Categories
ರಾಷ್ಟ್ರೀಯ ವಾರ್ತೆ ವೈರಲ್ ವೀಡಿಯೊಗಳು

ಇಲ್ಲೊಂದು ಅಚ್ಚರಿ – ಪುಸ್ತಕಗಳಿಗಾಗಿ 1 ಕೋಟಿ ಖರ್ಚು ಮಾಡಿದ ಶಿಕ್ಷಕ

ಇಲ್ಲೊಂದು ಅಚ್ಚರಿ..!
– ಪುಸ್ತಕಗಳಿಗಾಗಿ 1 ಕೋಟಿ ಖರ್ಚು ಮಾಡಿದ ಶಿಕ್ಷಕ
– ಕೋಲ್ಕತ್ತಾ ಪುಸ್ತಕ ಮೇಳದಿಂದ 3 ಲಕ್ಷ ರೂ. ಪುಸ್ತಕ ಖರೀದಿ

NAMMUR EXPRESS NEWS
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚಕ್ದಾಹ್‌ನ ಶಿಕ್ಷಕರೊಬ್ಬರು ಕೋಲ್ಕತ್ತಾ ಪುಸ್ತಕ ಮೇಳದಿಂದ 3 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಸುದ್ದಿಯಾಗಿದ್ದಾರೆ . ಇವರ ಮನೆಯಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ ಪುಸ್ತಕಗಳಿವೆ. ಹೌದು, ಇದು ನಿಜ. ಈ ವರ್ಷ ನಾನು ಕೋಲ್ಕತ್ತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಿಂದ 3.36 ಲಕ್ಷ ರೂಪಾಯಿಗಳ ಪುಸ್ತಕಗಳನ್ನು ಖರೀದಿಸಿದ್ದೇನೆ” ಎಂದು ಶಿಕ್ಷಕ ದೇಬಾರತ ಚಟ್ಟೋಪಾಧ್ಯಾಯ ಹೇಳಿದ್ದಾರೆ. ಪುಸ್ತಕಗಳನ್ನು ಖರೀದಿಸಲು ನನ್ನ ವಿದ್ಯಾರ್ಥಿಗಳೊಂದಿಗೆ ಎಂಟು ಬಾರಿ ಮೇಳಕ್ಕೆ ಭೇಟಿ ನೀಡಿದ್ದೇನೆ. ಪ್ರಾಮಾಣಿಕವಾಗಿ, ಎಷ್ಟು ಪುಸ್ತಕಗಳನ್ನು ಖರೀದಿಸಿದ್ದೇನೆ ಎಂಬುದು ನನಗೆ ನಿಜವಾಗಿಯೂ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾದ ಚಟ್ಟೋಪಾಧ್ಯಾಯ ಪುಸ್ತಕಗಳ ಮೇಲೆ ಹಣ ಚೆಲ್ಲುತ್ತಿರುವುದು ಇದೇ ಮೊದಲಲ್ಲ. ಅವರು ಕೋಲ್ಕತ್ತಾದ ಕಾಲೇಜ್ ಸ್ಟ್ರೀಟ್‌ನ ನಿಯಮಿತ ಅತಿಥಿ. ಇದು ಹೊಸ ಮತ್ತು ಹಳೆಯ ಪುಸ್ತಕಗಳ ಸಂಗ್ರಹಕ್ಕೆ ಹೆಸರುವಾಸಿಯಾದ ಪ್ರದೇಶ. ಇಡೀ ವರ್ಷ ಉಳಿಸಿದ ಹಣವನ್ನು ಅವರು ಪುಸ್ತಕ ಮೇಳದಲ್ಲಿ ಶಾಪಿಂಗ್ ಮಾಡುತ್ತಾರೆ. ಭಾರಿ ಪ್ರಮಾಣದಲ್ಲಿ ಪುಸ್ತಕಗಳನ್ನು ಖರೀದಿಸುವುದು ಅವರ ನೆಚ್ಚಿನ ಚಟುವಟಿಕೆ. “ಕಾಲೇಜ್ ಸ್ಟ್ರೀಟ್‌ನಲ್ಲಿ ಪುಸ್ತಕಗಳ ನಡುವೆ ಗಂಟೆಗಳನ್ನು ಕಳೆಯುವುದು ನನ್ನ ನೆಚ್ಚಿನ ಕೆಲಸ. ಕೋಲ್ಕತ್ತಾ, ದೆಹಲಿ, ಮುಂಬೈ ಮತ್ತು ಇತರ ಮೆಟ್ರೋ ನಗರಗಳ ಪ್ರಕಾಶಕರು ನನ್ನ ಸ್ನೇಹಿತರು. ಅವರು ಹೊಸ, ಅಪರೂಪದ ಪುಸ್ತಕಗಳನ್ನು ಪಡೆಯಲು ಮತ್ತು ಹೊಸ ಲೇಖಕರನ್ನು ಹುಡುಕಲು ನನಗೆ ಸಹಾಯ ಮಾಡುತ್ತಾರೆ” ಎನ್ನುತ್ತಾರೆ ಚಟ್ಟೋಪಾಧ್ಯಾಯ.


ದೇಬಾರತ ಬಳಿ ನಿಜವಾಗಿಯೂ ಎಷ್ಟು ಪುಸ್ತಕಗಳು ಇವೆ? “ಚಕ್ಡಾ ಮತ್ತು ರಾಣಾಘಾಟ್‌ನಲ್ಲಿರುವ ನನ್ನ ಮನೆಯಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ 14,000 ಪುಸ್ತಕಗಳಿವೆ. ನನ್ನ ಮನೆಯಲ್ಲಿ ಪುಸ್ತಕಗಳಿಂದ ತುಂಬಿರುವ ಕೋಣೆ ಇದೆ. ಅಲ್ಲಿ ಯಾರು ಬೇಕಿದ್ದರೂ ಬಂದು ಪುಸ್ತಕಗಳನ್ನು ಓದಬಹುದು, ಟಿಪ್ಪಣಿಗಳನ್ನು ಮಾಡಿಕೊಳ್ಳಬಹುದು” ಎನ್ನುತ್ತಾರೆ.

Categories
ಅಡಿಕೆ-ದರ

ಇಂದಿನ ಅಡಿಕೆ ಧಾರಣೆ

ಅಡಿಕೆ ದರ
( 05-02-2024 )
ಸರಕು 41000 81896
ಬೆಟ್ಟೆ 41199 54569
ರಾಶಿ 35009 49111
ಗೊರಬಲು 16519 35619
Nammur Express

Categories
ಬೆಂಗಳೂರು ರಾಜ್ಯ

ರಾಜ್ಯಕ್ಕೆ ರಾಜಕೀಯ ಚಾಣಕ್ಯ ಅಮಿತ್‌ ಶಾ ಎಂಟ್ರಿ!

ರಾಜ್ಯಕ್ಕೆ ರಾಜಕೀಯ ಚಾಣಕ್ಯ ಅಮಿತ್‌ ಶಾ ಎಂಟ್ರಿ!
– 2 ದಿನ ರಾಜ್ಯ ಪ್ರವಾಸ: ಬಿಜೆಪಿ ಮಾಸ್ಟರ್ ಪ್ಲಾನ್
– ಲೋಕಸಭಾ ಚುನಾವಣೆ ಘೋಷಣೆ ಸಾಧ್ಯತೆ

NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆ ಯಾವುದೇ ಕ್ಷಣದಲ್ಲಾದರೂ ಘೋಷಣೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ರಣತಂತ್ರ ಹೆಣೆಯಲು ಸಿದ್ಧತೆ ನಡೆಸಿದೆ. ಈ ವಿಚಾರವಾಗಿ ರಾಜ್ಯಕ್ಕೆ ಮೂವರು ನಾಯಕರು ಭೇಟಿ ನೀಡಲಿದ್ದಾರೆ. ಫೆ 10 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ. ಫೆಬ್ರವರಿ 10 ಮತ್ತು 11ರಂದು ಕರ್ನಾಟಕದಲ್ಲಿ ಅಮಿತ್ ಶಾ ಪ್ರವಾಸ ಕೈಗೊಳ್ಳಲಿದ್ದು ಚುನಾವಣೆಗೆ ರಣತಂತ್ರ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಹುಬ್ಬಳ್ಳಿಗೆ ಅಮಿತ್ ಶಾ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಕ್ಲಸ್ಟ‌ರ್ ಸಭೆಗಳನ್ನು ಮೂರು ನಾಯಕರು ನಡೆಸಲಿದ್ದಾರೆ.

28 ಲೋಕಸಭಾ ಕ್ಷೇತ್ರಗಳನ್ನು ಎಂಟು ಸಂಘಟನಾ ಕ್ಲಸ್ಟರ್‌ಗಳಾಗಿ ವಿಂಗಡಣೆ ಮಾಡುವ ಕುರಿತು ಒಂದು ಬಾರಿಯ ಭೇಟಿಯ ವೇಳೆ 2 ಕ್ಲಸ್ಟರ್ ಗಳ ಸಭೆ ನಡೆಸಲಿದ್ದಾರೆ ಎಂದು ಹೇಳಲಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಲೋಕಸಭಾ ಚುನಾವಣೆಯ ಸಿದ್ಧತೆ ಸೇರಿದಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಹಿನ್ನೆಲೆಯಲ್ಲಿ ಸ್ಥಾನಗಳ ಹಂಚಿಕೆ ಹಾಗೂ ಕೆಲವು ಹಿರಿಯ ನಾಯಕರ ಅಹ ವಾಲುಗಳ ಬಗ್ಗೆ ಅಮಿತ್ ಶಾ ಅವರು ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸುವ ನಿರೀಕ್ಷೆ ಇದೆ ಎನ್ನಲಾಗಿದೆ.

ಅಲ್ಲದೆ 11 ರಂದು ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದು, ಅದೇ ವೇಳೆ ಕಾಂಗ್ರೆಸ್ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರ ಹೆಸರಿನ ಅತಿಥಿಗೃಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಮಿತ್ ಶಾ ಅವರು ಆಗಮಿಸುತ್ತಿದ್ದು, ಇದೇ ವೇಳೆ ಬೆಂಗಳೂರಿನಲ್ಲಿ ರಾಜ್ಯ ನಾಯಕರೊಂದಿಗೆ ಕೋರ್‌ಕಮಿಟಿ ಸಭೆ ನಡೆಸುವ ಸಂಭವವಿದೆ ಎನ್ನಲಾಗಿದೆ. ಇತ್ತೀಚೆಗೆ ರಾಜ್ಯ ಬಿಜೆಪಿಯ ನಾಯಕರಾದ ವಿ.ಸೋಮಣ್ಣ ಬಸನಗೌಡ ಪಾಟೀಲ್ ಯತ್ನಾಳ ಅವರು ಅಹವಾಲು ಹೊತ್ತು ದೆಹಲಿಗೆ ತೆರಳಿದ್ದ ವೇಳೆ ಅಮಿತ್ ಶಾ ಅವರು ಫೆಬ್ರವರಿಯಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ ವೇಳೆ ರಾಜ್ಯ ನಾಯಕರೊಂದಿಗೆ ಸಭೆ ನಡೆಸುತ್ತೇನೆ ಎಂಬ ಮಾಹಿತಿ ನೀಡಿದ್ದರು. ಹೀಗಾಗಿ, ಆ ಭೇಟಿ ಇದೇ ಆಗಬಹುದು ಎಂಬ ಮಾತು ಬಿಜೆಪಿ ಪಾಳಯದಿಂದ ಕೇಳಿಬರುತ್ತಿದೆ.

Categories
ರಾಷ್ಟ್ರೀಯ ವಾರ್ತೆ

ಗೋಬಿ ಮಂಚೂರಿಯನ್ ನಿಷೇಧ!

ಗೋಬಿ ಮಂಚೂರಿಯನ್ ನಿಷೇಧ!
– ಇನ್ಮುಂದೆ ಮಾರಾಟ ಮಾಡಿದ್ರೆ ಲೈಸೆನ್ಸ್ ಕ್ಯಾನ್ಸಲ್
– ಗೋವಾದಲ್ಲಿ ಗೋಬಿ ನಿಷೇಧಿಸಲು ಕಾರಣ ಏನು?

NAMMUR EXPRESS NEWS
ನವದೆಹಲಿ: ಗೋಬಿ ಮಂಚೂರಿಯನ್ ಭಾರತದಲ್ಲಿ ಜನಪ್ರಿಯವಾಗಿರುವ ಒಂದು ಆಹಾರ ಪದಾರ್ಥವಾಗಿದೆ. ಹೂಕೋಸು ನಿಂದ ಮಾಡುವ ಈ ಆಹಾರವನ್ನು ಗೋಬಿ ಮಂಚೂರಿಯನ್ ಎಂದು ಕರೆಯಲಾಗುತ್ತದೆ. ಭಾರತೀಯ ಅಭಿರುಚಿಗೆ ತಕ್ಕಂತೆ ಚೀನೀ ಅಡಿಗೆ ಇದೆ. ಹೀಗಾಗಿ ಇದು ಸಖತ್ ಫೆಮಸ್ ಕೂಡಾ ಆಗಿದೆ.

ಆದರೆ ಇನ್ಮುಂದೆ ಭಾರತದ ಒಂದು ನಗರದಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವಂತೆ ಇಲ್ಲ. ಯಾಕೆ ಎನ್ನುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ. ಭಾರತದ ಯಾವುದೇ ನಗರ, ಪಟ್ಟಣಕ್ಕೆ ತೆರಳಿದರೂ ಗೋಬಿ ಮಂಚೂರಿಯನ್ ಬಾರಿ ಬೇಡಿಕೆ ಇದೆ. ಆದರೆ ಭಾರತದ ಜನಪ್ರಿಯ ಪ್ರವಾಸಿ ನಗರ ಗೋಬಿ ಮಂಚೂರಿಯನ್ ಮಾರಾಟ ನಿಷೇಧಿಸಿದೆ. ಗೋವಾದ ಮಪುಸಾ ನಗರದಲ್ಲಿ ಯಾರೂ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ ಗೋವಾದ ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ.

ಗೋಬಿ ನಿಷೇಧಿಸಲು ಕಾರಣ:

ನಗರದ ಆಡಳಿತ ವಿಭಾಗವೇ ಈ ಆದೇಶ ಹೊರಡಿಸಿದೆ. ಗೋವಾದ ಮಪುಸಾ ನಗರ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ನಗರ. ಕಳೆದ ಹಲವು ವರ್ಷಗಳಿಂದ ಮಪುಸಾ ಆಹಾರ ಇಲಾಖೆ ಫಾಸ್ಟ್ ಫುಡ್‌ ಸೆಂಟರ್, ಸ್ಟಾಲ್‌ಗಳಿಗೆ ನೋಟಿಸ್‌ ನೀಡುತ್ತಲೇ ಬಂದು, ಇದೀಗ ಗೋಬಿ ಮಂಚೂರಿಯನ್ ನಿಷೇಧಿಸಿದೆ. ಗೋಬಿಗೆ ಬಳಸುತ್ತಿರುವ ರಾಸಾಯನಿಕ, ಬಣ್ಣ ಹಾಗೂ ಶುಚಿತ್ವ, ನೈರ್ಮಲ್ಯದ ಬಗ್ಗೆ ಹಲವು ದೂರುಗಳು ದಾಖಲಾಗಿತ್ತು.

ಈ ಕುರಿತು ಆಹಾರ ಇಲಾಖೆ ದಾಳಿಗಳನ್ನು ನಡೆಸಿ ನೋಟಿಸ್ ನೀಡಿತ್ತು. ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ಸಭೆ ನಡೆಸಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ ನಿಯಮ ಉಲ್ಲಂಘನೆ ಮಾಡಿದ್ರೆ ಲೈಸನ್ಸ್‌ ರದ್ದು: ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿಗಳಲ್ಲಿ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿ ಗೋಬಿ ಮಂಚೂರಿಯನ್ ಮಾರಾಟ ಮಾಡಿದರೆ, ದುಬಾರಿ ದಂಡದ ಜೊತೆಗೆ ವ್ಯಾಪಾರದ ಲೈಸೆನ್ಸ್‌ ಕೂಡ ರದ್ದಾಗಲಿದೆ. ಇತ್ತ ಆಹಾರ ಇಲಾಖೆ ಅಧಿಕಾರಿಗಳು ದಿಢೀ‌ರ್ ದಾಳಿಗಳನ್ನು ನಡೆಸುತ್ತಿದ್ದಾರೆ.

Categories
ಬೆಂಗಳೂರು ರಾಜ್ಯ

ಕರ್ನಾಟಕದಲ್ಲಿ ಮಂಗನ ಜ್ವರ ಹೆಚ್ಚಳ..!

ಕರ್ನಾಟಕದಲ್ಲಿ ಮಂಗನ ಜ್ವರ ಹೆಚ್ಚಳ..!
– ಭಾನುವಾರ ಒಂದೇ ದಿನ 11 ಜನರಿಗೆ ಪಾಸಿಟಿವ್!
– ತೀರ್ಥಹಳ್ಳಿಯಲ್ಲಿ 3 ಜನರಲ್ಲಿ ಕೆಎಫ್‌ ಡಿ ಸೋಂಕು ಪತ್ತೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಮಂಗನ ಖಾಯಿಲೆ ಸೋಂಕು ಪ್ರಕರಣ ಹೆಚ್ಚಾಗಿದ್ದು, ಭಾನುವಾರ ಒಂದೇ ದಿನದಲ್ಲಿ 11 ಜನರಿಗೆ ಪಾಸಿಟಿವ್ ವರದಿ ಬಂದಿದೆ. ಭಾನುವಾರ ಒಟ್ಟು 18 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ರಾಜ್ಯದಲ್ಲಿ ಕೆಎಫ್ ಡಿ ಬಾಧಿತರ ಸಂಖ್ಯೆ ಒಟ್ಟು 68ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ ಒಟ್ಟು 37 ಸಕ್ರಿಯ ಪ್ರಕರಣಗಳು ವರದಿ ಇದ್ದು, ತೀರ್ಥಹಳ್ಳಿಯಲ್ಲಿ 3, ಹೊಸನಗರದಲ್ಲಿ 8 ಜನರಲ್ಲಿ ಕೆಎಫ್‌ ಡಿ ಸೋಂಕು ದೃಢವಾಗಿದೆ. ಪಾಸಿಟಿವ್‌ ಇರುವ ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ರೈಲು ಡಿಕ್ಕಿಯಾಗಿ ಒಬ್ಬನ ಸಾವು
– ಬಂಟ್ವಾಳದಲ್ಲಿ ನಡೆದ ದುರಂತ
– ಅಕ್ರಮ ಗೋಮಾಂಶ ವಶ
– ಕೂಡಿಗೆ ಸೇತುವೆ ಬಳಿ ಅಪರಿಚಿತ ಯುವಕನ ಶವ ಪತ್ತೆ

NAMMUR EXPRESS NEWS
ಬಂಟ್ವಾಳ: ರೈಲು ಡಿಕ್ಕಿಯಾಗಿ ಕೂಲಿ ಕಾರ್ಮಿಕನೋರ್ವ ಸ್ಥಳದಲ್ಲಿ ಮೃತಪಟ್ಟ ಬಿಸಿರೋಡು ಸಮೀಪದ ಮಾರ್ನಬೈಲು ಎಂಬಲ್ಲಿ ನಡೆದಿದೆ. ಹರಿಶ್ಚಂದ್ರ ಮೃತಪಟ್ಟ ವ್ಯಕ್ತಿ.ಕೂಲಿ ಕಾರ್ಮಿಕನಾಗಿರುವ ಹರಿಶ್ಚಂದ್ರ ರೈಲ್ವೆ ಹಳಿಯನ್ನು ದಾಟುವ ಉದ್ದೇಶದಿಂದ ನಿಂತಿದ್ದ ವೇಳೆ ರೈಲು ಡಿಕ್ಕಿ ಹೊಡೆದಿರಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ ಗಾಯಾಳನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಡಿಕ್ಕಿಯಾದ ಕೂಡಲೇ ರೈಲ್ವೆ ಇಲಾಖೆಯ ಹಳಿಯ ಕಾಮಗಾರಿ ನೋಡಿಕೊಳ್ಳುವ ಸಿಬ್ಬಂದಿಗಳಿಗೆ ಮಾಹಿತಿ ಸಿಕ್ಕಿದ್ದು, ಅವರು ಮಂಗಳೂರು ರೈಲ್ವೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೋಲೀಸ್ ಇಲಾಖೆಯ ಎ.ಎಸ್.ಐ.ಜಾನ್ ಕೊರಿಯ ಕೋಸ್ ಸ್ಥಳಕ್ಕೆ ಆಗಮಿಸಿ,ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯ ಮಾಹಿತಿ ಸಿಕ್ಕಿದಂತೆಹೊಯ್ಸಳ 112 ವಾಹನದ ಜೊತೆ ಎಎಸ್ ಐ ದೇವಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಅಕ್ರಮ ಗೋಮಾಂಶ ವಶ

ಬಿ.ಸಿ.ರೋಡು: ಅಕ್ರಮ ಗೋಮಾಂಸವನ್ನು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಕಲ್ಲಡ್ಕದಲ್ಲಿ ಇಂದು ಮುಂಜಾನೆ ನಡೆದಿದೆ. ಬಜರಂಗದಳ ಕಲ್ಲಡ್ಕ ಪ್ರಖಂಡದ ಮಾಹಿತಿ ಮೇರೆಗೆ ಇಂದು ಮುಂಜಾನೆ ಕಲ್ಲಡ್ಕ ಮದಕ ಬಳಿ ಬಿಸಿರೋಡ್ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಅಂದಾಜು 2 ಕಿಂಟ್ಬಾಲ್ ಗೋ ಮಾಂಸ, ಒಂದು ಆಟೋ, ಅಲ್ಲೋ ಕಾರು ಹಾಗೂ ಬೈಕ್ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಪೈಕಿ ಓರ್ವ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಕೂಡಿಗೆ ಸೇತುವೆ ಬಳಿ ಅಪರಿಚಿತ ಯುವಕನ ಶವ ಪತ್ತೆ

ಪಟ್ರಮೆ : ಧರ್ಮಸ್ಥಳದಿಂದ ಪಟ್ರಮೆಗೆ ಹೋಗುವ ಕೂಡಿಗೆ ಸೇತುವೆ ಅಡಿಯಲ್ಲಿ ಯುವಕನ ಶವ ನೀರಿನಲ್ಲಿ ಮುಳುಗಿರುವ ಸ್ಥಿತಿಯಲ್ಲಿ ಫೆ.4ರಂದು ಬೆಳಗ್ಗೆ ಕಂಡು ಬಂದಿದೆ.ಈ ಬಗ್ಗೆ ಪೊಲೀಸ್ ರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರ ತನಿಖೆಯಿಂದ ಶವದ ಗುರುತು ತಿಳಿಯಬೇಕಿದೆ

Categories
ಮಂಗಳೂರು

ಹರಕೆ ಕೋಲ ತೀರಿಸಿದ ಯು.ಟಿ ಖಾದರ್!

ಹರಕೆ ಕೋಲ ತೀರಿಸಿದ ಯು.ಟಿ ಖಾದರ್!
– ಕಲ್ಲುರ್ಟಿ-ಕಲ್ಕುಡ ದೈವಗಳ ಆಶೀರ್ವಾದ ವಿಧಾನ ಸಭಾಧ್ಯಕ್ಷ
– ಸರ್ವ ಧರ್ಮ ಪಾಲನೆಗೆ ಮಾದರಿಯಾದ ನಾಯಕ

NAMMUR EXPRESS NEWS
ಮಂಗಳೂರು: ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಕಾರಣಿಕದ ಪನೋಲಿಬೈಲು ದೈವಸ್ಥಾನದಲ್ಲಿ ಹರಕೆ ಕೋಲ ಒಪ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಪನೋಲಿಬೈಲ್‌ನಲ್ಲಿ ತುಳುನಾಡಿನ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಸಾನಿಧ್ಯವಿದೆ. ಜನರು ಇಷ್ಟಾರ್ಥ ಸಿದ್ದಿ ಮತ್ತಿತರ ಕಾರಣಗಳಿಗಾಗಿ ಇಲ್ಲಿ ಕೋಲದ ಹರಕೆ ಹೇಳಿಕೊಳ್ಳುತ್ತಾರೆ. ಹೆಸರು ನೋದಾಯಿಸಿಕೊಂಡ ಬಳಿಕ ಹರಕೆ ಕೋಲ ಬರಬೇಕಾದರೆ ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಯು.ಟಿ. ಖಾದರ್ ಭಾನುವಾರ ರಾತ್ರಿ ಪನೋಳಿಬೈಲ್‌ನಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಕೋಲ ಸೇವೆಯಲ್ಲಿ ಭಾಗಿಯಾದರು. ಸಂಪ್ರದಾಯ ಬದ್ಧವಾಗಿ ಕೋಲ ನೆರವೇರಿಸಿ ಕಲ್ಲುರ್ಟಿ-ಕಲ್ಕುಡ ದೈವಗಳ ಆಶೀರ್ವಾದ ಪಡೆದಿದ್ದಾರೆ.

Categories
ಮಲ್ನಾಡ್ ಶಿವಮೊಗ್ಗ

3 ಟನ್ ಗೋವಿನ ಮೂಳೆ ಪತ್ತೆ: ಆರೋಪಿ ಅರೆಸ್ಟ್!

3 ಟನ್ ಗೋವಿನ ಮೂಳೆ ಪತ್ತೆ: ಆರೋಪಿ ಅರೆಸ್ಟ್!
– ಭದ್ರಾವತಿಯಲ್ಲಿ ನಡೆದ ಘಟನೆ: ಏನಿದು ಘಟನೆ?
– ಮರದ ಹರೆ ಕಡಿದಿದ್ದಕ್ಕೆ ಯುವಕರ ಮೇಲೆ ಹಲ್ಲೆ!
– ಸೇತುವೆ ಮೇಲಿಂದ ಹಳ್ಳಕ್ಕೆ ಉರುಳಿದ ಟಿಪ್ಪರ್‌
– ಆಕಸ್ಮಿಕ ಬೆಂಕಿ, ಮನೆ ಸಂಪೂರ್ಣ ಭಸ್ಮ
– 3 ಟನ್ ಗೋವಿನ ಮೂಳೆ ಪತ್ತೆ: ಅರೆಸ್ಟ್

NAMMUR EXPRESS NEWS
ಶಿವಮೊಗ್ಗ: ಖಬರಸ್ಥಾನದಲ್ಲಿದ್ದ ಮರಗಳನ್ನು ಕಡಿದ ಆರೋಪದಲ್ಲಿ ಯುವಕರ ಮೇಲೆ ಇನ್ನೊಂದು ಸಮುದಾಯದ ಯುವಕರು ಹಲ್ಲೆ ನಡೆಸಿರುವ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಂಬರಘಟ್ಟ ಗ್ರಾಮದಲ್ಲಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಆರು ಯುವಕರನ್ನು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ ಕಡಿದಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಯುವಕರನ್ನು ಇನ್ನೊಂದು ಯುವಕರ ಗುಂಪು ಇಟ್ಟುಕೊಂಡಿತ್ತು. ವಿಷಯ ತಿಳಿದು ಯುವಕರನ್ನು ಬಿಡಿಸಿಕೊಂಡು ಬರಲು ಹಿಂದು ಯುವಕರ ಗುಂಪು ಹೋಗಿದೆ.

ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಘಟನೆಯಲ್ಲಿ 6 ಯುವಕರು ಗಾಯಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಾಳುಗಳನ್ನು ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪೊಲೀಸ್‌ ಠಾಣೆ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜನರು ಸೇರಿ, ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸೇತುವೆ ಮೇಲಿಂದ ಹಳ್ಳಕ್ಕೆ ಉರುಳಿದ ಟಿಪ್ಪರ್‌!

ಹೊಳೆಹೊನ್ನೂರು : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಸೇತುವೆಯಿಂದ ಹಳ್ಳಕ್ಕೆ ಬಿದ್ದಿದೆ. ಅದೃಷ್ಟವಶಾತ್‌ ಲಾರಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆನವೇರಿ ಸಮೀಪದ ಮತ್ತಿಹಳ್ಳ ಸೇತುವೆ ಮೇಲಿಂದ ಲಾರಿ ಕೆಳಗೆ ಬಿದ್ದಿದೆ. ಎದುರಿನಿಂದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಲಾರಿ ಚಾಲಕ ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಸೇತುವೆಯಿಂದ ಹಳ್ಳಕ್ಕೆ ಉರುಳಿದೆ ಎನ್ನಲಾಗಿದೆ. ಬಿದ್ದ ರಭಸಕ್ಕೆ ಚಕ್ರಗಳು ಕಳಚಿಕೊಂಡು, ಲಾರಿ ಜಖಂ ಆಗಿದೆ. ಎರಡು ಕ್ರೇನ್‌ಗಳನ್ನು ಬಳಸಿ ಭಾನುವಾರ ಲಾರಿಯನ್ನು ಮೇಲೆತ್ತಲಾಯಿತು. ಕಾರ್ಯಾಚರಣೆಯನ್ನು ವೀಕ್ಷಿಸಲು ಈ ಭಾಗದಲ್ಲಿ ದೊಡ್ಡ ಸಂಖ್ಯೆಯ ಜನ ಸೇರಿದ್ದರು.

ಆಕಸ್ಮಿಕ ಬೆಂಕಿ, ಮನೆ ಸಂಪೂರ್ಣ ಭಸ್ಮ!

ಶಿವಮೊಗ್ಗ ನಗರದ ನ್ಯೂಮಂಡ್ಲಿಯ ಇಲಿಯಾಜ್ ನಗರದಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಹೆಂಚಿನ ಮನೆ ಸಂಪೂರ್ಣ ಕರಕಲಾಗಿದೆ. ಇಡಿ ಮನೆಯೇ ಕುಸಿದು ಬಿದ್ದಿದೆ. ಇಲಿಯಾಜ್ ನಗರದ ಶಿವಾನಂದ್ ಎಂಬುವರಿಗೆ ಈ ಮನೆ ಸೇರಿದ್ದು ಬೆಂಕಿಯ ಶಾಖಕ್ಕೆ ಇಡೀ ಮನೆಯೇ ಉರಿದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಲಕ್ಷಂತರ ರೂ. ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. 1.5 ಲಕ್ಷ ರೂ. ನಗದು ಮತ್ತು 10 ತೊಲ ಬಂಗಾರದ ಆಭರಣಗಳು ಈ ಬೆಂಕಿಗೆ ಆಹುತಿಯಾಗಿದೆ ಎನ್ಬಲಾಗುತ್ತಿದೆ ಮನೆ, ನಗದು ಮತ್ತು ಚಿನ್ನಾಭರಣ ಸೇರಿ 5 ಲಕ್ಷ ರೂ.ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿಯವರು ಧಾವಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

3 ಟನ್ ಗೋವಿನ ಮೂಳೆ ಪತ್ತೆ!: ಓರ್ವ ಅರೆಸ್ಟ್!

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಹೊಳೆಹೊನ್ನೂರು ರಸ್ತೆಯ ಎಚ್‌ಎಂ ಟಿಂಬರ್ ಅಂಡ್ ಫರ್ನಿಚರ್ ಅಂಗಡಿ ಹಿಂಭಾಗದಲ್ಲಿ ಮೂರು ಟನ್ ಗೋವಿನ ಮೂಳೆ ಪತ್ತೆಯಾಗಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ಘಟನೆ ಸಂಬಂಧ ಆರೋಪಿ ಮೋಮಿನ್ ಎಂಬಾತನನ್ನು ಬಂಧಿಸಿದ ಪೊಲೀಸರು. ಹಿಂದೂ ಸಂಘಟನೆ ಕಾರ್ಯಕರ್ತ ಅರಳಿಹಳ್ಳಿ ದೇವರಾಜ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ರಾಶಿ ರಾಶಿ ಗೋವಿನ ಮೂಳೆ ಪತ್ತೆ ಮಾಡಿದ್ದಾರೆ. ಭದ್ರಾನದಿಯ ತಟದಲ್ಲಿರುವ ತೋಟದಲ್ಲಿ ಅನಧಿಕೃತ ಕಟ್ಟಡದ ಮೇಲೆ ದಾಳಿ ನಡೆಸಿದ್ದ ಪೊಲೀಸರು.

ದಾಳಿ ವೇಳೆ ಗೋದಾಮಿನ ಒಳಗೆ ಹಾಗೂ ಹೊರಗೆ ಇದ್ದ ಗೋವಿನ ಮೂಳೆಗಳು ಹಾಗೂ ಮಾಂಸದ ತುಣುಕುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಸುಮಾರು 3ಟನ್ ತೂಕದ ಗೋವಿನ ಮೂಳೆಯ ಭಾಗವನ್ನು ಸಂಗ್ರಹಿಸಿಡಲಾಗಿತ್ತು. ಗೋಹತ್ಯೆ ನಿಷೇಧವಿದ್ದರೂ, ನಿರಂತರವಾಗಿ ಹತ್ಯೆ ಮಾಡಿ ಮೂಳೆ ಸಂಗ್ರಹಿಸಿರುವ ಶಂಕೆ. ಈ ಬಗ್ಗೆ ಹಿಂದೂಪರ ಸಂಘಟನೆ ಕಾರ್ಯಕರ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿದ್ದ ಪೊಲೀಸರಿಗೆ ಗೋವಿನ ಮೂಳೆ ಪತ್ತೆಯಾಗಿವೆ.

Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ಬ್ಯಾಂಕಲ್ಲಿ ಉದ್ಯೋಗ: ಯಾರು ಅರ್ಜಿ ಹಾಕಬಹುದು?

ಬ್ಯಾಂಕಲ್ಲಿ ಉದ್ಯೋಗ: ಯಾರು ಅರ್ಜಿ ಹಾಕಬಹುದು?
– 606 ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಫೆ.23ರಂದು ಕೊನೆ ದಿನ
– ಯೂನಿಯನ್‌ ಬ್ಯಾಂಕ್‌ ಹುದ್ದೆಗಳ ಭರ್ತಿಗೆ ಅರ್ಜಿ

NAMMUR EXPRESS NEWS
ಬೆಂಗಳೂರು: ಬ್ಯಾಂಕ್‌ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಗುರಿ. ಅದಕ್ಕಾಗಿ ಕಾಲೇಜು ದಿನಗಳಿಂದಲೇ ತಯಾರಿ ನಡೆಸುತ್ತಿರುತ್ತಾರೆ. ಇದೀಗ ಅಂತಹವರಿಗೊಂದು ಭರ್ಜರಿ ಗುಡ್‌ನ್ಯೂಸ್‌ ಹೊರ ಬಿದ್ದಿದೆ. ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಯೂನಿಯನ್‌ ಬ್ಯಾಂಕ್‌ ಬರೋಬ್ಬರಿ 606 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಚೀಫ್‌ ಮ್ಯಾನೇಜರ್‌, ಸೀನಿಯರ್‌ ಮ್ಯಾನೇಜರ್‌ ಸೇರಿ ಸ್ಪೆಷಲಿಸ್ಟ್‌ ಆಫೀಸರ್ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಫೆಬ್ರವರಿ 23.

ಹುದ್ದೆಗಳ ವಿವರ ವಿದ್ಯಾರ್ಹತೆ

ಚೀಫ್‌ ಮ್ಯಾನೇಜರ್‌- 5, ಸೀನಿಯರ್‌ ಮ್ಯಾನೇಜರ್‌- 42, ಮ್ಯಾನೇಜರ್‌- 451 ಮತ್ತು ಅಸಿಸ್ಟಂಟ್‌ ಮ್ಯಾನೇಜರ್‌- 108 ಹುದ್ದೆಗಳಿವೆ. ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಬಿ.ಎಸ್‌ಸಿ / ಬಿ.ಇ. / ಬಿ.ಟೆಕ್‌ / ಎಂ.ಟೆಕ್‌ / ಎಂ.ಎಸ್‌ಸಿ / ಯಾವುದೇ ಪದವಿ / ಸಿಎ / ಎಂಬಿಎ / ಪಿಜಿಡಿಸಿಎ / ಪಿಜಿಡಿಬಿಎಂ / ಪಿಜಿಪಿಎಂ / ಪಿಜಿಡಿಎಂ ಪಡೆದವರು ಮತ್ತು ಕಾರ್ಯಾನುಭವ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅರ್ಜಿ ಸಲ್ಲಿಸಲು ಹುದ್ದೆಗೆ ಅನುಗುಣವಾಗಿ ಕನಿಷ್ಠ ವಯಸ್ಸು 25 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ ಎಂದು ಪ್ರಕಟಣೆ ತಿಳಿಸಿದೆ. ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್‌ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 850 ರೂ. ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು 175 ರೂ. ಪಾವತಿಸಬೇಕು. ಇದನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ

ಆನ್‌ಲೈನ್‌ ಪರೀಕ್ಷೆ, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅಭ್ಯರ್ಥಿಗಳ ತಪ್ಪು ಉತ್ತರಕ್ಕೆ ನೆಗೆಟಿವ್‌ ಅಂಕಗಳಿವೆ. ಹೀಗಾಗಿ ಎಚ್ಚರಿಕೆಯಿಂದ ಪರೀಕ್ಷೆ ಎದುರಿಸುವಂತೆ ಪ್ರಕಟಣೆ ತಿಳಿಸಿದೆ.

Categories
ಕರಾವಳಿ ಬೆಂಗಳೂರು ರಾಜ್ಯ

ಸೌಜನ್ಯ ಕೇಸ್: ಸಂತೋಷ್ ರಾವ್ ತಪ್ಪದ ಸಂಕಷ್ಟ!

ಸೌಜನ್ಯ ಕೇಸ್: ಸಂತೋಷ್ ರಾವ್ ತಪ್ಪದ ಸಂಕಷ್ಟ!
– ಸಂತೋಷ್ ಗೆ ನೋಟಿಸ್ ಜಾರಿಗೋಳಿಸಿದ ಹೈಕೋರ್ಟ್
– ಏನಿದು ಕೇಸ್… ಮತ್ತೆ ವಿಚಾರಣೆ..?

NAMMUR EXPRESS NEWS
ಬೆಂಗಳೂರು: ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂತೋಷ್ ರಾವ್‌ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ವಿಶೇಷ (ಮಕ್ಕಳ) ನ್ಯಾಯಾಲಯವು ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ್ದನ್ನು ಬದಿಗೆ ಸರಿಸುವಂತೆ ಕೋರಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಂತೋಷ್ ರಾವ್‌ಗೆ ಹೈಕೋರ್ಟ್ ನೋಟಿಸ್ ನೀಡಿದೆ.

ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿ ಸಂತೋಷ್ ರಾವ್ ಅವರನ್ನು 2023ರ ಜೂನ್ 16ರಂದು ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಏನಿದು ಘಟನೆ?

2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಘಟನೆ ನಡೆದಿತ್ತು. ಪ್ರಕರಣವನ್ನು ಮೊದಲಿಗೆ ಬೆಳ್ತಂಗಡಿ ಠಾಣಾ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. 2013ರ ನವೆಂಬ‌ರ್ 6ರಂದು ಸರ್ಕಾರವು ಸಿಬಿಐಗೆ ತನಿಖೆಗೆ ಆದೇಶಿಸಿತ್ತು. ತನಿಖಾಧಿಕಾರಿಗಳು ಕಾರ್ಕಳ ಮೂಲದ ಸಂತೋಷ್ ರಾವ್‌ ಎಂಬಾತನನ್ನು ಆರೋಪಿಯಾಗಿ ಗುರುತಿಸಿದ್ದರು. ಆದರೆ, ಪ್ರಕರಣದ ವಿಚಾರಣೆಯ ನಂತರ ಸಿಬಿಐ ವಿಶೇಷ ನ್ಯಾಯಾಲಯವು 2023ರ ಜುಲೈ 16ರಂದು ಆರೋಪಿಯನ್ನು ಖುಲಾಸೆಗೊಳಿಸಿತ್ತು.

ಇದರಿಂದ ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳು ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಹೀಗಾಗಿ, ಮರು ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿತ್ತು.ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠವು ಪ್ರಕರಣದಲ್ಲಿ ಸರ್ಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬವು ಆರೋಪಿಯನ್ನು ದೋಷಮುಕ್ತ ಗೊಳಿಸಿದ ವಿಚಾರಣಾಧೀನ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.