Categories
ಸಿನಿಮಾ

ಬರಲಿದೆ ಉಪೇಂದ್ರ ನಟನೆಯ ಬುದ್ದಿವಂತ 2 ಟೀಸರ್!

ಬರಲಿದೆ ಉಪೇಂದ್ರ ನಟನೆಯ ಬುದ್ದಿವಂತ 2 ಟೀಸರ್!
– ಟೀಸರ್ ನಲ್ಲಿ ಉಪೇಂದ್ರ ಪಾತ್ರದ ವಿಶಿಷ್ಟ ಗೆಟಪ್
– ಸಿನಿಮಾ ಬಿಡುಗಡೆಗಿಂತ 1 ತಿಂಗಳ ಮೊದಲೇ ಟೀಸರ್

NAMMUR EXPRESS NEWS
ಉಪೇಂದ್ರ ನಟನೆಯ ಬಹುನಿರೀಕ್ಷಿತ ( Buddivantha 2 ) ‘ಬುದ್ಧಿವಂತ 2’ ಚಿತ್ರದ ಟೀಸರ್ ಆಗಸ್ಟ್‌ 3ರಂದು ಮಧ್ಯಾಹ್ನ 1 ಗಂಟೆಗೆ ಬಿಡುಗಡೆ ಆಗಲಿದೆ. ಉಪೇಂದ್ರ ಅವರ ಮೊದಲ ಬುದ್ದಿವಂತ ಸಿನಿಮಾ ಭಾರೀ ಸದ್ದು ಮಾಡಿತ್ತು. ಸೆ.15ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಕ್ರಿಸ್ಟಲ್‌ಪಾರ್ಕ್‌ ಸಿನಿಮಾಸ್ ಸಂಸ್ಥೆಯ ಡಾ.ಟಿ.ಆರ್. ಚಂದ್ರಶೇಖರ್ ನಿರ್ಮಿಸಿರುವ ಚಿತ್ರಕ್ಕೆ ಜೈದೇವ್ ನಿರ್ದೇಶನವಿದೆ. ಸಿನಿಮಾ ಬಿಡುಗಡೆಗಿಂತ 1 ತಿಂಗಳ ಮೊದಲೇ ಟೀಸರ್ ಬಿಡುಗಡೆಯಾಗುತ್ತಿದ್ದು, ಈ ಮೂಲಕ ಚಿತ್ರವನ್ನು ದೊಡ್ಡಮಟ್ಟದಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ‘ನಮ್ಮ ಸಿನಿಮಾದಲ್ಲಿ ಉಪೇಂದ್ರ ಹಲವಾರು ವಿಶಿಷ್ಟ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಟೀಸರ್‌ನಲ್ಲಿ ಉಪೇಂದ್ರ ಅವರ ವಿಭಿನ್ನ ಗೆಟಪ್ ರಿವೀಲ್ ಆಗಲಿದೆ. ಅದನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ನಿರ್ದೇಶಕ ಜೈದೇವ್. ಶ್ರೀನಗರ ಕಿಟ್ಟಿ, ಮೇಘನಾರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೋನಾಲ್ ಮೊಂತೆರೋ ನಾಯಕಿ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಕರಾವಳಿ

ಮೂಡುಬಿದಿರೆ: ಇಬ್ಬರು ಅಧಿಕಾರಿಗಳ ಅಮಾನತು!

ಮೂಡುಬಿದಿರೆ: ಇಬ್ಬರು ಅಧಿಕಾರಿಗಳ ಅಮಾನತು!
– ಆಹ್ವಾನ ಪತ್ರಿಕೆಯಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಇಲ್ಲ
– ಶಿಷ್ಟಾಚಾರ ಉಲ್ಲಂಘನೆ: ಸಿಎಂ ಎನ್ ಮಾಡ್ತಾರೆ?

NAMMUR EXPRESS NEWS
ಮೂಡಬಿದಿರೆ: ಗ್ರಾಮ ಪಂಚಾಯತ್ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಹಾಕದೇ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮೂಡುಬಿದಿರೆ ತಾಲ್ಲೂಕು ಪಂಚಾಯಿತ್ ಕಾರ್ಯನಿರ್ವಹಣಾಧಿಕಾರಿ ದಯಾವತಿ ಹಾಗೂ ಇರುವೈಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕಂಠಪ್ಪ ಅವರನ್ನು ಅಮಾನತುಗೊಳಿಸಲಾಗಿದೆ. ಇಬ್ಬರು ಅಧಿಕಾರಿಗಳನ್ನು ಆ.1 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. .

ಇರುವೈಲ್ ಪಂಚಾಯಿತಿಯ ನೂತನ ಕಟ್ಟಡ ಸೋಮವಾರ ಉದ್ಘಾಟನೆಯಾಗಬೇಕಿತ್ತು. ಆದರೆ ಆಹ್ವಾನಪತ್ರಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಹಾಕದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಈ ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್.ಕೆ ಆದೇಶದಲ್ಲಿ ತಿಳಿಸಿದ್ದರು.

ಅಮಾನತು ಆದೇಶ ಹಿಂಪಡೆಯಲು ಆದೇಶ!

ಅಮಾನತು ಆದೇಶ ಹಿಂಪಡೆಯುವಂತೆ ಮೂಡುಬಿದಿರೆ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಿದ್ದಾರೆ. ಆ. 1 ರಂದು ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಅಧಿಕಾರಿಗಳ ಅಮಾನತು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿ, ಈ ಬಗ್ಗೆ ತನಿಖೆ ನಡೆಸುವುದಾಗಿ ಶಾಸಕರಿಗೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಕೊಪ್ಪ

ಕೊಪ್ಪದಲ್ಲಿ ಚಿರತೆ ಆಯ್ತು,ಕಾಡುಕೋಣ ಭಯ!

ಕೊಪ್ಪದಲ್ಲಿ ಚಿರತೆ ಆಯ್ತು,ಕಾಡುಕೋಣ ಭಯ!
– ಹರಿಹರಪುರ ಬಳಿ ಅಡಿಕೆ ತೋಟ ಹಾನಿ
– ಆತಂಕದಲ್ಲಿ ಕೊಪ್ಪ ಭಾಗದ ರೈತರು

NAMMUR EXPRESS NWES
ಕೊಪ್ಪ: ( Koppa ) ಕೊಪ್ಪದಲ್ಲಿ ಚಿರತೆ ಆಯ್ತು,ಕಾಡುಕೋಣ ಭಯ ಶುರುವಾಗಿದೆ. ಕಾಡು ಕೋಣಗಳು ಬೆಳೆ ಹಾನಿ ಮಾಡಿದ್ದು, ಜನರ ಮೇಲೆ ದಾಳಿ ಮಾಡುವ ಅಪಾಯ ಇದೆ. ಕೊಪ್ಪ ಪಟ್ಟಣದ ಸೋಮಲಾಪುರ, ಹುಲ್ಲು ಮಕ್ಕಿ ಭಾಗದಲ್ಲಿ ಇತ್ತೀಚಿಗೆ ಚಿರತೆ ಕಾಣಿಸಿ ಸ್ಥಳೀಯರಿಗೆ ಆತಂಕ ಮೂಡಿಸಿತ್ತು. ಇದೀಗ ಅಲ್ಲೇ ಮುಂದೆ ಹರಿಹರಪುರ ಸಮೀಪದ ಅಂಬಳಿಕೆಯಲ್ಲಿ ಅಡಿಕೆ ತೋಟ ಹಾನಿ ಮಾಡಿದ್ದು ಆತಂಕದಲ್ಲಿ ಕೊಪ್ಪ ಭಾಗದ ರೈತರಿದ್ದಾರೆ. ಆ.1ರಂದು ಮುಂಜಾನೆ ಅಂಬಳಿಕೆಯ ಕೃಷ್ಣಪ್ಪ ಎಂಬುವರ ತೋಟದ ಮೇಲೆ ಕಾಡುಕೋಣ ದಾಳಿ ಮಾಡಿದ್ದು, 50ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಹಾನಿ ಮಾಡಿದೆ. ಸುತ್ತಮುತ್ತಲಿನ ರೈತರು ಕಂಗಲಾಗಿದ್ದಾರೆ. ಅರಣ್ಯ ಇಲಾಖೆಯವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ಜನರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ದಾವಣಗೆರೆ

4 ಮದುವೆಯಾದವನಿಗೆ ರಸ್ತೆಯಲ್ಲೇ ಪತ್ನಿಯರ ಚಪ್ಪಲಿ ಏಟು!?

4 ಮದುವೆಯಾದವನಿಗೆ ರಸ್ತೆಯಲ್ಲೇ ಪತ್ನಿಯರ ಚಪ್ಪಲಿ ಏಟು!?
– ನಡುರಸ್ತೆಯಲ್ಲೇ ಚಪ್ಪಲಿಯಿಂದ ಪತ್ನಿಯರ ಚಪ್ಪಲಿ ಸೇವೆ
– 4 ಮದುವೆ, 4 ಕಡೆ ಮನೆ… ಹೊಸ ಲವ್ ಸ್ಟೋರಿ!

NAMMUR EXPRESS NWES
ದಾವಣಗೆರೆ: ದಾವಣಗೆರೆಯಲ್ಲಿ ನಾಲ್ಕು ಮದುವೆಯಾಗಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ ಪತ್ನಿಯರು ಇನ್ನೊಬ್ಬಳು ಪತ್ನಿ ಜತೆ ಸಿಕ್ಕಿಬಿದ್ದ ಪತಿಗೆ ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ. ದಾವಣಗೆರೆಯ ಆಜಾದ್ ನಗರದ ನಿವಾಸಿ ಮೊಹಮ್ಮದ್ ವಾಸೀಂ ಅಲಿಯಾಸ್‌ ಸಲ್ಮಾನ್ ಖಾನ್ ಸಾದೀಕ್ ಎಂಬ ವ್ಯಕ್ತಿ ನಾಲ್ಕು ಮದುವೆ ಆಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈತ ವಿಧವೆಯರು ಹಾಗೂ ಗಂಡ ಬಿಟ್ಟಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಅವರನ್ನು ನಂಬಿಸಿ ಮದುವೆಯಾಗಿ ಮೋಸ ಮಾಡಿದ್ದಾನೆ. ಇದಲ್ಲದೇ ಮಹಿಳೆಯರನ್ನು ಮದುವೆಯಾಗಿ ಅವರ ಬಳಿ ಇದ್ದ ಬಂಗಾರ, ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ಮೋಸ ಹೋದ ಪತ್ನಿಯರು ಆರೋಪಿಸಿದ್ದಾರೆ.

ಈತನಿಗೆ ಕುಟುಂಬದ ಸದಸ್ಯರು ಬೆಂಬಲವಿದೆ. ಈತ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮೊದಲ ಮದುವೆ, ಮಲೇಬೆನ್ನೂರಿನಲ್ಲಿ ಎರಡನೇ ಮದುವೆ ಹಾಗೂ ದಾವಣಗೆರೆಯ ಆಜಾದ್ ನಗರದಲ್ಲಿ ಮೂರನೇ ಹಾಗೂ ಭಾಷಾ ನಗರದಲ್ಲಿ ನಾಲ್ಕನೇ ವಿವಾಹವಾಗಿದ್ದಾನೆ ಎನ್ನಲಾಗಿದೆ. ದಾವಣಗೆರೆ ನಗರದ ಬೂದಳ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಾಲ್ಕನೇ ಪತ್ನಿಯೊಂದಿಗೆ ಸಂಸಾರ ಮಾಡ್ತಿದ್ದ. ನಡುರಸ್ತೆಯಲ್ಲಿಯೇ ಆರೋಪಿ ಸಿಕ್ಕಿಬಿದ್ದಿದ್ದು, ಈ ವೇಳೆ ಪತ್ನಿಯರು ಆತನಿಗೆ ಧರ್ಮದೇಟು ನೀಡಿದ್ದಾರೆ. ಈತನ ವಿರುದ್ಧ ಆಜಾದ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಶಿವಮೊಗ್ಗ

ಹೊಸನಗರ: ಸೇತುವೆಯಿಂದ 50 ಅಡಿ ಆಳಕ್ಕೆ ಬಿದ್ದು ಯುವಕ ದುರ್ಮರಣ!

ಹೊಸನಗರ: ಸೇತುವೆಯಿಂದ 50 ಅಡಿ ಆಳಕ್ಕೆ ಬಿದ್ದು ಯುವಕ ದುರ್ಮರಣ!
– ನಡೆದುಕೊಂಡು ಹೋಗುತ್ತಿದ್ದ ಯುವಕ ಬಿದ್ದಿದ್ದು ಹೇಗೆ?
– ಸಾಗರದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಬಸ್!
– 35 ವಿದ್ಯಾರ್ಥಿಗಳಿಗೆ ಶಾಕ್: ಇಬ್ಬರ ಸ್ಥಿತಿ ಗಂಭೀರ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕಲ್ಲುಹಳ್ಳ ಸೇತುವೆ ಬಳಿ ಆಯತಪ್ಪಿ ಬಿದ್ದು ಯುವಕನೊಬ್ಬ ಮೃತಪಟ್ಟಿದ್ದಾನೆ. ಹೊಸನಗರ ಪೇಟೆ ಸಮೀಪ ಇರುವ ಕಲ್ಲುಹಳ್ಳ ಸೇತುವೆ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಮೃತ ಯುವಕನನ್ನ ಹೊಸನಗರ ದ್ಯಾವರ್ಸದ ನಿವಾಸಿ ರಾಘು ಎಂದು ತಿಳಿದುಬಂದಿದೆ. ಬುಧವಾರ ಬೆಳಗ್ಗೆ ಯುವಕ ಸೇತುವೆ ಬಳಿ ನಡೆದುಕೊಂಡು ಹೋಗುವದನ್ನ ಸ್ಥಳೀಯರು ಗಮನಿಸಿದ್ದಾರೆ. ಆನಂತರ ಯುವಕ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದಾನೆ. ಘಟನೆ ಹೇಗೆ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ. ಸ್ಥಳೀಯರು ಹೇಳುವಂತೆ, ಯುವಕ ಆಯತಪ್ಪಿ ಬಿದ್ದಿದ್ದಾನೆ ಎನ್ನಲಾಗಿದೆ. ಸೇತುವೆಯಿಂದ ಸುಮಾರು 50 ಅಡಿ ಆಳಕ್ಕೆ ಬಿದ್ದಿದ್ದ ಯುವಕನಿಗೆ ಕಲ್ಲುಗಳು ಬಡಿದು ಸಾವನ್ನಪ್ಪಿದ್ದಾರೆ. ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.

ಸಾಗರದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಬಸ್!

ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ 35ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯುತ್ ಶಾಕ್ ಒಳಗಾದ ಘಟನೆ ಸಾಗರ ಸಮೀಪದ ಹೊಳೆಬಾಗಿಲಿನಲ್ಲಿ ನಡೆದಿದೆ. ಆಘಾತಕ್ಕೊಳಗಾದ ಮಕ್ಕಳಲ್ಲಿ ಇಬ್ಬರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸಾಗರದ ಹೊಳೆಬಾಗಿಲು ಸಮೀಪದ ಗೆಣಸಿನಕುಣಿ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ಹೊಳೆಬಾಗಿಲಿನಿಂದ ಸಾಗರಕ್ಕೆ ಬರುತ್ತಿದ್ದ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಎಸ್.ಬಿ.ಕೆ. ಕಂಪನಿಗೆ ಸೇರಿದ ಈ ಬಸ್‌ನಲ್ಲಿ 45 ಮಂದಿ ಪ್ರಯಾಣಿಕರಿದ್ದರು. ಸಿಗಂದೂರಿನಲ್ಲಿ ಲಾಂಚ್ ನಿಲ್ಲುವ ಗ್ರಾಮವಾಗಿರುವ ಹೊಳೆಬಾಗಿಲುವಿನಿಂದ ಬೆಳಗ್ಗಿನ ಹೊತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೇ ಬಸ್ಸಿನಲ್ಲಿ ತುಂಬಿದ್ದರು. ಬಸ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಒಮ್ಮೆಗೇ ಬಸ್‌ಗೆ ವಿದ್ಯುತ್ ಸಂಪರ್ಕ ಆಗಿದೆ. ಇದರಿಂದ ಎಲ್ಲಾ 35 ವಿದ್ಯಾರ್ಥಿಗಳು ಶಾಕ್‌ಗೆ ಒಳಗಾದರು. ಕೆಲವರು ಬಸ್ಸಿನೊಳಗೇ ಉರುಳಿ ಬಿದ್ದರು. ಈ ವೇಳೆ ಕೆಲವರಿಗೆ ಗಾಯಗಳೂ ಆಗಿವೆ.

ಸಾಮಾನ್ಯವಾಗಿ ಈ ರೀತಿ ವಿದ್ಯುತ್ ಕಂಬಕ್ಕೆ ಏನಾದರೂ ಸಮಸ್ಯೆಯಾದರೆ ಪವರ್ ಟ್ರಿಪ್ ಆಗುತ್ತದೆ. ಆದರೆ, ಇಲ್ಲಿ ಹಾಗೆ ಆಗದೆ ವಿದ್ಯುತ್ ಪ್ರವಹಿಸುತ್ತಲೇ ಇತ್ತು. ಹೀಗಾಗಿ ಶಾಕ್‌ಗೆ ಒಳಗಾದ ಇಬ್ಬರು ವಿದ್ಯಾರ್ಥಿಗಳಿಗೆ ಸ್ವಲ್ಪ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರು ವಿದ್ಯುತ್ ಶಾಕ್ ನಿಂದ ಪ್ರಜ್ಞೆ ತಪ್ಪಿದ್ದಾರೆ. ಅವರನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಚಿಕ್ಕಮಗಳೂರು

ಎನ್.ಆರ್.ಪುರದ ವ್ಯಕ್ತಿ ಲಂಚ: ಅಧಿಕಾರಿಗೆ 3 ವರ್ಷ ಜೈಲು!

ಎನ್.ಆರ್.ಪುರದ ವ್ಯಕ್ತಿ ಲಂಚ: ಅಧಿಕಾರಿಗೆ 3 ವರ್ಷ ಜೈಲು!
– ಲಂಚ ಪಡೆವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಸರ್ಕಾರಿ ಅಧಿಕಾರಿ
– ಮೂಡಿಗೆರೆಯ ಚಾರ್ಮಾಡಿ ಘಾಟಿಯಲ್ಲಿ ಹುಚ್ಚಾಟಕ್ಕೆ ಪೊಲೀಸರ ಬ್ರೇಕ್!

NAMMUR EXPRESS NWES
ಎನ್.ಆರ್.ಪುರ: ( N R Pura )  ಎನ್.ಆರ್.ಪುರದ ವ್ಯಕ್ತಿಯಿಂದ ಅಂಗಡಿ ಲೈಸೆನ್ಸ್ ವಿಚಾರವಾಗಿ ಲಂಚ ಪಡೆದ ಅಧಿಕಾರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ವ್ಯಕ್ತಿಯಿಂದ ಲಂಚ ಪಡೆವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಸರ್ಕಾರಿ ಅಧಿಕಾರಿ ಈಗ ಜೈಲುಪಾಲಾಗಲಿದ್ದಾರೆ. ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿಗೆ ಮೂರು ವರ್ಷ ಕಾರಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಏನಿದು ಘಟನೆ?:

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದ ಪಾಂಡು ಎಂಬುವವರು ತಮ್ಮ ಅಂಗಡಿ ಹೆಸರನ್ನು ಬದಲಾಯಿಸಿಕೊಡುವಂತೆ ತರೀಕೆರೆ ವಾಣಿಜ್ಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಅಂದು ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ತೆರಿಗೆ ಅಧಿಕಾರಿ ಟಿ .ಪಾಲಾಕ್ಷಪ್ಪಐದು ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ದೂರುದಾರದಿಂದ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಪಾಲಾಕ್ಷಪ್ಪ ಮತ್ತು ಗುರುಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿ ಟಿ. ಪಾಲಾಕ್ಷಪ್ಪನಿಗೆ ಮೂರು ವರ್ಷ ಕಾರಾಗೃಹ ಸಜೆ, 40,000 ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಇನ್ನೊಬ್ಬ ಆರೋಪಿ ಗುರುಮೂರ್ತಿಯನ್ನು ಖುಲಾಸೆಗೊಳಿಸಲಾಗಿದೆ.

ಮೂಡಿಗೆರೆಯ ಚಾರ್ಮಾಡಿ ಘಾಟಿ ಜಲಪಾತದ ಬಳಿ ಪೊಲೀಸ್ ನಿಯೋಜನೆ

ಮೂಡಿಗೆರೆ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿ ಮೀರಿದೆ. ಜಲಪಾತಗಳಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಸೆಲ್ಸಿ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ. ಇದೀಗ ಪೊಲೀಸರು ಇದಕ್ಕೆಲ್ಲ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ಜಲಪಾತದ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕುಂದಾಪುರದ ಅರಶಿನಗುಂಡಿ ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ಭದ್ರಾವತಿಯ ಶರತ್ ಸಾವನ್ನಪ್ಪಿದ್ದ ಈ ಘಟನೆ ನಡೆದ ಬಳಿಕವೂ ಪ್ರವಾಸಿಗರು ಜಲಪಾತಗಳಲ್ಲಿ ಅಪಾಯಕಾರಿಯಾಗಿ ಸೆಲ್ಸಿ, ರೀಲ್ಸ್ ಮಾಡುವುದು ಕಂಡುಬಂದಿದೆ ಅಲ್ಲದೆ ಚಾರ್ಮಾಡಿ ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಕುಣಿಯುತ್ತಿದ್ದ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು. ಈ ಹುಚ್ಚಾಟ ತಡೆಯಲು ಜಲಪಾತಗಳ ಬಳಿ ಹೈವೆ ಪ್ಯಾಟ್ರೋಲ್ ಪೊಲೀಸರ ನಿಯೋಜನೆ ಮಾಡಲಾಗಿದ್ದು ಇಡೀ ದಿನ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಲಿದ್ದಾರೆ. ಇದರಿಂದ ಪ್ರಯಾಣಿಕರಿಗೂ ಕಿರಿಕಿರಿ ಇಲ್ಲದಾಗಲಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಭಜನಾ ಸಂಭ್ರಮ!

ತೀರ್ಥಹಳ್ಳಿಯಲ್ಲಿ ಭಜನಾ ಸಂಭ್ರಮ!
– ರಾಘವೇಂದ್ರ ಮಠದಲ್ಲಿ ಶ್ರೀ ಮಾರುತಿ ತಂಡದಿಂದ ಭಜನೆ
– ಶಿರುಪತಿ ಪ್ರಾಥಮಿಕ ಶಾಲೆಯಲ್ಲಿ ಭಜನಾ ಉದ್ಘಾಟನೆ

NAMMUR EXPRESS NEWS
ತೀರ್ಥಹಳ್ಳಿ: ( Thirthahalli )  ಅಧಿಕ ಮಾಸ ಹುಣ್ಣಿಮೆಯ ವಿಶೇಷವಾಗಿ ಮಂಗಳವಾರ ತೀರ್ಥಹಳ್ಳಿಯ ರಾಘವೇಂದ್ರ ಮಠದಲ್ಲಿ ಶ್ರೀ ಮಾರುತಿ ಭಜನಾ ತಂಡ ಕುಶಾವತಿ ಇವರಿಂದ ರಾಘವೇಂದ್ರ ಸ್ವಾಮಿಯನ್ನು ಸ್ಮರಿಸುತ್ತಾ ಭಕ್ತಿ ಭಾವದೊಂದಿಗೆ ( Bajane ) ಭಜನಾ ಕಾರ್ಯಕ್ರಮ ನಡೆಸಲಾಯಿತು. ತೀರ್ಥಹಳ್ಳಿ ಭಜನಾ ಪರಿಷತ್ ಅಧ್ಯಕ್ಷರಾದ ಮಂಜುನಾಥ್ ಮೃಗವದೆ, ಕಲಾವಿದ ಹೆಗ್ಡೆ ಮನೆ ಯೋಗೇಶ್ (ಕೊಳಲು ವಾದಕರು) ಹಾಗೂ ಜಾನಪದ ಪರಿಷತ್ ಅಧ್ಯಕ್ಷರಾದ ಮಂಜುನಾಥ್ ಶಿರುಪತಿ ಹಾಗೂ ಮಾರುತಿ ಭಜನಾ ಮಂಡಳಿ ಸದಸ್ಯರು ಕಾರ್ಯಕ್ರಮ ನಡೆಸಿಕೊಟ್ಟರು.

ತೀರ್ಥಹಳ್ಳಿ ಪಟ್ಟಣ ಸಮೀಪದ ಶಿರುಪತಿ ಪ್ರಾಥಮಿಕ ಭಜನಾ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು. ಈ ತಂಡ ಹಲವು ಸರ್ಕಾರಿ ಶಾಲೆಗಳಿಗೆ ಜಾನಪದ ಹಾಗೂ ಭಜನಾ ಹಾಡುಗಳನ್ನು ಕಲಿಸಿಕೊಟ್ಟಿದ್ದಾರೆ . ಮುಖ್ಯ ಶಿಕ್ಷಕರಾದ ಲತಾ, ಎಸ್ ಟಿ ಎಂ ಸಿ ಅಧ್ಯಕ್ಷರಾದ ರವೀಂದ್ರ, ಭಜನಾ ಮಂಡಳಿಯ ಎಲ್ಲಾ ಸದಸ್ಯರು, ಪೋಷಕರು, ಗ್ರಾಮಸ್ಥರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ ಬೆಂಗಳೂರು ರಾಜಕೀಯ ರಾಜ್ಯ

ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
– ಅರಗ ಹೇಳಿಕೆ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್
– ಜ್ಞಾನೇಂದ್ರ ಹೇಳಿದ್ದೇನು..?, ಕಾಂಗ್ರೆಸ್ ಹೇಳಿದ್ದೇನು?

NAMMUR EXPRESS NWES
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು ಕ್ಷಮೆಯಾಚಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ. ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವ‌ ಖಂಡ್ರೆ ನೀಡಿದ ಹೇಳಿಕೆ ಖಂಡಿಸಿ ತೀರ್ಥಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅರಗ ಜ್ಞಾನೇಂದ್ರ ಅವರು ಮಾತನಾಡಿದ್ದರು. ಇದೇ ವೇಳೆ ಸಚಿವ ಈಶ್ವರ್ ಖಂಡ್ರೆ ಮತ್ತು ಮಲ್ಲಿಕಾರ್ಜುನ ಖರ್ಗೆಗೆ ಅವಹೇಳನ ಮಾಡಿದ್ದರು.

ಅರಗ ಜ್ಞಾನೇಂದ್ರ ಹೇಳಿಕೆ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್, ‘ಮಲ್ಲಿಕಾರ್ಜುನ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಅರಗ ಜ್ಞಾನೇಂದ್ರ ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ. ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ’ ಎಂದು ಕಿಡಿಕಾರಿದೆ.
ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ. ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ. ಆದರೆ, ಇಲ್ಲಿನ ಬಿಜೆಪಿಗರು ದಲಿತರನ್ನು, ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದು ಹೆಗ್ಗಳಿಕೆಯಾಗಿ ನೋಡುತ್ತದೆ’ ಎಂದು ಕಾಂಗ್ರೆಸ್‌ ಟೀಕಿಸಿದೆ. ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಜ್ಞಾನೇಂದ್ರರನ್ನು ಉಚ್ಚಾಟನೆ ಮಾಡಬೇಕು, ಜ್ಞಾನೇಂದ್ರ ಅವರು ಖರ್ಗೆ ಹಾಗೂ ದಲಿತರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ಇತರೆ ಸುದ್ದಿ

8 ತಿಂಗಳ ಮಗು ಸಾವಿಗೆ ಕಾರಣ ಆಯ್ತು ಮೊಬೈಲ್ ಚಾರ್ಜರ್!

8 ತಿಂಗಳ ಮಗು ಸಾವಿಗೆ ಕಾರಣ ಆಯ್ತು ಮೊಬೈಲ್ ಚಾರ್ಜರ್!
– ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಘಟನೆ
– ಅಂಡಮಾನ್- ನಿಕೋಬಾರ್ ದ್ವೀಪದಲ್ಲಿ ಭೂಕಂಪನ

NAMMUR EXPRESS NWES
ಕಾರವಾರ: ಮೊಬೈಲ್ ಚಾರ್ಜ್ ಗೆ ಹಾಕಿದ ಪೋಷಕರು ಆಫ್ ಮಾಡದೇ ಬಿಟ್ಟಿದ್ದರು. ಇದರಿಂದಾಗಿ 8 ವರ್ಷದ ಹೆಣ್ಣು ಮಗುವೊಂದು ಪ್ರಾಣ ಕಳೆದುಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೊಬೈಲ್ ಚಾರ್ಜರ್ ವೈರ್ ನಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ 8 ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದೆ. ಸಂಜನ ದಂಪತಿಯ 8 ತಿಂಗಳ ಮಗು, ಆನ್ ಮಾಡಿಟ್ಟಿದ್ದ ಮೊಬೈಲ್ ಚಾರ್ಜರ್ ನ್ನು ಬಾಯಿಗೆ ಹಾಕಿದ್ದು, ಈ ವೇಳೆ ವಿದ್ಯುತ್‌ ಪ್ರವಹಿಸಿದ್ದು, ವಿದ್ಯುತ್ ಶಾಕ್ ನಿಂದಾಗಿ ಮಗು ಸಾವನ್ನಪ್ಪಿದೆ.

ಅಂಡಮಾನ್- ನಿಕೋಬಾರ್ ದ್ವೀಪದಲ್ಲಿ ಭೂಕಂಪನ

ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ 5.40ರ ಸುಮಾರಿಗೆ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ. ಇದು 10. ಕಿ.ಮೀ ಆಳದಲ್ಲಿ ಸಂಭವಿಸಿದೆ.ಭೂಕಂಪದ ಕೇಂದ್ರಬಿಂದುವು ನಿಕೋಬಾರ್ ದ್ವೀಪಗಳಲ್ಲಿ ಅಕ್ಷಾಂಶ 9.32 ಮತ್ತು ರೇಖಾಂಶ 94.03 ರಲ್ಲಿದೆ. ಎನ್‌ಸಿಎಸ್ ಟ್ವಿಟ್‌ನಲ್ಲಿ ಉಲ್ಲೇಖಿಸಿದಂತೆ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ಚಿಕ್ಕಮಗಳೂರು

ಸಾವಿನ ಮನೆಗೆ ಹೋದವರ ಮನೆಗೆ ಬೆಂಕಿ!

ಸಾವಿನ ಮನೆಗೆ ಹೋದವರ ಮನೆಗೆ ಬೆಂಕಿ!
– ಅಜ್ಜಂಪುರ ತಾಲ್ಲೂಕಿನ ಬಾಣೂರು ಗ್ರಾಮದಲ್ಲಿ ಘಟನೆ
– 2 ಮನೆ, ಒಂದು ದನದ ಕೊಟ್ಟಿಗೆ, ಕೊಬ್ಬರಿ ಶೆಡ್ ನಷ್ಟ

NAMMUR EXPRESS NEWS
ಅಜ್ಜಂಪುರ: ಆಕಸ್ಮಿಕ ಬೆಂಕಿ ತಗುಲಿ ಎರಡು ಮನೆ, ಒಂದು ದನದ ಕೊಟ್ಟಿಗೆ, ಕೊಬ್ಬರಿ ಶೆಡ್ ಸುಟ್ಟು ಕರಕಲಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿಯ ಬಾಣೂರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಕೊಟ್ಟಿಗೆಯಲ್ಲಿದ್ದ ಎರಡು ಎಮ್ಮೆ, ಒಂದು ಕುರಿ ಸಾವನ್ನಪ್ಪಿವೆ.

ಘಟನೆ ನಡೆದಿದ್ದು ಹೇಗೆ?:

ಬಾಣೂರು ಗ್ರಾಮದ ಹನುಮಂತಪ್ಪ (71) ಸೋಮವಾರ ನಿಧನರಾಗಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಮನೆ ಮಂದಿ ತೆರಳಿದ್ದ ವೇಳೆ, ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿ ಜ್ವಾಲೆಯಿಂದ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಗೊಂಡಿದೆ. ಇದರಿಂದ ಬೆಂಕಿ ಮತ್ತಷ್ಟು ಉಲ್ಬಣಿಸಿ, ಹೆಚ್ಚು ಹಾನಿ ಸಂಭವಿಸಿದೆ. ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು, ಕೊಟ್ಟಿಗೆ, ಕೊಟ್ಟಿಗೆಯಲ್ಲಿದ್ದ ಎಮ್ಮೆಗಳು, ಕುರಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ದಹಿಸಿವೆ. ಮನೆ ಕಟ್ಟಲು ಹಣ ಹೊಂದಿಸಿಟ್ಟಿದ್ದೆ. ಮನೆ ನಿರ್ಮಾಣಕ್ಕಾಗಿ ಸಾಗುವಾನಿ, ಬೇವಿನ ಮರ ಸಿದ್ಧಗೊಳಿಸಿ ಇರಿಸಿದ್ದೆ. ಅವೆಲ್ಲವೂ ಸುಟ್ಟು ಹೋಗಿವೆ. ಟಿವಿ, ಕಪಾಟು, ಮಂಚ, ದಿನಸಿ, ಬಟ್ಟೆ ಎಲ್ಲವೂಬೆಂಕಿಗೆ ಆಹುತಿಯಾಗಿದ್ದು, ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023