Categories
ತೀರ್ಥಹಳ್ಳಿ

ಕುಲ್ಲುಂಡೆ ನಾಗರಾಜ್ ಎಂಬ ರಿಯಲ್ ಹೀರೋ!

ಕುಲ್ಲುಂಡೆ ನಾಗರಾಜ್ ಎಂಬ ರಿಯಲ್ ಹೀರೋ!
– ಅಂದದ ಶಾಲೆಗೊಂದು ಚಂದದ ಗಾರ್ಡನ್!
– ಶಾಲೆಗಳ ಕೈತೋಟ ನಿರ್ಮಾಣಕ್ಕೆ ಸಹಕಾರ
– ದಬ್ಬಣಗದ್ದೆ ಸರ್ಕಾರಿ ಶಾಲೆಯ ಮಾದರಿ ಹೆಜ್ಜೆ

NAMMUR EXPRESS NEWS
ತೀರ್ಥಹಳ್ಳಿ: ಖಾಸಗಿ ಶಾಲೆಯ ದರ್ಬಾರ್ ಅಲ್ಲಿ ಸರ್ಕಾರಿ ಶಾಲೆಗಳನ್ನು ಅಸಡ್ಡೆ ಮಾಡುವವರೇ ಹೆಚ್ಚು. ಆದರೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಖ್ಯಾತಿಯ ಕುಲ್ಲುಂಡೆ ನಾಗರಾಜ್ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಪರಿಸರ ಉಳಿವಿಗಾಗಿ ತಮ್ಮ ಸ್ವಂತ ಹಣದಿಂದ ಗಿಡಗಳನ್ನು ನೇಡುತ್ತ ಶಾಲಾ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಮುಂದಾಗಿದ್ದಾರೆ. ಈ ಮೂಲಕ ತಮ್ಮ ಸೇವೆಯನ್ನು ಪರಿಸರ ಮಂದುವರಿಸಿದ್ದಾರೆ. ಪ್ರಾಥಮಿಕ ದಬ್ಬಣಗದ್ದೆ ಶಾಲೆಗೆ ವಿವಿಧ ಹಣ್ಣಿನ ಹಾಗೂ ಔಷಧಿ ಗಿಡಗಳು ಹಾಗೂ ಶಾಲೆಗೆ ಬಣ್ಣ,ಶಾಲಾ ಆಟದ ಮೈದಾನ ಅಗಲೀಕರಣ ಶಾಲೆಗೆ ಸುತ್ತಲೂ ಬೇಲಿ ಮಾಡುವ ಮೊದಲ ಹಂತದ ಯೋಜನೆಯನ್ನು ಸುಮಾರು ಅಂದಾಜು ಮೊತ್ತ 4-5 ಲಕ್ಷರೂಗಳಲ್ಲಿ ಮಾಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ.

ಮುಂದಿನ ಹಂತದಲ್ಲಿ ಶಾಲಾ ರಂಗಮಂದಿರ ಸಹಾಯ ಮಾಡಲಿದ್ದು ಇತರೆ ಕಾರ್ಯಕ್ರಮವನ್ನು ಮಾಡುವುದಾಗಿ ಹೇಳಿದ್ದಾರೆ. ಹಳ್ಳಿಗಾಡಿನ ಶಾಲೆಯ ಚಿತ್ರಣವನ್ನು ಬದಲಾವಣೆ ಮಾಡುತ್ತಿರುವ ನಾಗರಾಜ್ ಉದ್ದೇಶ ಪೋಷಕರು, ಗ್ರಾಮಸ್ಥರು, ಶಿಕ್ಷಕರ ಮೆಚ್ಚುಗೆ ವ್ಯಕ್ತವಾಗಿದೆ.

Categories
ತೀರ್ಥಹಳ್ಳಿ

ಮಳೆಗಾಗಿ ಹಣಗೆರೆಯಲ್ಲಿ ದೇವರಿಗೆ ಪೂಜೆ!

ಮಳೆಗಾಗಿ ಹಣಗೆರೆಯಲ್ಲಿ ದೇವರಿಗೆ ಪೂಜೆ!
– ತೀರ್ಥಹಳ್ಳಿ ತಾಲೂಕು ಹಣಗೆರೆ-ಕೆರೆಹಳ್ಳಿ ಗ್ರಾಮಸ್ಥರಿಂದ ಪ್ರಾರ್ಥನೆ
– ಮಳೆಗಾಗಿ ಕಪ್ಪೆ, ಮಕ್ಕಳಿಗೂ ಮದುವೆ!

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಸೇರಿ ರಾಜ್ಯದಲ್ಲಿ ಮಳೆ ಇಲ್ಲದೆ ಜನ ಕಂಗಾಲಾಗಿದ್ದಾರೆ. ಈ ಹಿನ್ನೆಲೆ ಎಲ್ಲೆಡೆ ಮಳೆಗಾಗಿ ಪ್ರಾರ್ಥನೆ ಪೂಜೆ ನಡೆಯುತ್ತಿದೆ. ಈ ನಡುವೆ ಮಳೆಗಾಗಿ ತೀರ್ಥಹಳ್ಳಿ ತಾಲೂಕು ಹಣಗೆರೆ-ಕೆರೆಹಳ್ಳಿ ಗ್ರಾಮಸ್ಥರು ಹಣಗೆರೆ ದೇವಾಲಯದಲ್ಲಿ ಗ್ರಾಮದ ಪರವಾಗಿ ಮಳೆಗೆ ಪ್ರಾರ್ಥನೆ ಮಾಡಿದ್ದಾರೆ. ಶೃಂಗೇರಿ ತಾಲೂಕಿನ ಕಿಗ್ಗ ದೇವಾಲಯದಲ್ಲೂ ವರುಣ ದೇವನಿಗೆ ಪೂಜೆಗೆ ಮಾಡುವ ನಿರ್ಧಾರದಲ್ಲಿ ಜನತೆ ಇದ್ದಾರೆ.

ಕಪ್ಪೆ, ಮಕ್ಕಳಿಗೂ ಮದುವೆ!:

ಮಳೆಗಾಗಿ ಈಗಾಗಲೇ ಕಪ್ಪೆಗಳಿಗೆ ಮದುವೆ ಮಾಡುವ ಮೂಲಕ ಮಳೆರಾಯನಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ಮದುವೆ ಮಾಡಿಸಿ ವರುಣ ದೇವನಲ್ಲಿ ಮಳೆ ಬರುವಂತೆ ಪ್ರಾರ್ಥಿಸಿದ್ದಾರೆ. ಆದರೂ ಮಳೆರಾಯನ ಸುಳಿವಿಲ್ಲ.ವಿಪರ್ಯಾಸ ನೋಡಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದಿನ ಪ್ರಕೃತಿಯ ನಾಶ ಮಾಡಿ ಮಳೆ ಬಾ ಎಂದರೆ ಬರುವುದಿಲ್ಲ. ಪ್ರಕೃತಿಯನ್ನು ಸಂರಕ್ಷಿಸದಿದ್ದಲ್ಲಿ ಪ್ರಕೃತಿ ವಿಕೋಪ ಉಂಟಾಗಬಹುದು. ಹೀಗೆ ಮನುಷ್ಯ ಸಣ್ಣತನ ಬಿಟ್ಟು ದುರಾಸೆ ಮಾಡದೆ ಪ್ರಕೃತಿಯ ನಿಯಮಕ್ಕೆ ತಲೆಬಾಗಬೇಕಿದೆ.

Categories
ತೀರ್ಥಹಳ್ಳಿ

ಬಿಜೆಪಿ ನಾಯಕರ ಮನೆಯಲ್ಲಿ ಇಸ್ಪೀಟ್ ಅಡ್ಡೆ?

ಬಿಜೆಪಿ ನಾಯಕರ ಮನೆಯಲ್ಲಿ ಇಸ್ಪೀಟ್ ಅಡ್ಡೆ?
– ನಾಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘಟನೆ
– ಬಿಜೆಪಿ ಮುಖಂಡರ ವಿರುದ್ಧ ದೂರು ದಾಖಲಿಸಿದ ಪೊಲೀಸರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ವಿವಿಧ ದಂಧೆಗಳು ಹೆಚ್ಚುತ್ತಿವೆ ಎಂಬ ಆರೋಪಗಳ ನಡುವೆ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕ್ಕೊಡು ಶಿವಳ್ಳಿ ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ತೀರ್ಥಹಳ್ಳಿ ಮತ್ತು ಆಗುಂಬೆ ಪೊಲೀಸರು ದಿಡೀರ್ ದಾಳಿ ನಡೆಸಿ ಹಣ ಮತ್ತು ಕೆಲವರನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಪೊಲೀಸರು ದಾಳಿ ನಡೆಸಿದಾಗ ಆಗುಂಬೆ ಭಾಗದ ಪ್ರಭಾವಿ ನಾಯಕರು ಈ ಇಸ್ಪೀಟ್ ಆಟದಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ. ಬಿಜೆಪಿ ಪಕ್ಷದ ಪ್ರಮುಖರೊಬ್ಬರ ಮನೆಯಲ್ಲಿ ಈ ಇಸ್ಪೀಟ್ ನಡೆಯುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Categories
ತೀರ್ಥಹಳ್ಳಿ

ರಾಜಕೀಯ ಒತ್ತಡದ ನಡುವೆ ಕೇರಂ ಆಡಿದ ಕಿಮ್ಮನೆ

ರಾಜಕೀಯ ಒತ್ತಡದ ನಡುವೆ ಕೇರಂ ಆಡಿದ ಕಿಮ್ಮನೆ

NAMMUR EXPRESS NEWS
ತೀರ್ಥಹಳ್ಳಿ: ಸದಾ ರಾಜಕೀಯ, ಸಮಾಜ ಸೇವೆ ಒತ್ತಡದಲ್ಲಿರುವ ಮಾಜಿ ಸಚಿವ, ಶಾಸಕ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ತಾಲೂಕು ಬಸವಾನಿ ಗ್ರಾಮ ಪಂಚಾಯಿತಿ ಆವರಣದ ಲೈಬ್ರರಿ ಕೊಠಡಿಯಲ್ಲಿ ಕೇರಂ ಬೋರ್ಡ್ ಆಡುವ ಮೂಲಕ ಗಮನ ಸೆಳೆದರು. ಪ್ರಮುಖರಾದ ಕೆಸ್ತೂರು ಮಂಜುನಾಥ್, ಬಸವಾನಿ ಉದಯ್ ಈ ಚದುರಂಗದಾಟದಲ್ಲಿ ಭಾಗಿಯಾದರು.

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

Categories
ತೀರ್ಥಹಳ್ಳಿ

ಹೆಗ್ಗೋಡು- ರಾಮಕೃಷ್ಣಪುರ ಮಧ್ಯೆ ಅಪಘಾತ!

ಹೆಗ್ಗೋಡು- ರಾಮಕೃಷ್ಣಪುರ ಮಧ್ಯೆ ಅಪಘಾತ!
– ಕಾರು- ಬೈಕ್ ನಡುವೆ ನಡೆದ ಘಟನೆ
– ಎರಡು ವಾಹನದಲ್ಲಿದ್ದವರು ಅಪಾಯದಿಂದ ಪಾರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಹೆಗ್ಗೋಡು ಮತ್ತು ರಾಮಕೃಷ್ಣಪುರ ಮಧ್ಯದಲ್ಲಿರುವ ಮೈಥಾನಿಯಲ್ಲಿ ಕಾರು ಬೈಕ್ ನಡುವೆ ನಡೆದ ಘಟನೆಯಲ್ಲಿ ಎರಡು ವಾಹನಗಳು ನುಜ್ಜು ಗುಜ್ಜಾಗಿದೆ. ದಾವಣಗೆರೆ ಮೂಲದವರ ಕಾರು ಮತ್ತು ಕಮ್ಮರಡಿ ಮೂಲದವರ ಬೈಕ್ ಎಂದು ಹೇಳಲಾಗಿದೆ. ಘಟನೆಯಲ್ಲಿ ವಾಹನ ಸವಾರರಿಗೆ ಸಣ್ಣ ಪುಟ್ಟ ಗಾಯವಾಗಿದೆ.
ಶೃಂಗೇರಿ ತೀರ್ಥಹಳ್ಳಿ ಮಾರ್ಗದಲ್ಲಿ ಪದೇ ಪದೇ ಅಪಘಾತ ನಡೆಯುತ್ತಿದ್ದು ರಸ್ತೆ ಸೂಚಕಗಳು ಇಲ್ಲದಿರುವುದೇ ಕಾರಣ ಎನ್ನಲಾಗಿದೆ.

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

Categories
ಆರೋಗ್ಯ

ಕೇವಲ 7 ನಿಮಿಷಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ

ಕೇವಲ 7 ನಿಮಿಷಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ
– ಹೊಸ ಬಗೆಯ ಇಂಜೆಕ್ಷನ್ ಆವಿಷ್ಕಾರ !

NAMMUR EXPRESS NEWS
ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಇಂಗ್ಲೆಂಡ್ ಶೀಘ್ರದಲ್ಲೇ ಒಂದು ವಿಶಿಷ್ಟ ವಿಧಾನವನ್ನು ಆರಂಭಿಸಲಿದೆ. ಇದರಲ್ಲಿ ಕ್ಯಾನ್ಸರ್ ರೋಗಿಗೆ 7 ನಿಮಿಷಗಳ ಇಂಜೆಕ್ಷನ್ ನೀಡಲಾಗುತ್ತದೆ. ಬ್ರಿಟನ್‌ನ ಸರ್ಕಾರಿ ಆರೋಗ್ಯ ಸೇವೆ ಈ ರೀತಿಯ ಕ್ಯಾನ್ಸರ್ ಚಿಕಿತ್ಸೆ ನೀಡಲಿರುವ ವಿಶ್ವದ ಮೊದಲ ಸಂಸ್ಥೆ. ಈ ಚುಚ್ಚುಮದ್ದಿನ ಮೂಲಕ ಬಹುಬೇಗ ರೋಗಿಗೆ ಚಿಕಿತ್ಸೆ ನೀಡಬಹುದು. ಪ್ರತಿ ವರ್ಷ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಲಕ್ಷಾಂತರ ಜನರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.

ಮಹಿಳೆಯರಲ್ಲಿ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ವಿಪರೀತವಾಗಿದೆ. ಆದಾಗ್ಯೂ ಮೊದಲ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದರೆ ಅದರ ಚಿಕಿತ್ಸೆ ಸಾಧ್ಯ. ಈ ಚಿಕಿತ್ಸೆಗೆ ಸುದೀರ್ಘ ಸಮಯ ಬೇಕಾಗುತ್ತಿತ್ತು. ಇದೇ ಕಾರಣಕ್ಕೆ ಪರ್ಯಾಯ ವಿಧಾನಗಳನ್ನು ಆವಿಷ್ಕರಿಸಲಾಗುತ್ತಿದೆ. ಈ ಇಂಜೆಕ್ಷನ್ ಅನ್ನು ಬ್ರಿಟಿಷ್ ಮೆಡಿಸಿನ್ಸ್ ಮತ್ತು ಹೆಲ್ತ್ ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ ಅನುಮೋದಿಸಿದೆ.

ಇಮ್ಯುನೊಥೆರಪಿ, ಅಟೆರೋಲಿಜುಮಾನ್ನೊಂದಿಗೆ ಚಿಕಿತ್ಸೆ ಪಡೆದ ಅನೇಕ ರೋಗಿಗಳಿಗೆ ಚರ್ಮದ ಅಡಿಯಲ್ಲಿ ಚುಚ್ಚುಮದ್ದು ನೀಡಲಾಗುತ್ತದೆ. ಅಟೆರೋಲಿಜುಮಾಬ್ ಅನ್ನು ಟೆಸೆಂಟ್ರಿಕ್ ಎಂದೂ ಕರೆಯುತ್ತಾರೆ. ಟೆಸೆಂಟ್ರಿಕ್ ಒಂದು ಮೊನೊಕ್ಲೋನಲ್ ಪ್ರತಿಕಾಯವಾಗಿದೆ. ಇದು ಕ್ಯಾನ್ಸರ್ ರೋಗಿಯ ರೋಗನಿರೋಧಕ ಶಕ್ತಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಇದನ್ನು ಡ್ರಿಪ್ ಮೂಲಕ ನೇರವಾಗಿ ರೋಗಿಯ ರಕ್ತನಾಳಕ್ಕೆ ನೀಡಲಾಗುವುದು. ರಕ್ತನಾಳಗಳನ್ನು ಗುರುತಿಸಲು ಸಾಧ್ಯವಾಗದಿದ್ದಾಗ ತೊಂದರೆ ಉಂಟಾಗುತ್ತದೆ. ರೋಗಿಗಳಿಗೆ ಡ್ರಿಪ್ ಹಾಕಲು 30 ನಿಮಿಷಗಳು ಅಥವಾ ಒಂದು ಗಂಟೆ ತೆಗೆದುಕೊಳ್ಳಬಹುದು. ಆದರೆ ಹೊಸ ಇಂಜೆಕ್ಷನ್ ಮೂಲಕ ಔಷಧವನ್ನು ನೇರವಾಗಿ ರೋಗಿಯ ರಕ್ತನಾಳಕ್ಕೆ ಕಳುಹಿಸಲು 7 ನಿಮಿಷಗಳು ಸಾಕಾಗುತ್ತವೆ.

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

Categories
ಮಲ್ನಾಡ್

ಮಳೆಗಾಗಿ ಆಕಾಶದತ್ತ ಮುಖ ಮಾಡುತ್ತಿರುವ ರೈತರು

ಮಳೆಗಾಗಿ ಆಕಾಶದತ್ತ ಮುಖ ಮಾಡುತ್ತಿರುವ ರೈತರು
– ಬಿಸಿಲಿನ ತಾಪಕ್ಕೆ ಒಣಗಿನಿಂತ ಭತ್ತದ ಗದ್ದೆ
– ನಷ್ಟದ ಸ್ಥಿತಿ: ಸಂಕಷ್ಟದಲ್ಲಿ ಮಲೆನಾಡಿನ ರೈತಾಪಿ ಜನತೆ

NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಮಳೆ ಬರದೆ ರೈತರು ಸಂಕಷ್ಟಕೀಡಾಗಿದ್ದಾರೆ. ಬೆಳೆದ ಬೆಳೆಗಳಿಗೆ ನೀರಿಲ್ಲದೆ ಭತ್ತದ ಗದ್ದೆಗಳು, ಕಾಫಿ ತೋಟಗಳು ಒಣಗುತ್ತಿವೆ. ಬರದ ಛಾಯೆ ಢಾಳಾಗಿಯೇ ಗೋಚರಿಸುತ್ತಿದೆ. ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಶೇ 62ರಷ್ಟು ಮಳೆ ಕೊರತೆಯಾಗಿದ್ದರೆ, ಆಗಸ್ಟ್ ತಿಂಗಳಿನಲ್ಲಿ ಶೇ 88ರಷ್ಟು ಮಳೆಯೇ ಆಗಿಲ್ಲ. ಇದರಿಂದ ಮಲೆನಾಡಿನ ರೈತಾಪಿ ಜನತೆ ಕಂಗಾಲಾಗಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಮನೆಯಿಂದ ಹೊರಬಾರದಷ್ಟು ಮುಂಗಾರು ಮಳೆ ಬರುತ್ತಿತ್ತು ಆದರೆ ಈ ಬಾರಿ ಮಳೆ ಕೊರತೆಯಿದ್ದು ಬೇಸಿಗೆಯನ್ನು ಮೀರಿಸುವಂತಹ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಕೃಷಿಕರು ಇನ್ನಿಲ್ಲದಂತೆ ಹೈರಾಣಾಗುತ್ತಿದ್ದಾರೆ.

ರೈತರು ತಮ್ಮ ಗದ್ದೆಗಳಲ್ಲಿ ಭತ್ತ ಬಿತ್ತನೆ ಮಾಡಿದ್ದು ಮಳೆ ಇಲ್ಲದೇ ಭತ್ತದ ಗಿಡಗಳು ಒಣಗುತ್ತಿದೆ. ಇರುವ ಫಸಲನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬೆಳೆಗಾರರದ್ದು. ಇದರಿಂದ ಬಹುತೇಕ ಮಂದಿ ಸಾಲ ಮಾಡುವ ಸ್ಥಿತಿ ಎದುರಾಗಿದೆ.
‘ಮಳೆಯ ಕಣ್ಣಾಮುಚ್ಚಾಲೆಯಿಂದ ಯೋಜಿತ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲು ಸಾಧ್ಯವಾಗಿಲ್ಲ. ಜುಲೈ ತಿಂಗಳಿನಲ್ಲಿ ಒಂದು ವಾರ ಮಳೆ ಸುರಿದಿದ್ದನ್ನು ಹೊರತುಪಡಿಸಿದಂತೆ ಸರಿಯಾಗಿ ಮಳೆಯಾಗಲಿಲ್ಲ. ಇರುವ ನೀರಿನ ಸೌಲಭ್ಯದೊಂದಿಗೆ ಭತ್ತದ ಕೃಷಿ ಮಾಡಿದವರ ಗದ್ದೆ ಬಿಸಿಲಿನ ತಾಪಕ್ಕೆ ಒಣಗುತ್ತಿದೆ. ಲಾಭದಾಯಕ ದೃಷ್ಟಿಯಿಂದ ಭತ್ತದ ಕೃಷಿಯಿಂದ ಹಿಂದೆ ಸರಿಯುತ್ತಿರುವ ರೈತರಿಗೆ ಇಂತಹ ಪರಿಸ್ಥಿತಿಯಿಂದ ಇನ್ನೂ ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ.

ನಗರಕ್ಕೆ ಮಳೆ ಸಿಂಚನ: ತಾಲೂಕಲ್ಲಿ ಮಳೆ ಇಲ್ಲ!
– ಹೀಗೆ ಆದ್ರೆ ಕಥೆ ಏನು ಮಾರಾಯ್ರೆ?
– ಈ ವಾರ ಮಳೆ ಬರುತ್ತಾ?

ಶಿವಮೊಗ್ಗ: ನಗರದ ವಿವಿಧೆಡೆ ಮಧ್ಯಾಹ್ನದ ವೇಳೆಗೆ ಮಳೆ ಆರಂಭವಾಗಿದೆ. ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ಜನಕ್ಕೆ ಮಳೆ ತುಸು ನಮ್ಮದಿ ನೀಡಿದೆ. ಮಳೆ ಇಲ್ಲದೆ ನೆತ್ತಿ ಸುಡುವ ಬಿಸಿಲಿನಿಂದಾಗಿ ಜನರು ಹೈರಾಣಾಗಿದ್ದರು. ಮಧ್ಯಾಹ್ನದ ವೇಳೆಗೆ ಶಿವಮೊಗ್ಗ ನಗರದ ಹಲವು ಕಡೆ ಮಳೆಯಾಗಿದೆ. ಕೆಲವು ಕಡೆ ಚದುರಿದಂತೆ ಮಳೆಯಾಗಿದೆ. ಆದರೆ ತೀರ್ಥಹಳ್ಳಿ ತಾಲ್ಲೂಕಿನ ಕೆಲವೆಡೆ ಮೋಡ ಕವಿದ ವಾತಾವರಣ ವಿದ್ದರೂ ತಾಲೂಕಿನಾದ್ಯಂತ ಮಳೆಯಾಗಿಲ್ಲ. ಈ ವಾರ ಆದರೂ ಮಳೆ ಬರುತ್ತಾ ಎಂಬ ನಿರೀಕ್ಷೆಯಲ್ಲಿದ್ದಾರೆ ಜನ.

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

Categories
ರಾಷ್ಟ್ರೀಯ ವಾರ್ತೆ

ಏಷ್ಯಾ ಕಪ್‌ನಲ್ಲಿ ಬದ್ಧ ವೈರಿಗಳ ಕಾದಾಟ..!

ಏಷ್ಯಾ ಕಪ್‌ನಲ್ಲಿ ಬದ್ಧ ವೈರಿಗಳ ಕಾದಾಟ..!
– ಮಧ್ಯಾಹ್ನ 3ಗಂಟೆಗೆ ಕ್ಯಾಂಡಿಯಲ್ಲಿ ಸೆಣೆಸಾಡಲಿವೆ ಭಾರತ-ಪಾಕ್

NAMMUR EXPRESS NEWS
ನವದೆಹಲಿ: ಏಷ್ಯಾ ಕಪ್‌ನಲ್ಲಿ ಬದ್ಧ ವೈರಿಗಳ ಕಾದಾಟ ನಡೆಯಲಿದ್ದು, ಕ್ಯಾಂಡಿಯಲ್ಲಿ ಭಾರತ-ಪಾಕ್ ಸೆಣೆಸಾಡಲಿವೆ. ಪಾಕ್ ವೇಗಕ್ಕೆ ಪ್ರತ್ಯುತ್ತರ ಕೊಡಲು ರೋಹಿತ್ ಬ್ಯಾಟರ್ಸ್ ರೆಡಿಯಾಗಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಶ್ರೀಲಂಕಾದ ಕ್ಯಾಂಡಿಯಲ್ಲಿ ಪಂದ್ಯ ನಡೆಯಲಿದ್ದು, ಭಾರತ-ಪಾಕ್ ಈವರೆಗೆ ಒಟ್ಟು 132 ಬಾರಿ ಕಾದಾಡಿದೆ. ಭಾರತ-ಪಾಕಿಸ್ತಾನ ಏಷ್ಯಾ ಕಪ್ ಎ ಗುಂಪಿನಲ್ಲಿದೆ. ಮೂರು ಬಾರಿ ಏಷ್ಯಾ ಕಪ್‌ನಲ್ಲಿ ಸೆಣೆಸುವ ಸಾಧ್ಯತೆಗಳಿವೆ.

ಇಂದು ಲೀಗ್ ಹಂತದ ಪಂದ್ಯದಲ್ಲಿ ಮೊದಲ ಕಾದಾಟವಾಗಿದ್ದು, ಕ್ಯಾಂಡಿ ಮೈದಾನ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಿದೆ. ಗಾಯದ ಸಮಸ್ಯೆಯಿಂದಾಗಿ ಕನ್ನಡಿಗ ಕೆ.ಎಲ್.ರಾಹುಲ್ ಆಡ್ತಿಲ್ಲ, ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್,, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಜಸ್ಪೀತ್ ಬುಮ್ರಾ ಫೈನಲ್ ಇಲವೆನ್‌ನಲ್ಲಿ ಆಡುವ ಸಾಧ್ಯತೆಗಳಿವೆ. ಭಾರತ-ಪಾಕ್ ಏಷ್ಯಾಕಪ್‌ನಲ್ಲಿ 13 ಬಾರಿ ಮುಖಾಮುಖಿಯಾಗಿವೆ. ಟೀಂ ಇಂಡಿಯಾ 7 ಬಾರಿ ಪಾಕಿಸ್ತಾನವನ್ನು ಮಣಿಸಿದೆ.

ಟೀಂ ಇಂಡಿಯಾ ಸಂಭಾವ್ಯ ತಂಡ :
– ರೋಹಿತ್ ಶರ್ಮಾ- ಬ್ಯಾಟ್ಸ್‌ಮನ್
– ಶುಭಮನ್ ಗಿಲ್- ಬ್ಯಾಟ್ಸ್‌ಮನ್
– ವಿರಾಟ್ ಕೊಹ್ಲಿ- ಬ್ಯಾಟ್ಸ್‌ಮನ್
– ಸೂರ್ಯ ಕುಮಾರ್ ಯಾದವ್- ಬ್ಯಾಟ್ಸ್‌ಮನ್
– ಇಶಾನ್ ಕಿಶನ್ – ವಿಕೆಟ್ ಕೀಪರ್
– ಹಾರ್ದಿಕ್ ಪಾಂಡ್ಯ- ಆಲ್‌ರೌಂಡರ್
– ರವೀಂದ್ರ ಜಡೇಜಾ- ಆಲ್ ರೌಂಡರ್
– ಅಕ್ಷರ್ ಪಟೇಲ್- ಆಲ್ ರೌಂಡರ್
– ಕುಲದೀಪ್ ಯಾದವ್- ಸ್ಪಿನ್ ಬೌಲರ್
– ಮೊಹಮ್ಮದ್ ಶಮಿ- ಫಾಸ್ಟ್ ಬೌಲರ್
– ಜಸ್ಟೀತ್ ಬುಮ್ರಾ – ಫಾಸ್ಟ್ ಬೌಲರ್

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಮಲ್ಪೆ: ಮೀನುಗಾರಿಕೆ ಬೋಟ್ ನಲ್ಲಿ ಪ್ರಜ್ನಾಹೀನರಾದ ಕಾರ್ಮಿಕರು
– ಕಾರ್ಕಳ :ಸೆ. 5 ಕಾರ್ಕಳ – ಅಜೆಕಾರು ಭಾಗದ ಕೆಲವು ಕಡೆ ಕರೆಂಟ್ ಇರೋದಿಲ್ಲ
– ಕೊಲ್ಲೂರು : ಕೊಲ್ಲೂರು ದೇವಿಯ ದರ್ಶನಕ್ಕೆ ಭಕ್ತ ನೀರು ಪಾಲು
– ಸುಳ್ಯ : ಹಲ್ಲೆ ಆರೋಪಿಗೆ ನಿರೀಕ್ಷಣಾ ಜಾಮೀನು .
– ಉಡುಪಿ : ಪದ್ಮಶ್ರೀ ಮಂಜಮ್ಮ ಜೋಗತಿಯವರೊಂದಿಗೆ ಸಂವಾದ

ಮಲ್ಪೆ: ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಟ್ರಾಲ್ ಲೈಲ್ಯಾಂಡ್ ಬೋಟ್ ನಲ್ಲಿ ಚಲ್ಟ್ ಮೀನು ಖಾಲಿ ಮಾಡಲು ಬೋಟ್ ನ ಸ್ಟೋರೇಜ್ ಗೆ ಇಳಿದಿದ್ದ ಓರಿಸ್ಸಾ ಮೂಲದ ಇಬ್ಬರು ಕಾರ್ಮಿಕರು ಮೀನಿನ ಗ್ಯಾಸ್ ನಿಂದಾಗಿ ಉಸಿರಾಟದ ತೊಂದರೆಗೊಳಗಾದ ಘಟನೆ ಮಲ್ಪೆಯಲ್ಲಿ ನಡೆದಿದೆ. ಆಪದ್ಬಾಂಧವ ಈಶ್ವರ್ ಮಲ್ಪೆರವರು ಪ್ರಜ್ನಾಹೀನರಾಗಿ ಬೋಟ್ ನ ಸ್ಟೋರೇಜ್ ನಲ್ಲಿದ್ದ ಇಬ್ಬರನ್ನು ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಆಂಬುಲೆನ್ಸ್ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಕಾರ್ಮಿಕರೂ ಚೇತರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸೆ. 5 : ಕಾರ್ಕಳ – ಅಜೆಕಾರು ಭಾಗದ ಕೆಲವು ಕಡೆ ಕರೆಂಟ್ ಇರೋದಿಲ್ಲ

ಕಾರ್ಕಳ : ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಸೆ. 5 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ನಿಟ್ಟೆ ನಿಟ್ಟೆ ಕಾಲೇಜು, ನಿಟ್ಟೆ ವಾಟರ್ ಸಪ್ಪೆ ಬೊರ್ಗಲ್ ಗುಡ್ಡೆ, ಹಾಮಾಜಿ, ಕುಂಟಾಡಿ, ಕೆರಬೆಟ್ಟು, ನಿಟ್ಟೆ ಪಂಚಾಯತ್, ನಿಟ್ಟೆ ಮಸೀದಿ, ಲೆಮಿನಾ ಇಂಡಸ್ಟ್ರೀಸ್, ದೂಪದಕಟ್ಟೆ, ಕೆಮ್ಮಣ್ಣು ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಬೆಳಣ್, ಬೆಳಣ್ ದೇವಸ್ಥಾನ, ಗೋಳಿಕಟ್ಟೆ, ನಂದಳಿಕೆ, ಜಂತ್ರ, ನೀಚಾಲು, ಕೆದಿಂಜೆ, ಅಂಬರಾಡಿ, ಪಿಲಿಯೂರು, ಕೆರೆಕೋಡಿ, ಒಂಜಾರೆ ಕಟ್ಟೆ, ಬಾರಬೈಲು, ಪುಕ್ಕಲು, ಕೆಂಪುಜೋರ, ಬಜಗೋಳಿ, ಮಿಯ್ಯಾರು, ಕುಂಟಿಬೈಲು, ರೆಂಜಾಳ, ರಾಮೇರಗುತ್ತು ಬೋರ್ಕಟ್ಟೆ, ಕಲತ್ರಪಾದೆ, ಮುಡಾರು, ಮಾಳ, ನಲ್ಲೂರು, ಹುಕಟ್ಟೆ, ಹೊಸ್ಮಾರು, ಈದು, ನೆಲ್ಲಿಕಾರು, ನೂರಾಳ್ ಬೆಟ್ಟು, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಕೊರಜೆ, ಮುಂಡೂರು, ಕಾಂಜರಕಟ್ಟೆ, ಸಚ್ಚರಿಪೇಟೆ,ಮುಲ್ಲಡ್ಕ ಕೋಡಿಮಾರು, ಸಂಕಲಕರಿಯ, ನಾನಿಲ್ತಾರ್, ಜಾರಿಗೆಕಟ್ಟೆ, ಗುಂಡ್ಯಡ್ಕ, ಕಲ್ಲಂಬಾಡಿ, ಪದವು, ಪರಪ್ಪಾಡಿ, ಲೆಮಿನಾ ಕ್ರಾಸ್ ಮತು ಸುತಮುತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿವ್ಯತ್ಯಯವಾಗುತ್ತದೆ.

ಅಜೆಕಾರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ ಸೆ.5 ರಂದು 110/116ಕೆವಿ ಕಾರ್ಕಳ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11ಕೆವಿ ಅಜೆಕಾರು ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಡ್ತಲ, ದೊಂಡೆರಂಗಡಿ, ದರ್ಬುಜೆ, ಎಳ್ಳಾರೆ, ಕಾಡುಹೊಳೆ, ಗುಡ್ಡೆಯಂಗಡಿ, ಅಜೆಕಾರು ಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಕೊಲ್ಲೂರು ದೇವಿಯ ದರ್ಶನಕ್ಕೆ ಭಕ್ತ ನೀರು ಪಾಲು

ಕೊಲ್ಲೂರು: ಕೊಲ್ಲೂರು ದೇವರ ದರ್ಶನಕ್ಕೆ ಬಂದಿದ್ದ ಕೇರಳದ ವ್ಯಕ್ತಿಯೊಬ್ಬರು ಸೌಪಾರ್ಣಿಕ ಸ್ನಾನ ಘಟ್ಟದಲ್ಲಿ ಮುಳುಗಿ ಮೃತಪಟ್ಟ ಘಟನೆ ಆ.30ರಂದು ನಡೆದಿದೆ. ಕೇರಳ ಎರ್ನಾಕುಲಾಂ ಜಿಲ್ಲೆಯ ಅಶೋಕನ್ (55) ಮೃತ ದುದೈರ್ವಿ. ಇವರು ಕೊಲ್ಲೂರಿಗೆ ಬಂದು ದೇವರ ದರ್ಶನ ಮುಗಿಸಿ ಸೌಪಾರ್ಣಿಕ ಸ್ನಾನ ಘಟ್ಟದಲ್ಲಿ ತೀರ್ಥ ಸ್ನಾನ ಮಾಡಲು ನದಿ ಬಳಿ ಹೋಗಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಹಲ್ಲೆ ಆರೋಪಿಗೆ ನಿರೀಕ್ಷಣಾ ಜಾಮೀನು .

ಸುಳ್ಯ: ಅರಂತೋಡು ತೊಡಿಕಾನದ ಅಡ್ಯಡ್ಕ ಎಂಬಲ್ಲಿ ಅನ್ಯ ಕೋಮಿನ ಯುವಕನೊಬ್ಬ ಮೇಲೆ ಹಲ್ಲೆ ಮಾಡಿರುವ ಆರೋಪದಡಿಯಲ್ಲಿ ಕೇಸು ದಾಖಲಾಗಿದ್ದ ಸುಳ್ಯದ ಯುವಕರಿಗೆ ನಿರೀಕ್ಷಣಾ ಜಾಮೀನು ಮಂಜೂರು ಗೊಂಡಿದೆ
ಹಲ್ಲೆ ಪ್ರಕರಣದಲ್ಲಿ ಲತೀಶ್‌ ಗುಂಡ್ಯ ಮತ್ತು ವರ್ಷಿತ್‌ ಕೆ.ಪಿ. ಎಂಬವರ ಮೇಲೆ ಕೇಸು ದಾಖಲಾಗಿತ್ತು. ಪ್ರಕರಣದ ಇಬ್ಬರು ಆರೋಪಿಗಳು ಪುತ್ತೂರಿನ ನ್ಯಾಯಾಲಯದಲ್ಲಿ ಹಾಜರಾಗಿದ್ದು ಜಾಮೀನು ಮಂಜೂರುಗೊಳಿಸಿದೆ.
ಆರೋಪಿಗಳ ಪರವಾಗಿ ನ್ಯಾಯವಾದಿ ಮಾಧವ ಪೂಜಾರಿ ವಾದಿಸಿದ್ದರು.

ಪದ್ಮಶ್ರೀ ಮಂಜಮ್ಮ ಜೋಗತಿಯವರೊಂದಿಗೆ ಸಂವಾದ

ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಜಿಲ್ಲಾ ಗ್ರಂಥಾಲಯ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶ್ರಯದಲ್ಲಿ ಸೋಮವಾರ (ಸೆ 4) ಬೆಳಗ್ಗೆ 11:30 ರಿಂದ 1 ಗಂಟೆಯವರೆಗೆ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರೊಂದಿಗೆ ಉಡುಪಿ ಅಜ್ಜರಕಾಡಿನ ಜಿಲ್ಲಾ ಗ್ರಂಥಾಲಯದ ಎ ಸಿ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂವಾದದಲ್ಲಿ ಮಾಜಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗ, ಕಲಾವಿದ ಹಾಗೂ ಮೂಳೆ ರೋಗ ತಜ್ಞ ಡಾ. ಸುರೇಶ್ ಶೆಣೈ, ಕವಯತ್ರಿ ಜ್ಯೋತಿ ಮಹಾದೇವ್ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಉಪನ್ಯಾಸಕಿ ಡಾ. ಪ್ರಜ್ಞಾ ಮಾರ್ಪಳ್ಳಿ ಇರುತ್ತಾರೆ.

ನಂತರ ಮುಖ್ಯ ಗ್ರಂಥಾಧಿಕಾರಿ ಜಯಶ್ರೀ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ್ ಶೆಣೈ , ಅಧ್ಯಕ್ಷ ಪ್ರೊ. ಶಂಕರ್, ತುಳುಕುಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ , ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ. ಹರೀಶ್ಚಂದ್ರ, ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್ ಪಿ ಉಪಸ್ಥಿತಿಯಲ್ಲಿ ಮಂಜಮ್ಮ ಜೋಗತಿ ಅವರನ್ನು ಗೌರವಿಸಲಾಗುವುದು.

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

Categories
ತೀರ್ಥಹಳ್ಳಿ

ಕುಮಾರಸ್ವಾಮಿ ಆರೋಗ್ಯಕ್ಕಾಗಿ ಪೂಜೆ!

ಕುಮಾರಸ್ವಾಮಿ ಆರೋಗ್ಯಕ್ಕಾಗಿ ಪೂಜೆ!
– ತೀರ್ಥಹಳ್ಳಿಯ ಮಾರಿಕಾಂಬ ದೇಗುಲದಲ್ಲಿ ಜೆಡಿಎಸ್ ಪೂಜೆ
– ಶೀಘ್ರ ಗುಣಮುಖವಾಗುವಂತೆ ದೇವಿಯಲ್ಲಿ ಪ್ರಾರ್ಥನೆ

NAMMUR EXPRESS NEWS
ತೀರ್ಥಹಳ್ಳಿ : ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್‌.ಡಿ ಕುಮಾರಸ್ವಾಮಿ ಇವರ ಆರೋಗ್ಯ ಸುದಾರಿಸಿ ರಾಜ್ಯದ ಜನತೆಯ ಸೇವೆಗೆ ಅಣಿಯಾಗಲೆಂದು ತೀರ್ಥಹಳ್ಳಿ ತಾಲ್ಲೂಕು ಜನತಾದಳದ ವತಿಯಿಂದ ತೀರ್ಥಹಳ್ಳಿಯ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಶೀಘ್ರ ಗುಣಮುಖವಾಗಲೆಂದು ದೇವಿಯಲ್ಲಿ ಪ್ರಾರ್ಥಿಸಲಾಯಿತು. ಈ ಸಂಧರ್ಭದಲ್ಲಿ ತಾಲ್ಲೂಕು ಜನತಾದಳದ ಪ್ರಧಾನ ಕಾರ್ಯದರ್ಶಿ ಕುಡುವತ್ತಿ ಗುರುದತ್ ಮತ್ತು ತಾಲ್ಲೂಕು ಯುವ ಜನತಾದಳದ ಅಧ್ಯಕ್ಷರಾದ ತಲಬಿ ರಾಘವೇಂದ್ರ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಮತ್ತು ಪಕ್ಷದ ಮಹಿಳಾ ಮುಖಂಡರಾದ ಶ್ರೀಮತಿ ಸುವರ್ಣ ಹಾಗೂ ಯುವ ಮುಖಂಡರುಗಳಾದ ಆರಗ ಪ್ರೇಮಚಂದ್ರ ಮತ್ತು ಬಂದ್ಯಾ ಮಹೇಂದ್ರ ಹಾಗೂ ಇನ್ನೂ ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ