Categories
ತೀರ್ಥಹಳ್ಳಿ ರಾಜಕೀಯ ರಾಜ್ಯ

ಬಾಯಿ ತಪ್ಪಿನಿಂದ ಖರ್ಗೆ ಅಂದಿದ್ದೇನೆ…ಮಲ್ಲಿಕಾರ್ಜುನ ಖರ್ಗೆ ಅಂತ ಹೇಳಿಲ್ಲ

ಬಾಯಿ ತಪ್ಪಿನಿಂದ ಖರ್ಗೆ ಅಂದಿದ್ದೇನೆ…ಮಲ್ಲಿಕಾರ್ಜುನ ಖರ್ಗೆ ಅಂತ ಹೇಳಿಲ್ಲ
– ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
– ಖರ್ಗೆಯವರಿಗೆ ಕ್ಷಮೆಯಾಚನೆ ಮಾಡುತ್ತೇನೆ
– ಆಡದ ಮಾತನ್ನು ದೊಡ್ಡ ಮಾಡಿ ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

NAMMUR EXPRESS NWES
ತೀರ್ಥಹಳ್ಳಿ: ( Thirthahalli ) ಅರಣ್ಯ ಸಚಿವರ ವಿರುದ್ಧ ಮಾತನಾಡುವಾಗ ಬಾಯಿ ತಪ್ಪಿನಿಂದ ಖರ್ಗೆ ಅಂತ ಹೇಳಿದ್ದೇನೆ. ಆದರೆ ಎಲ್ಲೂ ಸಹ ಮಲ್ಲಿಕಾರ್ಜುನ ಖರ್ಗೆ ಅಂದಿಲ್ಲ. ಅವರ ಬಗ್ಗೆ ಬಣ್ಣದ ಬಗ್ಗೆ ವಯಕ್ತಿಕ ನಿಂದನೆ ಮಾಡಿಲ್ಲ. ಅವರ ಜೊತೆ ವಿಧಾನ ಸಭೆಯಲ್ಲಿ ಕೆಲಸ ಮಾಡಿದ್ದೇನೆ. ಅವರನ್ನು ತುಂಬಾ ಗೌರವದಿಂದ ನೋಡುತ್ತೇನೆ. ಖರ್ಗೆ ಅವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ ನಾನಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಸಚಿವರ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಆಡಿದಂತಹ ಕೆಲವು ಮಾತುಗಳನ್ನು ಆಡದೇ ಇರುವ ಮಾತುಗಳನ್ನು ಸೇರಿಸಿ ರಾಜಕಾರಣಕ್ಕೆ ಬಳಸಿ ರಾಜ್ಯಾದ್ಯಂತ ಸುದ್ದಿಯಾಗಿದೆ. ಅದರ ಬಗ್ಗೆ ಯಾರಿಗಾದರೂ ಮನಸ್ಸಿಗೆ ಕಸಿವಿಸಿ ಆಗಿದ್ದರೆ ವಿಶೇಷವಾಗಿ ಖರ್ಗೆಯವರಿಗೆ ಕ್ಷಮೆಯಾಚನೆ ಮಾಡುತ್ತೇನೆ ಎಂದರು. ನಾನು ಹೇಳದ ಹೇಳಿಕೆಯನ್ನು ದೊಡ್ಡದು ಮಾಡಿ ಕಾಂಗ್ರೆಸ್ ನವರು ರಾಜಕಾರಣಕ್ಕೆ ಉಪಯೋಗಿಸಿಕೊಂಡು ಪ್ರಚೋದನೆ ನೀಡಿ ದೂರು ಕೊಡಿಸಿದ್ದಾರೆ.ರಾಜಕೀಯವಾಗಿ ಟೀಕೆ ಮಾಡಿರಬಹುದು ಹಾಗೂ ಮಾಡಬಹುದು. ಮಲ್ಲಿಕಾರ್ಜುನ ಖರ್ಗೆ ಅಂದಿಲ್ಲ ಹಾಗೇನಾದರೂ ಆದರೆ ಕೊಟ್ಟ ಶಿಕ್ಷೆಗೆ ಒಳಗಾಗುತ್ತೇನೆ. ಕಾಂಗ್ರೆಸ್ ನವರು ಸುಖಾ ಸುಮ್ಮನೆ ಇದನ್ನು ದೊಡ್ಡ ವಿಷಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಯಲು ಸೀಮೆ, ಮಲೆನಾಡಿನ ಬದುಕು ಬಗ್ಗೆ ಮಾತನಾಡಿದ್ದೇನೆ

ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರ ಹೇಳಿಕೆ ಪಶ್ಚಿಮ ಘಟ್ಟದ ತಾಲೂಕುಗಳಲ್ಲಿ ಸಂಚಲನ ಸೃಷ್ಟಿಸಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದರೂ ಸರಿಯಾಗಿ ವರದಿ ನೀಡಿಲ್ಲ. ಈಗ ಸುಪ್ರೀಂ ಕೋರ್ಟ್‌ ಹಸಿರು ಪೀಠ ಕೈಗೆ ಎತ್ತಿಕೊಂಡಿದೆ. ಹಸಿರು ಪೀಠ ಒತ್ತಡ ಮಾಡಿದಾಗ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಬಳಿ ವರದಿ ಕೇಳಿದ್ದರು. ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿ ನಿರ್ಣಯ ಕಳುಹಿಸಿಕೊಡಲಾಗಿತ್ತು. ಬೊಮ್ಮಾಯಿ ಸರ್ಕಾರ ಅಥವಾ ಯಡಿಯೂರಪ್ಪ ಸರ್ಕಾರ ಇದ್ದಾಗ ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಾಗಿ ಇಲ್ಲ. ತಿರಸ್ಕಾರ ಮಾಡಬೇಕು ಎಂದು ಹೇಳಿದ್ದೇವು. ಅರಣ್ಯ ಸಚಿವರಿಗೆ ಈ ವಿಷಯದ ಬಗ್ಗೆ ಗೊತ್ತಿಲ್ಲದೆ ಮಾತನಾಡಿರಬಹುದು. ಆ ವಿಷಯದ ಬಗ್ಗೆ ಮಾತನಾಡಿ ಹೀಗೆ ಆಗಿದೆ. ಅವರ ಜಾತಿ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮಲೆನಾಡ ಜನ ಹಾಗೂ ಬಯಲುಸೀಮೆ ಜನರ ಬಗ್ಗೆ ಹೇಳಿದ್ದೇನೆ. ಅರಣ್ಯ ಸಚಿವರ ಬಗ್ಗೆಯೂ ಕಿಚಾಯಿಸಿದ್ದಲ್ಲ ಎಂದರು. ದಲಿತರ ಬಗ್ಗೆ ಕಾಂಗ್ರೆಸ್ ನಿಲುವೇನು ಎಂಬುದು ನಮಗೆ ತಿಳಿದಿದೆ. ಕೆಜೆ ಹಳ್ಳಿ, ಡಿಜೆ ಹಳ್ಳಿ ಬಗ್ಗೆ ಏನು ಹೇಳಿದ್ದೀರಾ ಎಂದು ಗೊತ್ತು ಅವರನ್ನು ಅಮಾಯಕರು ಅಂದವರು ನೀವು ನಿಮಗೆ ದಲಿತರ ಬಗ್ಗೆ ಎಷ್ಟು ಅನುಕಂಪ ಇದೆ ಗೊತ್ತಿದೆ ಎಂದರು.

ನಾನು ಜೀವಂತ ಬದುಕಿರುವುದೇ ಅವರಿಗೆ ಸಹಿಸಲಾಗುತ್ತಿಲ್ಲ

ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ನೀವು ಸೋತಿದ್ದೀರಾ. ಆ ಸೋಲನ್ನು ಸ್ವೀಕಾರ ಮಾಡಲು ಸಂಸ್ಕಾರ ಬೇಕು. ನಾನು ಐದು ಬಾರಿ ಸೋತಿದ್ದೇನೆ. ಆದರೆ ಸೋತಾಗ ನಿಮ್ಮ ಬಳಿ ಬೆರಳು ತೋರಿಸುವುದನ್ನು ಹಾಗೂ ನಿಮ್ಮ ಚಾರಿತ್ರ್ಯ ಹರಣ ಮಾಡಿಲ್ಲ. ಈಗ ನೀವು ಆ ಸೋಲನ್ನು ಜಿದ್ದನ್ನು ನನ್ನ ಮೇಲೆ ತೀರಿಸಿಕೊಳ್ಳಲು ಒಂದು ಅವಕಾಶಕ್ಕೆ ಕಾಯ್ತಾ ಇದ್ರಿ ಅಂತ ಕಾಣಿಸುತ್ತದೆ. ಕೋರ್ಟ್ ಗೆ ಹೇಗೆ ಹಾಕಬೇಕು ಕಂಪ್ಲೇಂಟ್ ಹೇಗೆ ಕೊಡಬೇಕು. ಮಾಧ್ಯಮದಲ್ಲಿ ನನ್ನ ನೇಣಿಗೆ ಏರಿಸಬೇಕು ಎಂದು ಹೇಳಿಲ್ಲ. ನಾನು ಜೀವಂತ ಬದುಕಿರುವುದೇ ಅವರಿಗೆ ಸಹಿಸಲಾಗುತ್ತಿಲ್ಲ ಹಾಗಾಗಿ ನನ್ನ ಚಾರಿತ್ರ್ಯ ಹರಣ ಮಾಡುತ್ತಿರುತ್ತಾರೆ ಎಂದು ಜ್ಞಾನೇಂದ್ರ ಕಿಮ್ಮನೆ ರತ್ನಾಕರ್ ಅವರ ವಿರುದ್ಧ ಬೇಸರ ತೋಡಿಕೊಂಡರು.

ಸರ್ಕಾರ ನಡೆಸಲು ಆಗದವರ ಟೀಕೆ!

ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟ ಭರವಸೆ ಈಡೇರಿಸಲು ಆಗುತ್ತಿಲ್ಲ. ಕೆ ಎಸ್ ಆರ್ ಟಿ ಸಿ ಬಸ್ ಗೆ 700 ಕೋಟಿ ಹಣ ಖರ್ಚಾಗಿದೆ,120 ಕೋಟಿ ನೀಡಿದ್ದಾರೆ.ಮುಂದಿನ ತಿಂಗಳು ಡೀಸೆಲ್ ಹಾಕಿಸಲು ಹಾಗೂ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ಕೆಪಿಟಿಸಿಎಲ್ ಸಾವಿರಾರು ಕೋಟಿ ನಷ್ಟದಲ್ಲಿದೆ. ಈಗಲೇ ವಿದ್ಯುತ್ ಬಿಲ್ ಕಟ್ಟುತ್ತಿಲ್ಲ. ಈಗಿನಿಂದ ಗೊತ್ತಾಗುತ್ತದೆ. ಇವರು ಭರವಸೆ ನೀಡಿದ್ದಾರೆ ಕೊಡಬೇಕು. ಸರ್ಕಾರ ಬಂದು ಮೂರು ತಿಂಗಳಾಗಿದೆ ಅದರ ಬಗ್ಗೆ ಮಾತನಾಡುವುದು ಬಿಟ್ಟು ಅದನ್ನು ಡೈವರ್ಟ್ ಮಾಡುವ ಉದ್ದೇಶದಿಂದ ನನ್ನ ವಿವಾದವನ್ನು ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆರ್ ಮದನ್, ಬಾಳೆಬೈಲು ರಾಘವೇಂದ್ರ, ನಾಗರಾಜ್ ಶೆಟ್ಟಿ, ಸಂದೇಶ್ ಜವಳಿ, ಸಾಲೆಕೊಪ್ಪ ರಾಮಚಂದ್ರ, ಚಂದವಳ್ಳಿ ಸೋಮಶೇಖರ್, ಹೆದ್ದೂರು ನವೀನ್, ಶ್ರೀನಿವಾಸ್ ಕಾಸರವಳ್ಳಿ, ಕವಿರಾಜ್ ಬೇಗುವಳ್ಳಿ ಸೇರಿದಂತೆ ಪ್ರಮುಖರು ಆಗಮಿಸಿದ್ದರು.

ಇದನ್ನೂ ಓದಿ : ಯುವ ನಿಧಿ ಗ್ಯಾರಂಟಿ ಯೋಜನೆಗೆ ಯಾರು ಅರ್ಹರು?

HOW TO APPLY : NEET-UG COUNSELLING 2023

Categories
ಕರಾವಳಿ

ಕರಾವಳಿಯಲ್ಲಿ ಧರ್ಮಸ್ಥಳ ಪರ ಹೋರಾಟ!

ಕರಾವಳಿಯಲ್ಲಿ ಧರ್ಮಸ್ಥಳ ಪರ ಹೋರಾಟ!
– ಸೌಜನ್ಯ ತಾಯಿ ವಿರುದ್ಧ ಧಿಕ್ಕಾರ, ಹಲ್ಲೆಗೆ ಯತ್ನ?
– ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುತ್ತಿರುವ ಭಕ್ತರು

NAMMUR EXPRESS NEWS
ಉಜಿರೆ: ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪರವಾಗಿ ಬೃಹತ್ ಹೋರಾಟ ಶುರುವಾಗಿದೆ.
ಪ್ರತಿಭಟನೆ ವೇಳೆ ಸ್ಥಳಕ್ಕಾಗಮಿಸಿದ ಸೌಜನ್ಯ ತಾಯಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್ ನಿರಪರಾಧಿ ಎಂದು ಸಿಬಿಐ ಕೋರ್ಟ್‌ನಿಂದ ವರದಿ ಬಂದ ಬೆನ್ನಲ್ಲೇ ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು, ಜಸ್ಟಿಸ್ ಫಾರ್ ಸೌಜನ್ಯ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಮದ್ರ ಹೆಗ್ಗಡೆ ಕುಟುಂಬದ ವಿರುದ್ಧ ಅಪಪ್ರಚಾರಗಳು ಕೇಳಿ ಬರುತ್ತಿರುವ ಹಿನ್ನೆಲೆ ಶುಕ್ರವಾರ ಧರ್ಮಸ್ಥಳ ಪರವಾಗಿ ಉಜಿರೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸ್ಥಳಕ್ಕೆ ಜಸ್ಟೀಸ್ ಫಾರ್ ಸೌಜನ್ಯಾ ಭಿತ್ತಿಪತ್ರ ಹಿಡಿದು ಬಂದಿದ್ದ ಸೌಜನ್ಯಾ ತಾಯಿ ಮತ್ತು ಇತರ ಮಹಿಳೆಯರಿಗೆ ಮುತ್ತಿಗೆ ಹಾಕಿದ ಪ್ರತಿಭಟನಕಾರರು ವೇದಿಕೆ ಹತ್ತಲು ಬಿಡದೇ ದಿಕ್ಕಾರ ಘೋಷಣೆ ಕೂಗಿದ್ದಾರೆ. ಉಜಿರೆಯಲ್ಲಿ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದಿಂದ ಶ್ರೀ ಜನಾರ್ದನ ಸ್ವಾಮಿ ದೇವಾಲಯದ ಮುಂಭಾಗದ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಟನಾ ಸಮಾವೇಶಕ್ಕೆ ಭಕ್ತರು ಆಗಮಿಸಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜೈಕಾರ ಕೂಗಿದ್ದಾರೆ.

ಇತ್ತ ಮರು ತನಿಖೆಗೆ ಕುಟುಂಬದ ಪಟ್ಟು

ಸೌಜನ್ಯ ಪರವಾಗಿ ಅವರು ಹೋರಾಟ ಮಾಡುತ್ತಿಲ್ಲ. ಇದೆಲ್ಲಾ ನೆಪವಷ್ಟೇ. ನನ್ನ ಮಗಳ ಹೆಸರನ್ನು ಬಳಸಿ ಹೋರಾಟ ಮಾಡುತ್ತಿದ್ದಾರೆ ಹೊರತು ನನ್ನ ಮಗಳ ಪರವಾಗಿ ಅಲ್ಲ. ನಾವು ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರುತನಿಖೆ ಆಗಲೇ ಬೇಕು. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಆಗಬೇಕು ಎಂದುಸೌಜನ್ಯ ತಾಯಿ ಕುಸುಮಾವತಿ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ : ಯುವ ನಿಧಿ ಗ್ಯಾರಂಟಿ ಯೋಜನೆಗೆ ಯಾರು ಅರ್ಹರು?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

12 ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ಆಪರೇಷನ್!

12 ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ಆಪರೇಷನ್!
– ಕಾಳಿಂಗ ಸರ್ಪಕ್ಕೆ ಶಸ್ತ್ರಚಿಕಿತ್ಸೆ, ನಾಲ್ಕು ದಿನ ಆರೈಕೆ
– ಕಾಳಿಂಗ ಫೌಂಡೇಶನ್ ಸದಸ್ಯರ ಮಾನವೀಯ ಸೇವೆ
– ಆಪರೇಷನ್ ಹೇಗಿತ್ತು..?.. ಹಾವು ಹೇಗಿದೆ ಇಲ್ಲಿದೆ ಡೀಟೇಲ್ಸ್!
– ಎನ್. ಆರ್. ಪುರ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
– ಸಾಗರ: ಬೈಕ್ ತಪ್ಪಿಸಲು ಹೋಗಿಬಸ್ ಪಲ್ಟಿ!

NAMMUR EXPRESS NEWS
ತೀರ್ಥಹಳ್ಳಿ: ಗಾಯಗೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕಮ್ಮರಡಿಯ ಮನೆಯೊಂದರ ಬಳಿ ಕಾಳಿಂಗ ಸರ್ಪ (King Cobra) ಕಾಣಿಸಿಕೊಂಡಿತ್ತು. ಮಾಹಿತಿ ಲಭಿಸುತ್ತಿದ್ದಂತೆ ಕಾಳಿಂಗ ಫೌಂಡೇಶನ್ ಸದಸ್ಯರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆಗ ಕಾಳಿಂಗ ಸರ್ಪ ಗಾಯಗೊಂಡಿರುವ ವಿಚಾರ ಗೊತ್ತಾಗಿದೆ.

ಗಾಯಗೊಂಡಿದ್ದ ಕಾಳಿಂಗ ಸರ್ಪ ರಕ್ಷಣೆ : 

ಮನೆಯೊಳಗೆ ಹಾವು ಸೇರಿದ್ದರೆ ಮಾತ್ರ ಅದನ್ನು ರಕ್ಷಿಸಿ ಕಾಡಿಗೆ ಬಿಡುತ್ತೇವೆ. ಆದರೆ ಕಮ್ಮರಡಿಯಲ್ಲಿ ಮನೆಯ ಪಕ್ಕದಲ್ಲಿ ಹಾವು ಕಾಣಿಸಿಕೊಂಡಿತ್ತು. ಮನೆಯಲ್ಲಿ ಮಕ್ಕಳಿದ್ದಾರೆ ಎಂದು ತಿಳಿಸಿದ್ದರಿಂದ ಸ್ಥಳಕ್ಕೆ ತೆರಳಿ ಪರಿಶೀಲಿಸಿದೆವು. ಆಗ ಕಾಳಿಂಗ ಸರ್ಪಕ್ಕೆ ಗಾಯವಾಗಿರುವ ವಿಚಾರ ಗೊತ್ತಾಯಿತು. ಕೂಡಲೆ ಅದನ್ನು ಹಿಡಿದು ಮೇಗರವಳ್ಳಿ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಲಾಯಿತು. ಮರುದಿನ ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು’ ಎಂದು ತಿಳಿಸಿದರು. ರಕ್ಷಿಸಿ, ಶಸ್ತ್ರಚಿಕಿತ್ಸೆ ಬಳಿಕ ಕಾಳಿಂಗ ಫೌಂಡೇಶನ್‌ನಲ್ಲಿಯೇ ಕಾಳಿಂಗ ಸರ್ಪಕ್ಕೆ ಆರೈಕೆ ಮಾಡಲಾಗಿದೆ. ಗಾಯ ಮಾಗುವ ವಾತಾವರಣ ಸೃಷ್ಟಿಸಿ, ನಿತ್ಯ ಪರಿಶೀಲನೆ ನಡೆಸಲಾಯಿತು. ಮೂರ್ನಾಲ್ಕು ದಿನದ ಬಳಿಕ ಆರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಾಳಿಂಗ ಸರ್ಪವನ್ನು ಅರಣ್ಯಕ್ಕೆ ಬಿಡಲಾಗಿದೆ. ಇದರ ವಿಡಿಯೋವನ್ನು ಕಾಳಿಂಗ ಫೌಂಡೇಶನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದೆ. ಜನರು ಕಾಳಿಂಗ ಫೌಂಡೇಶನ್ ಮತ್ತು ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎನ್. ಆರ್. ಪುರ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಎನ್.ಆರ್ ಪುರ: ಜೀವನದಲ್ಲಿ ಜಿಗುಪ್ಸೆ ಗೊಂಡು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ವಗ್ಗಡೆ ಕಲ್ಲು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಕೀಶೋರ್ (49) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕೂಲಿ ಕೆಲಸಗಾರನಾದ ಕೀಶೋರ್ ಮನೆಯಲ್ಲಿ ಒಬ್ಬನೆ ವಾಸವಾಗಿದ್ದನು. ಅನಾರೋಗ್ಯದಿಂದ ಬಳಲುತ್ತಿದ್ದ ಈತ ಜೀವನದಲ್ಲಿ ಜಿಗುಪ್ಸೆ ಗೊಂಡು ತನ್ನ ಮನೆಯಲ್ಲಿಯೇ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹತ್ತಿರದಲ್ಲೇ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದ ಕಿಶೋರ್ ತಂದೆ ಸೌಲೋಸ್ ಹಾಗೂ ಇತರ ಕುಟುಂಬದವರು ಗುರುವಾರ ಬೆಳಿಗ್ಗೆ ಕಿಶೋರ್ ಮನೆಗೆ ಹೋಗಿ ನೋಡಿದಾಗ ಆತನ ಮನೆಯಲ್ಲಿ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.

ಬೈಕ್ ತಪ್ಪಿಸಲು ಹೋಗಿಬಸ್ ಪಲ್ಟಿ!

ಎದುರಿನಿಂದ ಬಂದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವ ಘಟನೆ ಸಾಗರ ತಾಲೂಕಿನ ಉಳ್ಳೂರು ಗ್ರಾಮದ ಹೊನ್ನಾವರ – ತಾಳಗುಪ್ಪ ಹೈವೆ ರಸ್ತೆಯಲ್ಲಿ ನಡೆದಿದೆ. ಬಸ್ ನಲ್ಲಿದ್ದ 20 ಜನರಿಗೆ ಗಾಯವಾಗಿದೆ. ಅವರನ್ನ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರಿಗೆ ಹೆಚ್ಚಿನ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ರಾಹುಲ್ ಗಾಂಧಿಗೆ ತಪ್ಪಿತು ಜೈಲು ಶಿಕ್ಷೆ!?

ರಾಹುಲ್ ಗಾಂಧಿಗೆ ತಪ್ಪಿತು ಜೈಲು ಶಿಕ್ಷೆ!?
– ಸುಪ್ರೀಂಕೋರ್ಟ್ ತಡೆ: ಮತ್ತೆ ಕೇಸ್ ಕುತೂಹಲ
– ಮೋದಿ ಉಪ ನಾಮ ಕುರಿತು ಹೇಳಿಕೆ ಪ್ರಕರಣ

NAMMUR EXPRESS NEWS
ನವ ದೆಹಲಿ: ದೇಶದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್‌ ತಡೆ ನೀಡಿದೆ. ಈ ಮೂಲಕ ರಾಹುಲ್ ಗಾಂಧಿ ಕೊಂಚ ನಿರಾಳರಾಗಿದ್ದಾರೆ. ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮೋದಿ ಹೆಸರಿನವರೆಲ್ಲ ಮೋಸಗಾರರೇ ಆಗಿರುತ್ತಾರಲ್ಲ ಏಕೆ ಎಂದು ರಾಹುಲ್ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಸೂರತ್‌ ನ್ಯಾಯಾಲಯ ರಾಹುಲ್‌ ಗಾಂಧಿಯವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಈ ಕಾರಣಕ್ಕಾಗಿ ಅವರು ಸಂಸತ್ ಸದಸ್ಯ ಸ್ಥಾನವನ್ನು ಕಳೆದುಕೊಂಡಿದ್ದರು.ಈ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪಿಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿತ್ತು. ನಂತರ ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.
ಮೋದಿ ಉಪ ನಾಮ ಕುರಿತು ಭಾರೀ ಕೋಲಾಹಲ ಸೃಷ್ಟಿ ಮಾಡಿರುವ ಈ ಕೇಸ್ ಈಗ ಟ್ವಿಸ್ಟ್ ಪಡೆದುಕೊಂಡಿದೆ.

ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023

Categories
ಮಾಹಿತಿ

ಯುವ ನಿಧಿ ಗ್ಯಾರಂಟಿ ಯೋಜನೆಗೆ ಯಾರು ಅರ್ಹರು?

ಯುವ ನಿಧಿ ಗ್ಯಾರಂಟಿ ಯೋಜನೆಗೆ ಯಾರು ಅರ್ಹರು?
– ಬೇಕಾದ ದಾಖಲೆ ಏನೇನು?… ಯಾರಿಗೆ ಸಿಗುತ್ತೆ?
– 2 ವರ್ಷ ಸರ್ಕಾರ ಕೊಡುತ್ತೆ ನಿರುದ್ಯೋಗ ಭತ್ಯೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಐದು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಯುವ ನಿಧಿ ಎಂಬ ಐದು ಯೋಜನೆಗಳ ಪೈಕಿ ಈಗಾಗಲೇ ನಾಲ್ಕು ಯೋಜನೆಗಳು ಜಾರಿಗೆ ಬಂದಿದೆ. ಆದರೆ ಈ ಪೈಕಿ ಯುವ ನಿಧಿ ಗ್ಯಾರಂಟಿ ಯೋಜನೆಯು ಇನ್ನೂ ಕೂಡಾ ಜಾರಿಗೆ ಬಂದಿಲ್ಲ. ಬಜೆಟ್‌ನಲ್ಲಿ ನಾಲ್ಕು ಯೋಜನೆಗಳಿಗೆ ಅನುದಾನವನ್ನು ಸರ್ಕಾರ ಘೋಷಣೆ ಮಾಡಿದ್ದರೂ ಯುವನಿಧಿಗೆ ಅನುದಾನವನ್ನು ಸರ್ಕಾರವು ಘೋಷಣೆ ಮಾಡಿಲ್ಲ. ಇತರೆ ಯೋಜನೆಗಳಿಗೆ ಹಂಚಲಾದ ಬಜೆಟ್‌ನಲ್ಲಿಯೇ ಈ ಯೋಜನೆಯನ್ನು ಜಾರಿ ಮಾಡಲಾಗುತ್ತದೆಯೇ ಎಂಬ ಸುದ್ದಿಗಳಿವೆ.

ನಿರುದ್ಯೋಗಿಗಳಿಗೆ ಭತ್ಯೆ

ಕರ್ನಾಟಕದಲ್ಲಿ ಸರ್ಕಾರ ರಚಿಸಿದರೆ ಅದನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕರ ಕಲ್ಯಾಣಕ್ಕಾಗಿ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಯೋಜನೆ ಇದಾಗಿದೆ. ಯೋಜನೆಯಲ್ಲಿ ನಿರುದ್ಯೋಗಿ ಯುವಕರಿಗೆ ಮಾಸಿಕ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ. ಈ ಮಾಸಿಕ ಹಣಕಾಸಿನ ನೆರವನ್ನು ಯುವಕರು ಉದ್ಯೋಗ ಹುಡುಕುವ ಸಮಯದಲ್ಲಿ ಖರ್ಚಿನ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಕರ್ನಾಟಕದ ಖಾಯಂ ನಿವಾಸಿಗಳು ಮತ್ತು ವಿದ್ಯಾವಂತರಾಗಿದ್ದರೂ ನಿರುದ್ಯೋಗಿಗಳಾಗಿದ್ದರೆ, ಕರ್ನಾಟಕ ಯುವ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಹರಾಗಿದ್ದಾರೆ.

ಯೋಜನೆಗೆ ಯಾರು ಅರ್ಹರು?

– ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
– ಅರ್ಜಿದಾರರು ಪದವೀಧರರಾಗಿರಬೇಕು ಅಥವಾ ಡಿಪ್ಲೊಮಾ ಹೊಂದಿರುವವರಾಗಿರಬೇಕು.
– ಅರ್ಜಿದಾರರು 2022-2023 ರಲ್ಲಿ ಅವನ / ಅವಳ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು.
– ಅರ್ಜಿದಾರರು ಪದವಿ ಅಥವಾ ಡಿಪ್ಲೊಮಾ ತೇರ್ಗಡೆಯಾದ ದಿನಾಂಕದ ನಂತರ ಕನಿಷ್ಠ 180 ದಿನಗಳವರೆಗೆ ನಿರುದ್ಯೋಗಿಯಾಗಿರಬೇಕು.
ಯಾರು ಈ ಯೋಜನೆಗೆ ಅನರ್ಹರು?
– ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣವನ್ನು ಮುಂದುವರಿಸುವ ಯುವಕರು.
– ಅಪ್ರೆಂಟಿಸ್ ವೇತನದ ಫಲಾನುಭವಿ.
– ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಯುವಕರು.
– ಸ್ವಯಂ ಉದ್ಯೋಗಿಗಳಾಗಿರುವ ಯುವಕರು.
– ಸರ್ಕಾರದ ಇತರೆ ಆರ್ಥಿಕ ನೆರವು ಯೋಜನೆಯ ಫಲಾನುಭವಿ.

ಯೋಜನೆಯ ಪ್ರಯೋಜನಗಳು

ಕರ್ನಾಟಕ ಯುವ ನಿಧಿ ಯೋಜನೆಯಡಿ ಕರ್ನಾಟಕದ ಅರ್ಹ ನಿರುದ್ಯೋಗಿ ಯುವಕರಿಗೆ ಕೆಳಗೆ ತಿಳಿಸಿದ ಪ್ರಯೋಜನಗಳನ್ನು ಒದಗಿಸಲಾಗುವುದು:-
ನಿರುದ್ಯೋಗಿ ಪದವೀಧರ ಯುವಕರಿಗೆ ಪ್ರತಿ ತಿಂಗಳು 3,000 ರೂಪಾಯಿ ಮಾಸಿಕ ನಿರುದ್ಯೋಗ ಭತ್ಯೆ, ನಿರುದ್ಯೋಗಿ ಡಿಪ್ಲೊಮಾ ಹೊಂದಿರುವ ಯುವಕರಿಗೆ ಪ್ರತಿ ತಿಂಗಳು 1,500 ರೂಪಾಯಿ ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.

ಯೋಜನೆಗೆ ಬೇಕಾದ ದಾಖಲೆಗಳು

– ಕರ್ನಾಟಕದ ನಿವಾಸಿ ಪುರಾವೆ
– ಆಧಾರ್ ಕಾರ್ಡ್
– 10 ನೇ ತರಗತಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ.
– 12 ನೇ (ದ್ವಿತೀಯ ಪಿಯುಸಿ) ಅಂಕಪಟ್ಟಿ ಮತ್ತು ಪ್ರಮಾಣಪತ್ರ.
– ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ.
– ಡಿಪ್ಲೊಮಾ ಪ್ರಮಾಣಪತ್ರ. (ಡಿಪ್ಲೊಮಾ ಹೊಂದಿರುವವರಿಗೆ).
– ಜಾತಿ ಪ್ರಮಾಣ ಪತ್ರ. (ಅನ್ವಯವಾದಲ್ಲಿ)
– ಆದಾಯ ಪ್ರಮಾಣಪತ್ರ.
– ಮೊಬೈಲ್ ನಂಬರ್
– ಬ್ಯಾಂಕ್ ಖಾತೆ ವಿವರಗಳು.
– ಸೆಲ್ಫ್ ಡಿಕ್ಲರೇಷನ್ ಪ್ರತಿ
ಕರ್ನಾಟಕ ಸರ್ಕಾರದ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ನಿರುದ್ಯೋಗಿ ಯುವಕರಿಗೆ ಮಾತ್ರ ನೀಡಲಾಗುತ್ತದೆ. ಫಲಾನುಭವಿಯು 2 ವರ್ಷಗಳ ನಂತರ ಅಥವಾ 2 ವರ್ಷಗಳ ಅವಧಿಯಲ್ಲಿ ಉದ್ಯೋಗವನ್ನು ಕಂಡುಕೊಂಡರೆ ನಿರುದ್ಯೋಗ ಭತ್ಯೆಯನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ.

ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023

Categories
ಬೆಂಗಳೂರು

ಸಿರಿಬೈಲ್ ಧರ್ಮೇಶ್ ಅವರಿಗೆ ಮಹತ್ವದ ಹುದ್ದೆ

ಸಿರಿಬೈಲ್ ಧರ್ಮೇಶ್ ಅವರಿಗೆ ಮಹತ್ವದ ಹುದ್ದೆ
– ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
– ಒಕ್ಕಲಿಗರ ಸಂಘದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆ

NAMMUR EXPRESS NEWS
ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಅಧೀನದಲ್ಲಿರುವ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ( ಬಿ. ಐ. ಟಿ )ಯ ನೂತನ ಅಧ್ಯಕ್ಷರಾಗಿ ಶಿವಮೊಗ್ಗ ಉತ್ತರ ಕನ್ನಡ ನಿರ್ದೇಶಕ ಸಿರಿಬೈಲ್ ಧರ್ಮೇಶ್ ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರು ಒಕ್ಕಲಿಗರ ಸಂಘದ ಅಧೀನ ಸಂಸ್ಥೆಯು ಬೆಂಗಳೂರಲ್ಲಿದ್ದು 6500 ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 1000 ಮಂದಿ ಉದ್ಯೋಗಿಗಳಿದ್ದಾರೆ. ಒಕ್ಕಲಿಗ ಪ್ರಭಾವಿ ಮುಖಂಡರಾಗಿ, ಗುತ್ತಿಗೆದಾರರಾಗಿ, ಯುವ ನಾಯಕರಾಗಿದ್ದು ಈ ಮಹತ್ವದ ಹುದ್ದೆ ಸಿಕ್ಕಿರುವುದು ಈಗ ಅವರ ಸ್ನೇಹಿತರು, ಅಭಿಮಾನಿಗಳಿಗೆ ಸಂತಸ ತಂದಿದೆ.

ಮೊದಲ ಬಾರಿಗೆ ಮಲೆನಾಡಿನ ನಾಯಕನಿಗೆ ಹುದ್ದೆ

ಬಿಐಟಿ ಛೇರ್ಮನ್ ಆಗಿ ಮೊದಲ ಬಾರಿಗೆ ಮಲೆನಾಡ ನಾಯಕನಿಗೆ ಹುದ್ದೆ ಸಿಕ್ಕಿದೆ. ಈವರೆಗೆ ಮಂಡ್ಯ, ಮೈಸೂರು, ಬೆಂಗಳೂರು ಭಾಗದವರಿಗೆ ಸಿಕ್ಕುತ್ತಿತ್ತು. ಶಿವಮೊಗ್ಗ ಉತ್ತರ ಕನ್ನಡ ಭಾಗದಿಂದ ಆಯ್ಕೆಯಾದ ಮೊದಲ ಅಧ್ಯಕ್ಷ ಎಂಬ ಖ್ಯಾತಿಗೆ ಧರ್ಮೇಶ್ ಭಾಜನರಾಗಿದ್ದಾರೆ. ಒಕ್ಕಲಿಗ ಸಂಘದ ರಾಜ್ಯ ನಿರ್ದೇಶಕರು, ಶಿವಮೊಗ್ಗ, ಉತ್ತರ ಕನ್ನಡ ಭಾಗದ ಪ್ರಮುಖರು ಹಾಜರಿದ್ದರು. 7 ಎಕರೆ ಜಾಗದಲ್ಲಿ ಇಂಜಿನಿಯರಿಂಗ್ ಕಾಲೇಜು ಇದ್ದು ಕರ್ನಾಟಕದಲ್ಲೇ ಅತೀ ಹೆಚ್ಚು ರಾಂಕ್ ಈ ಸಲ ಪಡೆದ ಕಾಲೇಜು ಹೆಮ್ಮೆಗೆ ಪಾತ್ರವಾಗಿದೆ. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹನುಮಂತಯ್ಯ ಸೇರಿದಂತೆ ಎಲ್ಲಾ ನಿರ್ದೇಶಕರು, ಪ್ರಮುಖರು ಸಿರಿಬೈಲ್ ಧರ್ಮೇಶ್ ಅವರಿಗೆ ಶುಭಾಶಯ ಕೋರಿದ್ದಾರೆ. ಒಕ್ಕಲಿಗ ಸಂಘದ ಅಧ್ಯಕ್ಷರಾದ ಹನುಮಂತಯ್ಯ, ಕಾರ್ಯದರ್ಶಿ ಜಯಮುತ್ತು, ಗೌರವ ಅಧ್ಯಕ್ಷರಾದ ಕೆಂಚಪ್ಪ ಗೌಡ, ಕಿಮ್ಮನೆ ರತ್ನಾಕರ್, ಅರಮನೆ ಶಂಕರ್, ಮಣಿ ಹೆಗ್ಡೆ ಇತರರು ಇದ್ದರು.

ಮಲೆನಾಡಿನ ನಗುಮೊಗದ ನಾಯಕ ಧರ್ಮೇಶ್

ತೀರ್ಥಹಳ್ಳಿ ಮೂಲದ ಸಿರಿಬೈಲ್ ಧರ್ಮೇಶ್ ಮಲೆನಾಡಿನ ಪ್ರಮುಖ ನಾಯಕರಲ್ಲಿ ಒಬ್ಬರು. ಸದಾ ಸಮಾಜಮುಖಿ ಚಟುವಟಿಕೆ ಮೂಲಕ, ಯುವ ಜನರ ನೆಚ್ಚಿನ ನಾಯಕರಾದವರು. ಸರಳ ವ್ಯಕ್ತಿತ್ವದ ಧರ್ಮೇಶ್ ಅವರಿಗೆ ಈ ಹುದ್ದೆ ಸಿಕ್ಕಿರುವುದು ಈಗ ಅವರ ಅಭಿಮಾನಿಗಳ ವಲಯದಲ್ಲಿ ಸಂತಸ ತಂದಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಪ್ರಮುಖರು ಹಾಜರಿದ್ದರು.

ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023

Categories
ಕರಾವಳಿ

ದೇವರ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದವ ಅರೆಸ್ಟ್!

ದೇವರ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದವ ಅರೆಸ್ಟ್!
– ಖರ್ಚಿಗೆ ಹಣ ಕೊಡಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ
– ಕಾಪುವಿನಲ್ಲಿ ತ್ರಿವಳಿ ತಲಾಖ್ ಹೇಳಿ ಹೆಂಡತಿ ಬಿಟ್ಟ!

NAMMUR EXPRESS MANGALORE
ಮಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದೂ ದೇವರ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ಬಿಕರ್ನಕಟ್ಟೆಯ ಹಿಲ್ಡ್ ನಿವಾಸಿ ಸಲ್ಮಾನ್ (22) ಬಂಧಿತ ಆರೋಪಿ. ಸೆನ್ ಪೊಲೀಸ್ ಠಾಣೆಯಲ್ಲಿ ಹಿಂದೂ ದೇವರ ಬಗ್ಗೆ ಅಶ್ಲೀಲವಾಗಿ ಬರೆದು ಕಮೆಂಟ್ ಮಾಡಿದ ಬಗ್ಗೆ ದೂರು ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ 7ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಂಗಳೂರು: ಡಿಪ್ಲೊಮಾ ವಿದ್ಯಾರ್ಥಿ ನೇಣಿಗೆ ಶರಣು.!

ಖರ್ಚಿಗೆ ಹಣ ಕೊಡಅಲ್ಲ ಎಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಕುತ್ತಾರ್ ಸುಭಾಷನಗರದ ಭಾಸ್ಕರ್ ಪೂಜಾರಿ ಮತ್ತು ಧಾಕ್ಷಾಯಿಣಿ ಎಂಬವರ 17 ವರ್ಷ ವಯಸ್ಸಿನ ಸುಶಾಂತ್ ಎನ್ನಲಾಗಿದೆ. ಈತ ಪ್ರಥಮ ಪಿಯುಸಿಯನ್ನು ಕಪಿತಾನಿಯೋದಲ್ಲಿ ಮುಗಿಸಿದ್ದ ಮಗ ನಗರದ ಕೆಪಿಟಿಯಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಮಾಡುವ ಆಸಕ್ತಿ ವಹಿಸಿದ್ದರಿಂದ ಪೋಷಕರು ಸೇರಿಸಿದ್ದರು. ಬುಧವಾರ 500 ರೂ ಹಣ ಕೊಟ್ಟು ಕಾಲೇಜಿಗೆ ಮಗನನ್ನು ಕಳುಹಿಸಿದ್ದರು. ಗುರುವಾರ ಸಹ ಬೆಳಗ್ಗೆ ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ 500 ರೂ. ಕೊಡುವಂತೆ ಕೇಳಿದಾಗ ಪೋಷಕರು ಕೊಟ್ಟಿಲ್ಲ. ಇದರಿಂದ ಕೋಪಗೊಂಡು ಮನೆಯಲ್ಲೇ ಉಳಿದುಕೊಂಡ ಮಗ ತಂದೆ ಮನೆ ಹೊರಗಡೆ ಹಾಗೂ ತಾಯಿ ಅಡುಗೆ ಕೋಣೆಯಲ್ಲೇ ಇದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಕಾಪುವಿನಲ್ಲಿ ತ್ರಿವಳಿ ತಲಾಖ್ ಹೇಳಿ ಹೆಂಡತಿ ಬಿಟ್ಟ!

ತ್ರಿವಳಿ ತಲಾಖ್ ನಿಷೇಧಿಸಲ್ಪಟ್ಟಿದ್ದರೂ ಕಾಪುವಿನ ವ್ಯಕ್ತಿಯೊಬ್ಬ ಮೂರು ಸಲ ತಲಾಖ್ ಹೇಳಿ ಹೆಂಡತಿಯನ್ನು ಬಿಟ್ಟಿರುವ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಪು ಮಲ್ಲಾರು ಕೋಟೆಯ ಮೊಹಮ್ಮದ್ ಸಾದಿಕ್ ಎಂಬಾತ ಪತ್ನಿ ಅಸ್ಮಾಬಾನುಗೆ (37) ನಿರಂತರ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ 2006ರಲ್ಲಿ ಮದುವೆಯಾದಂದಿನಿಂದಲೇ ಹಿಂಸೆ ನೀಡಲು ತೊಡಗಿದ್ದ. ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದಾಗಲೂ ಫೋನ್ ಮಾಡಿ ಮಾನಸಿಕ ಕಿರುಕುಳ ಕೊಡುತ್ತಿದ್ದ ಹೆಂಡತಿಯನ್ನು ತವರು ಮನೆಗೆ ಹೋಗಲು ಬಿಡುತ್ತಿರಲಿಲ್ಲ, ವಿದೇಶದ ಉದ್ಯೋಗ ಹೋದ ಬಳಿಕ ವಾಪಸು ಬಂದ ಸಾದಿಕ್ ಪತ್ನಿಯ 22 ಪವನ್ ಚಿನ್ನ ಅಡವಿಟ್ಟು ವ್ಯಾಪಾರ ಪ್ರಾರಂಭಿಸಿದ್ದ ಅದನ್ನು ವಾಪಸು ಕೇಳಿದಾಗ ತಲಾಖ್ ನೀಡುವುದಾಗಿ ಬೆದರಿಸುತ್ತಿದ್ದ ಬುಧವಾರ ರಾತ್ರಿ ಇದೇ ರಿತಿ ಕಿರುಕುಳ ನೀಡಿ ನಾನು ಬೇರೆ ಮದುವೆಯಾಗುತ್ತೇನೆ, ನೀನು ಮನೆಬಿಟ್ಟು ಹೋಗು ಎಂದು ಹೇಳಿ ಮೂರು ಸಲ ತಲಾಖ್ ಹೇಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕಾಂಗ್ರೇಸ್ಸಿನ ಬೌದ್ದಿಕ ದಿವಾಳಿತನಕ್ಕೆ ಉತ್ತರ

ತೀರ್ಥಹಳ್ಳಿ ಕಾಂಗ್ರೇಸ್ಸಿನ ಬೌದ್ದಿಕ ದಿವಾಳಿತನಕ್ಕೆ ಉತ್ತರ
– ಆರಗ ಜ್ಞಾನೇಂದ್ರ ಯಾವತ್ತು ಜನ ಪರ ನಾಯಕ
– ಬಿಸಿಲಲ್ಲಿ ಸುಟ್ಟು ಕರಕಲಾಗಿದೀಯ ಅನ್ನೋದು ಜಾತಿ ಸೂಚಕ ಅಲ್ಲ: ನಿತಿನ್

NAMMUR EXPRESS NEWS
ಬಿಸಿಲಲ್ಲಿ ಸುಟ್ಟು ಕರಕಲಾಗಿದೀಯ” ಅಂತ ಯಾರಿಗಾದರೂ ಹೇಳುವುದು ಜಾತಿ ಸೂಚಕ ಪದವಾಗುತ್ತ ಅಥವಾ ಜಾತಿ ನಿಂದನೆಯಾಗುತ್ತಾ..?
ಅಷ್ಟಕ್ಕೂ ಜಾತಿ ಬಣ್ಣದ ಆಧಾರದ ಮೇಲೆ ನಿರ್ಧಾರವಾಗುವುದಿಲ್ಲ… ಮೈಬಣ್ಣದ ಕಲರ್ ನಲ್ಲೂ ದಲಿತ ಮೇಲ್ವರ್ಗ ಅನ್ನುವ ನಿಮ್ಮ ಬೌದ್ದಿಕ ದಿವಾಳಿತನಕ್ಕೆ ನಾಚಿಕೆಯಾಗಬೇಕು.‌‌‌‌‌.. ದಲಿತ ನಾಯಕ ಕಾಂಶಿ ರಾಮ್ ಕಪ್ಪಿರಲಿಲ್ಲ, ದಲಿತ ನಾಯಕ ಐಎಎಸ್ ಅಧಿಕಾರಿಯಾಗಿದ್ದ ಕಿರ್ಪ ರಾಮ್ ಪುನಿಯಾ ಕಪ್ಪಿರಲಿಲ್ಲ, ಹೀಗೆ ಕೋಟ್ಯಂತರ ಹಿಂದೂ ದಲಿತ ಸಮಾಜದ ಜನ ಬೆಳ್ಳಗಿದಾರೆ ಹಾಗೆ ನೀವೆಳುವ ಮೇಲ್ವರ್ಗದ ಜನರು ಅನೇಕರು ಕಪ್ಪಿದ್ದಾರೆ…ಹೀಗಿರುವಾಗ ಖರ್ಗೆ ಕಪ್ಪಿದ್ದಾರೆ ಹಾಗಾಗಿ ದಲಿತರೆಲ್ಲ ಕಪ್ಪು, ಕಪ್ಪು ಎನ್ನುವುದು ದಲಿತ ಸೂಚಕ ಪದ ಎಂದು ಬಿಂಬಿಸಲು ಹೊರಟ ನಿಮ್ಮದು ಬೌದ್ದಿಕ ದಿವಾಳಿತನವಲ್ಲವೇ…?

ಹಾಗೆ ಮಾನ್ಯ ಗೌರವಾನ್ವಿತ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಆರಗ ಜ್ಞಾನೇಂದ್ರರವರು ಯಾವ ಸಂದರ್ಭದಲ್ಲಿ ಈ ಮಾತು ಹೇಳಿದ್ದಾರೆ ಅನ್ನುವುದನ್ನು ಮೊದಲು ತಿಳಿದುಕೊಳ್ಳುವುದಕ್ಕೆ ಹೇಳಿ, ಜ್ಞಾನೇಂದ್ರಣ್ಣ ತಳ ಸಮುದಾಯಗಳ ಭೂ ರಹಿತರ ಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದವರು… ನಾ ನಿಮಗೆ ಧೈರ್ಯವಾಗಿ ಹೇಳ್ತೇನೆ ಅವರು ನಿಮ್ಮ ಪಿಂಕ್ ಖರ್ಗೆಗೆ ಹಾಗೂ ತೀರ್ಥಹಳ್ಳಿ ಕಾಂಗ್ರೇಸ್ಸಿಗಿಂತ ನೂರು ಪಟ್ಟು ಹೆಚ್ಚು ತಳ ಸಮುದಾಯಗಳ ಪರವಾಗಿದ್ದಾರೆ… ಹಾಗೆ ನಿಮ್ಮ ಪಿಂಕ್ ಖರ್ಗೆ ಹಾಗೂ ನಮ್ಮ ಮಾನ್ಯ ಕಿಮ್ಮನೆಯವರಂತೆ ಜ್ಞಾನೇಂದ್ರಣ್ಣ ಗೋಲ್ಡನ್ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದವರಲ್ಲ, ಬಡತನದಲ್ಲಿ ಹುಟ್ಟಿ ಬಡವರ ಪರ ದ್ವನಿ ಎತ್ತಿ ರಾಜಕರಣಕ್ಕೆ ಬಂದು ಬಡವರೇ ಅವರನ್ನು ಬೆಂಬಲಿಸಿ ಈ ಹಂತಕ್ಕೆ ಬಂದವರು ಅವರ ಬಗ್ಗೆ ಮಾತನಾಡುವ ಮುನ್ನ ಸ್ವಲ್ಪ ವಿವೇಚನೆ ಇರಲಿ… ಅದು ಬಿಟ್ಟು ಮೈ ಬಣ್ಣವನ್ನೆ ಬಂಡವಾಳ ಮಾಡಿಕೊಂಡು ರಾಜಕರಣ ಮಾಡಬೇಡಿ.

ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡುಗು, ಚಾಮರಾಜನಗರ ಜಿಲ್ಲೆಗಳ 56.678 ಚದರ ಕಿಲೋ ಮೀಟರ್ ವ್ಯಾಪ್ತಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಕಸ್ತೂರಿ ರಂಗನ್ ವರದಿಯಲ್ಲಿದೆ.
ಕಾಂಗ್ರೇಸ್ ಸರ್ಕಾರ ಸ್ವೀಕರಿಸಿದ ವರದಿಯ ಪ್ರಕಾರ ಸಂಪೂರ್ಣ ಹೊಸನಗರ, ತೀರ್ಥಹಳ್ಳಿ, ಸಾಗರ ತಾಲ್ಲೂಕುಗಳು ಈ ವ್ಯಾಪ್ತಿಗೆ ಬರುತ್ತೆ. ಸೊರಬ ಹಾಗೂ ಶಿಕಾರಿಪುರದ ಅರ್ಧದಷ್ಟು ಪ್ರದೇಶ ಈ ವ್ಯಾಪ್ತಿಗೆ ಬರುತ್ತೆ. ಈ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮನುಷ್ಯ ಚಟುವಟಿಕೆಗಳೇ ನಿಷೇಧ. ಈ ಇಷ್ಟು ಪ್ರದೇಶ ರಾಜ್ಯ ಸರ್ಕಾರದ ಹಿಡಿತ ಕೈ ತಪ್ಪಿ ಕೇಂದ್ರ ಸರ್ಕಾರದ ಅಧೀನಕ್ಕೆ ಹೋಗುತ್ತೆ… ಮನುಷ್ಯ ಹಸ್ತಕ್ಷೇಪದ ಸಂಪೂರ್ಣ ನಿಷೇದಿತ ಪ್ರದೇಶ..ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿ ಖಂಡ್ರೆಯ ಹೇಳಿಕೆಗೆ ಕ್ಷಮೆಯಾಚಿಸಬೇಕಾದ ಮಲೆನಾಡಿಗರು ಖರ್ಗೆ ಬಿಸಿಲಿಗೆ ಕಪ್ಪಾಗಿದ್ದಾರೆ ಅಂದಿದ್ದಕ್ಕೆ ಕ್ಷಮೆಯಾಚಿಸಿ ಸಂಭ್ರಮಿಸುತ್ತಿರುವ ಮಲೆನಾಡ ಕಾಂಗ್ರೇಸ್ಸಿಗರಿಗೆ ನಾಚಿಕೆಯಾಗಬೇಕಲ್ಲ.

ನಗರ ನಿತಿನ್
ಅಧ್ಯಕ್ಷರು ಬಿಜೆಪಿ ಯುವಮೋರ್ಚಾ
ಹೊಸನಗರ ತಾಲ್ಲೂಕು

ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023

Categories
ಇತರೆ ಸುದ್ದಿ

ಫೋಟೋ ತೆಗೆಯುವ ವೇಳೆ ನೀರಿಗೆ ಬಿದ್ದ ಪ್ರವಾಸಿಗ ನಾಪತ್ತೆ

ಸೆಲ್ಫಿ ಹುಚ್ಚಿಗೆ ಮತ್ತೊಬ್ಬ ಬಲಿ!?
– ಫೋಟೋ ತೆಗೆಯುವ ವೇಳೆ ನೀರಿಗೆ ಬಿದ್ದ ಪ್ರವಾಸಿಗ ನಾಪತ್ತೆ
– ಕೊಡಗಿನ ಹಾರಂಗಿ ಜಲಾಶಯದ ಸೇತುವೆ ಬಳಿ ಘಟನೆ

NAMMUR EXPRESS NEWS
ಕುಶಾಲನಗರ: ಇತ್ತೀಚಿಗೆ ಕೊಲ್ಲೂರು ಸಮೀಪದ ಅರಿಶಿಣ ಗುಂಡಿ ಫಾಲ್ಸ್ ಅಲ್ಲಿ ಸೆಲ್ಫಿ ತೆಗೆಯಲು ಹೋಗಿ ಓರ್ವ ಮೃತಪಟ್ಟ ಘಟನೆ ನಡುವೆ ಹಾರಂಗಿ ಜಲಾಶಯದ ಕೆಳಭಾಗದ ಸೇತುವೆ ಮೇಲೆ ಗುರುವಾರ ಸಂಜೆ ಓರ್ವ ಹಾಗೆಯೇ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾನೆ. ಸೆಲ್ಸಿ ತೆಗೆದುಕೊಳ್ಳುತ್ತಿದ್ದ ಬೆಂಗಳೂರಿನ ವಿದ್ಯಾರಣ್ಯಪುರಂ ಸಂದೀಪ (46) ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಟ್ಯಾಟೊ ಕಲಾವಿದರಾಗಿದ್ದು, ಸಾಕುನಾಯಿಗಳ ಮಾರಾಟವನ್ನೂ ಮಾಡುತ್ತಿದ್ದ ಸಂದೀಪ ಅವರು, ಮೂವರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದರು ಎನ್ನಲಾಗಿದೆ.

ಪ್ರವಾಸಿಗರೇ ಜೀವ ದೊಡ್ಡದು!

ಪ್ರವಾಸಿಗರೇ ಎಚ್ಚರ ಒಂದು ಕ್ಷಣದ ಖುಷಿಗಾಗಿ ಜೀವ, ಜೀವನ ಕಳೆದುಕೊಳ್ಳಬೇಡಿ. ಅಪಾಯದ ಜಾಗದಲ್ಲಿ ಜಾಗೃತರಾಗಿರಿ.

ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ ರಾಜಕೀಯ ರಾಜ್ಯ

ಆಡು ಭಾಷೆಯೇ ಆರಗಗೆ ಕಂಟಕ!?

ಆಡು ಭಾಷೆಯೇ ಆರಗಗೆ ಕಂಟಕ!?
– ಪದೇ ಪದೇ ವಿವಾದದತ್ತ: ಆರಗ ಹೇಳೋದೇನು?
– ಖರ್ಗೆ ಅವರ ಬಗ್ಗೆ ಗೌರವವಿದೆ: ಆರಗ ಸ್ಪಷ್ಟನೆ

NAMMUR EXPRESS NEWS
ತೀರ್ಥಹಳ್ಳಿ: ( Thirthahalli news ) ತೀರ್ಥಹಳ್ಳಿಯಲ್ಲಿ ಬಿಜೆಪಿ ವತಿಯಿಂದ ನಡೆದ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಆಡಿದ ಮಾತು ಇದೀಗ ಭಾರೀ ವಿವಾದಕ್ಕೆ ಕಾರಣ ಆಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮರ ಗಿಡ ಎನ್ನುವುದರ ಬಗ್ಗೆ ಗೊತ್ತಿಲ್ಲ ಮರದ ನೆರಳಿನ ಮಹತ್ವ ಗೊತ್ತಿಲ್ಲ. ಸುಟ್ಟು ಕರ್ಕಲಾದಂತೆ ಇರುತ್ತಾರೆ. ನಮ್ಮ ಖರ್ಗೆ ಅವರನ್ನು ನೋಡಿದರೆ ಗೊತ್ತಾಗುತ್ತೆ ಪಾಪ, ತಲೆ ಕೂದಲು ಮುಚ್ಚಿಕೊಂಡಿದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದ್ದರಿಂದ ಅವರಿಗೆ ಮಲೆನಾಡು ಮತ್ತು ಪಶ್ಚಿಮ ಘಟ್ಟದ ಬದುಕು ಅವರಿಗೆ ಗೊತ್ತಿಲ್ಲ ಎಂದು ಸಭೆಯಲ್ಲಿ ಹೇಳಿದ್ದರು.

ಆದರೆ ಜ್ಞಾನೇಂದ್ರ ಅವರು ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಮಲೆನಾಡಿಗರಿಗೆ ಶಾಪವಾಗಿರುವ ಕಸ್ತೂರಿರಂಗನ್ ವಿಚಾರದ ಮಾತಿನ ಬರದಲ್ಲಿ ಬಾಯಿ ತಪ್ಪಿನಿಂದ ಹೇಳಿದ್ದೇನೆ ಹೊರತು ಖಂಡ್ರೆ ಅವರಿಗಾಗಲಿ ಖರ್ಗೆಯವರಿಗಾಗಲಿ ಗೌರವಕ್ಕೆ ಧಕ್ಕೆ ಆಗುವಂತಹ ಮಾತು ಆಡಿಲ್ಲ, ಮಲ್ಲಿಕಾರ್ಜುನ ಖರ್ಗೆಯವರ ಹಿರಿತನಕ್ಕೆ ಅವರ ಮೇಲೆ ಅಪಾರವಾದ ಗೌರವವಿದೆ ಅನಗತ್ಯ ಈ ವಿಚಾರವನ್ನು ಗೊಂದಲಕ್ಕೆ ಸೃಷ್ಟಿಸಿದ್ದಾರೆ ಎಂಬುದಾಗಿ ಶಾಸಕ ಆರಗ ಜ್ಞಾನೇಂದ್ರ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಸಚಿವರಾಗಿದ್ದಾಗಿನಿಂದ ಒಂದಲ್ಲ ಒಂದು ಗೊಂದಲ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗುವ ಆರಗ ಜ್ಞಾನೇಂದ್ರ ಅವರ ಆಡು ಭಾಷೆಯೇ ಅವರಿಗೆ ಕಂಟಕ ಆಗುತ್ತಿದೆ. ಹೇಳಬೇಕು ಎಂದು ಹೇಳುವಷ್ಟು ಕೆಟ್ಟ ವ್ಯಕ್ತಿಯೂ ಜ್ಞಾನೇಂದ್ರ ಅಲ್ಲ, ಆದರೆ ಮಾತಿನ ಭರಾಟೆಯಲ್ಲಿ ಅವರ ಮಾತಿನ ಹಾದಿ ತಪ್ಪಿದೆ. ಶುಕ್ರವಾರ ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ಕರೆದಿರುವ ಆರಗ ಜ್ಞಾನೇಂದ್ರ ಈ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ.

ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023