Categories
ಉಡುಪಿ ಕರಾವಳಿ ಮಂಗಳೂರು

ಕರಾವಳಿ ಆಗ್ತಿದೆ ಡ್ರಗ್ಸ್ ಸೆಂಟರ್!?

ಕರಾವಳಿ ಆಗ್ತಿದೆ ಡ್ರಗ್ಸ್ ಸೆಂಟರ್!?
– ಗಾಂಜಾ, ಡ್ರಗ್ಸ್ ಜಾಲ: ನಾಲ್ವರು ಅರೆಸ್ಟ್
– ಹಿಂದೂ ಹುಡುಗಿ ಆಟೋದಲ್ಲಿ ಕೂರಿಸಿದ್ದಕ್ಕೆ ಹಲ್ಲೆ!

NAMMUR EXPRESS NEWS
ಮಂಗಳೂರು/ಉಡುಪಿ: ಕರಾವಳಿ ಆಗ್ತಿದೆಯಾ ಡ್ರಗ್ಸ್ ಸೆಂಟರ್!. ಹೌದು. ದಿನೇ ದಿನೇ ಹೆಚ್ಚಾಗುತ್ತಿದೆ ಗಾಂಜಾ, ಡ್ರಗ್ಸ್ ಜಾಲ. ಕರಾವಳಿಯ ಪ್ರತಿ ತಾಲೂಕಲ್ಲೂ ಈ ಜಾಲ ಕೆಲಸ ಮಾಡುತ್ತಿದೆ. ಕರಾವಳಿಯಲ್ಲಿ ವಿವಿಧ ದೇಶ, ರಾಜ್ಯಗಳಿಂದ ವಿದ್ಯಾರ್ಥಿಗಳು ಕರಾವಳಿಗೆ ಆಗಮಿಸುತ್ತಾರೆ. ಈ ಹಿನ್ನೆಲೆ ಅವರನ್ನು ಸೆಳೆಯುವ ಯತ್ನ ನಡೆಯುತ್ತಿದೆ.

ಕಾರಲ್ಲಿ ಚರಸ್ ಸಾಗಾಟ: ಆರೋಪಿ ಅರೆಸ್ಟ್

ಕಾರಲ್ಲಿ ನಿಷೇಧಿತ ಮಾದಕ ವಸ್ತು ಚರಸ್ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರಲ್ಲಿ ಬಂಧಿಸಲಾಗಿದೆ. ಅಬ್ದುಲ್ ಅಝೀಝ್(34), ಬಂಧಿತ ವ್ಯಕ್ತಿ. ಈತನಿಂದ 230.4 ಗ್ರಾಂ ತೂಕದ ಚರಸ್ ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ನಿಂಗ್ ಸ್ಟಾರ್ ಶಾಲೆಯ ಬಳಿ ಆ.1ರಂದು ಮುಂಜಾವ 3:15ರ ಸುಮಾರಿಗೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಬರುತ್ತಿದ್ದ ಕಾರನ್ನು ಪೊಲೀಸರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಅದರ ಚಾಲಕ ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದಾನೆ.
ಬಳಿಕ ಕಾರನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದಾಗ 230.4 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತು ಚರಸ್ ಪತ್ತೆಯಾಗಿದೆ. ಕಾರು ಹಾಗೂ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರಿನಲ್ಲಿದ್ದ ಇನ್ನಿತರ ಆರೋಪಿತರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮಂಗಳೂರಲ್ಲಿ ಡ್ರಗ್ ಪಡ್ಲೆರ್‌ಗಳ ಅರೆಸ್ಟ್!

ಮಂಗಳೂರು ಸಿಸಿಬಿ ಪೊಲೀಸರು ಬುಧವಾರ ನಡೆಸಿದ ಕಾರ್ಯಚರಣೆಯಲ್ಲಿ ಮಾದಕ ವಸ್ತು ‘ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲ‌ರ್ ಗಳನ್ನು ಬಂಧಿಸಿದ್ದಾರೆ.ಮೂಲತಃ ಸಜಿಪ ಮುನ್ನೂರು ಗ್ರಾಮದ ಪ್ರಸ್ತುತ ಉಳ್ಳಾಲದ ಹಫೀಝ್ ಯಾನೆ ಅಪ್ಪಿ(35), ಸಜಿಪ ಮುನ್ನೂರಿನ ಅಮೀರ್ ಯಾನೆ ಅಮ್ಮಿ(34), ಸಜಿಪ ಮುನ್ನೂರಿನ ಜಾಕಿರ್ ಹುಸೇನ್ ಯಾನೆ ತಾಚ್ಚಿ (28) ಬಂಧಿತ ಆರೋಪಿಗಳು. ಉಳ್ಳಾಲ ತಾಲೂಕಿನ ತಲಪಾಡಿ-ದೇವಿಪುರ ರಸ್ತೆಯಲ್ಲಿನ ತಚ್ಚಾಣಿ ಪರಿಸರದಲ್ಲಿ ಕಾರಿನಲ್ಲಿ ಮೂವರು ಮಾದಕ ವಸ್ತುವಾದ ಎಂಡಿಎಂಎಯನ್ನು ಬೆಂಗಳೂರಿನಿಂದ ಖರೀದಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದರಲ್ಲದೆ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, 200 ಗ್ರಾಂ ತೂಕದ 10,00,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, 3 ಮೊಬೈಲ್, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 15,70,500 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಉಳ್ಳಾಲಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪೈಕಿ ಹಫೀಝ್ ಯಾನೆ ಅಪ್ಪಿ ಎಂಬಾತನ ವಿರುದ್ಧ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಹಾಗೂ ಇತರ 3 ದರೋಡೆ ಪ್ರಕರಣಗಳು, ಬಜ್ಜೆಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ, ಪಾಂಡೇಶ್ವರ ಠಾಣೆಯಲ್ಲಿ 2 ಬೈಕ್ ಕಳವು ಪ್ರಕರಣಗಳು, ಉಡುಪಿ ಜಿಲ್ಲೆಯ ಶಿರ್ವಾ ಹಾಗೂ ಪಡುಬಿದ್ರಿ ಠಾಣೆಯಲ್ಲಿ ಕಳವು ಪ್ರಕರಣಗಳ ಸಹಿತ 8 ಪ್ರಕರಣಗಳು ದಾಖಲಾಗಿವೆ.

ಇಸ್ಪೇಟ್ ಅಡ್ಡೆ ಮೇಲೆ ದಾಳಿ: ಬಂಧನ

ಮೂಡುಬಿದಿರೆ ಠಾಣಾ ವ್ಯಾಪ್ತಿಯ ಅಲಂಗಾರ್, ಕಾನ ಗುಡ್ಡೆ ಎಂಬಲ್ಲಿ ಬುಧವಾರ ರಾತ್ರಿ 10.30ರವೇಳೆಗೆ ಜೂಜಾಟ ನಡೆಸುತ್ತಿದ್ದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 18,340 ರೂ. ಮತ್ತು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಿಂದೂ ಹುಡುಗಿ ಆಟೋದಲ್ಲಿ ಕೂರಿಸಿದ್ದಕ್ಕೆ ಹಲ್ಲೆ!

ಆಟೋದಲ್ಲಿ ಹಿಂದೂ ಯುವತಿಯನ್ನು ಕೂರಿಸಿಕೊಂಡಿದ್ದ ಆಟೋ ಚಾಲಕನ ಮೇಲೆ ಅಪರಿಚಿತ ತಂಡ ಥಳಿಸಿದ ಘಟನೆ ಧರ್ಮಸ್ಥಳ ದ್ವಾರದ ಬಳಿ ನಡೆದಿದೆ. ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್ (22) ಹಲ್ಲೆಗೊಳಗಾದ ಚಾಲಕನಾಗಿದ್ದು, ಉಜಿರೆಯಲ್ಲಿ ಓದುತ್ತಿರುವ ವಿಧ್ಯಾರ್ಥಿನಿ ಬೆಂಗಳೂರಿಗೆ ತೆರಳುವ ಸಂದರ್ಭ ಉಜಿರೆ ದ್ವಾರದ ಎದುರು ನಿಂತು ಪರಿಚಯಸ್ಥನಾಗಿದ್ದ ಆಟೋ ಚಾಲಕನಿಗೆ ಕರೆ ಮಾಡಿದ್ದು, ಆತ ಬಂದು ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಆ.2ರಂದು ರಾತ್ರಿ ಸುಮಾರು 9 ಗಂಟೆಗೆ ಡ್ರಾಪ್ ಮಾಡಿ ಹೊರಡುವಾಗ ಅಪರಿಚಿತ ಯುವಕರ ತಂಡ ಥಳಿಸಿದ್ದಾರೆ ಎನ್ನಲಾಗಿದೆ. ಯುವಕ ಸದ್ಯ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಹುಬ್ಬಳ್ಳಿ

ಬಸ್ಸಿನ ಬಾಗಿಲಿಗೆ ಜೋತು ಬಿದ್ದು ಹೋಗುತ್ತಿರುವ ವಿದ್ಯಾರ್ಥಿಗಳು

ಬಸ್ಸಿನ ಬಾಗಿಲಿಗೆ ಜೋತು ಬಿದ್ದು ಹೋಗುತ್ತಿರುವ ವಿದ್ಯಾರ್ಥಿಗಳು
– ಕಿತ್ತೂರು ಹಾಗೂ ಎಂ.ಕೆ. ಹುಬ್ಬಳ್ಳಿ ಪಟ್ಟಣದಿಂದ ಶಾಲಾ, ಕಾಲೇಜುಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ಕಿತ್ತೂರು ಹಾಗೂ ಎಂ ಕೆ ಹುಬ್ಬಳ್ಳಿ ಪಟ್ಟಣದಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಬೆಳಗಾವಿ, ಧಾರವಾಡ ಕಾಲೇಜುಗಳಿಗೆ ಹೋಗುತ್ತಾರೆ. ಆದರೆ ಬಸ್ ಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ, ಒಂದು ವೇಳೆ ಬಸ್ ಬಂದರು ಕೂಡ ಬಸ್ಸಿನ ತುಂಬಾ ಜನರನ್ನು ತುಂಬಿಕೊಂಡು ಬರುತ್ತವೆ. ವಿದ್ಯಾರ್ಥಿಗಳಿಗೆ ಬಸ್ ನಲ್ಲಿ ಹತ್ತಲು ಕೂಡ ಸ್ಥಳ ಇರುವುದಿಲ್ಲ. ಬಸ್ಸಿನ ಬಾಗಿಲಿಗೆ ಜೋತು ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಿ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ರಾಜ್ಯ

ರಾಜ್ಯಕ್ಕೆ ಬರುತ್ತಾ ಬರಗಾಲ?!

ರಾಜ್ಯಕ್ಕೆ ಬರುತ್ತಾ ಬರಗಾಲ?!
– ಒಂದು ವಾರದಿಂದ ಎಲ್ಲಾ ಕಡೆ ಮಳೆ ಕಡಿಮೆ
– ಇನ್ನೆರಡು ತಿಂಗಳು ಮಳೆ ಕೊರತೆ ಸಾಧ್ಯತೆ!
– ಕೃಷಿ ಮತ್ತು ನೀರಾವರಿ ಮೇಲೆ ಎಫೆಕ್ಟ್?

NAMMUR EXPRESS NEWS
ಬೆಂಗಳೂರು: ಜುಲೈನಲ್ಲಿ ಸುರಿದ ಭಾರಿ ಮಳೆ ಜನರ ನೆಮ್ಮದಿಗೆ ಕಾರಣವಾಗಿತ್ತು. ಆದರೆ ಕಳೆದೊಂದು ವಾರದಿಂದ ರಾಜ್ಯದ ಯಾವ ಭಾಗದಲ್ಲೂ ಹೆಚ್ಚು ಮಳೆಯಾಗಿಲ್ಲ. ಹೀಗೆ ಮುಂದುವರಿದರೆ ಮುಂದೆ ಭಾರೀ ಕಷ್ಟ ಆಗಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ನೈರುತ್ಯ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ ಆಗಲಿದ್ದು, ತಾಪಮಾನ ತೀವ್ರವಾಗಿ ಏರಿಕೆಯಾಗಲಿದೆ. ಮಳೆ ಕಡಿಮೆಯಾಗಿ ಒಣ ಹವೆ ಬೀಸಿದರೆ ರಾಜ್ಯದ ವಿವಿಧ ಬೆಳೆಗಳ ಇಳುವರಿ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮಳೆ ಕಡಿಮೆ ಇದ್ದರೂ ಮಳೆ ಹಂಚಿಕೆ ವ್ಯಾಪಕವಾಗಿದ್ದರೆ ಇಳುವರಿ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಇನ್ನು ಮಳೆ ಇನ್ನು ಹೆಚ್ಚಾಗಿ ಆಗದ ಕಾರಣ ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ.

ರಾಜ್ಯದಲ್ಲಿ ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕುಸಿತ ಆಗಲಿದೆ. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಮುನ್ಸೂಚನೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುವುದರ ಜತೆಗೆ ಉಷ್ಣಾಂಶವೂ ಏರಿಕೆಯಾಗಲಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾದರೆ ಮಾತ್ರ ರಾಜ್ಯದಲ್ಲಿ ಇಡೀ ವರ್ಷ ಕೃಷಿಗೆ ಮತ್ತು ಕುಡಿಯುವ ಉದ್ದೇಶಕ್ಕೆ ತೊಂದರೆ ಆಗುವುದಿಲ್ಲ. ಇಲ್ಲವಾದರೆ ಸಂಕಷ್ಟಕ್ಕೆ ಸಿಲುಕಬಹುದು ಹಾಗೂ ನೆರೆಯ ತಮಿಳುನಾಡು ಕೂಡ ಕಾವೇರಿಯಿಂದ ನೀರು ಬಿಡುವಂತೆ ಒತ್ತಡವನ್ನು ಇನ್ನಷ್ಟು ಹೆಚ್ಚಿಸಲಿದೆ ಎನ್ನುತ್ತಾರೆ ತಜ್ಞರು.

ಕಳೆದ ವರ್ಷ ಕುಡಿಯಲು, ಕೃಷಿಗೆ ನೀರು ಇರಲಿಲ್ಲ!

ಕಳೆದ ವರ್ಷ ಕುಡಿಯುವ ಮತ್ತು ಕೃಷಿ ಎರಡಕ್ಕೂ ನೀರಿನ ಕೊರತೆ ಆಗಿತ್ತು. ಈ ವರ್ಷ ಹಾಗೆ ಆದರೆ ಜನರಿಗೆ ಭಾರೀ ತೊಂದರೆ ಆಗಲಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
Uncategorized

ಸಾಲ ಬಾಧೆ : ರೈತ ಆತ್ಮಹತ್ಯೆ ಸಿಂದಗಿ ತಾಲೂಕಿನ ಅಂತರಗಂಗಿ  ಗ್ರಾಮದ ರೈತ

ಸಾಲ ಬಾಧೆ : ರೈತ ಆತ್ಮಹತ್ಯೆ ಸಿಂದಗಿ ತಾಲೂಕಿನ ಅಂತರಗಂಗಿ  ಗ್ರಾಮದ ರೈತ
– ಒಕ್ಕಲುತನ ಮಾಡುತ್ತಿದ್ದ  ರೈತ ಉತ್ತಮ  ಬೆಳೆ ನೀರಿಕ್ಷೆಯಲ್ಲಿದ್ದ
– ತಕ್ಕ ಮಟ್ಟಿಗೆ ಬೆಳೆ ಬರದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಿಂದಗಿ :  ಬೆಳೆ ನಂಬಿಕೊಂಡ ರೈತನಿಗೆ ಸರಿಯಾದ ಇಳುವರಿ ಸಿಗದ ಹಿನ್ನಲೆ ಫಸಲಿನ ಮೇಲೆ ಹೂಡಿಕೆ ಮಾಡಿದ ಹಣ ಸಾಲವಾಗಿ ಪರಿವರ್ತನೆಗೊಂಡಿದೆ. ಕಾರಣ ಸಿಂದಗಿ ತಾಲೂಕಿನ ಅಂತರಗಂಗಿ ಗ್ರಾಮದ ರೈತನೋರ್ವ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ . ಸಂಜಯಕುಮಾರ ಭವಾನೆಪ್ಪ ಮಾಶ್ಯಾಳ (34) ಮೃತ ದುರ್ದೈವಿ ಅಂತರಗಂಗಿ ಗ್ರಾಮದಲ್ಲಿ 3 ಎಕರೆ 12 ಗುಂಟೆ ಜಮೀನಿನಲ್ಲಿ ಒಕ್ಕಲುತನವನ್ನು ನೆಚ್ಚಿಕೊಂಡ ಸಂಜಯಕುಮತ ರೈತಾಪಿ ಜೀವನ ನಡೆಸುತ್ತಿದ್ದ ಮಾಡಬಾಳ ಗ್ರಾಮದಲ್ಲಿರುವ ಪಿ.ಕೆ.ಪಿ.ಎಸ್ ಬ್ಯಾಂಕನಲ್ಲಿ  ಎರಡು ಲಕ್ಷ ರೂ ಹಾಗೂ 2021ರಲ್ಲಿ ಅದೇ ಬ್ಯಾಂಕಿನಲ್ಲಿ ಮೂರು ಲಕ್ಷ ಐವತ್ತು ಸಾವಿರ ರೂ ಗಳ ಸಾಲ ಮಾಡಿ ಸುಮಾರು ನಾಲ್ಕು ಕೊಳವೆಬಾವಿ ಕೋರಿಸಿದ್ದನು.

ಆದರೆ ಒಂದರಲ್ಲಿಯು ನೀರು ಬಾರದ ಕಾರಣ ತಕ್ಕ ಮಟ್ಟಿಗೆ ಫಸಲು ಕೈಗೆ ಬರಲಿಲ್ಲ ಆದ್ದರಿಂದ ಮನನೊಂದು ತೋಟದ ಮನೆಯ ಪಡಸಾಲೆಯಲ್ಲಿ  ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 4 ಗಂಟೆಯ ವರೆಗಿನ ಸಮಯದಲ್ಲಿ ಘಟನೆ ನಡೆದಿರಬಹುದೆಂದು ಎಂಬ ಮಾಹಿತಿ ಲಭ್ಯವಾಗಿದೆ.  ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಮಾಹಿತಿ ರಾಜ್ಯ

ದೇಶ ಕಂಡ ಖಡಕ್ ಸಿಎಂ ಸಿದ್ದರಾಮಯ್ಯ!

ದೇಶ ಕಂಡ ಖಡಕ್ ಸಿಎಂ ಸಿದ್ದರಾಮಯ್ಯ!
– ಬಡವರು, ಶೋಷಿತರ, ನೊಂದವರ ದನಿ
– ಊಟಕ್ಕೂ ಇಲ್ಲದ ವ್ಯಕ್ತಿ ಸಿಎಂ ಆಗಿದ್ದೆ ರೋಚಕ ಸ್ಟೋರಿ!

NAMMUR EXPRESS NEWS
14 ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಬರೆದ ಅಹಿಂದ ನಾಯಕ ಎಂದೆ ಹೆಸರುವಾಸಿಯಾದ ಸಿದ್ದರಾಮಯ್ಯ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಮೈಸೂರು ಜಿಲ್ಲೆಯ ಸಿದ್ದರಾಮನ ಹುಂಡಿಯಲ್ಲಿ ಬಡ ರೈತ ಸಿದ್ದರಾಮೇಗೌಡ ಮತ್ತು ಬೋರಮ್ಮ ದಂಪತಿಗೆ 2ನೇ ಸುಪುತ್ರರಾಗಿ ಜನಿಸಿದ್ದರು.

ದಿಟ್ಟ ಹೆಜ್ಜೆಯ ನಾಯಕ!

ದೃಢತೆ ದಿಟ್ಟ ನಿಲುವಿನ ಮೂಲಕ ಹೆಸರುವಾಸಿಯಾದ ಸಿದ್ದರಾಮಯ್ಯರವರು ತಮ್ಮದೆಯಾದ ವಿಶಿಷ್ಟ ಛಾಪನ್ನು ರಾಜಕೀಯ ಜೀವನದಲ್ಲಿ ಮೂಡಿಸುತ್ತಿದ್ದಾರೆ. ಇವರು ಪ್ರಸ್ತುತ ರಾಷ್ಟೀಯ ಪಕ್ಷವಾದ ಕಾಂಗ್ರೆಸ್ ನಿಂದ ತಮ್ಮ ಅಧಿಕಾರದ ಚುಕ್ಕಾಣಿ ಹಿಡಿದ ಇವರು ತಮ್ಮ ದೂರ ದೃಷ್ಟಿಯ ಕಾರಣದಿಂದ ತಮ್ಮ ರಾಜಕೀಯ ಜೀವನವನ್ನು ಯಶಸ್ವಿಯಾಗಿ ನಡೆಸುತ್ತ ಬಂದಿದ್ದಾರೆ.

1978ವರೆಗೆ ವಕೀಲ ವೃತ್ತಿಯಲ್ಲಿ ನಿರತರಾದ ಇವರು ಭಾರತೀಯ ಲೋಕದಳದಿಂದ 1983ರಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಉಪಮುಖ್ಯ ಮಂತ್ರಿ, ಹಣಕಾಸು ಮಂತ್ರಿಯಾಗಿ , ರೇಷ್ಮೆ ಮತ್ತು ಸಾರಿಗೆ ಸಚಿವರಾಗಿ, ಪಶುಸಂಗೋಪನೆ ಮಂತ್ರಿಯಾಗಿ ಹೀಗೆ ನಾನಾ ಉನ್ನತ ಸ್ಥಾನವನ್ನು ನಿಭಾಯಿಸಿದ್ದಾರೆ. 2013ರಿಂದ 2018ರವರೆಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 5 ವರ್ಷಗಳ ಕಾಲ ಪೂರ್ಣ ಅವಧಿಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಹೆಗ್ಗಳಿಕೆ ಇವರಿಗಿದೆ. ಇದೀಗ ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.

ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಅನ್ನಭಾಗ್ಯ ಜನ್ಮ ತಾಳಿತು. ಆ ಬಳಿಕ ಕ್ಷೀರಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಸೇರಿದಂತೆ ಪ್ರಣಾಳಿಕೆಯ 160ಕ್ಕೂ ಹೆಚ್ಚು ಭರವಸೆಗಳ ಪೈಕಿ 158 ನ್ನು ಈಡೇರಿಸಿದರು. 2023ರ ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರ ನಾಯಕತ್ವವನ್ನು ಒಪ್ಪಿ ಜನ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. 5 ಗ್ಯಾರಂಟಿ ಯೋಜನೆ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಹಣಕಾಸು ಸಚಿವರಾಗಿ 14 ಬಾರಿ ಬಜೆಟ್ ಮಂಡನೆ ಮಾಡಿ ಕರ್ನಾಟಕದ ರಾಜಕೀಯದಲ್ಲಿ ಇತಿಹಾಸವನ್ನು ಬರೆದಿದ್ದಾರೆ. ಹೀಗೆ ತನ್ನದೇ ಆದ ಕಾರ್ಯದಕ್ಷತೆಯಿಂದ ಎಲ್ಲರಿಗಿಂತ ಭಿನ್ನವಾಗಿದ್ದಾರೆ ಸಿದ್ದರಾಮಯ್ಯ.

ಸಮಾಜವಾದಿ ಚಳವಳಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮಮನೋಹರ ಲೋಹಿಯಾ ಅವರಿಂದ ಪ್ರೇರಿತರಾಗಿ ರಾಜಕೀಯ ಪ್ರವೇಶ ಮಾಡಿದವರು. ಇದ್ದಿದ್ದನ್ನು ಇದ್ದ ಹಾಗೆ ಹೇಳೋದು ಇವರ ಚಾತಿ.

ಭ್ರಷ್ಟಾಚಾರ ರಹಿತ ರಾಜಕಾರಣಿ!

ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಎಲ್ಲವೂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಸಿದ್ದರಾಮಯ್ಯ ಕರ್ನಾಟಕದ “ನಾನ್ ಕರಪ್ಟ್ ರಾಜಕಾರಣಿಗಳ ಪೈಕಿ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು. ಸಿದ್ದರಾಮಯ್ಯ ಎಂದಾಕ್ಷಣ ಮೇಲ್ನೋಟಕ್ಕೆ “ಅಹಿಂದ ನಾಯಕ ಎಂದು ಬಿಂಬಿತವಾದರೂ ಎಲ್ಲ ವರ್ಗದ ಬಡವರ ಬಗ್ಗೆ ಪ್ರೀತಿ ಇಟ್ಟುಕೊಂಡಿರುವವರು ಸಿದ್ದರಾಮಯ್ಯ.
ಕುವೆಂಪು, ಬಸವಣ್ಣ, ಅಂಬೇಡ್ಕರ್ ಸಿದ್ಧಾಂತದಲ್ಲಿ ನಂಬಿಕೆಯುಳ್ಳ ಸಂವಿಧಾನವೇ ಶ್ರೇಷ್ಠ ಎಂದು ಸರ್ವಕಾಲಕ್ಕೂ ಪ್ರತಿಪಾದಿಸುವ ನಾಯಕ, ದೇವರಾಜ ಅರಸು ಅವರ ನಂತರ ಅಹಿಂದ ವರ್ಗಕ್ಕೂ ದೊಡ್ಡ ಮಟ್ಟದಲ್ಲಿ ಶಕ್ತಿ ತುಂಬಿದವರು ಸಿದ್ದರಾಮಯ್ಯ.

ಸಿದ್ದರಾಮಯ್ಯ ಊಟಕ್ಕೂ ಪರದಾಟ ನಡೆಸಿದವರು!

ಸಿದ್ದರಾಮಯ್ಯ ಅವರು ಮೂಲತಃ ಹಳ್ಳಿಗಾಡಿನ ಹಿನ್ನೆಲೆಯ ಬಡ ರೈತನ ಕುಟುಂಬದಿಂದ ಬಂದವರು. ಅವರೇ ಸಾಕಷ್ಟು ಬಾರಿ ಹೇಳಿಕೊಂಡಿರುವಂತೆ ಉನ್ನತ ವ್ಯಾಸಂಗ ಮಾಡುವಾಗ ಹಾಸ್ಟೆಲ್‌ನಲ್ಲಿ ಕೊಠಡಿ ಸಿಗದೆ ಪ್ರತ್ಯೇಕ ರೂಂ ಮಾಡಿಕೊಂಡು ಹೋಟೆಲ್‌ನಲ್ಲಿ ಸಾಂಬಾರ್ ತಂದು ಅನ್ನ ಮಾಡಿಕೊಂಡು ಊಟ ಮಾಡಿ ಶಿಕ್ಷಣ ಪೂರೈಸಿದವರು. ಸಿದ್ದರಾಮಯ್ಯ ರಾಜಕಾರಣಕ್ಕೆ ಬರಬೇಕು ಎಂದು ಬಯಸಿ ಬಂದವರಲ್ಲ. ವಕೀಲಿ ವೃತ್ತಿ ಆಯ್ಕೆ ಮಾಡಿಕೊಂಡು ತಾಲೂಕು ಬೋರ್ಡ್ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿ ಆರ್ಥಿಕ ತಜ್ಞರೇ ಅಚ್ಚರಿಗೊಳ್ಳುವಂತೆ ದಾಖಲೆಯ 14 ಬಾರಿ ಬಜೆಟ್ ಮಂಡಿಸಿ ರಾಜ್ಯದ ಆರ್ಥಿಕತೆ ಹಳಿ ತಪ್ಪದಂತೆ ನೋಡಿಕೊಂಡವರು.

45 ವರ್ಷದ ಸಾರ್ವಜನಿಕ ಜೀವನ

ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ಸಿದ್ಧಾಂತದಿಂದ ಪ್ರಭಾವಿತರಾದವರು ಸಿದ್ದರಾಮಯ್ಯ. ರಾಜಕೀಯ ಪ್ರವೇಶ ಆಕಸ್ಮಿಕ. ಕಾನೂನು ಪದವಿ ನಂತರ ಮೈಸೂರು ಕೋರ್ಟ್ ನಲ್ಲಿ ವಕೀಲರಾಗಿ ಕಾರ್ಯನಿರ್ವ ಹಿಸುವ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ನಂಜುಂಡಸ್ವಾಮಿಯವರು ಸಿದ್ದರಾಮಯ್ಯ ಅವರ ಮಾತಿನ ಶೈಲಿ, ಹೋರಾಟ ಸ್ವಭಾವ, ಬಡವರು, ರೈತರ ಪರ ಬದ್ಧತೆ ನೋಡಿ ರಾಜಕೀಯ ಕ್ಷೇತ್ರಕ್ಕೆ ಇಳಿಯುವಂತೆ ನೀಡಿದ ಪ್ರೇರಣೆಯಿಂದ ರಾಜಕಾರಣಕ್ಕೆ ಪ್ರವೇಶ ಮಾಡಿ 45 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ.

ಸಿದ್ದರಾಮಯ್ಯ
ಕರ್ನಾಟಕದ 24ನೇ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ 76ನೇ ವರ್ಷದ ಜನ್ಮದಿನ ಶುಭಾಶಯಗಳು.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಬೈಕ್ ವಶ : ಕೋರ್ಟ್ 5000 ರೂ. ಫೈನ್

ಬೈಕ್ ರೇಸಿಂಗ್ ಮಾಡ್ತೀರಾ… ಕೋರ್ಸ್ ಹಾಕುತ್ತೆ ದಂಡ!
– ತೀರ್ಥಹಳ್ಳಿಯಲ್ಲಿ ಬೈಕ್ ವಶ: ಕೋರ್ಟ್ 5000 ರೂ. ಫೈನ್
– ಬೈಕಲ್ಲಿ ಹಿಮ್ಮುಖ ಚಾಲನೆ, ಕರ್ಕಶ ಶಬ್ದ, ಅತೀ ವೇಗ
– ಹೆಲ್ಮೆಟ್, ಇನ್ಶೂರೆನ್ಸ್ ಇಲ್ಲದವರಿಗೂ ಬೀಳುತ್ತೆ ದಂಡ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಳ್ಳಿ ಪಟ್ಟಣದಲ್ಲಿ ಬೈಕ್ ರೇಸಿಂಗ್ ಮಾಡುತ್ತಿದ್ದವರ ಮೇಲೆ ಇದೀಗ ಪೊಲೀಸ್ ಇಲಾಖೆ ಖಡಕ್ ಕ್ರಮ ತೆಗೆದುಕೊಂಡಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಬೈಕ್ ರೇಸಿಂಗ್ ಮಾಡಿದ್ದ ಬೈಕ್ ಸವಾರರಿಗೆ ಪೊಲೀಸ್ ಅಧಿಕಾರಿಗಳು 5000 ರೂ. ದಂಡ ಕಟ್ಟಿಸಿದ್ದಾರೆ. ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಅವರು ಖುದ್ದಾಗಿ ನಿಂತು ಈ ಕಾರ್ಯಚರಣೆ ಮಾಡಿ ನ್ಯಾಯಾಲಯದಿಂದ ಆರೋಪಿಗಳಿಗೆ 5000 ರೂಪಾಯಿಗಳ ದಂಡ ವಿಧಿಸಿದ್ದಾರೆ. ಬೈಕಲ್ಲಿ ಹಿಮ್ಮುಖ ಚಾಲನೆ, ಕರ್ಕಶ ಶಬ್ದ, ಅತೀ ವೇಗ, ಹೆಲ್ಮೆಟ್, ಇನ್ಶೂರೆನ್ಸ್ ಇಲ್ಲದವರಿಗೂ ದಂಡ ಹಾಕಲಾಗಿದೆ.

ಏನಿದು ದಾಳಿ?:

ಆ.1ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಬೈಲಿನ ಹೆಗ್ಡೆ ಪೆಟ್ರೋಲ್ ಬಂಕ್ ಬಳಿ 2 ಯಮಹಾ ಬೈಕ್ ಸವಾರರು ಬೈಕ್ ಗಳನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ರೇಸಿಂಗ್ ಮಾಡುತ್ತಿದ್ದು, ಅಲ್ಲದೆ ಬೈಕ್ ಗಳ ಹಿಂಬದಿಯ ಸವಾರರು ವಿರುದ್ಧ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡು ರೇಸಿಂಗ್ ಮಾಡುತ್ತಿದ್ದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು.ಇದನ್ನು ಗಮನಿಸಿದ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಅವರು ತಡೆದು ನಿಲ್ಲಿಸಿ, ಬೈಕ್ ಸವಾರರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು ತೀರ್ಥಹಳ್ಳಿ ನ್ಯಾಯಾಲಯ ಬೈಕ್ ಸವಾರರಾದ ಸೌರವ್, 21 ವರ್ಷ, ಸೀಬಿನ ಕೆರೆ ತೀರ್ಥಹಳ್ಳಿ ಮತ್ತು ಶಂಕರ್, 21 ವರ್ಷ, ತೀರ್ಥಹಳ್ಳಿ ಇವರಿಗೆ ತಲಾ 5,000 ರೂ ದಂಡ ವಿಧಿಸಿ ಆದೇಶಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ ರಾಜಕೀಯ ರಾಜ್ಯ ಶಿವಮೊಗ್ಗ

ಆರಗ ಜ್ಞಾನೇಂದ್ರ ವಿರುದ್ಧ ಅಟ್ರಾಸಿಟಿಯ ದೂರು!

ಆರಗ ವಿರುದ್ಧ ಅಟ್ರಾಸಿಟಿಯ ದೂರು!
– ಜ್ಞಾನೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ಪಟ್ಟು
– ಖರ್ಗೆ ವಿರುದ್ಧ ಬಣ್ಣದ ಬಗ್ಗೆ ಹೇಳಿಕೆ: ತೀರ್ಥಹಳ್ಳಿ, ಬೆಂಗಳೂರಲ್ಲಿ ಕೇಸ್!

NAMMUR EXPRESS NEWS
ಶಿವಮೊಗ್ಗ: ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸುವ ಭರದಲ್ಲಿ ಕಾಂಗ್ರೆಸ್ ಸಚಿವ ಮತ್ತು ರಾಷ್ಟ್ರೀಯ ಅಧ್ಯಕ್ಷರ ಮೈಬಣ್ಣ ಮತ್ತು ಹೇರ್ ಸ್ಟೈಲ್ ನ ಟೀಕಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಈ ಪ್ರಕರಣ ಈಗ ರಾಜ್ಯದಲ್ಲಿ ಭಾರೀ ಸುದ್ದಿ ಆಗುತ್ತಿದೆ. ತೀರ್ಥಹಳ್ಳಿ ಶಾಸಕ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಇದೀಗ ಬೆಂಗಳೂರು, ತೀರ್ಥಹಳ್ಳಿಯಲ್ಲಿ ದೂರು ದಾಖಲಾಗಿದೆ.

ಏನಿದು ಘಟನೆ?:

ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದರ ವಿರುದ್ಧ ಬಿಜೆಪಿ ತೀರ್ಥಹಳ್ಳಿ ತಾಲೂಕು ಘಟಕ ಬುಧವಾರ ಪ್ರತಿಭಟನೆ ನಡೆಸಿತ್ತು.ಈ ಪ್ರತಿಭಟನೆಯಲ್ಲಿ ಕಸ್ತೂರಿರಂಗನ್ ವರದಿ ಜಾರಿಗೊಳಿಸುವುದನ್ನ ವಿರೋಧಿಸುವ ಭರದಲ್ಲಿ ಈಶ್ವರ ಖಂಡ್ರೆ ಮತ್ತು ಎಐಸಿಸಿಯ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಅವರ ಮೈಬಣ್ಣ ಮತ್ತು ಹೇರ್ ಸ್ಟೈಲ್ ನ್ನ ಟೀಕಿಸಿರುವುದು ಹಾಗೂ ಉತ್ತರ ಕರ್ನಾಟಕದ ಜನರು ಕಪ್ಪಾಗಿರುತ್ತಾರೆ ಎಂದು ಹೇಳಿರುವುದು ವಿವಾವದಕ್ಕೆ ಎಡೆ ಮಾಡಿಕೊಟ್ಟಿದೆ.

ಎರಡು ದೂರು ದಾಖಲು!:

ಬೆಂಗಳೂರಿನ ಹೈಗೌಂಡ್ ಠಾಣೆಯಲ್ಲಿ ಅರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲಾಗಿದೆ. ತೀರ್ಥಹಳ್ಳಿಯಲ್ಲಿ ತೀರ್ಥಹಳ್ಳಿಯ ಬ್ಲಾಕ್ ಕಾಂಗ್ರೆಸ್ ವಕ್ತಾರ ಮತ್ತು ದಲಿತ ಮುಖಂಡ ಪಡುವಳ್ಳಿ ಹರ್ಷೇಂದ್ರ ಕುಮಾರ್ ಸ್ಥಳೀಯ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಬೃಹತ್ ಹೋರಾಟಕ್ಕೆ ಸಿದ್ಧತೆ

ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಮಾತಮಾಡಿರುವುದು ಕಾಂಗ್ರೆಸ್ ದಲಿತ ನಾಯಕರಿಗೆ ಮತ್ತು ಕಾರ್ಯಕರ್ತರನ್ನು ಇದೀಗ ಕೆರಳಿಸಿದೆ. ತೀರ್ಥಹಳ್ಳಿಯಲ್ಲಿ ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ತೀರ್ಥಹಳ್ಳಿಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಮಲ್ನಾಡ್

ದೇವರನ್ನು ಬಿಡದ ಕಳ್ಳರು – ಚಂದ್ರಗುತ್ತಿ ದೇಗುಲದಲ್ಲಿ ದೇವಿ ಮುಖವಾಡಯನ್ನೇ ಕಿತ್ತೆಸದ ಕಳ್ಳರು

ದೇವರನ್ನು ಬಿಡದ ಕಳ್ಳರು..!
– ಮಲೆನಾಡಲ್ಲಿ ದಿನೇ ದಿನೇ ಹೆಚ್ಚಾಯ್ತು ಕಳ್ಳತನ!
– ಚಂದ್ರಗುತ್ತಿ ದೇಗುಲದಲ್ಲಿ ದೇವಿ ಮುಖವಾಡಯನ್ನೇ ಕಿತ್ತೆಸದ ಕಳ್ಳರು
– ಪೋಲೀಸರ ಹೆದರಿಕೆಯನ್ನೇ ಮರೆತ ಕಳ್ಳರು?!

NAMMUR EXPRESS NWES
ರಾಜ್ಯದಲ್ಲೇ ಖ್ಯಾತಿ ಪಡೆದಿರುವ ಮಲೆನಾಡಿನ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಚಂದ್ರಗುತ್ತಿ ದೇವಾಲಯದಲ್ಲಿ ಕಳ್ಳತನದ ಯತ್ನ ನಡೆದಿದ್ದು, ದೇವಿಯ ಮೂರ್ತಿಯ ಮುಖವಾಡವನ್ನೇ ಕಿತ್ತೆಸೆದ ಘಟನೆ ನಡೆದಿದೆ. ಈ ಘಟನೆ ಧಾರ್ಮಿಕ ವಲಯದಲ್ಲಿ ಭಾರೀ ತಲ್ಲಣ ಮೂಡಿಸಿದೆ. ದೇವಾಲಯ ಹಾಗೂ ಗರ್ಭಗುಡಿಯ ಬಾಗಿಲನ್ನು ಮುರಿದಿರುವ ಕಳ್ಳರು ರೇಣುಕಾ ದೇವಿಯ ಮೂರ್ತಿಯನ್ನು ಕಿತ್ತು ಬಿಸಾಡಿದ್ದಾರೆ. ಸದ್ಯ ದೊರೆತಿರುವ ಮಾಹಿತಿಯಂತೆ ದೇವಾಲಯದ ಹುಂಡಿಯನ್ನು ಕಳ್ಳರು ಒಡೆದಿಲ್ಲ. ಆದ್ರೆ ದೇವಾಲಯದಲ್ಲಿ ಚಿನ್ನದ ಹುಡುಕಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಹುಸೇನ್ ಸರಕಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಎಎಸ್ಐ, ದೇವಾಲಯ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಸ್ಥಳದಲ್ಲಿದ್ದಾರೆ.

ಮಲೆನಾಡಲ್ಲಿ ಹೆಚ್ಚಿದ ಕಳ್ಳತನ!

ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಹಲವೆಡೆ ದಿನ ನಿತ್ಯ ಕಳ್ಳತನ ನಡೆಯುತ್ತಿದೆ. ಹಳ್ಳಿ ಹಳ್ಳಿಯಲ್ಲೂ ಕಳ್ಳರು ತಮ್ಮ ಕರಾಮತ್ತು ತೋರುತ್ತಿದ್ದಾರೆ. ಸೋಮವಾರ ರಾತ್ರಿ ತೀರ್ಥಹಳ್ಳಿಯ ಹಲವೆಡೆ ಕಳ್ಳತನ ನಡೆದಿದೆ. ಶಿವಮೊಗ್ಗ, ಹೊಸನಗರದಲ್ಲೂ ಕಳ್ಳತನ ಪ್ರಕರಣಗಳು ವರದಿ ಆಗಿವೆ.

ಸಿಸಿಟಿವಿ ವ್ಯವಸ್ಥೆ ಇಲ್ಲ!

ತೀರ್ಥಹಳ್ಳಿ, ಸಾಗರ, ಹೊಸನಗರ ಭಾಗದಲ್ಲಿ ಎಲ್ಲಿಯೂ ಪೊಲೀಸ್ ಇಲಾಖೆ ಹಾಗೂ ಆಡಳಿತ ಸಿಸಿಟಿವಿ ಹಾಕಿಲ್ಲ. ಇದು ಕಳ್ಳತನಕ್ಕೆ ಮತ್ತಷ್ಟು ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಬೆಂಗಳೂರು

ಮಕ್ಕಳು ಶಾಲೆಗೆ ಬರದಿದ್ದರೆ ಬಿಇಒ ಸಂಬಳ ಕಟ್!?

ಮಕ್ಕಳು ಶಾಲೆಗೆ ಬರದಿದ್ದರೆ ಬಿಇಒ ಸಂಬಳ ಕಟ್!?
– ಸರ್ಕಾರದ ಹೊಸ ನಿಯಮ: ಏನಿದು ನಿಯಮ..?
– ಸ್ವಾತಂತ್ರ್ಯ ದಿನದಿಂದ ಹೊಸ ಕಾನೂನು ಜಾರಿ

NAMMUR EXPRESS NEWS
ಬೆಂಗಳೂರು: ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಶೇಕಡಾ 50ಕ್ಕಿಂತ ಕಡಿಮೆಯಿದ್ದರೆ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ವೇತನವನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ. ಕಾಮಗಾರಿಯ ನಿರ್ಲಕ್ಷ್ಯವನ್ನು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಇದೇ ವೇಳೆ ಆಗಸ್ಟ್ 15ರ ನಂತರ ಬ್ಲಾಕ್‌ನ ಯಾವುದೇ ಶಾಲೆಯಲ್ಲಿ ಮಕ್ಕಳ ಹಾಜರಾತಿ ಶೇ.50ಕ್ಕಿಂತ ಕಡಿಮೆಯಿದ್ದರೆ ವೇತನ ನಿಲ್ಲಿಸುವ ಜತೆಗೆ ಸಂಬಂಧಪಟ್ಟ ಬಿಇಒ ವಿರುದ್ಧ ಇಲಾಖಾ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೋಮವಾರ ಈ ಕುರಿತು ಎಲ್ಲ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ನೀಡಲಾಗಿದೆ. ಪ್ರಾಥಮಿಕ, ಮಧ್ಯಮ, ಪ್ರೌಢ ಹಾಗೂ ಪ್ರೌಢಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಶೇ.50ಕ್ಕಿಂತ ಕಡಿಮೆಯಿದ್ದರೆ ಬಿಇಒ ವಿರುದ್ಧ ನಿರ್ಲಕ್ಷ ಹಾಗೂ ಆದೇಶ ಉಲ್ಲಂಘನೆ ಆರೋಪ ಹೊರಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಈ ಸಂಬಂಧ ಪ್ರೌಢ ಶಿಕ್ಷಣ ನಿರ್ದೇಶಕರು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸುಧಾರಿಸುತ್ತಿರುವುದು ತಪಾಸಣಾ ವರದಿಯಿಂದ ಸ್ಪಷ್ಟವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಬಿಇಒ ಕಚೇರಿ ಇರುವ ಬ್ಲಾಕ್‌ ಹೆಡ್‌ಕ್ವಾರ್ಟರ್ಸ್‌ನಲ್ಲೂ ಕೂಡ ಸತ್ಯಾಂಶ ಬೆಳಕಿಗೆ ಬಂದಿದೆ. ಅಲ್ಲಿನ ಕೆಲವು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಇನ್ನೂ ಶೇ.50ಕ್ಕಿಂತ ಕಡಿಮೆ ಇದೆ. ಇದು ಕಳವಳಕಾರಿ ವಿಷಯ ಬಿಇಒ ಅವರ ಕಚೇರಿ ಹಾಗೂ ಸುತ್ತಮುತ್ತಲಲ್ಲೂ ಗುಣಾತ್ಮಕ ತಪಾಸಣೆ ನಡೆಯುತ್ತಿಲ್ಲ ಎಂಬುದು ತಪಾಸಣಾ ವರದಿಯ ವಿಶ್ಲೇಷಣೆಯಿಂದ ಸ್ಪಷ್ಟವಾಗಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಚಿಕ್ಕಮಗಳೂರು

ಶೃಂಗೇರಿಯಲ್ಲಿ ಅಡಿಕೆ ಬಳಿಕ ಕಾಫಿಗೂ ರೋಗ!

ಶೃಂಗೇರಿಯಲ್ಲಿ ಅಡಿಕೆ ಬಳಿಕ ಕಾಫಿಗೂ ರೋಗ!
– ಶೃಂಗೇರಿ ತಾಲೂಕಲ್ಲಿ ಕಾಫಿಗೆ ಔಷಧಿ ಸಿಂಪಡಣೆ
– ಕಾಫಿಗೂ ಬಂತು ಹಳದಿ ರೋಗ ಎಚ್ಚರ

NAMMUR EXPRESS NEWS
ಶೃಂಗೇರಿ: ಎಲೆ ಚುಕ್ಕಿ ರೋಗ, ತುಂಡೆ ರೋಗ, ಕೊಳೆ ರೋಗ ಅನೇಕ ರೋಗಗಳಿಗೆ ತುತ್ತಾಗಿದ್ದ ಶೃಂಗೇರಿಯ ವಿವಿಧ ಭಾಗಗಳಲ್ಲಿ ಮಲೆನಾಡಿನ ಮತ್ತೊಂದು ಜೀವನಾಡಿ ಬೆಳೆ ಕಾಫಿಗೂ ಹಲವೆಡೆ ಹಳದಿ ರೋಗ ಬಂದಿದೆ.
ಶೃಂಗೇರಿಯ ಜನತೆ ಕಾಫಿ ಗಿಡಗಳಿಗೆ ಇದೀಗ ಔಷಧಿ ಸಿಂಪಡಣೆಯಲ್ಲಿ ಕಾರ್ಯನಿರತರಾಗಿದ್ದಾರೆ. ಸಮರ್ಪಕವಾಗದೆ ಹೂವಾದ ನಂತರ ಕಾಯಾಗಿ ಕಟ್ಟುವುದು ಸಾಮಾನ್ಯ. ಆದ್ರೆ ಆಗಸ್ಟ್ ತಿಂಗಳಲ್ಲಿ ಮಳೆ ಹಾಗೂ ಬಿಸಿಲಿನ ವಾತಾವರಣ ಇದ್ದುದ್ದರಿಂದ ಕೊಳೆ ರೋಗ ಜಾಸ್ತಿ ಆಗಿದೆ. ಇದು ಶೃಂಗೇರಿ ಭಾಗದ ರೈತರಿಗೆ ತಲೆ ನೋವು ತರಿಸಿದೆ.

ಅಡಿಕೆಯೂ ಹೋಯ್ತು, ಈಗ ಕಾಫಿಗೂ ಕಂಟಕ?

ಶೃಂಗೇರಿ ತಾಲೂಕಲ್ಲಿ ಅಡಿಕೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಬೇರು ಹುಳು ರೋಗ, ಹಳದಿ ರೋಗ, ತುಂಡೆ ರೋಗ, ಎಲೆ ಚುಕ್ಕಿ ರೋಗ ಸೇರಿದಂತೆ ಹಲವು ರೋಗಗಳಿಗೆ ಅಡಿಕೆ ಬೆಳೆಗಾರರು ಹೈರಾಣಾಗಿದ್ದಾರೆ. ಈ ನಡುವೆ ಕಾಫಿ ಬೆಳೆಗೂ ರೋಗ ಅಂಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣ ಆಗಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023