Categories
ರಾಜ್ಯ

ಮೈಸೂರಲ್ಲಿ ಕಾಡಾನೆ ದಾಳಿಗೆ ರೈತ ಬಲಿ

ಮೈಸೂರಲ್ಲಿ ಕಾಡಾನೆ ದಾಳಿಗೆ ರೈತ ಬಲಿ
– ಹಾಸನದಲ್ಲಿ ಕಾರ್ಮಿಕರ ಮೇಲೆ ಆನೆ ದಾಳಿ
– ಹಾಸನ ಮೂಲದ ಮಹಿಳಾ ಕ್ರೀಡಾಪಟು ಆತ್ಮಹತ್ಯೆ
– ಪ್ರಸಿದ್ಧ ಐಸ್ ಕ್ರೀಮ್ ಉದ್ಯಮಿ ಸೊಸೆ ಸಾವು
– ರಾಜ್ಯದ ಇತರೆ ಕ್ರೈಂ ಸುದ್ದಿಗಳು

NAMMUR EXPRESS NEWS
ಮೈಸೂರು: ಜಮೀನಿನಲ್ಲಿ ಬೆಳೆ ಕಾವಲಿಗೆ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ರೈತ ಜಮೀನಿನಲ್ಲೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಎಚ್ಡಿ ಕೋಟೆ ತಾಲೂಕಿನ ಮಾಸ್ತಿಗುಡಿಯ ಪುನರ್ವಸತಿ ತಾಣದ ಬಳಿ ನಡೆದಿದೆ. ಆನೆ ದಾಳಿಗೆ ಮೃತಪಟ್ಟ ದುರ್ದೈವಿ ಎಚ್ಡಿ ಕೋಟೆ ತಾಲೂಕಿನ ಮಾಸ್ತಿಗುಡಿ ಗ್ರಾಮದ ರೈತ ವಸಂತ (35) ಎಂದು ಗುರುತಿಸಲಾಗಿದೆ. ಈತ ತನ್ನ ಜಮೀನಿನಲ್ಲಿ ಹಾಕಿದ್ದ ಮುಸುಕಿನ ಜೋಳವನ್ನು ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡಲು ಕಾವಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಗುರುವಾರ ತಡರಾತ್ರಿ ಆಹಾರ ಅರಸಿ ನಾಗರಹೊಳೆ ಕಾಡಿನಿಂದ ಕಾಡಾನೆ ಬಂದಿದೆ. ಈ ಆನೆಯನ್ನು ಹಿಮ್ಮೆಟ್ಟಿಸಲು ಹೋದ ರೈತ ವಸಂತ್ ಮೇಲೆ ಕಾಡಾನೆ ದಾಳಿ ಮಾಡಿದೆ. ಪರಿಣಾಮ ರೈತ ವಸಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ

ಹಾಸನದಲ್ಲಿ ಕಾರ್ಮಿಕರ ಮೇಲೆ ಕಾಡಾನೆ ದಾಳಿ.

ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಅಂಕಿಹಳ್ಳಿಯ ಗಜೇಂದ್ರಪುರದ ಸಮೀಪ ಪಶ್ಚಿಮ ಬಂಗಾಳ ಮೂಲದ ಗಾರೆ ಕೆಲಸದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ದೀಪಕ ರಾಯ್ ಗಾಯಗೊಂಡಿರುವ ಕಾರ್ಮಿಕನಾಗಿದ್ದು ಅವರಿಗೆ ಸಕಲೇಶಪುರ ಕ್ರಾಪರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾರೆ ಕೆಲಸ ಮುಗಿಸಿಕೊಂಡು ದಿನಸಿ ವಸ್ತು ಖರೀದಿಸಲು ಗ್ರಾಮದಲ್ಲಿದ್ದ ಅಂಗಡಿಗೆ ತೆರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ

ಡೈರಿ ರಿಚ್ ಐಸ್ ಕ್ರೀಂ ಉದ್ಯಮಿಯ ಸೊಸೆ ಆತ್ಮಹತ್ಯೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕನಕಮಜಲು ಮೂಲದ ಡೈರಿ ರಿಚ್ ಐಸ್ ಕ್ರೀಂನ ಉದ್ಯಮಿಯ ಸೊಸೆ ಬೆಂಗಳೂರಿನಲ್ಲಿ ಸಾವಿಗೆ ಶರಣಾದ ಘಟನೆ ನಡೆದಿದೆ. ಐಶ್ವರ್ಯ (23) ಎಂಬುವರು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಕನಕಮಜಲು ಗ್ರಾಮದ ಗಿರಿಯಪ್ಪ ಗೌಡ ಅವರ ಪುತ್ರ ರಾಜೇಶ್ ಅವರನ್ನು ಐಶ್ವರ್ಯ ಮದುವೆ ಮಾಡಿಕೊಂಡಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಐಶ್ವರ್ಯ ಮನೆಯಲ್ಲಿ ಯಾರು ಇಲ್ಲದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಶ್ವರ್ಯ ಅವರ ಮೃತದೇಹ ಸುಳ್ಯಕ್ಕೆ ಬರಲಿದ್ದು, ಕನಕಮಜಲಿನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ತಿಳಿದು ಬಂದಿದೆ.

ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ನೇಣಿಗೆ

ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಅರಿಶಿನಕುಂಟೆಯಲ್ಲಿ ವರದಿಯಾಗಿದೆ. ಅರಿಶಿನಕುಂಟೆಯ ಆದರ್ಶನಗರದ ಮನೆಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ(25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀ, ತಂದೆ ಹಾಗೂ ತಮ್ಮ ಮನೆಯಲ್ಲಿರುವಾಗಲೇ ರೂಮ್‌ನಲ್ಲಿ ನೇಣು ಬಿಗಿದುಕೊಂಡಿದ್ದು, ಅನುಮಾನಗೊಂಡ ತಂದೆ ರೂಮ್‌ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ.ತಿಮ್ಮಲಾಪುರದ ಧನಲಕ್ಷ್ಮೀ ಕುಟುಂಬ 5 ವರ್ಷದಿಂದ ನೆಲಮಂಗಲದ ಅರಿಶಿನಕುಂಟೆಯ ಆದರ್ಶನಗರದಲ್ಲಿ ಬಾಡಿಗೆಗೆ ಮಾಡಿಕೊಂಡು ವಾಸವಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ 3 ಬಾರಿ ಕಬ್ಬಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಧನಲಕ್ಷ್ಮಿ ಕಾಡುಗೋಡಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.!

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒಡೆತನದ ತುಮಕೂರಿನ ಸಿದ್ದಾರ್ಥ ಇಂಜಿನಿಯರ್ ಕಾಲೇಜಿನ ಹಾಸ್ಟೆಲ್ ಕೊಠಡಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಶಿವಪುರ ಗ್ರಾಮದ ನಿವಾಸಿ ಬನಸಿರಿ (20) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ತುಮಕೂರಿನ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ತೃತೀಯ ಸೆಮಿಸ್ಟರ್ ಟೆಲಿಕಾಂ ಇಂಜಿನಿಯರಿಂಗ್ ಓದುತ್ತಿದ್ದಳು ಎಂದು ತಿಳಿದುಬಂದಿದೆ. ಬನಸಿರಿ ಕಾಲೇಜಿನ ಆವರಣದಲ್ಲಿರುವ ಹುಡುಗಿಯರ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಳು. ಊಟ ಮುಗಿಸಿಕೊಂಡು ಬಂದ ಬಳಿಕ ಆಕೆ ನೇಣಿಗೆ ಕೊರಳೊಡ್ಡಿದ್ದಾಳೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಡಿವೋರ್ಸ್‌ಗಾಗಿ ಇನ್ಸಾಗ್ರಾಮ್‌ನಲ್ಲಿ ಪತ್ನಿಯ ಫೋಟೊ ಅಪ್ಲೋಡ್ ಖಾಸಗಿ ಮಾಡಿದ ಇನ್ಸ್‌ಪೆಕ್ಟರ್

ಸ್ವಂತ ಪತಿಯೇ ಪತ್ನಿಯ ಹೆಸರಲ್ಲಿ ನಕಲಿ ಇನ್ನಾ ಗ್ರಾಮ್ ಖಾತೆ ತೆಗೆದು ಅದರಲ್ಲಿ ಅವಳ ಖಾಸಗಿ ಫೋಟೊ ಅಪ್ಲೋಡ್ ಮಾಡಿರುವ ಆರೋಪದ ಮೇರೆಗೆ ದೂರು ದಾಖಲಾಗಿದೆ. ಶರವಣ್ ಕುಮಾರ್ ಎಂಬುವವರು ತಮ್ಮ ಪತ್ನಿ ಗರೀಮಾ ಕುಮಾರಿ ಅವರ ಹೆಸರಲ್ಲಿ ನಕಲಿ ಇನ್ಸಾಗ್ರಾಮ್ ಖಾತೆ ತೆಗೆದು ಅದರಲ್ಲಿ ಗರೀಮಾ ಕುಮಾರಿ ಅವರ ಖಾಸಗಿ ಫೋಟೋಗಳನ್ನು ಅಫ್ ಲೋಡ್ ಮಾಡಿದ್ದಾರೆ ಎಂದು ಶರವಣ್ ಕುಮಾರ್ ವಿರುದ್ಧ ಪತ್ನಿ ಗರೀಮಾ ಕುಮಾರಿ ದೂರು ನೀಡಿದ್ದಾರೆ. ದೆಹಲಿಯ ಇಂಟಲಿಜೆನ್ಸ್ ಬ್ಯೂರೊದಲ್ಲಿ ಇನ್ಸ್ಪೆಕ್ಟರ್‌ ಆಗಿ ಶರವಣ್ ಕುಮಾರ್ ಸೇವೆ ಸಲ್ಲಿಸುತ್ತಿದ್ದಾರೆ. ಶರವಣ್ ವಿರುದ್ಧ ಅವರ ಪತ್ನಿ ಗರೀಮಾ ಕುಮಾರಿ ತಮ್ಮ ಹೆಸರಿನಲ್ಲಿ ನಕಲು ಖಾತೆ ತೆರೆದು ವೈಯಕ್ತಿಕ ಫೋಟೊ, ವಿಡಿಯೊಗಳನ್ನು ಪೋಸ್ಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ದೂರು ನೀಡಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.

ಪ್ರಭಾವಿ ನಾಯಕನ ಪುತ್ರನ ಕೊರಳಲ್ಲಿ ಹುಲಿ ಉಗುರು

ಹುಲಿ ಉಗುರು ಧರಿಸಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಸಚಿವೆ ಹೆಬ್ಬಾಳ್ಕರ್ ನಂತರ ಮತ್ತೊಬ್ಬ ಜಿಲ್ಲೆಯ ಪ್ರಭಾವಿ ನಾಯಕ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋ ಈಗ ಬಾರಿ ಸದ್ದು ಮಾಡುತ್ತಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಪುತ್ರ ಸುಮಿತ್ ತನ್ನ ಮದುವೆಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Categories
ಕಾರ್ಕಳ

ಕ್ರಿಯೇಟಿವ್ ಕಾಲೇಜಲ್ಲಿ ಉಪನ್ಯಾಸಕರಿಗೆ ತರಬೇತಿ

ಕ್ರಿಯೇಟಿವ್ ಕಾಲೇಜಲ್ಲಿ ಉಪನ್ಯಾಸಕರಿಗೆ ತರಬೇತಿ
– ಸಂಸ್ಥೆಯಿಂದ ನಾನು, ನನ್ನಿಂದ ಸಂಸ್ಥೆಯಲ್ಲ: ಸತೀಶ್ ಭಟ್
– ಬೋಧಕ, ಬೋಧಕೇತರ ವೃಂದದವರಿಗೆ ತರಬೇತಿ ಕಾರ್ಯಗಾರ

NAMMUR EXPRESS NEWS
ಕಾರ್ಕಳ: ನಾನು ಎಂಬುದು ವಯಕ್ತಿಕ, ಉನ್ನತಿಗೇರುವುದು, ಹೆಸರು ಗಳಿಸುವುದು ಸಂಸ್ಥೆಯಿಂದಲೇ ಹೊರತು ವ್ಯಕ್ತಿಯಿಂದಲ್ಲ. ವಿಭಿನ್ನವಾಗಿ ಯೋಚಿಸುವುದರಿಂದ ಕ್ರಿಯಾತ್ಮಕ ರಚನೆಗಳು ಹೊರಹೊಮ್ಮುತ್ತವೆ. ಪ್ರಯತ್ನಪೂರ್ವಕವಾದ ಕಾರ್ಯ ಖಂಡಿತ ಯಶಸ್ಸನ್ನು ತಂದುಕೊಡುತ್ತದೆ ಎಂದು ರಾಮಕುಂಜೇಶ್ವರ ಪ್ರೌಢಶಾಲೆಯ ಶಿಕ್ಷಕ, ಜೆ.ಸಿ.ಐ ತರಬೇತುದಾರ ಸತೀಶ್ ಭಟ್‌ ಪುತ್ತೂರು ಹೇಳಿದ್ದಾರೆ. ಕಾರ್ಕಳ ಕ್ರಿಯೇಟಿವ್‌ ಕಾಲೇಜಿನಲ್ಲಿ ನಡೆದ ಕ್ರಿಯೇಟಿವ್ ಉನ್ನತಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕಿಗಳಾಗಿ ಆಗಮಿಸಿ ಮಾತನಾಡಿದರು.

ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ಹೊಸತನ್ನು ಹುಡುಕಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳೂ ಸಹ ಅನೇಕ ರೀತಿಯ ಸಾಮರ್ಥ್ಯ ಹೊಂದಿದ್ದಾರೆ, ಭಿನ್ನ ವಿಚಾರಧಾರೆ ಹೊಂದಿದವರಿದ್ದಾರೆ, ಅವರ ಅಭಿರುಚಿಗೆ ತಕ್ಕಂತೆ ಮಾರ್ಗದರ್ಶನ ನೀಡಬೇಕಾದದ್ದು ಉಪನ್ಯಾಸಕರ ಕರ್ತವ್ಯವಾಗಬೇಕು ಎಂದರು.

ಕಾಲ ಕಾಲಕ್ಕೆ ಅಪ್ಡೇಟ್ ಆಗಬೇಕು…

ಪ್ರಾಚಾರ್ಯರಾದ ವಿದ್ವಾನ್ ಗಣಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ,ಕಾರ್ಯಗಾರಗಳು ಪ್ರತಿಯೊಬ್ಬ ಉಪನ್ಯಾಸಕರ ಹಾಗೂ ಉಪನ್ಯಾಸಕೇತರರು ವಿಮರ್ಶೆ ಮತ್ತು ಚಿಂತನೆಗೊಳಪಡಿಸುವಂತೆ ಮಾಡುತ್ತವೆ. ನಮಗೆ ಅತ್ಯುತ್ತಮವಾದ ಅವಕಾಶಗಳಿವೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ನಾವೂ ಬದಲಾಗಿ ಸವಾಲನ್ನು ಸ್ವೀಕರಿಸಿ ಮುನುಗಬೇಕಾಗಿದೆ. ಚಿಂತನೆಗಳೂ ಉನ್ನತವಾಗಿರಲಿ ಎಂದು ಹಾರೈಸಿದರು. ಸಂಸ್ಥಾಪಕರಾದ ಡಾ ಗಣನಾಥ ಶೆಟ್ಟಿ, ಆದರ್ಶ ಎಂ, ಕೆ, ಅಶ್ವತ್ ಎಸ್.ಎಲ್, ವಿಮಲ್ ರಾಜ್, ಗಣಪತಿ ಭಟ್ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರಿಯೇಟಿವ್ ಸಂಸ್ಥೆಯ ಉಡುಪಿ ಶಾಖೆಯ ಪ್ರಾಂಶುಪಾಲರಾದ ಸ್ಯಾನಿ ಲೋಬೋ ಹಾಗೂ ಹೆಚ್‌.ಕೆ ಎಸ್ ಹಾಸನ, ತ್ರಿಶಾ ಪದವಿ ಪೂರ್ವ ಕಾಲೇಜು ಉಡುಪಿ, ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು “ಉನ್ನತಿ, ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Categories
ಮಾಹಿತಿ

ಮೋದಿ ಫ್ರೀ ಡಾಟಾ ಹೆಸರಲ್ಲಿ ಮೋಸ..ಹುಷಾರ್!

ಮೋದಿ ಫ್ರೀ ಡಾಟಾ ಹೆಸರಲ್ಲಿ ಮೋಸ..ಹುಷಾರ್!
– ಎಚ್ಚರ ಎಚ್ಚರ ಫ್ರೀ ಡೇಟಾ ಯೋಜನೆ ಸುಳ್ಳು
– ಹ್ಯಾಕರ್ಸ್ ಪ್ಲಾನ್… ಯಾಮಾರಿದ್ರೆ ನಿಮ್ಮ ದುಡ್ಡು ಹೋಗುತ್ತೆ!

NAMMUR EXPRESS NEWS
ಪ್ರಧಾನಿ ನರೇಂದ್ರ ಮೋದಿಯವರು ಮೂರು ತಿಂಗಳ ಫ್ರೀ ಡೇಟಾ ಯೋಜನೆ ಜಾರಿ ಮಾಡಿದ್ದಾರೆ. ನೀವು ಪಡೆದುಕೊಳ್ಳಿ ಎಂಬ ಸುಳ್ಳು ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಎಲ್ಲಾ ವಾಟ್ಸಪ್ ಗ್ರೂಪ್ ಗಳಲ್ಲಿಯೂ ಅತಿ ವೇಗವಾಗಿ ಸೆಂಡ್ ಆಗ್ತಾ ಇರುವಂತಹ ಸಂದೇಶವಾಗಿದೆ. 3 ತಿಂಗಳ ಫ್ರೀ ಡೇಟಾ ಎಲ್ಲ ಇಂಡಿಯನ್ ಬಳಕೆದಾರರಿಗೆ ನೀಡಿದ್ದಾರೆ 2024 ರ ಚುನಾವಣೆಯಲ್ಲಿ ಗೆಲುವ ನಿಟ್ಟಿನಲ್ಲಿ ಉಚಿತ ಡೇಟಾ ಯೋಜನೆ ಕಲ್ಪಿಸಿದ್ದಾರೆ ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಕೆಳಗಡೆ ಲಿಂಕ್ ಇದೆ ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗುತ್ತದೆ bjp free Recharge yojana ಎಂದು ಬರುತ್ತೆ ಅದರ ಕೆಳಗೆ ಸಾಕಷ್ಟು ಲೈಕ್ ಮತ್ತು ಕಮೆಂಟ್ಸ್ ಗಳು ಇವೆ.

ನಂತರ ಸಿಮ್ ಸೆಲೆಕ್ಟ್ ಮಾಡಿ ಎಂದು ನಂಬರ್ ಕೇಳುತ್ತೆ. ನಂತರ ನಿಮ್ಮ ಮೊಬೈಲ್ ಗೆ ರಿಚಾರ್ಜ್ ಆಗಿದೆ 10 ಜನರಿಗೆ ಕಳುಹಿಸಿ ಗ್ರೂಪ್ ಗಳಿಗೆ ಶೇರ್ ಮಾಡಿ ಎಂದು ತಿಳಿಸುತ್ತದೆ ಕಳುಹಿಸಿದ ಯಾರಿಗೂ ಕೂಡ ಫ್ರೀ ರಿಚಾರ್ಜ್ ಬರುವುದಿಲ್ಲ.ನಮ್ಮ ಹೆಸರು ವಿಳಾಸ ಎಲ್ಲಾ ಹ್ಯಾಕರ್ಸ್ ಕೈ ಸೇರುತ್ತದೆ. ಇದರಿಂದ ಹ್ಯಾಕರ್ಸ್ ನಾನಾ ರೀತಿಯ ವಂಚನೆ ಮಾಡಬಹುದು.
ನಿಮ್ಮ ಸೇಹಿತರಿಗೂ ನಿಮ್ಮ ಆತ್ಮೀಯರಿಗೂ ಎಚ್ಚರಿಕೆಯ ಸಂದೇಶವನ್ನು ನೀಡಿ. ಮೊಬೈಲ್ ಅಲ್ಲಿ ಬರೋದೆಲ್ಲ ನಿಜವಲ್ಲ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ…? – ಕಾಳು ಮೆಣಸು ಕೆಜಿಗೆಷ್ಟು..?

ಅಡಿಕೆ ದರ ಎಷ್ಟಿದೆ…?
– ಕಾಳು ಮೆಣಸು ಕೆಜಿಗೆಷ್ಟು..?

ಬೆಟ್ಟೆ- 48599-53100
ಗೊರಬಲು – 26700-38000
ರಾಶಿ- 39611-47909
ಸರಕು- 52159-80400
ಸಿಪ್ಪೆಗೋಟು 13251-20910
ಚಾಲಿ 34699-38899
ಕೋಕಾ 18989-33989
ಕರೆಗೋಟು – 22000-36669
ಬಿಳಿಗೋಟು – 20899-34199
ಕಾಳು ಮೆಣಸು – ಕೆಜಿ 590

Categories
ಬೆಂಗಳೂರು

ದೇವಸ್ಥಾನಗಳಿಗೂ ತಟ್ಟಿದ ಚಂದ್ರ ಗ್ರಹಣ ಎಫೆಕ್ಟ್

ದೇವಸ್ಥಾನಗಳಿಗೂ ತಟ್ಟಿದ ಚಂದ್ರ ಗ್ರಹಣ ಎಫೆಕ್ಟ್
– ಶನಿವಾರ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ
– ಉಡುಪಿ ಕೃಷ್ಣಮಠ, ಕುಕ್ಕೆ ಪೂಜೆಯಲ್ಲಿ ವ್ಯತ್ಯಾಸ

NAMMUR EXPRESS NEWS
ಬೆಂಗಳೂರು: ಶನಿವಾರ ರಾತ್ರಿ ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಹಾಗಾಗಿ ದೇವಸ್ಥಾನಗಳಿಗೂ ಗ್ರಹಣದ ಎಫೆಕ್ಟ್ ತಟ್ಟಿದ್ದು, ಶನಿವಾರ ಬೆಂಗಳೂರಿನ ದೇವಸ್ಥಾನಗಳ ದರ್ಶನದ ಸಮಯದಲ್ಲಿ ವ್ಯತ್ಯಯವಾಗಿದೆ. ಬೆಂಗಳೂರಲ್ಲಿ ಸಂಜೆ 6ಕ್ಕೆ ಕಾಡು ಮಲ್ಲೇಶ್ವರಂ ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಭಾನುವಾರ ಸಂಜೆ ಕಾಡು ಮಲ್ಲೇಶ್ವರಂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅದೇ ರೀತಿಯಾಗಿ ಶನಿವಾರ ಮಧ್ಯಾಹ್ನ 2ಗಂಟೆಗೆ ಬನಶಂಕರಿ ದೇವರ ದರ್ಶನಕ್ಕೆ ನಿರ್ಬಂಧಿಸಿದ್ದು, ಭಾನುವಾರ ಬೆಳಗ್ಗೆ 5 ಗಂಟೆಗೆ ಮತ್ತು ಸಂಜೆ 4ಗಂಟೆಗೆ ಮತ್ತೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯಿಂದ ಮಾಹಿತಿ ನೀಡಲಾಗಿದೆ. ವರ್ಷದ ಕೊನೆಯ ಚಂದ್ರಗ್ರಹಣ ಅಕ್ಟೋಬರ್ 28-29 ರ ಮಧ್ಯರಾತ್ರಿ ಸಂಭವಿಸಲಿದೆ. ಭಾರತದ ಎಲ್ಲಾ ಸ್ಥಳಗಳಲ್ಲಿ ಗ್ರಹಣ ಗೋಚರಿಸುತ್ತಿದೆ. ಇದು ಭಾಗಶಃ ಚಂದ್ರಗ್ರಹಣವಾಗಿದೆ. ನಾಳೆ ರಾತ್ರಿ 11:30 ರಿಂದ ರಾತ್ರಿ ಮಧ್ಯರಾತ್ರಿ 3.36 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಬರಿಗಣ್ಣಿನಿಂದ ಚಂದ್ರಗ್ರಹಣ ವೀಕ್ಷಣೆ ಮಾಡಬಹುದು. ಅದರಿಂದ ಯಾವುದೇ ಹಾನಿಯಿಲ್ಲ.

ಈ ಹಿನ್ನಲೆ ಗ್ರಹಣ ವೀಕ್ಷಣೆಗೆ ನೆಹರು ತಾರಾಲಯದ ಯೂಟ್ಯೂಬ್‌ನಲ್ಲಿ ಲೈವ್ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಮಧ್ಯರಾತ್ರಿ ಚಂದ್ರ ಗ್ರಹಣ ವೀಕ್ಷಣೆಗೂ ನೆಹರು ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಉಡುಪಿಯ ಕೃಷ್ಣಮಠದಲ್ಲಿ ದೈನಂದಿನ ಪೂಜೆಯಲ್ಲಿ ವ್ಯತ್ಯಾಸ:

ಶನಿವಾರ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಉಡುಪಿಯ ಕೃಷ್ಣಮಠದಲ್ಲಿ ಶ್ರೀ ಕೃಷ್ಣನ ದರ್ಶನಕ್ಕೆ ಸಮಯ ಬದಲಾವಣೆ ಮಾಡಲಾಗಿದೆ. ಅ. 28 (ಶನಿವಾರ) ಸಂಜೆ 4 ಗಂಟೆಯ ನಂತರ ಊಟದ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ರಾತ್ರಿ ಮಠಕ್ಕೆ ಬಂದ ಭಕ್ತರಿಗೆ ನೀಡುತ್ತಿದ್ದ ಅನ್ನ ಪ್ರಸಾದ ರದ್ದಿಗೆ ಸಹ ಆದೇಶ ನೀಡಲಾಗಿದೆ. ಮಠಾಧೀಶರು ಉಪವಾಸ ಕೈಗೊಳ್ಳುವ ಮೂಲಕ ವ್ರತ ಆಚರಿಸಲಿದ್ದಾರೆ. ಮಠದ ಒಳಗಿರುವ ಮುಖ್ಯಪ್ರಾಣ ದೇವರಿಗೆ ರಂಗ ಪೂಜೆ ಇರುವುದಿಲ್ಲ. ಆದರೆ ಭೋಜನಾಲಯದ ಮುಖ್ಯಪ್ರಾಣ ದೇವರಿಗೆ ಶನಿವಾರ ಸಂಜೆ ರಂಗ ಪೂಜೆ ಇರುತ್ತದೆ. ಭಾನುವಾರ ಬೆಳಗ್ಗೆ ಒಂದು ಗಂಟೆ ಮುಂಚಿತವಾಗಿ ಪರ್ಯಾಯ ಕೃಷ್ಣಾಪುರ ಮಠಾಧೀಶರಿಂದ ದೈನಂದಿನ ಮಹಾಪೂಜೆ ಆರಂಭವಾಗುತ್ತದೆ.

ಅದೇ ರೀತಿಯಾಗಿ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದೇವರ ದರ್ಶನ ಸಮಯದಲ್ಲಿ ವ್ಯತ್ಯಾಸ ಮಾಡಲಾಗಿದೆ. ಶನಿವಾರದಂದು ಸುಬ್ರಮಣ್ಯ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ರಾತ್ರಿಯ ಮಹಾಪೂಜೆ ಸಂಜೆ 6.30 ಕ್ಕೇ ಮುಕ್ತಾಯವಾಗಲಿದೆ. ಅಕ್ಟೋಬರ್ 28ರ ಸಂಜೆ ಶನಿವಾರ ಸಂಜೆ 6.30ರ ಬಳಿಕ ದೇವರ ದರ್ಶನ ನಿರ್ಬಂಧಿಸಲಾಗಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಮನೆಗೆ ನುಗ್ಗಿ ಮಹಿಳೆಯ ಸ್ಪರ್ಶಿಸಿ ಅಸಭ್ಯ ವರ್ತನೆ!
– ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲು
– ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಬೆಂಗಳೂರಿನಲ್ಲಿ ಆತ್ಮಹತ್ಯೆ
– ಮಂಗಳೂರು ಯುವಕ ದುಬೈ ಅಲ್ಲಿ ಸಾವು
– ಬ್ಯಾನರ್ ವಿವಾದ : ವ್ಯಕ್ತಿಗೆ ಚೂರಿ ಇರಿತ

NAMMUR EXPRESS NEWS
ಕೊಣಾಜೆ : ಹಂಚು ತೆಗೆದು ಮನೆಯೊಳಗೆ ನುಗ್ಗಿದ ಕಿರಾತಕನೋರ್ವ ಎರಡು ಮಕ್ಕಳ ತಾಯಿಗೆ ಕಿರುಕುಳ ನೀಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳದ ಹೆಬ್ಬೇಲಿ ಎಂಬಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿಯನ್ನು ಇಂದು ಬಂಧಿಸಲಾಗಿದೆ. ಡೆಬ್ಬೇಲಿ ನಿವಾಸಿ ನೌಫಾಲ್ (38) ಬಂಧಿತ ಆರೋಪಿ, ನೆರೆಮನೆಯ ಮಹಿಳೆ ತನ್ನ ಮಕ್ಕಳಿಬ್ಬರ ಜೊತೆಗೆ ಮಲಗಿರುವ ಸಂದರ್ಭ ಹಂಚು ತೆಗೆದು ಒಳನುಗ್ಗಿದ ಆರೋಪಿ ನೌಫಾಲ್ ಮಹಿಳೆ ಮೈ ಸ್ಪರ್ಶಿಸಿದ್ದಾನೆ. ತಕ್ಷಣ ಎಚ್ಚೆತ್ತ ಮಹಿಳೆ ಬೊಬ್ಬೆ ಹಾಕಿದ್ದು ಸ್ಥಳೀಯರು ಸ್ಥಳಕ್ಕಾಗಮಿಸುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು. ಮಹಿಳೆ ಪತಿ ರಾತ್ರಿಪಾಳಯ ಕೆಲಸ ನಡೆಸುವವರಾಗಿದ್ದಾರೆ. ಘಟನೆ ಸಂಬಂಧ ಸ್ಥಳೀಯರು ಆರೋಪಿಗಾಗಿ ಹುಡುಕಾಟ ನಡೆಸುವಾಗ ಮನೆಯೊಳಗೆ ಆರೋಪಿ ನೌಫಾಲನ ಮೊಬೈಲ್ ಪತ್ತೆಯಾಗಿದೆ. ಈ ಕುರಿತು ಕೊಣಾಜೆ ಪೊಲೀ‌ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಂತೆ ಆರೋಪಿಯನ್ನು ಬಂಧಿಸಲಾಗಿದೆ. ಸಂಜೆ ವೇಳೆ ನ್ಯಾಯಾಲಯಕ್ಕೆ ಹಾಜರುವಡಿಸಲಾಗಿದೆ.

ಬಂಧಿತ ಈ ಹಿಂದೆಯೂ ಸ್ಥಳೀಯ ಹಲವು ಮನೆಗಳ ಬಚ್ಚಲು ಮನೆಗೆ ನುಗ್ಗಿ ಪೆಟ್ಟು ತಿಂದಿದ್ದಾನೆ. ಅಲ್ಲದೆ ಮಹಿಳೆಯರಿಗೂ ಕಿರುಕುಳ ನೀಡಿದ್ದರೂ, ಪ್ರಕರಣಕ್ಕೆ ಅಂಚೆ ದೂರು ದಾಖಲಿಸಲು ಹಿಂದೇಟು ಹಾಕಿದ್ದರು. ವಿವಾಹಿತನಾಗಿರುವ ಈತ ಎರಡು ಮಕ್ಕಳ ತಂದೆಯಾಗಿದ್ದಾನೆ, ಸರಿಯಾಗಿ ಕೆಲಸಕ್ಕೂ ಹೋಗದೆ ದಿನವಿಡೀ ತನ್ನ ಚಾಳಿ ನಡೆಸುತ್ತಾ ಬಂದಿದ್ದಾನೆ.

ಮಹಿಳಾ ಕಬಡ್ಡಿ ಕ್ರೀಡಾಪಟು ಬೆಂಗಳೂರಿನಲ್ಲಿ ಆತ್ಮಹತ್ಯೆ

ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಅರಿಶಿನಕುಂಟೆಯಲ್ಲಿ ವರದಿಯಾಗಿದೆ. ಅರಿಶಿನಕುಂಟೆಯ ಆದರ್ಶನಗರದ ಮನೆಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ(25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀ, ತಂದೆ ಹಾಗೂ ತಮ್ಮ ಮನೆಯಲ್ಲಿರುವಾಗಲೇ ರೂಮ್‌ನಲ್ಲಿ ನೇಣು ಬಿಗಿದುಕೊಂಡಿದ್ದು, ಅನುಮಾನಗೊಂಡ ತಂದೆ ರೂಮ್‌ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ.ತಿಮ್ಮಲಾಪುರದ ಧನಲಕ್ಷ್ಮೀ ಕುಟುಂಬ 5 ವರ್ಷದಿಂದ ನೆಲಮಂಗಲದ ಅರಿಶಿನಕುಂಟೆಯ ಆದರ್ಶನಗರದಲ್ಲಿ ಬಾಡಿಗೆಗೆ ಮಾಡಿಕೊಂಡು ವಾಸವಿದ್ದರು.

ಮಂಗಳೂರು ಯುವಕ ದುಬೈ ಅಲ್ಲಿ ಸಾವು

ಮಂಗಳೂರು. ಮೃತರನ್ನು ಕೂಳೂರು ಪಂಜಿಮೊಗರು ವಿದ್ಯಾನಗರ ನಿವಾಸಿ ಮುಹಮ್ಮದ್ ಎಂಬವರು ಪುತ್ರ ಅಖರ್ (27) ಎಂದು ಗುರುತಿಸಲಾಗಿದೆ. ಅಖರ್ ಕಳೆದ ಭಾನುವಾರ ಕರ್ತವ್ಯ ಮುಗಿಸಿ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಲ್ಲೆ ಮೃತಪಟ್ಟಿದ್ದಾರೆ. ಅವರ ಮೃತದೇಹ ಊರಿಗೆ ತರಲು ಸಿದ್ಧತೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಬ್ಯಾನರ್ ವಿವಾದ : ವ್ಯಕ್ತಿಗೆ ಚೂರಿ ಇರಿತ

ಬಂಟ್ವಾಳ: ಮೆಲ್ಕಾರಿನಲ್ಲಿ ಕೆಲದಿನಗಳ ಹಿಂದೆ ನಡೆದ ಬ್ಯಾನರ್ ಪ್ರಾರಂಭವಾಗಿರುವ ಬ್ಯಾನರ್ ವಿವಾದ ಒಳಗಿಂದೊಳಗೆ ಹೊಗೆಯಾಡುತ್ತಿದ್ದು, ಗುರುವಾರ ರಾತ್ರಿ ವ್ಯಕ್ತಿಯೊಬ್ಬರಿಗೆ ಇರಿಯಲಾಗಿದೆ. ತಂಡವೊಂದು ಮೆಲ್ಕಾರ್ ಪೇಟೆಯಲ್ಲಿ ಚೂರಿಯಿಂದ ಇರಿದಿದೆ. ಚೂರಿ ಇರಿತಕ್ಕೊಳಗಾದ ವ್ಯಕ್ತಿಯನ್ನು ದೇವದಾಸ್ ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ರೈಲ್ವೇಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ!

ಕಾಸರಗೋಡು: ಮಿಲಿಟರಿ ಅಧಿಕಾರಿಯೆಂದು ತಿಳಿಸಿ ರೈಲ್ವೇಯಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ 7 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೆಮ್ಯಾಡ್ ನಿವಾಸಿಯಾಗಿರುವ ಈತನನ್ನು ಬಂಧಿಸಲು ಮೇಲ್ಪರಂಬ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ.
ಹಣ ಪಡೆದುಕೊಂಡ ಬಳಿಕ ಪ್ರವೇಶ ಪರೀಕ್ಷೆಗೆ ಯುವಕನನ್ನು ಚೆನ್ನೈಗೆ ಬರುವಂತೆ ತಿಳಿಸಿದ್ದನು. ಅದರಂತೆ ಅಲ್ಲಿಗೆ ಹೋದರೂ ಅಲ್ಲಿ ಯಾವುದೇ ಪ್ರವೇಶ ಇರಲಿಲ್ಲ.

Categories
ಕೊಪ್ಪ

ಹುಲಿ ಉಗುರು: ಅರಿವು ಮೂಡಿಸದೇ ಅರೆಸ್ಟ್ ತಪ್ಪು!

ಹುಲಿ ಉಗುರು: ಅರಿವು ಮೂಡಿಸದೇ ಅರೆಸ್ಟ್ ತಪ್ಪು!
– ಸುಧೀರ್ ಕುಮಾರ್ ಮುರೊಳ್ಳಿ ಹೇಳಿಕೆ
– ಹಳ್ಳಿ ಮನೆಗಳಲ್ಲಿ ನೂರಾರು ವರ್ಷಗಳ ನೆನಪು ಅಂತ ಇಟ್ಟುಕೊಂಡಿದ್ದಾರೆ!

NAMMUR EXPRESS NEWS
ಕೊಪ್ಪ: ರಾಜ್ಯಾದ್ಯಂತ ಸುದ್ದಿಯಲ್ಲಿರುವ ಹುಲಿ ಉಗುರು ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ವಕ್ತಾರ, ಖ್ಯಾತ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಅವರು ಮಾತನಾಡಿದ್ದು, ಹುಲಿ ಉಗುರು ಇತರೆ ಪ್ರಾಣಿ ಉತ್ಪನ್ನ ಬಳಕೆ, ನಿಷೇಧ, ಶಿಕ್ಷೆ ಬಗ್ಗೆ ಜನರಿಗೆ ಅರಿವು ಮೂಡಿಸದೇ ಅರೆಸ್ಟ್ ತಪ್ಪು ಎಂದು ಹೇಳಿದ್ದಾರೆ. ಸುಧೀರ್ ಕುಮಾರ್ ಮುರೊಳ್ಳಿ ಪತ್ರಿಕಾಗೋಷ್ಠಿ ವೇಳೆ ಮಾತನಾಡಿ, ಹುಲಿ ಉಗುರು, ಚರ್ಮ,ದಂತ,ಜಿಂಕೆಯ ತಲೆ ಹೀಗೆ ಇದಕ್ಕೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅರಣ್ಯ ಕಾಯ್ದೆಯ ಪ್ರಕಾರ ಅಪರಾಧವಾಗಿರುತ್ತದೆ.

ಇದೀಗ ಅರಣ್ಯ ಅಧಿಕಾರಿಗಳು ಹಲವು ಕಡೆ ಸೆಲೆಬ್ರಿಟಿಗಳನ್ನು,ಮಠಾಧೀಶರನ್ನ ಅರ್ಚಕರ ಮನೆಗಳ ಶೋಧ ನಡೆಸಿ ಕೆಲವರನ್ನು ಬಂಧಿಸಿರುವುದು ಬೆಳಕಿಗೆ ಬಂದಿದೆ. ಆದರೆ ಅರಣ್ಯ ಇಲಾಖೆಯವರು ಗಮನಿಸಬೇಕಾದ ವಿಚಾರವೆಂದರೆ ಈ ಹಳ್ಳಿ ಭಾಗದಲ್ಲಿ ಹಲವಾರು ಮನೆಗಳಲ್ಲಿ ನೂರಾರು ವರ್ಷಗಳ ಹಿಂದಿನ ಜಿಂಕೆಯ ತಲೆ, ಕಾಡುಕೋಣದ ತಲೆ ಹೀಗೆ ಹಲವು ವಸ್ತುಗಳನ್ನು ಹವ್ಯಾಸದಿಂದಾಗಿ ಹಾಗೂ ಪೂರ್ವಜರ ಕಾಲದ ವಸ್ತುಗಳು ಎಂದು ನೆನಪಿನಲ್ಲಿಟ್ಟುಕೊಳ್ಳವ ದೃಷ್ಟಿಯಿಂದ ಇಂದು ಕೂಡ ಹಲವು ಮನೆಗಳಲ್ಲಿ ಹಲವು ರೀತಿಯ ಪ್ರಾಣಿಗಳ ವಸ್ತುಗಳು ಇವೆ.

ಅರಣ್ಯಾಧಿಕಾರಿಗಳು ಏಕಾಏಕಿ ಈ ವಸ್ತುಗಳನ್ನು ಸಂಗ್ರಹಿಸಿ ಅವರುಗಳನ್ನು ಬಂಧಿಸುವ ಬದಲು ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅರಣ್ಯ ಕಾಯ್ದೆಯ ಪ್ರಕಾರ ಅಪರಾಧ ಎಂದು ಜನರಿಗೆ ಅರಿವು ಮೂಡಿಸುವ ಕೆಲಸಕ್ಕೆ ಅರಣ್ಯಾಧಿಕಾರಿಗಳು ಮೊದಲು ಮುಂದಾಗಬೇಕು ಎಂದು ಹೇಳಿದ್ದಾರೆ.

Categories
ತೀರ್ಥಹಳ್ಳಿ

ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಶಿಬಿರ

ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಶಿಬಿರ
– ಅ.29ರಂದು ತೀರ್ಥಹಳ್ಳಿಯ ಬ್ಲಡ್ ಬ್ಯಾಂಕಲ್ಲಿ ಶಿಬಿರ
– ಸಮಸ್ತ ಜನತೆಗೆ ರಕ್ತದಾನ ಮಾಡಲು ಕರೆ

NAMMUR EXPRESS NEWS
ತೀರ್ಥಹಳ್ಳಿ: ಕನ್ನಡದ ಖ್ಯಾತ ನಟ, ತಮ್ಮ ಸಮಾಜ ಸೇವೆ ಮೂಲಕ ಎಲ್ಲರಿಗೂ ಮಾದರಿ ಆಗಿದ್ದ ನಟ ಪುನೀತ್ ಅವರು ನಿಧನರಾದ ದಿನ ಅ.29ರಂದು ಅವರ ಸ್ಮರಣಾರ್ಥ, ಅವರ ಸಾಮಾಜಿಕ ಸೇವೆ ಮುಂದುವರಿಸುವ ಸಲುವಾಗಿ ಪುನೀತ್ ಬ್ರಿಗೇಡ್ ತೀರ್ಥಹಳ್ಳಿ, ವಿಶ್ವ ಮಾನವ ಕನ್ನಡ ವೇದಿಕೆ, ಕುಪ್ಪಳಿ ಕಲ್ಲುಕೊಡಿಗೆ ಇವರ ಸಹಯೋಗದಲ್ಲಿ ರೋಟರಿ ಬ್ಲಡ್ ಬ್ಯಾಂಕ್ ತೀರ್ಥಹಳ್ಳಿ ಇವರ ಆಶ್ರಯದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಅ.29, ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ತೀರ್ಥಹಳ್ಳಿ ರೋಟರಿ ಬ್ಲಡ್ ಬ್ಯಾಂಕ್, ವೆಂಕಟೇಶ್ವರ ಚಿತ್ರಮಂದಿರ ಎದುರು, ತೀರ್ಥಹಳ್ಳಿ ಇಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಸರ್ವರೂ ಆಗಮಿಸಿ ರಕ್ತದಾನ ಮಾಡಿ, ಇನ್ನೊಬ್ಬರ ಜೀವ ಉಳಿಸೋಣ. ಪುನೀತ್ ಅವರ ಸೇವೆಯನ್ನು ಅವರ ಸ್ಮರಣಾರ್ಥ ಮುಂದುವರಿಸೋಣ ಎಂದು ಆಯೋಜಕರು ಕರೆ ನೀಡಿದ್ದಾರೆ.

Categories
ಕೊಪ್ಪ ತೀರ್ಥಹಳ್ಳಿ

ಹುಲಿ ಉಗುರು: ಕೊಪ್ಪ, ತೀರ್ಥಹಳ್ಳಿಯಲ್ಲಿ ಕಾರ್ಯಚರಣೆ!

ಹುಲಿ ಉಗುರು: ಕೊಪ್ಪ, ತೀರ್ಥಹಳ್ಳಿಯಲ್ಲಿ ಕಾರ್ಯಚರಣೆ!
– ಕೊಪ್ಪದಲ್ಲಿ ಅರಣ್ಯ ಅಧಿಕಾರಿ ಅರೆಸ್ಟ್!
– ತೀರ್ಥಹಳ್ಳಿಯಲ್ಲೂ ಹುಲಿ ಉಗುರು ಪತ್ತೆ ಕಾರ್ಯ ಶುರು!
– ಹುಲಿ ಉಗುರು ತನಿಖೆ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದೇನು..?

NAMMUR EXPRESS NEWS
ಕೊಪ್ಪ: ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎನ್.ಆರ್.ಪುರದಲ್ಲಿ ಬಂಧನ ಮಾಡಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ. ಡಿ.ಆರ್.ಎಫ್.ಓ ದರ್ಶನ್ ವಿರುದ್ಧ ಹುಲಿ ಉಗುರು ಧರಿಸಿದ್ದ ದೂರು ಬಂದಿದ್ದು, ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಇಲಾಖೆ ಸೂಚಿಸಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪದ ಡಿ.ಎಫ್.ಓ ನಂದೀಶ್ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಇದೀಗ ಎನ್.ಆರ್.ಪುರದಲ್ಲಿ ಬಂಧನ ಮಾಡಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ. ದರ್ಶನ್ ಹುಲಿಯ ಉಗುರಿನ ಡಾಲರ್ ಧರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶೋಕಿ ಮಾಡಿದ್ದ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ದರ್ಶನ್ ಫೋಟೋ ಡಿಲಿಟ್ ಕೂಡ ಮಾಡಿದ್ದ.ಕಾನೂನು ಎಲ್ಲರಿಗೂ ಒಂದೇ ಸಂತೋಷ್, ಮಾರ್ಕಂಡೇಯ ದೇವಸ್ಥಾನದ ಅರ್ಚಕರು ಸೇರಿದಂತೆ ಅಮಾಯಕರ ಮೇಲೆ ಕ್ರಮ ಕೈಗೊಳ್ಳುವ ಅರಣ್ಯ ಇಲಾಖೆಯವರು ಆರ್‌ಎಫ್‌ಒ ದರ್ಶನ್ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು ಎಂದು ದೂರುದಾರ ಸುಪ್ರೀತ್ ತಿಳಿಸಿದ್ದರು.

ಹುಲಿ ಉಗುರು ತನಿಖೆ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದೇನು..?

ತೀರ್ಥಹಳ್ಳಿ: ಮಲೆನಾಡು ಹಾಗೂ ಕರಾವಳಿ ಭಾಗದ ಅನೇಕ ಮನೆಗಳಲ್ಲಿ ಹುಲಿ ಉಗುರು ಸೇರಿದಂತೆ ವನ್ಯಜೀವಿಗಳ ಉತ್ಪನ್ನಗಳನ್ನು ಇಟ್ಟುಕೊಳ್ಳುವುದು ಬಹಳ ವರ್ಷಗಳಿಂದ ನಡೆಯುತ್ತಿದೆ. ಈ ಕಾರಣಕ್ಕಾಗಿ ಅನೇಕ ಜನರ ಬಂಧನವಾಗಿದೆ. ಅನೇಕರು ಇದನ್ನೇ ದಾಳವಾಗಿ ಮಾಡಿಕೊಂಡು ಧರಿಸಿರುವ ಅಂತಹ ಪೆಂಡೆಂಟ್ ಫೋಟೋವನ್ನು ವೈರಲ್ ಮಾಡುತ್ತಿದ್ದಾರೆ. ಹಾಗೆಯೇ ಅವರೆಲ್ಲರ ಮೇಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಹಿಂದೆ ಮುಂದೆ ಏನು ಯೋಚನೆ ಮಾಡದೆ ಅರಣ್ಯ ಅಧಿಕಾರಿಗಳು ಅವರನ್ನು ಬಂಧನ ಮಾಡುತ್ತಿದ್ದಾರೆ. ಮಲೆನಾಡಿನ ಭಾಗದಲ್ಲಿ ನೂರಾರು ವರ್ಷಗಳ ಹಿಂದಿನಿಂದ ಮನೆಯಲ್ಲಿ ಆಲಂಕಾರಿಕ ವಸ್ತುಗಳಾಗಿ ವನ್ಯಜೀವಿಯ ಉತ್ಪನ್ನಗಳನ್ನು ಇಟ್ಟು ಕೊಂಡಿರುತ್ತಾರೆ. ಕಾಡಿನಲ್ಲಿ ಸತ್ತು ಬಿದ್ದಿರುವಂತಹ ಹುಲಿಯ ಉಗುರುಗಳನ್ನು ಎಲ್ಲರೂ ಕೂಡ ಮಾರಾಟ ಮಾಡುತ್ತಿದ್ದರು. ಅದೊಂದು ಧೈರ್ಯದ ಪ್ರತೀಕ ಎಂದು ಹೇಳಿ ಎಲ್ಲರೂ ಕೊರಳಿಗೆ ಹಾಕಿಕೊಳ್ಳುತ್ತಿದ್ದರು. ಅದನ್ನು ಯೋಚನೆ ಮಾಡದೆ ಜನರನ್ನು ಏಕಾಏಕಿ ಬಂಧಿಸಿರುವುದು ಸರಿಯಲ್ಲ.ಈ ಕುರಿತು ಸರ್ಕಾರ ಮಧ್ಯ ಪ್ರವೇಶಿಸುವುದು ಅವಶ್ಯಕ ಎಂದು ಹೇಳಿದರು.

Categories
ಉದ್ಯೋಗ ಸುದ್ದಿ

ಪ್ರತಿ ಗ್ರಾಮ ಪಂಚಾಯತ್ ಅಲ್ಲಿ ಸರ್ಕಾರಿ ಉದ್ಯೋಗ

ಪ್ರತಿ ಗ್ರಾಮ ಪಂಚಾಯತ್ ಅಲ್ಲಿ ಸರ್ಕಾರಿ ಉದ್ಯೋಗ
– ಇಲಾಖೆಯಿಂದ ಹುದ್ದೆ ಭರ್ತಿಗೆ ಸೂಚನೆ
– ಡೇಟಾ ಎಂಟ್ರಿ ಆಪರೇಟರ್ ನೇಮಕ
– ಯಾರೆಲ್ಲ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು?

NAMMUR EXPRESS NEWS
ಬೆಂಗಳೂರು: ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗೂ ಒಂದರಂತೆ 5980 ಡೇಟಾ ಎಂಟ್ರಿ ಆಪರೇಟರ್‌ಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸದ ಒತ್ತಡ ನಿರ್ವಹಣಿ ಹಿನ್ನೆಲೆಯಲ್ಲಿ ಈ ನೇಮಕಕ್ಕೆ ಸರ್ಕಾರ ಮುಂದಾಗಿದೆ. ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ನೇರ ನೇಮಕಾತಿಗೆ, ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲೆಯನ್ನು ಒಂದು ಜೇಷ್ಠತಾ ಘಟಕವೆಂದು ಪರಿಗಣಿಸಿ ಜಿಲ್ಲಾ ಪಂಚಾಯಿತಿಯ ಸಿಇಒ ಅಧ್ಯಕ್ಷತೆಯ ಸಮಿತಿಯಲ್ಲಿ ಆಯ್ಕೆ ಮಾಡಿಕೊಳ್ಳತಕ್ಕದ್ದು ಹಾಗೂ ಸದರಿ ಹುದ್ದೆಗೆ ಆಯ್ಕೆಯಾದ ನೌಕರರಿಗೆ ಕನಿಷ್ಠ 16,738 ರೂ. ವೇತನ ನಿಗದಿಪಡಿಸಲಾಗಿದೆ. ಬಾಪೂಜಿ ಸೇವಾ ಕೇಂದ್ರದಲ್ಲಿ ಸಂಗ್ರಹವಾಗುವ ಮೊತ್ತದಿಂದ ವೇತನ ಪಾವತಿಸಬೇಕು ಎಂದು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರು ಸೂಚಿಸಿದ್ದಾರೆ. ನೇಮಕದಲ್ಲಿ ಮೊದಲ ಆದ್ಯತೆ ನೀಡಿ: ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ
ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಕ್ಲರ್ಕ್‌ ಕಂ ಡೇಟಾ ಎಂಟ್ರಿ ಆಪರೇಟರ್‌ ನೌಕರರ ಸಂಘದ ಅಧ್ಯಕ್ಷ ಭೀಮರೆಡ್ಡಿ ಪಾಟೀಲ್‌ ಆಗ್ರಹಿಸಿದ್ದಾರೆ.