Categories
ತೀರ್ಥಹಳ್ಳಿ

ತುಂಗಾ ನದಿ ದಡದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿ!

ತುಂಗಾ ನದಿ ದಡದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿ!
– ತೀರ್ಥಹಳ್ಳಿ ತುಂಗಾ ನದಿ ದಡದಲ್ಲಿ ಘಟನೆ
– ಸಮಯ ಪ್ರಜ್ಞೆ ಮೆರೆದ ಪೊಲೀಸರು
– ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ

NAMMUR EXPRESS NEWS
ತೀರ್ಥಹಳ್ಳಿ: ಅಪರಿಚಿತ ವ್ಯಕ್ತಿ ಕುರುವಳ್ಳಿ ಸೇತುವೆ ಹತ್ತಿರ ತುಂಗಾ ನದಿಯಲ್ಲಿ ಬಿದ್ದಿದ್ದು ಅರೆಪ್ರಜ್ಞೆ ವ್ಯವಸ್ಥೆಯಲ್ಲಿದ್ದು ಆ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ 112 ವಾಹನದಲ್ಲಿ ಚಿಕಿತ್ಸೆಗಾಗಿ ತೀರ್ಥಹಳ್ಳಿ ಆಸ್ಪತ್ರೆಗೆ ಕರೆ ತಂದು ದಾಖಲು ಮಾಡಲಾಯಿತು. 112 ವಾಹನದಲ್ಲಿ ಕರ್ತವ್ಯದಲ್ಲಿದ್ದ ಮೊಹಮ್ಮದ್ ಆಸಿಫ್ ಮತ್ತು ರವಿಚಂದ್ರ ಹಾಗೂ ದಿವಾಕರ್ 112 ವಾಹನದಲ್ಲಿ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದೆ. ಆತ ಯಾರು ಏಕೆ ಅಲ್ಲಿಗೆ ಬಂದಿದ್ದ ತಿಳಿಯಬೇಕಿದೆ.

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

Categories
ಶಿವಮೊಗ್ಗ

ವಿದ್ಯಾರ್ಥಿ ಶಾಲಾ ಬ್ಯಾಗ್‌ನಲ್ಲಿ ಹಾವು!

ವಿದ್ಯಾರ್ಥಿ ಶಾಲಾ ಬ್ಯಾಗ್‌ನಲ್ಲಿ ಹಾವು!

NAMMUR EXPRESS NEWS
ರಿಪ್ಪನ್‌ಪೇಟೆ : ರಿಪ್ಪನ್ ಪೇಟೆ ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಭುವನ್ ಬ್ಯಾಗ್‌ನಲ್ಲಿ ಹಾವು ಪತ್ತೆಯಾಗಿದೆ. ಶುಕ್ರವಾರ ಬೆಳಿಗ್ಗೆ ತರಗತಿ ಪ್ರಾರಂಭವಾದಾಗ ನಲಿಕಲಿ ತರಗತಿಯ ಶಿಕ್ಷಕರು ಪಾಠ ಓದಲು ಬ್ಯಾಗ್‌ನಿಂದ ಪುಸ್ತಕ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ ಹಾಜರಿ ಕರೆಯುತ್ತಿದ್ದರು. ವಿದ್ಯಾರ್ಥಿ ಭುವನ್ ಪುಸ್ತಕ ತೆಗೆಯಲು ಮುಂದಾದಾಗ ಬ್ಯಾಗ್‌ನಲ್ಲಿ ಹಾವು ಮಲಗಿರುವುದನ್ನು ಕಂಡಿದ್ದಾನೆ. ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಮಣಿಕಂಠನಿಗೆ ಹಾವನ್ನು ತೋರಿಸಿದ್ದಾನೆ. ಅದನ್ನು ಕಂಡ ತಕ್ಷಣವೇ ಮಣಿಕಂಠ ಬ್ಯಾಗ್‌ನ ಜಿಪ್ ಎಳೆದು, ಶಿಕ್ಷಕರಿಗೆ ವಿಷಯ ತಿಳಿಸಿದ್ದಾನೆ. ಶಿಕ್ಷಕರು, ಬ್ಯಾಗ್ ಅನ್ನು ಶಾಲಾ ಕೊಠಡಿಯಿಂದ ಹೊರತಂದು ತೆರೆದು ನೋಡಿದಾಗ ಹಾವು ಇರುವುದು ಖಚಿತವಾಗಿದೆ. ನಂತರ ಪಾಲಕರನ್ನು ಕರೆಸಿ ಬ್ಯಾಗ್‌ನಲ್ಲಿದ್ದ ನಾಗರಹಾವನ್ನು ಸಮೀಪದ ಕಾಡಿಗೆ ಬಿಟ್ಟು ಬಂದಿದ್ದಾರೆ.

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

Categories
ಅಪರಾಧ

ಪತ್ನಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ!

ಪತ್ನಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ!
– ಪತಿ ಸೇರಿದಂತೆ ಮೂವರ ಬಂಧನ
– ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯಲ್ಲಿ ನಡೆದ ಘಟನೆ

NAMMUR EXPRESS NEWS
ಜೈಪುರ್ : ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬರನ್ನು ಗುರುವಾರ ಆಕೆಯ ಪತಿಯೇ ಥಳಿಸಿ, ವಿರೂಪಗೊಳಿಸಿ, ಆಕೆಯ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಘಟನೆ ರಾತ್ರಿ ನಡೆದಿದೆ. ಈ ಘಟನೆಯನ್ನು ಚಿತ್ರೀಕರಿಸಿದ ಮಹಿಳೆಯ ಪತಿ ಎಂದು ಹೇಳಲಾದ ವ್ಯಕ್ತಿಯೊಬ್ಬರು 21 ವರ್ಷದ ಮಹಿಳೆಯನ್ನು ತಮ್ಮ ಮನೆಯ ಹೊರಗೆ ವಿವಸ್ತ್ರಗೊಳಿಸುತ್ತಿರುವುದನ್ನು ಮತ್ತು ಸಹಾಯಕ್ಕಾಗಿ ಆಕೆಯನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವುದು ಕಂಡುಬಂದಿದೆ. ಪೊಲೀಸರ ಪ್ರಕಾರ, ಮಹಿಳೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಲಾಗಿದ್ದು, ಇದೇ ಕಾರಣದಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ ಮದುವೆಯಾಗಿದ್ದರೂ ಮತ್ತೊಬ್ಬ ಪುರುಷನೊಂದಿಗೆ ವಾಸಿಸುತ್ತಿರುವ ಕಾರಣದಿಂದ ಮಹಿಳೆಯ ಅತ್ತೆ ಆಕೆಯನ್ನು ಅಪಹರಿಸಿ ತಮ್ಮ ಗ್ರಾಮಕ್ಕೆ ಕರೆದೊಯ್ದು ಥಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ ಎಂದು ರಾಜಸ್ಥಾನದ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರ ಹೇಳಿದ್ದಾರೆ.

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

Categories
ಸಿನಿಮಾ

ಫ್ಯಾನ್ಸ್ ಜೊತೆ ಕಿಚ್ಚ ಸುದೀಪ್ ಭರ್ಜರಿ ಬರ್ತ್‌ಡೇ ಸೆಲೆಬ್ರೇಷನ್

ಫ್ಯಾನ್ಸ್ ಜೊತೆ ಕಿಚ್ಚ ಸುದೀಪ್ ಭರ್ಜರಿ ಬರ್ತ್‌ಡೇ ಸೆಲೆಬ್ರೇಷನ್
– ಸುದೀಪ್ ಬರ್ತ್‌ಡೇಗೆ ಸಿನಿ ಸ್ಪೆಷಲ್ ಧಮಾಕ..!
– ಪತ್ನಿ ಪ್ರಿಯಾ ಸುದೀಪ್ ರಿಂದ ಸರ್ಪ್ರೈಸ್ ಗಿಫ್ಟ್

NAMMUR EXPRESS NEWS
ಬೆಂಗಳೂರು: ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರು ನಗರದ ನಂದಿ ಲಿಂಕ್ ಗೌಂಡ್‌ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಶುಕ್ರವಾರ ಮಧ್ಯರಾತ್ರಿ (ಸೆ.2) ಹುಟ್ಟು ಹಬ್ಬ ಆಚರಿಸಿಕೊಂಡರು. ಸುದೀಪ್ ಅವರು 50ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟಹಬ್ಬದ ಸಂಭ್ರಮಕ್ಕೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಕರ್ನಾಟಕದ ಮೂಲೆ ಮೂಲೆಗಳಿಂದ ತಮ್ಮನೆಚ್ಚಿನ ನಾಯಕನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಕಿಚ್ಚನನ್ನು ನೋಡಲು ಅಭಿಮಾನಿಗಳ ಮುಗಿಬಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಪ್ರಿಯಾ ಸುದೀಪ್ ವಿಶೇಷ ವಿಶ್ : ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಪತ್ನಿ ಪ್ರಿಯಾ ಸುದೀಪ್ ಸರ್ಪ್ರೈಸ್ ಗಿಫ್ಟ್ ನೀಡಿದರು. ಆಕಾಶದಲ್ಲಿ ಲೈಟಿಂಗ್ಸ್ ಮೂಲಕ ಪತ್ನಿ ಪ್ರಿಯಾ ಸುದೀಪ್ ಬರ್ತ್ಡೇ ವಿಶಸ್ ತಿಳಿಸಿದರು. ಈ ವೇಳೆ ಕಿಚ್ಚನ ಅಭಿಮಾನಿಗಳು ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು. ಅಭಿನಯ ಚಕ್ರವರ್ತಿ ಹುಟ್ಟುಹಬ್ಬದಲ್ಲಿ ಸ್ಯಾಂಡಲ್ ವುಡ್ ತಾರೆಯರ ದಂಡೇ ನೆರೆದಿತ್ತು. ಕೇಕ್ ತಿನ್ನಿಸಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಶುಭಾಶಯ ಕೋರಿದರು.

ಸುದೀಪ್ ಬರ್ತ್‌ಡೇಗೆ ಸಿನಿ ಸ್ಪೆಷಲ್ ಧಮಾಕ..!: 50ನೇ ವಸಂತಕ್ಕೆ ಕಿಚ್ಚ ಸುದೀಪ್ ಕಾಲಿಟ್ಟ ಸಂದರ್ಭದಲ್ಲಿ ಸುದೀಪ್ ಅಭಿನಯದ 46ನೇ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಲಾಯಿತು. ಈ ಬಾರಿ ‘MAX’ ಆಗಿ ಅಭಿನಯ ಚಕ್ರವರ್ತಿ ಎಂಟ್ರಿ ನೀಡಿದ್ದು ಈ ಸಿನಿಮಾವನ್ನು ಕಬಾಲಿ ಖ್ಯಾತಿಯ ಕಲೈಪುಲಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮ್ಯಾಕ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ರಾಷ್ಟ್ರೀಯ ವಾರ್ತೆ

ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅರೆಸ್ಟ್ – 538 ಕೋಟಿ ರೂ. ವಂಚನೆ

538 ಕೋಟಿ ರೂ. ವಂಚನೆ
– ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅರೆಸ್ಟ್

NAMMUR EXPRESS  ಮುಂಬೈ: 538 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಕೆನರಾ ಬ್ಯಾಂಕ್ ಗೆ 538 ಕೋಟಿ ರೂ. ವಂಚನೆ ಪ್ರಕರಣದಲ್ಲಿ ನರೇಶ್ ಗೋಯಲ್ ಅವರನ್ನು ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ಶುಕ್ರವಾರ ರಾತ್ರಿ ಬಂಧಿಸಿದೆ. ಕಳೆದ ಮೇ ನಲ್ಲಿ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಗೋಯಲ್ ಅವರ ವಿರುದ್ಧ ವಂಚನೆ, ಕ್ರಿಮಿನಲ್ ಪ್ರೀತೂರಿ ಪ್ರಕರಣ ದಾಖಲಿಸಲಾಗಿತ್ತು. ಈ ಹಿಂದೆ ಸಿಬಿಐ ಅಧಿಕಾರಿಗಳು ನರೇಶ್ ಗೊಯಲ್ ಅವರ ನಿವಾಸ, ಕಚೇರಿ ಸೇರಿ ಮುಂಬೈನ 7 ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು. ಈ ನಡುವೆ ಗೋಯಲ್ ಎರಡು ಬಾರಿ ಸಮನ್ಸ್ ಸ್ವೀಕರಿಸಿರಲಿಲ್ಲ. ಕೆನರಾ ಬ್ಯಾಂಕ್ ನಿಂದ 848 ಕೋಟಿ ರೂ. ಸಾಲ ಪಡೆದಿದ್ದ ಜೆಟ್ ವೇಸ್ ನ ನರೇಶ್ ಗೋಯಲ್ 538 ಕೋಟಿ ರೂ. ಸಾಲ ಮರುಪಾವತಿಸಿರಲಿಲ್ಲ. ಈ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದರು. ಈ ಸಂಬಂಧ ಕೆನರಾ ಬ್ಯಾಂಕ್ ಸಿಬಿಐಗೆ ದೂರು ನೀಡಿತ್ತು.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ಬೆಂಗಳೂರು

ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ
– ವಿಶ್ವದ ಚಿತ್ತ ಭಾರತದತ್ತ
-ಇಸ್ರೋ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಸಿದ್ಧತೆ

ಬೆಂಗಳೂರು : ಚಂದ್ರಯಾನ-3 ಯಶಸ್ಸಿನ ಬಳಿಕ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದ್ದು, ಇಂದು ಬೆಳಗ್ಗೆ 11.50ಕ್ಕೆ ಸೂರ್ಯಯಾನ ಆದಿತ್ಯ ಎಲ್-1 ಉಡಾವಣೆಗೆ ಸಜ್ಜಾಗಿದೆ.
ಇಸ್ರೋ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಸಿದ್ಧತೆ ನಡೆಸುತ್ತಿದೆ. ವಿಶ್ವದ ಕಣ್ಣು ಈಗ ಇಸ್ರೋದ ಸೂರ್ಯ ಮಿಷನ್ ಆದಿತ್ಯ ಎಲ್ -1 ಮೇಲೆ ನೆಟ್ಟಿದೆ. ಪಿಎಸ್‌ಎಲ್ವಿ-ಎಕ್ಸ್‌ಎಲ್ ರಾಕೆಟ್ ಸಹಾಯದಿಂದ ಇಸ್ರೋ ಇಂದು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಇದರ ನಂತರ, ಅದನ್ನು ಎಲ್ 1 ಪಾಯಿಂಟ್ ಗೆ ಸಾಗಿಸಲಾಗುತ್ತದೆ. ಈ ಹಂತವನ್ನು ತಲುಪಿದ ನಂತರ, ಆದಿತ್ಯ ಎಲ್ -1 ಪ್ರಮುಖ ಮಾಹಿತಿಯನ್ನು ನೀಡಲು ಪ್ರಾರಂಭಿಸುತ್ತದೆ.

ಸೂರ್ಯಯಾನ ಮಿಷನ್ ವೈಶಿಷ್ಟ್ಯಗಳು

ಸೆಪ್ಟೆಂಬರ್ 2 ರ ಇಂದು ಬೆಳಿಗ್ಗೆ 11.50 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಆದಿತ್ಯ ಎಲ್ -1 ಅನ್ನು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದಾರೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ಈ ಮಿಷನ್ ಅನ್ನು ಸಿದ್ಧಪಡಿಸಿದೆ. ಆದಿತ್ಯ ಎಲ್ -1 ತನ್ನೊಂದಿಗೆ ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರ ಪದರಗಳನ್ನು (ಕರೋನಾ) ಒಯ್ಯುತ್ತದೆ. ಆದಿತ್ಯ ಎಲ್ -1 ಇದನ್ನು ಪರಿಶೀಲಿಸಲು 7 ಪೇಲೋಡ್ ಗಳನ್ನು ಸಾಗಿಸುತ್ತದೆ. ಈ 4 ಪೇಲೋಡ್ಗಳು ಸೂರ್ಯನ ಚಲನೆಯನ್ನು ಮೇಲ್ವಿಚಾರಣೆ ಮಾಡುತ್ತವೆ, ಉಳಿದ 3 ಪೇಲೋಡ್ಗಳು ಎಲ್ -1 ಬಿಂದುವಿನ ಸುತ್ತಲೂ ಅಧ್ಯಯನ ಮಾಡುತ್ತವೆ. ಈ ಕಾರ್ಯಾಚರಣೆಯೊಂದಿಗೆ, ಬಾಹ್ಯಾಕಾಶ ಹವಾಮಾನದ ಮೇಲೆ ಸೂರ್ಯನ ಚಲನೆಯ ಪರಿಣಾಮವನ್ನು ನೈಜ ಸಮಯದಲ್ಲಿ ಅಧ್ಯಯನ ಮಾಡಲು ನಮಗೆ ಸಾಧ್ಯವಾಗುತ್ತದೆ ಎಂದು ಇಸ್ರೋ ಹೇಳಿದೆ. ಕರೋನಲ್ ತಾಪನ, ದ್ರವ್ಯರಾಶಿ ಹೊರಸೂಸುವಿಕೆ, ಪ್ರಾಫಿ ಫ್ಲೇರ್ಸ್ ಮತ್ತು ಜ್ವಾಲೆಗಳು, ಡೈನಾಮಿಕ್ಸ್, ಬಾಹ್ಯಾಕಾಶ ಹವಾಮಾನ, ಕಣಗಳ ಚಟುವಟಿಕೆಗಳು ಮತ್ತು ಗುಣಲಕ್ಷಣಗಳನ್ನು ಅಧ್ಯಯನ ಮಾಡಲಾಗುತ್ತದೆ. ಭೂಮಿ ಮತ್ತು ಸೂರ್ಯನ ನಡುವೆ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ, ಇದನ್ನು ಕ್ರಮಿಸಲು ಆದಿತ್ಯ ಎಲ್ -4 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.

ಲ್ಯಾಗ್ರೇಂಜ್ ಪಾಯಿಂಟ್ ಎಂದರೇನು?

ನಮಗೆಲ್ಲರಿಗೂ ತಿಳಿದಿರುವಂತೆ ಭೂಮಿ ಮತ್ತು ಸೂರ್ಯನ ನಡುವಿನ ಅಂತರ ಸುಮಾರು 1.5 ಮಿಲಿಯನ್ ಕಿಲೋಮೀಟರ್. ಈ ಅಂತರದ ಮಧ್ಯದಲ್ಲಿ ಐದು ಲ್ಯಾಗ್ರೇಂಜ್ ಬಿಂದುಗಳಿವೆ. ಇವುಗಳನ್ನು L1, L2, L3, L4 ಮತ್ತು L5 ಬಿಂದುಗಳು ಎಂದು ಕರೆಯಲಾಗುತ್ತದೆ. ಇಸ್ರೋ ಬಾಹ್ಯಾಕಾಶ ನೌಕೆಯನ್ನು ಎಲ್ 1 ಬಿಂದುವಿನಲ್ಲಿ ಇರಿಸಲು ಮುಖ್ಯ ಕಾರಣವೆಂದರೆ ಇದು ಭೂಮಿಯ ಗುರುತ್ವಾಕರ್ಷಣೆ ಮತ್ತು ಸೂರ್ಯನ ಗುರುತ್ವಾಕರ್ಷಣೆಯ ನಡುವಿನ ಸಮತೋಲನವನ್ನು ರಚಿಸುವ ಸ್ಥಳವಾಗಿದೆ, ಅಂದರೆ ಬಾಹ್ಯಾಕಾಶ ನೌಕೆ ಸ್ಥಿರ ಸ್ಥಾನಕ್ಕೆ ಬರುತ್ತದೆ. ಭೂಮಿ ಮತ್ತು ಗುರುತ್ವಾಕರ್ಷಣೆಯ ನಡುವಿನ ಸಮತೋಲನದಿಂದಾಗಿ, ಕೇಂದ್ರಾಪಗಾಮಿ ಬಲವು ರೂಪುಗೊಳ್ಳುತ್ತದೆ, ಈ ಬಲದಿಂದಾಗಿ, ಯಾವುದೇ ಬಾಹ್ಯಾಕಾಶ ನೌಕೆಯು ಸ್ಥಿರ ಸ್ಥಾನದಲ್ಲಿ ಉಳಿಯಬಹುದು. ಈ ಬಿಂದುಗಳಲ್ಲಿ, ಬಾಹ್ಯಾಕಾಶ ನೌಕೆಯು ಇಂಧನ ಬಳಕೆಯಿಲ್ಲದೆ ನಿರಂತರವಾಗಿ ಸ್ಥಿರವಾಗಿ ಉಳಿಯಬಹುದು. ಇದಲ್ಲದೆ, ಹಗಲು ಮತ್ತು ರಾತ್ರಿ ಬೈಸಿಕಲ್ ಗಳು ಸಹ ಪರಿಣಾಮ ಬೀರುವುದಿಲ್ಲ. ಎಲ್ 1 ಬಿಂದುವಿನಿಂದ, ಸೂರ್ಯನು ದಿನದ 24 ಗಂಟೆಗಳ ಕಾಲ ಗೋಚರಿಸುತ್ತಾನೆ, ಅದೂ ಏಳು ದಿನಗಳು. ಎಲ್ 1 ಬಿಂದು ಭೂಮಿಗೆ ಹತ್ತಿರದಲ್ಲಿದೆ.ಇದು ಸಂವಹನವನ್ನು ತುಂಬಾ ಸುಲಭಗೊಳಿಸುತ್ತದೆ.

ಸೂರ್ಯ ಮಿಷನ್ ನ ಉದ್ದೇಶವೇನು?

*ಸೂರ್ಯನ ಮೇಲಿನ ವಾತಾವರಣದಲ್ಲಿನ ಚಲನಶಾಸ್ತ್ರದ ಅಧ್ಯಯನ
*ವರ್ಣಗೋಳೀಯ ಮತ್ತು ಕರೋನಲ್ ತಾಪನದ ಅಧ್ಯಯನ
*ಸೂರ್ಯನ ಸುತ್ತಲಿನ ಗಾಳಿಯ ಉಗಮ, ರಚನೆ ಮತ್ತು ಚಲನಶಾಸ್ತ್ರವನ್ನು ಪರಿಶೀಲಿಸಿ.
*ಅಯಾನೀಕೃತ ಪ್ಲಾಸ್ಮಾದ ಭೌತಶಾಸ್ತ್ರದ ಅಧ್ಯಯನ
*ಕರೋನಲ್ ಮಾಸ್ ಎಜೆಕ್ಷನ್ ಮತ್ತು ಜ್ವಾಲೆಗಳ ಬಗ್ಗೆ ಸಂಶೋಧನೆ
*ಸೌರ ಕರೋನಾದ ಭೌತಶಾಸ್ತ್ರ ಮತ್ತು ತಾಪಮಾನದ ಅಧ್ಯಯನ

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜನ್ಮ ಜಯಂತಿ!

ತೀರ್ಥಹಳ್ಳಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜನ್ಮ ಜಯಂತಿ!
– ಅದ್ದೂರಿ ಮೆರವಣಿಗೆ: ಸರಳ ಕಾರ್ಯಕ್ರಮ
– ಸಮುದಾಯದ ಅಭಿವೃದ್ಧಿ ಎಸ್.ಎನ್.ಜಿ.ವಿ ಸಂಘಟನೆಯ ಮೂಲ ದ್ಯೇಯ: ವಿಶಾಲ್ ಕುಮಾರ್

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಶ್ರೀ ನಾರಾಯಣ ಗುರುಗಳ 169ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ತೀರ್ಥಹಳ್ಳಿಯ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸಾಗಿದ ಸಮಾಜದ ಪ್ರಮುಖರು ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ವಿಚಾರ ಧಾರೆಗಳ ಬಗ್ಗೆ ಗಣ್ಯರು ಮಾತನಾಡಿದರು.
ತೀರ್ಥಪಟ್ಟ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ,ಆರ್ಯ ಈಡಿಗ ಸಂಘ, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾಸಂಘ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ 5ಹಾಗೂ ವಿವಿಧ ಸಂಘ-ಸಂಸ್ಥೆಗಳು ಸೇರಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದವು.

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಘರ್ಷ ಮಾಡದೆ ಮೌನವಾಗಿ ಶಿವನ ದೇವಸ್ಥಾನಗಳನ್ನು ಸ್ಥಾಪನೆ ಮಾಡುವುದರ ಮೂಲಕ ಹಿಂದೂ ಸಮಾಜದ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ, ಸಾಮಾಜಿಕ ಸುಧಾರಣೆ ಮಾಡಿದವರು ಹಿಂದೂ ಧರ್ಮದ ಪ್ರತಸ್ಮರಣೀಯರು, ಹಿಂದೂ ಧರ್ಮಕ್ಕೆ ಶಕ್ತಿ ತುಂಬಿದವರು ಎಂದರು. ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ತೀರ್ಥಹಳ್ಳಿ ಘಟಕದ ಅಧ್ಯಕ್ಷರಾದ ವಿಶಾಲ್ ಕುಮಾರ್ ಮಾತನಾಡಿ ನಮ್ಮ ಸಂಘಟನೆ ಯಾವುದೇ ಪರ್ಯಾಯ ಸಂಘಟನೆಯಲ್ಲ. ಶ್ರೀ ನಾರಾಯಣ ಗುರುಗಳ ಆದರ್ಶ ಮತ್ತು ಅವರ ಸಿದ್ಧಾಂತಗಳನ್ನು ಲೋಕಕ್ಕೆ ಸಾರುವುದು ಮತ್ತು ಸಮಾಜದ ಅಭಿವೃದ್ಧಿ, ಏಳಿಗೆ ಮೂಲ ಧೈಯ ಉದ್ದೇಶ. ಸಂಘಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಬೇಡಿ, ಎಲ್ಲರೂ ಮುಂದಾಗಿ ಸಮಾನತೆಯಿಂದ ಸಂಘಟನೆಯನ್ನು ಬೆಳೆಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯೋಗಾನಂದ ಅವಧೂತರು,ತೀರ್ಥಹಳ್ಳಿ ತಹಶೀಲ್ದಾರ್,ಬಿಲ್ಲವ ಸಂಘದ ಅಧ್ಯಕ್ಷ ಮಂಜುನಾಥ್,ಈಡಿಗ ಸಂಘದ ಅಧ್ಯಕ್ಷರಾದ ಮಟ್ಟಿನ ಮನೆ ರಾಮಚಂದ್ರ,ಎಸ್.ಎನ್.ಜಿ.ವಿ,ರಾಜ್ಯ ಅಧ್ಯಕ್ಷ ರಾದ ಸತ್ಯಜಿತ್ ಸುರತ್ಕಲ್  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಉಡುಪಿ:ಮೀನುಗಾರಿಕೆ ದೋಣಿಗಳ ಭೌತಿಕ ಪರಿಶೀಲನೆ
– ಉಡುಪಿ :ಮುಖ್ಯ ಶಿಕ್ಷಕಿ ಸೇವೆಯಿಂದ ವಜಾ
– ಪುತ್ತೂರು :ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಸಂದ ಜಯ
– ಉಡುಪಿ: ಸೆಪ್ಟೆಂಬರ್‌ನಲ್ಲಿ 8 ದಿನ ಬ್ಯಾಂಕ್‌ಗೆ ರಜೆ
– ಉಡುಪಿ: ಸೆ. 12 ರಂದು ಉಡುಪಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

NAMMUR EXPRESS : ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೋಟಾರೀಕೃತ ಮೀನುಗಾರಿಕೆ ದೋಣಿಗಳಿಗೆ 2 ತಿಂಗಳ ನಿಷೇಧಿತ ಅವಧಿಯನ್ನು ಹೊರತುಪಡಿಸಿ, ವಾರ್ಷಿಕ 10 ತಿಂಗಳ ಅವಧಿಗೆ ಮಾಸಿಕ ಪ್ರತಿ ದೋಣಿಗೆ 300 ಲೀ. ನಂತೆ ಸೀಮೆಎಣ್ಣೆ ವಿತರಿಸಲು ಸರ್ಕಾರವು ಆದೇಶಿಸಿರುವ ಹಿನ್ನೆಲೆ, ಮೋಟಾರೀಕೃತ ಮೀನುಗಾರಿಕೆ ದೋಣಿಗಳಿಗೆ ಸೀಮೆಎಣ್ಣೆ ಪಡೆಯಲು ಪರ್ಮಿಟ್‌ಗಾಗಿ ದೋಣಿ ಮಾಲಕರು ಅರ್ಜಿ ಸಲ್ಲಿಸುವ ಮೊದಲು ಇಲಾಖೆಯಿಂದ ದೋಣಿಗಳನ್ನು ಭೌತಿಕ ಪರಿಶೀಲನೆ ಮಾಡಿ ನಂತರ ಪರವಾನಿಗೆ ಹಾಗೂ ಸೀಮೆಎಣ್ಣೆ ರಹದಾರಿಯನ್ನು ದೋಣಿ ಮಾಲಕರಿಗೆ ನೀಡಲಾಗುವುದು.

ಆ ಪ್ರಯುಕ್ತ ಸೆಪ್ಟೆಂಬರ್ 4 ರಂದು ಬೈಂದೂರು ತಾಲೂಕಿನ ಅಳ್ವೆಗದ್ದೆಯ ಮೀನುಗಾರಿಕೆ ಜೆಟ್ಟಿ, ಕಳಿಹಿತ್ಯುವಿನ ಮೀನುಗಾರಿಕೆ ಹರಾಜು ಪ್ರಾಂಗಣ, ಮಡಿಕಲ್‌ನ ಮಹೇಶ್ವರ ದೇವಸ್ಥಾನ, ಪಡುವರಿ/ತಾರಾಪತಿಯ ಶ್ರೀ ರಾಮ ಮಂದಿರ, ಕೊಡೇರಿ/ಕಿರಿಮಂಜೇಶ್ವರದ ಕೊಡೇರಿ ಬಂದರು, ಮರವಂತೆ ಬಂದರು, ಕಂಚುಕೋಡು ಮಡಿ, ಗಂಗೊಳ್ಳಿ ಲೈಟ್‌ಹೌಸ್, ಗಂಗೊಳ್ಳಿ ಬಂದರು, ಕುಂದಾಪುರ, ಕೋಟೇಶ್ವರ ಮತ್ತು ತೆಕ್ಕಟ್ಟೆಯ ಕೋಡಿ ಕಿನಾರೆಯಲ್ಲಿ ಹಾಗೂ ಸೆಪ್ಟೆಂಬರ್ 5 ರಂದು ರಂದು ಉಡುಪಿ ತಾಲೂಕಿನ ಹೆಜಮಾಡಿ/ಪಡುಬಿದ್ರಿಯ ಪಲಿಮಾರು ಮೀನುಗಾರರ ಸಭಾ ಭವನದ ಬಳಿ ಉಚ್ಚಿಲದ ಸುಬಾಷ್ ರೋಡ್ ಬೀಚ್ ಹತ್ತಿರ, ಮಲ್ಪೆ-ಪಡುಕೆರೆಯ ಬೋಟ್ ಕಚೇರಿ ಹತ್ತಿರ, ಮಲ್ಪೆ-ಕೊಳ ಇಲ್ಲಿನ ಹನುಮಾನ್
ವಿಠೋಭ ಮಂದಿರ ಮುಂಭಾಗದಲ್ಲಿ, ಸಾಸ್ತಾನ-ಕೋಡಿಕನ್ಯಾನ (ಸಾಸ್ತಾನ ಕೋಡಿ ಜೆಟ್ಟಿ), ಕಾಪು ಲೈಟ್‌ಹೌಸ್, ಎರ್ಮಾಳ್ (ಉಚ್ಚಿಲ ಅಥವಾ ಕಾಪು) ಹಾಗೂ ಹಂಗಾರಕಟ್ಟೆ/ಬೆಂಗ್ರೆ (ಕೋಡಿಬೆಂಗ್ರೆ ಸ್ಥಳಗಳಲ್ಲಿ ದೋಣಿಗಳ ಭೌತಿಕ ಪರಿಶೀಲನೆ ನಡೆಸಲಿದ್ದು, ದೋಣಿ ಮಾಲಿಕರು ಖುದ್ದಾಗಿ ಮೀನುಗಾರಿಕಾ ದೋಣಿಗಳನ್ನು ತಪಾಸಣೆಗೆ ಹಾಜರುಪಡಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯ ಶಿಕ್ಷಕಿ ಸೇವೆಯಿಂದ ವಜಾ

ಉಡುಪಿ: ಕಾರ್ಕಳ ತಾಲೂಕು ಎಣ್ಣೆಹೊಳೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಬಿ ಅವರು, ಈ ಹಿಂದೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹಾಗೂ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣಾ ವರದಿಯನ್ವಯ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ, ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನ್ವಯ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುತ್ತೂರು ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಸಂದ ಜಯ

ಪತ್ರಿಕಾ ಮಾಧ್ಯಮಗಳ ಸ್ವಾತಂತ್ರ್ಯ ಹರಣಕ್ಕೆ ಮುಂದಾದ ಪೊಲೀಸ್ ಇಲಾಖೆಗೆ ಚಾಟಿ ಬೀಸಿದ ಕೋರ್ಟ್
ಪುತ್ತೂರು ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಸಂದ ಜಯ

ಪುತ್ತೂರು: ಸುಳ್ಯ ಪೊಲೀಸರು ಮಾಧ್ಯಮಗಳ ಮೇಲೆ ದಾಖಲಿಸಿದ್ದ ಸುಳ್ಳು ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ವಿಶೇಷ ಎಂದರೆ ಪೊಲೀಸರು ದಾಖಲಿಸಿರುವ ಕೇಸಿಗೆ ಮಾಧ್ಯಮ ಪ್ರತಿನಿಧಿಗಳು ಜಾಮೀನು ಪಡೆಯುವ ಮೊದಲೇ ರಾಜ್ಯ ಉಚ್ಛ ನ್ಯಾಯಾಲಯ ಪತ್ರಕರ್ತರಿಗೆ ನ್ಯಾಯ ಒದಗಿಸಿದೆ. ಇತರ ಪತ್ರಕರ್ತರ ಸಂಘದ ಸದಸ್ಯರ ಮೇಲೆ ಕೇಸು ದಾಖಲಾಗಿದ್ದರೂ ಅದು ಪರ್ಯಾಯ ಪತ್ರಕರ್ತರ ಸಂಘ ಎಂದು ಪರಿಗಣಿಸದೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ನಡೆಸಿದ್ದ ಕಾನೂನು ಹೋರಾಟಕ್ಕೆ ಜಯ ದೊರೆತಿದೆ.

ಘಟನೆ ವಿವರ :
ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕನೋರ್ವ ಕಾರಿನಲ್ಲಿ ಸುತ್ತಾಟ ನಡೆಸಿದ್ದಾನೆ ಎಂದು ಹಿಂದೂ ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಸುಳ್ಯ ಠಾಣಾ ಪೊಲೀಸರು ಆರೋಪಿತ ಯುವಕರನ್ನು ವಶಕ್ಕೆ ಪಡೆದಿದ್ದರು.ವಿಷಯ ಸುದ್ದಿಯಾಗುತ್ತಲೇ ಹಿಂದೂ ಫೈರ್ ಬ್ರಾಂಡ್ ನಾಯಕ ಎಂದು ಕರೆಸಿಕೊಳ್ಳುವ ಅರುಣ್ ಕುಮಾರ್ ಪುತ್ತಿಲ ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿ ಯುವಕರನ್ನು ರಿಲೀಸ್ ಮಾಡಿದ್ದಾರೆ ಎಂದು ವೆಬ್ ಮಾಧ್ಯಮಗಳು ವರದಿ ಪ್ರಕಟಿಸಿದ್ದವು.

ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡಿ ಅಂತರ್ಜಾಲದಲ್ಲಿ ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಸುಮೊಟೋ ಕೇಸು ದಾಖಲಾಗಿತ್ತು ಮಾಧ್ಯಮಗಳ ಮೇಲಿನ ಕೇಸು ದಾಖಲಾತಿಯನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ತಾಲೂಕು ಜರ್ನಲಿಸ್ಟ್ ಯೂನಿಯನ್ ಘಟಕ ಯೂನಿಯನ್ ಜಿಲ್ಲಾ ಮತ್ತು ರಾಜ್ಯ ಸಮಿತಿಯ ನಿರ್ದೇಶನದಂತೆ ಹೈಕೋರ್ಟ್‌ ಮೊರೆ ಹೋಗಿತ್ತು.

ಘಟನೆಗೆ ಸಂಬಂಧಪಟ್ಟ ಎಲ್ಲಾ ಸಾಕ್ಷ್ಯಧಾರಗಳ ಜೊತೆ ನೇರ ಹಾಗೂ ಸ್ಪಷ್ಟ ಮಾಹಿತಿಯನ್ನು ಭಿತ್ತರಿಸಿದ ಮಾಧ್ಯಮಗಳ ಪರವಾಗಿ ಹಿರಿಯ ನ್ಯಾಯವಾದಿ ಅರುಣ್ ಕ್ಯಾಮ್ ಹೈಕೋರ್ಟಲ್ಲಿ ಈ ಬಗ್ಗೆ ವಾದ ಮಂಡಿಸಿದ್ದರು. ನ್ಯಾಯವಾದಿಗಳಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿಸಿದರು.ಈ ಘಟನೆಗೆ ಸಂಬಂಧಪತಿ ಮಾಧ್ಯಮಗಳ ಮೇಲೆ ದಾಖಲಾದ ಎಫ್.ಐ.ಆರ್.ಮೇಲೆ ಹೈ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಪತ್ರಿಕಾ ಮಾಧ್ಯಮಗಳ ಸ್ವಾತಂತ್ರ್ಯ ಹರಣಕ್ಕೆ ಮುಂದಾದ ಪೊಲೀಸ್ ಇಲಾಖೆಗೆ ಚಾಟಿ ಬೀಸಿದೆ.

ಸೆಪ್ಟೆಂಬರ್‌ನಲ್ಲಿ 8 ದಿನ ಬ್ಯಾಂಕ್‌ಗೆ ರಜೆ!

ಉಡುಪಿ: ಈಗಾಗಲೇ ಹಬ್ಬಗಳ ಋತು ಆರಂಭಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ರವಿವಾರ ಸೇರಿ ಒಟ್ಟು 8 ದಿನಗಳ ಕಾಲ ರಜೆ ಇರಲಿದೆ. ಸೆ. 18ರಂದು (ಚೌತಿ ನಿಮಿತ್ತ), ಸೆ. 28ರಂದು ಈದ್ ಮಿಲಾದ್, ಸೆ. 9ಕ್ಕೆ ಎರಡನೇ ಶನಿವಾರ, ಸೆ. 23ಕ್ಕೆ ನಾಲ್ಕನೇ ಶನಿವಾರ, ಸೆ. 3, ಸೆ. 10, ಸೆ. 17 ಹಾಗೂ ಸೆ. 24ರಂದು ರವಿವಾರದ ರಜೆ ಇರುತ್ತದೆ. ರಜಾ ದಿನಗಳಲ್ಲಿ ಎಟಿಎಂಗಳಲ್ಲಿ ಹಣದ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ

ಉಡುಪಿ :ಸೆ. 12 ರಂದು ಉಡುಪಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸೆಪ್ಟೆಂಬರ್ 12 ರಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾಗವಹಿಸುವ ಸ್ಪರ್ಧಿಗಳು ಬೆಳಗ್ಗೆ 9 ಗಂಟೆಯ ಒಳಗಾಗಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದಾಗಿದೆ.

ಸ್ಪರ್ಧೆಗಳ ವಿವರ:

ಪುರುಷ ಹಾಗೂ ಮಹಿಳೆಯರಿಗೆ ಅಥ್ಲೆಟಿಕ್ಸ್ ಸ್ಪರ್ಧೆಗಳು, ಪುರುಷರಿಗೆ ಗುಂಪು ಆಟಗಳಾದ ವಾಲಿಬಾಲ್, ಖೋ ಖೋ, ಕಬಡ್ಡಿ, ಫುಟ್‌ಬಾಲ್, ಪ್ರೋಬಾಲ್, ಯೋಗ ಹಾಗೂ ಮಹಿಳೆಯರಿಗೆ ವಾಲಿಬಾಲ್, ಖೋ-ಖೋ, ಕಬಡ್ಡಿ, ದ್ರೋಬಾಲ್ ಹಾಗೂ ಯೋಗ ಸ್ಪರ್ಧೆಗಳು ನಡೆಯಲಿದೆ.

ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಹಾಗೂ ಗುಂಪು ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡವು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.
ಕ್ರೀಡಾಕೂಟಕ್ಕೆ ಹೆಸರು ಹಾಗೂ ತಂಡಗಳನ್ನು ನೋಂದಾಯಿಸಲು ಸೆಪ್ಟೆಂಬರ್ 8 ಕೊನೆಯ ದಿನವಾಗಿದ್ದು, ಕ್ರೀಡಾಕೂಟ ನಡೆಯುವ ದಿನದಂದು ನೋಂದಾವಣೆಗೆ ಅವಕಾಶ ಇರುವುದಿಲ್ಲ. ಸೆ.9 ರಂದು ಫುಟ್‌ಬಾಲ್ ಸ್ಪರ್ಧೆಯು ಎಂ.ಜೆ.ಪಿ ಕ್ರೀಡಾಂಗಣದಲ್ಲಿ ಹಾಗೂ ಸೆ.10 ರಂದು ಬ್ರಹ್ಮಾವರದ ಸ.ಪ.ಪೂ ಕಾಲೇಜಿನಲ್ಲಿ ಖೋ-ಖೋ ಸ್ಪರ್ಧೆಗಳು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2521324, ಮೊ.ನಂ: 9480886467 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ಬೆಂಗಳೂರು

ಸಂಸದ ಸ್ಥಾನದಿಂದ ಅನರ್ಹಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ.!

ಚುನಾವಣಾ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ!
– ಸಂಸದ ಸ್ಥಾನದಿಂದ ಅನರ್ಹಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ.!
– ಸುಪ್ರೀಂ ಕೋರ್ಟ್ ಮೊರೆ ಹೋಗ್ತಾರ??

NAMMUR EXPRESS NEWS
ಬೆಂಗಳೂರು : ಹಾಸನ ಲೋಕಸಭಾ ಸದಸ್ಯ ಮತ್ತು ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್‌ ಆದೇಶಿಸಿದೆ. ಚುನಾವಣಾ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ನ್ಯಾಯವಾದಿ ದೇವರಾಜೇಗೌಡ ಅವರು ಪ್ರಜ್ವಲ್ ರೇವಣ್ಣವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಶುಕ್ರವಾರ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಕೆ. ನಟರಾಜನ್ ನೇತೃತ್ವದ ಪೀಠ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. ಜೊತೆಗೆ ಅಕ್ರಮ ಎಸಗಿರುವುದರಿಂದ ತಮ್ಮನ್ನು ವಿಜೇತ ಅಭ್ಯರ್ಥಿ ಎಂದು ಕೋರಿದ್ದ ಬಿಜೆಪಿ ಅಭ್ಯರ್ಥಿ ಎ. ಮಂಜು ಅವರ ಮನವಿ ಪುರಸ್ಕರಿಸಲು ನ್ಯಾಯಾಲಯ ನಿರಾಕರಿಸಿದೆ. ಅರ್ಜಿದಾರರು ಚುನಾವಣಾ ಅಕ್ರಮ ಎಸೆಗಿರುವುದರಿಂದ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಗದು ಎಂದು ನ್ಯಾಯಾಲಯ ಘೋಷಿಸಿದೆ. ಪ್ರಜ್ವಲ್ ರೇವಣ್ಣ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ತೀರ್ಥಹಳ್ಳಿ

ಸೆ.10ರರಂದು ಕೋಣಂದೂರಲ್ಲಿ ಚೆಸ್ ಪಂದ್ಯ

ಸೆ.10ರರಂದು ಕೋಣಂದೂರಲ್ಲಿ ಚೆಸ್ ಪಂದ್ಯ
– ಕೋಣಂದೂರು ಫ್ರೆಂಡ್ಸ್ ಕೋಣಂದೂರು ವತಿಯಿಂದ ಆಯೋಜನೆ
– ಅಂತರ ತಾಲೂಕು ಮಟ್ಟದ ಮುಕ್ತ ಚದುರಂಗ ಪಂದ್ಯಾವಳಿ
– ಹೆಸರನ್ನು ನೋಂದಾಯಿಸಲು ಅವಕಾಶ

NAMMUR EXPRESS NEWS
ತೀರ್ಥಹಳ್ಳಿ: ಕೋಣಂದೂರು ಫ್ರೆಂಡ್ಸ್ ಕೋಣಂದೂರು ಹಾಗೂ ಫ್ರೊ. ಗಣೇಶಮೂರ್ತಿ, ಶಿಕ್ಷಣ ಪ್ರತಿಷ್ಠಾನ ಹಾಗೂ ಅಮೃತ ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 10 ಭಾನುವಾರದಂದು 30 ನೇ ವರ್ಷದ ಅಂತರ ತಾಲೂಕು ಮಟ್ಟದ ಚೆಸ್ ಪಂದ್ಯಾವಳಿಯನ್ನು ರಾಷ್ಟ್ರೀಯ ಪ್ರೌಢಶಾಲೆ ಕೋಣಂದೂರಿನಲ್ಲಿ ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಈ ಪಂದ್ಯಾವಳಿಯು ತೀರ್ಥಹಳ್ಳಿ, ಹೊಸನಗರ, ಸಾಗರ, ಕೊಪ್ಪ ಅಂತರ ತಾಲೂಕು ಪಂದ್ಯಾವಳಿಯಾಗಿದ್ದು ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್‌ರವರು ಇದರ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ‌.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಣಂದೂರು ಫ್ರೆಂಡ್ಸ್ ಕೋಣಂದೂರು ಅಧ್ಯಕ್ಷರಾದ ಬಿ.ಇ. ಅಬ್ಬಾಸ್‌ರವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರೊಫೆಸರ್ ಎಂ.ಜಿ. ಸುಭಾಷ್, ಉದ್ಯಮಿಗಳಾದ ಕೆ.ಆರ್. ಪ್ರಸಾದ್, ಫ್ರೊ. ಹೆಚ್ ಎಸ್. ಗಣೇಶ್ ಮೂರ್ತಿ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ. ರವಿಶಂಕರ್ ಹೆಚ್.ಜಿ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ, ಪ್ರತಿಷ್ಠಿತ ಬಿಐಟಿ ಸಂಸ್ಥೆಯ ಅಧ್ಯಕ್ಷರಾದ ಸಿರಿಬೈಲ್ ಧರ್ಮೇಶ್, ಭದ್ರಾವತಿ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಶಿವಪ್ರಕಾಶ್, ಉದ್ಯಮಿಗಳಾದ ಸುಕೇಶ್, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕಂಪನಗದ್ದೆ ಸುರೇಶ್ ಕೆ.ಎನ್, ಕೋಣಂದೂರು ಫಾಹಿಂ ಸ್ಟೀಲ್ ಕಂಪನಿ ಮಾಲೀಕರಾದ ಇಸ್ಮಾಯಿಲ್, ರಾಷ್ಟ್ರೀಯ ಪ್ರೌಢಶಾಲೆ ಕೋಣಂದೂರಿನ ಮುಖ್ಯೋಪಾಧ್ಯಾಯರಾದ ಕೆ.ಬಿ. ಪ್ರಕಾಶ್‌ರವರು ಪಾಲ್ಗೊಳ್ಳುವರು.

ಸಂಜೆ 5 ಗಂಟೆಗೆ ಬಹುಮಾನ ವಿತರಣೆ ಕಾರ್ಯಕ್ರಮವಿದ್ದು ಮಂಜುನಾಥ್ ಕೆ.ಎನ್, ಈಶ್ವರ್ ನಾಯ್ಕ್, ನಿರಂಜನ್‌ರವರು ಬಹುಮಾನವನ್ನು ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಶೋಕ್, ಚಂದ್ರಕಾಂತ್ ಸರ್ಜಾ, ಹೆಚ್. ಎಸ್. ದಿನೇಶ್, ಕೆ. ಆರ್. ಶ್ರೀಕಾಂತ್, ಮುದ್ದಣ್ಣ ಶೆಟ್ಟಿ, ಮುಂತಾದವರು ಪಾಲ್ಗೊಳ್ಳಲಿದ್ದಾರೆ‌.

ಪಂದ್ಯಾವಳಿಯ ನಿಯಮಗಳು

*ಸ್ವಿಸ್ ಲೀಗ್ ಮಾದರಿಯಲ್ಲಿ ಪಂದ್ಯ ನಡೆಸಲಾಗುವುದು
* ಒಂದು ದಿನದ ಪಂದ್ಯವಾಗಿರುತ್ತದೆ
* ದಿನಾಂಕ 8/9/2023 ರ ಶುಕ್ರವಾರದಂದು ಕಡ್ಡಯವಾಗಿ ಹೆಸರು ನೋಂದಾಯಿಸಲು ಕೊನೆಯ ದಿನಾಂಕವಾಗಿರುತ್ತದೆ ನಂತರ ಬಂದ ಹೆಸರುಗಳನ್ನು ಪರಿಗಣಿಸಲಾಗುವುದಿಲ್ಲ. *ಆಟಗಾರರು ಚೆಸ್ ಬೋರ್ಡ್‌ ನ್ನು ತಪ್ಪದೇ ತರಬೇಕು‌
* ಎಲ್ಲಾ ಆಟಗಾರರಿಗೆ ಭೋಜನಾ ವ್ಯವಸ್ಥೆ ಕೂಡ ಇರುತ್ತದೆ
* ನೋಂದಣಿ ಶುಲ್ಕ ೨೫೦/ ಆಗಿರುತ್ತದೆ
* ಕಡ್ಡಾಯವಾಗಿ ವಯಸ್ಸಿನ ದಾಖಲಾತಿ ಪತ್ರ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ತರಬೇಕು
* ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ
* ದಾಖಲಾತಿಗಳನ್ನು ವಾಟ್ಸಾಪ್ ಮುಖಾಂತರ ಕಳುಹಿಸಬಹುದು

ಹೆಸರನ್ನು ನೋಂದಾಯಿಸಲು

ಬಿ.ಇ. ಅಬ್ಬಾಸ್ :9008139007, 9480706374
ಚಂದ್ರಕಾಂತ್ ಸರ್ಜಾ: 9449540820
ಮುದ್ದಣ್ಣ ಶೆಟ್ಟಿ: 9686555627
ಕೆ. ನಾಗರಾಜ್ ಶೆಟ್ಟಿ: 9480151139
ಇವರನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!