Categories
ಬೆಂಗಳೂರು ರಾಜ್ಯ

ಪೊಲೀಸರು ಆಸ್ತಿ ಖರೀದಿಸಲು ಬಂತು ರೂಲ್ಸ್!

ಪೊಲೀಸರು ಆಸ್ತಿ ಖರೀದಿಸಲು ಬಂತು ರೂಲ್ಸ್!
– ಖರೀದಿ – ಮಾರಾಟ ಮಾಡಲು ಅನುಮತಿ ಕಡ್ಡಾಯ.!
– ರಾಜ್ಯ ಸರ್ಕಾರ ಮಹತ್ವದ ಆದೇಶ

NAMMUR EXPRESS NEWS
ಬೆಂಗಳೂರು: ಇನ್ಮುಂದೆ ಪೊಲೀಸರು ಆಸ್ತಿ, ಖರೀದಿ ಮಾರಾಟ ಮಾಡಲು ಅನುಮತಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇಲಾಖೆಯ ನೌಕರರು ಮತ್ತು ಸಿಬ್ಬಂದಿಗಳು ಸ್ಥಿರ/ ಚರಾಸ್ತಿಯನ್ನು ಖರೀದಿ/ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಸಬೇಕಾದ ವಿವರ/ ದಾಖಲೆಗಳ ಬಗ್ಗೆ ವಿವರಿಸಲಾಗಿದೆ. ಸದರಿ ಸುತ್ತೋಲೆಯ ಪ್ರತಿಯನ್ನು ಠಾಣೆಯ/ಕಛೇರಿಯ ನಾಮಫಲಕದಲ್ಲಿ ಆಳವಡಿಸಿ ಎಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ.

ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ‘ಎ’ ಮತ್ತು ‘ಬಿ’ ದರ್ಜೆ ಅಧಿಕಾರಿಗಳು (ಐ.ಪಿ.ಎಸ್ ಅಧಿಕಾರಿಗಳನ್ನು ಹೊರತುಪಡಿಸಿ) ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಖರೀದಿಸಲು / ಮಾರಾಟ ಮಾಡಲು / ಉಡುಗೊರೆ ಪಡೆಯಲು / ಗೃಹ ನಿರ್ಮಾಣ ಮಾಡಲು ಅನುಮತಿ ಕೋರಿ ಮನವಿಗಳನ್ನು ಪೊಲೀಸ್‌ ಪ್ರಧಾನ ಕಛೇರಿಗೆ ಸಲ್ಲಿಸುತ್ತಿದ್ದು, ಸದರಿಯವರುಗಳು ಸಲ್ಲಿಸುತ್ತಿರುವ ಮನವಿ / ಪ್ರಸ್ತಾವನೆಗಳನ್ನು ಪರಿಶೀಲಿಸಲಾಗಿ, ಸಲ್ಲಿಸುತ್ತಿರುವ ಮನವಿಗಳು ಅಪೂರ್ಣವಾಗಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಮನವಿಯೊಂದಿಗೆ ಸಲ್ಲಿಸದಿರುವುದು ಕಂಡುಬಂದಿರುತ್ತದೆ. ಇದರಿಂದ ಅನಗತ್ಯ ವಿಳಂಬಕ್ಕೆ ಕಾರಣವಾಗಿರುತ್ತದೆ.

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ಜೆ 2021,ನಿಯಮಗಳು, ದಿನಾಂಕ: 07/01/2021 ಡಿ ನಿಯಮ 24 ರಂತೆ ಚರ, ಸ್ಥಿರ ಮತ್ತು ಬೆಲೆಬಾಳುವ ಸ್ವತ್ತು ಎಂಬುದರಡಿಯಲ್ಲಿ ಉಪ ನಿಯಮ (3) ರನ್ವಯ ಯಾರೇ ಸರ್ಕಾರಿ ನೌಕರನು ಅಥವಾ ಅವನ ಕುಟುಂಬದ ಯಾರೇ ಸದಸ್ಯನು ನಿಯಮಿಸಲಾದ ಪ್ರಾಧಿಕಾರಕ್ಕೆ ಮೊದಲೇ ತಿಳಿಸಿದ ಹೊರತು, ತನ್ನ ಸ್ವಂತ ಹೆಸರಿನಲ್ಲಾಗಲೀ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಹೆಸರಿನಲ್ಲಾಗಲೀ ಗುತ್ತಿಗೆಯ, ಅಡಮಾನದ, ಖರೀದಿಯ, ಮಾರಾಟದ ಉಡುಗೊರೆಯ ಮೂಲಕ ಅಥವಾ ಅನ್ಯಥಾ ಯಾವುದೇ ಸ್ಥಿರ ಸ್ವತ್ತನ್ನು ಅರ್ಜಿಸತಕ್ಕದ್ದಲ್ಲ ಅಥವಾ ವಿಲೇ ಮಾಡತಕ್ಕದ್ದಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

Categories
ರಾಷ್ಟ್ರೀಯ ವಾರ್ತೆ

ಸಮುದ್ರದಾಳದ ದ್ವಾರಕೆಗೆ ಮೋದಿ ಭೇಟಿ!

ಸಮುದ್ರದಾಳದ ದ್ವಾರಕೆಗೆ ಮೋದಿ ಭೇಟಿ!
– ದ್ವಾರಕಾಧೀಶ ದೇವಾಲಯಕ್ಕೆ ನವಿಲು ಗರಿ ಅರ್ಪಣೆ!
– ದ್ವಾರಕಾ ನಗರದ ಸುದರ್ಶನ ಸೇತುವಿನ ಉದ್ಘಾಟನೆ!
– ಶ್ರೀಕೃಷ್ಣ ನಗರಿಯನ್ನು ಕಂಡು ಮೋದಿ ಭಾವುಕ!

NAMMUR EXPRESS NEWS:
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ದ್ವಾರಕಾದಲ್ಲಿ ಅಳವಾದ ನೀರಿನಲ್ಲಿ ಮುಳುಗಿ ದ್ವಾರಕಾಧೀಶ ದೇವಸ್ಥಾನದಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಿದರು. “ಆಧ್ಯಾತ್ಮಕ ಹಿರಿಮೆಯ ಪುರಾತನ ಯುಗಕ್ಕೆ ಸಂಪರ್ಕ ಹೊಂದಿದ ಅನುಭವವಾಯಿತು” ಎಂದು ಪ್ರಧಾನಿ ಮೋದಿ ಅವರು ಇದನ್ನು ‘ದೈವಿಕ ಅನುಭವ’ ಎಂಬುದಾಗಿ ಬಣ್ಣಿಸಿದ್ದಾರೆ. ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವುದು ಬಹಳ ದೈವಿಕ ಅನುಭೂತಿ. ದೈವಿಕ ಔನ್ನತ್ಯ ಹಾಗೂ ಕಾಲಮಿತಿಯಿಲ್ಲದ ಭಕ್ತಿಯ ಪುರಾತನ ಯುಗಕ್ಕೆ ನಂಟು ಬೆಸೆದುಕೊಂಡಂತೆ ಅನಿಸಿತು. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನೂ ಹರಸಲಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹೇಳಿದ್ದಾರೆ. ಇಂದು ನಾನು ಅನುಭವಿಸಿದ ಆ ಕ್ಷಣಗಳು ನನ್ನ ಜೀವನದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯಲಿವೆ.

ನಾನು ಸಮುದ್ರದ ಆಳಕ್ಕೆ ತೆರಳಿದ್ದೆ ಮತ್ತು ಪುರಾತನ ದ್ವಾರಕಾ ನಗರದ ದರ್ಶನ ಮಾಡಿದೆ. ನೀರಿನ ಅಡಿಯಲ್ಲಿ ಅಡಗಿರುವ ದ್ವಾರಕಾ ನಗರದ ಬಗ್ಗೆ ಪುರತತ್ವ ಶಾಸ್ತ್ರಜ್ಞರು ಸಾಕಷ್ಟು ಬರೆದಿದ್ದಾರೆ. ನಮ್ಮ ಗ್ರಂಥಗಳಲ್ಲಿ ಕೂಡ ಸುಂದರ ದ್ವಾರಗಳು ಹಾಗೂ ಜಗತ್ತಿನ ತುದಿಯ ಎತ್ತರದಷ್ಟು ಉದ್ದನೆಯ ಕಟ್ಟಡಗಳಿದ್ದ ನಗರ ಎಂಬುದಾಗಿ ದ್ವಾರಕಾವನ್ನು ವರ್ಣಿಸಲಾಗಿದೆ. ಶ್ರೀ ಕೃಷ್ಣ ಸ್ವತಃ ಈ ನಗರವನ್ನು ನಿರ್ಮಿಸಿದ್ದ” ಎಂದು ದ್ವಾರಕಾ ದರ್ಶನದ ಬಳಿಕ ನಡೆದ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ತಿಳಿಸಿದರು. ನಾನು ಸಾಗರದ ಆಳಕ್ಕೆ ಇಳಿದಾಗ, ದೈವಿಕತೆಯ ಅನುಭವ ಪಡೆದೆ… ದ್ವಾರಕಾಧೀಶನ ಎದುರು ತಲೆಬಾಗಿದೆ.

ನನ್ನೊಂದಿಗೆ ನವಿಲುಗರಿಯನ್ನು ಕೊಂಡೊಯ್ದು, ಅದನ್ನು ಶ್ರೀ ಕೃಷ್ಣನ ಪಾದ ಕಮಲಗಳ ಬಳಿ ಇರಿಸಿದೆ. ಅಲ್ಲಿಗೆ ಹೋಗುವ ಮತ್ತು ಅಳಿದುಳಿದ ಪುರಾತನ ದ್ವಾರಕಾ ನಗರವನ್ನು ಸ್ಪರ್ಶಿಸುವ ಕುತೂಹಲ ಸದಾ ನನ್ನಲ್ಲಿ ಇತ್ತು. ಇಂದು ನಾನು ಸಂಪೂರ್ಣ ಭಾವುಕನಾಗಿದ್ದೇನೆ. ದಶಕಗಳಷ್ಟು ಹಳೆಯದಾದ ಕನಸು ಇಂದು ಈಡೇರಿದೆ” ಎಂದು ಹೇಳಿದರು. ಬೇಯ್ ದ್ವಾರಕಾ ದ್ವೀಪದ ಸಮೀಪದ ಕರಾವಳಿಯಲ್ಲಿ ಪ್ರಧಾನಿ ಮೋದಿ ಸ್ಕೂಬಾ ಡೈವಿಂಗ್ ನಡೆಸಿದರು. ಪುರತತ್ವ ಇಲಾಖೆಅಧಿಕಾರಿಗಳು ಈ ಭಾಗದಲ್ಲಿ ಪುರಾತನ ದ್ವಾರಕಾ ನಗರದ ಅವಶೇಷಗಳನ್ನು ಪತ್ತೆ ಮಾಡಿದ್ದು, ಜನರು ಅದನ್ನು ವೀಕ್ಷಿಸಲು ಅವಕಾಶವಿದೆ.

ದ್ವಾರಕಾ ನಗರದ ಸುದರ್ಶನ ಸೇತುವನ್ನು ಉದ್ಘಾಟಿಸಿದ ಪ್ರಧಾನಿ:

ದ್ವಾರಕಾದಲ್ಲಿನ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಕೂಡ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ದೇಶದ ಅತಿ ಉದ್ದನೆಯ ಕೇಬಲ್ ಸೇತುವೆ ಎನಿಸಿರುವ ‘ಸುದರ್ಶನ ಸೇತು’ವನ್ನು ಉದ್ಘಾಟಿಸಿದರು. ಬೇಯ್ ದ್ವಾರಕಾ ದ್ವೀಪ ಹಾಗೂ ದೇವಭೂಮಿ ಸೇತುವೆ ಇದಾಗಿದೆ. 979 ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.

Categories
ಬೆಂಗಳೂರು

ಮೆಟ್ರೋದಲ್ಲಿ ರೈತನಿಗೆ ಅಪಮಾನ..!

ಮೆಟ್ರೋದಲ್ಲಿ ರೈತನಿಗೆ ಅಪಮಾನ..!
– ಅರ್ಧಗಂಟೆಯಲ್ಲೇ ಸೆಕ್ಯೂರಿಟಿ ವಜಾ
– ಮಾನವೀಯತೆಯನ್ನೇ ಮರೆತು ಬಿಟ್ಟರಾ ಮೆಟ್ರೋ ಸಿಬ್ಬಂದಿ?

NAMMUR EXPRESS NEWS
ಬೆಂಗಳೂರು: ರಾಜಾಜಿನಗರ ಮೆಟ್ರೋ ಸಿಬ್ಬಂದಿಗಳು ಬಟ್ಟೆ ಕ್ಲೀನ್ ಆಗಿಲ್ಲ ಎಂದು ರೈತನನ್ನು ಒಳಗೆ ಬಿಡದೆ ತಡೆದಿದ್ದರು. ಈ ಘಟನೆಯ ವಿಡಿಯೋ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಮೆಟ್ರೋ ಸಿಬ್ಬಂದಿಗಳ ಅತಿರೇಕದ ವರ್ತನೆಗೆ ಕೂಡಲೇ ಬ್ರೇಕ್ ಬೀಳಬೇಕು ಎಂದಿದ್ದೇ ತಡ ಇದೀಗ ಬಿಎಂಆರ್‌ಸಿಎಲ್ ಸೆಕ್ಯೂರಿಟಿಯನ್ನು ಘಟನೆ ನಡೆದ ಅರ್ಧಗಂಟೆಯೊಳಗೆ ವಜಾಗೊಳಿಸಿದೆ.

ಮಾನವೀಯತೆಯನ್ನೇ ಮರೆತು ಬಿಟ್ಟರಾ ನಮ್ಮ ಮೆಟ್ರೋ ಸಿಬ್ಬಂದಿ? ದೇಶದ ಬೆನ್ನೆಲುಬು ರೈತನಿಗೆ ಬೆಂಗಳೂರು ಮೆಟ್ರೋದಲ್ಲಿ ಅವಮಾನ ಮಾಡಲಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ಟಿಫ್‌ ಟಾಪ್‌ ಆಗಿ ಡ್ರೆಸ್ ಹಾಕೊಂಡ್ರೆ ಮಾತ್ರ ಮೆಟ್ರೋದೊಳಗೆ ಎಂಟ್ರಿನಾ? ಬಟ್ಟೆ ಕ್ಲೀನ್ ಇಲ್ಲ ಅಂತ ರೈತನನ್ನು ಮೆಟ್ರೋ ಒಳಗೆ ಬಿಡದ ಸಿಬ್ಬಂದಿ. ರಾಜಾಜಿನಗರ ನಮ್ಮ ಮೆಟ್ರೋ ಸಿಬ್ಬಂದಿಯಿಂದ ಅತಿರೇಕದ ವರ್ತನೆ. ಬಡ ರೈತನ ಮೇಲೆ ಸಿಬ್ಬಂದಿಯ ದುರಾಹಂಕಾರದ ವರ್ತನೆ ದೃಶ್ಯ ಸಹ ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆಯಾಗಿದೆ.

Categories
ಬೆಂಗಳೂರು ರಾಜ್ಯ ಹವಾಮಾನ ಸುದ್ದಿ

ತಾಪಮಾನ ವಿಪರೀತ ಹೆಚ್ಚಳ!

ತಾಪಮಾನ ವಿಪರೀತ ಹೆಚ್ಚಳ!
– ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಹಾವುಗಳು!
– ಸಾರ್ವಜನಿಕರೇ ಎಚ್ಚರ.!

NAMMUR EXPRESS NEWS
ಬಿಸಿಲಿನ ತಾಪ ಹೆಚ್ಚುತ್ತಿದ್ದು ಹಾವುಗಳು ತಮ್ಮ ಗೂಡನ್ನು ಬಿಟ್ಟು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಮಲಗುವ ಮುನ್ನ ಮನೆಯ ಒಳ ಹೊರಭಾಗವನ್ನು ಚೆನ್ನಾಗಿ ಗಮನಿಸಿ ಬಾಗಿಲು ಕಿಟಕಿಗಳನ್ನು ಭದ್ರವಾಗಿ ಮುಚ್ಚಿ. ರಾತ್ರಿ ವೇಳೆ ಹೊರಗೆ ಹೋಗುವಾಗ ಮನೆಯ ಹೊರಗೆ ಲೈಟ್ ಹಾಕಿ, ಕೈಯಲ್ಲಿ ಟಾರ್ಚ್ ಲೈಟ್ ಹಿಡಿದುಕೊಂಡು ನಡೆಯುವಾಗ ಅಕ್ಕ ಪಕ್ಕ ನೋಡಿಕೊಂಡು ನಡೆಯಿರಿ. ನಿಲುಗಡೆ ಮಾಡಿದ ವಾಹನವನ್ನು ಹತ್ತುವ ಮೊದಲು ವಾಹನದ ಒಳಗೆ ಚೆನ್ನಾಗಿ ನೋಡಿ, ನಿಮ್ಮ ವಾಹನಗಳನ್ನು ಗಿಡಗಂಟಿಗಳು ಅಥವಾ ಹುಲ್ಲುಗಾವಲಿನಲ್ಲಿ ನಿಲ್ಲಿಸಬೇಡಿ. ಸಂಪೂರ್ಣ ತಪಾಸಣೆಯ ನಂತರ ಹೆಲ್ಮೆಟ್ ಜಾಕೆಟ್ ಮತ್ತು ಬೂಟುಗಳನ್ನು ಧರಿಸಿ. ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಅಪಾಯವನ್ನು ತಡೆಯಿರಿ.

Categories
ಮಂಗಳೂರು

ಪಿಎಚ್‌ಡಿ ವಿದ್ಯಾರ್ಥಿ ನಾಪತ್ತೆ; ನೂರಾರು ಅನುಮಾನ!

ಪಿಎಚ್‌ಡಿ ವಿದ್ಯಾರ್ಥಿ ನಾಪತ್ತೆ; ನೂರಾರು ಅನುಮಾನ!
– ಎಂಟು ದಿನದ ನಂತರ ಸಿಕ್ಕ ಸ್ಕೂಟಿ; ಲವ್ ಜಿಹಾದ್ ಶಂಕೆ
– ಎರಡು ರಿಕ್ಷಾಗಳ ನಡುವೆ ಅಪಘಾತ; ಹತ್ತಕ್ಕೂ ಅಧಿಕ ಮಂದಿಗೆ ಗಾಯ!

NAMMUR EXPRESS NEWS
ಮಂಗಳೂರು : ಎಂಟು ದಿನಗಳ ಹಿಂದೆ ಕೋಟೆಕಾರು ಸಮೀಪದ ಪಿಜಿಯೊಂದರಿಂದ ನಾಪತ್ತೆಯಾಗಿರುವ ದೇರಳಕಟ್ಟೆಯ ಪಿಎಚ್‌ಡಿ ವಿದ್ಯಾರ್ಥಿನಿಯ ಸ್ಕೂಟಿ ಭಾನುವಾರ ಸುರತ್ಕಲ್‌ನಲ್ಲಿ ಪತ್ತೆಯಾಗಿದೆ. ಇದೊಂದು ಲವ್ ಜಿಹಾದ್ ಪ್ರಕರಣ ಎಂಬ ಆರೋಪ ಕೇಳಿ ಬಂದಿದೆ. ಪುತ್ತೂರಿನ ದಿ. ಸತೀಶ್ ಹೆಬ್ಬಾರ್ ಎಂಬವರ ಪುತ್ರಿ ಚೈತ್ರಾ ಹೆಬ್ಬಾರ್ (27) ನಾಪತ್ತೆಯಾದವರು. ಕೋಟೆಕಾರು ಮಾಡೂರು ಬಳಿ ಪಿಜಿಯಲ್ಲಿ ನೆಲೆಸಿದ್ದ ಈಕೆ ಎಂಎಸ್ಸಿ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಫುಡ್ ಸೆಕ್ಯುರಿಟಿ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತಿದ್ದರು. ಫೆ. 17ರಂದು ಪಿಜಿಯಿಂದ ಹೋದಾಕೆ ಕಾಲೇಜಿಗೆ ಹೋಗದೆ ನಾಪತ್ತೆಯಾಗಿದ್ದಾರೆ. ಪುತ್ತೂರಿನ ಮುಸ್ಲಿಂ ಯುವಕ ಮಾಡೂರಿನಲ್ಲಿರುವ ಈ ಪಿಜಿಗೆ ಆಗಾಗ ಬಂದು ಹೋಗುತ್ತಿದ್ದ.

10 ದಿನಗಳ ಹಿಂದೆ ಸ್ಥಳೀಯರು ಈ ಸಂಗತಿಯನ್ನು ಬಜರಂಗದಳದ ಗಮನಕ್ಕೆ ತಂದಿದ್ದರು. ಪಿಜಿಯಲ್ಲಿ ವಿಚಾರಿಸಿದಾಗ ಹಿಂದೂ ವಿದ್ಯಾರ್ಥಿನಿಯರು ಇರುತ್ತಿದ್ದ ಪಿಜಿಯಲ್ಲಿ ಆತನೂ ಉಳಿಯುತ್ತಿದ್ದ ಎಂಬ ಸಂಗತಿ ಬಯಲಾಗಿತ್ತು ಎಂದು ಬಜರಂಗದಳ ದೂರಿದೆ. ಈ ಕುರಿತು ಆಕೆಯ ಚಿಕ್ಕಪ್ಪ ಪ್ರಕಾಶ್ ಹೆಬ್ಬಾರ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ನಾಪತ್ತೆಯಾಗಿ 8 ದಿನಗಳು ಕಳೆದ ಬಳಿಕ ಭಾನುವಾರ ಸುರತ್ಕಲ್ ಸಮೀಪ ಚೈತ್ರಾ ಉಪಯೋಗಿಸುತ್ತಿದ್ದ ಆಕ್ಟಿವಾ ಸ್ಕೂಟರ್ ಪತ್ತೆಯಾಗಿದೆ. ಆ ಯುವಕ ಡ್ರಗ್ ಪೆಡ್ಲರ್ ಆಗಿರುವ ಸಂಶಯದಿಂದ ಚೈತ್ರಾಳ ದೊಡ್ಡಪ್ಪನನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು.

ದೊಡ್ಡಪ್ಪ ಈ ಬಗ್ಗೆ ಯುವತಿಯ ವಿಚಾರಣೆ ನಡೆಸಿದ ಮರುದಿನ ಫೆ. 17 ರಂದು ಚೈತ್ರಾ ದಿಢೀರ್ ನಾಪತ್ತೆಯಾಗಿದ್ದಾಳೆ. ಆ ಯುವಕನೇ ಚೈತ್ರಾಳನ್ನು ಅಪಹರಿಸಿರುವ ಸಾಧ್ಯತೆಯಿದೆ ಎಂದು ಆರೋಪಿಸಲಾಗಿದೆ. ಈ ಯುವಕನೇ ಆಕೆಯನ್ನು ಅಪಹರಿಸಿರುವ ಸಾಧ್ಯತೆಯಿದೆ. ಆತನನ್ನು ತಕ್ಷಣ ಬಂಧಿಸಬೇಕು. ಮೂರು ದಿನಗಳ ಒಳಗೆ ಯುವತಿಯನ್ನು ಪತ್ತೆ ಮಾಡದೆ ಇದ್ದಲ್ಲಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಬಜರಂಗದಳ ಉಳ್ಳಾಲ ಪ್ರಖಂಡ ಸಂಚಾಲಕ ಅರ್ಜುನ್ ಮಾಡೂರು ಎಚ್ಚರಿಸಿದ್ದಾರೆ.

ಎರಡು ರಿಕ್ಷಾಗಳ ನಡುವೆ ಅಪಘಾತ; ಹತ್ತಕ್ಕೂ ಅಧಿಕ ಮಂದಿಗೆ ಗಾಯ!

ಎರುಂಬು ನಿವಾಸಿ ಹಮೀದ್ ಎರುಂಬು, ಪಡಿಬಾಗಿಲು ನಿವಾಸಿ ರವಿ ಪಡಿಬಾಗಿಲು ಅವರ ರಿಕ್ಷಾಗಳಿಗೆ ನೇರ ರಸ್ತೆಯಲ್ಲಿ ಢಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಒಂದು ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. ಘಟನೆಯಲ್ಲಿ ಅಳಿಕೆ ಗ್ರಾಮದ ಮಡಿಯಾಲ ನಿವಾಸಿ ಅಮ್ಮು ಮೂಲ್ಯ (69) ಅವರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Categories
ಅಡಿಕೆ-ದರ

ಇಂದಿನ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ

ಅಡಿಕೆ ದರ
(26-02-2024)
ಸರಕು 61000 76420
ಬೆಟ್ಟೆ 45102 53559
ರಾಶಿ 32159 47759
ಗೊರಬಲು 16589 34169
Nammur Express

Categories
ಕರಾವಳಿ

ಗೇರಿನ ತೋಪಿಗೆ ಆಕಸ್ಮಿಕ ಬೆಂಕಿ!

ಗೇರಿನ ತೋಪಿಗೆ ಆಕಸ್ಮಿಕ ಬೆಂಕಿ!
– ಅಪಾರ ಪ್ರಮಾಣದ ಗೇರುಗಿಡ ನಾಶ!
– ಬೆಂಕಿ ಆರಿಸಲು ಸಾತ್ ಕೊಟ್ಟ ಶಾಸಕರು!

NAMMUR EXPRESS NEWS
ಪುತ್ತೂರು: ಚಿಕ್ಕಮುಡ್ನರು ಗ್ರಾಮದ ರಾಗಿದಕುಮೇರು ಬಳಿಯ ಕಡ್ಲಿಮಾರ್ ಎಂಬಲ್ಲಿ ಗೇರು ತೋಪಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಗೇರು ಗಿಡಗಳು ನಾಶವಾದ ಘಟನೆ ಭಾನುವಾರ ಸಂಜೆ ನಡೆದಿದೆ. ನೂರಾರು ಗೇರು ಗಿಡಗಳಿರುವ ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಇಡೀ ಗೇರು ತೋಪಿಗೆ ಆವರಿಸಿತ್ತು. ದಿವಾಕರ ರೈ ಎಂಬವರಿಗೆ ಸೇರಿದ ಗೇರು ತೋಟದಲ್ಲಿ ಹೇಗೆ ಬೆಂಕಿ ಹತ್ತಿಕೊಂಡಿದೆ ಎಂಬುದು ಗೊತ್ತಾಗಿಲ್ಲ. ತೋಟದ ಕೆಳಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು ಅದರಿಂದ ಬೆಂಕಿಕಿಡಿ ಹೊತ್ತಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಹೂ ಬಿಡಲು ಸಿದ್ದವಾದ ನೂರಾರು ಗಿಡಗಳು ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯರ ಬೆಂಕಿ ನಂದಿಸುವ ಪ್ರಯತ್ನ ಸಫಲವಾಗಲಿಲ್ಲ.

ಅಗ್ನಿಶಾಮಕ ದಳದ ಜೊತೆ ಸೇರಿಕೊಂಡ ಶಾಸಕರು:

ಪುರುಷರಕಟ್ಟೆ ಕ್ರಿಕೆಟ್ ಪಂದ್ಯಾಟ ಕಾರ್ಯಕ್ರಮ ಮುಗಿಸಿ ಬೆದ್ರಾಳ ಮೂಲಕ ಉಪ್ಪಿನಂಗಡಿಗೆ ತೆರಳುವ ದಾರಿ ಮಧ್ಯೆ ಸಾಲ್ಮರ ತಲುಪುವ ವೇಳೆ ಅಗ್ನಿಶಾಮಕ ವಾಹನ ತೆರಳುತ್ತಿರುವುದನ್ನು ಗಮನಿಸಿದ ಶಾಸಕರು ಅವರ ಜೊತೆಯೇ ತೆರಳಿದರು. ತಕ್ಷಣವೇ ಹೊತ್ತಿ ಉರಿಯುತ್ತಿದ್ದ ಕಡೆಗೆ ತೆರಳಿದ ಶಾಸಕರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

Categories
ಬೆಂಗಳೂರು ರಾಜ್ಯ

ವಾಹನ ಸವಾರರೇ ಎಚ್ಚರ.. ಎಚ್ಚರ.!

ವಾಹನ ಸವಾರರೇ ಎಚ್ಚರ.. ಎಚ್ಚರ.!
– ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ವಾಹನ ಗುಜರಿಗೆ!
– ಕರ್ನಾಟಕ ಸಾರಿಗೆ ಇಲಾಖೆ ಹೊಸ ರೂಲ್ಸ್.!

NAMMUR EXPRESS NEWS
ಬೆಂಗಳೂರು: ಪದೇ ಪದೇ ಟ್ರಾಫಿಕ್ ನಿಯಮ ಬ್ರೇಕ್ ಮಾಡುತ್ತೀರಾ? ಹಾಗಾದರೆ ಇನ್ನು ಮುಂದೆ ಎಚ್ಚರವಹಿಸುವುದು ಅತೀ ಅಗತ್ಯ. ಕಾರಣ, ಕೇವಲ ದಂಡ ಕಟ್ಟಿದರೆ ನಿಯಮ ಉಲ್ಲಂಘನೆ ಕೇಸ್ ಮುಗಿಯುವುದಿಲ್ಲ. ನಿಮ್ಮ ವಾಹನ ಸೀಜ್ ಮಾಡಿ ಗುಜುರಿಗೆ ಹಾಕಲಾಗುತ್ತದೆ. ಈ ಹೊಸ ನಿಯಮವನ್ನು ಕರ್ನಾಟಕ ಸಾರಿಗೆ ಇಲಾಖೆ ರೂಪಿಸಿದೆ. ಇದೀಗ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬೆಂಗಳೂರು ಸೇರಿದಂತೆ ಇತರ ನಗರ, ಪಟ್ಟಣಗಳಲ್ಲಿ ವಾಹನ ಸವಾರರು ನಿಮಯ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಪೊಲೀಸರು ಇಲ್ಲ ಎಂದು ಸಿಗ್ನಲ್ ಜಂಪ್, ರಾಂಗ್ ಸೈಡ್, ಸೀಟ್ ಬೆಲ್ಟ್ ಸೇರಿದಂತೆ ಹಲವು ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ 30 ಸಾವಿರ,50 ಸಾವಿರ, 1 ಲಕ್ಷ ರೂಪಾಯಿ ದಂಡ ಬಾಕಿ ಉಳಿಸಿಕೊಂಡ ಘಟನೆಗಳು ಬೆಳಕಿಗೆ ಬಂದಿದೆ. ವಾಹನ ಮೌಲ್ಯವೇ ದಂಡದಷ್ಟಿಲ್ಲ ಎಂದು ಅಳಲು ತೋಡಿಕೊಂಡ ಘಟನೆಗಳು ವರದಿಯಾಗಿದೆ.

ಈ ಸಮಸ್ಯೆಗಳಿಗೆ ಉತ್ತರ ಹುಡುಕಲು ಸಾರಿಗೆ ಇಲಾಖೆ ಹೊಸ ಸೂತ್ರ ಮುಂದಿಟ್ಟಿದೆ. ಮೊದಲ ಹಂತದಲ್ಲಿ 50 ಸಾವಿರ ರೂಪಾಯಿಗೂ ಅಧಿಕ ಮೊತ್ತದ ದಂಡ ಬಾಕಿ ಉಳಿಸಿಕೊಂಡ ವಾಹನಗಳನ್ನು ಸೀಜ್ ಮಾಡಿ ಗುಜುರಿಗೆ ಹಾಕುವ ಹೊಸ ನಿಯಮ ಜಾರಿಗೆ ತರಲು ಕರ್ನಾಟಕ ಮುಂದಾಗಿದೆ. ಇದುವರೆಗೆ ದುಬಾರಿ ದಂಡ ಕಟ್ಟದ ವಾಹನಗಳನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಯಲ್ಲಿ ಇಡಲಾಗುತ್ತಿತ್ತು. ದಂಡ ಕಟ್ಟಿದ ಬಳಿಕ ವಾಹನ ಮರಳಿ ನೀಡಲಾಗುತ್ತದೆ.

ಹೊಸ ನಿಯಮದ ಪ್ರಕಾರ, ದುಬಾರಿ ದಂಡ ಪಾವತಿ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಗುಜುರಿಗೆ ಹಾಕಲಾಗುತ್ತದೆ. ಈ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಈ ಪ್ರಸ್ತಾವನೆಯನ್ನು ಪರಿಶೀಲಿಸಲು ಮುಂದಾಗಿದೆ. ಸಾರಿಗೆ ಇಲಾಖೆ ಈ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಂಡರೆ ಹೊಸ ಕಾನೂನು ಜಾರಿಗೆ ಬರಲಿದೆ. ನಗರ ಪ್ರದೇಶದಲ್ಲಿ ಹಾಗೂ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಮಾಣದಲ್ಲಿ ಟ್ರಾಫಿಕ್ ನಿಯಮ ಪಾಲಿಸದೆ ನಡೆಯುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಸುರಕ್ಷತೆ, ಸುಗಮ ಸಂಚಾರಕ್ಕಾಗಿ ಇದೀಗ ಕಟ್ಟು ನಿಟ್ಟಿನ ಟ್ರಾಫಿಕ್ ನಿಯಮ ಪಾಲನೆಗೆ ಹೊಸ ನಿಯಮ ಜಾರಿಗೆ ಸಾರಿಗೆ ಇಲಾಖೆ ತಯಾರಿ ನಡೆಸಿದೆ.

Categories
ಬೆಂಗಳೂರು ರಾಜ್ಯ

ಶಾಲಾ ಶಿಕ್ಷಕರ ಸಂಘದಿಂದ ಹಲವು ಬೇಡಿಕೆ!

ಶಾಲಾ ಶಿಕ್ಷಕರ ಸಂಘದಿಂದ ಹಲವು ಬೇಡಿಕೆ!
– ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಬೋಧನೆ ಸ್ಥಗಿತ.!
– ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎಚ್ಚರಿಕೆ!

NAMMUR EXPRESS NEWS
ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಕ್ಷಣ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ನೀಡುವುದು ಸೇರಿ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ರಾಜ್ಯಾದ್ಯಂತ ಬೋಧನೆ ಸ್ಥಗಿತಗೊಳಿಸಿ ಅಸಹಕಾರ ಚಳವಳಿ ನಡೆಸಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಕೆ.ನಾಗೇಶ, ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸೇವಾನಿರತ ಪದವೀಧರ ಶಿಕ್ಷಕರಲ್ಲಿ ಬೇಧ ಮಾಡದೆ ಸರ್ಕಾರವು ‘ಪದವೀಧರ ಶಿಕ್ಷಕರು’ ಎಂದು ಪರಿಗಣಿಸಬೇಕು. ಹೊಸ 2016 ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪೂರ್ವಾನ್ವಯಗೊಳಿಸಬಾರದು.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಕ್ಷಣ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ನೀಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸಮಾಲೋಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲು ಸಭೆ ಆಯೋಜಿಸಬೇಕು. ಶಿಕ್ಷಕರ ತಾಳ್ಮೆಗೂ ಒಂದು ಮಿತಿ ಇದೆ. ತಾಳ್ಮೆಯನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು. ಬೇಡಿಕೆಗಳು ಈಡೇರದಿದ್ದರೆ ರಾಜ್ಯಾದ್ಯಂತ ಬೋಧನೆ ಸ್ಥಗಿತಗೊಳಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದು ವಿವರಿಸಿದ್ದಾರೆ.

Categories
ಬೆಂಗಳೂರು ರಾಜ್ಯ

ಮಾರ್ಚ್ 1ರವರೆಗೆ ದಕ್ಷಿಣ ಒಳನಾಡಿನಲ್ಲಿ ಭರ್ಜರಿ ಮಳೆ.!

ಮಾರ್ಚ್ 1ರವರೆಗೆ ದಕ್ಷಿಣ ಒಳನಾಡಿನಲ್ಲಿ ಭರ್ಜರಿ ಮಳೆ.!
– ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ
– ಹವಾಮಾನ ಇಲಾಖೆ ಮುನ್ಸೂಚನೆ

NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ಭಾರೀ ತಾಪಮಾನ ಏರಿಕೆಯಾಗಿದೆ. ಆದರೆ ಈ ಮಧ್ಯೆ ದಕ್ಷಿಣ ಒಳನಾಡಿನ 4 ಜಿಲ್ಲೆಗಳಲ್ಲಿ ಮಾರ್ಚ್ 1ರ ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೊಂದೆಡೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಲಿದ್ದು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೊಡಗಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಯಾದಗಿರಿ, ರಾಮನಗರ, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದ‌ರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ವಿಜಯನಗರದಲ್ಲಿ ಒಣಹವೆ ಮುಂದುವರೆಯಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇದರ ಜೊತೆಗೆ ದಕ್ಷಿಣ ಒಳನಾಡಿನ ಒಂದೆರಡು ಕಡೆ ಹಗುರ ಮಳೆ ಜೊತೆಗೆ, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.