Categories
ಮಲ್ನಾಡ್

ಏಡಿ ಹಿಡಿಯೋದೆ ರೋಚಕ ಸ್ಟೋರಿ!

ಏಡಿ ಹಿಡಿಯೋದೆ ರೋಚಕ ಸ್ಟೋರಿ!
– ಏಡಿ ಹಿಡಿಯುವುದರಲ್ಲಿ ಮಲೆನಾಡ ಮಂದಿ ಎತ್ತಿದ ಕೈ
– ಮಳೆಗಾಲ ಬಂತಂದ್ರೆ ಗದ್ದೆ-ತೋಟದಲ್ಲಿ ಏಡಿ ಬೇಟೆ!

NAMMUR EXPRESS NEWS
ಮೊದಲೇ ಮಲೆನಾಡು ಚಂದ. ಮಳೆಗಾಲದಲ್ಲಿ ಇನ್ನೂ ಅಂದ. ಸುತ್ತಲ ಹಚ್ಚ ಹಸಿರು, ದಟ್ಟವಾಗಿರುವ ಕಾಡು. ಮುಂಗಾರು ಮಳೆ. ಗದ್ದೆ, ತೋಟದ ಕೆಲಸ. ಒಂದಷ್ಟು ಶಿಕಾರಿ… ಅದರಲ್ಲೂ ಮಳೆಗಾಲದಲ್ಲಿ ಮಲೆನಾಡು ಜನರು ಏಡಿ, ಅಣಬೆ, ಕಳಲೆಗಾಗಿ ಹುಡುಕಾಟ ಶುರು ಮಾಡುತ್ತಾರೆ. ಈ ಆಹಾರ ಇಲ್ಲಿಯ ಜನರ ಫೆವರೇಟ್. ವರ್ಷಕ್ಕೊಮ್ಮೆಸಿಗುವ ಇವುಗಳನ್ನು ಹುಡುಕಿ ತಂದು ಸಾರು, ಪಲ್ಯ ಮಾಡಿ ಸವಿಯುವ ಸೊಗಸು ಒಂಥರ ಹಬ್ಬದ ಸಂಭ್ರಮ. ಅಣಬೆ, ಕಳಲೆಯನ್ನು ಹುಡುಕಿದ ನಂತರ ಅದನ್ನು ಕಿತ್ತು ತರುವುದು ಸುಲಭ. ಆದರೆ ಏಡಿ ಮಾತ್ರ ಕಿಲಾಡಿ. ಅವುಗಳನ್ನು ಹಿಡಿಯೋಕೆ ಹರಸಾಹಸ ಪಡಬೇಕು, ಆದ್ರೆ ನಮ್ಮ ಮಲೆನಾಡ ಮಂದಿ ಏಡಿ ಹಿಡಿಯೋದ್ರಲ್ಲಿ ಎತ್ತಿದ ಕೈ. ಎಲ್ಲರಿಗೂ ಹಿಡಿಯಲು ಆಗದಿದ್ದರೂ ಕೆಲವರು ಇದರಲ್ಲಿ ಪರಿಣತಿ ಹೊಂದಿರುತ್ತಾರೆ.

ಮಲೆನಾಡ ಪ್ರತಿಯೊಂದು ತೋಟಗಳಲ್ಲಿ ತೋಡು, ಗದ್ದೆ ಅಂಚಲ್ಲಿ, ಹಳ್ಳದಲ್ಲಿ, ನದಿ ಬದಿ ಕಾರೇಡಿ ಮತ್ತು ಇತರೆ ಏಡಿ ಇರುತ್ತವೆ. ಇನ್ನು ಗದ್ದೆಗಳಲ್ಲಿ ಈಗ ಬೆಳ್ಳೇಡಿ ಕಾಣೆ ಆಗಿವೆ. ಆದ್ರೂ ಈ ಬಾರಿ ಏಡಿ ಹೆಚ್ಚು ಸಿಕ್ಕಿವೆ. ಈಗಲೂ ಹಿಡಿಯುತ್ತಿದ್ದಾರೆ..!

ಏಡಿ ಹಿಡಿಯೋ ಐಡಿಯಾ ಸೂಪರ್!

ಮೊದಲು ಒಂದು ಹಗ್ಗದಲ್ಲಿ ಕೋಳಿ ಪಚ್ಚಿ ಸುತ್ತಿ ಸುತ್ತಿ ಕಟ್ಟಿಕೊಳ್ಳಬೇಕು. ನಂತರ ಒಂದು ಉದ್ದನೆಯ ಹಗ್ಗದಲ್ಲಿ ಕಲ್ಲನ್ನು ಕಟ್ಟಿಕೊಳ್ಳಬೇಕು. ನಂತರ ಕೋಳಿ ಪಚ್ಚಿ ಕಟ್ಟಿದ ಹಗ್ಗವನ್ನು ಕಲ್ಲು ಕಟ್ಟಿದ ಹಗ್ಗದ ಭಾಗದಲ್ಲಿ ಕಟ್ಟಬೇಕು. ಈಗ ಕಲ್ಲು-ಪಚ್ಚಿ ಒಂದೇ ಕಡೆ ಆಗುತ್ತದೆ. ನಂತರ ಈ ಉದ್ದನೆಯ ಕಲ್ಲು-ಪಚ್ಚಿ ಕಟ್ಟಿದ ಹಗ್ಗವನ್ನು ತೋಡಿನೊಳಗೆ ಬಿಡಬೇಕು. ತೋಡಿನೊಳಗೆ ಇರುವ ಕಲ್ಲುಗಳ ಅಡಿ ಅಥವಾ ತೋಡಿನ ಬದಿಯಲ್ಲಿನ ಸಂದುಗಳಲ್ಲಿ ಏಡಿ ಇರುತ್ತವೆ. ಇವು ಕೋಳಿ ಪಚ್ಚಿ ವಾಸನೆ ಹಿಡಿದು ಅದರ ಬಳಿ ಬರುತ್ತವೆ. ಹಗ್ಗವನ್ನು ಹಿಡಿದು ನಿಲ್ಲುವ ಬದಲು ಪಕ್ಕದಲ್ಲಿರುವ ಮರಗಳಿಗೆ ಕಟ್ಟಬಹುದು ಅಥವಾ ನಾವೇ ಒಂದು ಕಂಬ ಹುಗಿದು ಕಟ್ಟಬಹುದು.

ಹೀಗೆ ಸಿಕ್ಕ ಏಡಿಗಳನ್ನು ಮೇಲಕ್ಕೆತ್ತಿ ಒಂದು ದೊಡ್ಡ ಬಕೆಟ್​ ಒಳಗೆ ಇಳಿಸಬೇಕು. ಮತ್ತೆ ಹಗ್ಗವನ್ನು ಬಿಡುತ್ತಾ ಹೀಗೆ ಐದೈದು ನಿಮಿಷ ಬಿಟ್ಟು ಹಗ್ಗ ಮೇಲಕ್ಕೆತ್ತುತ್ತಾ ಸಿಕ್ಕ ಏಡಿಗಳನ್ನು ಬಕೆಟ್​ ಒಳಗೆ ಇಳಿ ಬಿಡುತ್ತಾ ಇರಬೇಕು. ಏಡಿಯನ್ನು ಕೈಯಲ್ಲಿ ಹೇಗೇಗೋ ಹಿಡಿಯಲು ಆಗುವುದಿಲ್ಲ. ಅದರ ಮುಂಭಾಗದ ಕೊಂಬುಗಳನ್ನು ಎರಡೂ ಕೈಯಲ್ಲಿ ಹಿಡಿಯಬೇಕು. ಅದನ್ನ ಸಾಯಿಸುವುದೂ ಕೂಡ ಈ ಕೊಂಬುಗಳನ್ನ ಮುರಿದೇ. ಕೊಂಬುಗಳನ್ನ ಮುರಿದರೂ ಏಡಿಯ ಉಳಿದ ಭಾಗದಲ್ಲಿ ಜೀವ ಇರುತ್ತದೆ. ಆದರೆ ಕೊಂಬು ಮುರಿದ ಕೆಲ ಸಮಯದಲ್ಲಿ ಅವು ಸಾಯುತ್ತವೆ.

ಅಡಗಿ ಕುಳಿತಿರುವ ಏಡಿಗಳು!

ತೋಟ-ಗದ್ದೆ-ಕೆರೆ ಮಾತ್ರ ಅಲ್ಲದೆ ಕೆರೆ ತುಂಬಿ ನೀರು ಹರಿದು ಹೋಗುವ ಇತರ ಜಾಗದಲ್ಲಿ ಕಲ್ಲು- ಬಂಡೆಗಳಿದ್ದರೆ ಅವುಗಳ ಅಡಿಯಲ್ಲಿಯೂ ಏಡಿಗಳು ಅಡಗಿ ಕುಳಿತಿರುತ್ತವೆ. ಅವುಗಳನ್ನ ಹಿಡಿಯುವ ವೇಳೆ ಕಲ್ಲು-ಬಂಡೆಗಳನ್ನು ಸರಿಸಿ ಕೊಂಬುಗಳನ್ನು ಎರಡೂ ಕೈಯಲ್ಲಿ ಹಿಡಿಯಬೇಕು. ತುಂಬಾ ದೊಡ್ಡ ಏಡಿ ಸಿಕ್ಕು ಅದರೊಳಗೆ ಹೆಚ್ಚು ಮಾಂಸವಿಲ್ಲವೆಂದರೆ ಅದು ಹಳೆಯ ಏಡಿ ಎಂದರ್ಥ, ಅಂದರೆ ಒಂದು ವರ್ಷದ ಹಿಂದಿನ ಏಡಿ ಅದಾಗಿರುತ್ತದೆ ಎಂದು ಬಲ್ಲವರು ಹೇಳುತ್ತಾರೆ.
ಕೊಂಬು ಮುರಿದು ಏಡಿ ಸತ್ತ ಮೇಲೆ ರುಚಿ ರುಚಿಯಾಗಿ ಏಡಿ ಸಾರು ಅಥವಾ ಸುಕ್ಕ ಮಾಡಿ ಸವಿಯುತ್ತಾರೆ. ಇದರ ರುಚಿ ಮತ್ತು ಇದನ್ನು ಸವಿಯುವ ಆನಂದವೇ ಮಲೆನಾಡು ಮಂದಿಗೆ ಸ್ವರ್ಗ.

ಹೊರ ಊರಲ್ಲಿರುವವರಿಗೆ ಏಡಿ ಇಷ್ಟ!

ಮಲೆನಾಡಿನಿಂದ ಹೊರಗೆ ಇರುವವರಿಗೆ ಏಡಿ ಸಿಕ್ಕರೆ ಸ್ವರ್ಗ. ಇಲ್ಲಿ ಹಿಡಿದು ಅಪ್ಪ ಅಮ್ಮ ತಮ್ಮ ಮಕ್ಕಳಿಗೆ ಪಾರ್ಸಲ್ ಕಳುಹಿಸುತ್ತಾರೆ. ಒಟ್ಟಿನಲ್ಲಿ ಏಡಿ ಖಾಧ್ಯ ಸೂಪರ್.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಶಿವಮೊಗ್ಗ

ಅಂತೂ ಸಿಕ್ಕಿಬಿದ್ದ ನರಬಲಿ ಪಡೆದ ಚಿರತೆ!

ಅಂತೂ ಸಿಕ್ಕಿಬಿದ್ದ ನರಬಲಿ ಪಡೆದ ಚಿರತೆ!
– ದಾವಣಗೆರೆ ಮೂಲದ ಕುಟುಂಬ ಅಮೆರಿಕದಲ್ಲಿ ಸಾವು

NAMMUR EXPRESS NEWS
ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಪತಿ, ಪತ್ನಿ ಹಾಗೂ ಗಂಡು ಮಗು ಸೇರಿದಂತೆ ಮೂವರು ಅಮೆರಿಕಾದಲ್ಲಿ ಸಾವಿಗೀಡಾದ ಘಟನೆ ನಡೆದಿದೆ. ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತಪಟ್ಟವರು ಯೋಗೇಶ್ ಹೊನ್ನಾಳ (37), ಪ್ರತಿಭಾ ಹೊನ್ನಾಳ್ (35) ಹಾಗೂ ಯಶ್ ಹೊನ್ನಾಳ್ (6) ಎಂದು ವರದಿಯಿಂದ ತಿಳಿದುಬಂದಿದೆ. ಕಳೆದ 9 ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದು, ಅಮೆರಿಕಾದಲ್ಲಿ ವಾಸವಾಗಿದ್ದರು. ಇನ್ನೂ ಪತಿ ಹಾಗೂ ಪತ್ನಿ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತಗತಿದ್ದಾರೆ. ಆದರೆ ಮೂವರ ಸಾವು ಯಾವ ರೀತಿಯಾಗಿದೆ ಎನ್ನುವ ಕುರಿತು ಮಾಹಿತಿ ಇಲ್ಲ.
ಇದೀಗ ಮೂವರ ಸಾವಿನ ನಿಖರ ಕಾರಣ ತಿಳಿಸುವಂತೆ ಹಾಗೂ ಮೃತದೇಹಗಳನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ಮೃತರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಹಿಳೆ ಬಲಿ ಪಡೆದ ಚಿರತೆ ಬೋನಿನಲ್ಲಿ ಸೆರೆ!

ಶಿವಮೊಗ್ಗದ ಬಿಕ್ಕೋನಹಳ್ಳಿಯಲ್ಲಿ ಚಿರತೆಯೊಂದು ಬೋನ್ ಗೆ ಬಿದ್ದಿದ್ದು, ಬೆಳಗ್ಗೆಯಿಂದ ಜನ ಜಂಗುಳಿಯಾಗಿದೆ. ರಾತ್ರಿ 8-30 ರ ಸಮಯದಲ್ಲಿ ಚಿರತೆ ಬೋನ್ ನಲ್ಲಿ ಕಾಣಿಸಿಕೊಂಡಿರುವುದನ್ನು ಗ್ರಾಮಸ್ಥರು ನೋಡಿದ್ದಾರೆ. 6 ವರ್ಷದ ಗಂಡು ಚಿರತೆ ಬೋನಿನಲ್ಲಿ ಪತ್ತೆಯಾಗಿದೆ. ಓರ್ವ ಮಹಿಳೆಯನ್ನು ಚಿರತೆ ಬಲಿ ಪಡೆದಿತ್ತು.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಮಂಡ್ಯ

ಮತ್ತೆ ಕಾವೇರಿ ಖ್ಯಾತೆ ಶುರು!

ಮತ್ತೆ ಕಾವೇರಿ ಖ್ಯಾತೆ ಶುರು!
– ತಮಿಳುನಾಡಿಗೆ ನೀರು: ಮಂಡ್ಯದಲ್ಲಿ 21ಕ್ಕೆ ಪ್ರತಿಭಟನೆ
– ರಾಜ್ಯದ ಪರ ರೈತರಿಗಾಗಿ ಹೋರಾಟ: ಸುಮಲತಾ

NAMMUR EXPRESS NEWS
ಮಂಡ್ಯ: ಕೆ.ಆರ್.ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಗಸ್ಟ್ 21ರಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಮುಂದೆ ಒಳ್ಳೆಯವರಾಗಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೀರಿನ ಲಭ್ಯತೆಯನ್ನು ಚರ್ಚೆ ಮಾಡದೇ ನೀರು ಬಿಟ್ಟಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಈ ಹೋರಾಟಕ್ಕೆ ರೈತ ಸಂಘಟನೆ, ಕನ್ನಡಪರ ಸಂಘಟನೆಗಳು ಆಟೋ, ಚಾಲಕರು ಬೆಂಬಲ ನೀಡುವಂತೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ ನಾರಾಯಣ ಮನವಿ ಮಾಡಿದ್ದಾರೆ.

ಒಂದೆಡೆ ಆಪರೇಷನ್ ಹಸ್ತ ಜೋರಾಗುತ್ತಿದ್ದು ಈ ಕಡೆ ಕಾವೇರಿ ಹೋರಾಟವನ್ನು ಬಿಜೆಪಿ ದಾಳ ಮಾಡಿಕೊಳ್ಳಲು ಮುಂದಾಗಿದೆ.ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಆ.21ರಂದು ಮಂಡ್ಯದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಯಲಿದೆ. ಇದು ಯಾರ ವಿರುದ್ಧದ ಪ್ರತಿಭಟನೆ ಅಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ. ಕರ್ನಾಟಕ ಸರ್ಕಾರದ ತಮಿಳುನಾಡು ಪರ ನಿರ್ಧಾರದಿಂದ ನಮ್ಮ ರೈತರಿಗೆ ಅನ್ಯಾಯವಾಗಬಾರದು ಎಂದು ಈ ಹೋರಾಟ ನಡೆಯುತ್ತಿದೆ. ಕಾವೇರಿ ವಿಚಾರವಾಗಿ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ ಎಂದರು. ಕಾವೇರಿ ನೀರಿನ ಅವಶ್ಯಕತೆ ಇರುವ ಎಲ್ಲರೂ ಈ ಹೋರಾಟದಲ್ಲಿ ಭಾಗಿಯಾಗಬೇಕು, ಸರ್ಕಾರ ಒಳ್ಳೆಯ ಹೆಜ್ಜೆ ಹಾಕಬೇಕು, ಹೀಗೆ ಬಿಟ್ಟರೆ ಮುಂದೆ ಕುಡಿಯುವ ನೀರಿನ ಸಮಸ್ಯೆ ಆಗುತ್ತದೆ. ನಾವು ಯಾರ ವಿರುದ್ಧವೂ ಹೋರಾಟ ಮಾಡುತಿಲ್ಲ ರೈತರ ಪರ ಹೋರಾಟ ಮಾಡುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್ 19-08-2023

ಕಡಬ: ದೇವಿಯ ಒಡವೆಯನ್ನೇ ಕದ್ದ ಕಳ್ಳರು!
– ಸುಬ್ರಮಣ್ಯ: ಅಕ್ರಮ ಗೋ ಸಾಗಾಟ; ಕೇಸ್
– ಉದ್ಯೋಗಕ್ಕೆ ಹೋದವ ಜೈಲುಪಾಲು!: ಬೇಲ್ ಆಗುತ್ತಾ?
– ಹೆಬ್ರಿ: ಓವರ್ ಟೇಕ್ ವೇಳೆ ಭೀಕರ ಅಪಘಾತ
– ಕರೋನಾ ಟೆಸ್ಟ್ ಮಾಡಲು ಅಡ್ಡಿಪಡಿಸಿದವನಿಗೆ ಜೈಲು!
– ಭಟ್ಕಳ: ಕಾರು ಪಲ್ಟಿಯಾಗಿ 9 ಮಂದಿಗೆ ಗಾಯ
– ಸುಳ್ಯ: ಲಂಚ ಸ್ವೀಕಾರ ಮಾಡುತ್ತಿದ್ದಾಗ ಅರೆಸ್ಟ್!

NAMMUR EXPRESS NEWS
ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಕಡಬ ತಾಲೂಕಿನ ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದಿಂದ ಒಡವೆ ಹಾಗೂ ಸಿಸಿ ಕ್ಯಾಮರಾ ಕಳವಾದ ಪ್ರಕರಣ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಅರ್ಚಕ ರವಿಪ್ರಸಾದ್ ಭಟ್ ಅವರು ಬೆಳಗ್ಗೆ ದೇವಸ್ಥಾನಕ್ಕೆ ಬಂದು ಬಾಗಿಲು ತೆರೆಯಲು ಮುಂದಾದಾಗ ದೇವಸ್ಥಾನದ ಮುಖ್ಯ ಬಾಗಿಲಿನ ಚಿಲಕವನ್ನು ಹಾನಿ ಮಾಡಿರುವುದು ಕಂಡು ಬಂದಿತ್ತು. ಬಾಗಿಲು ಸರಿಸಿ ಪರಿಶೀಲಿಸಲಾಗಿ ದೇವರ ಮೂರ್ತಿಗೆ ಹಾಕಲಾಗಿದ್ದ 35,000 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ಹಾಗೂ ದೇವಸ್ಥಾನಕ್ಕೆ ಅಳವಡಿಸಿದ ಅಂದಾಜು 36,000 ರೂ. ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ಹಾರ್ಡ್‌ಡಿಸ್ಕ್ ಹಾಗೂ ಟಿವಿ ಮಾನಿಟರ್ ಅನ್ನು ಕಳ್ಳರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ರವಿಪ್ರಸಾದ್ ಭಟ್ ನೀಡಿದ ದೂರಿನಂತೆ ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಬ್ರಮಣ್ಯ: ಅಕ್ರಮ ಗೋ ಸಾಗಾಟ; ಕೇಸ್

ಸುಬ್ರಹ್ಮಣ್ಯ ಗ್ರಾಮದ ಕುಂದಲ್ಲಿ ರಸ್ತೆಯಲ್ಲಿ ಗುರುವಾರ ಸಂಜೆ ಸುಬ್ರಹ್ಮಣ್ಯ ವಾಹನ ತಪಾಸಣೆ ವೇಳೆ ಸುಬ್ರಹ್ಮಣ್ಯ ಭಾಗದಿಂದ ಬಂದ ಗೂಡ್ಸ್ ವಾಹನವನ್ನು ನಿಲ್ಲಿಸಿ, ಈ ವೇಳೆ ವಾಹನ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿ ವಾಹನದಿಂದ ಪರಾರಿಯಾಗಿದ್ದಾರೆ. ಪರಿಶೀಲನೆ ವೇಳೆ ವಾಹನದಲ್ಲಿ ಮೂರು ದನಗಳಿವೆ. ಪೊಲೀಸರು ವಾಹನ ಹಾಗೂ ಮೂರು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಉದ್ಯೋಗಕ್ಕೆ ಹೋದವ ಜೈಲುಪಾಲು!: ಬೇಲ್ ಆಗುತ್ತಾ?

ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿ ಹ್ಯಾಕರ್‌ಗಳ ಕುಕೃತ್ಯದಿಂದಾಗಿ ಜೈಲು ಪಾಲಾಗಿರುವ ಕಡಬ ಮೂಲದ ಚಂದ್ರಶೇಖರ್ ಅವರ ಬಿಡುಗಡೆ ಸಾಧ್ಯತೆ ಗೋಚರಿಸಿದೆ. ಸೌದಿಯ ರಿಯಾದ್‌ನಲ್ಲಿ ಸದ್ಯ ಜೈಲಿನಲ್ಲಿರುವ ಕಡಬ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಅವರ ವಿರುದ್ಧ ವಂಚನೆಯ ದೂರು ನೀಡಿದ ಮಹಿಳೆಗೆ ವಂಚನೆಯಾದ ಮೊತ್ತವನ್ನು ಪಾವತಿಸಿ ಎನ್‌ಒಸಿ ಪಡೆದು ಅದನ್ನು ಪೊಲೀಸ್ ಹಾಗೂ ಜೈಲಿಗೆ ನೀಡಬೇಕಾಗಿದೆ. ಈ ಕೆಲಸವನ್ನು ರಿಯಾದ್‌ನಲ್ಲಿ ಅವರ ಮಿತ್ರರು ಸೇರಿ ಮಾಡುತ್ತಿದ್ದು, ಎನ್‌ಒಸಿ ಸಿಕ್ಕಿದ ಬಳಿಕ ಬಿಡುಗಡೆಯಾಗುವ ಸಾಧ್ಯತೆಯಿದೆ.
ಮೊಬೈಲ್ ಹಾಗೂ ಸಿಮ್ ಕಾರ್ಡ್ ಪಡೆಯಲು ಕಳೆದ ನವೆಂಬರ್‌ನಲ್ಲಿ ಅಂಗಡಿಗೆ ಹೋದಾಗ ಅವರು ತಮ್ಮ ಹೆಬ್ಬೆಟ್ಟಿನ ಮುದ್ರೆ ನೀಡಿದ್ದರು. ಇದನ್ನೇ ಬಳಸಿಕೊಂಡು ಹ್ಯಾಕರ್‌ಗಳು ಅವರ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರಿಯಲ್ ಜಮೆ ಮಾಡಿ, ಅಲ್ಲಿಂದ ಬೇರೆ ದೇಶಕ್ಕೆ ಹಣ ವರ್ಗಾವಣೆ ಮಾಡಿದ್ದರು. ಮಹಿಳೆ ನೀಡಿದ ದೂರಿನಂತೆ ಚಂದ್ರಶೇಖರ್ ಬಂಧಿತರಾಗಿದ್ದರು.

ಹೆಬ್ರಿ: ಓವರ್ ಟೇಕ್ ವೇಳೆ ಭೀಕರ ಅಪಘಾತ

ಹೆಬ್ರಿಯ ತಾಲೂಕು ನಾಡ್ತಾಲು ಜಕ್ಕನಮಕ್ಕಿ ಎಂಬಲ್ಲಿ ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಬೈಕ್ ಅನ್ನು ಕಾರೊಂದು ಓವರ್ ಟೇಕ್ ಮಾಡುವಾಗ ಮುಂದಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸುಮಾರು ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಹೆಬ್ರಿ ಪಿಎಸ್‌ಐ ಮಹೇಶ್ ಟಿಎಂ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ. ಅಪಘಾತದಿಂದ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ಕರೋನಾ ಟೆಸ್ಟ್ ಮಾಡಲು ಅಡ್ಡಿಪಡಿಸಿದವನಿಗೆ ಜೈಲು!

ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಉಡುಪಿ ತಾಲೂಕು ಬೆಳ್ಳಂಪಳ್ಳಿ ಗ್ರಾಮದ ಕಂಬ ಮಜಲು ಪುಣೂರು ಎಂಬಲ್ಲಿ ಮಹಿಳೆಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಆಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಗಂಡ ಸುರೇಂದ್ರ ಎಂಬಾತನ ಗಂಟಲು ದ್ರವ ಪರೀಕ್ಷೆ ನಡೆಸಲು ಮನೆಗೆ ಬಂದ ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ, ಜೀವ ಬೆದರಿಕೆ ಹಾಕಿ, ಅವರ ವಾಹನವನ್ನು ಹಾನಿಗೊಳಿಸಿ ನಷ್ಟವನ್ನುಂಟುಮಾಡಿರುವ ಹಿನ್ನೆಲೆ, ಹಿರಿಯಡ್ಕ ಪೊಲೀಸ್ ಠಾಣೆಯ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
9 ತಿಂಗಳು 10 ದಿನಗಳ ಶಿಕ್ಷೆ ಹಾಗೂ 2000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.

ಕಾರು ಪಲ್ಟಿ; 9 ಜನರಿಗೆ ಗಾಯ

ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಇಕೋ ಬೀಚ್ ಸಮೀಪ ಭಟ್ಕಳ ಕಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಎಡಕ್ಕೆ ತಿರುಗಿಸಿದ ಪರಿಣಾಮ ಕಾರು ಪಲ್ಟಿಯಾಗಿ ಗಟಾರದಲ್ಲಿ ಬಿದ್ದಿದೆ.
ಬೆಂಗಳೂರು ಮೂಲದ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಆಗಮಿಸಿದವರು ಕಾರು ಚಾಲಕನ ಅಜಾಗರೂಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಬೆಂಗಳೂರು ಮೂಲದ ಆದಿತ್ಯ, ಶಿಲ್ಪ, ಆಕಾಶ, ತರುಣ, ರೊಹೇಬ್, ಖುಷಿ, ಪವನಕುಮಾರ, ಯಶವಂತ ನಾಯ್ಡು, ಮೈಸುರು ಮೂಲದ ಪ್ರಿಯಾಂಕ ಗಾಯಗೊಂಡವರಾಗಿದ್ದಾರೆ.

ಸುಳ್ಯ : ಲೋಕಾಯುಕ್ತ ಬಲೆಗೆ ಬಿದ್ದ ಆರ್.ಐ

ಲಂಚ ಸ್ವೀಕಾರ ಮಾಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಸುಳ್ಯದ ಸಂಪಾಜೆ- ಅರಂತೋಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಮಿಯಾಸಾಹೇಬ್ ಮುಲ್ಲಾ ಎಂಬುವರನ್ನು ಬಂಧಿಸಿದ್ದಾರೆ.
ಅರಂತೋಡಿನ ಹರಿಪ್ರಸಾದ್ ಎಂಬವರು ಹಕ್ಕು ಖುಲಾಸೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕಡತ ವಿಲೇವಾರಿಗಾಗಿ ಲೆಕ್ಕಾಧಿಕಾರಿ ಲಂಚ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಮಿಯಾಸಾಬ್ ಮುಲ್ಲಾ ಇಂದು 5000 ರೂಪಾಯಿ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೋಲಿಸರ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಹಾಸನ

ಹಾಸನ ಜೈಲಿನಲ್ಲೇ ನಡೆಯುತ್ತಿತ್ತು ಮಾಫಿಯಾ!

ಹಾಸನ ಜೈಲಿನಲ್ಲೇ ನಡೆಯುತ್ತಿತ್ತು ಮಾಫಿಯಾ!
– ತಡ ರಾತ್ರಿ ಪೊಲೀಸರ ದಾಳಿ: ತನಿಖೆ ಶುರು
– ಮೊಬೈಲ್, ಗಾಂಜಾ ಸೇರಿದಂತೆ ಹಲವು ವಸ್ತು ಪತ್ತೆ

NAMMUR EXPRESS NEWS
ಹಾಸನ: ಹಾಸನ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ತಡ ರಾತ್ರಿ ದಿಢೀರ್ ದಾಳಿ ನಡೆಸಿದ ಘಟನೆ ನಡೆದಿದ್ದು, ದಾಳಿಯ ವೇಳೆ 17 ಮೊಬೈಲ್, ಚಾರ್ಜರ್, ಗಾಂಜಾ, ಬೀಡಿ ಹಾಗೂ ಸಿಗರೇಟ್ ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಜೈಲೊಳಗೆ ಮಾಫಿಯಾ ನಡೆಯುತ್ತಿತ್ತಾ ಎಂಬ ಕುತೂಹಲ ಮೂಡಿದೆ. ಹಾಸನ ನಗರ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದ ಮೇಲೆ ದಾಲಿ ನಡೆಸಿದ ಪೊಲೀಸರು ಮುಂಜಾನೆವರೆಗೂ ಜೈಲಿನ ಕೊಠಡಿಗಳನ್ನು ಶೋಧ ನಡೆಸಿದ್ದಾರೆ.

ಎಸ್.ಪಿ.ಹರಿರಾಂ ಶಂಕರ್, ಹೆಚ್ಚುವರಿ ಎಸ್.ಪಿ.ತಮ್ಮಯ್ಯ ಹಾಗೂ ಇನ್ಸ್ ಪೆಕ್ಟ‌ ರೇವಣ್ಣ ನೇತೃತ್ವದ 60 ಪೊಲೀಸ್ ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಜೈಲಿನಲ್ಲಿದ್ದ ಆರೋಪಿಗಳ ಬಳಿಯಲ್ಲಿ ಒಟ್ಟು 6 ಆ್ಯಂಡ್ರಾಯ್ಡ್ ಮೊಬೈಲ್ ಗಳು, 11 ಬೇಸಿಕ್ ಮೊಬೈಲ್ ಗಳು ಹಾಗೂ ಗಾಂಜಾ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೈಲಿನೊಳಗೆ ಗಾಂಜಾ ಪೂರೈಕೆಯಾಗಿದ್ದು, ಕೆಲವು ಆರೋಪಿಗಳ ಬಳಿಯಲ್ಲಿ ಚಾಕು ಕೂಡ ಪತ್ತೆಯಾಗಿದೆ.ಇಂತಹ ವಸ್ತುಗಳು ಜೈಲಿನೊಳಗೆ ಹೋಗಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಮಾಹಿತಿ

ಸದ್ಯಕ್ಕಿಲ್ಲ ಹೊಸ ರೇಷನ್ ಕಾರ್ಡ್ ಭಾಗ್ಯ!

ಸದ್ಯಕ್ಕಿಲ್ಲ ಹೊಸ ರೇಷನ್ ಕಾರ್ಡ್ ಭಾಗ್ಯ!
– ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ
– ಇನ್ನು ಬಿಪಿಎಲ್ ಕಾರ್ಡ್ ಮಾನದಂಡ ಇಲ್ದಿದ್ರೆ ವಜಾ
– ದಂಡ ಮತ್ತು ಜೈಲು: ಹಲವೆಡೆ ಕ್ರಮ: ಏನಿದು ನ್ಯೂಸ್!

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗದೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಮುಂದಾದವರಿಗೆ ಸರ್ಕಾರ ನಿರಾಸೆ ಮೂಡಿಸಿದೆ. ಹೊಸ ಎಪಿಎಲ್,ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಇನ್ನೂ ಒಂದಿಷ್ಟು ದಿನ ಅನುಮತಿ ಇಲ್ಲ ಎಂದಿದ್ದಾರೆ ಆಹಾರ ಸಚಿವ ಮುನಿಯಪ್ಪ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಾಗುತ್ತಿದ್ದಂತೆಯೇ, ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸುವ ಆನ್‌ಲೈನ್ ಪೋರ್ಟಲ್ ಸ್ಥಗಿತಗೊಳಿಸಲಾಗಿತ್ತು. ಇದೀಗ ಹೊಸ ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆದು ಈ ಪೋರ್ಟ್‌ಲ್ ಅನ್ನು ಆರಂಭಮಾಡಲಿಲ್ಲ. ಸರ್ಕಾರ ಅನುಮತಿ ನೀಡಿದ ನಂತರವಷ್ಟೇ ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಲಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ‘ಗ್ಯಾರಂಟಿ’ಗಳ ಲಾಭ ಪಡೆಯಲು ಹೊಸ ಪಡಿತರ ಚೀಟಿ ಮಾಡಿಸಲು ಜನರು ಮುಗಿಬೀಳುತ್ತಿದ್ದಾರೆ. ಹೊಸದಾಗಿ ಪಡಿತರ ಚೀಟಿ ಸಲ್ಲಿಸಲು ‘ಗ್ರಾಮ ಒನ್’ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಜನರು ನಿತ್ಯವೂ ಭೇಟಿ ನೀಡಿ ವಿಚಾರಿಸುತ್ತಿದ್ದಾರೆ. ‘ಗ್ಯಾರಂಟಿ’ ಯೋಜನೆಗಳಿಗೆ ಪಡಿತರ ಚೀಟಿ ಮಾನದಂಡವಾಗಿದ್ದರಿಂದ ಅರ್ಜಿ ಸಲ್ಲಿಸಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯಕ್ಕೆ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಸರ್ಕಾರ ಅನುವು ಮಾಡಿಕೊಟ್ಟಿಲ್ಲ.

ಯಾರ್ಯಾರಿಗೆ ಸಿಗಲ್ಲ ಬಿಪಿಎಲ್ ಕಾರ್ಡ್‌?

ಬಿಪಿಎಲ್ ಕಾರ್ಡ್ ಹೊಸದಾಗಿ 2.95 ಲಕ್ಷ ಅರ್ಜಿ ಬಂದಿವೆ, 2.95 ಲಕ್ಷ ಅರ್ಜಿಗಳ ಪರಿಶೀಲನೆ ನಡೆದಿದೆ. 1.50 ಲಕ್ಷ ಅರ್ಜಿದಾರರು ಅರ್ಹರೆಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ. ಶೀಘ್ರವೇ ಇವರಿಗೆ ಕಾರ್ಡ್ ನೀಡಲಾಗುವುದು, ರಾಜ್ಯದಲ್ಲಿ ಈಗಾಗಲೇ 1.28 ಕೋಟಿ ಕಾರ್ಡ್ ಕಾರ್ಡ್ ಗಳಿವೆ. ಅನ್ನಭಾಗ್ಯ ಅಕ್ಕಿ ವಿತರಣೆ ಮುಗಿಯುವವರೆಗೂ ಹೊಸ ಅರ್ಜಿ ಸ್ವೀಕರಿಸಲ್ಲ, ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಮೇಲೆ ಹೊಸ ಅರ್ಜಿ ಸ್ವೀಕಾರ ಮಾಡಲಿದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.

ಬಿಪಿಎಲ್ ಕಾರ್ಡ್ ನಲ್ಲಿ ಬದಲಾವಣೆ ಮಾಡಿದ ಹೊಸ ಮಾನದಂಡ ಏನು… ಇಲ್ಲಿದೆ ಮಾಹಿತಿ

– ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು.
– 3 ಹೆಕ್ಟರ್‌ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು
– ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಇರಬಾರದು
– ಯಾವುದೇ ಸರ್ಕಾರಿ ನೌಕರರಾಗಿರಬಾರದು
– ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 sqt ಮೀರಬಾರದು
– ವಾಣಿಜ್ಯ ತೆರಿಗೆ, ಆದಾಯ ತೆರಿಗೆ, IT ರಿಟರ್ನ್ಸ್ ಪಾವತಿದಾರರಾಗಿರಬಾರದು

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಮಲ್ನಾಡ್ ಶಿವಮೊಗ್ಗ

ವಿದೇಶಿ ಅಡಿಕೆ ಬರೋದ್ರಿಂದ ತೊಂದರೆ ಇಲ್ಲ

ವಿದೇಶಿ ಅಡಿಕೆ ಬರೋದ್ರಿಂದ ತೊಂದರೆ ಇಲ್ಲ
– ರಾಜ್ಯದ ಅಡಿಕೆ ಬೆಳೆಗಾರರು ಹೆದರುವ ಅವಶ್ಯಕತೆ ಇಲ್ಲ
– ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಅಭಯ

NAMMUR EXPRESS NEWS
ಶಿವಮೊಗ್ಗ: ವಿದೇಶಿ ಅಡಿಕೆ ಭಾರತಕ್ಕೆ ಬರುವುದರಿಂದ ಯಾವುದೇ ತೊಂದರೆ ಇಲ್ಲ. ವಿದೇಶದಿಂದ ಆಮದು ಆಗುವ ಅಡಿಕೆಯಿಂದ ಸ್ಥಳೀಯ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಯ ನೀಡಿದ್ದಾರೆ. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಡಿಕೆ ಧಾರಣೆ ಎಂದಿಗೂ ಕುಸಿಯುವುದಿಲ್ಲ. ಕೇಂದ್ರ ಸರ್ಕಾರದ ಕಠಿಣ ನಿಲುವಿನಿಂದಾಗಿ ಅಡಿಕೆ ಧಾರಣೆ 50 ಸಾವಿರ ರೂ.ತನಕ ತಲುಪಿದೆ. ಅಡಿಕೆ ಧಾರಣೆ ಕಡಿಮೆಯಾಗಲಿದೆ ಎಂದು ಕೆಲವರು ಪ್ರಚೋದನೆ ನೀಡುತ್ತಿದ್ದಾರೆ. ಇದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಭಾರತದ ಒಟ್ಟು ಉತ್ಪಾದನೆಯ ಶೇ.2ರಷ್ಟು ಅಡಿಕೆ ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿದೆ. 2004 ರಿಂದ 2014ರವರೆಗೆ ಯುಪಿಎ ಸರ್ಕಾರ ಇದ್ದಾಗ ಹೊರದೇಶದಿಂದ ಭಾರತಕ್ಕೆ ಆಮದು ಆಗುವ ಅಡಿಕೆಗೆ ಪ್ರತಿ ಟನ್‌ಗೆ 15 ಸಾವಿರ ರೂ. ಆಮದು ದರವಿತ್ತು. ನರೇಂದ್ರ ಮೋದಿ ಅವರ ಸರ್ಕಾರ ರಚನೆಯಾದ ನಂತರ 2014 ರಿಂದ 2020ರವರಗೆ ಆಮದು ದರ ಪ್ರತಿ ಟನ್‌ಗೆ 25,500 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಈ ಹಿಂದೆ ನಾನು, ಆರಗ ಜ್ಞಾನೇಂದ್ರ ಮತ್ತು ಹರತಾಳು ಹಾಲಪ್ಪ ಅವರು ದೆಹಲಿಗೆ ಭೇಟಿ ನೀಡಿ ಆಮದು ದರ ಹೆಚ್ಚಳಕ್ಕೆ ಮನವಿ ಮಾಡಿದ್ದೆವು. ಆ ಬಳಿಕ ಪ್ರತಿ ಟನ್ ಆಮದು ಅಡಿಕೆ ದರ 35 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ ಈ ವರ್ಷ 15.63 ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗಿದೆ. ಈ ವರ್ಷ 17 ಸಾವಿರ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ. ನಮ್ಮ ದೇಶದಲ್ಲಿ ಉತ್ಪಾದನೆ ಆಗುವ ಅಡಿಕೆಯ ಶೇ.2ರಷ್ಟು ಮಾತ್ರ ಆಮದು ಆಗುತ್ತಿದೆ. ಸಾರ್ಕ್ ದೇಶಗಳ ಒಪ್ಪಂದದ ಪ್ರಕಾರ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದರು. ಭೂತಾನ್ ದೇಶದಿಂದ ಅಡಿಕೆಯನ್ನು ಹಡಗುಗಳ ಮೂಲಕ ರವಾನಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಭೂತಾನ್ ದೇಶಕ್ಕೆ ಸಮುದ್ರ ಮಾರ್ಗವಿಲ್ಲ. ಬಾಂಗ್ಲಾದೇಶದಿಂದ ಹಡಗುಗಳ ಮೂಲಕ ಅಡಿಕೆ ರವಾನಿಸಿಬೇಕು. ಇದು ಭುತಾನ್ ದೇಶದ ಬೆಳೆಗಾರರಿಗೆ ಹೊರೆಯಾಗಲಿದೆ ಎಂದು ತಿಳಿಸಿದರು. ಮಾಜಿ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಅಣ್ಣಪ್ಪ ಇತರರು ಇದ್ದರು.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಕರಾವಳಿ

ಸೌಜನ್ಯ ಪ್ರಕರಣ ಮರು ತನಿಖೆ ಆಗಲ್ಲ!

ಸೌಜನ್ಯ ಪ್ರಕರಣ ಮರು ತನಿಖೆ ಆಗಲ್ಲ!
ಮಹೇಶ್ ಶೆಟ್ಟಿ ತಿಮರೋಡಿಗೆ ಗನ್ ಮ್ಯಾನ್?!
– ಗೃಹ ಸಚಿವರಿಗೆ ಮಾಜಿ ಶಾಸಕ ವಸಂತ ಬಂಗೇರ ಮನವಿ: ಶೀಘ್ರದಲ್ಲಿ ಇಬ್ಬರ ನೇಮಕ
– ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು..?

NAMMUR EXPRESS NEWS
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಪಟ್ಟು ಕೊಲೆಯಾದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್ ಮ್ಯಾನ್ ನೀಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ವಸಂತ ಬಂಗೇರ ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿಯಾದ ಬಂಗೇರ, ರಾಜ್ಯದಲ್ಲಿ ಸೌಜನ್ಯ ಪರ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಹೋರಾಟದ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಪೊಲೀಸ್ ಇಲಾಖೆ ರಕ್ಷಣೆ ಬೇಕಾಗಿದೆ. ಈ ಹತ್ಯೆಯ ಹಿಂದೆ ಬಲಾಡ್ಯರಿದ್ದು, ಮಹೇಶ್ ಶೆಟ್ಟರ ಜೀವಕ್ಕೆ ರಕ್ಷಣೆ ಬೇಕಾಗಿದೆ. ಅವರ ಜತೆ ಮಹಿಳಾ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಆದ್ದರಿಂದ ಇವರಿಗೆ ರಕ್ಷಣೆ ನೀಡಬೇಕು ಎಂದು ಮಾಜಿ ಶಾಸಕ ವಸಂತ ಬಂಗೇರ ಕೋರಿದ್ದಾರೆ.

ಜಿಲ್ಲಾ ಎಸ್ಪಿ ಗುಪ್ತಚರ ಮಾಹಿತಿ ಸಂಗ್ರಹಿಸಿದಾಗ ಮಹೇಶ್ ಶೆಟ್ಟಿಯವರಿಗೆ ಯಾವುದೇ ಬೆದರಿಕೆ ಅಥವಾ ಜೀವಭಯ ಇರಲಿಲ್ಲ ಹಾಗಾಗಿ ತಿಮರೋಡಿ ನೀಡಿದ್ದ ಮನವಿಗೆ ಸ್ಪಂದನೆ ಸಿಕ್ಕಿರಲಿಲ್ಲ ಎಂದರು. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ತಿಮರೋಡಿ ಅವರಿಗೆ ಗನ್ ಮ್ಯಾನ್ ನೀಡಲು ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದಾರೆ. ವರದಿಗಳ ಪ್ರಕಾರ ಇಬ್ಬರು ಶಸ್ತ್ರಸಜ್ಜಿತ ಗನ್ ಮ್ಯಾನ್ ಗಳು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ರಕ್ಷಣೆಗೆ ನಿಲ್ಲಲಿದ್ದಾರೆ ಎನ್ನಲಾಗಿದೆ.

ಸೌಜನ್ಯ ಪ್ರಕರಣ ಮರು ತನಿಖೆ ಆಗಲ್ಲ, ಸರ್ಕಾರ ಏನು ಮಾಡಲು ಆಗಲ್ಲ

ಧರ್ಮಸ್ಥಳದ ಸೌಜನ್ಯ ಪ್ರಕರಣ ಮರು ತನಿಖೆ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,ಪ್ರಕರಣ ಕಾನೂನಾತ್ಮಕವಾಗಿ ಪೂರ್ಣಗೊಂಡಿದ್ದು, ಮರುತನಿಖೆ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಪರ, ವಿರೋಧ ಇದ್ದೇ ಇರುತ್ತದೆ. ಸೌಜನ್ಯ ಈ ಪ್ರಕರಣ ಮುಗಿದು ಹೋಗಿದ್ದು ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಮರು ತನಿಖೆ ವಿಚಾರ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಕರಾವಳಿ ಮಲ್ನಾಡ್

15 ದಿನಗಳ ಬಳಿಕ ಮತ್ತೆ ಮಳೆ ಜೋರು!

15 ದಿನಗಳ ಬಳಿಕ ಮತ್ತೆ ಮಳೆ ಜೋರು!
– ಮಲೆನಾಡು, ಕರಾವಳಿ ಸೇರಿ ರಾಜ್ಯದಲ್ಲಿ ಮಳೆ
– ಬೆಳಿಗ್ಗೆಯಿಂದಲೇ ಶುರುವಾಗಿದೆ ವರುಣನ ಅಬ್ಬರ

NAMMUR EXPRESS NEWS
ಮತ್ತೆ ಮುಂಗಾರು ಚುರುಕುಗೊಂಡಿದ್ದು ಒಂದು ವಾರಗಳ ಕಾಲ ಹೆಚ್ಚು ಮಳೆ ಸಾಧ್ಯತೆ ಇದೆ ಎಂಬ ಹವಾಮಾನ ವರದಿಯಂತೆ ಎರಡು ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಮಲೆನಾಡು ಮತ್ತು ಕರಾವಳಿ ಭಾಗ ಸೇರಿ ರಾಜ್ಯದಲ್ಲಿ ಮಳೆಯ ಸೂಚನೆ ಕಂಡು ಬಂದಿದೆ. ಮಳೆಯ ಅಭಾವದಿಂದ ಕಂಗೆಟ್ಟಿದ್ದ ರಾಜ್ಯದಲ್ಲಿ ಈಗ ಮತ್ತೆ ಮಳೆ ಶುರುವಾಗಿದೆ.
ಮುಂದಿನ ಒಂದು ವಾರಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಆಗಲಿದೆ.

ಆಣೆಕಟ್ಟು, ನದಿಗಳಲ್ಲಿ ನೀರು ಕಡಿಮೆ!

ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ಮತ್ತೆ ಆಣೆಕಟ್ಟು, ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದೆ. ಆದ್ದರಿಂದ ರೈತರಿಗೆ ಆತಂಕ ಉಂಟಾಗಿದೆ. ಮಳೆ ಬಾರದಿದ್ರೆ ಉಚಿತ ವಿದ್ಯುತ್ ಯೋಜನೆ ಶಕ್ತಿಗೆ ಸಮಸ್ಯೆ ಆಗಲಿದೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕರವೇ ಅಧ್ಯಕ್ಷರಾಗಿ ಮತ್ತೆ ಸುರೇಂದ್ರ ಯಡೂರು

ತೀರ್ಥಹಳ್ಳಿ ಕರವೇ ಅಧ್ಯಕ್ಷರಾಗಿ ಮತ್ತೆ ಸುರೇಂದ್ರ ಯಡೂರು
– ತೀರ್ಥಹಳ್ಳಿ ಕರವೇ ತಾಲೂಕು ಘಟಕದ ನಿರ್ಧಾರ
– ಗೌರವ ಅಧ್ಯಕ್ಷರಾಗಿ ಮಲ್ಲಕ್ಕಿ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಂ ಶೆಟ್ಟಿ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಕ್ಷಣಾ ವೇದಿಕೆ ತೀರ್ಥಹಳ್ಳಿ ತಾಲೂಕು ಅಧ್ಯಕ್ಷರಾಗಿ ಯುವ ಸಂಘಟಕ, ತೀರ್ಥಹಳ್ಳಿಯ ಪ್ರಮುಖ ಮುಖಂಡ ಸುರೇಂದ್ರ ಯಡೂರು ಆಯ್ಕೆಯಾಗಿದ್ದಾರೆ.ಗೌರವ ಅಧ್ಯಕ್ಷರಾಗಿ ಮಲ್ಲಕ್ಕಿ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಂ ಶೆಟ್ಟಿ ಆಯ್ಕೆ ಆಗಿದ್ದು ತೀರ್ಥಹಳ್ಳಿಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಲಿದ್ದಾರೆ.
ತೀರ್ಥಹಳ್ಳಿ ಕರವೇ ಘಟಕ ನಡೆಸಿದ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುರೇಂದ್ರ ಯಡೂರು ಅವರನ್ನು ಮರು ಆಯ್ಕೆ ಮಾಡಲಾಯಿತು ಹಾಗೂ ಗೌರವಾಧ್ಯಕ್ಷರಾಗಿ ಅಧ್ಯಕ್ಷರಾಗಿದ್ದಂತಹ ಮಲ್ಲಕ್ಕಿ ರಾಘವೇಂದ್ರ ಅವರನ್ನು ಆಯ್ಕೆ ಮಾಡಲಾಯಿತು ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಂ ಶೆಟ್ಟಿ ಬೆಟ್ಟಮಕ್ಕಿ ಇವರನ್ನು ಆಯ್ಕೆ ಮಾಡಲಾಯಿತು ಹಾಗೂ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು. ಈ ಆಯ್ಕೆಯು ಕರ್ನಾಟಕ ರಕ್ಷಣಾ ವೇದಿಕೆಯ ಕೆಲವು ಘಟಕದ ಅಧ್ಯಕ್ಷರು ಸದಸ್ಯರು ಸೇರಿ ಮಾಡಿದ್ದು ಎಲ್ಲಾ ಆಯ್ಕೆಗಳು ರಕ್ಷಣಾ ವೇದಿಕೆ ತೀರ್ಥಹಳ್ಳಿ ತಾಲೂಕು ಘಟಕದ ಒಮ್ಮತದ ಅಭಿಪ್ರಾಯದಿಂದ ನಡೆದಿದೆ.

ಕನ್ನಡ ಮತ್ತು ಜನ ಪರ ಹೋರಾಟ

ತೀರ್ಥಹಳ್ಳಿಯಲ್ಲಿ ಕನ್ನಡ ಪರ ಹಾಗೂ ಜನಪರ ಹೋರಾಟ ಮಾಡಲಾಗುವುದು. ಜತೆಗೆ ಕನ್ನಡದ ವಿಚಾರದಲ್ಲಿ ಸಂಘಟನೆ ಕೆಲಸ ಮಾಡಲಿದೆ ಎಂದು ನೂತನ ಅಧ್ಯಕ್ಷ ಸುರೇಂದ್ರ ಯಡೂರು ಹೇಳಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ