Categories
ಅಪರಾಧ ಬೆಂಗಳೂರು

ಭಂಡ ಗಂಡ: ಪತ್ನಿ ಬೆರಳನ್ನೇ ಕಚ್ಚಿ ತಿಂದ!?

ಭಂಡ ಗಂಡ: ಪತ್ನಿ ಬೆರಳನ್ನೇ ಕಚ್ಚಿ ತಿಂದ!?
– ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯಲ್ಲಿ ಘಟನೆ
– ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!

NAMMUR EXPRESS NEWS
ಬೆಂಗಳೂರು: ಇಲ್ಲೊಬ್ಬ ಗಂಡ ತನ್ನ ಪತ್ನಿಯ ಕೈ ಬೆರಳನ್ನೇ ಕಚ್ಚಿ ತಿಂದಿದ್ದಾನೆ. ಹೌದು. ಈ ವಿಕೃತ ಘಟನೆ ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಂಡತಿ ಜೊತೆ ಜಗಳವಾಡುತ್ತಿದ್ದಾಗ ಆಕೆಯ ಎಡಗೈ ಬೆರಳನ್ನೇ ಕಚ್ಚಿ ತಿಂದಿದ್ದಾನೆ ಎನ್ನಲಾಗಿದೆ. ಪುಷ್ಪಾ (40) ಎಂಬ ಮಹಿಳೆಯ ಗಂಡ ವಿಜಯಕುಮಾರ್ ಬೆರಳನ್ನು ಕಚ್ಚಿ ತಿಂದ ಗಂಡನಾಗಿದ್ದಾನೆ.
23 ವರ್ಷಗಳ ಹಿಂದೆ ಪುಷ್ಪಾ ವಿಜಯ್ ಕುಮಾರ್ ಎಂಬಾತನನ್ನು ಮದುವೆಯಾಗಿದ್ದು ಈ ದಂಪತಿಗೆ ಒಬ್ಬ ಮಗನಿದ್ದಾನೆ. ಮದುವೆಯಾದ ಕೆಲ ವರ್ಷಗಳಿಂದ ವಿಜಯ ಕುಮಾರ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ವಿವಾಹದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ.ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ಬೇರೆಡೆ ಮನೆ ಮಾಡಿ ಪತಿಯಿಂದ ದೂರವಿದ್ದರು. ಆದರೆ ಜುಲೈ 28ನೇ ತಾರೀಕು ಪತಿ ವಿಜಯ ಕುಮಾರ್ ಪತ್ನಿ ವಾಸಿಸುತ್ತಿದ್ದ ಮನೆಗೆ ತೆರಳಿ ಜಗಳವಾಡಿದ್ದ. ಈ ವೇಳೆ ಪತ್ನಿಯ ಬೆರಳನ್ನು ಪತಿ ಕಚ್ಚಿ ತಿಂದಿದ್ದು, ನಿನ್ನನ್ನು ಕೂಡಾ ಕೊಂದು ಇದೇ ರೀತಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ರೌಡಿಶೀಟರ್‌ ಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಪತ್ನಿಗೆ ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!

ರಾಜಧಾನಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಹಾಗೂ ಮಕ್ಕಳನ್ನು ಕೊಂದು, ನಂತರ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ನ ಕಾಡುಗೋಡಿಯಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯಲ್ಲಿ, ಮೃತಪಟ್ಟವರು ವಿಜಯ್(31), ಹೇಮಾವತಿ (29) ಹಾಗೂ ಇಬ್ಬರು ಹೆಣ್ಣುಮಕ್ಕಳು ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆಯೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಮನೆಯಲ್ಲಿ ಇರುವ ನಾಲ್ವರು ಸಾವನ್ನಪ್ಪಿದ್ದು, ತಡವಾಗಿ ಬೆಳಕಿಗೆ ಬಂದಿರುತ್ತದೆ. ಈ ಘಟನೆ ಬಗ್ಗೆ ವಿಷಯ ತಿಳಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023

Categories
ಶಿವಮೊಗ್ಗ ಸಾಗರ

ಶರಾವತಿ ನದಿಯಲ್ಲಿ ಮುಳುಗಿದ ಕಬ್ಬಿಣದ ಲಾರಿ!

ಶರಾವತಿ ನದಿಯಲ್ಲಿ ಮುಳುಗಿದ ಕಬ್ಬಿಣದ ಲಾರಿ!
– ಸಾಗರದ ಹೊಳೆಬಾಗಿಲಿನಲ್ಲಿ ನಡೆದ ಘಟನೆ
– ಭದ್ರಾವತಿಯ ಶಂಕರಘಟ್ಟದಲ್ಲಿ ಇನ್ನೋವಾ ಅಪಘಾತ!

NAMMUR EXPRESS NEWS
ಸಾಗರ: ಹೊಳೆಬಾಗಿಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಬಳಿ 10 ಚಕ್ರದ ಲಾರಿಯೊಂದು ಶರಾವತಿ ನದಿಯಲ್ಲಿ ಮುಳುಗಿರುವ ಘಟನೆ ಬುಧವಾರ ವರದಿಯಾಗಿದೆ. ಕಬ್ಬಿಣ ಹೊತ್ತುಕೊಂಡು ಬಂದಿದ್ದ ಲಾರಿ ಕಬ್ಬಿಣ ಇಳಿಸಿ ತಿರುವ ತೆಗೆದುಕೊಳ್ಳಲು ಮುಂದಾಗಿದೆ. ವೇಳೆ ಶರಾವತಿಯ ನದಿಯಲ್ಲಿ ಮುಳುಗಡೆಯಾಗಿದೆ. ಈ ವೇಳೆ ಚಾಲಕ ಹಾರಿಕೊಂಡಿದ್ದಾನೆ. ಅದೃಷ್ಟವಶಾತ್ ಪಾರಾಗಿದ್ದಾನೆ. ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದ್ದು ಈ ಘಟನೆ ನಡೆದಿದೆ. ಬಸ್ ಒಂದು ಲಾಂಚ್ ಹತ್ತಿಸುವ ವೇಳೆ ನೀರಿಗೆ ಇಳಿದಿತ್ತು. ಆದರೆ ಅದನ್ನ ಬಚಾವ್ ಮಾಡಲಾಗಿತ್ತು.

ಇನ್ನೋವಾ ಕಾರು ಅಪಘಾತ!

ಇನ್ನೋವಾ ಕಾರು ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಾಯವಾದ ಘಟನೆ ಭದ್ರಾವತಿ ತಾಲೂಕು ಶಂಕರಘಟ್ಟದಲ್ಲಿ ನಡೆದಿದೆ. ಭದ್ರಾವತಿ ತಾಲೂಕು ಶಂಕರಘಟ್ಟ ಬಳಿ ಘಟನೆ ಸಂಭವಿಸಿದೆ. ಬೈಕ್ ಸವಾರ ಕುಮಾರ್ (22) ಗಾಯಗೊಂಡಿದ್ದಾನೆ. ಕೂಡಲೆ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ತರೀಕೆರೆ ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಬೈಕ್ ಸವಾರ ದಿಢೀರ್ ಯು ಟರ್ನ್ ತೆಗೆದುಕೊಂಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023

Categories
ಶಿವಮೊಗ್ಗ ಹೊಸನಗರ

ಜನರ ಕಾಯುವ ಪೊಲೀಸರಿಗೆ ಭದ್ರತೆ ಇಲ್ಲ!

ಜನರ ಕಾಯುವ ಪೊಲೀಸರಿಗೆ ಭದ್ರತೆ ಇಲ್ಲ!
– ಪೋಲೀಸರ ಮನೆಗೆ ಟಾರ್ಪಲ್ ಹೊದಿಕೆ
– ಹೊಸನಗರದ ರಿಪ್ಪನ್ ಪೇಟೆ ಪಟ್ಟಣದಲ್ಲಿ ಅವ್ಯವಸ್ಥೆ
– ಕೇಳಿ ಸ್ವಾಮಿ ಪೊಲೀಸರ ಗೋಳು!

NAMMUR EXPRESS
ಹೊಸನಗರ: ಜನರನ್ನು ಕಾಯುವ ಪೊಲೀಸರಿಗೆ ರಕ್ಷಣೆ ಇಲ್ಲ. 20 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಪೊಲೀಸ್ ಕ್ವಾಟ್ರಸ್ ಈಗ ಮಳೆಗೆ ಸೋರುತ್ತಿದೆ. ಪೊಲೀಸ್ ಕುಟುಂಬಗಳು ಈ ವಸತಿ ಗೃಹದಲ್ಲಿ ಇರಲಾಗದೆ ಟಾರ್ಪಲ್ ಹಾಕಲಾಗಿದೆ. ಇದು ಇಡೀ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಹೌದು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಕಳೆದ 20 ವರ್ಷಗಳ ಹಿಂದೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಪೊಲೀಸ್ ಇಲಾಖೆಯ ವಸತಿಗೃಹಗಳನ್ನು ನಿರ್ಮಾಣ ಮಾಡಲಾಗಿತ್ತು, ಈ ವಸತಿ ಗೃಹಗಳಲ್ಲಿ ಸುಮಾರು 20ಕ್ಕಿಂತಲೂ ಹೆಚ್ಚು ಕೊಠಡಿಗಳು ನಿರ್ಮಾಣವಾಗಿದ್ದು ಎಲ್ಲವೂ ಕೂಡ ಶಿಥಿಲಾವಸ್ಥೆ ತಲುಪಿವೆ, ಅದಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರವ ಈ ವಸತಿಗೃಹ ಗಳ ರಸ್ತೆ,ಕುಡಿಯುವ ನೀರು, ಶೌಚಾಲಯ,ಚರಂಡಿ ನಿರ್ವಹಣೆ ಹಾಗೂ ಬೀದಿ ದೀಪಗಳ ನಿರ್ವಹಣೆ ಮತ್ತು ಸ್ವಚ್ಛತೆ ಬಗ್ಗೆ ಕೂಡ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.

2003ರಲ್ಲಿ ಅಂದಿನ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಜಿ ಡಿ ನಾರಾಯಣಪ್ಪ ಅಧಿಕಾರದ ಅವಧಿ ಹಾಗೂ ಅಧ್ಯಕ್ಷತೆಯಲ್ಲಿ ನೂತನ ಪೊಲೀಸ್ ವಸತಿಗೃಹಗಳ ಉದ್ಘಾಟನಾ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತ್ತು. ಈ ಕಾರ್ಯಕ್ರಮಕ್ಕೆ ಅಂದಿನ ಐಜಿಪಿ ಹಯತ್ ಜಿ ಎಂ ದಾವಣಗೆರೆ ಇವರು ಉದ್ಘಾಟಿಸಿದ್ದರು. ಆದರೆ ಅದ್ದೂರಿಯಾಗಿ ಉದ್ಘಾಟನೆಗೊಂಡ ಕೇವಲ ಐದು ವರ್ಷಗಳಲ್ಲಿ ನೂತನ ಪೊಲೀಸ್ ವಸತಿಗೃಹಗಳ ನಿಜ ಬಣ್ಣ ಬಯಲಾಗಿದೆ. ಸಣ್ಣ ಸಣ್ಣದಾಗಿ ಸೋರಲು ಶುರುವಾದ ಮೇಲ್ಚಾವಣಿಯು ಈಗ ಸಂಪೂರ್ಣ ಬಿರುಕು ಬಿಟ್ಟಿವೆ. ಎಲ್ಲೆಂದರಲ್ಲಿ ಮಳೆ ನೀರು ಸೋರುತ್ತಿದೆ.

ಟಾರ್ಪಲ್ ಮುಚ್ಚಿಕೊಂಡು ವಾಸ

ಕಳೆದ 15 ವರ್ಷಗಳಿಂದ ಈ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ಪೊಲೀಸರು ಅನಿವಾರ್ಯವಾಗಿ ಟಾರ್ಪಲ್ ಮುಚ್ಚಿಕೊಂಡು ವಾಸವಿರಬೇಕಾದ ಪರಿಸ್ಥಿತಿ ಬಂದೊದಗಿದೆ.ಅಂದಿನ ಇಂಜಿನಿಯರ್ ರವರ ನಿರ್ಲಕ್ಷದ ನೀಲಾನಕ್ಷೆ ತಯಾರಿಸಿದ್ದು, 22 ವಸತಿ ಗೃಹಗಳ 22 ಶೌಚಾಲಯಕ್ಕೆ ಒಂದೇ ಸಂಪರ್ಕ ಕಲ್ಪಿಸಿದೆ. ಪೈಪ್ ಬ್ಲಾಕ್ ಆದರೆ ಅಥವಾ ಒಡೆದರೆ ದುರ್ನಾಥ ದಿಂದ 22 ಪೊಲೀಸ್ ಕುಟುಂಬಗಳು ನರಕ ಯಾತನೆ ಅನುಭವಿಸಬೇಕಾಗುತ್ತದೆ.

ಜನರ ಕಾಯುವ ಪೊಲೀಸರಿಗೂ ನೆಮ್ಮದಿ ಇಲ್ಲ!

ಮಳೆ, ಬಿಸಿಲು,ಚಳಿ, ಹಗಲು ರಾತ್ರಿ ಎನ್ನದೆ ಸಾರ್ವಜನಿಕರ, ಅಧಿಕಾರಿಗಳ,ರಾಜಕೀಯ ವ್ಯಕ್ತಿಗಳ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ನಿರಂತರ ಒಂದಿಲ್ಲೊಂದು ತಲೆನೋವು ಇದ್ದೇ ಇರುತ್ತದೆ, ಬಂದೋಬಸ್ತ್ , ವಾಹನ ದಟ್ಟಣೆ,ಕೆಲಸದ ಒತ್ತಡ ಹೀಗೆ ನೂರೆಂಟು ಗೌಜುಗಳನ್ನ ಮುಗಿಸಿಕೊಂಡು ಮನೆಗೆ ಹೋದರೆ ಅಲ್ಲಿಯೂ ನೂರೆಂಟು ಸಮಸ್ಯೆ, ಸೋರುತ್ತಿರುವ ಮನೆ, ಕುಡಿಯಲು ಶುದ್ಧ ನೀರಿಲ್ಲ, ಇರುವ ಒಂದು ಬಾವಿಯಲ್ಲಿ ಗಿಡಗಂಟಿಗಳು ಬೆಳೆದು ಪಾಳು ಬಿದ್ದಂತಿದೆ.

ವಸತಿಗೃಹದ ಸುತ್ತಲೂ ಆಳೆತ್ತರದ ಪೊದೆಗಳು ಬೆಳೆದಿದ್ದು ವಿಷ ಜಂತುಗಳ ಭಯ ಇನ್ನಷ್ಟು ಆತಂಕಕ್ಕೆ ಎಡೆ ಮಾಡಿದೆ.
ರಸ್ತೆ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಕೆಲ ಸಿಬ್ಬಂದಿಗಳು ದ್ವಿಚಕ್ರ ವಾಹನದಲ್ಲಿ ಬಿದ್ದ ಉದಾಹರಣೆಗಳು ಇವೆ. ಹದಗೆಟ್ಟ ಬೀದಿ ದೀಪಗಳ ನಿರ್ವಹಣೆ ಕೂಡ ಹೇಳತೀರದಾಗಿದೆ,ಈ ಕುರಿತು ಗ್ರಾಮ ಪಂಚಾಯಿತಿ ಕೂಡ ಗಮನಹರಿಸುತ್ತಿಲ್ಲ. ಪೊಲೀಸ್ ಸಿಬ್ಬಂದಿಗಳು ವಸತಿಗೃಹ ಸೇರಿದಂತೆ ಮೂಲಭೂತ ಸೌಕರ್ಯ ಸೌಕರ್ಯಗಳ ಸಮಸ್ಯೆ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ, ಇನ್ನಾದರೂ ಸಂಬಂಧ ಪಟ್ಟ ಗೃಹ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿಕೊಡುವರೇ ಎಂದು ಕಾದು ನೋಡಬೇಕಾಗಿದೆ.

ವಿಶೇಷ ವರದಿ: ಆರಗ ದೇವರಾಜ್ ರಿಪ್ಪನ್ ಪೇಟೆ

[embedyt] https://www.youtube.com/watch?v=HQfllOQoHJc%5B/embedyt%5D

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಬೆಂಗಳೂರು ಶಿಕ್ಷಣ

ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಆಗುತ್ತಾ?

ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಆಗುತ್ತಾ?
– ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ನೋಟಿಸ್‌
– ಏನಿದು ಕೇಸ್… ಕನ್ನಡ ಭಾಷಾ ವಿಷಯ ಅಲ್ವಾ?

NAMMUR EXPRESS NEWS
ಬೆಂಗಳೂರು: ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿಸಬೇಕು ಎಂದು ಕಡ್ಡಾಯಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬುಧವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರಲ್ಲಿ ಒಬ್ಬರಾದ ಸಿ ಸೋಮಶೇಖರ್‌ ಮತ್ತು ಇತರೆ 19 ಮಂದಿ ಹಾಗೂ ಶಿಕ್ಷಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ಆಕ್ಷೇಪಾರ್ಹವಾದ ಕರ್ನಾಟಕ ಭಾಷಾ ಕಲಿಕಾ ಕಾಯಿದೆ, ನಿಯಮಗಳು ಮತ್ತು ನಿರಪೇಕ್ಷಣಾ ಪತ್ರ (ಎನ್‌ಒಸಿ) ನಿಯಮಗಳಿಗೆ ಮಧ್ಯಂತರ ತಡೆ ನೀಡಬೇಕು ಎಂಬ ಕೋರಿಕೆ ನಿರಾಕರಿಸಿದ ನ್ಯಾಯಾಲಯವು ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಕರ್ನಾಟಕ ಭಾಷಾ ಕಲಿಕಾ ಕಾಯಿದೆ, ನಿಯಮಗಳು ಮತ್ತು ನಿರಪೇಕ್ಷಣಾ ಪತ್ರ ನಿಯಮಗಳ ಪ್ರಕಾರ ರಾಜ್ಯದಲ್ಲಿನ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕನ್ನಡವನ್ನು ಬೋಧಿಸಬೇಕು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ನಿರಪೇಕ್ಷಣಾ ಪತ್ರ ನಿಯಮಗಳ ಪ್ರಕಾರ ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯನ್ನಾಗಿ ಬೋಧಿಸಬೇಕು. ಕರ್ನಾಟಕ ಭಾಷಾ ಕಲಿಕಾ ಕಾಯಿದೆ 2015ರ ಸೆಕ್ಷನ್‌ 3, ಕರ್ನಾಟಕ ಭಾಷಾ ಕಲಿಕಾ ನಿಯಮಗಳು 2017ರ ನಿಯಮ 3 ಮತ್ತು ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ (ನಿರಪೇಕ್ಷಣಾ ಪತ್ರ ನೀಡಿಕೆ ಮತ್ತು ನಿಯಂತ್ರಣ) ನಿಯಮಗಳ 6(2)ರಿಂದ ವಿದ್ಯಾರ್ಥಿಗಳಿಗೆ ಅನನುಕೂಲ ಮತ್ತು ತೊಂದರೆಯಾಗುತ್ತದೆ. ಕಾಯಿದೆ ಮತ್ತು ನಿಯಮಗಳನ್ನು ಪಾಲಿಸದಿದ್ದರೆ ನಿಯಮ 6(5)ರ ಅನ್ವಯ ಶೈಕ್ಷಣಿಕ ಸಂಸ್ಥೆಗೆ ನೀಡಲಾಗಿರುವ ನಿರಪೇಕ್ಷಣಾ ಪತ್ರವನ್ನು ಹಿಂಪಡೆಯಲಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ಕರ್ನಾಟಕದಲ್ಲಿ ತಮ್ಮ ಇಚ್ಛೆಯಂತೆ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯನ್ನು ಕಲಿಯುವ ವಿದ್ಯಾರ್ಥಿಗಳ ಹಕ್ಕಿಗೆ ಕಾಯಿದೆಗಳು ಗಂಭೀರ ಮತ್ತು ಪೂರ್ವಾಗ್ರಹ ಪೀಡಿತವಾಗಿ ಅಡ್ಡಿ ಉಂಟುಮಾಡುತ್ತವೆ. ಇದು ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ಪರಿಣಾಮ ಬೀರಲಿದ್ದು, ಭವಿಷ್ಯದಲ್ಲಿ ಅವರ ಔದ್ಯೋಗಿಕ ಅವಕಾಶಗಳಿಗೆ ಅಡ್ಡಿ ಉಂಟು ಮಾಡುತ್ತದೆ. ಕನ್ನಡ ಹೊರತುಪಡಿಸಿ ಬೇರೆ ವಿಷಯಗಳನ್ನು ಬೋಧಿಸುವ ಶಿಕ್ಷಕ ಜೀವನಕ್ಕೂ ಇದು ಸಮಸ್ಯೆಯಾಗಲಿದೆ” ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಕರ್ನಾಟಕ ಭಾಷಾ ಕಲಿಕಾ ಕಾಯಿದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದಂತೆ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬುದು ತಮ್ಮ ಗಮನಕ್ಕೆ ಬಂದಿದ್ದು, ನಿರಪೇಕ್ಷಣಾ ಪತ್ರ ನಿಯಮಗಳ ರೂಪದಲ್ಲಿ ದುರುದ್ದೇಶಪೂರಿತ ಕ್ರಮಕೈಗೊಳ್ಳುವುದು ನಿಶ್ಚಿತವಾಗಿದೆ” ಎಂದು ಅರ್ಜಿದಾರರು ಅರ್ಜಿಯಲ್ಲಿ ವಿವರಿಸಿದ್ದಾರೆ.

ಅರ್ಜಿದಾರರ ಕೋರಿಕೆ:

ಎನ್‌ಇಸಿ ನಿಯಮಗಳ ನಿಯಮ 6(1) ಅಸಾಂವಿಧಾನಿಕ ಎಂದು ಘೋಷಿಸಬೇಕು. ಅಂತೆಯೇ ಎನ್‌ಒಸಿ ನಿಯಮಗಳು ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳಿಗೆ ಅನ್ವಯಿಸುವುದಿಲ್ಲ ಎಂದು ಘೋಷಿಸಬೇಕು. ಇದಕ್ಕೆ ಪರ್ಯಾಯವಾಗಿ ಎನ್‌ಒಸಿ ನಿಯಮಗಳ ನಿಯಮ 6(2) ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಆಕ್ಷೇಪಾರ್ಹವಾದ ಕಾಯಿದೆ ಮತ್ತು ನಿಯಮಗಳು ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳಿಗೆ ಅನ್ವಯಿಸುವುದಿಲ್ಲ ಎಂದು ಘೋಷಿಸಬೇಕು. ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳಲ್ಲಿ ಆಕ್ಷೇಪಾರ್ಹ ಕಾಯಿದೆ ಮತ್ತು ನಿಯಮ ಜಾರಿ ಮಾಡದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು. ಮೊದಲೆರಡು ಕೋರಿಕೆಗಳನ್ನು ಮನ್ನಿಸದಿದ್ದರೆ ಕನ್ನಡ ಭಾಷಾ ಕಲಿಕಾ ಕಾಯಿದೆ 2015ರ ನಿಯಮ 3, ಕನ್ನಡ ಭಾಷಾ ಕಲಿಕಾ ನಿಯಮಗಳು 2017ರ ನಿಯಮ 3 ಸಂವಿಧಾನದ 14ನೇ ವಿಧಿ ಉಲ್ಲಂಘಿಸುವುದರಿಂದ ಅವುಗಳನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಲಾಗಿದೆ.

ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ ರಾಜಕೀಯ ರಾಜ್ಯ

ಆರಗ ಜ್ಞಾನೇಂದ್ರ ವಿರುದ್ಧ ಗುಡುಗಿದ ಕಿಮ್ಮನೆ!

ಆರಗ ವಿರುದ್ಧ ಗುಡುಗಿದ ಕಿಮ್ಮನೆ!
– ಶಾಸಕ ಸ್ಥಾನ ರದ್ದು ಮಾಡಬೇಕು, ಜ್ಞಾನೇಂದ್ರ ಅವರು ಆಸ್ಪತ್ರೆಗೆ ಸೇರಬೇಕು
– ಖರ್ಗೆ ಅವಮಾನ ಮಾಡಿದರೂ ಬಿಜೆಪಿ ನಾಯಕರು ಏಕೆ ಮಾತನಾಡಲಿಲ್ಲ
– ಜನರಿಗೆ ಮಂಗ ಮಾಡಲು ಆರಗ ಹೋರಾಟ: ಕಿಮ್ಮನೆ

NAMMUR EXPRESS NEWS
ಬೆಂಗಳೂರು: ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ ಖರ್ಗೆ ಇವರ ವಿರುದ್ಧ ಜಾತಿ, ವರ್ಣಭೇದ ಹಾಗೂ ವೈಯಕ್ತಿಕ ನಿಂದನೆ ಮಾಡಿರುವ ಅರಗ ಜ್ಞಾನೇಂದ್ರ ವಿರುದ್ಧ ಸಂವಿಧಾನ ಬದ್ದ ಕಾನೂನು ಜರಗಿಸಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾಧ್ಯಮಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್ ಅವರು, ಇಂತಹ ಅಜ್ಞಾನದ ಹೇಳಿಕೆ ನೀಡುತ್ತಿರುವ ಜ್ಞಾನೇಂದ್ರ ಅವರು ಆಸ್ಪತ್ರೆಗೆ ಸೇರಬೇಕು. ಖರ್ಗೆ ಅವಮಾನ ಬಿಜೆಪಿ ನಾಯಕರು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

ಆರಗ ಜ್ಞಾನೇಂದ್ರ ಅವರು 25 ವರ್ಷ ರಾಜಕಾರಣದಲ್ಲಿದ್ದಾರೆ. ಈ ಹಿಂದೆ ಗೃಹ ಸಚಿವರಾಗಿ ಕೆಲಸ ಮಾಡಿದ್ದಾರೆ. ನಾವು ಸಂವಿಧಾನವನ್ನು ಬದಲು ಮಾಡೇ ಮಾಡುತ್ತೇವೆ ಎನ್ನುವಂತಹ ಮಾತನ್ನು ಹೇಳಿದ್ದರು. ಅವರು ನಮಗೆ ಮುಸ್ಲಿಂ ಅವರು ವೋಟ್ ಕೊಡುವುದು ಬೇಡ ಎನ್ನುವ ಸಂವಿಧಾನ ವಿರೋಧ ಹೇಳಿಕೆಯನ್ನು ನೀಡಿದ್ದರು. ಇದೀಗ ಖರ್ಗೆ ಅವರ ಬಣ್ಣದ ಬಗ್ಗೆ ಮಾತನಾಡಿದ್ದಾರೆ. ಅವರ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಕಿಮ್ಮನೆ ಒತ್ತಾಯಿಸಿದರು.

ಕಾರಣ ಇಲ್ಲದೆ ಮೋದಿ ಹೆಸರನ್ನು ಪ್ರಸ್ತಾಪ ಮಾಡಿದ್ದಕ್ಕೆ ರಾಹುಲ್ ಗಾಂಧಿಗೆ ಸದಸ್ಯತ್ವವನ್ನು ಆರು ವರ್ಷ ಇಲ್ಲದಿರುವಂತೆ ಮಾಡಬೇಕು ಎನ್ನುವಂತಹ ಆದೇಶ ಏನು ಮಾಡಿದಾರೆ ಅದನ್ನು ಮೋದಿ ಸಮರ್ಥನೆ ಮಾಡುತ್ತಿದ್ದಾರೆ. ಇವರು ಖರ್ಗೆ ಅವರ ಬಗ್ಗೆ ಮತ್ತು ಈಶ್ವರ್ ಅವರ ಬಗ್ಗೆ ಮಾತನಾಡಿರುವಂತಹ ಮಾತನ್ನು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಜ್ಞಾನೇಂದ್ರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು. 6 ವರ್ಷ ಅವರ ಅಧಿಕಾರ ರದ್ದು ಪಡಿಸಬೇಕು ಎಂದರು.

ಮತದಾರರ ಮಂಗ ಮಾಡುತ್ತಿರುವ ಜ್ಞಾನೇಂದ್ರ!

ನಾನು ಜ್ಞಾನೇಂದ್ರ ಅವರಿಗೆ ಹೇಳುವುದು ಒಂದೇ ಕಸ್ತೂರಿ ರಂಗನ್ ವರದಿಯನ್ನು ನೀವು ಒಪ್ಪಿಕೊಂಡಿದ್ದೀರಿ. ರಾಷ್ಟ್ರಮಟ್ಟದಲ್ಲಿ ಅದಕ್ಕೆ ನೀವು ಒಪ್ಪಿಗೆ ಕೊಟ್ಟಿದ್ದೀರಿ. ಇಲ್ಲಿ ಮತದಾರರನ್ನು ಮಂಗ ಮಾಡಲು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.

ವಿರೋಧ ಮಾಡುವುದು ಇದ್ದರೆ ಮೋದಿ ಗೌರ್ಮೆಂಟ್ಗೆ ವಿರೋಧ ಮಾಡಬೇಕು, ನೀವು ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು ಅದನ್ನು ಬಿಟ್ಟು ತೀರ್ಥಹಳ್ಳಿಯಲ್ಲಿ ಬಂದು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದು ಅಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅವರ ಸದಸ್ಯತ್ವವನ್ನು ರದ್ದು ಮಾಡಬೇಕು ವಿಧಾನಸಭಾ ಸ್ಪೀಕರ್ ಅವರಿಗೂ ಅರ್ಜಿ ಕೊಡುತ್ತೇವೆ, ಕೋರ್ಟ್ ನಲ್ಲಿ ಕೂಡ ಮಾಡುತ್ತೇವೆ. ಈ ರೀತಿ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದರು.

ದೇಶದಲ್ಲಿರುವ ಎಲ್ಲಾ ಜಾತಿಯ ಜನ ಎಲ್ಲ ಧರ್ಮದ ಜನರನ್ನು ಒಟ್ಟಿಗೆ ತೆಗೆದುಕೊಳ್ಳಬೇಕು ಎನ್ನುವ ಮನೋಭಾವ ಇರಬೇಕು. ಯಾವುದೇ ಕಾರಣಕ್ಕೂ ಜಾತಿ ಅಥವಾ ಧರ್ಮವನ್ನು ದ್ವೇಷ ಮಾಡುವಂತಹ ಗುಣಗಳನ್ನು ನಾವು ಹೊಂದಿರಬಾರದು. ಎಲ್ಲರೂ ಒಂದಾಗಿ ಇರಬೇಕು ಇದಕ್ಕೆ ವಿರುದ್ಧವಾದ ಮನಸ್ಥಿತಿ ಬಿಜೆಪಿಯವರದು ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಯುವ ನಾಯಕರಾದ ರಾಘವೇಂದ್ರ ಮುಡುಬ, ಅಮರನಾಥ ಶೆಟ್ಟಿ ಇದ್ದರು.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಸಾಗರ

ಸಾಗರಕ್ಕೂ ಬಂತು ಗಾಂಜಾ ಗ್ಯಾಂಗ್!

ಸಾಗರಕ್ಕೂ ಬಂತು ಗಾಂಜಾ ಗ್ಯಾಂಗ್!
– ತೀರ್ಥಹಳ್ಳಿ, ಹೊಸನಗರದಲ್ಲೂ ಮಾರಾಟ
– ಸಾಗರ ಪೊಲೀಸ್ ಕಾರ್ಯಚರಣೆ: ಓರ್ವ ಅರೆಸ್ಟ್

NAMMUR EXPRESS NEWS
ಸಾಗರ: ಸಾಗರ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ ಸಾಗರದಲ್ಲಿ ನಡೆದಿದೆ. ಸಾಗರ ಸೇರಿದಂತೆ ಮಲೆನಾಡಿನ ಅನೇಕ ತಾಲೂಕುಗಳ ಬೀಡಾ ಅಂಗಡಿ, ದಿನಸಿ ಅಂಗಡಿಗಳಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಯುವ ಸಮುದಾಯ ಗಾಂಜಾ ಡ್ರಗ್ಸ್ ಹಿಂದೆ ಬಿದ್ದಿದೆ. ಈ ನಡುವೆ ಸಾಗರದಲ್ಲಿ ಓರ್ವನನ್ನು ಅರೆಸ್ಟ್ ಮಾಡಲಾಗಿದೆ. ಬೆಳಿಗ್ಗೆ 11.00 ಗಂಟೆಗೆ ಸಾಗರ ಟೌನ್ ಸೌಪರ್ಣಿಕ ಹೋಟೆಲ್ ಹತ್ತಿರ ವರದಹಳ್ಳಿ ಕ್ರಾಸ್ ಬಳಿ ಮಹಮ್ಮದ್ ಹುಸೇನ್ ಬಿನ್ ಮೆಹಬೂಬ ಸುಭಾನ ರಾಮನಗರ ಎಂಬಾತ ಅಕ್ರಮವಾಗಿ 53 ಗ್ರಾಂ ಒಣ ಗಾಂಜಾವನ್ನು ಇಟ್ಟುಕೊಂಡು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಮಾಲನ್ನು ವಶಪಡಿಸಿಕೊಂಡು ಆರೋಪಿಯನ್ನು ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ನ್ಯಾಯಾಂಗ ವಶಕ್ಕೆ ನೀಡಲಾಯಿತು. ಕಾರ್ಯಾಚರಣೆಯಲ್ಲಿ ಎನ್ನಿ ಲೋಬಿ, ಗುರುಮೂರ್ತಿ ಅರುಣ್ ಜಿ ಎಂ, ದೀಪಕ್ ಯು ಪಿ , ಕನ್ನಯ್ಯ ವಾಹನ ಚಾಲಕರಾದ ಗಣಪತಿ ಮತ್ತು ಮಹಾಬಲೇಶ್ ಹಾಜರಿದ್ದರು.

ಮಲೆನಾಡಿನ ಎಲ್ಲಾ ತಾಲೂಕಿಗೂ ಹಬ್ಬಿದ ಗಾಂಜಾ ನಂಟು!

ಕರಾವಳಿಯಲ್ಲಿ ಹೆಚ್ಚಿದ್ದ ಗಾಂಜಾ ಝೆಡ್ ಡ್ರಗ್ಸ್ ಮಾಫಿಯಾ ಇದೀಗ ಮಲೆನಾಡಿನ ತಾಲೂಕುಗಳಲ್ಲಿ ಸಕ್ರಿಯವಾಗಿದೆ. ತೀರ್ಥಹಳ್ಳಿ, ಶಿವಮೊಗ್ಗ, ಹೊಸನಗರ, ಸಾಗರ ಸೇರಿ ಎಲ್ಲಾ ಕಡೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು
– ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನೆ
– ತೀರ್ಥಹಳ್ಳಿ ಕ್ಷೇತ್ರದ ಜನರಿಗೆ ಮಾಡಿದ ಅಪಚಾರ
– ಕಾಂಗ್ರೆಸ್ ನಾಯಕ ಡಾ.ಆರ್.ಎಂ.ಮಂಜುನಾಥ್ ಗೌಡ ವಾಗ್ದಾಳಿ

NAMMUR EXPRESS NEWS
ತೀರ್ಥಹಳ್ಳಿ: ಶಾಸಕರಾಗಿ ಅಥವಾ ಸಚಿವರಾದ ನಂತರ ಸಂವಿಧಾನದ ವಿಧಿ ವಿಧಾನಗಳಿಗೆ ಬದ್ಧವಾಗಿ ನಡೆದುಕೊಳ್ಳುತ್ತೇವೆ ಎಂದು ಪ್ರಮಾಣ ಮಾಡುತ್ತೇವೆ. ಆದರೆ ಇವರು ಸಂವಿಧಾನದ ವಿರುದ್ಧವಾಗಿ ಮಾತನಾಡಿದ್ದಾರೆ. ಎಲ್ಲವನ್ನು ಗೃಹ ಸಚಿವರಾದ ನಂತರ ಪ್ರಾರಂಭ ಮಾಡಿದ್ದರು. ಗೃಹ ಸಚಿವರಾದ ಸ್ವಲ್ಪ ದಿನದಲ್ಲೇ ಮೈಸೂರಿನ ಮಹಿಳೆಯೊಬ್ಬರ ಬಗ್ಗೆ ಮಾತನಾಡಿದ್ದರು. ಈಗ ರಾಷ್ಟ್ರ ಕಂಡಂತಹ ಎತ್ತರದ ಮನುಷ್ಯನ ಬಗ್ಗೆ ವೈಯಕ್ತಿಕವಾಗಿ ನಿಂದನೆ ಮಾಡಿದ್ದಾರೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಮುಖಂಡ ಆರ್ ಎಂ ಮಂಜುನಾಥಗೌಡ ಹರಿಹಾಯ್ದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ, ರಾಷ್ಟ್ರದ ಹಿರಿಯ ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಹೇಳನ ಮಾಡಿ ಟೀಕಿಸಿದ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜಾನೇಂದ್ರ ಅವರ ವಿರುದ್ಧ ತಾಲೂಕು ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಳಿಕ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಆರಗ ಜ್ಞಾನೇಂದ್ರ ಅವರು ಈ ಮಟ್ಟಿಗೆ ಇಳಿಯುತ್ತಾರೆ ಎಂದು ಅಂದುಕೊಂಡಿರಲಿಲ್ಲ. ವರ್ಣಭೇದವನ್ನು ಮಾಡಿ ಸಂವಿಧಾನದ ವಿರೋಧಿ ಹೇಳಿಕೆಯನ್ನ ನೀಡಿರುವುದು ಸರಿಯಲ್ಲ ಈ ಮನಸ್ಥಿತಿಗೆ ಏನೆಂದು ಹೇಳಬೇಕು ಗೊತ್ತಾಗುತ್ತಿಲ್ಲ. ಇವರೇನು ಸಣ್ಣ ಹುಡುಗರಲ್ಲ. ಸುಮಾರು 40 ರಿಂದ 50 ವರ್ಷಗಳ ಕಾಲ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವ ಇದ್ದು ಎತ್ತರದ ಸ್ಥಾನವನ್ನು ಕಂಡವರು. ಇದು ತೀರ್ಥಹಳ್ಳಿ ಕ್ಷೇತ್ರದ ಜನರಿಗೆ ಮಾಡಿದ ಅಪಚಾರ ಎಂದರು.
ಆರಗ ಜ್ಞಾನೇಂದ್ರ ಅವರು ನೀಡಿದ ಹೇಳಿಕೆಗೆ ಬಿಜೆಪಿಯವರು ಉತ್ತರ ನೀಡಬೇಕಿದೆ. ಪೊಲೀಸ್ ಇಲಾಖೆಯವರು ಸುಮೋಟೋ ಕೇಸ್ ದಾಖಲಿಸಿ ಅವರ ಮೇಲೆ ಕಾನೂನು ಮತ್ತು ಸಂವಿಧಾನದ ವಿರೋಧಿ ಹೇಳಿಕೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನಾದರೂ ಮಾತನಾಡಿದರೆ ಪ್ರಕರಣವನ್ನ ದಾಖಲಿಸುತ್ತಾರೆ. ಸದಸ್ಯತ್ವವನ್ನು ಅನರ್ಹ ಮಾಡಿಸುತ್ತಾರೆ. ಕಾಂಗ್ರೆಸ್ ಪಕ್ಷದವರು ಮಾಡಿದರೆ ಮಾತ್ರ ಅಪರಾಧವಾ? ಜ್ಞಾನೇಂದ್ರ ಅವರು ಮಾಡಿದಂತಹ ವರ್ಣ ಭೇಧವನ್ನು ನೋಡಿದರೆ ದಕ್ಷಿಣ ಆಫ್ರಿಕದಲ್ಲಿ ನಡೆದ ಘಟನೆ ನೆನಪಾಗುತ್ತದೆ ಎಂದರು.

ಜ್ಞಾನೇಂದ್ರ ಅಧಿಕಾರದ ಭ್ರಮೆಯಲ್ಲಿದ್ದಾರಾ?

ಆರಗ ಜ್ಞಾನೇಂದ್ರ ಅವರು ಇನ್ನು ಗೃಹ ಸಚಿವರಾಗಿದ್ದೇನೆ ಎಂಬ ಅಧಿಕಾರದ ಭ್ರಮೆಯಲ್ಲಿದ್ದಾರಾ? ಕಸ್ತೂರಿ ರಂಗನ್ ವರದಿ ವಿರುದ್ಧ ಈಗ ಪ್ರತಿಭಟನೆ ನಡೆಸಿದ್ದಾರೆ. ಇಷ್ಟು ವರ್ಷಗಳ ಕಾಲ ಇವರದ್ದೇ ಆದ ಸರ್ಕಾರ ಇತ್ತು. ಆಗ ಯಾವುದೇ ರೀತಿಯಲ್ಲಿ ಪ್ರತಿಭಟನೆ ಮಾಡದೆ ನಮ್ಮ ಸರ್ಕಾರ ಬರುವ ಒಳಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಜ್ಞಾನೇಂದ್ರ ಅವರು ಮಾಡಿರುವುದು ಜಾತಿನಿಂದನೆ ಹಾಗೂ ವರ್ಣ ಭೇದ ನಿಂದನೆ. ಇದೊಂದು ದುರಂತ ಹಾಗಾಗಿ ಆ ಮಾತು ಕ್ಷಮೆ ಕೇಳುವುದರಿಂದ ಅಥವಾ ಮಾತನ್ನ ವಾಪಸ್ ಪಡೆಯುವುದರಿಂದ ಈ ಪ್ರಕರಣ ಮುಚ್ಚಿ ಹೋಗುವುದಿಲ್ಲ. ಆರಗ ಜ್ಞಾನೇಂದ್ರರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಬಿಜೆಪಿಯವರು ಉತ್ತರ ನೀಡಬೇಕು ಎಂದರು.

ಕಸ್ತೂರಿ ರಂಗನ್ ವರದಿ ಒಪ್ಪಿದ್ದೆ ಬಿಜೆಪಿ ಸರ್ಕಾರ

ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಒಪ್ಪಿಕೊಂಡಿದ್ದೆ ಕೇಂದ್ರ ಸರ್ಕಾರ, ಬಿಜೆಪಿಯವರದ್ದೇ ಸರ್ಕಾರ, ವಾರದ ಹಿಂದೆ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಆದರೆ ಆ ಸಭೆಗೆ ಆರಗ ಜ್ಞಾನೇಂದ್ರ ಹೋಗಿರಲಿಲ್ಲ. ಆದರೆ ಈಗ ಕಸ್ತೂರಿ ರಂಗನ್ ವರದಿಯ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಯಾವಾಗಲೂ ಕಸ್ತೂರಿ ರಂಗನ್ ವರದಿಯ ವಿರುದ್ಧವಾಗಿ ಇರುತ್ತದೆ, ಕೇಂದ್ರ ಸರ್ಕಾರಗಳು ಕಸ್ತೂರಿ ರಂಗನ್ ವರದಿಯ ಪರವಾಗಿದೆ. ನನ್ನ ಮೇಲೆ ಕೇಸ್ ದಾಖಲಿಸಿದರೂ ಪರವಾಗಿಲ್ಲ ಈ ಮಾತು ಸತ್ಯ ಎಂದರು.

ಜನರ ಸೇವೆ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ

ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದ ರಕ್ತ ಕ್ರಾಂತಿ ವಿಚಾರವಾಗಿ ಮಾತನಾಡಿ ಅವರ ಪಕ್ಷ ಅಧಿಕಾರಕ್ಕೆ ಬಂದಿದ್ದೆ ಆ ರೀತಿಯಿಂದ, ರೈತರಿಗೆ ಅವರ ಸರ್ಕಾರ ಏನು ಮಾಡಿದೆ? ಇವರು ಬಹಳ ಬಡತನದಲ್ಲಿ ಬಂದಿದ್ದಾರಲ್ವಾ? ಗುಮ್ಮಿ ನೀರು ಕುಡಿದು ಬಂದಿದ್ದೇನೆ ಎಂದು ಹೇಳುವವರು ಮಂತ್ರಿಯಾದ ಮೇಲೆ ಅವರ ಮಾತು ಬದಲಾಗಿದೆ. ಅವರ ರಾಜೀನಾಮೆಯನ್ನು ನಾವು ಕೇಳುವುದಿಲ್ಲ ಬಿಜೆಪಿಯವರೇ ರಾಜೀನಾಮೆ ಕೊಡಿ ಎಂದು ಹೇಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪ್ರಮುಖರಾದ ಕೆಸ್ತೂರು ಮಂಜುನಾಥ್, ವಿಶ್ವನಾಥ್ ಶೆಟ್ಟಿ, ಡಾ. ಸುಂದರೇಶ್, ಮಂಜುಳಾ ನಾಗೇಂದ್ರ, ಪುಟ್ಟೋಡ್ಲು ರಾಘವೇಂದ್ರ, ಯಲ್ಲಪ್ಪ, ಪಡುವಳ್ಳಿ ಕಿಟ್ಟಪ್ಪ, ಪಣಿರಾಜ್, ಮಿತ್ರ, ನಾಗರಾಜ್ ಕುರುವಳ್ಳಿ ಇತರರು ಇದ್ದರು.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಹಿಂದೂಗಳಿಗೆ ಕೋರ್ಟ್ ಅಲ್ಲಿ ಜಯ!

ಹಿಂದೂಗಳಿಗೆ ಕೋರ್ಟ್ ಅಲ್ಲಿ ಜಯ!
– ಜ್ಞಾನವಾಪಿ ಮಸೀದಿ ಸರ್ವೆಗೆ ಹೈಕೋರ್ಟ್‌ ಅನುಮತಿ
– ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ

NAMMUR EXPRESS NEWS
ನವ ದೆಹಲಿ: ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸರ್ವೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದ್ದು, ಈ ಮೂಲಕ ಹಿಂದೂಗಳಿಗೆ ಮತ್ತೊಮ್ಮೆ ಜಯ ದೊರೆತಿದೆ. ಈ ಕುರಿತಂತೆ ಜುಲೈ 27ರಂದು ಎರಡೂ ಕಡೆಯವರ ವಾದ ಆಲಿಸಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಇದರ ಮಹತ್ವದ ತೀರ್ಪು ನೀಡಿರುವ ನ್ಯಾಯಾಲಯ, ಜಿಲ್ಲಾ ಸೆಷೆನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು, ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಹಿಂದೂಗಳ ಪರವಾಗಿ ಮಾತನಾಡಿರುವ ಮುಖಂಡ ವಿಷ್ಣು ಶಂಕರ್ ಜೈನ್, ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಸಂಕೀರ್ಣದ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್ಐ) ಸಮೀಕ್ಷೆಯನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ ಎಂದು ತಿಳಿಸಿದ್ದಾರೆ.

ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ವಾರಣಾಸಿ ಜಿಲ್ಲಾ ನ್ಯಾಯಾಧೀಶರ ಜುಲೈ 21ರ ಆದೇಶವನ್ನು ಪ್ರಶ್ನಿಸಿತ್ತು.ಜುಲೈ 21 ರಂದು ವಾರಣಾಸಿ ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ ಅವರು ಮೇ 16, 2023 ರಂದು ನಾಲ್ವರು ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಯ ಮೇರೆಗೆ ಜ್ಞಾನವಾಪಿ ಸಂಕೀರ್ಣದ ಎಎಸ್’ಐ ಸಮೀಕ್ಷೆಗೆ ಆದೇಶಿಸಿದರು. ಆದಾಗ್ಯೂ, ಜಿಲ್ಲಾ ನ್ಯಾಯಾಧೀಶರ ಆದೇಶವು ವುಜು ಖಾನಾ (ಅಬ್ಲೂಷನ್ ಕೊಳದ ಪ್ರದೇಶ) ಅನ್ನು ಹೊರತುಪಡಿಸಿತು. ಸಂಕೀರ್ಣವನ್ನು ಉನ್ನತ ನ್ಯಾಯಾಲಯದ ಆದೇಶದ ಮೇರೆಗೆ ಮೊಹರು ಮಾಡಲಾಗಿದೆ.ಈ ಹಿಂದೆ ಅಲಹಾಬಾದ್ ಹೈಕೋರ್ಟ್ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಪ್ರಾರಂಭಿಸದಂತೆ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎಎಸ್ಐ) ಗೆ ಸೂಚಿಸಿದ್ದು, ಎಎಸ್‌ಐನಿಂದ ವಿವರವಾದ ವೈಜ್ಞಾನಿಕ ಸಮೀಕ್ಷೆಯನ್ನು ಸುಪ್ರೀಂ ಕೋರ್ಟ್‌ ಜುಲೈ 26 ರ ಸಂಜೆ 5 ರವರೆಗೆ ತಡೆಹಿಡಿದ ನಂತರ ಈ ವಿಷಯದ ವಿಚಾರಣೆ ನಡೆದಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಕರಾವಳಿ ಕಾರ್ಕಳ ಮಂಗಳೂರು

ಕಾರ್ಕಳ ಕೆನರಾ ಬ್ಯಾಂಕ್ ನಲ್ಲಿ ಬೆಂಕಿ: ತಪ್ಪಿತು ದುರಂತ!

ಕಾರ್ಕಳ ಕೆನರಾ ಬ್ಯಾಂಕ್ ನಲ್ಲಿ ಬೆಂಕಿ: ತಪ್ಪಿತು ದುರಂತ!
– ಕಾರ್ಕಳದಲ್ಲಿ ವೈದ್ಯರು, ಪ್ರೊಫೆಸರ್ ಅಡ್ಡಗಟ್ಟಿ ಬೆದರಿಕೆ

NAMMUR EXPRESS NEWS
ಕಾರ್ಕಳ: ( Karkala ) ಕಾರ್ಕಳ ನಗರದ ಬಸ್ ನಿಲ್ದಾಣ ಸಮೀಪದಲ್ಲಿನ ಕೆನರಾ ಬ್ಯಾಂಕ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿ ಮಾಡಿದ ಘಟನೆ ಆ. 3ರ ಬೆಳಿಗ್ಗೆ ಸಂಭವಿಸಿದೆ. ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ. ಘಟನೆ ನಡೆದ ತಕ್ಷಣವೇ ಬ್ಯಾಂಕ್ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆಲ್ಬರ್ಟ್‌ ಮೋನಿಸ್, ಸಿಬ್ಬಂದಿ ರವೀಂದ್ರ, ರೂಪೇಶ್, ಹರಿಪ್ರಸಾದ್, ಕೇಶವ್, ಹಸನ್ ಹಾಗೂ ರವಿಚಂದ್ರ ಪಾಲ್ಗೊಂಡಿದ್ದರು.

ಕಾರ್ಕಳದಲ್ಲಿ ವೈದ್ಯರು, ಪ್ರೊಫೆಸರ್ ಅಡ್ಡಗಟ್ಟಿ ಬೆದರಿಕೆ

ಮಂಗಳೂರಿನ ಹೆಸರಾಂತ ಕಾಲೇಜ್‌ವೊಂದರ ನಾಲ್ವರು ವೈದ್ಯರು ಹಾಗೂ ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಅವರೊಂದಿಗೆ ಒಂದೇ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಹಿಂದೂ ಸಂಘಟನೆ ಹೆಸರಲ್ಲಿ ಅನೇಕರು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಮಾಳ ಎಸ್ ಕೆ ಬಾರ್ಡರ್ ಬಳಿಯಿಂದ ಇವರ ಕಾರನ್ನು ಹಿಂಬಾಲಿಸಿ ಮತ್ತೊಂದು ಕಾರಿನಲ್ಲಿ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದರು. ಕಾರಿನಲ್ಲಿದ್ದ ಮಹಿಳೆಯರು ತಕ್ಷಣ 112ಗೆ ಕರೆ ಮಾಡಿ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಒಂದೇ ಕಾರಿನಲ್ಲಿ ಮಂಗಳೂರಿನಿಂದ ಶೃಂಗೇರಿ ತೆರಳಿ ಕಾರ್ಕಳದ ಕುಂಟಲ್ಪಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿರುವರು ವಿಭಿನ್ನ ಕೋಮಿನವರು ಎಂದು ತಿಳಿದು ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.ಬಂಧಿತರಾದ ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಜಿತ್ ಸಫಲಿಗ ತೆಳ್ಳಾರು ಇವರನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ.

ವಿಟ್ಲದಲ್ಲಿ ವೃದ್ಧನ ಮೇಲೆ ಹಲ್ಲೆಗೆ ಯತ್ನ, ಮನೆಗೆ ಕಲ್ಲು ತೂರಾಟ

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧನ ಮೇಲೆ ತಂಡವೊಂದು ಹಲ್ಲೆಗೆ ಯತ್ನಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮದ ನಾರ್ಶ ಅಲದಡಿ ಎಂಬಲ್ಲಿ ನಡೆದಿದೆ. ವೃದ್ಧ ಇಸ್ಮಾಯಿಲ್ ಮತ್ತು ಆತನ ಪುತ್ರನ ಮೇಲೆ ನಾರ್ಶ ನಿವಾಸಿ ಈಚು ಯಾನೆ ಇಸುಬು ಮತ್ತು ಆತನ ಕುಟುಂಬದವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನ ನಡೆಸಿದ್ದಲ್ಲದೇ, ಮನೆಗೆ ಕಲ್ಲು ತೂರಾಟ ನಡೆಸಿ ಜೀವಬೆದರಿಕೆಯೊಡ್ಡಿದ್ದಾರೆ. ಈ ಪ್ರಕರಣ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಹಾಸನ

ವಿಶ್ವ ಮಟ್ಟದಲ್ಲಿ ಹಾಸನ ಕ್ರೀಡಾಪಟು ಸಾಧನೆ!

ವಿಶ್ವ ಮಟ್ಟದಲ್ಲಿ ಹಾಸನ ಕ್ರೀಡಾಪಟು ಸಾಧನೆ!
– ಜರ್ಮನಿಯಲ್ಲಿ ನಡೆದ ಕುಬ್ಬರ ಕ್ರೀಡಾಕೂಟದಲ್ಲಿ ಗೆಲುವು
– ಕಂಚಿನ ಪದಕ ಗೆದ್ದ ಅರಕಲಗೂಡಿನ ಶಾಂತಕುಮಾರ್

NAMMUR EXPRESS NEWS
ಹಾಸನ: ಜರ್ಮನಿ ದೇಶದಲ್ಲಿ ನಡೆಯುತ್ತಿರುವ ವಿಶ್ವ ಕುಬ್ಬರ ಕ್ರೀಡಾಕೂಟದಲ್ಲಿ ಹಾಸನದ ಕ್ರೀಡಾಪಟು ಕಂಚಿನ ಪದಕ ಗೆದ್ದಿದ್ದಾರೆ. ಭೋಷಿಯ ಕ್ರೀಡೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಪಡೆದ ಕ್ರೀಡಾಪಟು ಅರಕಲಗೂಡು ಮೂಲದ ಶಾಂತಕುಮಾರ್ ಹಾಸನ ಜಿಲ್ಲೆಗೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023