Categories
ಹಾಸನ

ಪತ್ನಿ ಕಿರುಕುಳಕ್ಕೆ ನವ ವಿವಾಹಿತ ಬಲಿ?!

ಪತ್ನಿ ಕಿರುಕುಳಕ್ಕೆ ನವ ವಿವಾಹಿತ ಬಲಿ?!
– ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದ ಘಟನೆ
– ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾಯ್ತಾ?

NAMMUR EXPRESS NEWS
ಹಾಸನ: ( Hassan ) ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕರಿಯಪ್ಪನಗುಡಿ ಗ್ರಾಮದಲ್ಲಿ ನೇಣು ಬಿಗಿದುಕೊಂಡು ನವವಿವಾಹಿತ ಸಾವಿಗೆ ಶರಣಾದ ಘಟನೆ ನಡೆದಿದೆ.
ಕಿರಣ್ ಬಿ.ಬಿ. (26) ಮೃತ ದುರ್ದೈವಿ. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದವನಾದ ಕಿರಣ್, ಬೇಕರಿ ನಡೆಸುತ್ತಿದ್ದ. ಕಳೆದ ಫೆ.19 ರಂದು ದಂಡಿಗನಹಳ್ಳಿ ಹೋಬಳಿಯ ವಗರಹಳ್ಳಿ ಗ್ರಾಮದ ಸ್ಪಂದನಾ (24) ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ನಂತರ ಪತ್ನಿ ಸ್ಪಂದನಾ ಸೇರಿ ಆಕೆಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಹಣಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಕಿರಣ್ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್

ಮದುವೆಯಾಗಿ ಒಂದು ವರ್ಷವೂ ಕಳೆದಿಲ್ಲ ಅಷ್ಟರಲ್ಲಿಯೇ ಕಿರಣ್ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದ ಬಗ್ಗೆ ಕಿರಣ್ ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಜೈಲುಪಾಲಾಗಿದ್ದ ಕಿರಣ್,ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಎಲ್ಲಾ ಘಟನೆಯಿಂದ ಮನನೊಂದು ಜುಲೈ 31ರ ರಾತ್ರಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ಅಪರಾಧ ಇತರೆ ಸುದ್ದಿ

ರಾಜ್ಯದಲ್ಲಿ ಆನ್‌ಲೈನ್‌ ಗೇಮ್‌, ಬೆಟ್ಟಿಂಗ್‌ ನಿಷೇಧ?!

ರಾಜ್ಯದಲ್ಲಿ ಆನ್‌ಲೈನ್‌ ಗೇಮ್‌, ಬೆಟ್ಟಿಂಗ್‌ ನಿಷೇಧ?!
– ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ
– ಆಪ್ ಮೂಲಕ ಸ್ನೇಹಿತೆ ಮೇಲೆ ಡ್ಯಾನ್ಸ್ ಮಾಸ್ಟರ್ ಅತ್ಯಾಚಾರ!
– ಬೆಂಗಳೂರಲ್ಲಿ ಘಟನೆ: ನಾಲ್ವರು ಕಾಮುಕರ ಅರೆಸ್ಟ್

NAMMUR EXPRESS NEWS
ಮಂಗಳೂರು: ರಾಜ್ಯದಲ್ಲಿ ಆನ್‌ಲೈನ್‌ ಗೇಮ್‌, ಆನ್‌ಲೈನ್‌ ಬೆಟ್ಟಿಂಗ್‌ ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಆನ್ಲೈನ್ ಗೇಮ್, ಬೆಟ್ಟಿಂಗ್ ರಾಜ್ಯದಲ್ಲಿ ರದ್ದಾಗುವ ಸಾಧ್ಯತೆ ಇದೆ.
ಮಂಗಳೂರಲ್ಲಿ ಮಾತನಾಡಿದ ಅವರು, ಆನ್‌ಲೈನ್‌ ಗೇಮ್‌, ಬೆಟ್ಟಿಂಗ್‌ನಿಂದಾಗಿ ಸಮಾಜ ಹಾಳಾಗುತ್ತಿದ್ದು, ಇವೆಲ್ಲವುಗಳನ್ನು ಬ್ಯಾನ್‌ ಮಾಡುವ ಚಿಂತನೆ ಇದೆ ಎಂದ ಅವರು, ಸೈಬರ್‌ ಕ್ರೈಮ್‌ ಮೇಲೆ ಪೊಲೀಸ್‌ ಇಲಾಖೆ ತೀವ್ರ ನಿಗಾ ಇಡಬೇಕು ಎಂದು ನಿರ್ದೇಶ ನೀಡಿದರು.

ಯುವತಿ ಮೇಲೆ ರೇಪ್: ನೃತ್ಯ ಶಿಕ್ಷಕ ಸೇರಿ ಮೂವರ ಬಂಧನ

ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ನೃತ್ಯ ಶಿಕ್ಷಕ ಸೇರಿ ಮೂವರನ್ನು ಬೆಂಗಳೂರಿನ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೃತ್ಯ ಶಿಕ್ಷಕ ಆ್ಯಂಡಿ ಜಾರ್ಜ್ ಅಲಿಯಾಸ್ ಹಾಂಕ್ಷೆ ಹಾಗೂ ಸ್ನೇಹಿತರಾದ ಸಂತೋಷ್, ಶಶಿ ಬಂಧಿತರು. ಮೂವರು ಸೇರಿಕೊಂಡು ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಜುಲೈ 19ರಂದು ಯುವತಿ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮೂವರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು. “ಆರೋಪಿ ಜಾರ್ಜ್, ಹಲವು ಶಾಲೆಗಳಿಗೆ ಆಗಾಗ ಹೋಗಿ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದ. ಇತರೆ ಆರೋಪಿಗಳು, ಸಣ್ಣ- ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ಮೂವರು ಹಲವು ವರ್ಷಗಳ ಸ್ನೇಹಿತರಾಗಿದ್ದು, ಆಗಾಗ ಒಟ್ಟಿಗೆ ಸುತ್ತಾಡುತ್ತಿದ್ದರು ಎಂದು ತಿಳಿಸಿದರು.

ಆ್ಯಪ್ ಸ್ನೇಹ: ‘ಸಂತ್ರಸ್ತ ಯುವತಿ, ಸಾಮಾಜಿಕ ಮಾಧ್ಯಮದ ಆ್ಯಪ್‌ವೊಂದರಲ್ಲಿ ಖಾತೆ ತೆರೆದಿದ್ದರು. ನಾಲ್ಕು ವರ್ಷಗಳ ಹಿಂದೆ ಯುವತಿಗೆ ಆ್ಯಪ್ ಮೂಲಕ ಆರೋಪಿ ಜಾರ್ಜ್ ಪರಿಚಯವಾಗಿತ್ತು. ಇದಾದ ನಂತರ, ಇಬ್ಬರೂ ಪರಸ್ಪರ ಸಂದೇಶ ಕಳುಹಿಸಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.ಯುವತಿ ಹಾಗೂ ಆರೋಪಿ, ಮೊಬೈಲ್ ನಂಬರ್ ಸಹ ಬದಲಾಯಿಸಿಕೊಂಡಿದ್ದರು. ಆಗಾಗ ಭೇಟಿಯಾಗುತ್ತಿದ್ದ ಇಬ್ಬರು, ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಇದೇ ವೇಳೆಯೇ ಆರೋಪಿ, ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಅದರ ವಿಡಿಯೊ ಚಿತ್ರೀಕರಿಸಿಟ್ಟುಕೊಂಡಿದ್ದ ಎಂದು ತಿಳಿಸಿದರು.

ವಿಡಿಯೊ ತೋರಿಸಿ ಅತ್ಯಾಚಾರ:

‘ವರ್ಷದ ಹಿಂದೆಯೆಷ್ಟೇ ಆರೋಪಿ ಯುವತಿಗೆ ವಿಪರೀತ ಕಿರುಕುಳ ನೀಡಲಾರಂಭಿಸಿದ್ದ. ಬೇಸತ್ತ ಯುವತಿ, ಆರೋಪಿ ಜೊತೆ ಮಾತನಾಡುವುದನ್ನು ಬಿಟ್ಟು ದೂರವಾಗಿದ್ದರು’ ಎಂದು ಪೊಲೀಸರು ಹೇಳಿದರು. ‘ಯುವತಿ ಹಿಂದೆ ಬಿದ್ದಿದ್ದ ಆರೋಪಿ, ‘ನನ್ನ ಜೊತೆ ಲೈಂಗಿಕವಾಗಿ ಸಹಕರಿಸಬೇಕು. ಇಲ್ಲದಿದ್ದರೆ, ಖಾಸಗಿ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂಬುದಾಗಿ ಬೆದರಿಸಿದ್ದ. ಮರ್ಯಾದೆಗೆ ಹೆದರಿದ್ದ ಯುವತಿ, ಆರೋಪಿ ಹೇಳಿದ ಸ್ಥಳಕ್ಕೆ ಹೋಗುತ್ತಿದ್ದರು. ಅದೇ ಸಂದರ್ಭದಲ್ಲಿ ಆರೋಪಿ ಅತ್ಯಾಚಾರ ಎಸಗಿದ್ದ’ ಎಂದು ತಿಳಿಸಿದರು.

ಸ್ನೇಹಿತರಿಂದಲೂ ಅತ್ಯಾಚಾರ: ಆರೋಪಿ ಜಾರ್ಜ್‌ ಬಳಿಯ ವಿಡಿಯೊಗಳನ್ನು ಸ್ನೇಹಿತರಾದ ಸಂತೋಷ್ ಹಾಗೂ ಶಶಿ ಪಡೆದುಕೊಂಡಿದ್ದರು. ಅದೇ ವಿಡಿಯೊಗಳನ್ನು ಯುವತಿ ಮೊಬೈಲ್‌ಗೆ ಕಳುಹಿಸಿದ್ದ ಅವರಿಬ್ಬರು, ‘ನಾವು ಕರೆದ ಕಡೆ ಬರಬೇಕು. ಇಲ್ಲದಿದ್ದರೆ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುತ್ತೇವೆ’ ಎಂಬುದಾಗಿ ಬೆದರಿಸಿದ್ದರು.ಎಂದು ಪೊಲೀಸರು ಹೇಳಿದರು. ‘ಹೆದರಿದ್ದ ಯುವತಿ, ಇಬ್ಬರು ಆರೋಪಿಗಳು ಹೇಳಿದ ಸ್ಥಳಕ್ಕೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಆರೋಪಿಗಳು, ಯುವತಿ ಮೇಲೆ ಅತ್ಯಾಚಾರ ಎಸಗಿದ್ದರು. ಮೂವರು ಆರೋಪಿಗಳು, ಪದೇ ಪದೇ ಯುವತಿಗೆ ಕರೆ ಮಾಡಿ ತಾವು ಹೇಳಿದ ಸ್ಥಳಕ್ಕೆ ಬರುವಂತೆ ಒತ್ತಾಯಿಸುತ್ತಿದ್ದರು. ಬೇಸತ್ತ ಯುವತಿ, ಪೋಷಕರಿಗೆ ವಿಷಯ ತಿಳಿಸಿದ್ದರು. ನಂತರವೇ ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ತಿಳಿಸಿದರು. ಆರೋಪಿಗಳ ಮೊಬೈಲ್, ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ಸಾಕಷ್ಟು ವಿಡಿಯೊಗಳು ಸಿಕ್ಕಿವೆ. ಆರೋಪಿಗಳು ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದು, ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ಕರಾವಳಿ ಕಾರ್ಕಳ

ಕಾರ್ಕಳದ ಕ್ವಾರೆಯಲ್ಲಿ ಸ್ಫೋಟ: ಕಾರ್ಮಿಕ ಸಾವು!

ಕಾರ್ಕಳದ ಕ್ವಾರೆಯಲ್ಲಿ ಸ್ಫೋಟ: ಕಾರ್ಮಿಕ ಸಾವು!
– ನಿಟ್ಟೆ ಗುಂಡ್ಯಡ್ಕ ಕಲಿಕಲ್ಲಿನ ಕ್ವಾರೆಯಲ್ಲಿ ಸ್ಪೋಟ
– ಕಾರ್ಕಳದಲ್ಲಿ ಗಾಂಜಾ ಮಾರಾಟ ಜಾಲ: ಅರೆಸ್ಟ್

NAMMUR EXPRESS NEWS
ಕಾರ್ಕಳ: ( Karkala ) ಕಾರ್ಕಳ ತಾಲೂಕು ನಿಟ್ಟೆ ಗುಂಡ್ಯಡ್ಕದ ಕರಿಕಲ್ಲಿನ ಕ್ವಾರೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕಾರ್ಮಿಕನೊಬ್ಬ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ಸಾವಿಗೀಡಾದ ಘಟನೆ ಸಂಭವಿಸಿದೆ. ಸಾವಿಗೀಡಾದ ವ್ಯಕ್ತಿಯನ್ನು ಬಾಗಲಕೋಟೆಯ ವೆಂಕಟೇಶ್ (32) ಎಂದು ಗುರುತಿಸಲಾಗಿದೆ. ಕ್ವಾರೆಯಲ್ಲಿ ಬಂಡೆ ಸಿಡಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದಿಬಂದಿದೆ. ಕ್ವಾರೆಯಲ್ಲಿ ದುಡಿಯುತ್ತಿದ್ದ ಸಂಭವಿಸಿದ ಸ್ಪೋಟದಿಂದ ವೆಂಕಟೇಶ್ ಸ್ಥಳದಲ್ಲಿ ಕುಸಿದು ಬಿದ್ದು ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.

ಕಾರ್ಕಳದಲ್ಲಿ ಗಾಂಜಾ ಮಾರಾಟ ಜಾಲ!

ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟವಾಗುತ್ತಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ವರ್ತಮಾನದ ಮೇರೆಗೆ ಕಾರ್ಕಳ ನಗರ ಠಾಣಾ ಪೊಲೀಸರು ಮಿಯ್ಯಾರು ಗ್ರಾಮದ ಕಾರೋಲ್‌ಗುಡ್ಡೆ ಪರಿಸರದಲ್ಲಿ ಕಾರ್ಯಚರಣೆ ನಡೆಸಿದ್ದಾರೆ. ಕಲೋಲ್ ಗುಡ್ಡೆಯ ನರೇಂದ್ರ(40), ಪುರಿ ಮಸೀದಿ ಬಳಿಯ ಸಿರಾಜ್(21), ತೆಳ್ಳಾರು ಮೇಲಿನಪಲೆಯ ಅಬ್ದುಲ್ ಆರೀಫ್(26), ಬೈಲೂರು ಬಾಣಾಲು ಜೀವನ್ (25) ಎಂಬವರನ್ನು ಪೋಲಿಸರು ಬಂಧಿಸಿದ್ದಾರೆ.
ಜು.31ರ ಮಧ್ಯಾಹ್ನ 3:00 ಗಂಟೆಗೆ ಆರೋಪಿಗಳು ಮಿಯ್ಯಾರು ಗ್ರಾಮದ ಕಾರೋಲ್‌ಗುಡ್ಡೆ 5 ಸೆಂಟ್ಸ್‌ನಲ್ಲಿರುವ ಕಲ್ಲು ಕೆತ್ತುವ ಸ್ಥಳದ ಬಳಿ ಹಣ ಪಡೆದು ಅಮಲು ಪದಾರ್ಥವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು.

ಘಟನಾ ಸ್ಥಳದಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು 1ನೇ ಆರೋಪಿಯ ವಶದಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ 182 ಗ್ರಾಂ ಮಾದಕವಸ್ತು ಗಾಂಜಾದ ಹಸಿ ಹೂವುಗಳು, ತೆನೆಗಳು, ಬೀಜ, ಎಲೆಗಳು, ಗಾಂಜಾ ಮಾರಾಟ ಮಾಡಿದ ನಗದು ಹಣ, ಮೋಟಾರ್ ಸೈಕಲ್, 2ರಿಂದ 4 ನೇ ಅಪಾದಿತರ ವಶದಿಂದ ಪ್ಲಾಸ್ಟಿಕ್ ಚೀಲ ಸಹಿತ ತಲಾ 12 ಗ್ರಾಮ್ ಮಾದಕ ವಸ್ತು ಗಾಂಜಾದ ಹಸಿ ಹೂವುಗಳು, ತೆನೆಗಳು, ಬೀಜ, ಎಲೆಗಳನ್ನು, ತಲಾ ರೂ. 100ನ್ನು ಸ್ವಾಧೀನಪಡಿಸಿ ಅಪಾದಿತರನ್ನು ದಸ್ತಗಿರಿ ಮಾಡಿದ್ದು ಸ್ವಾಧೀನಪಡಿಸಿದ ಗಾಂಜಾದ ಮೌಲ್ಯ ರೂ 10,500 ನಗದು ರೂ 1,800 ಹಾಗೂ ರೂ 50,000ಮೌಲ್ಯದ ಮೋಟಾರ್ ಸೈಕಲನ್ನು
ಸ್ವಾಧೀನಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ ಶಿವಮೊಗ್ಗ

ತೀರ್ಥಹಳ್ಳಿಯಲ್ಲೂ ಕೋಳಿ ಅಂಕದ ಆಟ!

ತೀರ್ಥಹಳ್ಳಿಯಲ್ಲೂ ಕೋಳಿ ಅಂಕದ ಆಟ!
– ಪಡೆ ನಡೆಸ್ತಿದ್ದವರ ಮೇಲೆ ಪೊಲೀಸರ ದಾಳಿ
– ತೀರ್ಥಹಳ್ಳಿ: ವೃದ್ಧರಿದ್ದ ಮನೆಗೆ ನುಗ್ಗಿ ಹಣ ಕಳ್ಳತನ
– ಸಾಗರದಲ್ಲಿ ಬೈಕ್ ಸವಾರನಿಗೆ ಆಕ್ಸಿಡೆಂಟ್: ಸಾವು
– ಕೆರೆಗೆ ಬಿದ್ದ ಬಾಲಕನ ನೋಡಿ ಮಹಿಳೆ ಮರಣ

NAMMUR EXPRESS NWES
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈಗ ಅನೇಕ ದಂಧೆ, ಅಕ್ರಮ ಚಟುವಟಿಕೆಗಳು ಶುರುವಾಗಿದೆ. ಒಂದು ಕಡೆ ಕಳ್ಳತನ, ಅತ್ಯಾಚಾರದಂತಹ ಚಟುವಟಿಕೆ ನಡುವೆ ಇದೀಗ ಕೋಳಿ ಪಡೆ, ಇಸ್ಪೀಟ್, ಆನ್ಲೈನ್ ಬೆಟ್ಟಿಂಗ್ ಹೆಚ್ಚಾಗಿದೆ.
ಈಗಾಗಲೇ ಇದರಿಂದ ನೂರಾರು ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಈ ನಡುವೆ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸರು ಕೋಳಿ ಅಂಕ ನಡೆಸ್ತಿದ್ದವರ ಮೇಲೆ ದಾಳಿ ನಡೆಸಿದ್ದ ಹಲವರನ್ನ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಹಳ್ಳಿಬೈಲ್ ನಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಾಳೂರು ಪೊಲೀಸ್ ಸ್ಟೇಷನ್ ಪೊಲೀಸರು ದಾಳಿ ನಡೆಸಿದ್ದಾರೆ. ಅಂಕಕ್ಕೆ ಬಳಸಿದ್ದ ಕೋಳಿ ಹಾಗೂ ಅದಕ್ಕೆ ಸಂಬಂಧಿಸಿದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.

ವೃದ್ಧರಿದ್ದ ಮನೆಗೆ ನುಗ್ಗಿ ಹಣ ಕಳ್ಳತನ

ತೀರ್ಥಹಳ್ಳಿ ಪಟ್ಟಣಕ್ಕೆ ಸಮೀಪದ ತಿರಳೇಬೈಲು ಬಳಿ ಇಬ್ಬರು ವೃದ್ಧರಿದ್ದ ಮನೆಗೆ ನುಗ್ಗಿದ ಕಳ್ಳ ಸುಮಾರು 20 ಸಾವಿರ ಹಣ ಕದ್ದು ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ತೀರ್ಥಹಳ್ಳಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕಾರು ಡಿಕ್ಕಿ: ಸೈಕಲ್ ಸವಾರ ಸ್ಥಳದಲ್ಲಿಯೇ ಸಾವು!

ಸೈಕಲ್ ಸವಾರನಿಗೆ ಓಮಿನಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಾಗರ ತಾಲೂಕಿನ ಕೆಳದಿ ಗ್ರಾಮದಲ್ಲಿ ಜು.31ರ ಸೋಮವಾರ ಸಂಜೆ ನಡೆದಿದೆ.ಕೆಳದಿ ಗ್ರಾಮದ ಶ್ರೀಧರ್ (55) ಮೃತಪಟ್ಟ ವ್ಯಕ್ತಿ.ಶ್ರೀಧರ್ ಸೈಕಲ್‌ನಲ್ಲಿ ಸಮೀಪದಲ್ಲಿರುವ ತಮ್ಮ ಜಮೀನಿಗೆ ನೀರು ಕಟ್ಟಿ ವಾಪಾಸ್ ಬರುತ್ತಿದ್ದ ವೇಳೆ ಓಮಿನಿ ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಶ್ರೀಧರ್ ಅವರ ಪುತ್ರ ಸಂದೀಪ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೈಕ್ ಕದ್ದವ ಒಂದೇ ದಿನದಲ್ಲಿ ಸಿಕ್ಕಿ ಬಿದ್ದ!

ಸಾಗರದ ಸೈಯದ್ ನಗರದ ಸೊರಬ ರಸ್ತೆಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಹೀರೋ ಸ್ಪೆಂಡರ್ ಬೈಕ್‌ನ್ನು ಕಳ್ಳತನ ಮಾಡಿರುವ ಕುರಿತು ಜುಲೈ 30ರಂದು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಸ್‌ಐ ಶ್ರೀಪತಿ ಗಿನ್ನಿ ನೇತೃತ್ವದಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ರತ್ನಾಕರ್, ಪ್ರಭಾಕರ್ ಕೆ.ಸಿ., ಶ್ರೀಧರ್, ನಾಗರಾಜ್ ನಾಯ್ಕ ಮತ್ತು ವಿಶ್ವನಾಥ ಡಿ.ಕೆ. ಅವರನ್ನು ಒಳಗೊಂಡ ತಂಡ ಸೋಮವಾರ 40 ಸಾವಿರ ರೂ. ಮೌಲ್ಯದ ಬೈಕ್ ಸಮೇತ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಕೆರೆಯಲ್ಲಿ ಬಿದ್ದು ಮೃತಪಟ್ಟ ಬಾಲಕನ ನೋಡಿ ಸಾವು

ಕೆರೆಯಲ್ಲಿ ಮುಳುಗಿ ಬಾಲಕ ಮೃತಪಟ್ಟಿದ್ದನ್ನು ನೋಡಿದ ನೆರೆಮನೆಯ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ಕೇರಳದ ಕಾಸರಗೋಡಲ್ಲಿ ನಡೆದಿದೆ. ಬಂಗಳಂ ಹಾಲಿನ ಸೊಸೈಟಿ ಬಳಿಯ ಜಮಾ ಅತ್ ಕ್ವಾರ್ಟಸ್‌ನಲ್ಲಿ ವಾಸವಾಗಿರುವ ಸೆಬಾಸ್ಟಿನ್ ಎಂಬುವರ ಪುತ್ರ ಆಲ್ಟಿನ್ ಸೆಬಾಸ್ಟಿನ್ (16) ಮನೆ ಪಕ್ಕದಲ್ಲೇ ಇರುವ ಕಂದಕ್ಕೆ ಈಜಾಡಲು ಇಳಿದಿದ್ದರು. ಈ ವೇಳೆ ಅವರ ತಾಯಿ ಸೇರಿದಂತೆ ಹಲವರು ಪಕ್ಕದಲ್ಲೇ ಇದ್ದರು. ನೀರಿಗಿಳಿದ ಕೆಲ ಹೊತ್ತಿನಲ್ಲೇ ಆಯತಪ್ಪಿದ ಅಲ್ವಿನ್ ಮುಳುಗಿ ಕಾಣೆಯಾಗಿದ್ದರು. ಅಗ್ನಿಶಾಮಕ ಮತ್ತು ಸ್ಥಳೀಯರ ಸಹಕಾರದಿಂದ ಶವ ಮೇಲೆತ್ತಲಾಯಿತು. ಅಲ್ಲೇ ಇದ್ದ ನೆರೆಮನೆಯ ವಿಲಾಸಿನಿ (65) ಅವರು ಆಲ್ವಿನ್ ಅವರ ಶವ ನೋಡಿದ ಕೂಡಲೇ ಕುಸಿದು ಬಿದ್ದರು.
ತಕ್ಷಣ ಅವರನ್ನು ನೀಲೇಶ್ವರ ಸಹಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ನೀಲೇಶ್ವರ ಪೊಲೀಸರು ಮಹಜರು ನಡೆಸಿದರು.ಮೂಲತಃ ಆಲಪ್ಪುಳ ನಿವಾಸಿಯಾಗಿರುವ ಸೆಬಾಸ್ಟಿನ್ ಹತ್ತು ವರ್ಷಗಳ ಹಿಂದೆ ಬಂಗಳಂನಲ್ಲಿ ನೆಲೆಸಿದ್ದಾರೆ. ಅವರು ಏರಿಕುಳಂನ ತೈಲ ಕಾರ್ಖಾನೆಯೊಂದರ ಸಿಬ್ಬಂದಿ. ಅವರ ಏಕೈಕ ಪುತ್ರ ಆಲ್ಟಿನ್ ಉಪ್ಪಲಿಕೈ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದ. ವಿಲಾಸಿನಿ ಅವರಿಗೆ ಇಬ್ಬರು ಪುತ್ರರು ಇದ್ದಾರೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಬೀದಿಗಳಿದ ಆಟೋ ಚಾಲಕರು!

ಹುಬ್ಬಳ್ಳಿಯಲ್ಲಿ ಬೀದಿಗಳಿದ ಆಟೋ ಚಾಲಕರು!
– ಶಕ್ತಿ ಯೋಜನೆ ವಿರೋಧಿಸಿ ಆಟೋ ಚಾಲಕರ ಹೋರಾಟ
– ಕೊಪ್ಪಳದ ಕುಷ್ಟಗಿಯಲ್ಲಿ ಕಳ್ಳನಿಗೆ ಧರ್ಮದೇಟು!

NAMMUR EXPRESS NEWS
ಹುಬ್ಬಳ್ಳಿ: ರಾಜ್ಯ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಜಾರಿಗೆ ತಂದಿರುವ ಮೊದಲ ಯೋಜನೆ ಯೋಜನೆ ಎಂದರೆ ಅದು ಶಕ್ತಿ ಯೋಜನೆ, ಇದರ ಪ್ರಕಾರ ಮಹಿಳೆಯರು ರಾಜ್ಯದ ಒಳಗಡೆ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಇದರಿಂದಾಗಿ ಖಾಸಗಿ ವಾಹನಗಳಿಗೆ ಬಾಡಿಗೆ ಇಲ್ಲದಂತಾಗಿದ್ದು,ಇದನ್ನು ಇದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಒಂದು ದಿನದ ಪ್ರತಿಭಟನೆ ನಡೆಸಿದರು. ನಗರದ ಹೃದಯ ಭಾಗವಾದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸೇರಿದ ಆಟೋ ಚಾಲಕರ ಸಂಘದ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ತಮಗೆ ದುಡಿಮೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮನವಿ ಸಲ್ಲಿಸಿ ತಮ್ಮ ಅಳಲನ್ನು ತೋಡಿಕೊಂಡರು. ತಮಗೂ ಸಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ಆಟೋ ಚಾಲಕರು ಪ್ರತಿಭಟನೆಯಿಂದಾಗಿ ಆಟೋಗಳನ್ನು ಸಂಪೂರ್ಣವಾಗಿ ತಗಿತಗೊಳಿಸಲಾಗಿತ್ತು ಇದರಿಂದಾಗಿ ಆಸ್ಪತ್ರೆಗೆ ತೆರಳುವ ರೋಗಿಗಳು ಹೊರ ಜಿಲ್ಲೆಗಳಿಂದ ಆಗಮಿಸಿದ ಜನರು ಪರದಾಡಬೇಕಾಯಿತು.

ಕಳ್ಳನಿಗೆ ಬಿತ್ತು ಧರ್ಮದೇಟು

ಕಳ್ಳನೊಬ್ಬ ಮನೆಗಳವು ನಡೆಸಿ ಪರಾರಿಯಾಗುವ ವೇಳೆ ಗ್ರಾಮಸ್ಥರಿಗೆ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ಹುಲಗೇರಾ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಹುಲಗೇರಾ ಗ್ರಾಮದ ರೈತ ಶರಣಪ್ಪ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ. ಈ ವೇಳೆ ಅವರ ಮನೆಯ ಸದಸ್ಯರು ಆ ದಿನ ಮನೆಯ ಕೆಳ ಅಂತಸ್ತಿಗೆ ಬೀಗ ಹಾಕಿ ಮೇಲಂತಸ್ತಿಗೆ ತೆರಳಿ ಮಲಗಿದ್ದರು. ಮಧ್ಯರಾತ್ರಿಯ ಸುಮಾರಿಗೆ ಮನೆಯ ಬೀಗವನ್ನು ಯಾರೋ ಮುರಿಯುತ್ತಿರುವ ಶಬ್ಧ ಕೇಳಿ ಎಚ್ಚರಗೊಂಡಿದ್ದಾರೆ. ಕಿಟಕಿಯಿಂದ ನೋಡಿದಾಗ ಮನೆಯ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ಮನೆಯ ಸದಸ್ಯರು ಉಪಾಯವಾಗಿ ಕಳ್ಳನನ್ನು ಹಿಡಿದಿದ್ದಾರೆ. ನಂತರ ಕಳ್ಳನಿಗೆ ಧರ್ಮದೇಟು ನೀಡಿ ಹನುಮ ಸಾಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಇಬ್ಬರು ಪೊಲೀಸ್ ಅಧಿಕಾರಿಗಳ ವರ್ಗಾವಣೆ!

ತೀರ್ಥಹಳ್ಳಿಯ ಇಬ್ಬರು ಪೊಲೀಸ್ ಅಧಿಕಾರಿಗಳ ವರ್ಗಾವಣೆ!
– ದಕ್ಷ ಅಧಿಕಾರಿಗಳಾದ ಅಶ್ವಥ್ ಗೌಡ, ಪ್ರವೀಣ್ ನೀಲಮ್ಮನವರ್ ವರ್ಗಾವಣೆ
– ತೀರ್ಥಹಳ್ಳಿ ಪೊಲೀಸ್ ಇಲಾಖೆಗೆ ಎಲ್ಲರೂ ಈಗ ಹೊಸಬರು!

NAMMUR EXPRESS NEWS
ತೀರ್ಥಹಳ್ಳಿ: ( Thirthahalli ) ತೀರ್ಥಹಳ್ಳಿಯ ಇಬ್ಬರು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದಕ್ಷ ಅಧಿಕಾರಿಗಳಾದ ಅಶ್ವಥ್ ಗೌಡ, ಪ್ರವೀಣ್ ನೀಲಮ್ಮನವರ್ ವರ್ಗಾವಣೆ ಮಾಡಲಾಗಿದೆ. ತೀರ್ಥಹಳ್ಳಿ ಠಾಣೆ ಸಿಪಿಐ ಆಗಿದ್ದ ಅಶ್ವಥ್ ಗೌಡ ಅವರನ್ನು ಬೆಂಗಳೂರಿನ ಜ್ಞಾನ ಭಾರತಿ ಠಾಣೆ, ಮಾಳೂರು ಸಿಪಿಐ ಆಗಿದ್ದ ಪ್ರವೀಣ್ ನೀಲಮ್ಮನವರ ಅವರನ್ನು ಹುಬ್ಬಳಿಯ ಗೋಕುಲ್ ರಸ್ತೆ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಆಗುಂಬೆ ಹಾಗೂ ಮಾಳೂರು ಠಾಣೆ ಸಬ್ ಇನ್ಸ್ಪೆಕ್ಟರ್ ವರ್ಗಾವಣೆ ಮಾಡಲಾಗಿತ್ತು. ಇದೀಗ ಇಬ್ಬರು ಅಧಿಕಾರಿಗಳ ವರ್ಗಾವಣೆ ಮತ್ತಷ್ಟು ನಷ್ಟ ತಂದಿದೆ.

ತೀರ್ಥಹಳ್ಳಿ ಪೊಲೀಸ್ ಇಲಾಖೆಗೆ ಎಲ್ಲರೂ ಈಗ ಹೊಸಬರು!

ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನುಮುಂದೆ ಎಲ್ಲರೂ ಹೊಸ ಅಧಿಕಾರಿಗಳೇ ಆಗಿರುತ್ತಾರೆ. ಹೀಗಾಗಿ ಕಾನೂನು ಸುವ್ಯವಸ್ಥೆ ಕಷ್ಟ ಆಗಲಿದೆ.

ತೀರ್ಥಹಳ್ಳಿಯಲ್ಲೂ ಹೆಚ್ಚುತ್ತಿದೆ ಅಪರಾಧ!

ಮಲೆನಾಡು ಅದರಲ್ಲೂ ಸುಸಂಸ್ಕೃತರ ನಾಡು. ತೀರ್ಥಹಳ್ಳಿ ಕೂಡ ರಾಜ್ಯದಲ್ಲೇ ಎಲ್ಲಾ ಕ್ಷೇತ್ರದಲ್ಲೂ ಮುಂದಿದೆ. ಆದ್ರೆ ಈಗ ಅಪರಾಧಿ ಚಟುವಟಿಕೆ, ದಂಧೆಗಳೂ ಹೆಚ್ಚುತ್ತಿರುವುದು ತೀರ್ಥಹಳ್ಳಿ ಹೆಸರನ್ನು ಹರಾಜು ಹಾಕುತ್ತಿದೆ. ಪೊಲೀಸ್ ಇಲಾಖೆ ಇನ್ನಷ್ಟು ಗಟ್ಟಿ ಆಗುವ ಸಮಯದಲ್ಲಿ ದಕ್ಷ ಅಧಿಕಾರಿಗಳ ವರ್ಗಾವಣೆ ಈಗ ಮತ್ತಷ್ಟು ಆತಂಕಕ್ಕೆ ಕಾರಣ ಆಗಿದೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕಸ…ಅಲಬಳ್ಳಿ ಸುತ್ತಲಿನ ಜನತೆಗೆ ವಿಷ!

ತೀರ್ಥಹಳ್ಳಿ ಕಸ…ಅಲಬಳ್ಳಿ ಸುತ್ತಲಿನ ಜನತೆಗೆ ವಿಷ!
– ರಸ್ತೆಯಲ್ಲೇ ಬೀದಿ ನಾಯಿಗಳ ಓಡಾಟ: ಜನರಿಗೆ ಸಂಕಟ
– ಸ್ಥಳೀಯರ ದೂರಿಗೂ ಕಿವಿಗೊಡದ ಆಡಳಿತ!

NAMMUR EXPRESS NEWS
ತೀರ್ಥಹಳ್ಳಿ: ( Thirthahalli ) ತೀರ್ಥಹಳ್ಳಿ ಪಟ್ಟಣ ಹಾಗೂ ಇತರೆ ಪ್ರದೇಶದ ಕಸ ಇದೀಗ ಹುಣಸವಳ್ಳಿ, ಅಲಬಳ್ಳಿ ಜನತೆಗೆ ವಿಷವಾಗಿ ಪರಿಣಮಿಸಿದೆ. ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲಬಳ್ಳಿ ಬಳಿ ಕಸ ವಿಲೇವಾರಿ ಘಟಕದಲ್ಲಿ ಇದೀಗ ಅವ್ಯವಸ್ಥೆಗಳ ಆಗರವಾಗಿದೆ. ಕಸದ ಕಾರಣಕ್ಕಾಗಿ ಕಸ ವಿಲೇವಾರಿ ಘಟಕದ ಬಳಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನ ಓಡಾಡಲು ಸಮಸ್ಯೆ ಎದುರಾಗಿದೆ. ನೂರಕ್ಕೂ ಹೆಚ್ಚು ಬೀದಿ ನಾಯಿಗಳು ಜಾನುವಾರುಗಳನ್ನು ಕಚ್ಚಿ ಸಾಯಿಸಿರುವ ಘಟನೆಗಳು ನಡೆದಿದೆ. ಇನ್ನು ಚಿಕ್ಕ ಮಕ್ಕಳು ಮತ್ತು ಶಾಲೆಗೆ ಹೋಗುವ ಮಕ್ಕಳು, ಪಾದಚಾರಿಗಳು ಓಡಾಡದಂತ ಪರಿಸ್ಥಿತಿಗಳು ಎದುರಾಗಿದೆ.
ಮೇಲಿನ ಕುರುವಳ್ಳಿಯಿಂದ ಆಲಬಳ್ಳಿ ಮಾರ್ಗವಾಗಿ ಹೋಗುವ ಮಾರ್ಗದಲ್ಲಿ ಆಲಬಳ್ಳಿ ಸಮೀಪ ಕಸ ವಿಲೇವಾರಿ ಘಟಕ ಇದೆ. ತೀರ್ಥಹಳ್ಳಿ ಪಟ್ಟಣ ಹಾಗೂ ಅನೇಕ ಗ್ರಾಮ ಪಂಚಾಯಿತಿಗಳ ಕಸವನ್ನು ವಿಲೇವಾರಿ ಮಾಡಲಾಗುತ್ತದೆ. ಕಳೆದ ಐದಾರು ವರ್ಷಗಳಿಂದ ಇಲ್ಲಿ ಕಸ ವಿಲೇವಾರಿ ಘಟಕ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇಲ್ಲಿ ಸಮಪರ್ಕವಾದ ನಿರ್ವಹಣೆ ಇಲ್ಲ, ಕಾಯುವವರು ಇಲ್ಲ. ಇಲ್ಲಿ ಕಸ ವಿಲೇವಾರಿ ಘಟಕದ ದ್ವಾರವನ್ನು ಯಾವಾಗಲೂ ತೆರೆದೆ ಇಡುತ್ತಾರೆ. ಇಲ್ಲಿ ಬೀದಿ ನಾಯಿಗಳು ಗುಂಪು ಕಟ್ಟಿಕೊಂಡು ಕಸವನ್ನು ಕಂಡ ಕಂಡಲ್ಲಿ ತಿಂದು ಎಸೆಯುತ್ತಾ ಇವೆ. ಆದರೂ ಸಂಬಂಧಪಟ್ಟವರು ಗಮನ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಶಾಲೆ ಮಕ್ಕಳಿಗೆ ಜೀವ ಭಯ!

ದಾರಿಯಲ್ಲಿ ಓಡಾಡುವ ಶಾಲಾ ಮಕ್ಕಳಿಗೆ ನಾಯಿ ಕಚ್ಚುವ ಭೀತಿ ಎದುರಾಗಿದೆ. ಕಸ ವಿಲೇವಾರಿ ಘಟಕದ ಅವ್ಯವಸ್ಥೆಯ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಆಡಳಿತಕ್ಕೆ ಸ್ಥಳೀಯರು ಹತ್ತಾರು ಬಾರಿ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಕಸ ವಿಲೇವಾರಿ ಕೇಂದ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಕೂಡ ಮದ್ಯಪಾನ ಮಾಡಿ ಕೆಲಸವನ್ನು ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಇನ್ನು ಕಸವನ್ನ ಎಲ್ಲೆಂದಿರಲ್ಲಿ ಎಸೆಯುತ್ತಿರುವ ಘಟನೆ ಹೆಚ್ಚಾಗಿದ್ದು ಅನಾರೋಗ್ಯಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಕೋಳಿಗಳ ತ್ಯಾಜ್ಯ, ಗಲೀಜು ಕಂಡ ಕಂಡಲ್ಲಿ ಎಸೆಯಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.

ಬಾವಿಯಲ್ಲಿ ಬರುತ್ತಿದೆ ರಾಸಾಯನಿಕ ಎಣ್ಣೆ!

ಕಸ ವಿಲೇವಾರಿ ಘಟಕದಲ್ಲಿ ಸಮರ್ಪಕವಾದ ನಿರ್ವಹಣೆ ಮಾಡದ ಕಾರಣ ಕಸ ವಿಲೇವಾರಿ ಘಟಕದ ಸುತ್ತಮುತ್ತ ತೆಗೆದಿರುವ ಬಾವಿಯಲ್ಲಿ ಎಣ್ಣೆ ರೀತಿಯ ರಾಸಾಯನಿಕ ವಸ್ತುಗಳು ಬರುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ತಕ್ಷಣ ಸಂಬಂಧಪಟ್ಟ ಆಡಳಿತ ಹಾಗೂ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ.

[embedyt] https://www.youtube.com/watch?v=EN-0HHnkSKE%5B/embedyt%5D

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ಶಿವಮೊಗ್ಗ

ಭದ್ರಾವತಿ ಉಕ್ಕಿನ ಕಾರ್ಖಾನೆ ಪುನರಾರಂಭಕ್ಕೆ ಅಸ್ತು!

ಭದ್ರಾವತಿ ಉಕ್ಕಿನ ಕಾರ್ಖಾನೆ ಪುನರಾರಂಭಕ್ಕೆ ಅಸ್ತು!
– ಆ.10ರಿಂದ ವಿ.ಐ.ಎಸ್.ಎಲ್ ಕಾರ್ಖಾನೆ ಆರಂಭ
– ಭದ್ರಾವತಿ ಜನ, ಉದ್ಯೋಗಿಗಳಿಗೆ ಗುಡ್ ನ್ಯೂಸ್!

NAMMUR EXPRESS NEWS
ಶಿವಮೊಗ್ಗ: ( Shivamogga )  ಭದ್ರಾವತಿಯಲ್ಲಿರುವ ವಿ.ಐ.ಎಸ್.ಎಲ್, ಕಾರ್ಖಾನೆ ಆಗಸ್ಟ್ 10 ರಿಂದ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತೀಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸ್ಪಷ್ಟ ನಿರ್ದೇಶನದೊಂದಿಗೆ, ಸೈಲ್ ಆಡಳಿತ ಮಂಡಳಿಯು ಭದ್ರಾವತಿ ವಿಐಎಸ್ಎಲ್ ನಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಪುನರಾರಂಭಿಸಲು ಅಂತಿಮವಾಗಿ ಒಪ್ಪಿಕೊಂಡಿರುವುದನ್ನು ತಿಳಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

ಅದರನ್ವಯ ಬಾರ್‌ಮಿಲ್ ಕಾರ್ಯಾಚರಣೆಗಳು ಆಗಸ್ಟ್ 10 ರಿಂದ ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಪ್ರಾಥಮಿಕ ಗಿರಣಿ ಪುನರಾರಂಭವಾಗಲಿದೆ ಎಂದು ಹೇಳಿದ್ದಾರೆ. ವಿಐಎಸ್ಎಲ್ ಅನ್ನು ನಂಬಿಕೊಂಡಿರುವ ಉದ್ಯೋಗಿ ಸಮುದಾಯಕ್ಕೆ ಮತ್ತು ಭದ್ರಾವತಿಯ ಜನ ಸಾಮಾನ್ಯರಿಗೆ ಈ ಒಂದು ನಿರ್ಧಾರ ಮಹತ್ವದ ಕ್ಷಣವಾಗಿದೆ ಎಂಬುದಾಗಿ ಭಾವಿಸಿದ್ದೇನೆ, ಕೇಂದ್ರ ಸರ್ಕಾರದ ಸಂಬಂಧಿಸಿದ ಮಂತ್ರಿಗಳೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆಸಲಾದ ನಿರಂತರ ಪ್ರಯತ್ನದ ಫಲವಾಗಿ ಇಂತಹ ಒಂದು ಮಹತ್ತರವಾದ ನಿರ್ಣಯವನ್ನು ಸೈಲ್ ಕೈಗೊಳ್ಳಲು ಸಹಕಾರವಾಗಿದ್ದು, ಈ ಮಹತ್ವದ ಮೈಲಿಗಲ್ಲನ್ನು ಪಡೆಯಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಹಾವು ಕಚ್ಚಿ ಮಹಿಳೆ ದುರ್ಮರಣ

ತೀರ್ಥಹಳ್ಳಿಯಲ್ಲಿ ಹಾವು ಕಚ್ಚಿ ಮಹಿಳೆ ದುರ್ಮರಣ
– ಸಮಾಜ ಸೇವಕ ಗೋಪಾಲ್ ಪೂಜಾರಿ ಪುತ್ರಿ ಸಾವು
– ಮನೆಯಲ್ಲಿ ನಾಗರಹಾವು ಕಚ್ಚಿ ಆಸ್ಪತ್ರೆಗೆ ಕರೆದೊಯ್ಯುವಾಗ ವಿಧಿ ವಶ

NAMMUR EXPRESS NWES
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸಮೀಪದ ಮೇಲಿನಕುರುವಳ್ಳಿಯಲ್ಲಿ ನಾಗರಹಾವು ಕಚ್ಚಿ ತೀವ್ರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ್ ಪೂಜಾರಿ ಅವರ ಪುತ್ರಿ ಪೂರ್ಣಿಮಾ ಮೃತರು. ಮನೆಯ ಮುಂದೆ ಗಿಡ ಗಂಟಿ ಸವರುವಾಗ ಮದ್ಯಾಹ್ನ ಹಾವು ಕಚ್ಚಿದ್ದು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಇವರ ಪಾರ್ಥಿವ ಶರೀರ ಮೇಲಿನಕುರುವಳ್ಳಿಯ ಅವರ ನಿವಾಸದಲ್ಲಿ ಇಡಲಾಗಿದ್ದು ಬುಧವಾರ ಅತ್ಯಂಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ತೀರ್ಥಹಳ್ಳಿ ಯುವ ಮುಖಂಡ ಪೂರ್ಣೇಶ್ ಪೂಜಾರಿ ಅವರ ಸಹೋದರಿ ಇವರಾಗಿದ್ದಾರೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ಉದ್ಯೋಗ ಸುದ್ದಿ

ಒಂದು ಸಾವಿರ ಪಿಎಸ್ಐ ನೇಮಕ – ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ

ಶೀಘ್ರ ಒಂದು ಸಾವಿರ ಪಿಎಸ್ಐ ನೇಮಕ?
– ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ
– ಬಿಜೆಪಿ ಸರ್ಕಾರದ ಪಿಎಸ್ಐ ನೇಮಕಾತಿ ಅಕ್ರಮ ತನಿಖೆ

NAMMUR EXPRESS NEWS
ತುಮಕೂರು: ಮುಂದಿನ ದಿನಗಳಲ್ಲಿ ಒಂದು ಸಾವಿರ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ತುಮಕೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿಎಸ್ಐ ನೇಮಕಾತಿ ಹಗರಣದ ವಿಚಾರ ನ್ಯಾಯಾಲಯದಲ್ಲಿ ಇದೆ, ಇದರಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಎಲ್ಲವೂ ಸರಿಯಾಗಿದ್ದರೆ ಈ ಹಿಂದೆಯೇ 545 ಪಿಎಸ್ಐ ನೇಮಕ ಆಗಬೇಕಿತ್ತು. ಈಗ ಮತ್ತೆ 400 ಪಿ ಎಸ್ ಐ ನೇಮಕ ಮಾಡಿಕೊಳ್ಳಲು ಗೃಹ ಇಲಾಖೆ ಪ್ರಸ್ತಾಪ ಸಲ್ಲಿಸಿದೆ. ಎರಡು ಸೇರಿ ಸುಮಾರು ಒಂದು ಸಾವಿರ ಪಿಎಸ್ಐ ನೇಮಕ ಮಾಡಿಕೊಳ್ಳಬೇಕಿದೆ ಎಂದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ತನಿಖೆ ಪೂರ್ಣಗೊಂಡು, ಸಮಸ್ಯೆ ಬಗೆ ಹರಿಯಬೇಕಿದೆ ನಂತರವಷ್ಟೇ ಹೊಸ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023