Categories
ಕರಾವಳಿ

ಶಿಕಾರಿ ಮಾಡಿದ್ರೆ ಈಗ ಕೇಸ್!?

ಶಿಕಾರಿ ಮಾಡಿದ್ರೆ ಈಗ ಕೇಸ್!?
– ಹುಲಿ ಉಗುರು ಆಯ್ತು ಈಗ ಜಿಂಕೆ ಕೊಂಬು ಪತ್ತೆ!
– ಓರ್ವ ಆರೋಪಿ ಅರೆಸ್ಟ್: ಉತ್ತರ ಕನ್ನಡದ ಜೋಯಿಡಾದಲ್ಲಿ ಘಟನೆ
– ತುಮಕೂರಲ್ಲಿ ನವಿಲು ಶಿಕಾರಿ ಮಾಡಿದವರು ಅರೆಸ್ಟ್

NAMMUR EXPRESS NEWS
ಕಾರವಾರ: ಹುಲಿ ಉಗುರು ಧರಿಸಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು, ಹುಲಿ ಚರ್ಮ, ಜಿಂಕೆ ಚರ್ಮ, ಕೊಂಬು ಸೇರಿದಂತೆ ವನ್ಯ ಜೀವಿಗೆ ಸಂಬಂಧಿಸಿದ ಯಾವುದೇ ವಸ್ತು ಸಂಗ್ರಹಿಸಿದ್ದ ಹಲವರಿಗೆ ಸಂಕಷ್ಟ ಎದುರಾಗಿದೆ. ಉತ್ತರ ಕನ್ನಡದ ಜೋಯಿಡಾದಲ್ಲಿ ಮನೆಯೊಂದರಲ್ಲಿ ಜಿಂಕೆ ಕೊಂಬು ಇದ್ದ ಕಾರಣಕ್ಕೆ ವ್ಯಕ್ತಿಯೋರ್ವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು, ಜಿಂಕೆ ಕೊಂಬು ವಶಕ್ಕೆ ಪಡೆದಿದ್ದಾರೆ. ಜೋಯಿಡಾದ ಶಿವಾಜಿ ವೃತ್ತದ ಮನೆಯೊಂದರಲ್ಲಿ ಎರಡು ಜಿಂಕೆ ಕೊಂಬುಗಳು ಇದ್ದವು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕಾಶ್ ನಾಯ್ಕ ಎಂಬಾತನನ್ನು ಬಂಧಿಸಿದ್ದಾರೆ ದಾಂಡೇಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಶಿಕಾರಿ ಮಾಡುವವರ ಮೇಲೆ ನಿಗಾ!

ರಾಜ್ಯದಲ್ಲಿ ವನ್ಯ ಜೀವಿ ಉಳಿಸಲು ಮಹತ್ವದ ಹೆಜ್ಜೆ ಇಟ್ಟಿರುವ ಅರಣ್ಯ ಇಲಾಖೆ ವನ್ಯ ಜೀವಿ ಹತ್ಯೆ ನಿರ್ಬಂಧಕ್ಕೆ ಗಟ್ಟಿ ಹೆಜ್ಜೆ ಇಟ್ಟಿದೆ. ಈಗಾಗಲೇ ಹುಲಿ ಉಗುರು, ಜಿಂಕೆ ಕೊಂಬು ಸೇರಿ ಅನೇಕ ಪ್ರಾಣಿ ಸಂಬಂಧಿಸಿದ ಉತ್ಪನ್ನಗಳನ್ನು ಹಾಕುವವರ ಮೇಲೆ ಕ್ರಮಕ್ಕೆ ಮುಂದಾಗಿದೆ. ಈ ನಡುವೆ ಶಿಕಾರಿ ಮಾಡುವವರ ಮೇಲೂ ಕ್ರಮ ಜರುಗಿಸಲು ಮುಂದಾಗಿದೆ. ತುಮಕೂರಲ್ಲಿ ನವಿಲು ಶಿಕಾರಿ ಮಾಡಿದವರನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದೆ.

Categories
ತೀರ್ಥಹಳ್ಳಿ

ಮಕ್ಕಳಿಗೆ ಪುಸ್ತಕ ಹಂಚಿ ಬಂಗಾರಪ್ಪ ಜನ್ಮ ದಿನ!

ಮಕ್ಕಳಿಗೆ ಪುಸ್ತಕ ಹಂಚಿ ಬಂಗಾರಪ್ಪ ಜನ್ಮ ದಿನ!
– ಶ್ರೀ ನಾರಾಯಣಗುರು ವಿಚಾರ ವೇದಿಕೆ ಮತ್ತು ಬಂಗಾರಪ್ಪ ಅಭಿಮಾನಿ ಬಳಗದಿಂದ ಸಾಮಾಜಿಕ ಕೆಲಸ

NAMMUR EXPRESS NEWS
ತೀರ್ಥಹಳ್ಳಿ: ನಾಡು ಕಂಡ ಧೀಮಂತ ನಾಯಕ,ಅಕ್ಷಯ, ಆರಾಧನಾ, ಗ್ರಾಮೀಣಾ ಕೃಪಾಂಕ, ಅಕ್ಷರ ತುಂಗಾದಂತಹ ಕಾರ್ಯಕ್ರಮಗಳ ಮುಖಾಂತರ ಜನರ ಹೃದಯದಲ್ಲಿ ಉಳಿದಿರುವ ಮಾಜಿ ಮುಖ್ಯಮಂತ್ರಿ ದಿ.ಎಸ್ ಬಂಗಾರಪ್ಪನವರ 90ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ನಾರಾಯಣಗುರು ವಿಚಾರ ವೇದಿಕೆ ಮತ್ತು ಬಂಗಾರಪ್ಪ ಅಭಿಮಾನಿ ಬಳಗದಿಂದ ತೀರ್ಥಹಳ್ಳಿ ತಾಲೂಕಿನ ಹೊದಲ ಸುತ್ತ ಮುತ್ತ ಸೇರಿ ಹಲವು ಶಾಲೆಗಳ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎನ್.ಜಿ.ವಿ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ, ಮುಖಂಡರಾದ ಹುಂಚದಕಟ್ಟೆ ಆದರ್ಶ, ಎಸ್ ಎನ್ ಜಿ ವಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊದಲ ಶಿವು,ಪಂಚಾಯ್ತಿ ಸದಸ್ಯರಾದ ಡಿ ಮಂಜುನಾಥ್.ಕುಸುಮ ಕುಮಾರ್, ಸುಜಯ ಕಾಂತರಾಜ್, ಕಾಂತರಾಜ್, ನಾಗರಾಜ್, ರಾಘವೇಂದ್ರ, ಕಾರ್ತಿಕ್,ಗಂಗಾಧರ್,ಪ್ರಜ್ವಲ್ ಮುಂತಾದವರು ಇದ್ದರು.

Categories
ಮಾಹಿತಿ

ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರುವುದು ಕಡ್ಡಾಯ

ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರುವುದು ಕಡ್ಡಾಯ
– ನ.6 ಅರ್ಜಿ ಸಲ್ಲಿಸಲು ಕೊನೆಯ ದಿನ
– ಹಲಬರು ಹೊಸ ಅರ್ಜಿ ಕೊಡುವುದು ಕಡ್ಡಾಯ

NAMMUR EXPRESS NEWS
ನೈರುತ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಲು ಬೇಕಾದ ನಮೂನೆ-18 ತಾಲ್ಲೂಕು ಕಚೇರಿ ಹಾಗೂ ಚುನಾವಣಾ ಆಯೋಗದ website ನಲ್ಲಿ ನಲ್ಲಿ ಲಭ್ಯವಿದೆ.
ತಾಲ್ಲೂಕಿನ ಪದವೀಧರರು ಈ ಕೆಳಕಂಡ ದಾಖಲೆಗಳನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ದಿನಾಂಕ 06-11-23 ರ ಒಳಗಾಗಿ ಸಲ್ಲಿಸಬಹುದಾಗಿದೆ.

ದಾಖಲೆ ಏನೇನು ಬೇಕು?

1) ಪಾಸ್ ಪೋರ್ಟ್ ಸೈಜ್ ಫೋಟೋ 1
2) ಆಧಾರ್ ಕಾರ್ಡ್ ನಕಲು
3) ಮತದಾರರ ಗುರುತಿನ ಚೀಟಿ( Voter ID)
4) ಪದವಿ ಪ್ರಮಾಣ ಪತ್ರ( Convocation certificate/ಘಟಿಕೋತ್ಸವ ಪ್ರಮಾಣ ಪತ್ರ)
ಅಥವಾ ಪದವಿಯ ಪ್ರತಿ ವರ್ಷದ ಅಂಕಪಟ್ಟಿ (Regular degree 3 years, Engineering 4 years)

ಪದವೀಧರ ಕ್ಷೇತ್ರದ ಮತಪಟ್ಟಿಗೆ ಈಗಾಗಲೇ ಸೇರಿದ್ದರೂ ಸಹ ಮತ್ತೊಮ್ಮೆ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ.

Categories
ಹೊಸನಗರ

ಯಡೂರಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

ಯಡೂರಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ
– ಅ.27ರಂದು ಯಡೂರು ಆಸ್ಪತ್ರೆಯಲ್ಲಿ ಶಿಬಿರ
– ಸರ್ವರಿಗೂ ಸ್ವಾಗತ: ನೀವೂ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಿ!

NAMMUR EXPRESS NEWS
ಹೊಸನಗರ: ಅ.27ರಂದು ಯಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಬೆಳಿಗ್ಗೆ 9-30 ರಿಂದ ಮಧ್ಯಾಹ್ನ 1 ರವರೆಗೆ ಲಯನ್ಸ್ ಕ್ಲಬ್, ವಾರಾಹಿ ಮಾಸ್ತಿಕಟ್ಟೆ, ಗ್ರಾಮ ಪಂಚಾಯತ್ ಯಡೂರು, ಸುಳಗೋಡು, ಖೈರಗುಂದ, ಪ್ರಾಥಮಿಕ ಆರೋಗ್ಯ ಕೇಂದ್ರ ಯಡೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿವಾರಣಾ ವಿಭಾಗ ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ, ಕಸ್ತೂರಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳ ಬೇಕಾಗಿ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಲಯನ್ ಹೆಚ್ . ವಾಸಪ್ಪ ಅಧ್ಯಕ್ಷರು,
ಲಯನ್ಸ್ ಕ್ಲಬ್, ವಾರಾಹಿ ಮಾಸ್ತಿಕಟ್ಟೆ
9449948721

Categories
ಬೆಂಗಳೂರು

ದೇವರಿಗೂ ಇನ್ನೂ ಮುಂದೆ ಫ್ರೀ ವಿದ್ಯುತ್..!

ದೇವರಿಗೂ ಇನ್ನೂ ಮುಂದೆ ಫ್ರೀ ವಿದ್ಯುತ್..!
– ರಾಜ್ಯ ಸರ್ಕಾರದ ಹೊಸ ಗ್ಯಾರಂಟಿ
– ಏನಿದು ಯೋಜನೆ… ಯಾವ ಯಾವ ದೇಗುಲಕ್ಕೆ ಉಚಿತ?

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿಯೋಜನೆ ಅನ್ನಭಾಗ್ಯ ಯೋಜನೆಯಂತಹ ಗ್ಯಾರಂಟಿಗಳಿಂದ ಬೊಕ್ಕಸ ಬರಿದಾಗುತ್ತಿದೆ ಎಂಬ ಪ್ರತಿ ಪಕ್ಷಗಳ ಆರೋಪದ ಮಧ್ಯೆಯೇ ಈಗ ಜನರ ಬಳಿಕ ದೇವರಿಗೂ ಉಚಿತ ಸೌಲಭ್ಯ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಯಶಸ್ವಿ ಯೋಜನೆ ಗೃಹಜ್ಯೋತಿಯನ್ನು ರಾಜ್ಯದ ಮುಜರಾಯಿ ದೇವಾಲಯಗಳಿಗೂ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದು, ಮುಜರಾಯಿ ಇಲಾಖೆಯ ಸಿ ದರ್ಜೆಯ ದೇವಾಲಯಗಳನ್ನು ಗೃಹಜ್ಯೋತಿ ಅಡಿಯಲ್ಲಿ ತರಲು ಚಿಂತನೆ ನಡೆಸಿದೆ ಎಂದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರೋ ರಾಮಲಿಂಗಾ ರೆಡ್ಡಿ, ಗೃಹಜ್ಯೋತಿ ಯೋಜನೆಯಡಿಯಲ್ಲಿ ಒಂದೂವರೆ ಕೋಟಿ ಮನೆಗಳಿಗೆ ಉಚಿತ್ ವಿದ್ಯುತ್ ನೀಡ್ತಿದ್ದೇವೆ. ಇದರ ಜೊತೆಗೆ 5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಸಿ ದರ್ಜೆಯ ದೇವಸ್ಥಾನಗಳಿಗೆ ಗೃಹಜ್ಯೋತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.

ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಸ್ವತಃ ಮುಜರಾಯಿ ಸಚಿವರು ಹಾಗೂ ರಾಜ್ಯ ಧಾರ್ಮಿಕ ದತ್ತಿ ಪರಿಷತ್ ಅಧ್ಯಕ್ಷರೂ ಆಗಿರುವ ರಾಮಲಿಂಗಾ ರೆಡ್ಡಿ ಸಿಎಂ ಸಿದ್ಧರಾಮಯ್ಯನವರಿಗೆ ಮನವಿ ಪತ್ರ ರೆಡಿಮಾಡಿ ಕೊಟ್ಟಿದ್ದಾರಂತೆ. ರಾಜ್ಯದಲ್ಲಿ ಗೃಹಬಳಕೆಗೆ 200 ಯೂನಿಟ್ ಉಚಿತವಾಗಿ ನೀಡಲಾಗಿದೆ. ರಾಜ್ಯದ 34 ಸಾವಿರದ 160 ದೇವಸ್ಥಾನಗಳು ಸಿ ಗ್ರೇಡ್ ಹೊಂದಿವೆ. ಇವುಗಳ ಆದಾಯ 5 ಲಕ್ಷಕ್ಕಿಂತ ಕಡಿಮೆ ಇದೆ. ಇಂತಹ ದೇವಸ್ಥಾನಗಳಿಗೆ ಗೃಹಜ್ಯೋತಿ ನೀಡುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಬಹುತೇಕ ಸಿ ದರ್ಜೆಯ ಮುಜರಾಯಿ ಇಲಾಖೆಯ ದೇವಸ್ಥಾನಗಳು ಗ್ರಾಮೀಣ ಭಾಗದಲ್ಲಿವೆ. ಹೀಗಾಗಿ ಅಲ್ಲಿ ಹೆಚ್ಚೇನು ವಿದ್ಯುತ್ ಬಳಕೆಯಾಗುತ್ತಿಲ್ಲ. ಹಾಗಾಗಿ ಗೃಹಜ್ಯೋತಿ ವ್ಯಾಪ್ತಿಗೆ ಈ ದೇವಸ್ಥಾನಗಳನ್ನು ತರಲು ತೀರ್ಮಾನಿಸಿದ್ದೇವೆ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ. ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಗೃಹಜ್ಯೋತಿ ಅನ್ವಯ ರಾಜ್ಯದ ಜನರಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಈಗ ಇದೇ ಯೋಜನೆಗೆ ದೇವಾಲಯಗಳನ್ನು ಸೇರಿಸಲು ಸಚಿವರು ಪ್ರಯತ್ನ ಆರಂಭಿಸಿದ್ದಾರೆ. ಆದರೆ ಸರ್ಕಾರದ ಈ ನಡೆಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ರಾಜ್ಯದ ಜನರಿಗೆ ನೀಡಲು ವಿದ್ಯುತ್ ಕೊರತೆ ಇದೆ. ಹೀಗಿರುವಾಗಲೇ ಸರ್ಕಾರದ ಅಧೀನಕ್ಕೆ ಒಳಪಡುವ ಸಂಘ,ಸಂಸ್ಥೆಗಳಿಗೆ ಉಚಿತವಾಗಿ ವಿದ್ಯುತ್ ವಿತರಿಸುವ

ಅಗತ್ಯವೇನಿದೆ ?

ಸರ್ಕಾರ ಬಡವರಿಗೆ ಉಚಿತ ವಿದ್ಯುತ್ ವಿತರಿಸುವುದಾಗಿ ಹೇಳಿತ್ತು.ಆದರೆ ಈಗ ಸರ್ಕಾರಿ ದೇವಾಲಯಗಳಿಂದಲೂ ವಿದ್ಯುತ್ ಬಿಲ್ ಪಡೆಯದಿರುವ ಕ್ರಮ ಸರಿಯಲ್ಲ ಎಂದಿದೆ. ಸದ್ಯ ರಾಜ್ಯ ವಿದ್ಯುತ್ ಕೊರತೆ ಎದುರಿಸುತ್ತಿದ್ದು, ರೈತರಿಗೆ ಬೆಳೆಗೆ ನೀರು ಹಾಯಿಸುವಷ್ಟು ಅಗತ್ಯ ವಿದ್ಯುತ್ ಗಾಗಿ ರೈತರು ಪರದಾಡುತ್ತಿದ್ದಾರೆ.
ಈಗಾಗಲೇ ರಾಜ್ಯದ ಹಲವೆಡೆ ಉಚಿತ ವಿದ್ಯುತ್ ದುರ್ಬಳಕೆ ಆಗ್ತಿರೋ ಮಾಹಿತಿ ಬರ್ತಿದೆ . ಹೀಗಿರುವಾಗ ವಿದ್ಯುತ್ ಮಿತವ್ಯಯ ಹಾಗೂ ಅಗತ್ಯತೆಯ ಬಗ್ಗೆ ಮಾಹಿತಿ ನೀಡಬೇಕಾದ ಸರ್ಕಾರವೇ ಮತ್ತೆ ಫ್ರೀ ಕರೆಂಟ್ ಮಾಡೋ ಮೂಲಕ ಅನ್ನದಾತರ ಸಂಕಷ್ಟ ಹೆಚ್ಚಿಸಲಿದೆ.

Categories
ತೀರ್ಥಹಳ್ಳಿ

ಬಂಗಾರಪ್ಪನವರ 90ನೇ ವರ್ಷದ ಜನ್ಮ ದಿನಾಚರಣೆ

ಬಂಗಾರಪ್ಪನವರ 90ನೇ ವರ್ಷದ ಜನ್ಮ ದಿನಾಚರಣೆ
– ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಬಂಗಾರಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ದಿವಂಗತ ಮಾಜಿ ಮುಖ್ಯಮಂತ್ರಿ, ಧೀಮಂತ ನಾಯಕ ಬಡವರ ಆಶಾಕಿರಣ, ಹಿಂದುಳಿದ ವರ್ಗಗಳ ನಾಯಕ ಬಂಗಾರಪ್ಪನವರ 90ನೇ ವರ್ಷದ ಜನ್ಮದಿನಾಚರಣೆಯನ್ನು ಮಾಜಿ ಸಚಿವರು, ಕೆಪಿಸಿಸಿ ವಕ್ತಾರರಾದ ಕಿಮ್ಮನೆ ರತ್ನಾಕರ್ ಬಂಗಾರಪ್ಪ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರ್ ಮಂಜುನಾಥ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಮುಂಡಿಗೆ ಮನೆ ಲಕ್ಷ್ಮಣ್, ಪ್ರಚಾರ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ, ಮೇಲಿನಕೊಪ್ಪ ದೇವರಾಜ್, ಅಮರನಾಥ್ ಶೆಟ್ಟಿ, ವಿಲಿಯಂ ಮಾರ್ಟಿಸ್, ಪಡುವಳ್ಳಿ ಹರ್ಷೇಂದ್ರ ಕುಮಾರ್, ಮಂಜುನಾಥ್ ಭಾಗವಹಿಸಿದ್ದರು.

Categories
ರಾಜ್ಯ

ಕರ್ನಾಟಕ ರಾಜಕಾರಣದ ಮಾಸ್ ಹೀರೋ ಬಂಗಾರಪ್ಪ!

ಕರ್ನಾಟಕ ರಾಜಕಾರಣದ ಮಾಸ್ ಹೀರೋ ಬಂಗಾರಪ್ಪ!
– ಜನ್ಮ ದಿನದಂದು ಬಂಗಾರಪ್ಪ ನೆನಪು.. ಅಕ್ಷರ ನಮನ
– ರಾಜ್ಯದ ಹಲವೆಡೆ ಕಾರ್ಯಕ್ರಮ: ನುಡಿ ನಮನ
– ಬಂಗಾರಪ್ಪ ಅವರ ಜೀವನದ ಚಿತ್ರಣ ಇಲ್ಲಿದೆ…!

NAMMUR EXPRESS NEWS
ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ. ಬಡವರ ಬಂಧು, ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನೇತಾರ, ಬಡಬಗ್ಗರ ಪಾಲಿನ ಆಶ್ರಯದಾತ ಹಾಗೂ ಹಲವು ಪಕ್ಷಗಳ ಸೃಷ್ಟಿಕರ್ತಎಸ್. ಬಂಗಾರಪ್ಪ ಅವರ ಜನ್ಮ ದಿನ ಇಂದು.
ಬಂಗಾರಪ್ಪ ಓರ್ವ ಹಿಂದುಳಿದ ವರ್ಗದ ನಾಯಕರಾಗಿ ರಾಜ್ಯ ಕಂಡ ಮಾಸ್ ನಾಯಕರಲ್ಲಿ ಒಬ್ಬರು. ಅವರ ಗರಡಿಯಲ್ಲಿ ಬೆಳೆದ ಹತ್ತಾರು ಮಂದಿ ರಾಜಕೀಯವಾಗಿ ರಾಜ್ಯವನ್ನು ಆಳುತ್ತಿದ್ದಾರೆ. 1933ರ ಅಕ್ಟೋಬರ್,26 ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕುಬಟೂರು ಗ್ರಾಮದಲ್ಲಿ ಜನಿಸಿದರು. ತಂದೆ ಕಲ್ಲಪ್ಪ ಹಾಗೂ ತಾಯಿ ಕಲ್ಲಮ್ಮ, ಬಂಗಾರಪ್ಪನವರು ಬಿ.ಎ, ಎಲ್.ಎಲ್.ಬಿ ಪದವೀಧರರಾಗಿದ್ದು ‘ಸಮಾಜ ವಿಜ್ಞಾನದಲ್ಲಿ ಡಿಪ್ಲೊಮ ಗಳಿಸಿದ್ದಾರೆ. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಶಿಷ್ಯರಾಗಿ 1962ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಸಾಗರ-ಸೊರಬ ಜಂಟಿ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಆಯ್ಕೆಗೊಂಡರು. ವಕೀಲಿವೃತ್ತಿಯನ್ನು ನಡೆಸುತ್ತಿದ್ದರು.

ಹಠದ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಸಾರೇಕೊಪ್ಪ ಬಂಗಾರಪ್ಪ ರಾಜಕಾರಣದಲ್ಲಿ ಹಲವಾರು ಪ್ರಥಮಗಳನ್ನು ದಾಖಲಿಸಿದ್ದಾರೆ. ಅತಿ ಹೆಚ್ಚು ಪಕ್ಷ ಸ್ಥಾಪನೆಯಿಂದ ಹಿಡಿದು ಶಾಸಕರನ್ನು ಸೃಷ್ಟಿಸುವ ಕಾರ್ಖಾನೆ ಎಂಬ ಬಿರುದನ್ನು ಸಹ ಪಡೆದವರು. ವಕೀಲ ವೃತ್ತಿ ಪ್ರವೇಶಿಸಿದ್ದ ವೇಳೆ ಸಮಾಜವಾದಿ ಚಳವಳಿಯಲ್ಲಿ ಗುರುತಿಸಿಕೊಂಡ ಯುವಕ ಬಂಗಾರಪ್ಪ 1967ರಲ್ಲಿ ಮೊದಲ ಬಾರಿಗೆ ಸೊರಬದಲ್ಲಿ ಸೋಷಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿದರು. ಮತ್ತೆ ರಾಜಕೀಯವಾಗಿ ತಿರುಗಿ ನೋಡಲೇ ಇಲ್ಲ. ತಮ್ಮ ರಾಜಕೀಯ ಜೀವನದ ಕೊನೆಯವರೆಗೂ ಜನಪ್ರತಿನಿಧಿಯಾಗಿಯೇ ಇದ್ದರೂ ಅಧಿಕಾರ ಅನುಭವಿಸಿದ್ದು ಮಾತ್ರ ಕಡಿಮೆ. ಸಮಾಜವಾದಿ ಹವಾ ಕಡಿಮೆ ಆಗುತ್ತಿದ್ದಂತೆ ಕಾಂಗ್ರೆಸ್‌ನತ್ತ ಹೊರಳಿದ ಬಂಗಾರಪ್ಪ 1983ರಲ್ಲಿ ಕರ್ನಾಟಕ ಕ್ರಾಂತಿರಂಗದ ನಾಯಕತ್ವ ವಹಿಸಿದರು. ಜನತಾ ಪಕ್ಷದೊಡನೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡು ಜನತಾರಂಗದ ಹೆಸರಿನಲ್ಲಿ ಚುನಾವಣಾ ಪ್ರಚಾರದ ನಾಯಕತ್ವ ವಹಿಸಿದರು.

ಆ ಸಂದರ್ಭ ದಲ್ಲಿ ಸೊರಬದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ ಬಳಿಕ ಫಲಿತಾಂಶದ ಬಳಿಕವಷ್ಟೇ ಕ್ಷೇತ್ರಕ್ಕೆ ಮರಳಿ ಬರುವೆ. ಅಲ್ಲಿಯವರೆಗೆ ರಾಜ್ಯ ಪ್ರವಾಸ ಮಾಡುವೆ. ನನ್ನನ್ನು ಗೆಲ್ಲಿಸಿಕೊಡುವುದು ಸೊರಬದ ಜನತೆ ಕೆಲಸ ಎಂದು ಹೇಳಿ ಹೊರಟವರು ಕೊನೆಗೆ ಚುನಾವಣಾ ದಿನ ಮತ ಹಾಕಲು ಸೊರಬಕ್ಕೆ ಬಂದರು. ಆ ಚುನಾವಣೆ ಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದರು ಎಂಬುದು ಇತಿಹಾಸ.

ಆದರೆ ಗೆಲುವು ಸಾಧಿಸಿ ಅಧಿಕಾರ ಹಿಡಿದ ಜನತಾರಂಗದ ನಾಯಕತ್ವ ಇದ್ದಕ್ಕಿದ್ದಂತೆ ರಾಮ ಕೃಷ್ಣ ಹೆಗಡೆ ಪಾಲಾಗಿ ಅವರು ಮುಖ್ಯಮಂತ್ರಿ ಯಾಗುತ್ತಿದ್ದಂತೆ ಮತ್ತೆ ಸೆಡ್ಡು ಹೊಡೆದ ಬಂಗಾರಪ್ಪ ಜನತಾರಂಗ ತೊರೆದು ಕಾಂಗ್ರೆಸ್‌ಗೆ ಮರಳಿದರು. 1990ರಲ್ಲಿ ಮುಖ್ಯಮಂತ್ರಿಯಾದರು. 92ರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿಯವರು ಬಂಗಾರಪ್ಪ ಅವರನ್ನು ಅಧಿಕಾರ ದಿಂದ ಇಳಿಸಿ ವೀರಪ್ಪ ಮೊಯ್ಲಿಯವರನ್ನು ಮುಖ್ಯಮಂತ್ರಿ ಯಾಗಿ ಮಾಡಿದರು.
ಆಗ ಮತ್ತೆ ಕಾಂಗ್ರೆಸ್ ತೊರೆದು ತಮ್ಮದೇ ಆದ ಕರ್ನಾಟಕ ಕಾಂಗ್ರೆಸ್ ಪಾರ್ಟಿ(ಕೆಸಿಪಿ) ಸ್ಥಾಪಿಸಿದರು. ಚುನಾ ವಣೆಯಲ್ಲಿ ಸ್ಪರ್ಧಿಸಿ ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೂ ಕಾಂಗ್ರೆಸ್ ಪಕ್ಷವನ್ನು ಅಧಿ ಕಾರದಿಂದ ದೂರಕ್ಕೆ ಸರಿಸಿದರು.
ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಬಂಗಾರಪ್ಪ, 1997ರಲ್ಲಿ ಪುನಃ ಕಾಂಗ್ರೆಸ್ ತೊರೆದು ಕರ್ನಾಟಕ ವಿಕಾಸ ಪಾರ್ಟಿ (ಕೆವಿಪಿ) ಎಂಬ ಇನ್ನೊಂದು ಪಕ್ಷ ಸ್ಥಾಪಿಸಿದರು.

ನಂತರ ಅದನ್ನು ಕಾಂಗ್ರೆಸ್ ಜೊತೆ ವಿಲೀನ ಗೊಳಿಸಿದರು. 2004ರಲ್ಲಿ ಕೇಂದ್ರದಲ್ಲಿ ಮಂತ್ರಿಯಾ ಗಬಹುದು ಎಂಬ ಆಕಾಂಕ್ಷೆಯಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಒಂದೇ ವರ್ಷದಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದರು. 2010ರಲ್ಲಿ ಆ ಪಕ್ಷವನ್ನೂ ತೊರೆದು ಜೆಡಿಎಸ್ ಸೇರಿದರು. ಅದೇ ಅವರ ಕೊನೆ ಪಕ್ಷವಾಗಿತ್ತು. ಆದರೆ ಅವರು ಯಾವುದೇ ಪಕ್ಷ ಸೇರಿದರೂ ಸೊರಬದ ಜನ ಅವರನ್ನು ಬೆಂಬಲಿಸುತ್ತಿದ್ದರು.

ಅಲ್ಲದೆ ಯಾವುದೇ ಪಕ್ಷ ಸೇರಿದರೂ ಹಿಂದಿನ ಪಕ್ಷದಿಂದ ಗೆದ್ದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸದಾಗಿ ಸ್ಪರ್ಧೆ ಮಾಡುತ್ತಿದ್ದರು ಎಂಬುದು ವಿಶೇಷ. ಹಿಂದೆ ಮುಂದೆ ನೋಡದೆ ನಿರ್ಧಾರ ಕೈಗೊಳ್ಳುತ್ತಿದ್ದ ಅವರು ಹಠದಿಂದ ತಾವು ಅಂದು ಕೊಂಡಿದ್ದನ್ನು ಸಾಧಿಸುತ್ತಿದ್ದರು. ತಮ್ಮ ಸಿಟ್ಟಿಗೆ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಅವರನ್ನು ಕೂಡ ದೂರ ಸರಿಸಿದರು. ಕೊನೆಯವರೆಗೂ ಪುತ್ರನನ್ನು ಹತ್ತಿರ ಸೇರಿಸಲಿಲ್ಲ. ಇನ್ನೊಬ್ಬ ಪುತ್ರ ಮಧು ಬಂಗಾರಪ್ಪನವರನ್ನು ಶಾಸಕನಾಗಿ ನೋಡಬೇಕೆಂದು ಹಠ ತೊಟ್ಟರು. ಆದರೆ 2004ರಲ್ಲಿ ಸೊರಬದಲ್ಲಿ ಮಧು ಬಂಗಾರಪ್ಪ ಮತ್ತು 2008ರಲ್ಲಿ ತಮ್ಮ ಪುತ್ರರಿಬ್ಬರ ಸೋಲನ್ನು ನೋಡ ಬೇಕಾದ ದುರಂತ ಪರಿಸ್ಥಿತಿ ಅವರದ್ದಾಗಿತ್ತು. 2013ರಲ್ಲಿ ಮಧು ಬಂಗಾರಪ್ಪ ಶಾಸಕರಾಗುವ ವೇಳೆ ಬಂಗಾರಪ್ಪ ಇಹಲೋಕ ತೊರೆದಿದ್ದರು.

ಸೋಲಿಲ್ಲದ ಸರದಾರ ಎಂಬ ಅಭಿದಾನವನ್ನು ಪಡೆದ ಬಂಗಾರಪ್ಪ ಸೊರಬದಲ್ಲಿ ನಿರಂತರವಾಗಿ ಯಾವುದೇ ಪಕ್ಷದಲ್ಲಿ ನಿಂತರೂ ಗೆಲ್ಲುತ್ತಿದ್ದರು ಎಂಬುದು ನಿಜ. ಆದರೆ 1994ರಲ್ಲಿ ಸೊರಬದಲ್ಲಿ ಕೆಸಿಪಿ ಸ್ಥಾಪಿಸಿದ್ದ ವೇಳೆ ಸಾಗರ ದಲ್ಲೂ ಒಂದು ಕೈ ನೋಡಿಯೇ ಬಿಡುವ, ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸುತ್ತೇನೆ ಎಂಬ ಭ್ರಮೆಗೆ ಸಿಕ್ಕು ಸ್ಪರ್ಧಿಸಿದರು. ಆದರೆ ಅಲ್ಲಿ 3ನೇ ಸ್ಥಾನ ಪಡೆಯಬೇಕಾಯಿತು. ಬಳಿಕ ಅವರು ಸೋಲು ಕಂಡಿದ್ದು 2008ರಲ್ಲಿ. ಶಿಕಾರಿಪುರ ಕ್ಷೇತ್ರದಲ್ಲಿ ಸಮಾಜ ವಾದಿ ಪಕ್ಷದಿಂದ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸುದ್ದಿ ಮಾಡಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಪರೋಕ್ಷವಾಗಿ ಸಹಕರಿ ಸಿದ್ದವು. ಆದರೆ ಆಘಾತಕಾರಿ ಸೋಲು ಎದುರಾಗಿತ್ತು.

ಶ್ರೀ ಬಂಗಾರಪ್ಪ ನವರು ಸ್ವಲ್ಪದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು ಬೆಂಗಳೂರು ನಗರದ ಮಲ್ಯ ಆಸ್ಪತ್ರೆ ಗೆ ಡಿಸೆಂಬರ್ 8 ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗಲಿಲ್ಲ. 2011ರ, ರವಿವಾರ, ಡಿಸೆಂಬರ್, 25ರಂದು, ಮಧ್ಯರಾತ್ರಿ 12:45ಕ್ಕೆ ಕೊನೆಯುಸಿರೆಳೆದರು. ಬಂಗಾರಪ್ಪನವರು ಪತ್ನಿ,ಶಕುಂತಲಾ ಬಂಗಾರಪ್ಪ, ಹಾಗೂ ಇಬ್ಬರು ಗಂಡು ಮಕ್ಕಳು, ಕುಮಾರ ಬಂಗಾರಪ್ಪ,, ಮಧು ಬಂಗಾರಪ್ಪ, ಮೂರು ಜನ ಹೆಣ್ಣು ಮಕ್ಕಳು, ಸುಜಾತ, ಗೀತಾ, ಅನಿತ, ಸೇರಿದಂತೆ ಅಪಾರ ಬಂಧುವರ್ಗ ಮತ್ತು ಅಸಂಖ್ಯಾತ ಅಭಿಮಾನಿಗಳನ್ನು ಬಿಟ್ಟು ಅಗಲಿದರು.

ಅಕ್ಷಯ, ಅರಾಧನಾ,ವಸತಿ, ಉದ್ಯೋಗ, ಗ್ರಾಮೀಣ ಕೃಪಾಂಕ ಸೇರಿ ತಾವು ಆಡಳಿತದಲ್ಲಿದ್ದ ಕಡಿಮೆ ಅವಧಿಯಲ್ಲಿ ನೂರಾರು ಯೋಜನೆ ತಂದ ಬಂಗಾರಪ್ಪ ರಾಜ್ಯದಲ್ಲೇ ಅತೀ ಹೆಚ್ಚು ಜನಪ್ರಿಯತೆ ಹೊಂದಿದ್ದ ನಾಯಕ.

ಬಂಗಾರಪ್ಪ ಜನ್ಮ ದಿನದಂದು ಅವರ ಸೇವೆಯನ್ನು ನೆನೆಯೋಣ..

 

Categories
ತೀರ್ಥಹಳ್ಳಿ

ತುಂಗಾ ಸೇತುವೆಯಿಂದ ಜಿಗಿದು ಯುವಕ ಆತ್ಮಹತ್ಯೆ

ತುಂಗಾ ಸೇತುವೆಯಿಂದ ಜಿಗಿದು ಯುವಕ ಆತ್ಮಹತ್ಯೆ
– ತೀರ್ಥಹಳ್ಳಿ ಪಟ್ಟಣದಲ್ಲಿ ಘಟನೆ: ಯುವಕನ ಶವ ಪತ್ತೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ತುಂಗಾ ಸೇತುವೆ ಮೇಲಿನಿಂದ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಬೆಳಗ್ಗೆ ಯುವಕ ಸೇತುವೆ ಮೇಲಿನಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಯುವಕನನ್ನು ತೀರ್ಥಹಳ್ಳಿ ಪಟ್ಟಣದ ದೇವರಾಜ್ ಎಂದು ಗುರುತಿಸಲಾಗಿದ್ದು ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜೊತೆಗೆ ಸ್ಥಳೀಯರು ಆಗಮಿಸಿ ಶವವನ್ನು ಮೇಲೆತ್ತಿದ್ದಾರೆ, ಕಾರಣ ಇನ್ನು ನಿಖರವಾಗಿ ತಿಳಿದು ಬಂದಿಲ್ಲ. ಈತ ಮಾನಸಿಕ ಅಸ್ವಸ್ತನಾಗಿದ್ದ ಎನ್ನಲಾಗಿದೆ.

Categories
ಮಾಹಿತಿ

ನಿಮ್ಮ ಸಿಮ್ ಕಾರ್ಡ್ ಹೊಸ ನಿಯಮ… ಒಮ್ಮೆ ಚೆಕ್ ಮಾಡ್ಕೊಳ್ಳಿ!

ನಿಮ್ಮ ಸಿಮ್ ಕಾರ್ಡ್ ಹೊಸ ನಿಯಮ… ಒಮ್ಮೆ ಚೆಕ್ ಮಾಡ್ಕೊಳ್ಳಿ!
– ಖರೀದಿಗೆ ಹೊಸ ನಿಯಮ: ಹೆಚ್ಚುವರಿ ಸಿಮ್ ಇಟ್ಟುಕೊಳ್ಳುವಂತಿಲ್ಲ!
– 52 ಲಕ್ಷಕ್ಕೂ ಅಧಿಕ ಸಂಪರ್ಕ ಕಡಿತ.. ಏನಿದು..?

NAMMUR EXPRESS NEWS
ನವದೆಹಲಿ: ಹೆಚ್ಚುತ್ತಿರುವ ಹಗರಣಗಳು ಮತ್ತು ವಂಚನೆಗಳನ್ನು ತಡೆಯಲು ಸರ್ಕಾರ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ. ಜನರು ಮೋಸ ಹೋಗುವುದನ್ನು ತಪ್ಪಿಸಲು, ಈಗ ದೂರಸಂಪರ್ಕ ಇಲಾಖೆ ಸಿಮ್ ಖರೀದಿಸುವ ನಿಯಮಗಳನ್ನು ಸಹ ಬದಲಾಯಿಸಿದೆ. ಡಿಸೆಂಬರ್ 1, 2023 ರಿಂದ, ಸಿಮ್ ಖರೀದಿಸಲು ಹೊಸ ನಿಯಮಗಳನ್ನು ದೇಶಾದ್ಯಂತ ಜಾರಿಗೆ ತರಲಾಗುವುದು. ಈ ನಿಯಮಗಳ ಅನುಷ್ಠಾನದ ನಂತರ, ನೀವು ಒಂದು ಐಡಿಯಲ್ಲಿ ಸೀಮಿತ ಸಿಮ್ ಖರೀದಿಸಲು ಸಾಧ್ಯವಾಗುತ್ತದೆ, ಅಂದರೆ, ಹೆಚ್ಚುವರಿ ಸಿಮ್ ಖರೀದಿಸುವುದರ ಮೇಲೆ ಹೊಸ ನಿಯಮ ಇರುತ್ತದೆ.
ಸಿಮ್ ಖರೀದಿಸುವ ಹೊಸ ನಿಯಮವನ್ನು ಈ ಹಿಂದೆ ಅಕ್ಟೋಬರ್ 1, 2023 ರಿಂದ ಜಾರಿಗೆ ತರಬೇಕಾಗಿತ್ತು, ಆದರೆ ಈಗ ದೂರಸಂಪರ್ಕ ಇಲಾಖೆ ಅದನ್ನು ಜಾರಿಗೆ ತರಲು ಟೆಲಿಕಾಂ ಕಂಪನಿಗಳಿಗೆ ಹೆಚ್ಚುವರಿ 2 ತಿಂಗಳ ಕಾಲಾವಕಾಶ ನೀಡಿದೆ. ಡಿಸೆಂಬರ್ 1 ರಿಂದ ಇದನ್ನು ಜಾರಿಗೆ ತರಲು ದೂರಸಂಪರ್ಕ ಇಲಾಖೆ ಟೆಲಿಕಾಂ ಆಪರೇಟರ್ ಗಳಿಗೆ ಸೂಚನೆ ನೀಡಿದೆ.

52 ಲಕ್ಷಕ್ಕೂ ಅಧಿಕ ಸಂಪರ್ಕ ಕಡಿತ: ಸಿಮ್ ಖರೀದಿಸುವ ಹೊಸ ನಿಯಮಗಳು ಜಾರಿಗೆ ಬಂದ ನಂತರ, ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿಮ್ ಖರೀದಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಸೈಬರ್ ವಂಚನೆ ಮತ್ತು ಹಗರಣಗಳನ್ನು ತಡೆಗಟ್ಟಲು ಸರ್ಕಾರ ಸಿಮ್ ಕಾರ್ಡ್ಗಳ ಹೊಸ ನಿಯಮಗಳನ್ನು ಹೊರಡಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಹಿಂದೆ ಹೇಳಿದ್ದರು. ಇದಲ್ಲದೆ, ವಂಚನೆ ಕರೆಗಳನ್ನು ತಡೆಗಟ್ಟಲು ಸುಮಾರು 52 ಲಕ್ಷ ಸಂಪರ್ಕಗಳನ್ನು ನಿರ್ಬಂಧಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ನವೆಂಬರ್ 30ರ ನಂತರ ಟೆಲಿಕಾಂ ಕಂಪನಿಯು ನೋಂದಣಿ ಇಲ್ಲದೆ ಸಿಮ್ ಮಾರಾಟ ಮಾಡಲು ಮಾರಾಟಗಾರರಿಗೆ ಅವಕಾಶ ನೀಡಿದರೆ, ಅವರಿಗೆ 10 ಲಕ್ಷ ರೂ.ಗಳ ದಂಡ ವಿಧಿಸಬಹುದು. ಪ್ರಸ್ತುತ ದೇಶದಲ್ಲಿ ಸುಮಾರು 10 ಲಕ್ಷ ಸಿಮ್ ಕಾರ್ಡ್ ಮಾರಾಟಗಾರರಿದ್ದಾರೆ. ನವೆಂಬರ್ ಅಂತ್ಯದ ವೇಳೆಗೆ ಎಲ್ಲಾ ವಿತರಕರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

Categories
ರಾಜಕೀಯ ಶಿವಮೊಗ್ಗ

ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ: ಕೈಗೆ ಬಲ!

ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ: ಕೈಗೆ ಬಲ!
– ಶಿವಮೊಗ್ಗ ಜಿಲ್ಲೆಯಲ್ಲಿ ಬಿರುಸಿನ ರಾಜಕಾರಣ
– ನೂರಾರು ನಾಯಕರ ಜತೆ ಪಕ್ಷ ಸೇರ್ಪಡೆ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ, ಜನಪ್ರಿಯ ರಾಜಕಾರಣಿಯಾಗಿ, ದಾನಿಯಾಗಿ, ಕ್ರೀಡಾ ಪ್ರೋತ್ಸಾಹಕರಾಗಿದ್ದ ಶಿವಮೊಗ್ಗದ ಶ್ರೀಕಾಂತ್ ಅವರು ತಮ್ಮ ಅಪಾರ ಅಭಿಮಾನಿ ಬಳಗದ ಜೊತೆಯಲ್ಲಿ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷರಾದ ಡಿ‌ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಹಕಾರಿ ನಾಯಕ ಡಾ.ಆರ್.ಎಂ ಮಂಜುನಾಥ ಗೌಡ, ಜಿಲ್ಲಾಧ್ಯಕ್ಷ ಸುಂದರೇಶ್ ಮತ್ತು ಪ್ರಮುಖರು ಉಪಸ್ಥಿತಿ ಇದ್ದರು. ನೂರಾರು ಮಂದಿ ಶ್ರೀಕಾಂತ್ ಜತೆ ಪಕ್ಷ ಸೇರ್ಪಡೆಯಾದರು. ಶ್ರೀಕಾಂತ್ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಸಿಗಲಿದೆ.