Categories
ಮಾಹಿತಿ

ನಾಗರ ಪಂಚಮಿ ಹಬ್ಬ ಆಚರಿಸೋದು ಏಕೆ?

ನಾಗರ ಪಂಚಮಿ ಹಬ್ಬ ಆಚರಿಸೋದು ಏಕೆ?
– ನಾಗರ ಪಂಚಮಿ ಹೆಣ್ಣು ಮಕ್ಕಳ ಹಬ್ಬ ಅಂತ ಕರೆಯೋದು ಏಕೆ?
– ನಾಗರ ಹಾವು ದೇವರಾಗಿದ್ದು ಹೇಗೆ?

NAMMUR EXPRESS
ಹಿಂದೂ ಪುರಾಣದಲ್ಲಿ ಹತ್ತು ಹಲವು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಬ್ಬಗಳು ಶ್ರಾವಣ ಮಾಸದ ಶುಕ್ಲ ಪಂಚಮಿಯಂದು ಮಾಸದಲ್ಲಿ ಎಲ್ಲ ಹಬ್ಬಗಳಿಗೆ ಮುಂಚೂಣಿಯಂತೆ ಬರುವ ಹಬ್ಬವೇ ನಾಗರ ಪಂಚಮಿ.
ನಾಗರ ಪಂಚಮಿ ಹಬ್ಬ ಆದಮೇಲೆ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ, ದೀಪಾವಳಿ ಹೀಗೆ ನಾನಾ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ.

ನಾಗರ ಪಂಚಮಿ ಇತಿಹಾಸ ಏನು?

ನಾಗರ ಪಂಚಮಿ ಆಚರಣೆಗೆ ಸಂಬಂಧ ಪಟ್ಟ ಹಾಗೆ ಹಲವು ಪುರಾಣ ಪ್ರಸಿದ್ದ ಕಥೆಗಳ ಜೊತೆ ಜಾನಪದ ಕತೆಗಳು ಸಹ ಇವೆ.
ಸ್ಕಂದ ಪುರಾಣದಲ್ಲಿ ಉಲ್ಲೇಖಿಸದಂತೆ ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿ ಓಡಿ ಬಂದ ನಾಗರಹಾವುವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಆಗ ಕನ್ನಿಕೆ ಮನಸ್ಪೂರ್ತಿಯಾಗಿ ಒಪ್ಪಿ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಕನ್ನಿಕೆ, ದೇವರ ಎದುರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆ ಯಶಸ್ವಿಯಾದ ದಿನವೇ ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ.

ನಾಗರ ಪಂಚಮಿ ಹಬ್ಬ ಹೆಣ್ಣು ಮಕ್ಕಳ ಹಬ್ಬ!

ನಾಗರ ಪಂಚಮಿ ಹಬ್ಬ ಅಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಡಗರ.ಅದರಲ್ಲೂ ಮದುವೆ ಅದ ಹೆಣ್ಣು ಮಕ್ಕಳಿಗೆ ಖುಷಿ ಯಾಕೆಂದರೆ ತವರಿನ ಉಡುಗೊರೆಗೆ ಹಾತೊರೆಯುತ್ತಿರುತ್ತಾರೆ. ಸಂಪ್ರದಾಯಿಕ ಉಡುಗೆ ತೊಟ್ಟು ನಾಗರ ಕಟ್ಟೆಗೆ ಹೋಗಿ ನಮಿಸಿ ಪೂಜೆ ಸಲ್ಲಿಸಿ ನಾಗನ ಕೃಪೆಗೆ ಪಾತ್ರರಾಗುತ್ತಾರೆ. ಸಂತಾನ ಇಲ್ಲದವರು ನಾಗ ದೇವರಲ್ಲಿ ಮೊರೆಯಿಡುತ್ತಾರೆ.
ನಾಗನ ಪೂಜೆ ಮಾಡುವ ಮೂಲಕ ಕೃಪೆಗೆ ಪಾತ್ರರಾಗುತ್ತಾರೆ. ಈ ನಾಗರ ಪಂಚಮಿ ಎಂದು ನಾಗನಿಗೆ ಪೂಜೆ ಸಲ್ಲಿಸಿದ್ದಾರೆ. ಅಣ್ಣನ ಆಯಸ್ಸು ಹೆಚ್ಚು ಆಗುತ್ತೆ ಎಂಬ ನಂಬಿಕೆ ಹೆಣ್ಣು ಮಕ್ಕಳದು.

ಆಚರಣೆ ಮಹತ್ವ ಏನು?

ಎಲ್ಲ ತರಹದ ಸಮಸ್ಯೆಗೆ ಪರಿಹಾರ ನಾಗರಾಧನೆ. ಪುರಾಣದ ನಂಬಿಕೆಯ ಪ್ರಕಾರ ನಾಗಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ರಾಹು, ಕೇತುಗಳಂತಹ ಗ್ರಹಗಳ ದುಷ್ಪರಿಣಾಮಗಳಿಂದ ವ್ಯಕ್ತಿಯನ್ನು ರಕ್ಷಿಸಬಹುದು. ಜೀವನದ ಸಂಕಷ್ಟಗಳನ್ನು ಕಡಿಮೆ ಮಾಡಲು ನಾಗಪಂಚಮಿಯ ದಿನದಂದು ಶಿವನಿಗೆ ರುದ್ರಾಭಿಷೇಕವನ್ನು ಅರ್ಪಿಸಿ, ಬೆಳ್ಳಿಯ ಸರ್ಪವನ್ನು ಜೋಡಿಯಾಗಿ ದೇವರಿಗೆ ಅರ್ಪಿಸಿದ್ದಾರೆ. ನಾಗ ದೋಷ ಪರಿಹಾರ ಆಗುತ್ತದೆ.
ನಾಗರ ಪಂಚಮಿಯ ದಿನದಂದು ನಾಗ ದೇವರನ್ನು ಪೂಜಿಸುವುದರಿಂದ ಕಾಳಸರ್ಪ ದೋಷಗಳಿಂದ ಮುಕ್ತಿ ದೊರೆಯುತ್ತದೆ. ನಾಗ ದೇವರನ್ನು ಮನೆಯ ರಕ್ಷಕ ಎಂದೂ ಪೂಜಿಸುತ್ತಾರೆ .ಈ ದಿನ ನಾಗ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ನಿಯಮಗಳು ಮತ್ತು ವಿಧಿ – ವಿಧಾನಗಳ ಮೂಲಕ ಪೂಜೆ ಕೈಂಕರ್ಯಗಳನ್ನು ಮಾಡುವುದರಿಂದ, ಮಹಾದೇವನು ಪ್ರಸನ್ನನಾಗುತ್ತಾನೆ ಮತ್ತು ವ್ಯಕ್ತಿಯ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ ನಂಬಿಕೆ ಇಲ್ಲಿನ ಜನರದು.

ಮೂಡನಂಬಿಕೆ ಆಗದಿರಲಿ.. ಹಾವುಗಳಿಗೆ ತೊಂದರೆ ಮಾಡದಿರಲಿ

ಆಚರಣೆ ಆಚರಣೆಯಾಗಿರಲಿ ಮೂಡನಂಬಿಕೆ ಆಗದಿರಲಿ ಹಾವುಗಳಿಗೆ ಹಾನಿ ಮಾಡುವುದನ್ನು ಅಥವಾ ಸೆರೆಹಿಡಿಯುವುದನ್ನು ತಪ್ಪಿಸಿ, ಹಾಲನ್ನು ಅತಿಯಾಗಿ ಹೆಚ್ಚು ಬಳಸಿ ವ್ಯರ್ಥ ಮಾಡಬೇಡಿ ಮತ್ತು ಹಾವುಗಳ ಸುರಕ್ಷತೆಗೆ ಆದ್ಯತೆ ನೀಡಿಬೇಕು. ಹಾಲು ಅರಶಿನವನ್ನು ಹಾವುಗಳಿಗೆ ಎರಚುವ ಮೂಲಕ ಹಾವುಗಳ ಜೀವಕ್ಕೆ ಕುತ್ತುತರುತ್ತಾರೆ. ನಮ್ಮ ಮೂಡನಂಬಿಕೆ ಮೂಕ ಜೀವಿಗಳ ಸಾವಿಗೆ ಕಾರಣ ಆಗಬೇಡಿ. ನಾಗರ ಪಂಚಮಿ ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿ ನಾಗದೇವರ ಕೃಪೆಗೆ ಪಾತ್ರರಾಗಿ.

ನಾಡಿನ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್ 20-08-2023

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ
– ಮಾದಕ ವಸ್ತು ಸಾಗಣೆ ಮಾಡುತ್ತಿರುವವರು ಅರೆಸ್ಟ್!
– ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
– ಮಂಗಳೂರು: ಸಿಕ್ಕಿಬಿದ್ದ ಇಬ್ಬರು ಗೋ ಕಳ್ಳರು.!

NAMMUR EXPRESS NEWS
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ’ ಎಂದು ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಒಳನಾಡಿನ ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ಭಾಗಿ ಮಳೆಯಾಗುವ ಸಾಧ್ಯತೆಯಿದೆ. ಮತ್ತು ಬಿರುಗಾಳಿಯು ಸಹಿತ ಮಳೆ ಬರುವ ಸಾಧ್ಯತೆಗಳಿವೆ’ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಾದಕ ವಸ್ತು ಸಾಗಣೆ ಮಾಡುತ್ತಿರುವವರು ಅರೆಸ್ಟ್!

ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಮಾದಕ ವಸ್ತುವಾದ ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಸನ್ ಸಾಧಿಕ್ ಯಾನೆ ಬೇಡ್ ಸಾಧಿಕ್(35) ಬಂಧಿತ ಆರೋಪಿ.ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿ ಬೆಂಗಳೂರಿನಿಂದ ಎಂಡಿಎಂಎ ಮಾದಕ ವಸ್ತುವನ್ನು ಖರೀದಿಸಿಕೊಂಡು ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಮಾರುತಿ 800 ಕಾರಿನಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಎಂಡಿಎಂಎ ನಿಷೇದಿತ ಮಾದಕ ವಸ್ತುವನ್ನು ಹೊಂದಿದ ಹಸನ್ ಸಾಧಿಕ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಒಟ್ಟು 50 ಗ್ರಾಂ ತೂಕದ ರೂ. 2,50,000/-ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮಾರುತಿ 800 ಕಾರು, ಮೊಬೈಲ್ಫೋನ್, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ.

ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

ಉಪ್ಪುಂದ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕುಸಿದು ಬಿದ್ದು ಮೀನುಗಾರ ಮೃತಪಟ್ಟ ಘಟನೆ ಆ. 19ರಂದು ಕಿರಿಮಂಜೇಶ್ವರದಲ್ಲಿ ಸಂಭವಿಸಿದೆ. ತಾರಾಪತಿ ಪಾಳ್ಯದವರ ತೊಪ್ಲು ಮಯ್ಯಾಳನ ಮನೆ ಕುಮಾರ್‌ (44) ಮೃತಪಟ್ಟವರು.
ಆ. 19ರಂದು ಬೆಳಗ್ಗೆ ಕಿರಿಮಂಜೇಶ್ವರ ಬಳಿ ಅರಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಬಲೆಯನ್ನು ಎಳೆಯುತ್ತಿರುವಾಗ ದೋಣಿಯೊಳಗೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದು ಚಿಕಿತ್ಸೆಯ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು ಕುಮಾರ್‌ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಸಿಕ್ಕಿಬಿದ್ದ ಇಬ್ಬರು ಗೋ ಕಳ್ಳರು.!

ದನ ಕಳ್ಳತನ ಮಾಡುತ್ತಿದ್ದ ಇಬ್ಬರು ದನ ಕಳ್ಳರನ್ನು ಪೊಲೀಸರು ಬಂಧಿಸಿದ ಘಟನೆ ಬಜಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಉಳ್ಳಾಲದ ಇರ್ಫಾನ್ (30) ಮತ್ತು ಬಂಟ್ವಾಳದ ಮೊಹಮ್ಮದ್ ಆರಿಫ್ (32) ಎಂದು ಗುರುತಿಸಲಾಗಿದೆ. ಬಜಪೆ ಠಾಣಾ ವ್ಯಾಪ್ತಿಯ ಬಡಗ ಎಡಪದವು ಗ್ರಾಮದ ದಡ್ಡಿ ಎಂಬಲ್ಲಿ ಆ.14ರಂದು ರಾತ್ರಿ ಮೂರು ದನಗಳ ಕಳವಾಗಿದ್ದು, ಇದರ ವಿರುದ್ಧ ಗೋಹತ್ಯಾ ನಿಷೇಧ ಕಾಯ್ದೆಯಲ್ಲಿ ದಾಖಲಾದ ದೂರಿನಂತೆ ಬಜಪೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ದನಗಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 5 ಲಕ್ಷ ರೂ. ಮೌಲ್ಯದ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಮಲ್ನಾಡ್

ನಾಗರ ಪಂಚಮಿ ಆಚರಣೆಗೆ ಸಿದ್ಧತೆ!

ನಾಗರ ಪಂಚಮಿ ಆಚರಣೆಗೆ ಸಿದ್ಧತೆ!
– ನಾಗದೇವಸ್ಥಾನಗಳಲ್ಲಿ ಪೂಜೆಗೆ ಭಕ್ತರ ಸಜ್ಜು
– ನಾಗರಕಟ್ಟೆಗಳಲ್ಲಿ ಪೂಜೆ: ವಿವಿಧ ಅಭಿಷೇಕ

NAMMUR EXPRESS NEWS
ಮಲೆನಾಡು: ನಾಗರ ಪಂಚಮಿ ನಿಮಿತ್ತ ಎಲ್ಲೆಡೆ ಹಬ್ಬಕ್ಕೆ ಸಿದ್ಧತೆ ಜೋರಾಗಿದೆ. ನಾಗದೇವಸ್ಥಾನಗಳಲ್ಲಿ ಪೂಜೆಗೆ ಸಿದ್ಧತೆ ನಡೆಯುತ್ತಿದೆ. ಹಬ್ಬದ ಆಚರಣೆಗೆ ಭಕ್ತರು ಸಜ್ಜುಗೊಂಡಿದ್ದಾರೆ. ಹಬ್ಬದ ಪ್ರಯುಕ್ತ ಜನತೆ ಈಗಾಗಲೇ ಭರ್ಜರಿ ಸಿದ್ಧತೆ ಆರಂಭಿಸಿದ್ದು, ಹೂವು, ಹಣ್ಣು, ಸೀಯಾಳ ಖರೀದಿ ಭರಾಟೆ ಬಿರುಸಿನಿಂದ ನಡೆಯುತ್ತಿದೆ. ನಾಗನಿಗೆ ಪ್ರಿಯವಾದ ಕೇದಗೆ ಮತ್ತು ಸಂಪಿಗೆ ಹೂವಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ.ಹಬ್ಬದ ಪ್ರಯುಕ್ತ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ.

ದೇವಸ್ಥಾನಗಳಲ್ಲಿ ಪೂಜಾ ಸಿದ್ಧತೆ :

ನಾಗರಪಂಚಮಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿಯೂ ವಿಶೇಷ ಪೂಜೆ, ಪುರಸ್ಕಾರಗಳಿಗೆ ಸಿದ್ಧತೆ ನಡೆಯುತ್ತಿದೆ. ಪ್ರಸಿದ್ಧ ನಾಗಾರಾಧನಾ ದೇಗುಲಗಳಲ್ಲಿ ನಾಗದೇವರ ಆರಾಧನೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಇನ್ನು ವಿವಿಧ ದೇವಸ್ಥಾನಗಳಲ್ಲಿ, ನಾಗಬನಗಳಲ್ಲಿ ನಾಗರ ಪಂಚಮಿ ನಡೆಯಲಿದೆ. ವಿವಿಧ ಧಾರ್ಮಿಕ ಸ್ಥಳಗಳಲ್ಲಿ ತಂಬಿಲ ಸೇವೆ, ನಾಗರಕಟ್ಟೆಯಲ್ಲಿ ವಿಶೇಷ ಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಲಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ರಾಜ್ಯ

ಭಾರತದಲ್ಲಿ ಆಗಲಿದೆ ಜಲ ಪ್ರಳಯ!

ಭಾರತದಲ್ಲಿ ಆಗಲಿದೆ ಜಲ ಪ್ರಳಯ!
– ಮಹಿಳೆಯರಿಗೆ ರಾಜ್ಯದ ಸಿಎಂ ಆಗುವ ಯೋಗ
– ದೈವ ನಂಬಿದವರಿಗೆ ಅಪಾಯ ಇಲ್ಲ: ಭವಿಷ್ಯ ನುಡಿದ ಕೋಡಿಮಠದ ಶ್ರೀ

NAMMUR EXPRESS NEWS
ರಾಜ್ಯದಲ್ಲಿ ಒಮ್ಮೆ ಮಹಿಳೆಯರು ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿ, ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ಬೆಳಗಾವಿಗೆ ಆಗಮಿಸಿದ ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ವಿಷಾನಿಲ ಬೀಸುವ ಪ್ರಸಂಗವೂ ಇದೆ, ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ವಿಪರೀತ ಮಳೆಯಿಂದ ಎರಡು ದೇಶಗಳು ನಾಶ ಆಗುತ್ತೆ. ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸುತ್ತೆ. ಭಾರತದಲ್ಲಿ ಜಲಪ್ರಳಯ ಆಗುವ ಲಕ್ಷಣಗಳಿವೆ. ದಕ್ಷಿಣ ಭಾರತದಲ್ಲಿ ಸಮೃದ್ಧಿಯಾಗುವ ಲಕ್ಷಣಗಳಿವೆ, ಯಾವುದೇ ತೊಂದರೆಯಿಲ್ಲ. ಭೂಕಂಪನದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯವಿದೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.

ಇದ್ದಕ್ಕಿದ್ದಂತೆ ಜನರ ಸಾವಾಗುವ ಆತಂಕವಿದೆ. ಜಗತ್ತಿನ ಸಾಮ್ರಾಟಗಳು ತಲ್ಲಣಗೊಳ್ಳುವ ಪ್ರಸಂಗವೂ ಇದೆ. ಅದರ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದರು. ಚಂದ್ರಯಾನ-3 ಯಶಸ್ವಿಯಾಗಿ ಒಳ್ಳೆಯದಾಗಲಿದೆ. ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಹೇಳಲು ಇನ್ನೂ ಸಮಯವಿದೆ, ನೋಡಿ ಹೇಳುತ್ತೇವೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿ ಬೇಕು. ಯಾರು ದೈವಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದರು. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿ ಬೇಕು. ಯಾರು ದೈವ ನಂಬುತ್ತಾರೆಯೋ ಅಂಥವರಿಗೆ ತೊಂದರೆಯಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಇತರೆ ಸುದ್ದಿ

ಟಾಪ್ ನ್ಯೂಸ್ 20-08-2023

4 ಮಂದಿಯ ಜೀವ ತೆಗೆದ ಸೊಳ್ಳೆ ನಿವಾರಕ ಯಂತ್ರ!
– ಇನ್ಮೇಲೆ ಟೊಮ್ಯಾಟೋ ಕೆಜಿಗೆ 40 ರೂ.
– ಕಂದಕಕ್ಕೆ ಉರುಳಿದ ವಾಹನ: 9 ಯೋಧರ ಸಾವು

NAMMUR EXPRESS NEWS
ಚೆನ್ನೈ: ಸೊಳ್ಳೆಯಿಂದ ಮುಕ್ತಿ ಪಡೆಯುವುದಕ್ಕಾಗಿ ಬಳಸಿದ ಯಂತ್ರದಿಂದ ಆಕಸ್ಮಿಕ ಬೆಂಕಿ ಅವಘಡದಲ್ಲಿ ವೃದ್ಧೆ ಮತ್ತು ಅವರ ಮೂವರು ಮೊಮ್ಮಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಚೆನ್ನೈನ ಮನಾಲಿ ಬಳಿಯ ಮಾಥುರ್ ಎಂಎಂಡಿಎಯಲ್ಲಿ ತಮ್ಮ ಮನೆಯಲ್ಲಿ ಸೊಳ್ಳೆ ನಿವಾರಕ ಯಂತ್ರದಿಂದ ಉಂಟಾದ ಆಕಸ್ಮಿಕ ಬೆಂಕಿ ಅವಘಡದಲ್ಲಿ ವೃದ್ಧೆ ಮತ್ತು ಅವರ ಮೂವರು ಮೊಮ್ಮಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ದ ಮಹಿಳೆ ಸಂತಾನಲಕ್ಷ್ಮಿ (65) ಎಂದು ಗುರುತಿಸಲಾಗಿದೆ ಮತ್ತು ಆಕೆಯ ಮೊಮ್ಮಗಳಾದ ಸಂಧ್ಯಾ, ಪ್ರಿಯಾ ರಕ್ಷಿತಾ ಮತ್ತು ಪವಿತ್ರಾ, 8 ರಿಂದ 10 ವರ್ಷ ವಯಸ್ಸಿನವರು ಬೆಂಕಿ ಹೊತ್ತಿಕೊಂಡಾಗ ತಮ್ಮ ಮನೆಯಲ್ಲಿ ಮಲಗಿದ್ದರು. ಬೆಳಗ್ಗೆ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅವರ ನೆರೆಹೊರೆಯವರು ಪೊಲೀಸರಿಗೆ ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ನಾಲ್ವರು ವ್ಯಕ್ತಿಗಳನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಕೊಂಡರು ಮತ್ತು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರು, ಆದರೆ ವೈದ್ಯರು ನಾಲ್ವರು ಕೂಡ ಸಾವನ್ನಪ್ಪಿರುವ ವಿಚಾರವನ್ನು ತಿಳಿಸಿದ್ದಾರೆ.

ಟೊಮ್ಯಾಟೋ ಕೆಜಿಗೆ 40 ರೂ.!

ಜನ ಸಾಮಾನ್ಯರ ಅಗತ್ಯ ಪರಿಹಾರವಾಗಿ, ಇಂದಿನಿಂದ (ಆಗಸ್ಟ್ 20) ಟೊಮೆಟೊ ಕೆಜಿಗೆ 40 ರೂ.ಗೆ ದೊರೆಯಲಿದೆ. ಟೊಮ್ಯಾಟೋ ಕೆಜಿಗೆ 40 ರೂ.ಗೆ ಲಭ್ಯ ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ನ್ಯಾಷನಲ್ ಅಗ್ರಿಕಲ್ಟರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಎಎಫ್‌ಇಡಿ) ಸಹಕಾರಿ ಸಂಸ್ಥೆಗಳು, ಮಾರುಕಟ್ಟೆಗಳು, ಸಗಟು ಮತ್ತು ಚಿಲ್ಲರೆವ್ಯಾಪಾರದಲ್ಲಿ ಅಡುಗೆಮನೆಯ ಮುಖ್ಯ ಆಹಾರದ ಬೆಲೆ ಕುಸಿತದ ನಡುವೆ ಆಗಸ್ಟ್ 20 ರಿಂದ ಪ್ರತಿ ಕಿಲೋಗ್ರಾಂಗೆ 40 ರೂ.ಗೆ ಕಡಿಮೆ ದರದಲ್ಲಿ ಟೊಮ್ಯಾಟೊ ಮಾರಾಟ ಮಾಡುತ್ತಿವೆ.

ಕಂದಕಕ್ಕೆ ಉರುಳಿದ ವಾಹನ: 9 ಯೋಧರ ಸಾವು

ಲಡಾಖ್ ನ ಲೇಹ್ ಜಿಲ್ಲೆಯಲ್ಲಿ ಟ್ರಕ್ ರಸ್ತೆಯಿಂದ ಜಾರಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಒಂಬತ್ತು ಸೈನಿಕರು ಸಾವನ್ನಪ್ಪಿದ್ದಾರೆ. ಇನ್ನೋರ್ವ ಅಧಿಕಾರಿ ಗಾಯಗೊಂಡಿದ್ದಾರೆ.ಮೃತರಲ್ಲಿ ಎಂಟು ಸೈನಿಕರು ಮತ್ತು ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿದ್ದಾರೆ. ಟ್ರಕ್ ಗ್ಯಾರಿಸನ್ ನಿಂದ ಲೇಹ್ ಬಳಿಯ ಕ್ಯಾರಿಗೆ ತೆರಳುತ್ತಿದ್ದಾಗ ಕ್ಯಾರಿ ಪಟ್ಟಣದಿಂದ 7 ಕಿ.ಮೀ ಮುಂದೆ ಕಮರಿಗೆ ಬಿದ್ದಿದೆ. ಇದು ಒಟ್ಟು 34 ಸಿಬ್ಬಂದಿಯನ್ನು ಹೊಂದಿರುವ ಎಸ್ ಯುವಿ ಮತ್ತು ಆಂಬ್ಯುಲೆನ್ಸ್ ಸೇರಿದಂತೆ ತಂಡದ ಒಂದು ಭಾಗವಾಗಿತ್ತು. ಮೂರು ವಾಹನಗಳು ರೆಕ್ಸೆ ಪಾರ್ಟಿಯ ಭಾಗವಾಗಿದ್ದವು.
ದಕ್ಷಿಣ ಲಡಾಖ್ ನ ನ್ಯೋಮಾದ ಕೆರೆಯಲ್ಲಿ ಈ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಬೆಂಗಳೂರು

ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಪ್ರಶಸ್ತಿ

ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಪ್ರಶಸ್ತಿ
– ಬೆಂಗಳೂರಲ್ಲಿ ದೇವರಾಜ ಅರಸು ಪ್ರಶಸ್ತಿ ಪ್ರದಾನ
– ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಉಪಸ್ಥಿತಿ

NAMMUR EXPRESS NEWS
ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ನೀಡುವ 2023-24ನೇ ಸಾಲಿನ ದೇವರಾಜ ಅರಸು ಪ್ರಶಸ್ತಿಯನ್ನು ಮಾಜಿ ಸಚಿವ, ಮಾಜಿ ಸ್ಪೀಕರ್ ಮಲೆನಾಡ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ನವರಿಗೆ ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಸಾಗರ-ಹೊಸನಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!
– ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಘಟನೆ
– ಬಸ್ ನಿಲ್ದಾಣದಿಂದ ದೂರ ನಿಲ್ಲಿಸಿದ ಚಾಲಕ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಒಂದರಲ್ಲಿ ನಾಗರ ಹಾವು ಪತ್ತೆಯಾದ ಘಟನೆ ಭಾನುವಾರ ನಡೆದಿದೆ.
ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಎಂದಿನಂತೆ ಜನ ಓಡಾಡುತ್ತಿದ್ದರು. ಅಷ್ಟರಲ್ಲಿ ತೀರ್ಥಹಳ್ಳಿ ಶೃಂಗೇರಿ ಸಂಪರ್ಕ ಕಲ್ಪಿಸುವ ಶ್ರೀ ಮಂಜುನಾಥ ಎಂಬ ಬಸ್ಸಿನ ಇಂಜಿನ್ ಬಳಿ ನಾಗರ ಹಾವೊಂದು ಪತ್ತೆಯಾಗಿದೆ. ಸ್ಥಳೀಯರು ನೋಡಿ ಮಾಹಿತಿ ನೀಡಿದ್ದಾರೆ.
ತಕ್ಷಣ ಬಸ್ ಸಿಬ್ಬಂದಿ, ಬಸ್ ಪರಿಶೀಲನೆ ಮಾಡಿದ್ದು, ಹಾವು ಪತ್ತೆಯಾಗದ ಕಾರಣ ಬಸ್ಸನ್ನು ದೂರ ತೆಗೆದುಕೊಂಡು ಹೋಗಿ ನಿಲ್ಲಿಸಲಾಯಿತು. ಬಳಿಕ ಹಾವು ಬಸ್ಸಿಂದ ಕೆಳಗೆ ಹೋಗಿದೆ ಎನ್ನಲಾಗಿದೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಹಾಸನ

ಹೊಸ ವರ್ಷಕ್ಕೆ ಹಾಸನ ಏರ್ ಪೋರ್ಟ್ ಟೇಕಾಫ್!

ಹೊಸ ವರ್ಷಕ್ಕೆ ಹಾಸನ ಏರ್ ಪೋರ್ಟ್ ಟೇಕಾಫ್!
– ವಿಮಾನ ನಿಲ್ದಾಣ ಕಾಮಗಾರಿಗೆ ವೇಗ
– ಡಿಸೆಂಬರ್‌ನಿಂದ ವಿಮಾನ ಹಾರಾಟ ಆರಂಭ?

NAMMUR EXPRESS NEWS
ಹಾಸನ: ಹಾಸನ ನಗರದ ಹೊರವಲಯದ ಬೂವನಹಳ್ಳಿಯಲ್ಲಿ 200 ಕೋಟಿ ರೂ.ಗೂ ಅಧಿಕ ವೆಚ್ಚದ ವಿಮಾನ ನಿಲ್ದಾಣ ಕಾಮಗಾರಿ 2023ರ ಡಿಸೆಂಬರ್‌ ವೇಳೆಗೆ ಪೂರ್ಣಗೊಂಡು ವಿಮಾನ ಹಾರಾಟ ಪ್ರಾರಂಭವಾಗುವ ಸಾಧ್ಯತೆ ಇದೆ.
ಈಗಾಗಲೇ ಕಾಮಗಾರಿಗೆ ವೇಗ ಸಿಕ್ಕಿದ್ದು ಹೊಸ ವರ್ಷಕ್ಕೆ ಆರಂಭ ಆಗಲಿದೆ ಎಂದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌ ರಾಜಣ್ಣ ಹೇಳಿದ್ದಾರೆ. ಬೂವನಹಳ್ಳಿಯಲ್ಲಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಆದಷ್ಟು ಬೇಗ ವಿಮಾನ ನಿಲ್ದಾಣ ಸೇವೆಗೆ ಸಿಗಲಿದೆ ಎಂದರು.

ಹಾಸನದಿಂದ 6 ಕಿಮಿ ದೂರದಲ್ಲಿರುವ ಈ ವಿಮಾನ ನಿಲ್ದಾಣ ಉಡಾನ್ ಯೋಜನೆಯಡಿ 175 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ರಾಜ್ಯದಲ್ಲಿ ಶಿವಮೊಗ್ಗ, ಕಲಬುರಗಿ, ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿವೆ. ಇದೀಗ ಹಾಸನದಲ್ಲೂ ವಿಮಾನ ನಿಲ್ದಾಣ ಆರಂಭ ಆಗಿರುವುದು ಈ ಭಾಗದ ಜನತೆಗೆ ಅನುಕೂಲ ಆಗಲಿದೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಚಿಕ್ಕಮಗಳೂರು

ಕಾಫಿ ನಾಡಿಗೆ ಬಂದ 340 ಕೆಜಿ ಮೀನು!

ಕಾಫಿ ನಾಡಿಗೆ ಬಂದ 340 ಕೆಜಿ ಮೀನು!
– ಚಿಕ್ಕಮಗಳೂರಲ್ಲಿ ಮೀನು ನೋಡಲು ಮುಗಿಬಿದ್ದ ಜನ
– ಎನ್.ಆರ್.ಪುರದಲ್ಲಿ ಇತ್ತೀಚಿಗೆ ದೊಡ್ಡ ಮೀನು ಪತ್ತೆ!

NAMMUR EXPRESS NEWS
ಚಿಕ್ಕಮಗಳೂರು: ಈ ವರ್ಷ ಹಲವೆಡೆ ದೊಡ್ಡ ದೊಡ್ಡ ಮೀನುಗಳು ಪತ್ತೆಯಾಗಿವೆ. ಮಂಗಳೂರು, ಉಡುಪಿ, ಎನ್. ಆರ್. ಪುರ ಸೇರಿ ಚಿಕ್ಕಮಗಳೂರಲ್ಲಿ ಬೃಹತ್ ಮೀನುಗಳು ಬಂದಿವೆ. ಈ ನಡುವೆ ಚಿಕ್ಕಮಗಳೂರು ನಗರದ ಖಾಸಗಿ ಮೀನು ಅಂಗಡಿಗೆ ಮಂಗಳೂರಿನಿಂದ 340 ಕೆ.ಜಿ. ತೂಕದ ಬೃಹತ್ ಮೀನು ಬಂದಿದ್ದು ಆ ಮೀನು ನೋಡಲು ಗ್ರಾಹಕರು ಮುಗಿ ಬಿದ್ದಿದ್ದಾರೆ.
ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯ ಮೀನಿನ ಅಂಗಡಿಯಲ್ಲಿ ಬೃಹತ್ ಮೀನು ಬಂದಿತ್ತು. ಜನ ಅಚ್ಚರಿಗೊಂಡು ಫೋಟೋ ತೆಗೆಯಲು ಮುಂದಾಗಿದ್ದು ಕಂಡು ಬಂತು. ಇನ್ನೂ ಒಂದು ಕೆ.ಜಿ. ನಮಗೆ ಕೊಡಿ ಸಾವಿರ ರೂಪಾಯಿ ಕೊಡ್ತೀವಿ ಅಂತ ಗ್ರಾಹಕರು ದಂಬಾಲು ಬಿದ್ದರೂ ಅಂಗಡಿ ಮಾಲಿಕರು ಕೊಡಲಿಲ್ಲ. ಇತ್ತೀಚಿಗೆ ಎನ್. ಆರ್. ಪುರದಲ್ಲಿ ದೊಡ್ಡ ದೊಡ್ಡ ಮೀನುಗಳು ಸಿಕ್ಕಿರುವುದು ಭಾರೀ ಸುದ್ದಿಯಾಗಿತ್ತು.

ಏನಿದು ವಿಶೇಷ…?

ಮಂಗಳೂರಿಂದ ಬಂದ ಈ ಮೀನು ಬೃಹತ್ ಅಂಬೂರು ಫಿಶ್ ಆಗಿದ್ದು, ಸೌದಿ ಅರೇಬಿಯಾದಲ್ಲಿ ಇದಕ್ಕೆ ಭಾರೀ ಬೇಡಿಕೆ ಇದೆ. ಮೊದಲ ಬಾರಿಗೆ ಈ ಬೃಹತ್ ಗಾತ್ರದ ಅಂಬೂರು ಮೀನನ್ನು ಅಂಗಡಿ ಮಾಲೀಕ ತರಿಸಿದ್ದಾರೆ ಎಂದು ಹೇಳುತ್ತಾರೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ರಾಜ್ಯ

ಮನೆ ಇಲ್ಲ.. ನೀರಿಲ್ಲ..ಮೋದಿಗೆ ಪತ್ರ ಬರೆದ ಜನ!

ಮನೆ ಇಲ್ಲ.. ನೀರಿಲ್ಲ..ಮೋದಿಗೆ ಪತ್ರ ಬರೆದ ಜನ!
– ಕಳಸ ತಾಲೂಕಿನ ಕುಂಬಳಡಿಕೆ ಜನರ ಗೋಳು
– ಡೀಸೆಲ್ ಬೆಳಕಲ್ಲಿ ಮಕ್ಕಳು ಓದಬೇಕು!
– ಖುದ್ದು ಪ್ರಧಾನಿಯೇ ಜನರಿಗೆ ಕಾಲ್ ಮಾಡ್ತಾರೆ?

NAMMUR EXPRESS NEWS
ಕಳಸ: ಮನೆ ಇಲ್ಲ.. ನೀರಿಲ್ಲ..ಮಕ್ಕಳಿಗೆ ಓದಲು ವ್ಯವಸ್ಥೆ ಇಲ್ಲ..ಮೋದಿಗೆ ಪತ್ರ ಬರೆದ ಜನ! ಹೌದು. ಕಳಸ ತಾಲೂಕಿನ ಕುಂಬಳಡಿಕೆ ಜನರ ಗೋಳು ಕೇಳೋರಿಲ್ಲ. ಡೀಸೆಲ್ ಬೆಳಕಲ್ಲಿ ಮಕ್ಕಳು ಓದಬೇಕು. ಹೀಗಾಗಿ ಇಲ್ಲಿನ ಜನರ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುಗ್ರಾಮ ಕುಂಬಳಡಿಕೆ ಗ್ರಾಮ ಇಂದಿಗೂ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ. ಕಾಡಿನ ಅಂಚಿನ ಕುಗ್ರಾಮದಲ್ಲಿ ಕುಡಿಯೋಕೆ ನೀರಿಲ್ಲ. ಓಡಾಡೋಕೆ ರಸ್ತೆ ಇಲ್ಲ. ಕರೆಂಟ್ ಕೇಳೋದೇ ಬೇಡ. ಇನ್ನು ಮಕ್ಕಳಿಗೆ ವಿದ್ಯಾಭ್ಯಾಸ ಅನ್ನೋದು ಮರಿಚೀಕೆಯೇ ಸರಿ.

ಕುಂಬಳಡಿಕೆ ಗ್ರಾಮದಲ್ಲಿ ಬರೋಬ್ಬರಿ 70ಕ್ಕೂ ಹೆಚ್ಚು ಕುಟುಂಬಗಳಿವೆ. 10 ವರ್ಷದಿಂದ ಯಾರೂ ಈ ಬಗ್ಗೆ ಗಮನ ಹರಿಸಿಲ್ಲ. ತಾತ್ಕಾಲಿಕ ಶೆಡ್ ಹಾಕ್ಕೊಂಡು ನಿತ್ಯದ ಜೀವನವನ್ನು ಸಾಗಿಸುತ್ತಿದ್ದಾರೆ. ಆಡಳಿತ ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ನೀಡಿ ಸುಸ್ತಾದ ಈ ಗಿರಿಜನರು ಇದೀಗ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದಾರೆ. ಖುದ್ದು ಗ್ರಾಮಸ್ಥರೇ ಪ್ರಧಾನಿಗೆ ಪತ್ರ ಬರೆದು ತಮ್ಮ ಗ್ರಾಮದ ಸಮಸ್ಯೆ ಹೇಳಿಕೊಂಡಿದ್ದಾರೆ. ಹಳ್ಳಿಗರ ನೋವಿಗೆ ಎಚ್ಚೆತ್ತ ಪ್ರಧಾನಿ ಕಾರ್ಯಾಲಯ ಇದೀಗ ಸಂತ್ರಸ್ಥರ ನೆರವಿಗೆ ನಿಂತಿದೆ. ಮುಂದಿನ ಹತ್ತು ದಿನದಲ್ಲಿ ಖುದ್ದು ಪ್ರಧಾನಿ ಮೋದಿಯೇ ನಿಮಗೆ ಕರೆ ಮಾಡಿ ಸಮಸ್ಯೆ ಆಲಿಸುತ್ತಾರೆ ಎಂದು ಪ್ರಧಾನಿ ಕಾರ್ಯಾಲಯದಿಂದ ತಿಳಿಸಲಾಗಿದೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D