Categories
ತೀರ್ಥಹಳ್ಳಿ ಮಲ್ನಾಡ್ ರಾಜಕೀಯ ಶಿವಮೊಗ್ಗ

ಮಂಜುನಾಥ ಗೌಡರಿಗೆ ಮಲೆನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷಗಿರಿ!

ಮಂಜುನಾಥ ಗೌಡರಿಗೆ ಮಲೆನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷಗಿರಿ!
– ರಾಜ್ಯದ ವಿವಿಧ ನಿಗಮ ಮಂಡಳಿಗೆ ಆಯ್ಕೆ
– ಕಾಡಾ ಅಭಿವೃದ್ಧಿ ನಿಗಮ ಡಾ. ಅಂಶಮಂತ ಪಾಲು
– ಶಿವಮೊಗ್ಗದ ಮೂವರಿಗೆ ಸಿಕ್ತು ಸ್ಥಾನ
– ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಕಾರ ಅಧ್ಯಕ್ಷ

NAMMUR EXPRESS NEWS
ಮಲೆನಾಡು ಅಭಿವೃದ್ದಿ ನಿಗಮದ ನೂತನ ಅಧ್ಯಕ್ಷರಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರು ಕಾಂಗ್ರೆಸ್ ಪಕ್ಷದ ರಾಜ್ಯ ಸಹಕಾರ ವಿಭಾಗದ ಸಂಚಾಲಕರಾದ ಡಾ.ಆರ್. ಎಂ ಮಂಜುನಾಥ ಗೌಡ ಅವರಿಗೆ ಆಯ್ಕೆ ಆಗಿದ್ದಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ಪ್ರಮುಖ ನಾಯಕರಾಗಿರುವ ಮಂಜುನಾಥ ಗೌಡ ಅವರಿಗೆ ಈಗ ಮಹತ್ವದ ಹುದ್ದೆ ಲಭಿಸಿದ್ದು, ಈಗಾಗಲೇ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಂಭ್ರಮ ಎಲ್ಲೆಡೆ ವ್ಯಕ್ತವಾಗುತ್ತಿದೆ.

ಕಾಡಾ ಅಭಿವೃದ್ಧಿ ನಿಗಮ ಡಾ.ಅಂಶಮಂತ ಪಾಲು

ಡಾ.ಅಂಶಮಂತ ಅವರು ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಸಹಕಾರ ನೀಡಿದ್ದರು. ಈಗ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಯಾರಿಗೆ, ಯಾವ ನಿಗಮ, ಮಂಡಳಿ?

ಜಿ.ಪಲ್ಲವಿ – ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅ‍ಧ್ಯಕ್ಷೆ

ಆರ್‌.ಎಂ.ಮಂಜುನಾಥಗೌಡ – ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ

ಹೆಚ್‌.ಎಸ್‌.ಸುಂದರೇಶ್‌ – ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

Categories
ತೀರ್ಥಹಳ್ಳಿ

ಸದನದಲ್ಲಿ ಪಾಕ್ ಪರ ಘೋಷಣೆಗೆ ತೀವ್ರ ಖಂಡನೆ..!

ಸದನದಲ್ಲಿ ಪಾಕ್ ಪರ ಘೋಷಣೆಗೆ ತೀವ್ರ ಖಂಡನೆ..!
– ತೀರ್ಥಹಳ್ಳಿಯಲ್ಲಿ ಬಿಜೆಪಿಯಿಂದ ಭಾರಿ ಪ್ರತಿಭಟನೆ
– ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ

NAMMUR EXPRESS NEWS
ತೀರ್ಥಹಳ್ಳಿ : ದಿನಾಂಕ : 27-02-2024 ರ ಮಂಗಳವಾರ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್ ಹುಸೇನ್ ಜಯಗಳಿಸಿದ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ ಘೋಷಣೆ ಹಾಕಿದ್ದಾರೆ. ಭಾರತ ದೇಶದಲ್ಲಿ ಇದ್ದು ಪಾಕಿಸ್ತಾನದ ಪರ ಘೋಷಣೆ ಕೂಗುವ ಕಾಂಗ್ರೇಸ್ ಮುಖಂಡರ ಧೋರಣೆಯನ್ನು ವಿರೋಧಿಸಿ ಬುಧವಾರ ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ಆಡಳಿತ ಸೌಧದಲ್ಲಿಯೇ ಈ ಘಟನೆ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿರುವುದಲ್ಲದೆ ದೇಶದ ಜನಸಾಮಾನ್ಯರಲ್ಲಿ ಆತಂಕವನ್ನು ಮೂಡಿಸಿದೆ. ಆದ್ದರಿಂದ ಈ ಘಟನೆಗೆ ಕಾರಣವಾದ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚಿಸಬೇಕೆಂದು ತೀರ್ಥಹಳ್ಳಿ ಬಿಜೆಪಿ ಘಟಕವು ತೀರ್ಥಹಳ್ಳಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಹೆದ್ದೂರು ನವೀನ್ ಅವರು ಮಾತನಾಡಿ ನಮ್ಮೆಲ್ಲರ ಪವಿತ್ರ ದೇವಾಲಯ ವಿಧಾನಸೌಧದ ಒಳಗಡೆ ವಿಜೃಂಭಣೆಯಿಂದ ಸೆಲೆಬ್ರೇಶನ್ ಮಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ದೇಶ ವಿರೋಧಿ ಘೋಷಣೆಯನ್ನು ಕೂಗಿದ್ದಾರೆ. ದೇಶವನ್ನು ಒಡೆಯುವ ಹುನ್ನಾರವನ್ನು ನಡೆಸಿಕೊಂಡು ಬರುತ್ತಿದೆ. ಅವರಿಗೆ ಇರುವುದು ಒಂದೇ ಕೆಲಸ ದೇಶವನ್ನು ಒಡೆಯುವುದು, ದೇಶದಲ್ಲಿ ಕೆಟ್ಟವರನ್ನು, ದೇಶ ವಿರೋಧಿಗಳನ್ನು ಬೆಳೆಸುವುದು. ವೋಟನ್ನು ಗಿಟ್ಟಿಸಿಕೊಳ್ಳಲು ಈ ರೀತಿಯ ಕೆಟ್ಟ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ.

ರಾಜಕಾರಣವನ್ನು ಹೇಸಿಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ದೇಶದ ಭದ್ರತೆಗೆ ದಕ್ಕೆ ಬರುವಂತಹ ವಿಷಯಗಳಲ್ಲಿ ಮುಂದುವರೆದರೆ ಇದು ವಿಪರೀತಕ್ಕೆ ಹೋಗಿ ಉಗ್ರವಾದ ಹೋರಾಟ ಬಿಜೆಪಿ ಮಾಡುತ್ತೆ ಮುಂದಿನ ದಿನಗಳಲ್ಲಿ ಅದರ ಪ್ರತಿಫಲ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಬಾಳೆಬೈಲು ರಾಘವೇಂದ್ರ, ಕುಕ್ಕೆ ಪ್ರಶಾಂತ್, ಸೊಪ್ಪುಗುಡ್ಡೆ ರಾಘವೇಂದ್ರ, ಅಶೋಕ್ ಮೂರ್ತಿ, ರಕ್ಷಿತ್ ಮೇಗರವಳ್ಳಿ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ಶ್ರೀ ಕ್ಷೇತ್ರ ನೆಲ್ಲಿಕಟ್ಟೆಯಲ್ಲಿ( ಕಂಪನ ಕೊಡಿಗೆ ) ಸಹಸ್ರ ನಾರಿಕೇಳ ಮಹಾ ಗಣಪತಿಯಾಗ

ಶ್ರೀ ಕ್ಷೇತ್ರ ನೆಲ್ಲಿಕಟ್ಟೆಯಲ್ಲಿ( ಕಂಪನ ಕೊಡಿಗೆ ) ಸಹಸ್ರ ನಾರಿಕೇಳ ಮಹಾ ಗಣಪತಿಯಾಗ
– ಮಾ.03 ಹಾಗೂ 04 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ
– ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆಗಮನ

NAMMUR EXPRESS NEWS
ತೀರ್ಥಹಳ್ಳಿ : ಶ್ರೀ ಪ್ರಸನ್ನ ಸಿದ್ಧಿ ವಿನಾಯಕ ದೇವಸ್ಥಾನ ಉದ್ಭವ ಬಲಮುರಿ ಗಣಪತಿ ಸನ್ನಿಧಿ, ಶ್ರೀ ಕ್ಷೇತ್ರ ನೆಲ್ಲಿಕಟ್ಟೆ ಕಂಪನಕೊಡಿಗೆ ತೀರ್ಥಹಳ್ಳಿಯಲ್ಲಿ ಸಹಸ್ರ ನಾರಿಕೇಳ ಮಹಾ ಗಣಪತಿಯಾಗವನ್ನು ದಿನಾಂಕ: 03-03-2024 ರ ಭಾನುವಾರ ಮತ್ತು 04-03-2024 ರ ಸೋಮವಾರ ನಡೆಸಲಾಗುವುದು. ಶ್ರೀಮತ್‌ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳೀ ವಿರಾಜಮಾನ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಆಶೀರ್ವಾದದಿಂದ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ತೀರ್ಥಹಳ್ಳಿ ತಾಲ್ಲೂಕು ದೇವಂಗಿಯ ಸಮೀಪ ಕಂಪನಕೊಡಿಗೆ ಶ್ರೀ ಪ್ರಸನ್ನ ಸಿದ್ದಿವಿನಾಯಕ ದೇವರ ಸನ್ನಿಧಿಯಲ್ಲಿ ಸಹಸ್ರ ನಾರಿಕೇಳ ಮಹಾಗಣಪತಿಯಾಗದ ಪೂರ್ಣಾಹುತಿಯ ಸಂದರ್ಭದಲ್ಲಿ ತಮ್ಮ ದಿವ್ಯ ಸಾನ್ನಿಧ್ಯವನ್ನು ವಹಿಸಿ ನಮ್ಮನ್ನು ಆಶೀರ್ವದಿಸಲಿದ್ದಾರೆ.

ದಿನಾಂಕ : 03-03-2024 ಭಾನುವಾರ ಮಾಘ ಬಹುಳ ಅಷ್ಟಮಿ ಪ್ರಾತಃಕಾಲದಲ್ಲಿ ಗುರುದೇವತಾ ಪ್ರಾರ್ಥನೆ ಗಣಪತಿ ಪೂಜೆ, ಪುಣ್ಯಾಹ ದೇವನಾಂದಿ ಋತ್ವಿಗರಣೆ, ಗಣಪತಿಹೋಮ ಹಾಗೂ ಸಂಜೆ 6:00 ಗಂಟೆಗೆ ಪುಣ್ಯಾಹ, ವಾಸ್ತುಪೂಜೆ, ರಾಕ್ಷೆಘ್ನ ಹೋಮ, ವಾಸ್ತುಬಲಿ, ಸಹಸ್ರನಾರಿಕೇಳ ಮಹಾಗಣಪತಿಹೋಮಾಂಗ ಅಗ್ನಿಮಥನ ಪೂರ್ವಕ ಅಗ್ನಿಜನನಹೋಮ, ಕಲಶಸ್ಥಾಪನೆ ಮಹಾಗಣಪತಿ ಮೂಲಮಂತ್ರಜಪ, ನವಕ ಪ್ರಧಾನ ಕಲಶಸ್ಥಾಪನೆ ಅಧಿವಾಸಹೋಮ ಇತ್ಯಾದಿ ನಡೆಯಲಿದೆ.

ದಿನಾಂಕ : 04-03-2024 ಸೋಮವಾರ ಮಾಘ ಬಹುಳ ನವಮಿ ಬೆಳಿಗ್ಗೆ 7:00 ಗಂಟೆಗೆ ಸಹಸ್ರ ನಾರಿಕೇಳ ಗಣಯಾಗ ಪ್ರಾರಂಭ ಬೆಳಿಗ್ಗೆ ಗಂಟೆ 10.30ಕ್ಕೆ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆಗಮನ ಶ್ರೀ ಶ್ರೀ ಗಳವರಿಗೆ ಪೂರ್ಣಕುಂಭ ಸ್ವಾಗತ ಶ್ರೀ ಶ್ರೀ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ “ಸಹಸ್ರ ನಾರಿಕೇಳಯಾಗದ ಪೂರ್ಣಾಹುತಿ” ಪ್ರಸನ್ನ ಸಿದ್ಧಿವಿನಾಯಕ ದೇವರಿಗೆ ಶ್ರೀಗಳ ಅಮೃತ ಹಸ್ತದಿಂದ ಕುಂಭಾಭಿಷೇಕ ನಂತರ ಸಭಾಕಾರ್ಯಕ್ರಮ ಶ್ರೀ ಶ್ರೀ ಗಳಿಂದ ಅನುಗ್ರಹ ಭಾಷಣ, ಪ್ರಸಾದ ವಿನಿಯೋಗ ನಡೆಯಲಿದೆ.

ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ವೇದ ಬ್ರಹ್ಮ ಶ್ರೀ ಲಕ್ಷ್ಮೀಶ ತಂತ್ರಿಗಳು ರಥಬೀದಿ ತೀರ್ಥಹಳ್ಳಿ ಇವರ ನೇತೃತ್ವದಲ್ಲಿ ನಡೆಯಲಿದೆ.

ಆಡಳಿತ ಮಂಡಳಿ ಮೊ 9448391266, 9482119222, 9449149855, 9481408699, 9481063839, 9480024005
Bank of Baroada, Devangi. SB A/c. No. 81670100001614, IFSC Code: BARBOVJDESH

ವಿ. ಸೂ ; ಶ್ರೀ ಶ್ರೀ ಗಳವರ ಆಶೀರ್ವಚನದ ನಂತರ ಶ್ರೀ ಶ್ರೀ ಜಗದ್ಗುರುಗಳವರಿಗೆ ಭಕ್ತರು ಪಾದಪೂಜೆ, ಭಿಕ್ಷಾಕಾಣಿಕೆ ಮತ್ತು ವಸ್ತ್ರ ಸಮರ್ಪಣೆ ಮಾಡಬಹುದು

ಸೇವಾ ವಿವರ :
– ವಿಶೇಷ ಸೇವೆ : ಸಾವಿರ ರೂ. ಮೇಲ್ಪಟ್ಟ – ಸಹಸ್ರ ನಾರಿಕೇಳ ಗಣಹೋಮ ಒಂದು ಕಾಯಿ ಗಣಹೋಮಕ್ಕೆ ರೂ. 1001/-
ಈ ಕಾರ್ಯಕ್ರಮದಲ್ಲಿ ಭಕ್ತ ಮಹಾಜನರು ಪಾಲ್ಗೊಂಡು ಶ್ರೀ ಪ್ರಸನ್ನ ಸಿದ್ಧಿವಿನಾಯಕ ದೇವರ ಹಾಗೂ ಶ್ರೀ ಜಗದ್ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸಂಭ್ರಮದಿಂದ ನಡೆದ ನ್ಯಾಷನಲ್ ಗೋಲ್ಡ್ ಕಪ್ ಸೀಸನ್ 1

ತೀರ್ಥಹಳ್ಳಿಯಲ್ಲಿ ಸಂಭ್ರಮದಿಂದ ನಡೆದ ನ್ಯಾಷನಲ್ ಗೋಲ್ಡ್ ಕಪ್ ಸೀಸನ್ 1
– ನ್ಯಾಷನಲ್ ಫೈಟರ್ಸ್ ಮೊದಲ ಸ್ಥಾನ, ನ್ಯಾಷನಲ್ ಟೈಗರ್ಸ್ ದ್ವಿತೀಯ ಸ್ಥಾನ
– ಮಾಲೀಕ, ಕ್ರೀಡಾ ಪೋಷಕ ಯೂಸಫ್ ಹೈದರ್ ಭರ್ಜರಿ ಬ್ಯಾಟಿಂಗ್!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಿದ್ಧ ಚಿನ್ನಾಭರಣ ಮಾರಾಟ ಸಂಸ್ಥೆ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ವತಿಯಿಂದ ಸಿಬ್ಬಂದಿಗಳಿಗೆ ಮಂಗಳವಾರ ನ್ಯಾಷನಲ್ ಗೋಲ್ಡ್ ಕಪ್ -2024 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಅಯೋಜನೆ ಮಾಡಿದ್ದು, ಅತ್ಯಂತ ಯಶಸ್ವಿಯಾಯಿತು. ಟೂರ್ನಿಯಲ್ಲಿ ನ್ಯಾಷನಲ್ ಫೈಟರ್ಸ್ ಮೊದಲ ಸ್ಥಾನ, ನ್ಯಾಷನಲ್ ಟೈಗರ್ಸ್ ದ್ವಿತೀಯ ಸ್ಥಾನ ಪಡೆದರು. ನ್ಯಾಷನಲ್ ಸ್ಟಾರ್ಸ್, ನ್ಯಾಷನಲ್ ಫ್ರೆಂಡ್ಸ್ ಭಾಗವಹಿಸಿದ್ದವು. ಕ್ರೀಡಾಕೂಟದ ಬೆಸ್ಟ್ ಬೌಲರ್ ಇರ್ಫಾನ್, ಬೆಸ್ಟ್ ಬ್ಯಾಟ್ಸ್ಮಮನ್ ಅಬ್ದುಲ್ ಲತೀಫ್, ಮ್ಯಾನ್ ಆಫ್ ಸೀರೀಸ್ ಇರ್ಫಾನ್ ಪಡೆದಿದ್ದಾರೆ. ಈ ವೇಳೆ ನ್ಯಾಷನಲ್ ಗೋಲ್ಡ್ ಮಾಲೀಕರಾದ ಯೂಸಫ್ ಹೈದರ್, ಅಬ್ದುಲ್ ರೆಹಮಾನ್ ಸೇರಿದಂತೆ ಸಿಬ್ಬಂದಿ ಇದ್ದರು. ನಾಲ್ಕು ತಂಡ ಭಾಗವಹಿಸಿದ್ದವು.

ಮಾಲೀಕ, ಕ್ರೀಡಾ ಪೋಷಕ ಯೂಸಫ್ ಹೈದರ್ ಭರ್ಜರಿ ಬ್ಯಾಟಿಂಗ್!

ಟೂರ್ನಮೆಂಟ್ ನಲ್ಲಿ ನ್ಯಾಷನಲ್ ಗೋಲ್ಡ್ ಮಾಲೀಕರು ಯೂಸಫ್ ಹೈದರ್ ತುಂಬಾ ವರ್ಷಗಳ ಬಳಿಕ ಟೆನ್ನಿಸ್ ಬಾಲ್ ಕ್ರಿಕೆಟ್ನಲ್ಲಿ ಅಮೋಘವಾಗಿ ಬ್ಯಾಟಿಂಗ್ ಪ್ರದರ್ಶಿಸಿದರು. ಇದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.

Categories
ಶಿವಮೊಗ್ಗ

ಟಾಪ್ ನ್ಯೂಸ್ ಶಿವಮೊಗ್ಗ

ಕರಡಿ ಪ್ರತ್ಯಕ್ಷ, ಓರ್ವನ ಮೇಲೆ ದಾಳಿ
• ನಟ ದರ್ಶನ್ ವಿರುದ್ಧ ಗ್ರಾಪಂ ಸದಸ್ಯೆಯಿಂದ ದೂರು
• ಆನಂದಪುರ ಸಮೀಪ ಭೀಕರ ಅಪಘಾತ ಸ್ಥಳದಲ್ಲೇ ಓರ್ವ ಸಾವು.!!
• ಕೊಟ್ಟಿಗೆಯಲ್ಲಿ 12 ಅಡಿಯ ಕಾಳಿಂಗ ಸರ್ಪ
• ರೈಲಿಗೆ ಸಿಲುಕಿದ ಎಮ್ಮೆ ಇಂಟರ್‌ಸಿಟಿ 2 ಗಂಟೆ ವಿಳಂಬ

NAMMUR EXPRESS NEWS
ಶಿವಮೊಗ್ಗ: ನಗರದ ಗೊಪಾಳ ಗೌಡ ಬಡಾವಣೆಯಲ್ಲಿರುವ ಎಫ್ ಬ್ಲಾಕ್ ಡಿವಿಜಿ ಪಾರ್ಕ್ ಬಳಿ ಕರಡಿಯೊಂದು ಪ್ರತ್ಯಕ್ಷವಾಗಿದ್ದು ವಾಕಿಂಗ್ ಗೆ ತೆರಳಿದ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ. ಮಲೆನಾಡ ಭಾಗದಲ್ಲಿ ಕರಡಿ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಇಂದು ಬೆಳ್ಳಿಗೆ ವಾಕಿಂಗ್ ಹೋಗುತ್ತಿದ್ದ ತುಕಾರಾಮ್ ಶೆಟ್ಟಿ ಎಂಬುವರ ಮೇಲೆ ದಾಳಿ ಮಾಡಿದೆ. ಸಧ್ಯಕ್ಕೆ ಅವರ ಹೊಟ್ಟೆಗೆ ಗಿಬರಿದ್ದು ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ದಾಳಿನಿಂದ ಕರಡಿ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳದಲ್ಲಿ ಅರಣ್ಯ ಇಲಾಖೆ ಕರಡಿ ಹಿಡಿಯುವ ಕಾರ್ಯಾಚರಣೆಗೆ ಇಳಿದಿದೆ. ಕರಡಿ ದಾಳಿ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿದ ತುಕಾರಾಂ ಶೆಟ್ಟಿ, ನಾಯಿಗಳು ಓಡಿಸಿಕೊಂಡು ಬಂದವು. ಓಡಿ ಬಂದ ಕರಡಿ ನನ್ನ ಮೇಲೆ ಎಗರಿ ಪರಚಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಗೋಪಾಳ ಗೌಡ ಎಫ್ ಬ್ಲಾಕ್ ನಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.

 ನಟ ದರ್ಶನ್ ವಿರುದ್ಧ ಗ್ರಾಪಂ ಸದಸ್ಯೆಯಿಂದ ದೂರು

ಶಿವಮೊಗ್ಗ: ಚಿತ್ರ ನಟ ದರ್ಶನ್ ಅವರು ಮಹಿಳೆಯರನ್ನು ಅಗೌರವಿಸುವಂತಹ, ನಿಂದಿಸುವ, ಅಶ್ಲೀಲ ಅರ್ಥ ಬರುವ ರೀತಿಯಲ್ಲಿ ಮಾತನಾಡುವ ಮೂಲಕ ಕೀಳು ಮನೋಭಾವವನ್ನು ಪ್ರದರ್ಶಿಸುತ್ತಾ ಮನಸ್ಸು ಸ್ಥೀಮಿತದಲ್ಲಿ ಇರದವರಂತೆ ವರ್ತಿಸುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ತಾಲೂಕಿನ ಹಸೂಡಿ ಗ್ರಾಪಂ ಅಧ್ಯಕ್ಷೆ ಚೈತ್ರ ಆರ್. ಮೋಹನ್ ಅವರ ನೇತೃತ್ವದ ಮಹಿಳಾ ನಿಯೋಗವು ಜಿಲ್ಲಾ ರಕ್ಷಣಾಧಿಕಾರಿಗಳ ಮೂಲಕ ಮಹಿಳಾ‌ ಆಯೋಗ‌, ಡಿಸಿಎಂ ಮತ್ತು ಸಿಎಂ ಗೆ ಮನವಿ ನೀಡಿದ್ದಾರೆ.

ಜಿಲ್ಲಾ ರಕ್ಷಣಾಧಿಕಾರಿಗಳ ಮುಖಾಂತರ ಸಿಎಂ, ಡಿಸಿಎಂ, ಗೃಹ ಸಚಿವರು ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಫೆಬ್ರವರಿ 17ರಂದು ನಡೆದ ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮದಲ್ಲಿ ಚಿತ್ರ ನಟ ದರ್ಶನ್ ಅವರು “ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ಅವಳ ಅಜ್ಜಿನಾ ಬಡಿಯಾ” ಎಂದು ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಅವರು ತಮ್ಮ ಮಾತಿನ ಮೂಲಕ ಮಹಿಳೆಯರನ್ನು ಅವಮಾನಿಸಿದ್ದಾರೆ ಹಾಗೂ ಅಗೌರವಿಸಿದ್ದಾರೆ ಎಂದು ದೂರಲಾಗಿದೆ.‌

ಯುವ ಜನರಿಗೆ ಮಾದರಿಯಾಗಿರಬೇಕಾದ ನಾಯಕ ನಟ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿರುವುದು ಸರಿಯಲ್ಲ. ದರ್ಶನ್ ಅವರು ಕುಲಕ್ಕೆ ಕಳಂಕ ತರುವಂತೆ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ಅವರನ್ನು ವಿಚಾರಣೆ ನಡೆಸಿ ಆತ ಬಳಸಿರುವ ಪದಗಳು ಭಾವನೆ ಬಗ್ಗೆ ಮಾಹಿತಿ ಪಡೆದು ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಹಿಂದೆ ಈ ನಟ ಹೆಂಡತಿಗೆ ಸಿಗರೇಟಿನಿಂದ ಸುಟ್ಟು ಮಾನಸಿಕ ಕಿರುಕುಳ ನೀಡಿ ಜೈಲುಪಾಲಾಗಿದ್ದು ಇತಿಹಾಸ. ಇನ್ನೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ಬಾಗಿಲು ತಟ್ಟಿದಾಗ ಬೆಡ್ ರೂಂ ಒಳಗೆ ಎಳೆದು ಕೊಂಡು ಬಟ್ಟೆ ಬಿಚ್ಚಿ ಕೂಡಿ ಹಾಕಬೇಕೆಂದು ಅಸಂಬದ್ಧ ಹೇಳಿಕೆ ನೀಡುವ ಮೂಲಕ ಹೆಣ್ಣುಮಕ್ಕಳು ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದರು.

ತೆರೆಯ ಮೇಲೆ ಹೆಣ್ಣನ್ನು ಗೌರವಿಸುವಂತೆ ಮಾತನಾಡುವ ನಟ ದರ್ಶನ್ ಸಾರ್ವಜನಿಕ ಕಾರ್ಯಕ್ರಮ ಹಾಗೂ ಮಾಧ್ಯಮಗಳ ಸಂದರ್ಶನದ ಸಂದರ್ಭದಲ್ಲಿ ಮಹಿಳೆಯರನ್ನು ಅಗೌರವಿಸುವಂತಹ, ನಿಂದಿಸುವ, ಅಶ್ಲೀಲ ಅರ್ಥ ಬರುವ ರೀತಿಯಲ್ಲಿ ಮಾತನಾಡುವ ಮೂಲಕ ಕೀಳು ಮನೋಭಾವವನ್ನು ಪ್ರದರ್ಶಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಲಾಗಿದೆ. ಶೃತಿ, ಆಶಾ, ಯಶೋಧಮ್ಮ, ನೇತ್ರ, ಸುನೀತಾ, ಸೌಮ್ಯ, ಮಾಲಾಬಾಯಿ, ಮಹಾದೇವಿ ಶಿಕಾರಿಪುರ ಮತ್ತಿತರರು ನಿಯೋಗದಲ್ಲಿದ್ದರು.

 ಆನಂದಪುರ ಸಮೀಪ ಭೀಕರ ಅಪಘಾತ ಸ್ಥಳದಲ್ಲೇ ಓರ್ವ ಸಾವು…!!!

ಸಾಗರ : ತಾಲೂಕಿನ ಆನಂದಪುರ ಸಮೀಪದ ಗೌತಮಪುರದಲ್ಲಿ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿಕಾರಿಪುರದಿಂದ ಆನಂದಪುರದ ಕಡೆ ಬರುತ್ತಿದ್ದ ಬೈಕ್ ಹಾಗೂ ಆನಂದಪುರದಿಂದ ಶಿಕಾರಿಪುರ ಕಡೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಆನಂದಪುರ 112 ಪೊಲೀಸ್ ಸಿಬ್ಬಂದಿಗಳು ತೆರಳಿದ್ದಾರೆ. ಆನಂದಪುರ ನಿವಾಸಿ ಭೀಮೇಶ್ ( 42 ) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿ. ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ವೀಕ್ಷಿಸಿ ವಾಪಸ್ ಆಗುತ್ತಿದ್ದ ವೇಳೆ ನಡೆದ ದುರ್ಘಟನೆ ಇದಾಗಿದೆ. ಇನ್ನೊಬ್ಬ ಸವಾರ ಪ್ರತಾಪ್ ಆನಂದಪುರ ರವರ ಎರಡು ಕಾಲುಗಳು ಮುರಿದಿದ್ದು ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿದೆ.

ಕೊಟ್ಟಿಗೆಯಲ್ಲಿ 12 ಅಡಿಯ ಕಾಳಿಂಗ ಸರ್ಪ

ಶಿವಮೊಗ್ಗ : ತಾಲೂಕಿನ ಸಿರಿಗೆರೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ ಹಿಡಿಯಲಾಗಿದೆ. ಚಂದ್ರಶೇಖರಪ್ಪ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಲಾಗಿತ್ತು. ಉರಗ ರಕ್ಷಕ ಬೆಳ್ಳೂರು ನಾಗರಾಜ್‌ ಅವರು ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪ ಸೆರೆ ಹಿಡಿದಿದ್ದಾರೆ. ಈ ಕಾಳಿಂಗ ಸರ್ಪವು 12 ಅಡಿ ಉದ್ದ, 7.5 ಕೆ.ಜಿ ತೂಕವಿತ್ತು. ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲಾಯಿತು.

ರೈಲಿಗೆ ಸಿಲುಕಿದ ಎಮ್ಮೆ, ಇಂಟರ್‌ಸಿಟಿ 2 ಗಂಟೆ ವಿಳಂಬ

ಶಿವಮೊಗ್ಗ : ರೈಲಿಗೆ ಎಮ್ಮೆ ಸಿಲುಕಿದ್ದರಿಂದ ಬೆಂಗಳೂರು – ತಾಳಗುಪ್ಪ ರಾತ್ರಿ ರೈಲು ಎರಡು ಗಂಟೆ ವಿಳಂಬವಾಗಿದೆ. ಸೋಮಿನಕೊಪ್ಪ ಸಮೀಪ ಇಂಟರ್‌ಸಿಟಿ ರೈಲಿಗೆ ಕಳೆದ ರಾತ್ರಿ ಎಮ್ಮೆಯೊಂದು ಸಿಲುಕಿತ್ತು. ಇದನ್ನು ಗಮನಿಸಿ ಲೋಕೊ ಪೈಲೆಟ್‌ ರೈಲು ನಿಲ್ಲಿಸಿದ್ದರು. ರಾತ್ರಿ 10 ಗಂಟೆಗೆ ತಾಳಗುಪ್ಪ ತಲುಪಬೇಕಿದ್ದ ರೈಲು ರಾತ್ರಿ 12 ಗಂಟೆ ತಲುಪಿದೆ. ಇನ್ನು, ತಾಳಗುಪ್ಪ – ಮೈಸೂರು ರಾತ್ರಿ ಎಕ್ಸ್‌ಪ್ರೆಸ್‌ ರೈಲು ಕೂಡ 20 ನಿಮಿಷ ತಡವಾಗಿ ಸಂಚರಿಸಿತು.

Categories
ಅಡಿಕೆ-ದರ

ಇಂದಿನ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ

ಅಡಿಕೆ ದರ
(28-02-2024)
ಸರಕು 58800 74400
ಬೆಟ್ಟೆ 45069 54259
ರಾಶಿ 32259 48058
ಗೊರಬಲು 20069 33400
Nammur Express

Categories
ಬೆಂಗಳೂರು

ರಾಜ್ಯದಲ್ಲಿ ಭಾರಿ ಮಳೆ, ಗುಡುಗು ಮತ್ತು ಸಿಡಿಲು ಗ್ಯಾರಂಟಿ..!

ರಾಜ್ಯದಲ್ಲಿ ಭಾರಿ ಮಳೆ, ಗುಡುಗು ಮತ್ತು ಸಿಡಿಲು ಗ್ಯಾರಂಟಿ..!
– ಮಾರ್ಚ್ 1ರಿಂದ ಮಳೆ ಅಬ್ಬರ ಶುರು!
– ಹವಮಾನ ಇಲಾಖೆ ಮುನ್ಸೂಚನೆ

NAMMUR EXPRESS NEWS
ಬೆಂಗಳೂರು: ಮಳೆ.. ಮಳೆ.. ಮಳೆ.. ಹೀಗೆ ಮಳೆಗಾಗಿ ರೈತರು, ಜನರು ಕಾಯುತ್ತಾ ಕೂತಿದ್ದಾರೆ. ಆದರೂ ಈವರೆಗೂ ಮಳೆರಾಯ ಕರುಣೆ ತೋರಿಸುತ್ತಿಲ್ಲ. ಮಳೆ ಬಿಡಿ ಬೇಸಿಗೆ ಆರಂಭಕ್ಕೂ ಮೊದಲು ಈ ಸಮಯದಲ್ಲಿ ಕೊತ ಕೊತ ಕುದಿಯುವ ಬಿಸಿಲು ಇದೆ. ಹೀಗಾಗಿ ಜನರು ಕೂಡ ಪ್ರತಿನಿತ್ಯ ಭಾರಿ ದೊಡ್ಡ ಸಂಕಷ್ಟ ಎದುರಿಸುವಂತಾಗಿದೆ. ಹೀಗಿದ್ದಾಗ ಹವಾಮಾನ ಇಲಾಖೆಯಿಂದ ಗುಡ್ ನ್ಯೂಸ್ ಹೊರಬಿದ್ದಿದೆ, ಭಾರಿ ಮಳೆಯ ಮುನ್ಸೂಚನೆ ಕೂಡ ನೀಡಲಾಗಿದೆ! ಹಾಗಾದರೆ ಯಾವ ಯಾವ ಜಾಗದಲ್ಲಿ ಮಳೆ ಬೀಳಲಿದೆ ಗೊತ್ತಾ?ಬೇಸಿಗೆ ಕೊತ ಕೊತ ಕುದಿಯುತ್ತಿದೆ. ಅದರಲ್ಲೂ ಕಳೆದ ವರ್ಷ ಮಳೆಯ ಕೊರತೆ ಎದುರಾದ ಕಾರಣ, ಈಗ ಕುಡಿಯುವ ನೀರಿಗೆ ಕೂಡ ಬರ ಬಂದಿದೆ.

ಗ್ರಾಮೀಣ ಭಾಗದಲ್ಲಿ ಅಂದರೆ, ಹಳ್ಳಿ ಜನರಿಗೆ ನೀರು ತುಂಬಿಸುವುದೇ ಸಾಹಸ ಆಗಿದೆ. ಪರಿಸ್ಥಿತಿ ಹೀಗಿದ್ದಾಗ ಹವಾಮಾನ ಇಲಾಖೆಯ ಕಡೆಯಿಂದ ಭರ್ಜರಿ ಸುದ್ದಿ ಸಿಕ್ಕಿದೆ. ಮುಂದಿನ ಕೆಲ ದಿನ ಕಾಲ ಭರ್ಜರಿ ಮಳೆ ಬಿದ್ದು, ಭೂಮಿ ತಂಪಾಗುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿಯೆ ಜನ, ಅನ್ನದಾತ ರೈತರು ಈ ಸುದ್ದಿಯಿಂದ ನಿಟ್ಟುಸಿರನ್ನ ಬಿಡುತ್ತಿದ್ದಾರೆ. ಅಲ್ಲದೆ ಒಣಗುತ್ತಿರುವ ಬೆಳೆ ಉಳಿಸಿಕೊಳ್ಳುವ ಆತ್ಮವಿಶ್ವಾಸ ಹೊಂದಿದ್ದಾರೆ ನಮ್ಮ ರಾಜ್ಯದ ರೈತರು. ಕರ್ನಾಟಕದಲ್ಲಿ ಮಳೆ ಯಾವಾಗ?: ಚಳಿಗಾಲ ಮುಗಿದು ಇನ್ನೇನು ಬಿರು ಬೇಸಿಗೆ ಶುರುವಾಗುತ್ತಿದೆ, ಹೀಗಿದ್ದಾಗ ನೀರಿಗೆ ಎಲ್ಲಾ ಕಡೆಗೆ ಕೊರತೆ ಉಂಟಾಗಿದೆ.

ಜನ ಕೂಡ ನೀರು ಸಂಗ್ರಹಿಸಲು ಪರದಾಡುತ್ತಿದ್ದಾರೆ, ಈ ಹೊತ್ತಲ್ಲಿ ಮಳೆ ಬೀಳಬೇಕು ಅಂತಾ ಆಕಾಶ ನೋಡುವ ಸಮಯದಲ್ಲೇ ಮಾರ್ಚ್ 1 ರಿಂದ 3ರ ತನಕ ಭಾರಿ ಮಳೆ ಬೀಳುವ ಸೂಚನೆ ಸಿಕ್ಕಿದೆ. ಅದ್ರಲ್ಲೂ ಪಶ್ಚಿಮ ಹಿಮಾಲಯದ ತಪ್ಪಲಿನಲ್ಲಿ ದೊಡ್ಡ ಪ್ರಮಾಣದ ಹವಾಮಾನ ಬದಲಾವಣೆ ಉಂಟಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆ ಬೀಳುವ ಸೂಚನೆ ಸಿಕ್ಕಿದೆ. ನದಿ ಹರಿಯುವ ಹಳ್ಳಿಗಳಲ್ಲೇ ನೀರಿಗೆ ಬರ ಎದುರಾಗಿದೆ, ಹಾಗೇ ಬೋರ್ ಕೂಡ ಬತ್ತಿ ಹೋಗುತ್ತಿವೆ. ಇದೇ ಕಾರಣಕ್ಕೆ ಜನರು ಕೂಡ ಪರದಾಡುತ್ತಿದ್ದಾರೆ. ಹೀಗಾಗಿ ಮಳೆಗೆ ಮೊರೆ ಇಟ್ಟಿದ್ದರು. ಹವಾಮಾನ ಇಲಾಖೆ ಇದೀಗ ನೀಡುತ್ತಿರುವ ಮಾಹಿತಿ ಪ್ರಕಾರ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿ ಜನ ಕೂಡ ಖುಷಿಯಿಂದ ಕಾಯುತ್ತಿದ್ದಾರೆ.

Categories
ತೀರ್ಥಹಳ್ಳಿ

ಶ್ರೀ ಕ್ಷೇತ್ರ ಹೆಗಲತ್ತಿ ಅಮ್ಮನವರ 9ನೇ ವರ್ಷದ ಜಾತ್ರಾ ಮಹೋತ್ಸವ.!

ಶ್ರೀ ಕ್ಷೇತ್ರ ಹೆಗಲತ್ತಿ ಅಮ್ಮನವರ 9ನೇ ವರ್ಷದ ಜಾತ್ರಾ ಮಹೋತ್ಸವ.!
– 9 ಪಲ್ಲಕ್ಕಿ ದೇವರ ಉತ್ಸವಕ್ಕೆ ಭಂಡಾರದ ಮೆರವಣಿಗೆಯೊಂದಿಗೆ ಸ್ವಾಗತ
– ಮಡಿಲಕ್ಕಿ ಸೇವೆ ಮಾಡುವ ಮೂಲಕ ಆಶೀರ್ವಾದ ಪಡೆದ ಗ್ರಾಮಸ್ಥರು

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಶ್ರೀ ನಾಗಯಕ್ಷೆ ದೇವಾಲಯ ಶ್ರೀ ಕ್ಷೇತ್ರ ಹೆಗಲತ್ತಿಯಲ್ಲಿ ಹೆಗಲತ್ತಿ ಅಮ್ಮನವರ 9ನೇ ವರ್ಷದ ಜಾತ್ರಾ ಮಹೋತ್ಸವವನ್ನು ದಿನಾಂಕ: 21-02-2024 ರಿಂದ 25-02-2024ರ ಐದು ದಿನಗಳವರೆಗೆ ಯಶಸ್ವಿಯಾಗಿ ನಡೆಸಲಾಯಿತು. ನವ 9 ಪಲ್ಲಕ್ಕಿ ದೇವರ ಉತ್ಸವಕ್ಕೆ ಭಂಡಾರದ ಮೆರವಣಿಗೆಯೊಂದಿಗೆ ಸ್ವಾಗತ ಮಾಡಲಾಯಿತು. ಮಾಳೂರು ಸೀಮೆ ಶ್ರೀ ಗುತ್ತಿಯಮ್ಮ ಶ್ರೀ ಕ್ಷೇತ್ರ ಗುತ್ತಿಯಡೆಹಳ್ಳಿ , ಶ್ರೀಗುತ್ತಿಯಮ್ಮ ಶ್ರೀ ಕ್ಷೇತ್ರ ಸೋಮವಾರ ಸಂತೆ ಹೊಸಳ್ಳಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಶ್ರೀ ಕ್ಷೇತ್ರ ಸಮಕಾನೆ, ಶ್ರೀ ಗಾಳಿ ಮಾರಮ್ಮ ಮಾಳೂರು ಸೀಮೆ ಶ್ರೀ ಕ್ಷೇತ್ರ ಮಾಳೂರು, ಶ್ರೀ ಚಾಮುಂಡೇಶ್ವರಿ ಅಮ್ಮನವರು ಶ್ರೀ ಕ್ಷೇತ್ರ ಅಲಬಳ್ಳಿ, ಕುಮಾರರಾಮ ಗ್ರಾಮದೇವರು ಶ್ರೀ ಕ್ಷೇತ್ರ ಕೀಗಡಿ, ಗುತ್ತಿಯಮ್ಮ ಮತ್ತು ದುರ್ಗಮ್ಮ ಶ್ರೀ ಕ್ಷೇತ್ರ ಮಂಡಗದ್ದೆ, ಶ್ರೀ ಚಾಮುಂಡೇಶ್ವರಿ ಅಮ್ಮನವರು ಶ್ರೀ ಕ್ಷೇತ್ರ ಮಂಡಗದ್ದೆ, ಶ್ರೀ ಕುಟ್ಟಲುಗಾರಮ್ಮ ಶ್ರೀ ಕ್ಷೇತ್ರ ಕನ್ನಂಗಿ 9 ಪಲ್ಲಕ್ಕಿ ದೇವರುಗಳ ವಿಶೇಷ ಪೂಜೆ, ಹೋಮ, ಹವನಗಳು ಹಾಗೂ ಬೆಳಕಿನ ಸೇವೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. ಸುತ್ತಮುತ್ತಲ ಗ್ರಾಮದ ಪ್ರತಿ ಮನೆಯಿಂದ ದೇವಿಯರಿಗೆ ಮಡಿಲಕ್ಕಿ ಸೇವೆ ಮಾಡುವುದರ ಮೂಲಕ ದೇವಿಯ ಆಶೀರ್ವಾದ ಪಡೆದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕು ಪ್ರಥಮ ಜಾನಪದ ಸಮ್ಮೇಳನ ಸಂಭ್ರಮ.!

ತೀರ್ಥಹಳ್ಳಿ ತಾಲೂಕು ಪ್ರಥಮ ಜಾನಪದ ಸಮ್ಮೇಳನ ಸಂಭ್ರಮ.!
– ಅತ್ಯಂತ ಅದ್ಧೂರಿಯಾಗಿ ನಡೆದ ಕಾರ್ಯಕ್ರಮ
– ಅನೇಕ ಗಣ್ಯರ ಉಪಸ್ಥಿತಿ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ತಾಲೂಕು ಮಟ್ಟದ ಪ್ರಥಮ ಜಾನಪದ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಮಂಗಳವಾರ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಸಲಾಯಿತು. ತಾಲೂಕು ಕಚೇರಿ ಆವರಣದಲ್ಲಿ ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಬಿ ಗಣಪತಿಯವರು ಜಾನಪದ ಪರಿಷತ್ ಸಮ್ಮೇಳನದ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ತಾಲೂಕು ಜಾನಪದ ಸಮ್ಮೇಳನಾಧ್ಯಕ್ಷರಾದ ಉಬ್ಬೂರು ರಾಮಣ್ಣ, ಮತ್ತು ತಾಲೂಕು ಜಾನಪದ ಪರಿಷತ್ ಅಧ್ಯಕ್ಷರಾದ ಲೀಲಾವತಿ ಜಯಶೀಲ ಅವರನ್ನು ಅದ್ಧೂರಿಯಾಗಿ ಹಾಗೂ ಗೌರವ ಪೂರ್ವಕವಾಗಿ ಗೋಪಾಲಗೌಡ ರಂಗಮಂದಿರಕ್ಕೆ ಕರೆತರಲಾಯಿತು. ನಂತರ ಗೋಪಾಲಗೌಡ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೊದಲನೆಯದಾಗಿ ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಲೆನಾಡಿನ ಹೆಸರಾಂತ ಅಂಟಿಗೆ ಪಿಂಟಿಗೆ ಹಾಡಿನ ಮೂಲಕ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಡಿ ಮಂಜುನಾಥ್ ಅವರು ಕಾರ್ಯಕ್ರಮದ ಕುರಿತು ಇಂದು ಜಾನಪದ ಸಮ್ಮೇಳನ ನಡೆಯಲು ಬಹುಶಃ ಕಾರಣವಾಗಿರುವುದು ಡಾ. ಎಚ್ ಎಲ್ ನಾಗೇಗೌಡ ಅವರು. ಅವರು ಇಡೀ ಭಾರತ ಮತ್ತು ವಿಶ್ವದಲ್ಲಿ ಜಾನಪದ ಉಳಿವಿಗಾಗಿ ಒಂದು ಸಂಘಟನೆಯನ್ನು ಮಾಡಿ ಜಾನಪದ ಲೋಕವನ್ನು ಸೃಷ್ಟಿ ಮಾಡಿದವರು. ಅವರು ನಮ್ಮ ಜೊತೆ ಇಲ್ಲ ಆದರೆ ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರುವಂತಹ ಪ್ರಯತ್ನವನ್ನು ನಾಡಿನಾದ್ಯಂತ ಕರ್ನಾಟಕ ಜಾನಪದ ಪರಿಷತ್ತು ಮಾಡುತ್ತಿದೆ ಎನ್ನುವುದಕ್ಕೆ ತೀರ್ಥಹಳ್ಳಿ ತಾಲೂಕಿನ ಪ್ರಥಮ ಜಾನಪದ ಸಮ್ಮೇಳನ ಸಾಕ್ಷಿ ಎಂದರು. ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಮಾತನಾಡಿ ಜಾನಪದ ಸಾಹಿತ್ಯ ಗ್ರಾಮೀಣ ಭಾಗದಿಂದ ಬಂದಿದ್ದು ಹೆಮ್ಮೆ.

ಇಂದಿಗೂ ಸಾಹಿತ್ಯ ಹಾಗೂ ಜಾನಪದ ಪರಿಷತ್ತು ಉಳಿಸಿಕೊಂಡು ಬಂದಿರುವುದು ಖುಷಿಯ ವಿಚಾರ. ಸಾಹಿತಿಗಳು ವಿಜ್ಞಾನಿಗಳಿಗಿಂತಲೂ ಬುದ್ಧಿವಂತರು. ಸಾಹಿತ್ಯದ ಮೂಲಕ ಎಷ್ಟು ವಿಷಯಗಳನ್ನು ಜನರಿಗೆ ತಲುಪಿಸುವ ಜಾಣ್ಮೆ ಅವರಿಗೆ ಇದೆ ಎಂದರು. ನಂತರ ಗಣ್ಯರಿಂದ ಪುಸ್ತಕಬಿಡುಗಡೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಆಗಮಿಸಿದ ಜಾನಪದ ಕಲಾವಿದರಾದ ಉಬ್ಬುರು ರಾಮಣ್ಣ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷರಾದ ಲೀಲಾವತಿ ಜಯಶೀಲ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹ್ಯಾದ್ರಿ ವಾರ್ತೆ ಸಂಪಾದಕರಾದ ಬಿ ಗಣಪತಿ, ಜಿಲ್ಲಾ ಜಾನಪದಪರಿಷತ್ ಅಧ್ಯಕ್ಷರಾದ ಡಿ ಮಂಜುನಾಥ್, ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆರವೇರಿಸಿದ ಎಂ ಪಿ ದೇವಪ್ಪ, ಜಾನಪದ ಸಮ್ಮೇಳನದ ಸಭಾಧ್ಯಕ್ಷರಾದ ಶಿವಪ್ಪನವರು ಈಸೂರು,ಪ ಪಂ ಅಧ್ಯಕ್ಷರಾದ ಗೀತಾ ರಮೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಮೇಶ್ ಶೆಟ್ಟಿ, ತಾ. ಪಂ ಕಾರ್ಯನಿರ್ವಹಣಾಧಿಕಾರಿ ಶೈಲಾ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು ಹೆಚ್ ಏನ್ ಈಶ್ವರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


Categories
ಕರಾವಳಿ ರಾಜ್ಯ

4 ಮಂದಿ ವಿದ್ಯಾರ್ಥಿಗಳ ಶವ ಪತ್ತೆ!

4 ಮಂದಿ ವಿದ್ಯಾರ್ಥಿಗಳ ಶವ ಪತ್ತೆ!
– ಸುರತ್ಕಲ್‌ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಮೃತದೇಹ
– ನದಿಯ ದಡದಲ್ಲಿ ಮಕ್ಕಳ ಶವ

NAMMUR EXPRESS NEWS
ಸುರತ್ಕಲ್: ನಾಪತ್ತೆಯಾಗಿದ್ದ ಸುರತ್ಕಲ್‌ನ ಖಾಸಗಿ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಮೃತದೇಹ ಹಳೆಯಂಗಡಿಯ ಕೊಪ್ಪಳ ಅಣೆಕಟ್ಟಿನ ರೈಲ್ವೆ ಸೇತುವೆ ಕೆಳಭಾಗದ ನದಿಯಲ್ಲಿ ಪತ್ತೆಯಾಗಿದೆ ಮೃತ ಮಕ್ಕಳನ್ನು ಯಶ್ಚಿತ್ , ಹಳೆಯಂಗಡಿ ತೋಕೂರು ನಿವಾಸಿ ವಸಂತ್ ಅವರ ಪುತ್ರ ರಾಘವೇಂದ್ರ ವಿಶ್ವನಾಥ್ ಅವರ ಪುತ್ರ ನಿರೂಪ್, ದೇವದಾಸ್ ಅವರ ಮಗ ಅನ್ನಿತ್(15) ಎಂದು ಗುರುತಿಸಲಾಗಿದೆ.

ಏನಿದು ಕೇಸ್?

ಖಾಸಗಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು, ಮಂಗಳವಾರ ಎಸ್.ಎಸ್.ಎಲ್ ಸಿ ಇಂಗ್ಲಿಷ್ ಪೂರ್ವಸಿದ್ಧತಾ ಪರೀಕ್ಷೆ ಬರೆದ ಬಳಿಕ 1:30ರ ನಂತರ ನಾಪತ್ತೆಯಾಗಿದ್ದರು. ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದಿದ್ದ ಸುರತ್ನ ಲ್ ಠಾಣಾ ಪೊಲೀಸರು, ಶಾಲೆ ಮತ್ತು ಬಸ್ ನಿಲ್ದಾಣದ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿಕೊಂಡಿದ್ದರು. ವಿದ್ಯಾರ್ಥಿಗಳು ಸುರತ್ಕಲ್ ಬಸ್ ನಿಲ್ದಾಣದಿಂದ ಬಸ್ ಹತ್ತಿ ಹಳೆಯಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದಿರುವುದನ್ನು ಪತ್ತೆಹಚ್ಚಿದ್ದರು.

ಜೊತೆಗೆ ವಿದ್ಯಾರ್ಥಿಯೋರ್ವನ ಬಳಿ ಇತ್ತೆನ್ನಲಾದ ಮೊಬೈಲ್ ಟವರ್ ಲೋಕೇಶನ್ ಆಧರಿಸಿ ವಿದ್ಯಾರ್ಥಿಗಳು ನದಿಯ ದಡಕ್ಕೆ ಬಂದಿರುವುದನ್ನು ಖಚಿತ ಪಡಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನದಿಯ ದಡದಲ್ಲಿ ಮಕ್ಕಳ ಶಾಲೆಯ ಚೀಲಗಳು, ಚಪ್ಪಲಿ ಶಾಲೆಯ ಸಮವಸ್ತ್ರಗಳು ಪತ್ತೆಯಾಗಿವೆ. ಎಲ್ಲಾ ಶವಗಳನ್ನು ಮರಣೋತ್ತರ ಪರೀಕ್ಷೆ ಗಾಗಿ ನಗರದ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.