Categories
ಮಲ್ನಾಡ್

ಹುಲಿ ಉಗುರು ಚಿನ್ನದ ಸರ ಹಾಕಿದ್ರೆ ಅರೆಸ್ಟ್ ಆಗ್ತೀರಾ!

ಹುಲಿ ಉಗುರು ಚಿನ್ನದ ಸರ ಹಾಕಿದ್ರೆ ಅರೆಸ್ಟ್ ಆಗ್ತೀರಾ!
– ಹುಲಿ ಉಗುರು ಧರಿಸಿದ್ದ ಅರ್ಚಕರಿಬ್ಬರ ಬಂಧನ..!
– ಖಾಂಡ್ಯದಲ್ಲಿ ಪ್ರಕರಣ: ಮೂಡಿಗೆರೆಯಲ್ಲೂ ಇಬ್ಬರು ಅರೆಸ್ಟ್
– ರಾಜ್ಯದಲ್ಲಿ ಎಲ್ಲಾ ಕಡೆ ಈಗ ಹುಲಿ ಉಗುರು ಸದ್ದು!

NAMMUR EXPRESS NEWS
ಬಾಳೆಹೊನ್ನೂರು: ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಆರೋಪದ ಮೇಲೆ ದೇವಸ್ಥಾನದ ಪ್ರಧಾನ ಅರ್ಚಕರಿಬ್ಬರನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯದಲ್ಲಿ ನಡೆದಿದ್ದು ಇದೀಗ ಹುಲಿ ಉಗುರು ಸೇರಿ ಪ್ರಾಣಿ ಉತ್ಪನ್ನ ಹಾಕುವವರಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಬಾಳೆಹೊನ್ನೂರು ಸಮೀಪದ ಖಾಂಡ್ಯಾದ ಪ್ರಸಿದ್ಧ ಮಾರ್ಕಾಂಡೇಶ್ವರ ಸ್ವಾಮಿ ದೇವಾಲಯದ ಅರ್ಚಕರಾದ ಕೃಷ್ಣಾನಂದ ಹೊಳ್ಳ ಹಾಗೂ ನಾಗೇಂದ್ರ ಜೋಯಿಸ್ ಬಂಧಿತರು. ಸದ್ಯ ಇಬ್ಬರನ್ನು ಅರಣ್ಯ ಇಲಾಖೆ ತೀವ್ರ ವಿಚಾರಣೆ ನಡೆಸುತ್ತಿದೆ. ಬಂಧಿತರಿಂದ ಮೂರು ಹುಲಿ ಹುಗುರು ವಶಕ್ಕೆ ಪಡೆಯಲಾಗಿದೆ. ಇಬ್ಬರು ಅರ್ಚಕರ ವಿರುದ್ಧ ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಲಿ ಉಗುರು ಧರಿಸಿದ್ದವನ ಬಸ್ಸಲ್ಲೇ ಹಿಡಿದರು!

ಹುಲಿ ಉಗುರು ಧರಿಸಿದ್ದ ಆರೋಪದಡಿ ಮೂಡಿಗೆರೆ ತಾಲೂಕಿನ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ತಾಲೂಕಿನ ಬಿ.ಹೊಸಳ್ಳಿಯ ಕುಂಡ್ರ ನಿವಾಸಿ ಸತೀಶ್ ಮತ್ತು ಹುಲ್ಲೇ ಮನೆ ಕುಂದೂರು ನಿವಾಸಿ ರಂಜಿತ್ ರನ್ನು ಬಂಧಿಸಲಾಗಿತ್ತು.ಹುಲಿ ಉಗುರು ಧರಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂಡಿಗೆರೆ ಕಡೆಯಿಂದ ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದ ಸತೀಶ್‌ನನ್ನು ಚಿಕ್ಕಮಗಳೂರು ಸಮೀಪದ ಮತ್ತಾವರ ಅರಣ್ಯ ಮಾಹಿತಿ ಕೇಂದ್ರದ ಬಳಿ ತಡೆದು ಬಂಧಿಸಿದ್ದರು.

ಸತೀಶ್ ಕುತ್ತಿಗೆಗೆ ಧರಿಸಿದ್ದ ಬೆಳ್ಳಿ ಸರದಲ್ಲಿ ಹುಲಿ ಉಗುರು ಇರುವುದು ಪತ್ತೆಯಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹುಲಿ ಉಗುರನ್ನು ತನಗೆ ಮೂಡಿಗೆರೆ ತಾಲೂಕಿನ ಹುಲ್ಲೇ ಮನೆ ಕುಂದೂರು ನಿವಾಸಿ ರಂಜಿತ್ ನೀಡಿದ್ದು ಎಂದು ಮಾಹಿತಿ ನೀಡಿದ್ದನು. ನಂತರ ರಂಜಿತ್‌ನನ್ನು ಹುಲ್ಲೇ ಮನೆಯ ನಿವಾಸದಲ್ಲಿ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ರಾಜ್ಯದ ಎಲ್ಲಾ ಕಡೆ ಸಂಚಲನ!

ಬಿಗ್ ಬಾಸ್ ಅಲ್ಲಿದ್ದ ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ರಾಜ್ಯಾದ್ಯಂತ ಅರಣ್ಯ ಇಲಾಖೆ ಹುಲಿ ಉಗುರು ಧರಿಸಿದವರ ಮೇಲೆ ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಈ ನಡುವೆ ನಟರು, ರಾಜಕಾರಣಿಗಳು, ಮಠದ ಸ್ವಾಮೀಜಿಗಳ ಮೇಲೂ ಈಗ ಕಣ್ಣು ಬಿದ್ದಿದೆ.

Categories
ತೀರ್ಥಹಳ್ಳಿ

35 ಕೆಜಿ ಕುರಿ ಬಾಯಲ್ಲೇ ಎಸೆದ ಹುಲಿ ವೇಷಧಾರಿ!

35 ಕೆಜಿ ಕುರಿ ಬಾಯಲ್ಲೇ ಎಸೆದ ಹುಲಿ ವೇಷಧಾರಿ!
– ತೀರ್ಥಹಳ್ಳಿಯಲ್ಲೊಂದು ಅಚ್ಚರಿಯ ಹುಲಿವೇಷ ಇದೀಗ ಸದ್ದು ಮಾಡಿದೆ
– ಸೀಬಿನಕೆರೆ ಸಚಿನ ಎಂಬ ಹುಲಿವೇಷ

NAMMUR EXPRESS NEWS
ಹುಲಿ ವೇಷ ದಸರಾದಲ್ಲಿ ಮಾಮೂಲಿ. ಆದರೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸೀಬಿನಕೆರೆಯಲ್ಲಿ 35 ಕೆಜಿ ಕುರಿಯನ್ನು ಬಾಯಲ್ಲೇ ಎಸೆದ ಹುಲಿ ವೇಷಧಾರಿ ಇದೀಗ ವೈರಲ್ ಆಗುತ್ತಿದೆ. ತೀರ್ಥಹಳ್ಳಿಯಲ್ಲೊಂದು ಅಚ್ಚರಿಯ ಹುಲಿವೇಷ ಇದೀಗ ಸದ್ದು ಮಾಡಿದೆ. ಸೀಬಿನಕೆರೆ ಸಚಿನ ಎಂಬ ಅಚ್ಚರಿ ಹುಲಿ ವೇಷ ಮಾಡಿದ್ದು ರಾಕಿ ಜತೆಯಾಗಿದ್ದಾರೆ. ಸತತವಾಗಿ 3 ವರ್ಷದಿಂದ ಮೊದಲ ವರ್ಷ 30, ಎರಡನೇ ವರ್ಷ 33, ಈ ವರ್ಷ 35 ಕೆಜಿ ಕುರಿಯನ್ನು ಎತ್ತಲಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಹುಲಿವೇಷ ಸ್ಪರ್ಧೆಗೆ ಭಾರೀ ಜನಸ್ತೋಮ!

ತೀರ್ಥಹಳ್ಳಿ ಹುಲಿವೇಷ ಸ್ಪರ್ಧೆಗೆ ಭಾರೀ ಜನಸ್ತೋಮ!
– ಮದನ್ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ಸ್ಪರ್ಧೆ!
– ಹುಲಿ ಕುಣಿತಕ್ಕೆ ಜನರು ಫುಲ್ ಫಿದಾ!

NAMMUR EXPRESS NEWS
ತೀರ್ಥಹಳ್ಳಿ: ಜಾನಪದ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತೀರ್ಥಹಳ್ಳಿ ದಸರಾ ಉತ್ಸವ ಸಮಿತಿ, ಮತ್ತು ಸಮಾಜ ಸೇವಕ, ಯುವ ಉದ್ಯಮಿ ಆರ್. ಮದನ್ ಪ್ರಯೋಜಕತ್ವದಲ್ಲಿ ವಿಜಯದಶಮಿ ದಿನದಂದು ಪಟ್ಟಣದ ಕುಶಾವತಿ ನೆಹರು ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಹುಲಿ ವೇಷ ಸ್ಪರ್ಧೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಸಂಚಾರ ನಡೆಸಿದ್ದ ಕಲಾವಿದರು ಸೇರಿ ಸುಮಾರು 30ಕ್ಕೂ ಹೆಚ್ಚು ಹುಲಿ ವೇಷದಾರಿಗಳು ಭಾಗವಹಿಸಿದ್ದು, ಒಬ್ಬರಿಗಿಂತ ಒಬ್ಬರು ಅತ್ಯುತ್ತಮವಾಗಿ ಹುಲಿ ಕುಣಿತ ಪ್ರದರ್ಶನ ಮಾಡಿದರು. ಹುಲಿವೇಷ ಕುಣಿತ ನೋಡಲು ಸಾವಿರಾರು ಮಂದಿ ಪಾಲ್ಗೊಂಡಿದ್ದು ಕುಣಿತಕ್ಕೆ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ.

ಸ್ಪರ್ಧೆಯಲ್ಲಿ ಉತ್ತಮವಾಗಿ, ಕ್ರಮಬದ್ಧವಾಗಿ ಹುಲಿ ಕುಣಿದ ಕೊನೆಯ ಮೂರು ಜನರನ್ನು ಆಯ್ಕೆ ಮಾಡಲಾಗಿದ್ದು ಮೊದಲ ಬಹುಮಾನ 20 ಸಾವಿರ ನಗದು ಹಾಗು ಆಕರ್ಷಕ ಟ್ರೋಫಿ ಪೂರ್ಣೇಶ್ ಇವರು ಪಡೆದಿದ್ದಾರೆ. ದ್ವಿತೀಯ ಬಹುಮಾನ 12.500 ನಗದು ಹಾಗು ಆಕರ್ಷಕ ಟ್ರೋಫಿಯನ್ನ ಧನಂಜಯ (ಧನು) ಮಿಲ್ಕೆರಿ, ತೃತೀಯ ಬಹುಮಾನ 7.500 ನಗದು ಹಾಗು ಆಕರ್ಷಕ ಟ್ರೋಫಿ ಮನೋಜ್ ಅವರು ಪಡೆದುಕೊಂಡಿದ್ದಾರೆ, ಅಲ್ಲದೆ ಭಾಗವಹಿಸಿದ ಎಲ್ಲಾ ವೇಷದಾರಿಗಳಿಗೆ 5000 ರೂ.ನಗದು ಬಹುಮಾನ, ತಾಸ ವಾದ್ಯ ನುಡಿಸಿದವರಿಗೂ ಪ್ರೋತ್ಸಾಹ ಧನ ನೀಡಲಾಯಿತು. ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಮಾರಿಕಾಂಬ ದೇವಸ್ಥಾನದ ಧರ್ಮಕರ್ತರಾದ ಜಯರಾಮ್ ಶೆಟ್ಟಿ, ಸತ್ಯನಾರಾಯಣ, ಚಿದಾನಂದ ಅವರು ಉತ್ತಮವಾಗಿ ಪ್ರದರ್ಶನ ನೀಡಿ, ಕ್ರಮಬದ್ಧವಾಗಿ ಕುಣಿತ ಮಾಡಿದ ಹುಲಿವೇಷದಾರಿಗಳನ್ನು ಆಯ್ಕೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ,ಆರ್. ಮದನ್,ಹಿರಿಯ ಸಹಕಾರಿ ನಾಗರಾಜ್ ಶೆಟ್ಟಿ, ಲಯನ್ಸ್ ಪಾಂಡುರಂಗಪ್ಪ, ದಸರಾ ಸಮಿತಿಯ ಸಂಚಾಲಕ ಸಂದೇಶ್ ಜವಳಿ, ಆರ್ಥಿಕ ಸಮಿತಿ ಸಂಚಾಲಕ ಸೊಪ್ಪು ಗುಡ್ಡೆ ರಾಘವೇಂದ್ರ ಡಿ ವೈ ಎಸ್. ಪಿ.ಗಜಾನನ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ಅಸಾದಿ,
ಪಟ್ಟಣ ಪಂಚಾಯಿತಿ ಎಲ್ಲ ಸದಸ್ಯರು, ಚಂದವಳ್ಳಿ ಸೋಮಶೇಖರ್,ಅಮರನಾಥ್ ಶೆಟ್ಟಿ, ಕುಕ್ಕೆ ಪ್ರಶಾಂತ್, ಮಧುರಾಜ್ ಹೆಗ್ಡೆ, ಮಹೇಶ್ ಗೌಡ, ಸುರೇಂದ್ರ, ತಾರಾನಾಥ್ ಶೆಟ್ಟಿ, ಪ್ರಶೋದ, ವಿನಯ್ ಕುಮಾರ್, ಸಂತೋಷ ಶೆಟ್ಟಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Categories
ತೀರ್ಥಹಳ್ಳಿ

ವಿಜಯ ದಶಮಿಯಂದು ತೀರ್ಥಹಳ್ಳಿಯಲ್ಲಿ ನೂತನ ಚಿಟ್ಸ್ ಫಂಡ್ಸ್ ಆರಂಭ

ವಿಜಯ ದಶಮಿಯಂದು ತೀರ್ಥಹಳ್ಳಿಯಲ್ಲಿ ನೂತನ ಚಿಟ್ಸ್ ಫಂಡ್ಸ್ ಆರಂಭ
– ಆರಗ, ಕಿಮ್ಮನೆ, ಮಂಜುನಾಥ ಗೌಡ, ಬಸವಾನಿ ವಿಜಯದೇವ್ ಸೇರಿ ಅನೇಕ ಗಣ್ಯರು ಹಾಜರ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಸಪ್ತ ಸಿರಿ ಚಿಟ್ಸ್ ಫಂಡ್ ಪ್ರೈವೇಟ್ ಲಿಮಿಟೆಡ್ ಎಂಬ ನೂತನ ಉದ್ಯಮ ತೀರ್ಥಹಳ್ಳಿಯ ಗಾಂಧಿ ಚೌಕ ಸಮೀಪದ ಅನ್ನಪೂರ್ಣ ಜ್ಯುವೆಲ್ಲರಿ ಕಟ್ಟಡದ ಮೇಲ್ಭಾಗದಲ್ಲಿ ಶುಭಾರಂಭಗೊಂಡಿದೆ. ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕರದ ಡಾ. ಆರ್ ಎನ್ ಮಂಜುನಾಥ ಗೌಡ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಹಿರಿಯ ಸಹಕಾರಿಗಳು ರಾಜ್ಯ ಅಪೇಕ್ಸ್ ಬ್ಯಾಂಕಿನ ನಿರ್ದೇಶಕರಾದ ಬಸವಾನಿ ವಿಜಯದೇವ್, ಸಹಕಾರಿ ಕ್ಷೇತ್ರದ ಪ್ರಮುಖರಾದ ನಾಗರಾಜ್ ಶೆಟ್ಟಿ, ಬಾಳೆಬೈಲು ರಾಘವೇಂದ್ರ, ರಾಘವೇಂದ್ರ ಶೆಟ್ಟಿ ಸೇರಿ ಗಣ್ಯರು ಆಗಮಿಸಿ ಶುಭ ಕೋರಿದ್ದಾರೆ.

ವರ್ತಕ ಸಂಘದ ಅಧ್ಯಕ್ಷರಾದ ಚೈತನ್ಯ ಜವಳಿ, ದಿವ್ಯ ಚೇತನ ಸಹಕಾರಿ ಸಂಸ್ಥೆಯ ಪ್ರಮುಖ ಅಧ್ಯಕ್ಷರಾದ ಜಿನ್ ವಿಕ್ಟರ್ ಡಿಸೋಜ , ಉದ್ಯಮಿಗಳು ಮುಖಂಡರಾದ ಆರ್ ಮದನ್, ಒಕ್ಕಲಿಗ ಸಂಘದ ನಿರ್ದೇಶಕರಾದ ಎಸ್ ಕೆ ಧರ್ಮೇಶ್, ರಾಜ್ಯ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಕಾರ್ಯಧ್ಯಕ್ಷರಾದ ಮುಡುಬ ರಾಘವೇಂದ್ರ, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಟಿ ವಿ ಸತೀಶ್ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಬಲೇಶ್ ಹೆಗಡೆ, ಸೇರಿದಂತೆ ತೀರ್ಥಹಳ್ಳಿಯ ಪ್ರಮುಖರು ಭಾಗಿಯಾದರು.

ಉದ್ಯಮ ಕ್ಷೇತ್ರದಲ್ಲಿ ತೀರ್ಥಹಳ್ಳಿಯಲ್ಲಿ ಚಾಪು ಮೂಡಿಸಿರುವ ಎಮ್ ಚಂದ್ರಶೇಖರ್ ವ್ಯವಸ್ಥಾಪಕ , ಅನ್ನಪೂರ್ಣ ಜ್ಯುವೆಲ್ಲರಿಯ ಹೆಚ್ ಎಂ ದಿನೇಶ್. ಯುವ ಉದ್ಯಮಿ ಅಮರನಾಥ್ ಶೆಟ್ಟಿ , ಪತ್ರಕರ್ತ ರಾಘವೇಂದ್ರ ಮೇಗರವಳ್ಳಿ, ಪ್ರಮುಖರಾದ ಶ್ರೀನಾಥ್ ಮೇಲಿನ ಕೊಪ್ಪ, ತಾರಾನಾಥ್ ಹೆಚ್ ವಿ, ಯುವ ಮುಖಂಡರಾದ ಪ್ರದೀಪ್ ಕೆಳಕೆರೆ ಹಾಜರಿದ್ದರು.

Categories
ತೀರ್ಥಹಳ್ಳಿ

ದಸರಾ ಮೆರವಣಿಗೆಯಲ್ಲಿ ಬೆಟ್ಟಮಕ್ಕಿ ಹುಲಿವೇಷ ಟ್ಯಾಬ್ಲೋ!

ದಸರಾ ಮೆರವಣಿಗೆಯಲ್ಲಿ ಬೆಟ್ಟಮಕ್ಕಿ ಹುಲಿವೇಷ ಟ್ಯಾಬ್ಲೋ!
– ಹುಲಿಗಳು ಮರವನ್ನೇರಿ ಕುಳಿತಿರುವ ದೃಶ್ಯ ವೈರಲ್
– ಬೆಟ್ಟಮಕ್ಕಿಯ ಸಣ್ಣ ಸಣ್ಣ ಹುಲಿ ವೇಷಧಾರಿಗಳ ಜಲಕ್

NAMMUR EXPRESS NEWS
ತೀರ್ಥಹಳ್ಳಿ: ದಸರಾ ಮೆರವಣಿಗೆಯಲ್ಲಿ ಈ ಬಾರಿ ಬೆಟ್ಟಮಕ್ಕಿಯ ಹುಲಿ ವೇಷ ಸ್ಪರ್ಧೆಯ ಟ್ಯಾಬ್ಲೋ ಗಮನ ಸೆಳೆಯಿತು. ಹತ್ತಾರು ಯುವಕರು, ಮಕ್ಕಳು ಹುಲಿವೇಷ ಧರಿಸಿ ಕುಣಿಯುತ್ತಿರುವಂತಹ ದೃಶ್ಯ ಇಡಿ ಪಟ್ಟಣದಲ್ಲಿ ಗಮನಸೆಳೆದು ಜನರ ಮೆಚ್ಚುಗೆಗೆ ಪಾತ್ರವಾಯಿತು. ಇನ್ನು ಪಟ್ಟಣದ ಬೆಟ್ಟಮಕ್ಕಿ ವಾರ್ಡ್ ಸದಸ್ಯರಾದ ರತ್ನಾಕರ್ ಶೆಟ್ಟಿ, ನವೀನ್ ಸೇರಿದಂತೆ ಅನೇಕರು ಜತೆಗಿದ್ದರು. ಬೆಟ್ಟಮಕ್ಕಿಯ ನೂರಕ್ಕೂ ಹೆಚ್ಚು ಯುವಕರು, ಮಕ್ಕಳು ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಪಟ್ಟಣದುದ್ದಕ್ಕೂ ಸಣ್ಣ ಸಣ್ಣ ಹುಲಿ ವೇಷಧಾರಿಗಳು ಬೆಂಕಿಯನ್ನು ಕೊಡುತ್ತಾ ಗಮನ ಸೆಳೆದರು. ಮರವನ್ನು ಏರಿ ಹುಲಿಗಳು ಕುಣಿಯುತ್ತಿರುವಂತಹ ದೃಶ್ಯ ವೈರಲ್ ಆಯ್ತು. ಇನ್ನೂ ಟ್ಯಾಬ್ಲೋ ಬಗ್ಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿದೆ.

ಮರ ಏರಿ ಕುಳಿತ ಹುಲಿಗಳು…!

ತಾಲೂಕು ಕಚೇರಿ ಮುಂದೆ ಹುಲಿಗಳು ಮರ ಏರಿ ಕುಳಿತಿದ್ದು, ನೋಡುಗರ ಗಮನ ಸೆಳೆಯಿತು. ಅಲ್ಲಿಯೇ ಬೆಂಕಿ ಉಗುಳಿದ ಹುಲಿಗಳ ನೋಡಿ ಜನ ಕೇಕೆ ಹಾಕಿದರು.

Categories
ಬೆಂಗಳೂರು

ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲ ಪತ್ತೆ

ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲ ಪತ್ತೆ
– ಗರ್ಭಿಣಿ ಸಮೇತ ಆರೋಪಿಗಳು ಸೆರೆ: ದಂಧೆಗೆ ವೈದ್ಯರೇ ಸಾಥ್
– ರಾಜ್ಯದ ಹಲವೆಡೆ ಈ ಜಾಲ ಸಾಧ್ಯತೆ!

NAMMUR EXPRESS NEWS
ಬೆಂಗಳೂರು: ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ ಬಳಿಕ ಗರ್ಭಪಾತ ಮಾಡಿಸುತ್ತಿದ್ದ ಜಾಲವೊಂದನ್ನು ಬೆಂಗಳೂರಿನ ಪೊಲೀಸರು ಭೇದಿಸಿದ್ದು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಮೈಸೂರಿನ ಬನ್ನೂರು ರಸ್ತೆ ವಸಂತನಗರದ ಶಿವಲಿಂಗೇಗೌಡ, ಮಂಡ್ಯ ಜಿಲ್ಲೆ ಕೂಳೇನಹಳ್ಳಿಯ ನಯನ್‌ಕುಮಾರ್, ಪಾಂಡವಪುರ ತಾಲೂಕಿನ ಸುಂಕದನ್ನೂರು ಗ್ರಾಮದ ನವೀನ್‌ಕುಮಾರ್, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಟಿ.ಎಂ.ವೀರೇಶ್ ಬಂಧಿತರು. ಈ ದಂಧೆಯಲ್ಲಿ ವೈದ್ಯರು ಸಹ ಇದ್ದು 15 ರಿಂದ 20 ಸಾವಿರ ರೂಪಾಯಿ ಪಡೆದುಕೊಂಡು ಈ ದಂಧೆಗೆ ಸಾಥ್ ನೀಡುತ್ತಿದ್ದರು.
ಇತ್ತೀಚೆಗೆ ಹೆಣ್ಣು ಭ್ರೂಣ ಪತ್ತೆ ದಂಧೆ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಎಂ.ಪ್ರಶಾಂತ್ ಅವರು, ಕೂಡಲೇ ಪಿಎಸ್‌ಐ ಮಂಜುನಾಥ್, ಬೈಯಪ್ಪನಹಳ್ಳಿ ಠಾಣೆ ಪಿಎಸ್‌ಐ ಮಂಜುನಾಥ್‌, ಎಎಸ್‌ಐಗಳಾದ ಗೋವಿಂದರಾಜು, ನಾಗಯ್ಯ ಒಳಗೊಂಡ ತಂಡ ರಚಿಸಿಕೊಂಡು ದಂಧೆಕೋರರ ಬೆನ್ನುಹತ್ತಿದ್ದಾಗ ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ.

ಆರೋಪಿಗಳು ಸೆರೆ ಸಿಕ್ಕಿದ್ದೇಗೆ?

ಇತ್ತೀಚೆಗೆ ಹಳೇ ಮದ್ರಾಸ್ ರಸ್ತೆ ಕಡೆಯಿಂದ ಗರ್ಭಿಣಿಯನ್ನು ಪರೀಕ್ಷೆಗೆ ಕರೆದೊಯ್ಯಲು ವೀರೇಶ್ ತಂಡ ಬರುವ ಖಚಿತ ಮಾಹಿತಿ ಪಿಐ ಪ್ರಶಾಂತ್ ತಂಡಕ್ಕೆ ಸಿಕ್ಕಿದೆ. ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ಹಳೇ ಮದ್ರಾಸ್ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಅಲ್ಲಿಗೆ ಬಂದ ದಂಧೆಕೋರರು, ಪೊಲೀಸರನ್ನು ಕಂಡು ಭೀತಿಯಿಂದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು, ಕೂಡಲೇ ಆ ಕಾರನ್ನು ಬೈಕ್‌ಗಳಲ್ಲಿ ಸ್ವಲ್ಪದೂರ ಬೆನ್ನಹತ್ತಿ ಹೋಗಿ ತಡೆದಿದ್ದಾರೆ. ಬಳಿಕ ಕಾರಿನಲ್ಲಿದ್ದ ಶಿವಲಿಂಗೇಗೌಡ, ನಯನ್ ಹಾಗೂ ಗರ್ಭಿಣಿಯನ್ನು ಠಾಣೆ ಕರೆತಂದು ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದೆ. ಬಳಿಕ ಈ ಆರೋಪಿಗಳ ಮಾಹಿತಿ ಆಧರಿಸಿ ಮಂಡ್ಯ- ಪಾಂಡಪುರ ರಸ್ತೆಯಲ್ಲಿದ್ದ ಅಲೆಮನೆ ಮೇಲೆ ಪೊಲೀಸರು ಕ್ಷಿಪ್ರ ದಾಳಿ ನಡೆಸಿದಾಗ ಇನ್ನುಳಿದ್ದಿಬ್ಬರು ಸೆರೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ದಂಧೆಕೋರರ ಅಡ್ಡೆಯಾದ ಪಾಂಡಪುರ ರಸ್ತೆಯ ಅಲೆಮನೆ ಮೇಲೆ ದಾಳಿ ನಡೆಸಿದಾಗ ಐದಕ್ಕೂ ಹೆಚ್ಚಿನ ಗರ್ಭೀಣಿಯರು ಪತ್ತೆಯಾಗಿದ್ದಾರೆ. ಆ ಮಹಿಳೆಯರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆಗೆ ಕೆಲ ವೈದ್ಯರು ಸಹ ಸಾಥ್‌ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೃತ್ಯ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿರುವ ದಂಧೆಕೋರ ವೀರೇಶ್‌ನ ಚಿಕ್ಕಪ್ಪ ಡಾ.ಮಲ್ಲಿಕಾರ್ಜುನ್ ಸೇರಿದಂತೆ ಕೆಲವು ವೈದ್ಯರಿಗೆ ಹುಡುಕಾಟ ನಡೆದಿದೆ. ಇನ್ನು ಕಳೆದ ವರ್ಷದ ಸಹ ಇದೇ ರೀತಿಯ ಪ್ರಕರಣದಲ್ಲಿ ಡಾ. ಮಲ್ಲಿಕಾರ್ಜುನ್ ಬಂಧಿತನಾಗಿದ್ದ ಬಳಿಕ ಜಾಮೀನು ಪಡೆದು ಹೊರಬಂದು ಮತ್ತೆ ಆತ ಚಾಳಿ ಮುಂದುವರೆಸಿದ್ದ ಎನ್ನಲಾಗಿದೆ.

Categories
ಮಾಹಿತಿ

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ: ಹಣಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ: ಹಣಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ?
– ಕೇಂದ್ರ ಸರ್ಕಾರದಿಂದ 6000 ರೂ. ಹಣ ಬರುತ್ತೆ!

NAMMUR EXPRESS NEWS
ನವದೆಹಲಿ: ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 2೦19ರಲ್ಲಿ ಜಾರಿಗೆ ತಂದ ಯೋಜನೆಯೇ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ. ಈ ಯೋಜನೆ ಮೂಲಕ ಪ್ರತಿ ವರ್ಷ ರೈತರ ಖಾತೆಗೆ 6,000 ರೂ. ಜಮೆ ಮಾಡಲಾಗುತ್ತದೆ. ಈ ಯೋಜನೆಗೆ ಹೆಸರು ನೋಂದಾಯಿಸುವುದು ಹೇಗೆ? ಕಂತು ಪಾವತಿ ಬಗ್ಗೆ ಪರಿಶೀಲನೆ ನಡೆಸುವುದು ಹೇಗೆ? ಫಲಾನುಭವಿ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 15ನೇ ಕಂತಿಗಾಗಿ ಕಾಯುತ್ತಿದ್ದಾರೆ. ವರದಿಗಳ ಪ್ರಕಾರ, ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ 15ನೇ ಕಂತು ನವೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. 14ನೇ ಕಂತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವರ್ಷದ ಜುಲೈನಲ್ಲಿ ಬಿಡುಗಡೆ ಮಾಡಿದ್ದರು.

3 ಕಂತುಗಳಲ್ಲಿ ಪಾವತಿ

ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಎಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಯೋಜನೆ ಆರಂಭವಾಗಿ 4 ವರ್ಷಗಳಲ್ಲಿ ಕೇಂದ್ರ ಇಲ್ಲಿಯವರೆಗೆ ಸುಮಾರು 2.50 ಲಕ್ಷ ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಿದೆ.

ಹೀಗೆ ಚೆಕ್‌ ಮಾಡಿ

ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ, ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಎನ್ನುವುದನ್ನು ಆನ್‌ಲೈನ್‌ ಮೂಲಕ ನಿಮಗೇ ಪರಿಶೀಲಿಸಲು ಸಾಧ್ಯವಿದೆ. ಅದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.
ಅಧಿಕೃತ ವೆಬ್‌ಸೈಟ್‌ pmkisan.gov.in ಭೇಟಿ ನೀಡಿ
*ಆಗ ಓಪನ್‌ ಆಗುವ ಪೇಜ್‌ನ ಬಲ ಬದಿಯಲ್ಲಿರುವ ‘Know Your Status’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ
*ರಿಜಿಸ್ಟ್ರೇಷನ್‌ ನಂಬರ್‌ ನಮೂದಿಸಿ, ಕ್ಯಾಪ್ಚ ಕೋಡ್‌ ಭರ್ತಿ ಮಾಡಿ ‘Get Data’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ
*ಈಗ ಫಲಾನುಭವಿಯ ವಿವರ, ಹಣ ಜಮೆಯಾದ ಮಾಹಿತಿ ಸ್ಕ್ರೀನ್‌ ಮೇಲೆ ಮೂಡುತ್ತದೆ

ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನ

*ಅಧಿಕೃತ ವೆಬ್‌ಸೈಟ್‌ www.pmkisan.gov.inಗೆ ಭೇಟಿ ನೀಡಿ
*ಆಗ ತೆರೆದುಕೊಳ್ಳುವ ಪುಟದಲ್ಲಿನ ‘Beneficiary list’ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ
*ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್‌ ಮತ್ತು ಗ್ರಾಮವನ್ನು ಆಯ್ಕೆ ಮಾಡಿ
*Get report’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಹೆಸರು ನೋಂದಾಯಿಸುವ ವಿಧಾನ

ಅಧಿಕೃತ ವೆಬ್‌ಸೈಟ್‌ pmkisan.gov.in ಭೇಟಿ ನೀಡಿ
‘New Farmer Registration’ ಆಯ್ಕೆ ಮೇಲೆ ಕಲಿಕ್‌ ಮಾಡಿ ಮತ್ತು ಆಧಾರ್‌ ಕಾರ್ಡ್‌ ನಂಬರ್‌ ನಮೂದಿಸಿ ಕ್ಯಾಪ್ಚ ಕೋಡ್‌ ಭರ್ತಿ ಮಾಡಿ
ಅಗತ್ಯ ಮಾಹಿತಿ ತುಂಬಿ ‘Yes’ ಬಟನ್‌ ಕ್ಲಿಕ್‌ ಮಾಡಿ
ಅರ್ಜಿ ಫಾರಂ ತುಂಬಿ, ಸೇವ್‌ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ಪ್ರಿಂಟ್‌ ಔಟ್‌ ತೆಗೆದಿಡಿ
ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌ 155261 ಮತ್ತು 011-24300606 ಅನ್ನು ಸಂಪರ್ಕಿಸಿ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ವೈಭವದ ದಸರಾಕ್ಕೆ ವರ್ಣರಂಜಿತ ತೆರೆ..!

ತೀರ್ಥಹಳ್ಳಿ ವೈಭವದ ದಸರಾಕ್ಕೆ ವರ್ಣರಂಜಿತ ತೆರೆ..!
– 20 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ
– ದಸರಾ ಮೆರವಣಿಗೆಯಲ್ಲಿ ಇಡೀ ಪಟ್ಟಣದಲ್ಲಿ ಜನ
– ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್, ಹುಲಿವೇಷ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ವೈಭವದ ದಸರಾ ಅದ್ದೂರಿಯಾಗಿ ತೆರೆ ಕಂಡಿದ್ದು, ದಸರಾದಲ್ಲಿ ಸುಮಾರು 20 ಸಾವಿರ ಮಂದಿ ಭಾಗಿಯಾಗಿದ್ದರು. ವೈಭವದ ಮೆರವಣಿಗೆಯು ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಸ್ಥಾನದಿಂದ ಮಧ್ಯಾಹ್ನ ಮೆರವಣಿಗೆಗೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಿದರು. ತಹಸೀಲ್ದಾರ್ ಲಿಂಗರಾಜ್, ದಸರಾ ಸಮಿತಿ ಸಂಚಾಲಕ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಸೇರಿದಂತೆ ಪಟ್ಟಣ ಪಂಚಾಯತ್ ಸದಸ್ಯರು, ದಸರಾ ಸಮಿತಿ ಸದಸ್ಯರು, ಪ್ರಮುಖರು ಹಾಜರಿದ್ದರು.

ಗಮನ ಸೆಳೆದ ಟ್ಯಾಬ್ಲೋಗಳು… ಜನರ ಶಿಳ್ಳೆ..!

ಶ್ರೀ ರಾಮೇಶ್ವರ ದೇವರ ಉತ್ಸವ ಮೂರ್ತಿಯೊಂದಿಗೆ 17 ಕ್ಕೂ ಹೆಚ್ಚು ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಇನ್ನು ಜಾನಪದ ಕಲೆಗಳಾದ ಡೊಳ್ಳು ಕುಣಿತ, ಪೂಜಾ ಕುಣಿತ, ನಗಾರಿ, ಹುಲಿವೇಶ, ತಟ್ಟಿರಾಯ ಸೇರಿದಂತೆ ಹತ್ತಾರು ಜಾನಪದ ಪ್ರಕಾರಗಳು ಗಮನ ಸೆಳೆದವು. ಸುಮಾರು 3 ಗಂಟೆಗಳ ಕಾಲ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ಸಾಗಿತು.

ಕುಶಾವತಿ ಪಾರ್ಕಲ್ಲಿ ಧಾರ್ಮಿಕ,. ಸಾಂಸ್ಕೃತಿಕ ಸಮಾಗಮ

ಸಂಜೆ ತೀರ್ಥಹಳ್ಳಿಯ ಕುಶಾವತಿ ಪಾರ್ಕ್ ನಲ್ಲಿ ಬನ್ನಿ ಮೂಡಿವ ಕಾರ್ಯಕ್ರಮ, ರಾಮೇಶ್ವರ ದೇವರ ಪೂಜೆ ನಡೆದಿದ್ದು, ಬಳಿಕ ನಡೆದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಮೂಲದ ಇಸ್ರೋ ವಿಜ್ಞಾನಿಗಳಾದ ಸುಬ್ರಹ್ಮಣ್ಯ ಉಡುಪ ಹಾಗೂ ಶಿವಾನಿ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಡಾನ್ಸ್, ಹಾಡು ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾದರು.

ಹುಲಿವೇಷ ಸ್ಪರ್ಧೆಯ ರಂಗು.. ಭಾರೀ ಜೋಷ್!

ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಅರ್. ಮದನ್ ನೇತೃತ್ವದಲ್ಲಿ ಹುಲಿ ವೇಷ ಸ್ಪರ್ಧೆ ನಡೆಯಿತು. 20ಕ್ಕೂ ಹೆಚ್ಚು ಕಲಾವಿದರು ಸ್ಪರ್ಧೆಯಲ್ಲಿ ಭಾಗಿಯಾದರು.

ತೀರ್ಥಹಳ್ಳಿ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ಜಾಮ್!

ತೀರ್ಥಹಳ್ಳಿ ಪಟ್ಟಣದಲ್ಲಿ ದಸರಾ ಮೆರವಣಿಗೆ ಹಿನ್ನೆಲೆ ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ಒಂದು ಕಡೆ ಅತೀ ಹೆಚ್ಚು ವಾಹನ ಪಟ್ಟಣಕ್ಕೆ ಬಂದಿದ್ದವು. ಇನ್ನೊಂದು ಕಡೆ ಹಬ್ಬಕ್ಕೆ ಬಂದವರು ಬೆಂಗಳೂರು ಸೇರಿ ವಿವಿಧ ಭಾಗಗಳಿಗೆ ಹೋಗುವ ತಯಾರಿ ಅಲ್ಲಿದ್ದರು.

Categories
ರಾಜ್ಯ

ನಟರು, ಸ್ವಾಮೀಜಿಗಳಿಗೆ ಹುಲಿ ಉಗುರು ಶಾಕ್..!

ನಟರು, ಸ್ವಾಮೀಜಿಗಳಿಗೆ ಹುಲಿ ಉಗುರು ಶಾಕ್..!
– ವಿನಯ್ ಗುರೂಜಿ ಆಶ್ರಮದ ಹುಲಿ ಚರ್ಮದ ಫೋಟೋ ವೈರಲ್?!
– ದರ್ಶನ್, ಜಗ್ಗೇಶ್ ಸೇರಿ ಹಲವರಿಗೆ ಬಂಧನದ ಭೀತಿ?

NAMMUR EXPRESS NEWS
ಬಿಗ್ ಬಾಸ್ ಮನೆಯಲ್ಲಿ ಮಿಂಚುತಿದ್ದ ಹಳ್ಳಿಕಾರ್ ಖ್ಯಾತಿಯ ವರ್ತೂರ್ ಸಂತೋಷ್‌ಗೆ ತಾನು ಧರಿಸಿದ್ದ ಹುಲಿ ಉಗುರಿನ ಲಾಕೆಟ್ ಸಮಸ್ಯೆ ಹಿನ್ನೆಲೆ ಜೈಲು ಸೇರಿದ್ದಾನೆ. ಇದರ ಬೆನ್ನಲ್ಲೇ ಇದೀಗ ಇದೇ ರೀತಿ ಹುಲಿ ಉಗುರಿನ ಲಾಕೆಟ್ ಧರಿಸಿರುವ ಹಲವರಿಗೆ ಢವಢವ ಶುರುವಾಗಿದೆ. ನಟ ದರ್ಶನ್, ನವರಸ ನಾಯಕ ಜಗ್ಗೇಶ್, ವಿನಯ್ ಗುರೂಜಿ,ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹುಲಿ ಉಗುರಿನ ಲಾಕೆಟ್ ಧರಸಿದವರ ಬಂಧನ ಬಗ್ಗೆ ಸಾರ್ವಜನಿಕರು, ಆರಣ್ಯ ಇಲಾಖೆ, ಹಾಗೂ ಪೊಲೀಸ್ ಇಲಾಖೆಗೆ ಪ್ರಶ್ನಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಹುಲಿ ಚರ್ಮದ ಮೇಲೆ ಕುಳಿತ ಅವಧೂತ ವಿನಯ ಗುರೂಜಿ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು, ಇದೀಗ ಅವರ ವಿರುದ್ಧ ದೂರು ದಾಖಲಾಗಿದೆ.

ಇನ್ನು ವಿನಯ್ ಗುರೂಜಿ ಆಶ್ರಮದಲ್ಲಿದ್ದ ಹುಲಿ ಚರ್ಮ ಕೊಟ್ಟಿದ್ಯಾರು?

ವಿನಯ್ ಗುರೂಜಿ ಫೋಟೋ ಹುಲಿ ಚರ್ಮದ ಮೇಲೆ ಕುಳಿತುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ವಿನಯ್ ಗುರೂಜಿ ಅವರ ಗೌರಿಗದ್ದೆ ದತ್ತಾಶ್ರಮಕ್ಕೆ ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎನ್ನುವರು ಚರ್ಮ ದಾನವಾಗಿ ನೀಡಿದ್ದಾರೆ ಎನ್ನುವ ದಾಖಲೆಗಳಲ್ಲಿ ಇದೆ.ಅಮರೇಂದ್ರ ಅವರು ಹುಲಿ ಚರ್ಮ ದಾನ ನೀಡುವ ಬಗ್ಗೆ 23-8-2-2019ರಲ್ಲಿ ಶಿವಮೊಗ್ಗ ಉಪ ಅರಣ್ಯಾಧಿಕರಿಗೆ ಪತ್ರ ಬರೆದಿದು ಲೈಸೆನ್ಸ್‌ ಪಡೆದುಕೊಂಡಿದ್ದರು. ಲೈಸೆನ್ಸ್ ಪಡೆದುಕೊಂಡೇ ಗೌರಿಗದ್ದೆ ದತ್ತಾಶ್ರಮ ಹುಲಿ ಚರ್ಮ ನೀಡಲಾಗಿತ್ತು. ನಂತರ ಹುಲಿ ಚರ್ಮದ ಮೇಲೆ ಕುಳಿತ ವಿನಯ್ ಗುರೂಜಿ ಫೋಟೋ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಅದನ್ನು ವಿನಯ್ ಗುರೂಜಿ ಅವರು ಅಮರೇಂದ್ರ ಅವರಿಗೆ ವಾಪಸ್ ನೀಡಿದ್ದರು. ನಂತರ ಹುಲಿ ಚರ್ಮವನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಅಮರೇಂದ್ರ ಅವರು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ಸರ್ವಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ. ಶಿವಕುಮಾರ್ ನಾಯಕ್ ಎಂಬುವವರು ವಿನಯ್ ಗುರೂಜಿ ಹಾಗೂ ನಟ ದರ್ಶನ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ದರ್ಶನ್ ವಿರುದ್ಧವೂ ದೂರು

ದರ್ಶನ್ ಅವರು ಅರಣ್ಯ ರಾಯಭಾರಿ ಆಗಿದ್ದಾರೆ. ಅವರಿಗೆ ಕನಿಷ್ಠ ಪ್ರಜ್ಞೆ ಇಲ್ಲವೇ, ದರ್ಶನ್ ಬಂಗಾರದ ಚೈನ್ ಹಾಕಿದ್ದಾರೆ. ಅದರಲ್ಲಿ ಹುಲಿಯ ಉಗುರು ಇದೆ. ಅವರಿಂದ ಕಾನೂನಿನ ಉಲ್ಲಂಘನೆ ಆಗಿದೆ. ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ. ಹುಲಿಯ ಉಗುರು ಇದ್ದ ಕಾರಣಕ್ಕೆ ವರ್ತೂರು ಸಂತೋಷ ಅವರನ್ನು ಬಂಧಿಸಿದ್ದೀರಿ. ಅದೇ ರೀತಿ ನಟ ದರ್ಶನ್, ವಿನಯ್ ಗುರೂಜಿಯನ್ನೂ ಕರೆಸಿ ವಿಚಾರಿಸಿ. ಅವರು ಧರಿಸಿದ ಹುಲಿ ಉಗುರು ಅಸಲಿಯೋ ಅಥವಾ ನಕಲಿಯೋ ಅನ್ನೋದನ್ನು ಪರಿಶೀಲನೆ ಮಾಡೋದು ಅರಣ್ಯಾಧಿಕಾರಿಗಳ ಕಾರ್ಯ ಎಂದು ಹೇಳಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಡಿ ಶಿವಕುಮಾರ್ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ದರ್ಶನ್ ಹುಲಿ ಉಗುರು ಧರಿಸಿರುವ ಫೋಟೋ ವೈರಲ್ ಆಗಿತ್ತು, ಹಾಗಾಗಿ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಶಿವಕುಮಾರ್ ದೂರು ನೀಡಿದ್ದಾರೆ. ಜಗ್ಗೇಶ್, ನಿಖಿಲ್ ಕುಮಾರ ಸ್ವಾಮಿ ಸೇರಿದಂತೆ ಅನೇಕರಿಗೆ ಈಗ ಸಂಕಷ್ಟ ಎದುರಾಗಿದೆ.

Categories
ರಾಜ್ಯ

ಧರ್ಮಸ್ಥಳ ಸಂಘದ ಕಚೇರಿಯಿಂದ 1. 24 ಕೋಟಿ ದರೋಡೆ!

ಧರ್ಮಸ್ಥಳ ಸಂಘದ ಕಚೇರಿಯಿಂದ 1. 24 ಕೋಟಿ ದರೋಡೆ!
– ಧಾರವಾಡದ ರಾಯಪುರದಲ್ಲಿ ನಡೆದ ಘಟನೆ
– ಸಾಲು ಸಾಲು ರಜೆ ಹಿನ್ನೆಲೆ ಹಣ ಕಟ್ಟಿರಲಿಲ್ಲ
– ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಬಾಲಕಿಯನ್ನು ಹೊರಗೆಳೆದು ತುಳಿದ ಕಾಡಾನೆ!

NAMMUR EXPRESS NEWS
ಧಾರವಾಡ: ಧಾರವಾಡದ ರಾಯಪುರ ಬಡಾವಣೆಯಲ್ಲಿರೋ ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ ಕಚೇರಿಯ ಲಾಕರ್ ಅನ್ನೇ ಕಳ್ಳರು ಲೂಟಿ ಮಾಡಿ 1 ಕೋಟಿ 24 ಲಕ್ಷ ರೂ. ಹಣ ದರೋಡೆ ಮಾಡಿದ್ದಾರೆ. ಕಚೇರಿಯಲ್ಲಿದ್ದ ಒಟ್ಟು ನಾಲ್ಕೂ ಲಾಕರ್ ಗಳನ್ನು ಮುರಿದಿರುವ ಕಳ್ಳರು, ಅಲ್ಲಿದ್ದ ಒಂದು ಪೈಸೆಯನ್ನೂ ಬಿಡದೆ ಕದ್ದುಕೊಂಡು ಹೋಗಿದ್ದಾರೆ. ಸೆಕ್ಯೂರಿಟಿ ಗಾರ್ಡ್‍ಗಳು ಊಟಕ್ಕೆ ಹೋದ ಸಮಯದಲ್ಲಿ ಕಚೇರಿಯ ಶೌಚಾಲಯದ ಕಿಟಕಿ ಮುರಿದು ಒಳನುಗ್ಗಿದ ಕಳ್ಳರು ಕೃತ್ಯ ಎಸಗಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ಇಲ್ಲದ ಭಾಗದಿಂದ ಬಂದು ಕಳ್ಳತನ ಮಾಡಿರೋದು ಹಲವು ಅನುಮಾನ ಮೂಡಿಸಿದೆ.

ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ ಅಡಿಯಲ್ಲಿ ಜಿಲ್ಲೆಯಾದ್ಯಂತ ನಿತ್ಯವೂ ಸಂಗ್ರಹವಾಗುತ್ತಿದ್ದ ಹಣ ಅದೇ ದಿನ ಬ್ಯಾಂಕ್‍ಗೆ ಡೆಪಾಸಿಟ್ ಆಗುತ್ತಿತ್ತು. ಆದರೆ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಮಂಗಳವಾರ ಹಣವನ್ನು ಕಟ್ಟಲಾಗಿರಲಿಲ್ಲ. ಹೀಗಾಗಿ ಕಚೇರಿಯಲ್ಲಿನ ಲಾಕರ್ ನಲ್ಲೇ ಇಟ್ಟು ಹೋಗಿದ್ದರು. ಇದೆಲ್ಲ ತಿಳಿದುಕೊಂಡವರೇ ಕೃತ್ಯ ಎಸಗಿರಬಹುದು ಅಂತ ಶಂಕೆ ವ್ಯಕ್ತವಾಗಿದೆ. ಸದ್ಯ ಕಚೇರಿಯ ಸಿಬ್ಬಂದಿ ಸೇರಿದಂತೆ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಇಷ್ಟೊಂದು ಹಣ ಕಳ್ಳತವಾಗಿರೋದು, ಅದರಲ್ಲೂ ಖದೀಮರು ಯಾವುದೇ ಸುಳಿವು ಬಿಡದೇ ಇರೋದು ತನಿಖೆಗೆ ಸವಾಲಾಗಿದೆ. ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರೇ ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಕಾರ್ಯೋನ್ಮುಖವಾಗಿದ್ದಾರೆ.

ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಬಾಲಕಿಯನ್ನು ಹೊರಗೆಳೆದು ತುಳಿದ ಕಾಡಾನೆ!

ಹಾಸನ: ಚಲಿಸುತ್ತಿದ್ದ ಕಾರಿಗೆ ಕಾಡಾನೆಯೊಂದು ಏಕಾಏಕಿ ಅಡ್ಡ ಬಂದು ಕಾರಿನಲ್ಲಿದ್ದ ಬಾಲಕಿಯನ್ನು ಹೊರಗೆಳೆದು ತುಳಿದು ಗಾಯಗೊಳಿಸಿದ ಘಟನೆ ಸಕಲೇಶಪುರದ ಹೊಸಕೆರೆ ಬಳಿ ನಡೆದಿದೆ. ಹಳೆಬಾಗೆ ಗ್ರಾಮದ ದೀಕ್ಷಿತಾ (16) ಕಾಡಾನೆ ದಾಳಿಯಿಂದ ಗಾಯಗೊಂಡ ಬಾಲಕಿ. ಚಿಕ್ಕಮಗಳೂರಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ, ರಜೆ ಇದ್ದ ಕಾರಣ ತನ್ನ ಊರಾದ ಹಳೆಬಾಗೆ ಗ್ರಾಮಕ್ಕೆ ಬಂದಿದ್ದಳು. ಅಲ್ಲಿಂದ ಪೋಷಕರ ಜೊತೆ ಮಾರುತಿ 800 ಕಾರಿನಲ್ಲಿ ಹೊಸಕೆರೆ ಗ್ರಾಮದ ಅಜ್ಜಿ ಮನೆಗೆ ಹೋಗಿ ವಾಪಾಸ್ ಆಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಏಕಾಏಕಿ ಕಾಡಾನೆ ಕಾರಿಗೆ ಅಡ್ಡ ಬಂದಿದೆ. ಕಾಡಾನೆ ಕಂಡು ದೀಕ್ಷಿತಾ ಪೋಷಕರಾದ ವಿನೋದ ಹಾಗೂ ಗಿರೀಶ್ ಕಾರು ನಿಲ್ಲಿಸಿ ಕೆಳಗಿಳಿದು ಓಡಿ ಹೋಗಿದ್ದಾರೆ.

ದೀಕ್ಷಿತಾ ಕಾಡಾನೆ ಕಂಡು ಗಾಬರಿಯಿಂದ ಕಾರಿನಿಂದ ಇಳಿದು ಓಡಲಾಗದೆ ಕಾರಿನಲ್ಲೇ ಕುಳಿತಿದ್ದಳು. ಕಾಡಾನೆ ದೀಕ್ಷಿತಾಳನ್ನು ಸೊಂಡಿಲಿನಿಂದ ಎಳೆದುಕೊಂಡು ತುಳಿದು ಗಾಯಗೊಳಿಸಿದೆ. ಪೋಷಕರು ಕಿರುಚುತ್ತಿದ್ದಂತೆ ಕಾಡಾನೆ ಕಾಫಿ ತೋಟದೊಳಗೆ ಓಡಿ ಹೋಗಿದೆ. ಗಾಯಗೊಂಡ ಬಾಲಕಿಗೆ ಸಕಲೇಶಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.