹಾಗೂ ಬಿಜೆಪಿ ನಾಯಕರನ್ನು ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ನತ್ತ ಸೆಳೆಯಲು ಮುಂದಾಗಿದ್ದು ಶಿವಮೊಗ್ಗದಲ್ಲೂ ಆಪರೇಷನ್ ಹಸ್ತ ಚುರುಕಾಗಿದೆ.

ಆಯನೂರು ಮಂಜುನಾಥ್ ಕಾಂಗ್ರೆಸ್ ಕಡೆ!?

ಮಾಜಿ ಲೋಕಸಭಾ ಸದಸ್ಯ, ಮಾಜಿ ಶಾಸಕ, ಬಿಜೆಪಿ ಪಕ್ಷದಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್ ಇದೀಗ ಕಾಂಗ್ರೆಸ್ ಕದ ತಟ್ಟಿದ್ದಾರೆ. ಜೆಡಿಎಸ್‌ ಮುಖಂಡ ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ್‌ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಅವರು ಕಾಂಗ್ರೆಸ್‌ ಸೇರುವುದು ಖಚಿತ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಸದಾಶಿವ ನಗರದಲ್ಲಿರುವ ನಿವಾಸದಲ್ಲಿ ರವಿವಾರ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಆಯನೂರು ಕೆಲಹೊತ್ತು ಸಮಾಲೋಚನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಸೇರ್ಪಡೆ ವಿಚಾರವೂ ಚರ್ಚೆಯಾಯಿತು. ಎನ್ನಲಾಗಿದೆ. ಬದಲಾದ ಸನ್ನಿವೇಶದಲ್ಲಿ ಮುಂದಿನ ಚುನಾವಣೆ ದೃಷ್ಟಿ ಯಿಂದ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದೇನೆ ಎಂದರು.

ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಕೆಎಸ್ ಈಶ್ವರಪ್ಪನವರ ಜೊತೆಗೆ ಮುನಿಸಿಕೊಂಡು ಈಶ್ವರಪ್ಪನವರ ಮಗನಿಗೆ ಟಿಕೆಟ್ ನೀಡುವುದಾದರೆ ನನಗೆ ಟಿಕೆಟ್ ನೀಡಲಿ ಇಲ್ಲವಾದಲ್ಲಿ ನಾನು ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ದಿಟ್ಟವಾದ ನಿರ್ಧಾರ ತೆಗೆದುಕೊಂಡು ಬಿಜೆಪಿ ಪಕ್ಷವನ್ನು ಬಿಟ್ಟು ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಯಾಗಿ ನಿಂತು 8 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.

ಶಿಕಾರಿಪುರದಿಂದ ನಾಗರಾಜ್ ಗೌಡ ಕಾಂಗ್ರೆಸ್ ಪಕ್ಷಕ್ಕೆ

ಶಿಕಾರಿಪುರದಿಂದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಸ್ಪರ್ಧಿಸಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಕೂಡ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾಗರಾಜ್ ಗೌಡ ಅವರು ಶಿವಮೊಗ್ಗ ಜಿಲ್ಲೆಯ ಯುವ ನಾಯಕರಾಗಿದ್ದು, ಅವರ ಕಾಂಗ್ರೆಸ್ ಸೇರ್ಪಡೆ ಲೋಕ ಸಭಾ ಚುನಾವಣೆಗೆ ಮತ್ತಷ್ಟು ಶಕ್ತಿ ತುಂಬಲಿದೆ ಎನ್ನಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ?

ಶಿವಮೊಗ್ಗ ಲೋಕ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ ಎಂಬ ಕುತೂಹಲ ಮೂಡಿದೆ.ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಮಂಜುನಾಥ ಗೌಡ, ಗೀತಾ ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಹೆಸರು ಚಾಲ್ತಿಯಲ್ಲಿದೆ. ಇನ್ನು ಸೊರಬ ಮಾಜಿ ಶಾಸಕರು ಪಕ್ಷಕ್ಕೆ ಬಂದಲ್ಲಿ ಅವರ ಹೆಸರು ಓಡಾಡುತ್ತಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಮಂಗಳೂರು

ಕುಕ್ಕೆ ಸೇರಿ ಕರಾವಳಿಯಲ್ಲಿ ನಾಗನಿಗೆ ವಿಶೇಷ ಪೂಜೆ

ಕುಕ್ಕೆ ಸೇರಿ ಕರಾವಳಿಯಲ್ಲಿ ನಾಗನಿಗೆ ವಿಶೇಷ ಪೂಜೆ
– ದೇಗುಲಗಳಲ್ಲಿ ಜನವೋ ಜನ: ನಾಗ ಬನಗಳಲ್ಲಿ ಪೂಜೆ
– ಕುಕ್ಕೆ ಸುಬ್ರಮಣ್ಯದಲ್ಲಿ ನಾಗ ದೇವನಿಗೆ ಭಕ್ತರ ಪೂಜೆ

NAMMUR EXPRESS NEWS
ಮಂಗಳೂರು: ನಾಗಾರಾಧನೆಗೆ ವಿಶೇಷ ಸ್ಥಾನಮಾನ ಇರುವ ತುಳುನಾಡಿನಲ್ಲಿ ನಾಗರ ಪಂಚಮಿಯ ಸಂಭ್ರಮ ಕಂಡು ಬಂತು. ರಾಜ್ಯದ ಪ್ರಮುಖ ದೇವಾಲಯವಾದ ಕುಕ್ಕೆ ಸುಬ್ರಮಣ್ಯ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ, ಕುಟುಂಬದ ನಾಗಬನದಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಲಾಗುವುದು, ಅದರಲ್ಲೂ ಕುಕ್ಕೆ ಸುಬ್ರಹ್ಮಣ್ಯ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನಗಳಲ್ಲಿ ಭಕ್ತ ಸಾಗರವೇ ಹರಿದುಬಂದಿತ್ತು.ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ಸಂತಾನ ಪ್ರಾಪ್ತಿ ನಾಗ ದೋಷ ನಿವಾರಣೆ ಸಹಿತ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅಳಿಯ ಕಟ್ಟು ಸಂಪ್ರದಾಯ ಪಾಲಿಸುವ ತುಳುನಾಡಿನ ಅನೇಕ ಕುಟುಂಬಗಳು ತಮ್ಮ ಕುಟುಂಬದ ನಾಗ ಬನದಲ್ಲಿ ನಾಗ ದೇವರ ಕಲ್ಲಿಗೆ ಹಾಲಿನ ಅಭಿಷೇಕ, ಸಿಯಾಳಭಿಷೇಕ ಹಾಗೂ ಹಿಂಗಾರವನ್ನು ಅರ್ಪಿಸಲಾಯಿತು.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಆರೋಗ್ಯ

ಕರೋನಾ ಮತ್ತೊಂದು ತಳಿ ಪತ್ತೆ!..ಏನಿದು ರೋಗ?

ಕರೋನಾ ಮತ್ತೊಂದು ತಳಿ ಪತ್ತೆ!..ಏನಿದು ರೋಗ?
– ಎರಿಸ್ EG.5 ಆತಂಕ: ಆರೋಗ್ಯ ಇಲಾಖೆಯಿಂದ ಎಚ್ಚರಿಕೆ
– ಅರೋಗ್ಯದ ಬಗ್ಗೆ ಹುಷಾರ್

NAMMUR EXPRESS NEWS
ಬೆಂಗಳೂರು: ವಿದೇಶಗಳಲ್ಲಿ ಆತಂಕ ಸೃಷ್ಟಿಸಿರುವ ಕರೋನಾ ರೂಪಾಂತರ ಎರಿಸ್ EG.5 ಸೋಂಕಿನ ಅಬ್ಬರ ಹೆಚ್ಚಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಒಮಿಕ್ರಾನ್ ರೂಪಾಂತರ ಉಪತಳಿ ಎರಿಸ್ EG.5 ಸದ್ಯ ಅತೀ ವೇಗವಾಗಿ ಹರಡುತ್ತಿದ್ದು, ಈಗಾಗಲೇ ಅಮೆರಿಕ, ಜಪಾನ್, ಬ್ರಿಟನ್ ಗಳಲ್ಲಿ ಜನರನ್ನು ಕಾಡುತ್ತಿದೆ. ರಾಜ್ಯಕ್ಕೂ ಸೋಂಕು ಕಾಲಿಡುವ ಆತಂಕ ಸೃಷ್ಟಿಯಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ರೋಗದ ಲಕ್ಷಣ ಏನಿರುತ್ತೆ?: ಜ್ವರ, ಕೆಮ್ಮು, ಶೀಥ, ತಲೆನೋವು, ಸ್ನಾಯುಸೆಳೆತ, ಗಂಟಲು ನೋವು, ಮೂಗಿನಲ್ಲಿ ಸೋರಿಕೆ, ವಾಂತಿ, ವಾಕರಿಕೆಯಂತಹ ಲಕ್ಷಣ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಭೇಟಿಯಾಗಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಏನಿದು ಎರಿಸ್ EG.5 ಆತಂಕ?

ಕಳೆದ ಕೆಲವು ವಾರಗಳಲ್ಲಿ, ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳು ಮತ್ತೊಮ್ಮೆ ಹೆಚ್ಚುತ್ತಿವೆ. ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ, ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಸನ್ ಇತ್ತೀಚೆಗೆ ಪತ್ತೆಯಾದ ಎರಿಸ್ EG.5 ಎಂಬ ಕೋವಿಡ್ -19 ತಳಿಯನ್ನು ಪತ್ತೆಹಚ್ಚುತ್ತಿದೆ ಎಂದು ಘೋಷಿಸಿತು. ವಿಶ್ವ ಆರೋಗ್ಯ ಸಂಸ್ಥೆ ಎರಿಸ್ EG.5 ತಳಿಯನ್ನು ಅದರ ಹೆಚ್ಚಿನ ಸಂಖ್ಯೆಯ ರೂಪಾಂತರಗಳಿಂದಾಗಿ “ಮೇಲ್ವಿಚಾರಣೆಯಲ್ಲಿರುವ ರೂಪಾಂತರ” ಎಂದು ವರ್ಗೀಕರಿಸಿದ ನಂತರ ಇದು ಬಂದಿದೆ.

ಎರಿಸ್ EG.5 ರೂಪಾಂತರವು ಪ್ರಸ್ತುತ ಹರಡುತ್ತಿರುವ ಕರೋನವೈರಸ್ನ ತಳಿಗಳಿಗಿಂತ ಹೆಚ್ಚು ಅಪಾಯಕಾರಿಯಾಗಿದೆಯೇ ಎಂದು ಹೇಳಲು ಸಾಧ್ಯವಿಲ್ಲ. ಎರಿಸ್ EG.5 ಒಡ್ಡಬಹುದಾದ ಬೆದರಿಕೆಯನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಡೇಟಾದ ಅಗತ್ಯವಿದೆ ಎಂದು ಯುಎನ್ ಏಜೆನ್ಸಿ ಹೇಳಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಹೊಸನಗರ

ವಿವಾಹ, ಸಂತಾನ ಭಾಗ್ಯ ಕರುಣಿಸುವ ನಾಗೇಂದ್ರ ಸ್ವಾಮಿ!

ವಿವಾಹ, ಸಂತಾನ ಭಾಗ್ಯ ಕರುಣಿಸುವ ನಾಗೇಂದ್ರ ಸ್ವಾಮಿ!
– ನಾಗರಹಳ್ಳಿಯಲ್ಲಿ ಸಂಭ್ರಮದಿಂದ ನಡೆದ ಜಾತ್ರೆ
– ಹೊಸನಗರ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರ

NAMMUR EXPRESS NEWS
ಹೊಸನಗರ: ಪುರಾಣ ಪ್ರಸಿದ್ಧ ನಾಗರಹಳ್ಳಿ ಕ್ಷೇತ್ರದ ಶ್ರೀ ನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ಜಾತ್ರಾ ಮಹೋತ್ಸವವು ಅದ್ಧೂರಿಯಿಂದ ನೆರವೇರಿತು. ಮಲೆನಾಡಿನ ಪ್ರಸಿದ್ಧ ನಾಗ ದೇಗುಲದಲ್ಲಿ ಒಂದಾದ ನಾಗರಹಳ್ಳಿಯಲ್ಲಿ ಪ್ರತಿ ವರ್ಷ ಈ ಜಾತ್ರೆ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ಶ್ರೀ ಕ್ಷೇತ್ರದಲ್ಲಿ ಮಳೆಗಾಲದ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಾಗೂ ಚಳಿಗಾಲದ ಪುಣ್ಯ ವಾಸದಲ್ಲಿ ಕೂಳೆ ಪಂಚಮಿ ದಿನದಂದು ಅತ್ಯಂತ ಜರುಗುತ್ತವೆ. ನಾಡಿನ ವಿವಿಧ ಮೂಲೆಗಳಿಂದ ದೇಗುಲದ ಭಕ್ತರು ಆಗಮಿಸುತ್ತಾರೆ.

ಸ್ವಾಮಿಯ ದರ್ಶನ ಪಡೆದು, ಸನ್ನಿಧಿಯಲ್ಲಿ ವಿವಾಹ ಭಾಗ್ಯ, ಸಂತಾನ ಭಾಗ್ಯ, ಆರೋಗ್ಯ ಹಾಗೂ ಕುಟುಂಬ ರಕ್ಷಣೆಗಾಗಿ ಹರಕೆ ಹೊತ್ತು ತೀರಿಸುವುದು ವಾಡಿಕೆಯಾಗಿದೆ. ಮುಜರಾಯಿ ಇಲಾಖೆಗೆ ಒಳಪಟ್ಟ ಈ ಕ್ಷೇತ್ರದಲ್ಲಿ ತಾಲೂಕು ಆಡಳಿತ ಹಾಗೂ ದೇವಸ್ಥಾನ ವ್ಯವಸ್ಥಾಪನ ಸಮಿತಿ ಆಶ್ರಯದಲ್ಲಿ ಸದಾಕಾಲ ನಾಗರಾಧನೆಯು ನಡೆಯುತ್ತಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!