Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಮೂವರು ಮಕ್ಕಳ ಜತೆ ಬಾವಿಗೆ ಹಾರಿದ ತಾಯಿ!
– ಮೂವರು ಮಕ್ಕಳು ಸಾವು: ತಾಯಿ ಬಚಾವ್
– ಲೋನ್ ಆ್ಯಪ್ ಸಾಲ: ಯುವತಿ ನಗ್ನ ಫೋಟೋ ಮಾಡಿ ವೈರಲ್ ಬೆದರಿಕೆ
– ಸಾಗರ: ಲಾರಿಯನ್ನೆ ಕದ್ದೊಯ್ಯಲು ಯತ್ನಿಸಿದ ಕಳ್ಳರು!
– ಕಳಸ! ವೃದ್ಧನ ಎದೆಗೆ ತಿವಿದ ಕಾಡು ಕೋಣ!
– ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ!

NAMMUR EXPRESS NEWS
ಬಾಗಲಕೋಟೆ: ಒಂದು ಗಂಡು ಮಗುವಿದ್ದರೂ ಮತ್ತೆ ಗಂಡು ಮಗುವಾಗಿಲ್ಲವೆಂದು ಮಹಿಳೆಯೊಬ್ಬಳು ಮೂವರು ಮಕ್ಕಳ ಸಹಿತ ಬಾವಿಗೆ ಹಾರಿದ್ದಾಳೆ. ಆದರೆ ಕೊನೆಗೆ ಮೂವರು ಮಕ್ಕಳೂ ಸಾವಿಗೀಡಾಗಿದ್ದು, ತಾಯಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಂಬಾರಹಳ್ಳದಲ್ಲಿ ನಡೆದಿದೆ. ಸಂಗೀತಾ ಗುಡೆಪ್ಪನವರ್ ಕೃತ್ಯ ಎಸಗಿದ ತಾಯಿ. ಈಕೆಯ 17 ದಿನಗಳ ಹೆಣ್ಣು ಮಗು ಸೌಜನ್ಯಾ, ಪುತ್ರ ಶ್ರೀಶೈಲ (5), ಮಗಳು ಶ್ರಾವಣಿ (3) ಸಾವಿಗೀಡಾಗಿರುವ ಮಕ್ಕಳು. ಸಂಗೀತಾಗೆ ಇತ್ತೀಚೆಗೆ ಹೆರಿಗೆ ಆಗಿದೆ. ಆದರೆ ಆಕೆಗೆ ಮೂರನೇ ಮಗು ಗಂಡೇ ಆಗಬೇಕೆಂಬ ಆಸೆ ಇತ್ತು. ಆದರೆ 17 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇದರಿಂದ ತೀವ್ರವಾಗಿ ಮನನೊಂದ ಈಕೆ ಹಸಗೂಸು ಸೇರಿ ಮೂವರು ಮಕ್ಕಳೊಂದಿಗೆ ಹೊಲದಲ್ಲಿದ್ದ ಬಾವಿಗೆ ಹಾರಿದ್ದಾಳೆ.ಪತಿ ಹನಮಂತ ಗುಡೆಪ್ಪನವರ್ ತಕ್ಷಣ ರಕ್ಷಣೆಗೆ ಧಾವಿಸಿದ್ದರಿಂದ ಸಂಗೀತಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಕ್ಕಳನ್ನು ರಕ್ಷಿಸಲು ತಂದೆ ಹರಸಾಹಸ ಪಟ್ಟಿದ್ದರೂ ಸಾಧ್ಯವಾಗಿಲ್ಲ. ಮಕ್ಕಳನ್ನು ಬಾವಿಗೆ ತಳ್ಳಿದ್ದ ಹಿನ್ನೆಲೆಯಲ್ಲಿ ತಾಯಿ ಸಂಗೀತಾ ವಿರುದ್ಧ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಲೋನ್ ಆ್ಯಪ್ ಸಾಲ: ಯುವತಿ ನಗ್ನ ಫೋಟೋ ಮಾಡಿ ವೈರಲ್ ಬೆದರಿಕೆ

ಲೋನ್ ಆ್ಯಪ್ ಒಂದರಲ್ಲಿ ಸಾಲ ಪಡೆದ ಮಹಿಳೆಯೋರ್ವರಿಗೆ ಸಾಲವನ್ನು ಮರುಪಾವತಿಸಿದ ಬಳಿಕವು ಹೆಚ್ಚಿನ ಲೋನ್ ಪಡೆಯುವಂತೆ ಮಾಡಿ ಹಣ ಪಾವತಿಸಲು ಒತ್ತಾಯಿಸಲಾಗಿದೆ. ಹಣ ಪಾವತಿಸದಿದ್ದಲ್ಲಿ ನಗ್ನ ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಲಾಗಿದೆ ಎಂದು ಮಂಗಳೂರು ಸೆನ್ ಠಾಣೆಯಲ್ಲಿದೂರು ದಾಖಲಾಗಿದೆ.ಮಹಿಳೆ ಎಪ್ರಿಲ್ 15 ರಂದು quick money ಎಂಬ ಲೋನ್ ಆ್ಯಪ್ ನಲ್ಲಿ 10,000 ರೂ. ಸಾಲಕ್ಕೆ ಮನವಿ ಮಾಡಿದ್ದರು. ತಕ್ಷಣ ಅವರ ಖಾತೆಗೆ 7500 ರೂ. ಕ್ರೆಡಿಟ್ ಆಗಿದೆ. ಮಹಿಳೆ ಸ್ವಲ್ಪ ದಿನಗಳ ಬಳಿಕ ಪೂರ್ತಿ 10,000 ರೂ. ಹಣವನ್ನು ಮರು ಪಾವತಿ ಮಾಡಿದ್ದಾರೆ.

ಆದರೆ ಆ ಬಳಿಕ ಬೇರೆ ಬೇರೆ ವಾಟ್ಸ್ ಆ್ಯಪ್ ಸಂಖ್ಯೆಯಿಂದ ಮಹಿಳೆಗೆ ಕಡ್ಡಾಯವಾಗಿ ಮತ್ತೆ ಲೋನ್ ಪಡೆಯಬೇಕೆಂದು ಒತ್ತಾಯಿಸಲಾಗಿದೆ. ಅಲ್ಲದೆ ಆಕೆಯ ಖಾತೆಗೆ 14000 ರೂ. ಲೋನ್ ಅನ್ನು ಕ್ರೆಡಿಟ್ ಮಾಡಲಾಗಿದೆ. ಈ ಹಣವನ್ನು ಮಹಿಳೆ ಮರು ಪಾವತಿ ಮಾಡಿದ್ದಾರೆ. ಎಲ್ಲಾ ಹಣವನ್ನು ಪಾವತಿಸಿದ ಬಳಿಕವು ಮತ್ತೆ ಹೆಚ್ಚಿನ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿ 51000 ರೂ. ಲೋನ್ ಮಹಿಳೆ ಖಾತೆಗೆ ವರ್ಗಾಯಿಸಿದ್ದಾರೆ.ಅಲ್ಲದೆ ಮಹಿಳೆಗೆ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿ ಹಣ ಹಿಂತಿರುಗಿಸುವಂತೆ ಬೆದರಿಕೆ ಹಾಕಲಾಗಿದೆ. ಅಲ್ಲದೆ ಆಕೆಯ ಫೋಟೋವನ್ನು ಯಾರದ್ದೋ ಯುವಕನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ ಮಹಿಳೆಗೆ ಕಳುಹಿಸಿ ಇತರರಿಗೆ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿಯೂ ಬೆದರಿಸಿದ್ದಾರೆ. ಇದರಿಂದ ಮನನೊಂದ ಮಹಿಳೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಲಾರಿಯನ್ನೆ ಕದ್ದೊಯ್ಯಲು ಯತ್ನಿಸಿದ ಕಳ್ಳರು!

ರಸ್ತೆ ಬದಿ ನಿಲ್ಲಿಸಿದ್ದ ಲಾರಿಯೊಂದನ್ನು ಕದಿಯಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದಲ್ಲಿ ನಡೆದಿದೆ. ಆನಂದಪುರದ ಅಶೋಕ ರಸ್ತೆಯಲ್ಲಿ ಸ್ಥಳೀಯ ನಿವಾಸಿಯೊಬ್ಬರು ಲಾರಿಯೊಂದನ್ನ ಪಾರ್ಕ್ ಮಾಡಿದ್ದರು. ಇದನ್ನ ಗಮನಿಸಿದ್ದ ದುಷ್ಕರ್ಮಿಗಳು ತಡರಾತ್ರಿ ಲಾರಿಯ ಬಳಿಗೆ ಬಂದು, ಅದನ್ನ ಸ್ಟಾರ್ಟ್ ಮಾಡಿ ಕೊಂಡೊಯ್ಯಲು ಯತ್ನಿಸಿದ್ದಾರೆ. ಆದರೆ ಎಷ್ಟೆ ಪ್ರಯತ್ನಿಸಿದರೂ ಲಾರಿ ಸ್ಟಾರ್ಟ್ ಆಗಲಿಲ್ಲ. ಹೀಗಾಗಿ ಲಾರಿ ಕದಿಯುವ ಯತ್ನ ಬಿಟ್ಟು, ಲಾರಿಯಲ್ಲಿದ್ದಡೀಸೆಲ್ ಕದ್ದು ಪರಾರಿಯಾಗಿದ್ದಾರೆ. ಈ ಘಟನೆ ಸ್ಥಳೀಯ ನಿವಾಸಿಯೊಬ್ಬರು ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳಸ! ವೃದ್ಧನ ಎದೆಗೆ ತಿವಿದ ಕಾಡು ಕೋಣ!

ವೃದ್ದನ ಹೃದಯ ಭಾಗಕ್ಕೆ ಕಾಡುಕೋಣ ತಿವಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮುಜೇಖಾನ್ ಗ್ರಾಮದಲ್ಲಿ ನಡೆದಿದ್ದು ದಾಳಿಗೊಳಗಾದ ವೃದ್ಧನ ಸ್ಥಿತಿ ಗಂಭೀರವಾಗಿದೆ. ಕಾಡಂಚಿನ ಗ್ರಾಮವಾದ ಮುಜೇಖಾನ್ ನಿಂದ ಕಳಸಕ್ಕೆ ಬರುವಾಗ ಈ ಘಟನೆ ನಡೆದಿದೆ, ಗಂಭೀರವಾಗಿ ಗಾಯಗೊಂಡಿರುವ ಮರೀಗೌಡ (60) ರನ್ನು ಕಳಸದ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ!

ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ನಡೆದಿದೆ. ಹೇಮಂತ್ ಕುಮಾರ್ (16) ಹುಳಿಯಾರು ಕರೆ ಅಂಗಳದಲ್ಲಿ ಶವ ವಾಗಿ ಪತ್ತೆಯಾಗಿದ್ದು ಮೃತ ದುರ್ದೈವಿ ಹಂದನಕೆರೆ ಹೋಬಳಿಯ ಗೋಪಾಲಪುರದ ನಿವಾಸಿಯಾಗಿದ್ದಾನೆ.
ಎಸ್.ಎಸ್.ಎಲ್.ಸಿ ಓದುತ್ತಿದ್ದ ಹೇಮಂತ್ ಕುಮಾರ್, ಕ್ರೀಡಾಕೂಟದಲ್ಲಿ ಭಾಗವಹಿಸಲು ಮೂರು ದಿನದ ಹಿಂದೆ ತನ್ನ ಪೋಷಕರಿಗೆ ಹೇಳಿ ಮನೆಯಿಂದ ಹೋಗಿದ್ದನು. ವಾಪಸ್ ಮನೆಗೆ ಬರದ ಕಾರಣ ಪೋಷಕರು ಎಷ್ಟು ಹುಡಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ಮಾಹಿತಿ

ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!
– ವಾಟ್ಸಾಪ್ ಅಲ್ಲಿ ಶೇರ್ ಆಗುತ್ತಿದೆ ಸುಳ್ಳು ಮೆಸೇಜ್
– ಯಾಮಾರಿದ್ರೆ ಹೋಗುತ್ತೆ ನಿಮ್ಮ ದುಡ್ಡು
– ಎಚ್ಚರ ಇಂತಹ ಸುಳ್ಳು ಮಾಹಿತಿಗೆ ಕಿವಿಗೋಡಬೇಡಿ!

NAMMUR EXPRESS NEWS
ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ಜಿಯೋ ಕಂಪನಿಯ ಮಾಲೀಕರಾದ ಅಂಬಾನಿಯವರ ಹುಟ್ಟುಹಬ್ಬದ ನಿಮಿತ್ತ ಜಿಯೋ ಕಂಪನಿಯು ಎಲ್ಲಾ ಭಾರತದ ಬಳಕೆದಾರರಿಗೆ 28 ದಿನಗಳ ಪ್ರಿ ರಿಚಾರ್ಜ್ ಆಫರ್ ನೀಡಿದ್ದಾರೆ. ಅದನ್ನು ಪಡೆಯಲು ಮೇಸೆಟ್‌ನಲ್ಲ ಕಂಡ ಲಿಂಕನ್ನು ಕ್ಲಿಕ್ ಮಾಡಿ ಎಂಬ ಮಾಹಿತಿ ಹರಿದಾಡುತ್ತಿದ್ದು, ಇದು ನೈಜವಾದ ಮಾಹಿತಿಯಲ್ಲ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಪೋಲಿಸ್ ಇಲಾಖೆ ಜನರಲ್ಲಿ ಮನವಿ ಮಾಡಿದೆ.

ಇಂಗ್ಲೀಷ್ ಅಲ್ಲಿ ಮೆಸೇಜ್ ಇರುತ್ತದೆ

AMBANI BIRTHDAY OFFER JIO COMPANY is giving 28 days free recharge of 239 to all Indian users to celebrate the birthday of its owner Mukesh Ambani. Recharge your number by clicking on the blue colored link below. myphoneoffer.com

ಎಂಬ ವಾಟ್ಸಾಪ್ ಮೆಸೇಜ್ ಹರಿದಾಡುತ್ತಿದ್ದು ಯಾರೂ ಇಂತಹ ಮೆಸೇಜ್ ಸ್ಪಂದನೆ ನೀಡಬಾರದು ಎಂದು ಮನವಿ ಮಾಡಲಾಗಿದೆ. ಇದೊಂದು ಮೋಸಗಾರರ ಮೋಸದ ಜಾಲವಾಗಿದ್ದು, ನೀವು ಅಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಅವರು
ಸದರಿ ಮೇಸೆಯನ್ನು 10 ಜನರಿಗೆ ಪಾರ್ವರ್ಡ್ ಮಾಡಲು ತಿಳಿಸಿ ನಂತರ ಒಂದು ಆಪ್‌ನ್ನು ಇನ್ಸಾಲ್‌ ಮಾಡಲು
ತಿಳಿಸುತ್ತಾರೆ. ಅದರಿಂದ ನಿಮ್ಮ ಮಾಹಿತಿ ಹಾಗು ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ತರದ ಮೋಸದ ಜಾಲದಿಂದ ಜಾಗೃತರಾಗಿರಿ.ಯಾವುದೇ ಯಾವುದೇ ಸೈಬರ್ ದೂರುಗಳಿಗೆ http://www.cybercrime.gov.in ಬೇಟಿ ನೀಡಿ ಅಥವಾ 1930 ಗೆ ಕರೆ ಮಾಡಿ.

ಇದನ್ನೂ ಓದಿ : ವಾಹನ ನಂಬರ್ ಪ್ಲೇಟ್ ನಿಯಮ ಬದಲು!

Categories
ಕೊಪ್ಪ

ಕೊಪ್ಪ: ಎಣ್ಣೆ ವಿರುದ್ಧ ತಿರುಗಿಬಿದ್ದ ನಾರಿಯರು!

ಕೊಪ್ಪ: ಎಣ್ಣೆ ವಿರುದ್ಧ ತಿರುಗಿಬಿದ್ದ ನಾರಿಯರು!
– ಕೊಪ್ಪ ತಾಲೂಕಲ್ಲಿ ಅಕ್ರಮ ಹೆಂಡದ ಹಾವಳಿ
– ಬಡವರು, ಕೂಲಿ ಕಾರ್ಮಿಕರ ಬದುಕು ಮದ್ಯಕ್ಕೆ ಬಲಿ
– ಅಕ್ರಮಕ್ಕೆ ಕಡಿವಾಣ ಹಾಕಲು ಮಹಿಳೆಯರ ಪಟ್ಟು

NAMMUR EXPRESS NEWS
ಕೊಪ್ಪ: ಕೊಪ್ಪ ತಾಲೂಕಿನ ಹಲವು ಭಾಗದಲ್ಲಿ ಬಹುತೇಕ ಕೂಲಿ ಕಾರ್ಮಿಕರು, ಬಡ ವರ್ಗದವರು ಅಕ್ರಮ ಮದ್ಯಕ್ಕೆ ಜೀವ, ಜೀವನ ಕಳೆದುಕೊಳ್ಳುತ್ತಿದ್ದಾರೆ. ಯುವಜನತೆ ಕುಡಿತದ ಚಟಕ್ಕೆ ಬಲಿಯಾಗಿ ಕುಟುಂಬ ಬೀದಿಪಾಲಾಗುತ್ತಿದೆ. ತಕ್ಷಣ ಅಕ್ರಮ ಮದ್ಯ ನಿಲ್ಲಿಸಬೇಕು ಎಂದು ಮಹಿಳೆಯರು ಪ್ರತಿಭಟನೆಗೆ ಇಳಿದಿದ್ದಾರೆ. ಮೇಗೂರು ಬಳಿಯ ಕಿತ್ತೆಗುಳಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಕುಡಿತದ ಚಟದಿಂದ ಸಾವನ್ನಪ್ಪಿದ್ದರು. ಆಗ ಗ್ರಾಮದ ನೂರಾರು ಮಹಿಳೆಯರು ಅಕ್ರಮ ಸಾರಾಯಿ ಮಾರಾಟ ವಿರೋಧಿಸಿ ಪ್ರತಿಭಟನೆ ಮಾಡಿದ್ದರು. ಆದರೆ ಅಕ್ರಮ ಸರಾಯಿ ಮಾರಾಟಗಾರರ ಮೇಲೆ ಯಾವುದೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಆಗಿಲ್ಲ. ಹೀಗೆ ಮುಂದುವರಿದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮೇಗುಂದ ಹೋಬಳಿಯಲ್ಲಿ ನಿಲ್ಲದ ಅಕ್ರಮ ಮದ್ಯ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಿತಿ ಮೀರಿದೆ. ಅದರಲ್ಲೂ ಅಗಳಗಂಡಿ, ಹೆಗ್ಗಾರು, ಎತ್ತಿನಟ್ಟಿ ಗ್ರಾಮದ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಉಗ್ರ ಹೋರಾಟದ ಎಚ್ಚರಿಕೆ

ಅಗಳಗಂಡಿ ಸಮೀಪ ಕಚಿಗೆ ಗ್ರಾಮದಲ್ಲಿ ಎಮ್.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆ ತೆರೆಯುವ ಹುನ್ನಾರ ನಡೆದಿದೆ. ಸಮೀಪದಲ್ಲಿ ಬಸ್ ನಿಲ್ದಾಣ, ಸರ್ಕಾರಿ ಶಾಲೆ, ಅಂಗನವಾಡಿ ಇದೆ. ಗ್ರಾಮದ ಮಹಿಳೆಯರು, ಸಂಘ- ಸಂಸ್ಥೆಗಳು ಅನುಮತಿ ನೀಡದಂತೆ ವಿರೋಧ ವ್ಯಕ್ತಪಡಿಸಿವೆ. ಆದರೂ, ಕೆಲವು ಅಂಗಡಿಗಳಲ್ಲಿ ಕಡಿಮೆ ಬೆಲೆಯ ಕಳಪೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆಪಾದಿಸಿದ್ದಾರೆ. ಅಕ್ರಮ ಮದ್ಯ ಮಾರಾಟ ತಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಇದನ್ನೂ ಓದಿ : ವಾಹನ ನಂಬರ್ ಪ್ಲೇಟ್ ನಿಯಮ ಬದಲು!

Categories
ಶಿವಮೊಗ್ಗ

ಟಾಪ್ ನ್ಯೂಸ್ ಶಿವಮೊಗ್ಗ

ಶಿಕಾರಿಪುರ ಮರ್ಡರ್ ಕೇಸ್: ಏಳು ಮಂದಿ ಅರೆಸ್ಟ್
– ಸೊರಬ: ದೇವಸ್ಥಾನದ ದಿನಗೂಲಿ ನೌಕರ ಆತ್ಮಹತ್ಯೆ
– ಶಿವಮೊಗ್ಗದಲ್ಲಿ ಗಾಂಜಾ ಗಲಾಟೆ!: ಹಲವರ ಬಂಧನ?
– ಹೊಸನಗರ: ತಮ್ಮಡಿಕೊಪ್ಪ ಗ್ರಾಮದಲ್ಲಿ ಶಾಲೆಗೆ ಬೀಗ
– ಸಾಗರ: ಗಾಂಜಾ ವ್ಯಸನಿಗಳ ಬಂಧನ
– ಭದ್ರಾವತಿ: ಹೊರಗುತ್ತಿಗೆ ನೌಕರರ ಪ್ರತಿಭಟನೆ

NAMMUR EXPRESS NEWS
ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದಿದ್ದ ಈದ್ ಮಿಲಾದ್ ಕಮಿಟಿ ವಿಚಾರದ ಗಲಾಟೆಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಾಷಾ, 42 ವರ್ಷ, ರೋಷನ್, 19 ವರ್ಷ, ಸದಾಂ ಹುಸೇನ್, 31 ವರ್ಷ, ಸಲ್ಮಾನ್ @ ಸಲೀಂ 22 ವರ್ಷ,ಇಮಾನ್, 30 ವರ್ಷ, ಆರಿಫ್ ಜಾನ್, 33 ವರ್ಷ, ಎಸ್ಎನ್ ಬಾಬು ಬಂಧಿತರು. ಈದ್ ಮಿಲಾದ್ ಕಮಿಟಿಯಲ್ಲಿ ಪ್ರತಿವರ್ಷ ಶಿಕಾರಿಪುರದ ಗಗ್ರಿ ಏರಿಯಾದವರು ಆಯ್ಕೆಯಾಗುತ್ತಿದ್ದರು.ಈ ಸಲ ಸೊಸೈಟಿ ಕೇರಿಯವರು ಅಧ್ಯಕ್ಷರಾಗಬೇಕು ಎಂಬ ವಿಚಾರಕ್ಕೆ ಗಲಾಟೆಯಾಗಿದೆ. ಈ ವಿಚಾರದಲ್ಲಿಯೇ ಜಾಫರ್ ಹತ್ಯೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪುರಸಭೆಯ ಸದಸ್ಯ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದರು. ಇದೀಗ ಆರೋಪಿಗಳನ್ನ ಬಂಧಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

ಚಂದ್ರಗುತ್ತಿ ದೇವಸ್ಥಾನದ ನೌಕರ ಆತ್ಮಹತ್ಯೆ

ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ಶ್ರೀ ರೇಣುಕಾಂಬ ದೇವಸ್ಥಾನದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ. ಚಂದ್ರಗುತ್ತಿ ಗ್ರಾಮದ ಗಣಪತಿ ತಾವರೆಹಳ್ಳಿ (40) ಮೃತ ನೌಕರ. ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ‌ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಗಣಪತಿ ಅವರು ಕೆಲ‌ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ಮನೆಯಲ್ಲಿ ಯಾರೂ‌ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಸೊರಬ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಲ್ಲಿ ಗಾಂಜಾ ಗಲಾಟೆ!

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್‌ ವ್ಯಾಪ್ತಿಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆನಿನ್ನ ಹೆಸರಲ್ಲಿ ನಮ್ ಏರಿಯಾದಲ್ಲಿ ಗಾಂಜಾ ಮಾರುತ್ತೀಯಾ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿದೆ.  ಆ.23ರಂದು ಶಿವಮೊಗ್ಗದ ಬಸ್ ನಿಲ್ದಾಣದಿಂದ ಬೈಪಾಸ್ ಕಡೆಗೆ ಬರುತ್ತಿದ್ದ ಯುವಕನೊಬ್ಬನನ್ನ ತಡೆದ ಆರೋಪಿಗಳು ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಭರ್ಚಿಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದವರು ಅಡ್ಡಬಂದು, ಆರೋಪಿಗಳಿಂದ ಯುವಕನನ್ನು ರಕ್ಷಣೆ ಮಾಡಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ವಿಷಯ ತಿಳಿದ ದೊಡ್ಡಪೇಟೆ ಪೊಲೀಸರು ಗಾಯಾಳು ನೀಡಿದ ದೂರಿನನ್ವಯ ಕೇಸ್‌ ದಾಖಲಿಸಿಕೊಂಡಿದ್ದಾರೆ.

ಶಾಲೆಗೆ ಬೀಗ ಜಡಿದು ಪೋಷಕರ ಪ್ರತಿಭಟನೆ

ಮಕ್ಕಳಿಗೆ ಸಮರ್ಪಕವಾಗಿ ತರಗತಿ ನಡೆಯುತ್ತಿಲ್ಲ ಎಂದು ಆರೋಪಿಸಿ ಪೋಷಕರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಹೊಸನಗರದ ತಮ್ಮಡಿಕೊಪ್ಪ ಗ್ರಾಮದಲ್ಲಿ ಶಾಲೆ ಮುಂದೆ ಪೋಷಕರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಮುಖ್ಯ ಶಿಕ್ಷಕರು ಮನಸೋಯಿಚ್ಛೆ ಶಾಲೆ ಬರುತ್ತಿದ್ದಾರೆ. ಪ್ರತಿ ವಿಷಯಕ್ಕೆ ಒಬ್ಬರು ಶಿಕ್ಷಕರು ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಶಾಲೆಗೆ ಬೀಗ ಹಾಕಿ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಲಾಯಿತು. ಮಕ್ಕಳು ಕೂಡ ಶಾಲೆಯಿಂದ ಹೊರಗೆ ಕುಳಿತಿದ್ದರು. ಸಮಸ್ಯೆ ಕುರಿತು ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಹಾಗಿದ್ದೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಾಗರ: ಗಾಂಜಾ ವ್ಯಸನಿಗಳ ಬಂಧನ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಅಬಕಾರಿ ಅಧಿಕಾರಿಗಳು ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಇಬ್ಬರು ಗಾಂಜಾ ವ್ಯಸನಿಗಳನ್ನೂ ಬಂಧಿಸಿದ್ದಾರೆ. ಅನುಮಾನದ ಮೇರೆಗೆ ಇಬ್ಬರನ್ನ ಸೆರೆ ಹಿಡಿದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿದ್ದು, ಆರೋಪಿಗಳ ವಿರುದ್ಧ ಏನ್. ಡಿ. ಪಿ. ಎಸ್. ಕಾಯ್ದೆ 1985 ರ ಕಲಂ 27 (b) ರಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಭದ್ರಾವತಿ: ಹೊರಗುತ್ತಿಗೆ ನೌಕರರ ಪ್ರತಿಭಟನೆ

ಭದ್ರಾವತಿ ತಾಲೂಕು ಬಿ.ಆರ್ ಪಿ ಮೀನುಗಾರಿಕೆ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ 54 ನೌಕರರ ESI ಹಾಗೂ PF ಕಳೆದ 3 ವರ್ಷಗಳಿಂದ ನೀಡದೆ ಸತಾಯಿಸುತ್ತಿರುವ ಎಜೆನ್ಸಿ ವಿರುದ್ಧ ಕಾರ್ಮಿಕರು ಹೋರಾಟಕ್ಕೆ ಮುಂದಾಗಿದ್ದು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಯೂನಿಕ್ ಸೆಕ್ಯೂರಿಟಿ ಎಜೇನ್ಸಿ ದಾರರನ್ನು ಮೀನುಗಾರಿಕೆ ಇಲಾಖೆ ಕಛೇರಿಯಲ್ಲಿ ಕೂ ಡಿ ಹಾಕಿಕೊಂಡ ಹೊರಗುತ್ತಿಗೆ ನೌಕರರು, ESI ಹಾಗೂ PF ಹಣ ನಮ್ಮ ಖಾತೆಗೆ ಹಾಕುವವರೆಗೂ ಕಚೇರಿಯಿಂದ ಹೊರಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಸಂಜೆವೇಳೆಗೆ ಸ್ಥಳಕ್ಕೆ ಬಂದ ಪೋಲಿಸ್ ಅಧಿಕಾರಿಗಳು ನೌಕರರ ಸಮಸ್ಯೆಗಳನ್ನು ಆಲಿಸಿದ ನಂತರ ಯೂನಿಕ್ ಸೆಕ್ಯೂರಿಟಿ ಎಜೇನ್ಸಿದಾರರಿಗೆ ನೌಕರರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಕಾಲಾವಕಾಶ ನೀಡಿದರು. ಆದ್ರೂ ಇಲಾಖೆ ಅಧಿಕಾರಿಗಳು ಮಾತ್ರ ಬಂದಿರಲಿಲ್ಲ.

ಇದನ್ನೂ ಓದಿ : ವಾಹನ ನಂಬರ್ ಪ್ಲೇಟ್ ನಿಯಮ ಬದಲು!

Categories
ಬೆಂಗಳೂರು ರಾಜ್ಯ

ಇಸ್ರೋಗೆ ಮೋದಿ ಧನ್ಯವಾದ!

ಇಸ್ರೋಗೆ ಮೋದಿ ಧನ್ಯವಾದ!
– ಇಸ್ರೋ ನೆಲದಲ್ಲಿ ಮೋದಿ ಮಹತ್ವದ 3 ಘೋಷಣೆ
– ಆ.23ರಂದು ಬಾಹ್ಯಾಕಾಶ ದಿನ ಆಚರಣೆ
– ಮೋದಿ ಅವರಿಂದ ಪ್ರಶಂಸೆ ಸುರಿಮಳೆ

NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ಇಸ್ರೋ ನೆಲದಲ್ಲಿ ಪ್ರಧಾನಿ ಮಹತ್ವ ಘೋಷಣೆ ಮಾಡಿದ್ದಾರೆ. ಚಂದ್ರಯಾನ-2 ತನ್ನ ಹೆಜ್ಜೆಗುರುತನ್ನು ಮೂಡಿಸಿದ ಸ್ಥಾನವನ್ನು ತಿರಂಗಾ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ, ಚಂದ್ರಯಾನ-3 ಲ್ಯಾಂಡರ್
ಇಳಿದ ಸ್ಥಳವನ್ನು ಶಿವಶಕ್ತಿ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಭಾರತ ಚಂದ್ರನ ಮೇಲೆ ತಿರಂಗಾ ಹಾರಿಸಿದ ದಿನವನ್ನು (ಆಗಸ್ಟ್ 23) ‘ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸಲಾಗುತ್ತದೆ. ಎಂದು ಪ್ರಧಾನಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಎಲ್ಲಾ ಇಸ್ರೋ ವಿಜ್ಞಾನಿಗಳಿಗೆ ಗಿಫ್ಟ್ ನೀಡಿ ಶುಭಾಶಯ ಸಲ್ಲಿಸಿದ್ದಾರೆ.

ಗ್ರೀಸ್ ಇಂದ ನೇರವಾಗಿ ಬಂದ ಮೋದಿ

ಚಂದ್ರಯಾನ 3 ಯಶಸ್ಸಿನ ಹಿನ್ನೆಲೆಯಲ್ಲಿ ಗ್ರೀಸ್ ನಿಂದ ನೇರವಾಗಿ ಬೆಂಗಳೂರಿಗೆ ಬಂದು ವಿಜ್ಞಾನಿಗಳನ್ನು ಭೇಟಿಯಾಗಿ ಸಂತೋಷ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 23 ನ್ನು ‘ಬಾಹ್ಯಾಕಾಶ ದಿನ’ವಾಗಿ ಆಚರಣೆ ಮಾಡಲಾಗುವುದು ಎಂದು ಹೇಳಿದರು. ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಶನಿವಾರ ಮುಂಜಾನೆ 6.30ಕ್ಕೆ ಗ್ರೀಸ್ ನಿಂದ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ, ನೇರವಾಗಿ ಇಸ್ರೋ ಕೇಂದ್ರಕ್ಕೆ ಬಂದು ವಿಜ್ಞಾನಿಗಳನ್ನು ಅಭಿನಂದಿಸಿದರು.ಪ್ರಧಾನಿ ಮೋದಿ ಅವರನ್ನು ಎದುರುಗೊಂಡು ಗುಂಪು ಚಿತ್ರ ತೆಗೆಸಿಕೊಂಡ ಇಸ್ರೋ ವಿಜ್ಞಾನಿಗಳು. ಬಳಿಕ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ಚಂದ್ರಯಾನ-3, ಲ್ಯಾಂಡರ್ ವಿಕ್ರಮ್, ರೋವರ್ ಪ್ರಗ್ಯಾನ್ ಮಾದರಿ ಪ್ರಾತ್ಯಕ್ಷಿಕೆ ತೋರಿಸಿ ಅವುಗಳ ಕಾರ್ಯಾಚರಣೆ, ಕಾರ್ಯ ನಿರ್ವಹಣೆ ಬಗ್ಗೆ ಖುದ್ದು ಪ್ರಧಾನಿಗೆ ವಿವರಿಸಿದರು.

ಮೋದಿ ಅವರಿಂದ ಪ್ರಶಂಸೆ ಸುರಿಮಳೆ

ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಇದೊಂದು ಖುಷಿಯ ದಿನ, ತನು, ಮನ ಖುಷಿಯಿಂದ ಇದೆ. ವ್ಯಕ್ತಿಯ ಜೀವನದಲ್ಲಿ ಎಷ್ಟು ಬಾರಿ ಇಂತಹ ಘಟನೆಗಳು ನಡೆಯುತ್ತವೆ. ಗ್ರೀಸ್ ನಲ್ಲಿದ್ದೆ. ಮನಸ್ಸು ಇಲ್ಲೇ ಇತ್ತು. ನಿಮ್ಮಗಳ ಕಡೆಗೇ ನನ್ನ ಲಕ್ಷ್ಯವಿತ್ತು. ನಿಮ್ಮೆಲ್ಲರ ದರ್ಶನ ಪಡೆಯಬೇಕೆಂದು ಮನಸ್ಸು ಹಂಬಲಿಸಿತ್ತು. ಎಲ್ಲರಿಗೂ ನನ್ನ ಸೆಲ್ಯೂಟ್ ಗದ್ಗದಿತರಾದ ಮೋದಿ. ನಿಮ್ಮ ಪರಿಶ್ರಮ, ಧೈರ್ಯ, ಲಗನ್, ಜೀವಿತಾಕ್ಕೆ ಸೆಲ್ಯೂಟ್ ಎಂದರು. ದೇಶವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದಿದ್ದೀರಿ. ಇದು ಅನಂತ ಅಂತರಿಕ್ಷದ ಶಂಖನಾದ. ‘ಇಂಡಿಯಾ ಈಸ್ ಆನ್ ದ ಮೂನ್”, ವಿ ಹ್ಯಾವ್ ಅವರ್ ನ್ಯಾಷನಲ್ ಪ್ರೈಡ್ ಆನ್ ದ ಮೂನ್’ ನೀವೇನು ಸಾಧಿಸಿದ್ದೀರಿ ಇದನ್ನು ಯಾರೂ ಮೊದಲು ಮಾಡಿಲ್ಲ. ಹೊಸ ರೀತಿಯಲ್ಲಿ ಚಿಂತನೆ ಮಾಡುವ ಭಾರತವಿದು.

ನಿಮ್ಮನ್ನು ಎಷ್ಟು ಹೊಗಳಿದರೂ ಕಡಿಮೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲವನ್ನೂ ಸೇರಿಸಿದೆ. ವಿಕ್ರಮ್ ಲ್ಯಾಂಡರ್ ಇಳಿದ ಜಾಗವನ್ನು ಶಿವಶಕ್ತಿ’ ಎಂದು ಹೆಸರಿಸಿದ ಪ್ರಧಾನಿ ಮೋದಿ. ಶಿವಶಕ್ತಿ ನಮಗೆ ಪ್ರೇರಣೆ ಎಂದು ಹೇಳಿದರು.
“ಪ್ರಜಾನಾಂ ತನ್ನೇ ಮನಃ ಶಿವಸಂಕಲ್ಪಮಸ್ತು’ ಎನ್ನುವಂತೆ ಶಿವನಲ್ಲಿ ಮಾನವನ ಅಭಿವೃದ್ಧಿ ಇದೆ. ಶಕ್ತಿಯ ಸಾಮರ್ಥ್ಯವೂ ಇದೆ. ಇದು ನಮ್ಮ ಪ್ರಮುಖ ಬದ್ಧತೆಯೂ ಹೌದು. ಸೃಷ್ಟಿ ಸ್ಥಿತಿ ವಿನಾಶನಾಂ ಶಕ್ತಿ ಭೂತೆ ಸನಾತನಿ’ ಎಂಬಂತೆ ಚಂದ್ರಯಾನದಲ್ಲಿ ದೇಶದ ನಾರಿ ಶಕ್ತಿ ಹೆಚ್ಚಾಗಿದೆ.

ಮನೆ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದೆವು. ಚಂದ್ರನ ಮೇಲೂ ದೇಶದ ಬಾವುಟ ಹಾರಿಸಿದ್ದೇವೆ. ಚಂದ್ರಯಾನ-2 ಇಳಿದ ಜಾಗಕ್ಕೆ ತಿರಂಗಾ’ ಎಂದು ಹೆಸರಿಸಿದ ಮೋದಿ. ಮೇಕ್ ಇನ್ ಇಂಡಿಯಾದಿಂದ ಚಂದ್ರನವರೆಗೆ ಸಾಗಿದ್ದೇವೆ ಎಂದು ಹೇಳಿದರು. ಚಂದ್ರಯಾನ-3 ಯಶಸ್ವಿಯಾದ ಆಗಸ್ಟ್ 23 ಇನ್ನು ಮುಂದೆ ‘ಬಾಹ್ಯಾಕಾಶ ದಿನ’ವಾಗಿ ಆಚರಣೆ ಮಾಡಲಾಗುವುದು ಎಂದು ಹೇಳಿದರು

ಇದನ್ನೂ ಓದಿ : ವಾಹನ ನಂಬರ್ ಪ್ಲೇಟ್ ನಿಯಮ ಬದಲು!

Categories
ರಾಷ್ಟ್ರೀಯ ವಾರ್ತೆ

ಮಧುರೈ ರೈಲಿನಲ್ಲಿ ಅಗ್ನಿ ಅವಘಡಕ್ಕೆ 10 ಬಲಿ!

– ಮಧುರೈ ರೈಲಿನಲ್ಲಿ ಅಗ್ನಿ ಅವಘಡಕ್ಕೆ 10 ಬಲಿ!
– 20 ಮಂದಿ ಗಂಭೀರ ಗಾಯ: ರಕ್ಷಣಾ ಕಾರ್ಯಾಚರಣೆ
– ಕಂದಕಕ್ಕೆ ಬಿದ್ದ ಜೀಪ್: 9 ಮಂದಿ ಮಹಿಳೆಯರು ಸಾವು

NAMMUR EXPRESS NEWS
ಮಧುರೈ: ತಮಿಳುನಾಡಿನ ಮಧುರೈ ರೈಲ್ವೇ ಜಂಕ್ಷನ್‌ನಲ್ಲಿ ನಿಂತಿದ್ದ ಪ್ರವಾಸಿ ರೈಲಿಗೆ ಬೆಂಕಿ ತಗುಲಿ 10 ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗಿನ ಜಾವ 5.15 ಕ್ಕೆ ಸಂಭವಿಸಿದೆ. ಉತ್ತರ ಪ್ರದೇಶದ ಲಖಿಂಪುರ ಖೇರಿಯಿಂದ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿತ್ತು. ಮೊದಲು ಇಬ್ಬರು ಸಾವನ್ನಪ್ಪಿದರು. ಆದ್ರೆ, ಇದೀಗ ಆಸ್ಪತ್ರೆಗೆ ದಾಖಲಾದ 8 ಮಂದಿ ಚಿಕಿತ್ಸೆಗೆ ಫಲಿಸದೇ ಸಾವನ್ನಪ್ಪಿದ್ದಾರೆ. 20 ಕ್ಕೂ ಹೆಚ್ಚು ಮಂದಿ ಗಂಭೀರವಾದ ಸುಟ್ಟಗಾಯಗಳಿಗೆ ಒಳಗಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಅವಘಡದಲ್ಲಿ ಎರಡು ಬೋಗಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಬೆಂಕಿ ಮತ್ತೆ ಹೊತ್ತಿಕೊಳ್ಳುವುದನ್ನು ತಡೆಯಲು ಅಗ್ನಿಶಾಮಕ ದಳದವರು ಸುಟ್ಟ ಕೋಚ್‌ಗಳನ್ನು ತಂಪಾಗಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ರೈಲಿನಲ್ಲಿದ್ದ ಪ್ರಯಾಣಿಕರು ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಪೋಟಗೊಂಡಿದೆ. ಈ ವೇಳೆ 2 ಬೋಗಿಗಳಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ.

ಕಂದಕಕ್ಕೆ ಬಿದ್ದ ಜೀಪ್: 9 ಮಂದಿ ಮಹಿಳೆಯರು ಸಾವು

ಕೇರಳದ ವಯನಾಡು ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಜೀಪ್ ಅಪಘಾತದಲ್ಲಿ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಜೀಪ್ ಕಂದಕಕ್ಕೆ ಬಿದ್ದು 9 ಜನರು ಮೃತಪಟ್ಟ ಘಟನೆ ಕೇರಳದ ವಯನಾಡು ಜಿಲ್ಲೆಯಲ್ಲಿ ಇಂದು ನಡೆದಿದೆ. ಅಪಘಾತಕ್ಕೀಡಾದ ಜೀಪ್ ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. ಒಟ್ಟು 12 ಜನ ಮಹಿಳೆಯರು ಜೀಪ್ನಲ್ಲಿದ್ದರು. ಇವರು ಚಹಾ ತೋಟದ ಕೆಲಸ ಮುಗಿಸಿ ತಮ್ಮಮನೆಗಳಿಗೆ ಮರಳುತ್ತಿದ್ದರು. ಮಧ್ಯಾಹ್ನ 3:30ರ ಸುಮಾರಿಗೆ ಮಾರ್ಗ ಮಧ್ಯೆ 30 ಅಡಿ ಆಳದ ಕಂದಕಕ್ಕೆ ಜೀಪ್ ಉರುಳಿಬಿದ್ದಿದೆ.

ಇದನ್ನೂ ಓದಿ : ವಾಹನ ನಂಬರ್ ಪ್ಲೇಟ್ ನಿಯಮ ಬದಲು!

Categories
ರಾಷ್ಟ್ರೀಯ ವಾರ್ತೆ

ಮಂಗ, ನಾಯಿ ಗ್ಯಾಂಗ್ ವಾರ್! – 80 ನಾಯಿಗಳ ಸಾವು

ಸುದ್ದಿ ಅಂದ್ರೆ ಇದು..ಮಂಗ, ನಾಯಿ ಗ್ಯಾಂಗ್ ವಾರ್!
– 80 ನಾಯಿಗಳ ಸಾವು: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಘಟನೆ

NAMMMUR EXPRESS : ಇದೊಂದು ಅಚ್ಚರಿ ಘಟನೆ!. ಬೀದಿ ನಾಯಿಗಳ ಮೇಲಿನ ಪ್ರತಿಕಾರದಿ೦ದಾಗಿ ಕೋತಿಗಳ ಗುಂಪು ಸಿಕ್ಕಸಿಕ್ಕ ನಾಯಿಮರಿಗಳನ್ನೆಲ್ಲಾ ಹೊತ್ತೊಯ್ದು ಎತ್ತರದ ಕಟ್ಟಡ ಅಥವಾ ಮರದಿಂದ ಕೈ ಬಿಟ್ಟು ಕೊಲ್ಲುತ್ತಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆಯುತ್ತಿದೆ. ಸ್ಥಳೀಯರ ಪ್ರಕಾರ ಇಲ್ಲಿನ ಮಜಲ್‌ ಗಾವ್‌ ನಲ್ಲಿ ಕೆಲ ಸಮಯದ ಹಿಂದೆ ನಾಯಿಗಳು ಕೋತಿಯ ಮರಿಯ ಮೇಲೆ ದಾಳಿ ಮಾಡಿ ಕೊಂದಿದ್ದವು. ಆಗಿನಿಂದಲೂ ಕೋತಿಗಳ ಗುಂಪು ಕಂಡ ಕಂಡ ನಾಯಿಮರಿಗಳನ್ನೆಲ್ಲಾ ಹೊತ್ತೊಯ್ದು ಎತ್ತರದ ಮನೆ ಅಥವಾ ಮರದಿಂದ ಕೈ ಬಿಡುತ್ತಿವೆ. ಕೋತಿಗಳ ಕೃತ್ಯಕ್ಕೆ ಈಗಾಗಲೇ 80 ನಾಯಿ ಮರಿಗಳು ಬಲಿಯಾಗಿವೆ. ಇದೀಗ ನಿವಾಸಿಗಳು ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ. ಇಲಾಖೆಯು ಬಹುತೇಕ ಕೋತಿಗಳನ್ನು ಸೆರೆ ಹಿಡಿದಿದೆ.

ಇದನ್ನೂ ಓದಿ : ವಾಹನ ನಂಬರ್ ಪ್ಲೇಟ್ ನಿಯಮ ಬದಲು!

Categories
ಹೊಸನಗರ

ಹೊಸನಗರದ ತುಂಗಾ ಅಡಿಕೆ ಮಾರಾಟ ಸೊಸೈಟಿ ನೂತನ ಸಾರಥಿಗಳು!

– ಹೊಸನಗರದ ತುಂಗಾ ಅಡಿಕೆ ಮಾರಾಟ ಸೊಸೈಟಿ ನೂತನ ಸಾರಥಿಗಳು!
– ಅಧ್ಯಕ್ಷರಾಗಿ ವಿನಯ್ ದುಮ್ಮ, ಉಪಾಧ್ಯಕ್ಷರಾಗಿ ನಗರ ಮಾಲ್ತೇಶ್ ಅವಿರೋಧ ಆಯ್ಕೆ

NAMMUR EXPRESS NEWS
ಹೊಸನಗರದ ತುಂಗಾ ಅಡಿಕೆ ಮಾರಾಟ ಸೊಸೈಟಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಯುವ ಸಹಕಾರಿಗಳಾದ ವಿನಯ್ ಧುಮ್ಮಹಾಗೂ ಉಪಾಧ್ಯಕ್ಷರಾಗಿ ನಗರ ಮಾಲ್ತೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಅಪೆಕ್ಸ್ ಬ್ಯಾಂಕ್,ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಡಾ ಆರ್ ಎಂ ಮಂಜುನಾಥ ಗೌಡ ಅವರ ಮಾರ್ಗದರ್ಶನದಂತೆ ನೂತನ ಸಾರಥಿಗಳ ಆಯ್ಕೆ ನಡೆದಿದೆ.  ಎಲ್ಲಾ ನಿರ್ದೇಶಕರು, ಸಮಸ್ತ ಷೇರುದಾರರು, ಜನತೆಗೆ ನೂತನ ಪದಾಧಿಕಾರಿಗಳು ಕೃತಜ್ಞತೆ ಅರ್ಪಿಸಿದ್ದಾರೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ದಾವಣಗೆರೆ

ರೇಣುಕಾಚಾರ್ಯ ಬಿಜೆಪಿಗೆ ಗುಡ್ ಬೈ!?

ರೇಣುಕಾಚಾರ್ಯ ಬಿಜೆಪಿಗೆ ಗುಡ್ ಬೈ!?
– ದಾವಣಗೆರೆ ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿ
– ಟಿಕೆಟ್ ಸಿಗದಿದ್ರೆ ಕಾಂಗ್ರೆಸ್ ಕಡೆ ಪಯಣ?
– ಸಿಎಂ, ಡಿಸಿಎಂ ಜತೆ ಮಾತುಕತೆ: ಏನಿದು ಆಪರೇಷನ್ ಕೈ?

NAMMUR EXPRESS NEWS
ದಾವಣಗೆರೆ: ರಾಜ್ಯ ರಾಜಕೀಯ ದಿನೇ ದಿನೇ ರೋಚಕ ಘಟ್ಟಕ್ಕೆ ತಲುಪುತ್ತಿದೆ. ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಈ ನಡುವೆ ಹೊಸ ಸುದ್ದಿ ಈಗ ರಾಜ್ಯದಲ್ಲಿ ಓಡಾಡುತ್ತಿದೆ. ನಾನು ಕೂಡ ದಾವಣಗೆರೆ ಲೋಕಸಭಾ ಟಿಕೆಟ್ ಆಕಾಂಕ್ಷಿ, ಟಿಕೆಟ್ ಬೇಕು ಅಂತ ಕೇಳಿದ್ದೇನೆ. ವರಿಷ್ಠರು ಏನ್ ತೀರ್ಮಾನ ಮಾಡ್ತಾರೆ ಅಂತ ನೋಡಬೇಕು ಎಂದು ಎಂಪಿ ರೇಣುಕಾಚಾರ್ಯ ಹೇಳಿರುವುದು ಹಲವು ಚರ್ಚೆಗೆ ಕಾರಣ ಆಗಿದೆ ಕರ್ನಾಟಕ ಬಿಜೆಪಿಯ ಕೆಲ ಹಾಲಿ ಮತ್ತು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರಿದ್ದಾರೆ. ಜಿಲ್ಲೆಯಲ್ಲಿ ಎರಡು ಮೂರು ನಾಯಕರು ಕಾಂಗ್ರೆಸ್ ಕಡೆಗೆ ಹೋಗಲು ಸಿದ್ದರಾಗಿದ್ದಾರೆ. ಈ ನಡುವೆ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕೆಲ ಹಾಲಿ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿರುವ ರೇಣುಕಾಚಾರ್ಯ ಅವರ ನಡೆ ಬಿಜೆಪಿ ಪಾಳಯದಲ್ಲಿ ತಲ್ಲಣ ಮೂಡಿಸಿದೆ. ಬಾರಿ ಕುತೂಹಲ ಮೂಡಿಸಿರುವ ರೇಣುಕಾಚಾರ್ಯ ಅವರು ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಎಂ ಅವರೊಂದಿಗೆ ಚರ್ಚೆ ಮಾಡಿದ ಅವರು, ಕ್ಷೇತ್ರದ ಸಂಬಂಧ ಚರ್ಚೆ ನಡೆಸಿ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಬೆಂಗಳೂರು

ವಾಹನ ನಂಬರ್ ಪ್ಲೇಟ್ ನಿಯಮ ಬದಲು!

ವಾಹನ ನಂಬರ್ ಪ್ಲೇಟ್ ನಿಯಮ ಬದಲು!
– 2019ಕ್ಕಿಂತ ಮುಂಚಿನ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ
– ನ.17ರೊಳಗೆ ಬೋರ್ಡ್ ಬದಲಿಸಲು ಆದೇಶ
– ನಿಮ್ಮ ವಾಹನ ಬೋರ್ಡ್ ಏನು ಮಾಡಬೇಕು…?

NAMMUR EXPRESS NEWS
ಬೆಂಗಳೂರು: ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳು ಹೈ-ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಹೊಂದುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸಾರಿಗೆ ಇಲಾಖೆ ತಿಳಿಸಿದೆ. ಶಾಶ್ವತ ಗುರುತಿನ ಸಂಖ್ಯೆ ಮತ್ತು ಕ್ರೋಮಿಯಂ ಆಧಾರಿತ ಹೊಲೊಗ್ರಾಮ್‌ನಂತಹ ಹಲವಾರು ವೈಶಿಷ್ಟ್ಯಗಳೊಂದಿಗೆ ಈ ನಂಬರ್ ಪ್ಲೇಟ್ ಸಜ್ಜುಗೊಂಡಿದೆ. ಎಚ್‌ಎಸ್‌ಆರ್‌ಪಿಗಳನ್ನು ಟ್ಯಾಂಪ್ ಮಾಡಲು ಸಾಧ್ಯವಿಲ್ಲ ಎಂದು ಸಾರಿಗೆ ಇಲಾಖೆ ಹೇಳಿದೆ.
ನೋಂದಣಿ ಫಲಕಗಳಲ್ಲಿ ( ನಂಬರ್ ಪ್ಲೇಟ್ ) ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತಾದ ಅಧಿಸೂಚನೆಯನ್ನು ಆಗಸ್ಟ್ 17, 2023 ರಂದು ಹೊರಡಿಸಲಾಗಿದೆ. ಇದಕ್ಕೆ ನವೆಂಬರ್ 17 ರ ಗಡುವನ್ನು ನೀಡಲಾಗಿದೆ. ವಿಫಲವಾದ ವಾಹನ ಮಾಲೀಕರ ವಿರುದ್ಧ ದಂಡದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. ರೂ 500 ರಿಂದ ರೂ 1,000ರ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸಾರಿಗೆ ಇಲಾಖೆಯ ಅಂದಾಜಿನ ಪ್ರಕಾರ, ಏಪ್ರಿಲ್ 1, 2019 ರ ಮೊದಲು ರಾಜ್ಯದಲ್ಲಿ ಸುಮಾರು 1.75 ಕೋಟಿಯಿಂದ 2 ಕೋಟಿ ವಾಹನಗಳು ನೋಂದಣಿಯಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಪ್ರಿಲ್ 1, 2019 ರಿಂದ ಜಾರಿಗೆ ಬರುವಂತೆ, ಎಲ್ಲಾ ಹೊಸ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ, ವಾಹನ ತಯಾರಕರು ಈ ಪ್ಲೇಟ್‌ಗಳನ್ನು ವಾಹನ ವಿತರಕರಿಗೆ ಪೂರೈಸಲು ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಹಳೆಯ ವಾಹನಗಳಿಗೂ ಕಡ್ಡಾಯ

ಹಳೆಯ ವಾಹನಗಳಿಗೂ ಸಹ ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರು ಪ್ಲೇಟ್‌ಗಳನ್ನು ಪೂರೈಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಹಳೆಯ ವಾಹನಗಳ ಮಾಲೀಕರು ವಾಹನ ತಯಾರಕರ ಅಧಿಕೃತ ಡೀಲರ್‌ಗಳ ಮೂಲಕ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಆರ್ಡರ್ ಮಾಡಬಹುದು’ ಎಂದು ಅವರು ಹೇಳಿದ್ದಾರೆ. ‘ನಾಲ್ಕು ಚಕ್ರಗಳ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಬೆಲೆಯು ರೂ 400 ರಿಂದ ರೂ 500 ರವರೆಗೆ ಇರಲಿದೆ. ದ್ವಿಚಕ್ರ ವಾಹನಗಳಿಗೆ ರೂ 250 ರಿಂದ ರೂ500 ರವರೆಗೆ ಇರಲಿದೆ. ದ್ವಿಚಕ್ರ ವಾಹನಗಳಿಗೆ ರೂ 250 ರಿಂದ ರೂ 300 ರ ವರೆಗೆ ಇರಲಿದೆ. ದ್ವಿಚಕ್ರ ವಾಹನಗಳಿಗೆ ಈಗಾಗಲೇ 12 ರಾಜ್ಯಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಈ ನಿಯಮವನ್ನು ಜಾರಿಗೆ ತಂದಿವೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಪರಾಧ, ಕಳ್ಳತನ, ಅಪಘಾತ ತಡೆಯಲು ಪ್ಲಾನ್

ಟ್ಯಾಂಪರಿಂಗ್ ಮತ್ತು ಪ್ಲೇಟ್‌ಗಳನ್ನು ನಕಲಿ ಮಾಡುವುದನ್ನು ತಡೆಯುವ ಎಚ್‌ಎಸ್‌ಆರ್‌ಪಿ ತಡೆಯಲಿದೆ. ವಾಹನಗಳಿಂದ ಉಂಟಾಗುವ ಅಪರಾಧಗಳನ್ನು ಪರಿಶೀಲಿಸಲು ಎಚ್‌ಎಸ್‌ಆರ್‌ಪಿ ಸಹಾಯ ಮಾಡಲಿದೆ. ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ಸಾರಿಗೆ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಎಚ್‌ಎಸ್‌ಆರ್‌ಪಿ ಅನ್ನು ಅಳವಡಿಸಿಕೊಂಡ ನಂತರ, ಅಧಿಕೃತ ವಿತರಕರು ಅಥವಾ ತಯಾರಕರು ವಾಹನ್ ಪೋರ್ಟಲ್‌ನಲ್ಲಿ ಲೇಸರ್-ಕೋಡಿಂಗ್ ಅನ್ನು ನವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!