Categories
ಬೆಂಗಳೂರು ರಾಜ್ಯ

ಮಾರುಕಟ್ಟೆಗೆ ಭಾರತ್‌ ಬ್ರಾಂಡ್ ಅಕ್ಕಿ!

ಮಾರುಕಟ್ಟೆಗೆ ಭಾರತ್‌ ಬ್ರಾಂಡ್ ಅಕ್ಕಿ!
– ಕೆಜಿ ಗೆ 29 ರೂ-ಆನ್‌ಲೈನ್‌ನಲ್ಲೂ ಲಭ್ಯ
– ಏನಿದು ಅಕ್ಕಿ… ಯಾರಿಗೆ ಸಿಗುತ್ತೆ..?

NAMMUR EXPRESS NEWS
ಬೆಂಗಳೂರು: ಇತ್ತಿಚೆಗೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇನ್ನು ಅಕ್ಕಿಯ ಬೆಲೆ ಅಂತು ಕೇಳೋದಕ್ಕೆ ಆಗೋದಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರ ಜನರಿಗೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ 29 ರೂಪಾಯಿಗೆ ಅಕ್ಕಿ ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರ 29 ರೂಪಾಯಿಗೆ ಅಕ್ಕಿ ನೀಡಲು ಮುಂದಾಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.

ಅಮೇಜಾನ್‌ನಲ್ಲಿ ಕೇಂದ್ರದ ಅಕ್ಕಿ ಲಭ್ಯ!

ಮೊದಲ ಹಂತದಲ್ಲಿ 120 ಕ್ವಿಂಟಾಲ್‌ ಅಕ್ಕಿ ಬೆಂಗಳೂರಿಗೆ ಬಂದಿದೆ. ರೈತರು ಬೆಳೆಯುವ ಅಕ್ಕಿಯನ್ನ ಖರೀದಿಸಿ ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗ್ತಿದೆ. ಇದಕ್ಕಾಗಿ ಒಟ್ಟು 25 ವಾಹನಗಳನ್ನ ನೇಮಿಸಲಾಗಿದೆ. ಬೆಂಗಳೂರಿನಲ್ಲಿ 5 ಕಡೆಗಳಲ್ಲಿ ಮೊಬೈಲ್ ವಾಹನಗಳು ಇರಲಿದ್ದು, ಜನರು ಅಕ್ಕಿ ಖರೀದಿ ಮಾಡಬಹುದು. ಜೊತೆಗೆ ಬೇರೆ ಜಿಲ್ಲೆಗಳಲ್ಲೂ ಕೂಡಾ ಅಕ್ಕಿ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದು ಮೊಬೈಲ್ ವಾಹನಗಳು ಸಂಚಾರ ಮಾಡಲಿವೆ.

ಭಾರತ್‌ ಅಕ್ಕಿ ವಿತರಣೆಗೆ ಯಡಿಯೂರಪ್ಪ ಚಾಲನೆ:

ಅಕ್ಕಿ ಸರಬರಾಜು ಮಾತ್ರವಲ್ಲದೆ ಮೊಬೈಲ್ ವಾಹನಗಳಲ್ಲದೆ, ರಿಲಯನ್ಸ್ ಮಾರ್ಟ್, ಫ್ಲಿಪ್ ಕಾರ್ಡ್, ಬ್ಲಿಂಕಿಟ್ ಸೇರಿದಂತೆ ಅನೇಕ ಆನ್‌ಲೈನ್ ಶಾಪಿಂಗ್ ಆಯಪ್‌ಗಳಲ್ಲೂ ಭಾರತ್ ಅಕ್ಕಿ 29 ರೂಪಾಯಿಗೆ ಸಿಗಲಿದೆ. ಅಕ್ಕಿ ಖರೀದಿಸುವವರು ತಮ್ಮ ಮೊಬೈಲ್ ನಂಬ‌ರ್ ರಿಜಿಸ್ಟರ್ ಮಾಡಿಸಿ ಅಕ್ಕಿ ಪಡೆಯಬಹುದು. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನ ನೀಡಲಾಗುವುದು. ಕಡಿಮೆ ದರದಲ್ಲಿ ಅಕ್ಕಿ ಸಿಗ್ತಿರೋದು ಉಪಯುಕ್ತ ಎನ್ನುತ್ತಿದ್ದಾರೆ ಜನ.

Categories
Uncategorized ಶಿವಮೊಗ್ಗ

ಆಟವಾಡಲು ಕೊಟ್ಟಿದ್ದ ಮೀನು ನುಂಗಿದ ಮಗು!

ಆಟವಾಡಲು ಕೊಟ್ಟಿದ್ದ ಮೀನು ನುಂಗಿದ ಮಗು !
– ಶಿವಮೊಗ್ಗದಲ್ಲಿ ಘಟನೆ: ಅಪಾಯದಿಂದ ಪಾರು
– ಆಪರೇಷನ್ ಮಾಡಿ ಮೀನು ತೆಗೆದ ಡಾಕ್ಟರ್

NAMMUR EXPRESS NEWS
ಶಿವಮೊಗ್ಗ: ಮಗುವಿಗೆ ಆಟವಾಡಲು ಮೀನು ಕೊಟ್ಟಿದ್ದ ಈ ವೇಳೆ ಕ್ಷಣಾರ್ಧದಲ್ಲೇ ಮಗುವು ಮೀನು ನುಂಗಿ ಉಸಿರುಗಟ್ಟುವ ಸ್ಥಿತಿಗೆ ತಲುಪಿದ್ದ ಒಂದು ವರ್ಷದ ಮಗುವನ್ನು ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗಂಜಿನಹಳ್ಳಿ ಯೋಗೇಶ್, ರೋಜಾ ದಂಪತಿ ತಮ್ಮ ಒಂದು ವರ್ಷದ‌ ಮಗು ಕೈಗೆ ಆಟ ಆಡಲು‌‌ ಮೀನು ನೀಡಿದ್ದರು. ಆಟವಾಡುತ್ತಾ ಏಕಾಏಕಿ ಮಗು ಮೀನು‌ ನುಂಗಿದೆ. ಕೂಡಲೇ ಮಗುವನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮಗುವನ್ನು ಕರೆದುಕೊಂಡು ಬಂದಾಗ ತ್ವರಿತವಾಗಿ ಸ್ಪಂದಿಸಿದ ವೈದ್ಯರು ಮಗುವಿನ ಜೀವ ಉಳಿಸಲು ಎಲ್ಲ ರೀತಿಯಲ್ಲೂ ಸಹಕರಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿ ಮೀನನ್ನು ಹೊರ ತೆಗೆದಿದ್ದಾರೆ. ಒಂದು ವರ್ಷದ ಪ್ರತೀಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಕ್ಕಳ ಬಗ್ಗೆ ಎಚ್ಚರ ಎಚ್ಚರ!

ಘಟನೆ ಬಳಿಕ ಎಲ್ಲಾ ಪೋಷಕರಿಗೆ ವೈದ್ಯರು ಸಲಹೆಯನ್ನೂ ನೀಡಿದ್ದಾರೆ. ಯಾವ ಕಾರಣಕ್ಕೂ ಮಕ್ಕಳು ಬಾಯಿಗೆ ಹಾಕಿಕೊಳ್ಳಬಹುದಾದಷ್ಟು ಸಣ್ಣದಾದ ಯಾವುದೇ ಸೂಜಿ, ಪಿನ್‌, ಬಟನ್‌, ವಯರ್‌, ಹಾಗೂ ಯಾವುದೇ ಗಟ್ಟಿ ವಸ್ತುಗಳನ್ನು ಸಣ್ಣ ಪುಟಾಣಿಗಳಿಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. ಇದು ಕೆಲವೊಮ್ಮೆ ಅಪಾಯಕ್ಕೂ ಕಾರಣವಾಗುತ್ತದೆ ಎಂದಿದ್ದಾರೆ.

Categories
ಕರಾವಳಿ ಕಾರ್ಕಳ

ಕಾರ್ಕಳದ ಕೊಂಡಾಡಿ ಬಳಿ ಹಳ್ಳಕ್ಕೆ ಬಿದ್ದ ಲಾರಿ!

ಕಾರ್ಕಳದ ಕೊಂಡಾಡಿ ಬಳಿ ಹಳ್ಳಕ್ಕೆ ಬಿದ್ದ ಲಾರಿ!
– ಚಾಲಕನಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

NAMMUR EXPRESS NEWS
ಕಾರ್ಕಳ: ಹಿರಿಯಡ್ಕ ಸಮೀಪ ಬೊಮ್ಮರುಬೆಟ್ಟ ಕೊಂಡಾಡಿ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಘಟನೆ ನಡೆದಿದ್ದು, ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಹಳ್ಳಕ್ಕೆ ಲಾರಿ ಬಿದ್ದು ರಭಸಕ್ಕೆ ಲಾರಿ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಕಾರ್ಕಳ, ಉಡುಪಿ ಭಾಗದಲ್ಲಿ ರಸ್ತೆ ಈಗ ಅತ್ಯುತ್ತಮ ಆಗುತ್ತಿದ್ದು ದಿನೇ ದಿನೇ ಅಪಘಾತ ಹೆಚ್ಚಳವಾಗುತ್ತಿದೆ.

Categories
ರಾಷ್ಟ್ರೀಯ ವಾರ್ತೆ

ಕೊಳಚೆ ನೀರಿನಲ್ಲಿ ನಿಂತು ಮದುವೆ ಮಾಡಿಕೊಂಡ ಜೋಡಿ.!

ಕೊಳಚೆ ನೀರಿನಲ್ಲಿ ನಿಂತು ಮದುವೆ ಮಾಡಿಕೊಂಡ ಜೋಡಿ.!
– ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಇದರ ಹಿಂದಿನ ಕಾರಣ.!
– ಸ್ಥಳೀಯ ಅಧಿಕಾರಿಗಳಿಂದ ಕ್ರಮ ಕೈಗೊಳ್ಳುವ ಭರವಸೆ

NAMMUR EXPRESS NEWS
ಕೊಳಚೆ ನೀರಿನಲ್ಲಿ ನಿಂತು ವಿವಾಹವಾಗುವ ಮೂಲಕ ದಂಪತಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಭಗವಾನ್‌ ಶರ್ಮಾ ಹಾಗೂ ಉಷಾದೇವಿ ಕೊಳಕು ನೀರು ತುಂಬಿದ್ದ ರಸ್ತೆಯಲ್ಲೇ ನಿಂತು ಮದುವೆಯಾಗಿದ್ದಾರೆ. ಗಬ್ಬು ನಾರುತ್ತಿರುವ ಚರಂಡಿ ಮತ್ತು ಕಸದ ನಡುವೆಯೇ ಈ ವಿವಾಹ ನೆರವೇರಿದೆ. ಭಗವಾನ್ ಹಾಗೂ ಉಷಾದೇವಿ ತಮ್ಮ 17ನೇ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಹಾರ ಬದಲಾಯಿಸಿ ಕೊಂಡಿದ್ದಾರೆ. ನೈರ್ಮಲ್ಯದ ಬಗ್ಗೆ ಸ್ಥಳೀಯ ಆಡಳಿತದ ಗಮನಸೆಳೆಯಲು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಈ ಪ್ರದೇಶದಲ್ಲಿ ಕೊಳಕು ನಾರುತ್ತಿದೆ. ರಸ್ತೆಗಳೆಲ್ಲ ಗಬ್ಬೆದ್ದು ಹೋಗಿವೆ. ಆದರೂ ಸ್ಥಳೀಯ ಆಡಳಿತ ಈ ಬಗ್ಗೆ ಗಮನಹರಿಸಿಲ್ಲ.

ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಗಮನಹರಿಸುವವರೆಗೂ ಹುಟ್ಟುಹಬ್ಬ, ವಾರ್ಷಿಕೋತ್ಸವ ಇನ್ನಿತರ ಕಾರ್ಯಕ್ರಮಗಳನ್ನು ಇದೇ ಕೊಳಕು ಪ್ರದೇಶದಲ್ಲಿ ಆಚರಿಸಿಕೊಳ್ಳಲು ದಂಪತಿ ನಿರ್ಧರಿಸಿದ್ದಾರೆ. ಬ್ಯೂಟಿ ಪಾರ್ಲರ್ ಗೆ ತೆರಳಿ ನವವಧುವಿನಂತೆ ಅಲಂಕಾರ ಮಾಡಿಕೊಂಡ ಉಷಾದೇವಿ ಸ್ಥಳಕ್ಕೆ ಆಗಮಿಸಿದ್ದಳು. ಭಗವಾನ್ ಶರ್ಮಾ ಕೂಡ ವರನ ಅವತಾರದಲ್ಲಿ ದಿಬ್ಬಣದ ಜೊತೆಗೆ ಸ್ಥಳಕ್ಕೆ ಬಂದಿದ್ದ. ಪುರೋಹಿತರ ಮಂತ್ರೋಚ್ಛಾರಣೆಯ ನಡುವೆ ಭಗವಾನ್ ಹಾಗೂ ಉಷಾದೇವಿ ಹಾರ ಬದಲಾಯಿಸಿಕೊಂಡರು.

ಲಕ್ಷದ್ವೀಪದಲ್ಲಿ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕೆಂದು ದಂಪತಿ ನಿರ್ಧರಿಸಿದ್ದರು. ಆದರೆ ಸ್ಥಳೀಯ ಆಡಳಿತಕ್ಕೆ ಚುರುಕು ಮುಟ್ಟಿಸಲು ಕೊಳಕು ತುಂಬಿದ ರಸ್ತೆಯಲ್ಲಿ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಚರಂಡಿ ಅವ್ಯವಸ್ಥೆ ಹಾಗೂ ಕಸದ ವಿಲೇವಾರಿ ಇಲ್ಲದೆ ರಸ್ತೆಯೇ ಚಂಡಿಯಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಚರಂಡಿ ಬಳಿ ವಾರ್ಷಿಕೋತ್ಸವ ಆಚರಣೆ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಹೆಚ್ಚಾದ ಆತ್ಮಹತ್ಯೆ!

ತೀರ್ಥಹಳ್ಳಿಯಲ್ಲಿ ಹೆಚ್ಚಾದ ಆತ್ಮಹತ್ಯೆ!
– ತಿಂಗಳಿನಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ
– ಸಣ್ಣ ಸಣ್ಣ ಕಾರಣ, ಸಾಲ, ವಯುಕ್ತಿಕ ಸಮಸ್ಯೆ, ಲವ್ ಕಾರಣ?!

NAMMUR EXPRESS NEWS
ತೀರ್ಥಹಳ್ಳಿ: ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಹೆಚ್ಚಾಗುತ್ತಿರುವ ನಡುವೆಯೂ ತೀರ್ಥಹಳ್ಳಿಯಲ್ಲಿ ದಿನದಿಂದ ದಿನಕ್ಕೆ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಒಂದು ತಿಂಗಳಿನಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಯುವಜನತೆ ಸೇರಿದಂತೆ ಪ್ರಾಣ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಮಾನಸಿಕ ಖಿನ್ನತೆ, ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ, ಶಾಲಾ ಕಾಲೇಜು ವಿಚಾರ, ಹಣದ ವಿಷಯ, ಅನಾರೋಗ್ಯದ ಸಮಸ್ಯೆ ಸೇರಿದಂತೆ ನಾನಾ ನೆಪಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದುರಂತದ ಸಂಗತಿಯೆಂದರೆ ಈ ಪೈಕಿ ಯುವ ಜನತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

20ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣ

ತೀರ್ಥಹಳ್ಳಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದ್ದು,ಜ.29 ರಂದು ಶಾಲೆಗೆ ಹೋಗು ಎಂದು ತಿಳಿ ಹೇಳಿದ್ದಕ್ಕೆ ಬಸವಾನಿಯ 9ನೇ ತರಗತಿ ವಿದ್ಯಾರ್ಥಿ ಒಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹಾಗೂ ಜ.22 ರಂದು ಕಟ್ಟೆಹಕ್ಕಲಿನಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ ಒಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದೇ ರೀತಿ ಬಿಳಾಲುಕೊಪ್ಪದಲ್ಲಿ ಡಿಗ್ರಿ ಕಾಲೇಜಿನ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಥೈರಾಯಿಡ್ ಸಮಸ್ಯೆಗೆ ನೊಂದು ನವ ವಿವಾಹಿತೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು, ಹಣಗೆರೆಕಟ್ಟೆಯಲ್ಲಿ ವಿಷ ಕುಡಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು, ವೃದ್ಧೆ ಒಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಒಂದೇ ತಿಂಗಳಿನಲ್ಲಿ ನಡೆದಿರುವುದು ದುರಂತದ ಸಂಗತಿಯಾಗಿದೆ.

ಜೀವ ಅಮೂಲ್ಯ… ಆತ್ಮಹತ್ಯೆ ಮಹಾಪಾಪ!

ಆತ್ಮಹತ್ಯೆ ಪ್ರಕರಣಗಳು ಹೆಚ್ಚದಂತೆ ತಡೆಯಲು ಮಾನಸಿಕ ಖಿನ್ನತೆಯಲ್ಲಿರುವವರು ಕಂಡರೆ ಕೂಡಲೇ ಯಾರೇ ಆಗಲಿ ಅವರಿಗೆ ಧೈರ್ಯ ತುಂಬಲು ಯತ್ನಿಸಬೇಕು. ನಕಾರಾತ್ಮಕ ಯೋಚನೆಗಳನ್ನು ದೂರಗೊಳಿಸಿ, ಭರವಸೆ ಮೂಡಿಸುವ ಮೂಲಕ ಆತ್ಮಹತ್ಯಾ ಪ್ರಯತ್ನಗಳನ್ನು ಕಡಿಮೆ ಮಾಡೋಣ ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಈ ಮೂಲಕ ತಿಳಿಸಿದೆ.

Categories
ಬೆಂಗಳೂರು ಮಲ್ನಾಡ್

ಮಲೆನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ!

ಮಲೆನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ!
– ಮಲೆನಾಡು ಹಿತರಕ್ಷಣಾ ವೇದಿಕೆಯಿಂದ ರಾಜಧಾನಿಯಲ್ಲಿ ಕಾರ್ಯಕ್ರಮ
– ಫೆ.10ರಂದು ಕಾರ್ಯಕ್ರಮ: ಸರ್ವರಿಗೂ ಸ್ವಾಗತ

NAMMUR EXPRESS NEWS
ಬೆಂಗಳೂರು: ಮಲೆನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಮಲೆನಾಡಿನ ಪ್ರಾಧಿನಿಕ ಸಂಸ್ಥೆ ಮಲೆನಾಡು ಹಿತರಕ್ಷಣಾ ವೇದಿಕೆಯಿಂದ ರಾಜಧಾನಿಯಲ್ಲಿ ಕಾರ್ಯಕ್ರಮವನ್ನು ಫೆ.10ರಂದು ಅಯೋಜನೆ ಮಾಡಲಾಗಿದೆ. ಫೆ.10ರ ಶನಿವಾರ ಸಂಜೆ 5:00ಗೆ ಬೆಂಗಳೂರಿನ ಮಲೆನಾಡು ಕಲ್ಚರಲ್ ಕ್ಲಬ್ ನಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಮಲೆನಾಡಿಗರ ಸಮಸ್ಯೆಗೆ ಸ್ಪಂದಿಸಲು ಕಾರ್ಯಕ್ರಮವೊಂದು ಆಯೋಜನೆ ಮಾಡಲಾಗಿದೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಂಘವು ವೇದಿಕೆ ಸಿದ್ದ ಮಾಡಿಕೊಳ್ಳುತ್ತಿದೆ. ಈ ವೇದಿಕೆಯಲ್ಲಿ ಗಣ್ಯರು ಆಗಮಿಸಿ ಮಲೆನಾಡು ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸರ್ಕಾರದ ಗಮನಕ್ಕೆ ತರಲು ಈ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.

ಹಾಗೂ ಇದರ ಬಗ್ಗೆ ಚರ್ಚೆ ಮಾಡಲು ಮುಕ್ತ ಅವಕಾಶವಿರುತ್ತದೆ ಹಾಗೂ ಆ ದಿನ ತಾವುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸಬಹುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡು ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಅಜಿತ್ ಡಿ ಕಲ್ಕುಳಿ ಅವರು ವಹಿಸಲಿದ್ದು, ವಿಚಾರಣಾ ಆಯೋಗ ಅಧ್ಯಕ್ಷರಾದ ನಾಗಮೋಹನ್ ದಾಸ್ ಅವರು ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಮುಖ್ಯ ಅತಿಥಿಗಳಾಗಿ ಮಲೆನಾಡು ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ಅರವಿಂದ ಸಿಗದಾಳು, ಪ್ರಾಧ್ಯಾಪಕರು ರಾಜಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಅವರು ಆಗಮಿಸಲಿದ್ದಾರೆ. ಸರ್ವರನ್ನು ಸ್ವಾಗತಿಸಲಾಗಿದೆ.

Categories
ಹೊಸನಗರ

ಹೊಸನಗರದಲ್ಲಿ ಜಾತ್ರೆ ರಂಗು ಶುರು!

ಹೊಸನಗರದಲ್ಲಿ ಜಾತ್ರೆ ರಂಗು ಶುರು!
– ಫೆ.6 ರಿಂದ 14ರವರೆಗೆ ಮಾರಿಕಾಂಬಾ ದೇವಿ ಜಾತ್ರೆ
– 8 ದಿನಗಳ ಕಾಲ ಅದ್ದೂರಿ ಮನರಂಜನಾ ಕಾರ್ಯಕ್ರಮ

NAMMUR EXPRESS NEWS
ಹೊಸನಗರ: ಹೊಸನಗರ ಪಟ್ಟಣದಲ್ಲಿ ಫೆ.6 ಮಂಗಳವಾರದಿಂದ ಫೆ.14ರ ಬುಧವಾರವರೆಗೆ ಅದ್ದೂರಿಯಾಗಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಜಾತ್ರಾ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಹಾಗೂ ಜಾತ್ರಾ ಕಮಿಟಿಯ ಪದಾಧಿಕಾರಿಗಳು, ಗ್ರಾಮಸ್ತರು, ಸಂಘ ಸಂಸ್ಥೆಗಳು ಜಾತ್ರಾ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಹೊಸನಗರ ಜಾತ್ರೆ ಶುರು!

ಫೆ. 6ರ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದಿಂದ ಶ್ರೀ ಮಾರಿಕಾಂಬಾ ದೇವಿಯ ಮೂರ್ತಿಯನ್ನು ಶಿವಪ್ಪನಾಯಕ ರಸ್ತೆಯ ಮೂಲಕ ಅಮ್ಮನವರ ತಾಯಿ ಮನೆ ಎನಿಸಿಕೊಂಡಿರುವ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು ನಂತರ 10 ಗಂಟೆಯಿಂದ ಪೂಜಾ ಕಾರ್ಯ ನೆರವೇರಲಿದ್ದು ಅದೇ ದಿನ ರಾತ್ರಿ 11 ಗಂಟೆಯವರೆಗೆ ಸಾರ್ವಜನಿಕರು ಹಣ್ಣು-ಕಾಯಿ ಪೂಜೆಯ ಜೊತೆಗೆ ವಿವಿಧ ಹರಕೆಯನ್ನು ಸಲ್ಲಿಸುವರು.

ಮಧ್ಯಾಹ್ನ ಸ್ನೇಹ ಬಳಗದವರಿಂದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಗಿದ್ದು ಈ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ನಡೆಯುವ ಒಂದು ದಿನದ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ದೇವಿಯ ಭಕ್ತರು ಹಾಗೂ ಸಾರ್ವಜನಿಕರು ಆಗಮಿಸಿ ಈ ಜಾತ್ರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ದುರ್ಗಾಂಬಾ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಶ್ರೀಪತಿರಾವ್‌ ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿ ಸದಸ್ಯರು ಈ ಮೂಲಕ ಕೇಳಿಕೊಂಡಿದ್ದಾರೆ. ಫೆ. 7ರ ಬುಧವಾರದಿಂದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ 8 ದಿನಗಳ ಮಾರಿಜಾತ್ರೆ ಶಿವಮೊಗ್ಗ ರಸ್ತೆಯಲ್ಲಿರುವ ಮಾರಿಗುಡ್ಡದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಮಂಗಳವಾರ ರಾತ್ರಿ ದುರ್ಗಾಂಬಾ ದೇವಸ್ಥಾನದಿಂದ ಮಾರಿಕಾಂಬಾ ದೇವಸ್ಥಾನಕ್ಕೆ ಆಗಮಿಸಿದ ಮಾರಿಕಾಂಬೆಯನ್ನು ಬುಧವಾರ ಬೆಳಿಗ್ಗೆ ಪ್ರತಿಷ್ಠಾಪಿಸಿ 8 ದಿನಗಳ ಕಾಲ ಇಲ್ಲಿ ಪೂಜೆ ನಡೆಸಲಾಗುವುದು.

 

8 ದಿನಗಳ ಕಾಲ ವಿವಿಧ ಮನರಂಜನೆಗಳು:

ಪ್ರತಿದಿನ ರಾತ್ರಿ 8:30ರಿಂದ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು

ಫೆ. 9ರಂದು ಅಮ್ಮ ಕಲಾವಿದೆ‌ರ್ ಕುಡ್ಲ ಇವರಿಂದ ನಗೆ ನಾಟಕ ಅಪ್ಪ,

ಫೆ. 10ರಂದು ಶನಿವಾರ ಸೋನಿ ಮೆಲೋಡೀಸ್ ಭದ್ರಾವತಿಯವರಿಂದ ಆರ್ಕೆಸ್ಟ್ರಾ,

ಫೆ. 11 ರ ಭಾನುವಾರ ಮ್ಯೂಸಿಕಲ್ ನೈಟ್ ಹಾಗೂ ವೈವಿಧ್ಯಮಯ ನೃತ್ಯ ಕಾರ್ಯಕ್ರಮ,

ಫೆ. 12ರ ಸೋಮವಾರ ಡಿಸ್ನಿ ಡ್ಯಾನ್ಸ್‌ ಕೊಪ್ಪ ಇವರಿಂದ
ಆಕರ್ಷಕ ನೃತ್ಯ ಕಾರ್ಯಕ್ರಮ,

13ರ ಮಂಗಳವಾರ ರೂಪಕಲಾ (ಕುಳ್ಳಪ್ಪು) ತಂಡದವರಿಂದ ‘ಗಿರಾಕಿಯೇ ಇಲ್ಲಾ ಮಾರಾಯ’ ಎಂಬ ನಗೆ ನಾಟಕ,

ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ಈ ಎಲ್ಲ ಕಾರ್ಯಕ್ರಮಗಳು ರಾತ್ರಿ 9ಗಂಟೆಯಿಂದ ಪ್ರಾರಂಭವಾಗಲಿದ್ದು ದೇವಿಯ ಭಕ್ತಾರು ಹಾಗೂ ಸಾರ್ವಜನಿಕರು ಆಗಮಿಸಿ ಈ 9 ದಿನಗಳ ಕಾಲ ನಡೆಯುವ ಮಾರಿಕಾಂಬಾ ಜಾತ್ರೆಯನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮಾರಿಕಾಂಬಾ ಜಾತ್ರಾ ಕಮಿಟಿಯ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿ ಸದಸ್ಯರು ಈ ಮೂಲಕ ಕೇಳಿಕೊಂಡಿದ್ದಾರೆ.

Categories
ತೀರ್ಥಹಳ್ಳಿ ಬೆಂಗಳೂರು ರಾಜ್ಯ

ಕಿಮ್ಮನೆ, ಆರತಿ ಕೃಷ್ಣ ಸೇರಿ 22 ಮಂದಿಗೆ ವಿದೇಶದಲ್ಲಿ ಪ್ರಶಸ್ತಿ!

ಕಿಮ್ಮನೆ, ಆರತಿ ಕೃಷ್ಣ ಸೇರಿ 22 ಮಂದಿಗೆ ವಿದೇಶದಲ್ಲಿ ಪ್ರಶಸ್ತಿ!
– ವಿಯೆಟ್ನಾಮ್ ರಾಜಧಾನಿ ಹನೋಯ್ ನಗರದಲ್ಲಿ ಕಾರ್ಯಕ್ರಮ
– ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ

NAMMUR EXPRESS NEWS
ಬೆಂಗಳೂರು: ವಿಯೆಟ್ನಾಮ್ ರಾಜಧಾನಿ ಹನೋಯ್ ನಗರದಲ್ಲಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಅನಿವಾಸಿ ಭಾರತೀಯ ಸಂಘಟಕಿ ಡಾ. ಆರತಿ ಕೃಷ್ಣ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಸೇರಿದಂತೆ ಕರ್ನಾಟಕದ ಇಪ್ಪತ್ತೆರಡು ಸಾಧಕರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸನ್ಮಾನ ನಡೆದಿದ್ದು ವಿಶೇಷ.

ವಿಯೆಟ್ನಾಮ್ -ಭಾರತ ದೇಶಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಭಾಗವಾಗಿ ವಿಶ್ವವಾಣಿ ಮತ್ತು ವಿಯೆಟ್ನಾಮ್ ರಾಯಭಾರ ಕಚೇರಿಯಿಂದ ಜಂಟಿಯಾಗಿ ಆಯೋಜನೆ ಮಾಡಲಾಗಿತ್ತು. ವಿಯೆಟ್ನಾಮಿನಲ್ಲಿ ನಡೆದ ಉಭಯ ದೇಶಗಳ ಸಾಂಸ್ಕೃತಿಕ ತಂಡಗಳಿಂದ ಕಾರ್ಯಕ್ರಮ ಪ್ರಸ್ತುತಿ ಎರಡು ದೇಶಗಳ ಗಣ್ಯರ ಸಮ್ಮುಖದಲ್ಲಿ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

Categories
ಬೆಂಗಳೂರು ಹವಾಮಾನ ಸುದ್ದಿ

ರಾಜ್ಯದಲ್ಲಿ ರಣ ಬಿಸಿಲು!

ರಾಜ್ಯದಲ್ಲಿ ರಣ ಬಿಸಿಲು!
– ಬಿಸಿಲಿಂದ ಮನೆಯಿಂದ ಹೊರ ಹೋಗಲು ಆಗುತ್ತಿಲ್ಲ
– ಕರೆಂಟ್ ಇರಲ್ಲ, ನೀರು ಸಿಗುತ್ತಿಲ್ಲ: ಮುಂದೆ ಕಷ್ಟ ಕಷ್ಟ!

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನ ಜಳಕ್ಕೆ ಜನರು ತತ್ತರಿಸಿದ್ದಾರೆ. ಈ ನಡುವೆ ರಾಜ್ಯದಲ್ಲಿ ಈ ವರ್ಷ ಬರೋಬ್ಬರಿ ನಾಲ್ಕು ತಿಂಗಳು ರಣಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಬಿಸಿಲಿನ ಕಾವು ಹೆಚ್ಚಿದ್ದು, ವಾಡಿಕೆಗಿಂತ ಮುನ್ನವೇ ರಾಜ್ಯದಲ್ಲಿ ಬಿಸಿಲಿನ ಕಾವು ಹೆಚ್ಚಿದೆ.
ಸಾಮಾನ್ಯವಾಗಿ ಮಾರ್ಚ್ ನಿಂದ ಮೇ ತಿಂಗಳವರೆಗೆ ಬೇಸಿಗೆ ಇರುತ್ತದೆ. ಆದರೆ ಈ ಬಾರಿ ವಾಡಿಕೆಗಿಂತ ಮುನ್ನವೇ ಬೇಸಿಗೆ ಶುರುವಾಗುಂತಾಗಿದ್ದು, ನಾಲ್ಕು ತಿಂಗಳು ಬೇಸಿಗೆ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ತಾಪಮಾನ ಹೆಚ್ಚಳವಾಗಿದ್ದು, ಉಷ್ಣತೆ ಹೆಚ್ಚಳ, ಬಿಸಿಗಾಳಿಯ ಆತಂಕ ಎದುರಾಗಿದ್ದು, ಏಪ್ರಿಲ್ ಮತ್ತು ಮೇ ನಲ್ಲಿ ಶಾಖಾ ತರಂಗ ಬೀಸಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮಲೆನಾಡು, ಕರಾವಳಿಯಲ್ಲಿ ಕೃಷಿಗೆ ಹೊಡೆತ

ಮಳೆ ಮುಗಿಯುವ ಮುನ್ನ ಬಿಸಿಲ ಝಳ ಹೆಚ್ಚಳದಿಂದ ಅಡಿಕೆ ಗಿಡಗಳು ಒಣಗುತ್ತಿರುವ ದೃಶ್ಯಗಳು ಎಲ್ಲೆಡೆ ಕಾಣುತ್ತಿದೆ. ಅದರ ಜೊತೆಗೆ ವಿದ್ಯುತ್ ಕಟ್ ನಿಂದಾಗಿ ಅಡಿಕೆ ತೋಟಗಳು ಹಾಗೂ ಇತರೆ ಕೃಷಿ ಚಟುವಟಿಕೆಗೆ ನೀರಿಲ್ಲದಂತಾಗಿದೆ. ಹೀಗಾಗಿ ಜನ ಕೂಡ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಒಂದು ಕಡೆ ವಿದ್ಯುತ್ ಫ್ರೀ ಕೊಟ್ಟು, ಇನ್ನೊಂದು ಕಡೆ ವಿದ್ಯುತ್ ಕಡಿತಗೊಳಿಸುವುದರಿಂದ ಕೃಷಿ ಚಟುವಟಿಕೆ ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಪ್ರತಿದಿನ ಲೋಡ್ ಶೆಡ್ಡಿಂಗ್ ಯಿಂದಾಗಿ ವಿದ್ಯುತ್ ಇರುವುದಿಲ್ಲ. ಜೊತೆಗೆ ಬಿಸಿಲೆ ಜಲ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಂದರೆ ಆಗಿದೆ.

ಕಾಯಿಲೆಗಳು ಉಲ್ಬಣ!

ರಾಜ್ಯದಲ್ಲಿ ಬಿಸಿಲು ಬೇಗೆ ಹೆಚ್ಚುತ್ತಿದ್ದಂತೆ ಋುತುಮಾನದ ಕಾಯಿಲೆಗಳಾದ ಕಾಲರಾ, ವಿಷಮಶೀತ ಜ್ವರ, ಕಣ್ಣಿನ ತೊಂದರೆ, ವೈರಲ್ ಸೋಂಕು, ನಿರ್ಜಲೀಕರಣ, ಹೊಟ್ಟೆ ನೋವು, ಡೆಂಗೆ, ಚಿಕನ್ ಫಾಕ್ಸ್ ಬಿಸಿನಿಲಿಂದ ತಲೆ ಸುತ್ತು, ಮೂಗಿನಲ್ಲಿ ರಕ್ತ ಸುರಿಯುವುದು, ಅತಿಯಾದ ಸೂರ್ಯಕಿರಣಗಳಿಂದ ಚರ್ಮ ಸಮಸ್ಯೆಗಳು ಹೆಚ್ಚಾಗಿ ಜನರನ್ನು ಕಾಡುತ್ತಿವೆ. ಇದಕ್ಕೆ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯು ಹೆಚ್ಚಾಗಿ ಆಸ್ಪತ್ರೆ ಫುಲ್ ರಶ್ ಆಗಿದೆ.

Categories
ಬೆಂಗಳೂರು ರಾಜ್ಯ

ಫೆ.16ಕ್ಕೆ ರಾಜ್ಯ ಬಜೆಟ್: ಜನರಿಗೆ ಏನೇನ್ ಸಿಗುತ್ತೆ?

ಫೆ.16ಕ್ಕೆ ರಾಜ್ಯ ಬಜೆಟ್: ಜನರಿಗೆ ಏನೇನ್ ಸಿಗುತ್ತೆ?
– ಫೆ.12ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ
-10 ದಿನಗಳ ಕಾಲ ಬಜೆಟ್‌ ಅಧಿವೇಶನ: ಭಾಷಣಕ್ಕೆ ಸೀಮಿತ ಆಗುತ್ತಾ ಅಧಿವೇಶನ?
– ಸರಿಯಾದ ಸಮಯಕ್ಕೆ ಬರಬೇಕು ಎಂದು ವಾರ್ನಿಂಗ್

NAMMUR EXPRESS NEWS
ಬೆಂಗಳೂರು: 16ನೇ ವಿಧಾನಸಭೆಯ 3ನೇ ಅಧಿವೇಶನವು ಫೆ.12ರಿಂದ 23ರವರೆಗೆ ನಡೆಯಲಿದೆ. ಫೆ.12 ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, ಫೆ.16ರಂದು ಮುಖ್ಯಮಂತ್ರಿಯವರು 2024-25ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಒಟ್ಟು 10 ದಿನಗಳ ಕಾಲ ಬಜೆಟ್‌ ಅಧಿವೇಶನ ನಡೆಯಲಿದೆ. ಈ ಹಿಂದಿನ ಅಧಿವೇಶನ ಮುಕ್ತಾಯವಾದ ನಂತರ ಇಲ್ಲಿಯವರೆಗೆ ನಿಧನ ಹೊಂದಿರುವ ಗಣ್ಯವ್ಯಕ್ತಿಗಳಿಗೆ ಸದನದಲ್ಲಿ ಸಂತಾಪ ಸೂಚಿಸಲಾಗುತ್ತದೆ. ಈ ಅಧಿವೇಶನದಲ್ಲಿ ಮುಖ್ಯವಾಗಿ ರಾಜ್ಯಪಾಲರ ಭಾಷಣದ ನಂತರ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆದು ಅಂಗೀಕಾರವಾಗಲಿದೆ ಎಂದು ತಿಳಿಸಿದರು.

ಫೆ.16ರಂದು ಮುಖ್ಯಮಂತ್ರಿಯವರು 2024-25ನೇ ಸಾಲಿನ ಆಯವ್ಯಯ ಮಂಡಿಸಲಿದ್ದು, ಆಯವ್ಯಯದ ಮೇಲೆ ಸಾಮಾನ್ಯ ಚರ್ಚೆ ನಡೆಯಲಿದೆ. ಈ ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. ಅಧಿವೇಶನದಲ್ಲಿ ಒಟ್ಟು 8 ದಿನಗಳ ಕಾಲ ಕಲಾಪ ನಿಗದಿಪಡಿಸಲಾಗಿದೆ. ಇದರ ಜತೆಗೆ ಗಮನ ಸೆಳೆಯುವ ಸೂಚನೆಗಳು, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರ ಕಾರ್ಯಕಲಾಪಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ಫೆ. 9ರಂದು ಶಾಸಕರಿಗೆ ಬಜೆಟ್ ಬಗ್ಗೆ ತರಬೇತಿ ನೀಡಲಾಗುತ್ತದೆ. ಶಾಸಕರು ಬಜೆಟ್‌ನಲ್ಲಿ ಹೇಗೆ ಭಾಗವಹಿಸಬೇಕು ಎಂದು ಮಾಹಿತಿ ನೀಡಲು IIMನಲ್ಲಿ ತರಬೇತಿ ಶಿಬಿರ ಏರ್ಪಡಿಸಿದ್ದೇವೆ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತರಬೇತಿ ನಡೆಯಲಿದೆ ಎಂದು ತಿಳಿಸಿದರು.

ಶಾಸಕರು ಸರಿಯಾದ ಸಮಯಕ್ಕೆ ಬರುವಂತೆ ಮಾಡಲು ಬೆಳಗ್ಗೆ 9 ಗಂಟೆಗೆ ಉಚಿತ ತಿಂಡಿ ವ್ಯವಸ್ಥೆ ಮಾಡುತ್ತಿದ್ದೇವೆ. ಒಂದೊಂದು ದಿನ ಒಂದೊಂದು ಹೋಟೆಲ್‌ನಿಂದ ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಶಾಸಕರು ರೆಡಿಯಾಗಿ ಬಂದು ಇಲ್ಲೇ ತಿಂಡಿ ಸೇವಿಸಿ ಸದನಕ್ಕೆ ಬರಬಹುದು ಎಂದು ಹೇಳಿದರು. ಹರಕೆ ‌ಕೋಲದಲ್ಲಿ ಭಾಗಿಯಾಗಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದ್ದಕ್ಕೆ ಸ್ಪಷ್ಟನೆ ನೀಡಿದ ಅವರು, ಸೋಷಿಯಲ್ ಮೀಡಿಯಾದಲ್ಲಿ ಗೀಚುವವರನ್ನು ಇತಿಹಾಸ ನೆನಪಿಟ್ಟುಕೊಳ್ಳಲ್ಲ, ಪ್ರಶ್ನೆ ಕೇಳುವವರನ್ನು ಇತಿಹಾಸ ನೆನಪಿಗೆ ಇಟ್ಟುಕೊಳ್ಳಲ್ಲ. ಯಾರು ಕೆಲಸ ಮಾಡುತ್ತಾರೆ, ಯಾರು ಉತ್ತರ ಕೊಡುತ್ತಾರೆ ಅವರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತೆ. ನಮ್ಮ ಪ್ರಾಚೀನ ಆಚರಣೆ ಅನುಗುಣವಾಗಿ ಅವರು ಹರಕೆ ಇಟ್ಟುಕೊಂಡಿದ್ದರು. ಅದಕ್ಕೆ ಹೋಗುವುದು, ಗೌರವ ಕೊಡುವುದು ನಮ್ಮ ಸಂಸ್ಕೃತಿ. ಹೀಗಾಗಿ ನಾನೂ ಹೋಗಿದ್ದೆ. ಯಾರೋ ಒಬ್ಬ ಗೀಚಿದ್ರೆ, ನೂರು ಜನ ಒಪ್ಪಿಕೊಳ್ಳಲ್ಲ. ಅದಕ್ಕೆಲ್ಲ ನಾವು ಪ್ರಾಮುಖ್ಯತೆ ಕೊಡಬಾರದು ಎಂದು ಹೇಳಿದರು.