Categories
ಮಾಹಿತಿ ರಾಜ್ಯ ಶಿಕ್ಷಣ

5,8,9,11ನೇ ತರಗತಿಗಳಿಗೆ ವೇಳಾಪಟ್ಟಿ!

5,8,9,11ನೇ ತರಗತಿಗಳಿಗೆ ವೇಳಾಪಟ್ಟಿ!
– ಹೈಕೋರ್ಟ್ ಗ್ರೀನ್ ಸಿಗ್ನಲ್​: ಶಿಕ್ಷಣ ಇಲಾಖೆ ವೇಳಾಪಟ್ಟಿ
– ಯಾವತ್ತು ಏನೇನ್ ಪರೀಕ್ಷೆ… ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ಬೆಂಗಳೂರು: ಶಾಲೆಗಳ 5,8,9,11ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್​ ನೀಡಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್‌ 25 ರಿಂದ ಬಾಕಿ ವಿಷಯಗಳಿಗೆ 28ರವರೆಗೆ ಪರೀಕ್ಷೆಗಳು ನಡೆಯಲಿವೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಇಲ್ಲದ ದಿನ ಬೆಳಿಗ್ಗೆ ಬೋರ್ಡ್​ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಪ್ಲಾನ್​ ಮಾಡಿದೆ. ಇನ್ನು, ಉಳಿದ ದಿನ ಮಧ್ಯಾಹ್ನ ಅವಧಿಯಲ್ಲೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಮಾರ್ಚ್ 25ನೇ ತಾರೀಕಿನಿಂದ ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗುತ್ತಿದ್ದು, ಎಸ್​ಎಸ್​ಎಲ್​ಸಿ ಪರೀಕ್ಷೆಗಳಿರುವ ದಿನಾಂಕ 25-3-24ರ ಸೋಮವಾರ ಮತ್ತು 27-3-24ರ ಬುಧವಾರದಂದು ಮಧ್ಯಾಹ್ನದ ಅವಧಿಯಲ್ಲಿ ಹಾಗೂ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಇಲ್ಲದಿರುವ ದಿನಾಂಕ 26-3-24 ರ ಮಂಗಳವಾರ ಮತ್ತು 28-3-24 ರ ಗುರುವಾರದಂದು ಬೆಳಗಿನ ಅವಧಿಯಲ್ಲಿ 5, 8 ಮತ್ತು 9ನೇ ತರಗತಿಯ ಮೌಲ್ಯಾಂಕವನ್ನು ನಡೆಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಪರೀಕ್ಷೆ ಮುಂದುವರಿಸುವ ಆದೇಶದಲ್ಲಿ ಏನಿದೆ?

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ನಡೆಸುವ ಸಂಬಂಧ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್.ಎಲ್.ಪಿ ಸಂಖ್ಯೆ: 6256/2024, ಎಸ್.ಎಲ್.ಪಿ ಸಂಖ್ಯೆ: 6257/2024 ಮತ್ತು ಡೈರಿ ಸಂಖ್ಯೆ: 11192/2024 ದಾವೆಗಳನ್ನು ಹೂಡಿದ್ದು, ಸದರಿ ದಾವೆಗಳನ್ನು ವಿಚಾರಣೆ ನಡೆಸಿ, ಈ ಹಿಂದೆ ರಾಜ್ಯ ಉಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠವು ಮೌಲ್ಯಾಂಕನವನ್ನು ಮುಂದುವರೆಸುವಂತೆ ನೀಡಿದ್ದ ಮಧ್ಯಂತರ ತೀರ್ಪನ್ನು ರದ್ದುಪಡಿಸಿರುತ್ತದೆ ಮತ್ತು ಪ್ರಕರಣವನ್ನು ರಾಜ್ಯ ಉಚ್ಛ ನ್ಯಾಯಾಲಯ ವಿಭಾಗೀಯ ಪೀಠಕ್ಕೆ ರವಾನಿಸಿತ್ತು.

ಈ ಹಿನ್ನೆಲೆಯಲ್ಲಿ ದಿನಾಂಕ: 13-3-2024ರಿಂದ ನಡೆಯಬೇಕಾಗಿದ್ದ 5.8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿತ್ತು. ಮುಂದುವರೆದು, ರಾಜ್ಯ ಘನ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ಸದರಿ ದಾವೆಯ ಪ್ರಕರಣವನ್ನು ವಿಚಾರಣೆ ನಡೆಸಿ ದಿನಾಂಕ: 22-3-2024ರಂದು ಅಂತಿಮ ತೀರ್ಪು ನೀಡಿದ್ದು, 5, 8 ಮತ್ತು 9ನೇ ತರಗತಿಗಳು 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ಕಾರ್ಯವನ್ನು ಉಳಿದ ವಿಷಯಗಳಿಗೆ ಮುಂದುವರೆಸಲು ಸೂಚಿಸಿ ಆದೇಶಿಸಿರುತ್ತದೆ. ಅದರಂತೆ ಸದರಿ ಮೌಲ್ಯಾಂಕನ ಕಾರ್ಯವನ್ನು ವಿದ್ಯಾರ್ಥಿಗಳ ಅಭ್ಯಾಸದ ಹಿತದೃಷ್ಟಿಯಿಂದ ದಿನಾಂಕ: 25-3-2024ರಿಂದ ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

5, 8, 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ವೇಳಾಪಟ್ಟಿ

5ನೇ ತರಗತಿ

ಮಾರ್ಚ್ 25- ಪರಿಸರ ಅಧ್ಯಯನ
ಮಾರ್ಚ್ 26- ಗಣಿತ

8ನೇ ತರಗತಿ

ಮಾರ್ಚ್ 25- ತೃತೀಯ ಭಾಷೆ
ಮಾರ್ಚ್ 26- ಗಣಿತ
ಮಾರ್ಚ್ 27- ವಿಜ್ಞಾನ
ಮಾರ್ಚ್ 28- ಸಮಾಜ ವಿಜ್ಞಾನ

9ನೇ ತರಗತಿ

ಮಾರ್ಚ್ 25- ತೃತೀಯ ಭಾಷೆ
ಮಾರ್ಚ್ 26- ಗಣಿತ
ಮಾರ್ಚ್ 27- ವಿಜ್ಞಾನ
ಮಾರ್ಚ್ 28- ಸಮಾಜ ವಿಜ್ಞಾನ

Categories
ತೀರ್ಥಹಳ್ಳಿ

ಮಾ.26: ಆರಗದಲ್ಲಿ ವಿಜೃಂಭಣೆಯ ಮಾರಿ ಜಾತ್ರೆ..!

ಮಾ.26: ಆರಗದಲ್ಲಿ ವಿಜೃಂಭಣೆಯ ಮಾರಿ ಜಾತ್ರೆ..!
– ಮಾ.25ಕ್ಕೆ ಶಿವದೂತ ಗುಳಿಗ ಕನ್ನಡ ನಾಟಕ ಪ್ರದರ್ಶನ
– ಮಾ.27ರ ಸಂಜೆ ವಿಜೃಂಭಣೆಯ ಮೆರವಣಿಗೆಯ ಮೂಲಕ ಗೊಂಬೆಯ ವಿಸರ್ಜನೆ

NAMMUR EXPRESS NEWS
ತೀರ್ಥಹಳ್ಳಿ: ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಆರಗ 14ನೇ ಶತಮಾನದಲ್ಲಿ ಆರಗ ಗುತ್ತಿ ರಾಜ್ಯದ ರಾಜಧಾನಿಯಾಗಿ ವಿಜಯನಗರ ಸಂಗಮ ದೊರೆಗಳ ಅಧೀನದಲಿತ್ತು. ವಿಜಯನಗರ ಆಳ್ವಿಕೆಯ ನಂತರ ಆರಗ ರಾಜ್ಯವು ಕೆಳದಿ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ವಿಜಯನಗರ ಸಾಮ್ರಾಜ್ಯದ ಮೇರು ಕವಿ ,ದಾಸರ ಶ್ರೇಷ್ಠ ಪುರಂದರ ದಾಸರ ಹುಟ್ಟೂರು ಆರಗ ಎಂಬುದಾಗಿ ಬೆಳಕಿಗೆ ಬಂದಿದ್ದು ಆರಗ ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಆರಗ ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಶತಮಾನಗಳ ನಂತರ ಆರಗ ಮತ್ತೊಮ್ಮೆ ಅಭಿವೃದ್ದಿಗೆ ತನ್ನನ್ನು ತಾನು ತೆರೆದುಕೊಂಡಿದೆ.
ಈ ಭಾಗದ ಪ್ರಮುಖರು ಸಂಗೀತ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ರಕ್ಷಣಾ ಇಲಾಖೆಯಲ್ಲಿ,ನ್ಯಾಯಾಂಗ ಇಲಾಖೆಯಲ್ಲಿ, ರಾಜಕೀಯವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.

ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಆರಗ ಮಾರಿಕಾಂಬಾ ಜಾತ್ರೆಯು ಪರಂಪರಾನುಗತವಾಗಿ ಆಚರಿಸುತ್ತಾ ಬಂದಿದ್ದು, ಮಾ.26ರ ಮಂಗಳವಾರ ಮತ್ತು ಬುಧವಾರ ವಿಜೃಂಭಣೆಯಿಂದ ಜರುಗಲಿದೆ. ಮಾರ್ಚ್ 26ರ ಮಂಗಳವಾರ ರಾತ್ರಿ ಮಾರಿಕಾಂಬಾ ದೇವಸ್ಥಾನದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿದ್ದು ,ಬುಧವಾರ ಮಾರಿಕಾಂಬ ಜಾತ್ರೆ ಜರುಗಲಿದ್ದು ಬುಧವಾರ ಸಂಜೆ 4 ಗಂಟೆಗೆ ಆರಗದ ಮುಖ್ಯ ರಸ್ತೆಯಲ್ಲಿ ವಿಜೃಂಭಣೆಯ ಮೆರವಣಿಗೆಯ ಮೂಲಕ ಗೊಂಬೆಯನ್ನು ಜಯಪುರದಲ್ಲಿ ವಿಸರ್ಜಿಸಲಾಗುತ್ತದೆ. ಮಂಗಳವಾರ ರಾತ್ರಿ ಮತ್ತು ಬುಧವಾರ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂರ್ಪಣಾ ಕಾರ್ಯಕ್ರಮವಿದೆ.

ಮಾರ್ಚ್ 25ರ ಸೋಮವಾರ ರಾತ್ರಿ 8:00 ಗಂಟೆಗೆ ಸರಿಯಾಗಿ ಆರಗದ ವಿಶಾಲವಾದ ಹಳೆಕೋಟೆ ಕ್ರೀಡಾಂಗಣದಲ್ಲಿ ಕಾಂತಾರ ಚಲನಚಿತ್ರ ಯಶಸ್ಸಿನ ಬೆನ್ನಿಗೆ ಸೃಷ್ಟಿಯಾದ ಶಿವದೂತ ಗುಳಿಗ ಕನ್ನಡದ ನಾಟಕ ಪ್ರದರ್ಶನಗೊಳ್ಳಲಿದೆ. ಇದು ಶಿವದೂತ ಗುಳಿಗ ನಾಟಕದ 606ನೇ ಪ್ರದರ್ಶನ. ಕಾಂತಾರದ ಗುರುವ ಪಾತ್ರಧಾರಿ ಶಿವದೂತ ಗುಳಿಗ ನಾಟಕದಲ್ಲಿ ಅಬ್ಬರಿಸಲಿದ್ದಾರೆ. ನಾಟಕದ ವೀಕ್ಷಕರಾಗಿ ಸಾವಿರಾರು ಜನರು ಸೇರುವ ನಿರೀಕ್ಷೆಯಿದ್ದು ಜಾತ್ರಾ ಸಮಿತಿಯ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.
ಮಾರಿಕಾಂಬೆ ಜಾತ್ರೆಯ ಯಶಸ್ಸಿಗೆ ಭಕ್ತಾದಿಗಳು ಸಹಕರಿಸಲು ಜಾತ್ರಾ ಸಮಿತಿ ಕೋರಿದೆ.

Categories
ಕರಾವಳಿ ರಾಜ್ಯ

ಬೆಳ್ತಂಗಡಿಯ ಮೂವರು ಕಾರಿನಲ್ಲೇ ಜೀವಂತ ದಹನ!

ಬೆಳ್ತಂಗಡಿಯ ಮೂವರು ಕಾರಿನಲ್ಲೇ ಜೀವಂತ ದಹನ!
– ತುಮಕೂರಿನ ಕೆರೆ ಅಂಗಳದಲ್ಲಿ ಸುಟ್ಟ ಕಾರಿನೊಳಗಿತ್ತು ಮೂವರ ಮೃತದೇಹ
– ಅನಾಥ ಕಾರಿನ ರಹಸ್ಯ ಭೇದಿಸಿದ ಪೊಲೀಸರು
– ಇನ್ನು ಇಬ್ಬರು ನಾಪತ್ತೆ: ಘಟನೆ ಕುತೂಹಲ

NAMMUR EXPRESS NEWS
ತುಮಕೂರು: ತುಮಕೂರಿನ ಕುಚ್ಚಂಗಿ ಕೆರೆ ಬಳಿ ಶುಕ್ರವಾರ ಬೆಳಗ್ಗೆ ಸುಟ್ಟು ನಿಲ್ಲಿಸಲಾಗಿದ್ದ ಕಾರಿನೊಳಗೆ ಮೂವರು ವ್ಯಕ್ತಿಗಳ ಮೃತದೇಹ ಪತ್ತೆಯಾಗಿತ್ತು. ಆದರೆ ಈ ಅನಾಥ ಶವಗಳ ಪ್ರಕರಣಕ್ಕೆ ಇದೀಗ ಬಿಗ್‌ ಟ್ವಿಸ್ಟ್‌ ಲಭಿಸಿದ್ದು, ಈ ಅನಾಥ ಕಾರಿನ ರಹಸ್ಯ ಕೂಡ ಬಯಲಾಗಿದೆ.
ಆರಂಭದಲ್ಲಿ ಈ ಕಾರು ದಕ್ಷಿಣ ಕನ್ನಡ ಜಿಲ್ಲೆಯ ರಫೀಕ್‌ ಎಂಬವರಿಗೆ ಸೇರಿದ್ದುಎನ್ನುವುದು ಗೊತ್ತಾಗಿತ್ತು. ಈ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಬೆನ್ನು ಹತ್ತಿದ್ದ ಪೊಲೀಸರಿಗೆ ದೊಡ್ಡ ಶಾಕ್‌ ಆಗಿದೆ.
ತುಮಕೂರಿನಲ್ಲಿ ಸುಟ್ಟು ಕರಕಲಾಗಿದ್ದ ಕಾರಿನಲ್ಲಿದ್ದ ಮೂರು ಮೃತದೇಹದ ಗುರುತು ಪತ್ತೆಯಾಗಿದೆ. ಕಾರು ಬೆಳ್ತಂಗಡಿಯ ಮದ್ದಡ್ಕ ನಿವಾಸಿ ರಫೀಕ್‌ಗೆ ಸೇರಿದ್ದು, ಮೃತದೇಹ ಕೂಡ ಬೆಳ್ತಂಗಡಿ ನಿವಾಸಿಗಳದ್ದುಎಂದು ತಿಳಿದುಬಂದಿದೆ.

ಮೃತರನ್ನು ನಡ ಗ್ರಾಮದ ಟಿ.ಬಿ. ಕ್ರಾಸ್‌ ನಿವಾಸಿ ಆಟೋ ಚಾಲಕ ಸಾಹುಲ್‌(45), ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಇಸಾಕ್‌(56) &ಶಿರ್ಲಾಲ್‌ ಗ್ರಾಮದ ನಿವಾಸಿ ಇಮ್ತಿಯಾಜ್‌(34) ಎಂದು ಗುರುತಿಸಲಾಗಿದೆ. ಆ ಕಾರಿನಲ್ಲಿ ಒಟ್ಟು 5 ಮಂದಿ ಇದ್ದು ಇಬ್ಬರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿಯಿದೆ. ಯಾವ ಕಾರಣಕ್ಕೆ ಇವರೆಲ್ಲರೂ ಕಾರಿನಲ್ಲಿ ತುಮಕೂರಿಗೆ ತೆರಳಿದ್ದು ಎನ್ನುವ ಬಗ್ಗೆ ಇನ್ನು ತಿಳಿದುಬಂದಿಲ್ಲ.

ಸಾರ್ವಜನಿಕರು ಕುಚ್ಚಂಗಿ ಕೆರೆಗೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಅಶೋಕ್.ಕೆ.ವಿ, ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ಚಂದ್ರಶೇಖರ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಎಫ್ ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನೆ ಸಂಬಂಧಪಟ್ಟಂತೆ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Categories
ರಾಜ್ಯ

ಟಾಪ್ ನ್ಯೂಸ್

ಕುಚ್ಚಂಗಿ ಕೆರೆಯಲ್ಲಿ ಭಸ್ಮವಾದ ಕಾರು ಪತ್ತೆ, ಒಳಗೆ 3 ಶವಗಳು!
– ಅಜ್ಜಿ ಮತ್ತು ಮೊಮ್ಮಗಳನ್ನು ಮೂಟೆ ಕಟ್ಟಿ ಎಸೆದ ದುರುಳರು
– ತೋಟಕ್ಕೆ ಹೋದ ಕಾರ್ಮಿಕನನ್ನು ಅಟ್ಟಾಡಿಸಿ ಕೊಂದ ಒಂಟಿ ಸಲಗ
– ಸಮುದ್ರದಲ್ಲಿ ಮೀನು ಹಿಡಿಯುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋದ ವಿದ್ಯಾರ್ಥಿ

NAMMUR EXPRESS NEWS
ತುಮಕೂರು: ತುಮಕೂರು ತಾಲೂಕಿನ ಕುಚ್ಚಂಗಿ ಕೆರೆಯಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿದೆ . ಅದರಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂರು ಶವಗಳಿವೆ . ಇದೊಂದು ಭಯಾನಕ ಕೊಲೆ ಪ್ರಕರಣ ಎಂದು ಹೇಳಲಾಗುತ್ತಿದೆ. ಕೆಎ 43 ರಿಜಿಸ್ಟ್ರೇಷನ್ ನಂಬರಿನ ಮಾರುತಿ ಕಂಪನಿಯ ಎಸ್ ಪ್ರೆಸ್ಸೋ ಕಾರು ಇದಾಗಿದ್ದು, ಕಾರಿನಲ್ಲಿ ಮೂವರು ಮೃತದೇಹಗಳು ಸುಟ್ಟ ರೀತಿಯಲ್ಲಿ ಪತ್ತೆಯಾಗಿವೆ. ಮೃತರ ಗುರುತು ಪತ್ತೆಯಾಗಿಲ್ಲ. ತಡರಾತ್ರಿ ಕಾರನ್ನು ಈ ನೀರಿಲ್ಲದ ಕೆರೆಗೆ ಇಳಿಸಿ ಬೆಂಕಿ ಹಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಅಥವಾ ಬೆಂಕಿ ಹಚ್ಚಿ ಕೆಳಗೆ ತಳ್ಳಿರುವ ಸಾಧ್ಯತೆಯೂ ಇದೆ. ದಕ್ಷಿಣ ಕನ್ನಡ ಮೂಲದ ರಫಿಕ್ ಎಂಬುವರಿಗೆ ಸೇರಿದ ಕಾರು ಎನ್ನಲಾಗಿದೆ. ಸ್ಥಳಕ್ಕೆ ತುಮಕೂರು ಎಸ್ ಪಿ ಅಶೋಕ್ ಕೆ.ವಿ ಭೇಟಿ ಪರಿಶೀಲನೆ ಮಾಡಿದ್ದಾರೆ. ಆದರೆ, ಕಾರಿನಲ್ಲಿ ಇದ್ದ ಮೂವರು ಯಾರು? ಅವರನ್ನು ಬೆಂಕಿ ಹಚ್ಚಿ ಕೊಲ್ಲಲಾಯಿತೇ? ಕಾರು ಬೆಂಕಿ ಹತ್ತಿಕೊಂಡು ಹೊರಗೆ ಬರಲಾಗದೆ ಸುಟ್ಟು ಹೋದರೇ? ಹೀಗೆ ಹಲವು ಸಂಶಯಗಳಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

– ಅಜ್ಜಿ ಮತ್ತು ಮೊಮ್ಮಗಳನ್ನು ಮೂಟೆ ಕಟ್ಟಿ ಎಸೆದ ದುರುಳರು

ಮಂಡ್ಯ : ಭೀಕರ ಜೋಡಿ ಕೊಲೆಗೆ ಮಂಡ್ಯ ಜಿಲ್ಲೆ ಬೆಚ್ಚಿ ಬಿದ್ದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚುಂಚನಗಿರಿ ಬಳಿ ಅಜ್ಜಿ ಮತ್ತು ಮೊಮ್ಮಗಳನ್ನು ಕೊಂದು ಮೂಟೆ ಕಟ್ಟಿ ಹೊಂಡಕ್ಕೆ ಎಸೆದ ಭೀಕರ ಘಟನೆ ನಡೆದಿದೆ. ಅಜ್ಜಿ ಮತ್ತು ಮೊಮ್ಮಗಳ ಜೋಡಿ ಶವ ಹೊಂಡದಲ್ಲಿ ಪತ್ತೆಯಾಗುತ್ತಿದ್ದಂತೆಯೇ ಜನರು ಹೌಹಾರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಲ್ಕೆರೆ ಗ್ರಾಮದ ಜಯಮ್ಮ(45) ಮತ್ತು ರಿಷಿಕ (3) ಎಂಬವರೇ ಕೊಲೆಯಾದ ದುರ್ದೈವಿಗಳು. ದುಷ್ಕರ್ಮಿಗಳು ಇವರಿಬ್ಬರನ್ನು ಕೊಂದು ಮೂಟೆಯಲ್ಲಿ ಕಟ್ಟಿ ಹೊಂಡಕ್ಕೆ ಎಸೆದಿದ್ದಾರೆ. ಮೂರು ದಿನಗಳ ಹಿಂದೆ ಈ ಕೊಲೆ ಮಾಡಲಾಗಿದ್ದು, ಮೂರು ದಿನಗಳ ಬಳಿಕ ಹೊಂಡದಲ್ಲಿ ಕೊಳೆತ ಸ್ಥಿತಿಯಲ್ಲಿ ಅಜ್ಜಿ ಮತ್ತು ಮೊಮ್ಮಗಳ ಕಳೇಬರ ಪತ್ತೆಯಾಗಿದೆ.

ಇವರು ಅಲೆಮಾರಿ ಜನಾಂಗಕ್ಕೆ ಸೇರಿದವರಾಗಿದ್ದು, ಇತ್ತೀಚೆಗಷ್ಟೇ ಚುಂಚನಗಿರಿ ಸಮೀಪದ ಪಾಳ್ಯ ಗ್ರಾಮಕ್ಕೆ ಬಂದು ನೆಲೆಸಿದ್ದರು. ಚುಂಚನಗಿರಿ ಬಳಿ ಹೊಂಡದಲ್ಲಿ ಮೂಟೆ ತೇಲುತ್ತಿರುವ ಬಗ್ಗೆ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂಟೆ ಹೊರ ತೆಗೆದು ಪರಿಶೀಲನೆ ನಡೆಸಿದರು. ಮೂಟೆಯಲ್ಲಿ ಅಜ್ಜಿ ಮತ್ತು ಮೊಮ್ಮಗಳ ಶವ ಕಂಡು ಪೊಲೀಸರೇ ಹೌಹಾರಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಮೃತರ ಗುರುತು ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಸಾಗುತ್ತಿದೆ.

– ತೋಟಕ್ಕೆ ಹೋದ ಕಾರ್ಮಿಕನನ್ನು ಅಟ್ಟಾಡಿಸಿ ಕೊಂದ ಒಂಟಿ ಸಲಗ

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ಎರಗಿದ ಒಂಟಿ ಸಲಗವು ಕೊಂದು ಹಾಕಿದೆ. ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿಯಲ್ಲಿ ಘಟನೆ ನಡೆದಿದೆ. ತಮಿಳುನಾಡು ಮೂಲದ ಕೂಲಿ ಕಾರ್ಮಿಕ ಶ್ರೀಧರ್ ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಶ್ರೀಧರ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೂಲಿ ಕಾರ್ಮಿಕ ಶ್ರೀಧರ್ ಉಸಿರು ಚೆಲ್ಲಿದ್ದಾರೆ. ಶ್ರೀಧರ್‌ನ ಇಡೀ ಕುಟುಂಬವು ಕಾಫಿ ತೋಟದ ಕೆಲಸಕ್ಕೆ ಬಂದಿದ್ದರು. ತೋಟಕ್ಕೆ ತೆರಳುತ್ತಿದ್ದಾಗ ಎದುರಿಗೆ ಒಂಟಿ ಸಲಗ ಬಂದಿದೆ.

ಈ ವೇಳೆ ಆನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಆಸ್ಪತ್ರೆ ಬಳಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದೊಂದು ವರ್ಷದಿಂದ ಆನೆ ದಾಳಿಗೆ ಆರು ಮಂದಿ ಬಲಿಯಾಗಿದ್ದಾರೆ. ಕೆಆರ್ ಪೇಟೆ, ಕಂಚಿನ ಹಳ್ಳಿ ಸುತ್ತಮುತ್ತ ಒಂಟಿ ಸಲಗ ಓಡಾಡುತ್ತಿದೆ. ಆದರೆ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕಿಡಿಕಾರಿದ್ದಾರೆ. ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ

– ಸಮುದ್ರದಲ್ಲಿ ಮೀನು ಹಿಡಿಯುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋದ ವಿದ್ಯಾರ್ಥಿ

ಮಂಗಳೂರು: ಮಂಗಳೂರಿನ ತೋಟಬೇಂಗ್ರೆಯ ಕಡಲ ತೀರದಲ್ಲಿ ಮೀನು ಹಿಡಿಯಲೆಂದು ಹೋಗಿದ್ದ ವಿದ್ಯಾರ್ಥಿ ಗಾಳಿ ಹಾಗೂ ನೀರಿನ ರಭಸಕ್ಕೆ ಸಿಲುಕಿ ದುರ್ಮರಣ ಹೊಂದಿದ್ದಾನೆ. ಪ್ರಜೀತ್ ಎಂ ತಿಂಗಳಾಯ(15) ಮೃತ ದುರ್ದೈವಿ. ಪ್ರಜೀತ್ ಬೆಂಗ್ರೆಯ ನಿವಾಸಿ ಮಿಥುನ್ ಎಂಬುವವರ ಪುತ್ರನಾಗಿದ್ದಾನೆ. ಮನೆಯ ಬಡತನ ಹಾಗೂ ವಿದ್ಯಾಭ್ಯಾಸದ ಖರ್ಚಿಗೆಂದು ತಂದೆ ಜತೆಗೆ ಪ್ರಜೀತ್‌ ಮೀನುಗಾರಿಕೆಗೆ ಹೋಗುತ್ತಿದ್ದ. ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಗಾಳಿ ಮತ್ತು ನೀರಿನ ರಭಸಕ್ಕೆ ಸಿಲುಕಿ ನೀರುಪಾಲಾಗಿದ್ದಾನೆ. ಸ್ಥಳೀಯರು ಪ್ರಜೀತ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಪ್ರಜೀತ್‌ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಪಣಂಬೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Categories
ಅಡಿಕೆ-ದರ

ಅಡಿಕೆ ದರ 22-03-2024

ಅಡಿಕೆ ದರ
22-03-2024
ಸರಕು 40000 82930
ಬೆಟ್ಟೆ 43199 53909
ರಾಶಿ 30399 49799
ಗೊರಬಲು 17000 37339
Nammur Express
Categories
ತೀರ್ಥಹಳ್ಳಿ

ಜಾನಪದ ಝಲಕ್ ತಂದ ನಾಲೂರು ಶಿವಪ್ರಿಯ ಕಪ್!

ಜಾನಪದ ಝಲಕ್ ತಂದ ನಾಲೂರು ಶಿವಪ್ರಿಯ ಕಪ್!
– ಆಗುಂಬೆ ಹೋಬಳಿ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ
– ಅಂಟಿಗೆ ಪಂಟಿಗೆ ಜ್ಯೋತಿ ಮೂಲಕ ಕಾರ್ಯಕ್ರಮ ಉದ್ಘಾಟನೆ

NAMMUR EXPRESS NEWS
ತೀರ್ಥಹಳ್ಳಿ: ಜಾನಪದ ಝಲಕ್ ತಂದ ನಾಲೂರು ಶಿವಪ್ರಿಯ ಕಪ್. ಆಗುಂಬೆ ಹೋಬಳಿ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಅಂಟಿಗೆ ಪಂಟಿಗೆ ಜ್ಯೋತಿ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಗುರುವಾರ ನಾಲೂರಿನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾದ ಶಿವಪ್ರಿಯ ಕಪ್ ಆರಂಭದಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಿಂದ ಅಂಟಿಗೆ ಪಂಟಿಗೆ ಮೂಲಕ ಉದ್ಘಾಟನೆ ಮಾಡಲಾಯಿತು.

ರೋಹಿತ್ ಹೆಗ್ಡೆ ಹೊಸೂರು, ರೇಮಯ್ಯ, ಕಿರಣ್ ವಡದಕೊಡಿಗೆ ಇವರೊಂದಿಗೆ, ಮಹಾಬಲೇಶ್ ಬೆಳಚಿಕಟ್ಟೆ, ದೇವರಾಜ್ ಇಳಿಮನೆ, ಗಿರೀಶ್ ಇಳಿಮನೆ, ಪ್ರಜ್ವಲ್ ಕಾರಬೈಲ್, ನಯನ ಮಳುವಾಡಿ, ನಿತಿನ್ ಶೆಟ್ಟಿ ನಾಲೂರು, ಅಶೋಕ ನಾಲೂರು, ರೇವಂತ್ ಹೆಗ್ಡೆ, ನೌಹುಷ್ ಹೆಗ್ಡೆ, ಅರುಣ್, ದೀಕ್ಷಿತ್, ಸಂದರ್ಶ, ದೀಪಕ್, ಸುಬ್ಬು, ರಾಜೇಶ, ಕಾರ್ತಿಕ್, ಕೌಶಿಕ್, ದರ್ಶನ, ರಾಘು, ಕಾರ್ತಿಕ್, ನಿಖಿಲ್ ಶೆಟ್ಟಿ ಹಾಗೂ ಶಿವಪ್ರಿಯ ಪ್ರೆಂಡ್ಸ್ ಎಲ್ಲಾ ಸದಸ್ಯರು, ಮಲ್ಲಿಕಾರ್ಜುನ ಸೇವಾ ಸಮಿತಿಯ ಸದಸ್ಯರು, ಗ್ರಾಮಸ್ಥರು, ಹಾಗೂ ಇನ್ನಿತರ ಸ್ನೇಹ ಬಳಗದ ಸಹಕಾರದಲ್ಲಿ ಈ ಪಂದ್ಯಾಟ ನಡೆಯಿತು. ಅಂಟಿಗೆ ಪಂಟಿಗೆ ಜ್ಯೋತಿ ಮೂಲಕ ವೇದಿಕೆ ಬಂದು ಅಂಟಿಗೆ ಪಂಟಿಗೆ ಜ್ಯೋತಿ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು..

ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ‌ ಪ್ರಧಾನ ಅರ್ಚಕರು, ಗ್ರಾಮದ ಹಿರಿಯರು ಆದ ಯಜ್ಞ ನಾರಾಯಣ ಭಟ್ ಅವರು ಊರಿನಲ್ಲಿ ಇಂತಹ ಕ್ರೀಡಾಕೂಟಗಳು ನಡೆದಾಗ ಅತ್ಯಂತ ಸಡಗರ ವಾತಾವರಣ ಇರುತ್ತದೆ, ನಮ್ಮೂರಿನ ಎಲ್ಲಾ ಯುವಕರ ಶ್ರಮಕ್ಕೆ ಅಭಿನಂದನೆಗಳು ಹಾಗೂ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದರು. ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಶಿಕ್ಷಕಿ ಜಯಂತಿ ಎನ್ ಕೆ, ಮೆಸ್ಕಾಂ ನೌಕರ, ಶ್ರೀಶೈಲ, ಹಾಗೂ ಯಜ್ಞ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ, ನಾಲೂರು ಗ್ರಾಮ ಪಂಚಾಯತಿ, ನಾಲೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಹಕಾರ ನೀಡಿದರು. ಸಿಡಿ‌‌ ಮದ್ದುಗಳು, ಅಚ್ಚುಕಟ್ಟಾದ ಊಟದ ವ್ಯವಸ್ಥೆ, ಉತ್ತಮ ಕ್ರೀಡಾಂಗಣದ ವ್ಯವಸ್ಥೆ, ಅಂಟಿಗೆ ಪಂಟಿಗೆ ಜ್ಯೋತಿ ಗಮನ ಸೆಳೆಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಧಾ ದೇವರಾಜ್ ಹಾಗೂ ಸದಸ್ಯರಾದ ದ್ವಿಜರಾಜ್ ಭಟ್, ಸಂದೀಪ್ ಗಾರ್ಡರ್ ಗದ್ದೆ, ಹಾಗೂ ಮೋಹನ್ ಜನರ ಮಧ್ಯ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಿದರು. ಯಜ್ಞ ನಾರಾಯಣ್ ಭಟ್, ಮಲ್ಲಿಕಾರ್ಜುನ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ನಾಲೂರಿನ ಪ್ರಭಾಕರ ಗೌಡ್ರು, ಕೃಷಿಕರು, ದಾನಿಗಳಾದ, ಶ್ರೀಕಾಂತ್ ಭಟ್, ಅನಂತ್ ಭಟ್ ಹಾಗೂ ನಿವೃತ್ತ ಶಿಕ್ಷಕ ನಾಲೂರು ಮಂಜುನಾಥ್, ಮುಖ್ಯ ಶಿಕ್ಷಕಿ ಜಯಂತಿ ಎನ್ ಕೆ, ಮಂಜು ಬಾಬು ಹೆಚ್ ಪಿ ಹಾಗೂ ಶಿವಪ್ರಿಯ ಗೆಳೆಯರ ಬಳಗದ ಪರವಾಗಿ ಮಂಜು ನಾಲೂರು ಹಾಜರಿದ್ದರು.

ಶ್ರೀ ಸಿದ್ದಿವಿನಾಯಕ ಗೆಳೆಯರ ಬಳಗ ವಡದಕೂಡಿಗೆ, ನಾಲೂರು ತಂಡ ಪ್ರಥಮ ಸ್ಥಾನ ಪಡೆದಿದ್ದು, ನೇತಾಜಿ ಸ್ಪೋರ್ಟ್ಸ್ ಕ್ಲಬ್, ಹೊಸೂರು ಗುಡ್ಡೇಕೇರಿ ದ್ವಿತೀಯ ಸ್ಥಾನ, ನೇತಾಜಿ ಸ್ಪೋರ್ಟ್ಸ್ ಹೊಸೂರು ಗುಡ್ಡೇಕೇರಿ ತೃತೀಯ ಸ್ಥಾನ, ಎಂ ಕೆ ಪ್ರೆಂಡ್ಸ್ ಚತುರ್ಥ ಸ್ಥಾನ ಪಡೆದಿದೆ. ಅತ್ಯುತ್ತಮ ರಕ್ಷಣಾ ಆಟಗಾರ ಶಶಿ ಎಂ ಕೆ ಪ್ರೆಂಡ್ಸ್ ಅತ್ಯುತ್ತಮ ಆಕ್ರಮಣಕಾರಿ ಆಟಗಾರ ತುಷಾರ್ ಶೆಟ್ಟಿ ಹೊಸೂರು ಗುಡ್ಡೇಕೇರಿ, ಅತ್ಯುತ್ತಮ ಸವ್ಯಸಾಚಿ ಆಟಗಾರ ಸಂತೃಪ್ತ ಹೆಗ್ಗಡೆ ಹೊಸೂರು ಪಡೆದುಕೊಂಡರು.

Categories
ರಾಜ್ಯ ಶಿವಮೊಗ್ಗ ಹೊಸನಗರ

ಟಾಪ್ ನ್ಯೂಸ್

ಹೊಸನಗರದಲ್ಲೊಂದು ದುರಂತ ಘಟನೆ ಪತ್ನಿಯ ಸಾವಿನ ಕೊರಗು ಪತಿ ನೇಣಿಗೆ ಶರಣು
– ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್‌ ಗಾಜು ಒಡೆದ ದುಷ್ಕರ್ಮಿಗಳು
– ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು
– ಹೊಳೆಹೊನ್ನೂರಿನಲ್ಲಿ ಅಪಘಾತ, ಚಿಕಿತ್ಸೆ ಫಲಿಸದೆ ಸಾವು

NAMMUR EXPRESS NEWS
ಹೊಸನಗರ : ಪಟ್ಟಣದ ಮಾವಿನಕೊಪ್ಪ ನಿವಾಸಿ ಬಸ್ ಏಜೆಂಟ್ ರಾಘವೇಂದ್ರ ರವರ ತಂದೆ 67 ವರ್ಷದ ಎಸ್ ಎಂ ವಿಶ್ವನಾಥ ರವರು ಮಾರ್ಚ್ 21ರ ಗುರುವಾರ ಸಂಜೆ ಸುಮಾರು 7:30ರ ನಂತರ ತಮ್ಮ ಮನೆಯಲ್ಲಿ ಫ್ಯಾನ್ ನೇತಾಕಲು ಬಿಟ್ಟಿರುವ ಕಬ್ಬಿಣದ ಕೊಂಡಿಗೆ ಬಟ್ಟೆ ಸಿಕ್ಕಿಸಿ ನೇಣಿಗೆ ಶರಣಾದ ದುರಂತ ಘಟನೆ ಸಂಭವಿಸಿದೆ. ವಿಶ್ವನಾಥ್ ರವರ ಪುತ್ರ ಏಜೆಂಟ್ ರಾಘು ಸಂಜೆ ತನ್ನ ತಂದೆಗೆ ಕಾಫಿ ಮಾಡಿ ಕೊಟ್ಟು ಬಸ್ ಬುಕ್ ಮಾಡಲು ಬಸ್ಟ್ಯಾಂಡಿಗೆ ತೆರಳಿದ್ದು ರಾತ್ರಿ 9:30ರ ನಂತರ ಮನೆಗೆ ತೆರಳಿದಾಗ ತಂದೆ ನೇಣಿಗೆ ಶರಣಾಗಿದ್ದು ಕಂಡು ಸ್ತಂ ಬೀಭೂತರಾಗಿದ್ದರು. ರಾಘವೇಂದ್ರ ಅವರ ತಾಯಿ ಶ್ರೀಮತಿ ಲೀಲಾವತಿಯವರು ಆರು ತಿಂಗಳ ಹಿಂದೆ ಅಕಾಲ ಮರಣ ಹೊಂದಿದ್ದು ಪತ್ನಿಯ ಮರಣ ನಂತರ ವಿಶ್ವನಾಥ್ ರವರು ಪತ್ನಿಯ ಕೊರಗಿನಲ್ಲಿ ದಿನ ದೂಡುತ್ತಿದ್ದರೆಂದು ತಿಳಿದು ಬಂದಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್‌ ಗಾಜು ಒಡೆದ ದುಷ್ಕರ್ಮಿಗಳು

ಶಿವಮೊಗ್ಗ : ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್‌ ಗಾಜನ್ನು ಕಿಡಿಗೇಡಿಗಳು ಒಡೆದಿದ್ದಾರೆ. ಮನೆಯೊಂದಕ್ಕೆ ನುಗ್ಗಿ ಪೀಠೋಪಕರಣಗಳನ್ನು ಮುರಿದಿದ್ದಾರೆ. ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ಕಳೆದ ರಾತ್ರಿ ಬೈಕುಗಳಲ್ಲಿ ಬಂದ ದುಷ್ಕರ್ಮಿಗಳು ಮನೆಯೊಂದರ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿನ ಗಾಜು ಒಡೆದಿದ್ದಾರೆ. ಬೈಕ್‌ ಒಂದರ ಲೈಟ್‌ ಒಡೆದು ಹಾಕಿದ್ದಾರೆ. ಇನ್ನು ಮನೆಯೊಂದಕ್ಕೆ ನುಗ್ಗಿ ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ. ರಾತ್ರಿ ಬೈಕಿನಲ್ಲಿ ಬಂದ ಗ್ಯಾಂಗ್‌ ಲಾಂಗು, ಮಚ್ಚು ಹಿಡಿದು ಸುತ್ತಾಡಿದೆ. ಇದೆ ಗ್ಯಾಂಗ್‌ ದುಷ್ಕೃತ್ಯ ಎಸಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ

ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು

ಬೈಕೋಡು : ಮನೆ ಸಮೀಪದ ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ಐದು ವರ್ಷದ ಬಾಲಕಿ ಪ್ರಜ್ಞಾ ಮೃತಪಟ್ಟಿದ್ದಾಳೆ. ಬ್ಯಾಕೋಡು ಸಮೀಪದ ಚಂಗೊಳ್ಳಿಯಲ್ಲಿ ಘಟನೆ ಸಂಭವಿಸಿದೆ. ರವಿಚಂದ್ರ, ವೀಣಾ ದಂಪತಿ ಪುತ್ರಿ ಪ್ರಜ್ಞಾ, ಶಾಲೆಯಿಂದ ಮನೆಗೆ ಬಂದು ತನ್ನ ತಮ್ಮನೊಂದಿಗೆ ಆಟವಾಡುತ್ತಿದ್ದ ಸಂದರ್ಭ ಕೃಷಿ ಹೊಂಡಕ್ಕೆ ಕಾಲು ಜಾರಿ ಇಬ್ಬರೂ ಬಿದ್ದಿದ್ದಾರೆ. ಇವರ ಚೀರಾಟ ಕೇಳಿದ ಮನೆಯವರು ಸ್ಥಳಕ್ಕೆ ಬರುವಷ್ಟರಲ್ಲಿ ತಮ್ಮನನ್ನು ರಕ್ಷಿಸಿದ ಪ್ರಜ್ಞಾ, ತಾನು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳೆಹೊನ್ನೂರಿನಲ್ಲಿ ಅಪಘಾತ, ಚಿಕಿತ್ಸೆ ಫಲಿಸದೆ ಸಾವು

ಹೊಳೆಹೊನ್ನೂರು : ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಿದ್ದಲಿಂಗಪ್ಪ (45) ಎಂಬುವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ ಕವಿತಾ, ಪುತ್ರ, ಪುತ್ರಿ ಇದ್ದಾರೆ. ಹೊಳೆಹೊನ್ನೂರು ಪಟ್ಟಣಕ್ಕೆ ಬರಲು ವಿವೇಕಾನಂದ ಲಯನ್ಸ್‌ ವಿದ್ಯಾಶಾಲೆ ಎದುರು ರಸ್ತೆ ಪಕ್ಕದಲ್ಲಿ ನಿಂತಿದ್ದ ಸಿದ್ದಲಿಂಗಪ್ಪ ಅವರಿಗೆ ಬೈಕ್ ಡಿಕ್ಕಿಯಾಗಿ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿತ್ತು. ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸಿದ್ದಲಿಂಗಪ್ಪ ಅವರ ನೇತ್ರಗಳನ್ನು ಕುಟುಂಬಸ್ಥರು ವಿಕ್ಟೋರಿಯಾ ಆಸ್ಪತ್ರೆಗೆ ದಾನ ಮಾಡಿ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.

Categories
ರಾಜ್ಯ

ಕರ್ನಾಟಕ ಟಾಪ್ 5 ನ್ಯೂಸ್…!

– ಬಿಗ್ ಬಾಸ್ ಕನ್ನಡ ಒಟಿಟಿ ಖ್ಯಾತಿಯ ಸೋನು ಗೌಡ ಬಂಧನ..!
– ಬಿಬಿಎಂಪಿ ನಿರ್ಲಕ್ಷ: ಬೈಕ್‌ ಸವಾರನ ಮೇಲೆ ಬಿದ್ದ ಮರದ ಬೃಹತ್ ಕೊಂಬೆ.!
– ಚಾಮರಾಜನಗರ: ಕಾಡಾನೆ ದಾಳಿಗೆ ಸಿಲುಕಿ ಯುವಕ ಸಾವು!
– ಮಂಡ್ಯ: ಕೆಂಡೋತ್ಸವದ ವೇಳೆ ದುರಂತ: ಪೂಜಾರಿಗೆ ತೀವ್ರ ಗಾಯ!
– ಬಸ್‌ ಚಾಲಕನಿಗೆ ಜೀವ ಬೆದರಿಕೆ: ಆರೋಪಿ ಬಂಧನ

NAMMUR EXPRESS NEWS
ಬೆಂಗಳೂರು: ಬಿಗ್ ಬಾಸ್ ಕನ್ನಡ ಒಟಿಟಿ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರು ಸೇವಂತಿ ಎನ್ನುವ ಬಡ ಹುಡುಗಿಯನ್ನು ದತ್ತು ತೆಗೆದುಕೊಂಡಿರುವ ವಿಚಾರ ಗೊತ್ತೇ ಇದೆ. ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ವಿಚಾರವಾಗಿ ಸೋನು ಗೌಡ ವಿರುದ್ಧ ದೂರ ದಾಖಲಾಗಿದೆ. ಉತ್ತರಕರ್ನಾಟಕದ 8 ವರ್ಷದ ಮಗುವನ್ನ ಸೋನು ಗೌಡ ದತ್ತು ತೆಗೆದುಕೊಂಡಿದ್ದು, ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಳ್ಳುವಂತಿಲ್ಲ. ಆದರೆ ಸೋನುಗೌಡ ವಿಡಿಯೊದಲ್ಲಿ ಮಗುವಿನ ಮಾಹಿತಿ ಹಂಚಿಕೊಂಡಿದ್ದರು. ಈಗ ಪೊಲೀಸರು ಸೋನು ಗೌಡ ಅವರನ್ನು ಬಂಧಿಸಿದ್ದಾರೆ. ಜೆಜೆ ಕಾಯ್ದೆ ಅಡಿಯಲ್ಲಿ ಸೋನು ಗೌಡ ಅವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಸೋನು ಗೌಡ ಅವರು ಸೇವಂತಿ ಎನ್ನುವ ಹುಡುಗಿಗೆ ಮನೆಯಲ್ಲಿ ಊಟ ಹಾಕಿಸೋದು, ಮೂಗು ಸುಚ್ಚಿಸಿ ಮೂಗುತಿ ಹಾಕೋದು, ಊಟ ಮಾಡಿಸುವ ವಿಡಿಯೊ ಮಾಡಿ, ಅದನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. “ಮನೆಯ ಸುತ್ತ ಇರುವ ನಾಯಿಗಳಿಗೆ ಬಿಸ್ಕಟ್ ಹಾಕುವಾಗ ನನಗೆ ಸೇವಂತಿ ಎನ್ನುವ 7 ವರ್ಷದ ಮಗುವಿನ ಪರಿಚಯ ಆಯ್ತು ಎಂದು ಸೋನು ಹೇಳಿಕೊಂಡಿದ್ದರು. ಮಾತ್ರವಲ್ಲ ಈ ಮುಂಚೆ ಸೇವಂತಿಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದರೆ ಅವರ ತಾಯಿ ಒಪ್ಪಿಲ್ಲ. ಬಳಿಕ ಕಾನೂನ ಪ್ರಕಾರ ಸೇವಂತಿಯನ್ನು ಪಡೆದೆ. ಅದಕ್ಕೆ 3 ತಿಂಗಳುಗಳೇ ತೆಗೆದುಕೊಂಡಿದೆ.

ಬಡ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದೀನಿ ಅಂತ ಅಂದ್ರೆ ಮೆಚ್ಚುಗೆ ಸೂಚಿಸಿ, ಇಲ್ಲ ಅಂದ್ರೆ ಸುಮ್ಮನೆ ಇರಿ. ನೆಗೆಟಿವ್ ಕಮೆಂಟ್ ಮಾಡುವರಿಗೆ ನಾನು ಸೈಬರ್ ಕ್ರೈಂ ಕೊಡ್ತೀನಿ ಎಂದು ಸೋನು ಈ ಹಿಂದೆ ವಿಡಿಯೊ ಮೂಲಕ ಹೇಳಿಕೊಂಡಿದ್ದರು. ಮಗು ದತ್ತು ಸಂಬಂಧ ಸೋನು ಗೌಡ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ದೂರು ದಾಖಲಾಗಿತ್ತು. ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ತಮ್ಮ ಫೋಟೊ, ರೀಲ್ಸ್, ವಿಡಿಯೊ ಮೂಲಕ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ.

ಬೈಕ್‌ ಸವಾರನ ಮೇಲೆ ಬಿದ್ದ ಮರದ ಬೃಹತ್ ಕೊಂಬೆ.!

ಬೆಂಗಳೂರು: ಬೆಂಗಳೂರಿನ ಬೈಕ್‌ ಸವಾರರು ನೋಡಲೇಬೇಕಾದ ಸ್ಟೋರಿ ಇದು. ಬೆಂಗಳೂರು ಬಿಬಿಎಂಪಿ ದಿವ್ಯ ನಿರ್ಲಕ್ಷ್ಯದಿಂದ ಅಪಾಯ ಯಾವಾಗ ಬೇಕಾದ್ರು ನಿಮ್ಮ ಕಣ್ಮುಂದೆ ಬರಬಹುದು. ಯಾಕಂದ್ರೆ ಬೆಂಗಳೂರಿನಲ್ಲಿ ಘೋರ ದುರಂತ ನಡೆದಿದೆ. ಹೌದು ಮರದ ಕೊಂಬೆ ಮುರಿದು ಬಿದ್ದು ಬೈಕ್‌ ಸವಾರನ ಬೆನ್ನು ಮೂಳೆ ಮುರಿದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಮರದ ಕೊಂಬೆ ರಸ್ತೆಗೆ ಬೀಳುವಂತಿದ್ದರು ತೆರವು ಮಾಡದ ಆರೋಪ ಪ್ರಕರಣ ಸಂಬಂಧ ಖಾಸಗಿ ಶಾಲೆ ಮತ್ತು ಬಿಬಿಎಂಪಿ ವಿರುದ್ಧ ಆಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗರಬಾವಿ ನಿವಾಸಿ ಚಂದನ್ ಬೆನ್ನು ಮೂಳೆ ಮುರಿತಕ್ಕೊಳಗಾದ ಬೈಕ್‌ ಸವಾರ. ಫೈನಾನ್ಸ್

ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಮಾರ್ಚ್ 7 ರಂದು ಬೆಳಗ್ಗೆ ಕಚೇರಿಗೆ ಹೋಗುತ್ತಿದ್ದರು. ಈ ವೇಳೆ ರಸ್ತೆಗೆ ಚಾಚುಕೊಂಡಿದ್ದ ಮರದ ಕೊಂಬೆ ಚಂದನ್ ಮೇಲೆ ಮುರಿದು ಬಿದ್ದಿದೆ.ಕೊಂಬೆ ಮೈ ಮೇಲೆ ಬೀಳುತ್ತಿದ್ದಂತೆ ರಸ್ತೆ ಮೇಲೆ ಬಿದ್ದ ಚಂದನ್‌ನ ಕುತ್ತಿಗೆ ಗಾಯವಾಗಿದೆ. ಅಲ್ಲದೆ, ಬೆನ್ನು ಮೂಳೆ ಮುರಿದಿದೆ. ಏಳೆಂಟು ನಿಮಿಷಗಳ ಕಾಲ ರಸ್ತೆಯಲ್ಲಿ ನರಳಾಡಿದ್ದ ಚಂದನ್‌ನನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕಳೆದ 14 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಂದನ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದಾರೆ. ಈ ನಡುವೆ ಆಶೋಕನಗರ ಪೊಲೀಸರಿಗೆ ಚಂದನ್ ದೂರು ನೀಡಿದ್ದಾರೆ.

ಕಾಡಾನೆ ದಾಳಿಗೆ ಸಿಲುಕಿ ಯುವಕ ಸಾವು: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ:

ಚಾಮರಾಜನಗರ: ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದ ಯುವಕನ ಕುಟುಂಬಸ್ಥರಿಗೆ ಮಾಜಿ ಶಾಸಕ ಆರ್ ನರೇಂದ್ರ ಸಾಂತ್ವನ ಹೇಳುವ ಜೊತೆಗೆ ಪರಿಹಾರ ಹಣದ ಭರವಸೆ ನೀಡಿದ್ದಾರೆ. ಹನೂರು ತಾಲೂಕಿನ ಕತ್ತೆ ಕಾಲ್ ಪೋಡು ಗ್ರಾಮದ ಜಡಯ್ಯ ಎಂಬುವರ ಪುತ್ರ ಮಾದ ಆನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಮಂಡ್ಯದಲ್ಲಿ ಕೊಂಡೋತ್ಸವದ ವೇಳೆ ಘೋರ ದುರಂತ:
– ಕೊಂಡಕ್ಕೆ ಬಿದ್ದು ‘ಪೂಜಾರಿ’ಗೆ ತೀವ್ರ ಗಾಯ:

ಮಂಡ್ಯ: ಜಿಲ್ಲೆಯ ಮದ್ದೂರಿನಲ್ಲಿ ಕೆಂಡೋತ್ಸವದ ವೇಳೆಯಲ್ಲಿ ಪೂಜಾರಿಯೊಬ್ಬರು ಕೊಂಡವನ್ನು ಹಾಯುವ ಸಂದರ್ಭದಲ್ಲಿ ಆಯತಪ್ಪಿ ಕೊಂಡಕ್ಕೆ ಬಿದ್ದ ಕಾರಣ, ತೀವ್ರಗಾಯವಾಗಿರೋ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲುಗನಹಳ್ಳಿಯಲ್ಲಿ ಕೆಂಡೋತ್ಸವವನ್ನು ಆಯೋಜಿಸಲಾಗಿತ್ತು. ಬಸವೇಶ್ವರ ಕೆಂಡೋತ್ಸವದ ವೇಳೆಯಲ್ಲಿ ವೀರಗಾಸೆಯ ಪೂಜಾರಿ ಕೊಂಡವನ್ನು ಹಾಯೋದಕ್ಕೆ ಓಡಿ ಹೋಗುತ್ತಿದ್ದರು. ಕೊಂಡದಲ್ಲಿ ಓಡಿ ಹೋಗುತ್ತಾ ಹಾದು ಹೋಗುತ್ತಿದ್ದಾಗ ಆಯತಪ್ಪಿ ವೀರಗಾಸೆ ಪೂಜಾರಿ ಬಿದ್ದಿದ್ದರು. ಕೂಡಲೇ ಅವರನ್ನು ಅಲ್ಲಿದಂತ ಜನರು ಎತ್ತಿ, ಸಂತೈಸಿದ್ದರು. ಆದ್ರೇ ಬೆಂಕಿಯ ಕೆಂಡದಿಂದ ಅವರಿಗೆ ತೀವ್ರವಾದಂತ ಸುಟ್ಟಗಾಯವಾಗಿತ್ತು. ಅವರನ್ನು ಕೂಡಲೇ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಬಸ್‌ ಚಾಲಕನಿಗೆ ಜೀವ ಬೆದರಿಕೆ: ಆರೋಪಿ ಬಂಧನ:

ಬೆಳಗಾವಿ: ಇಲ್ಲಿನ ನೆಹರೂ ನಗರದ ಆ‌ರ್.ಎನ್.ಶೆಟ್ಟಿ ಕಾಲೇಜು ಕ್ರಾಸ್‌ನಲ್ಲಿ ಗುರುವಾರ ಸಾರಿಗೆ ಸಂಸ್ಥೆಯ ಬಸ್ ಚಾಲಕನಿಗೆ ಏರ್‌ಗನ್ ತೋರಿಸಿ, ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಝಮ್ ನಗರದ ಮಹಮ್ಮದ್‌ ಷರೀಫ್ ಬಾದ್‌ಶಾಹ್ ಮುಲ್ಲಾ ಬಂಧಿತ ಆರೋಪಿ. ಕಾರು ಚಾಲಕ ಮಹಮ್ಮದ್‌ಷರೀಫ್ ರಸ್ತೆಯಲ್ಲಿ ಅಡ್ಡಬಂದು, ವಾಹನ ಚಾಲನೆಗೆ ಸಂಬಂಧಿಸಿದಂತೆ ವಾಗ್ವಾದ ಮಾಡಿದರು. ಶರ್ಟ್ ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಏರ್‌ಗನ್ ಹಿಡಿದು ಜೀವ ಬೆದರಿಕೆ ಹಾಕಿದರು ಎಂದು ಬಸ್‌ನ ಚಾಲಕ ಮಲ್ಲಿಕಾರ್ಜುನ ಅಂಕಲಿ ದೂರು ನೀಡಿದ್ದರು. ಅದನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದೇವೆ. ಏರ್‌ಗನ್, ಕಾರು ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದೇವೆ ಎಂದು ಮಾಳಮಾರುತಿ ಪೊಲೀಸ್ ಇನ್‌ಸ್ಪೆಕ್ಟರ್‌ ತಿಳಿಸಿದರು.

Categories
ಬೆಂಗಳೂರು ರಾಜ್ಯ ಶಿಕ್ಷಣ

5,8, 9ನೇ ತರಗತಿ ಪಬ್ಲಿಕ್‌ ಪರೀಕ್ಷೆಯ ಗೊಂದಲ ನಿವಾರಣೆ

5,8, 9ನೇ ತರಗತಿ ಪಬ್ಲಿಕ್‌ ಪರೀಕ್ಷೆಯ ಗೊಂದಲ ನಿವಾರಣೆ
– ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌
– ಸೋಮವಾರದಿಂದ 5 8 9ನೇ ತರಗತಿಗೆ ಎಕ್ಸಾಂ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ‌ ಮಾರ್ಚ್‌ 11ರಂದು ಆರಂಭವಾಗಿದ್ದು ಮಧ್ಯದಲ್ಲೇ ತಡೆಹಿಡಿಯಲ್ಪಟ್ಟ 5,8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆ ಯನ್ನು ಮುಂದುವರಿಸಲು ರಾಜ್ಯ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಪಬ್ಲಿಕ್‌ ಪರೀಕ್ಷೆ ನಡೆಸುವ ಶಿಕ್ಷಣ ಇಲಾಖೆಯ ಸುತ್ತೋಲೆಯನ್ನು ರದ್ದುಗೊಳಿಸಿದ್ದ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿಹಿಡಿದಿದೆ.bಸುದೀರ್ಘ ವಿಚಾರಣೆ ನಡೆಸಿದ ನ್ಯಾ. ಸೋಮಶೇಖರ್ ಹಾಗೂ ನ್ಯಾ.ರಾಜೇಶ್ ರೈ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಬೋರ್ಡ್ ಎಕ್ಸಾಂಗೆ ಅಸ್ತು ಎಂದಿರುವ ಜತೆಗೇ ಉಳಿದ ವಿಷಯಗಳ ಪರೀಕ್ಷೆ ನಡೆಸಲು ಸೂಕ್ತ ಮತ್ತು ತುರ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಿತು.

ಸೋಮವಾರದಿಂದಲೇ ಪರೀಕ್ಷೆ: ಸರ್ಕಾರ ಹೇಳಿಕೆ

5, 8 ಮತ್ತು 9ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸೋಮವಾರದಿಂದಲೇ ನಡೆಸುವ ಬಗ್ಗೆ ಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ಈಗಾಗಲೇ ಐದನೇ ತರಗತಿ ನಾಲ್ಕು ವಿಷಯಗಳ‌ ಪರೀಕ್ಷೆ ಮುಗಿದಿವೆ. 8 ಹಾಗೂ 9 ತಗರತಿಗಳ ಎರಡೆರಡು ವಿಷಯಗಳ ಪರೀಕ್ಷೆ ನಡೆದಿವೆ. 11ನೇ ತರಗತಿ ಎಲ್ಲಾ ವಿಷಯಗಳ‌ ಪರೀಕ್ಷೆ ಮುಕ್ತಾಯವಾಗಿದ್ದು ಫಲಿತಾಂಶ ಹೊರ ಬರಬೇಕಿದೆ. ಮಾರ್ಚ್‌ 13ರಂದು ಸುಪ್ರೀಂಕೋರ್ಟ್‌ ಈ ಪರೀಕ್ಷೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಸೂಚಿಸಿತ್ತು. ಅದರನುಸಾರವಾಗಿ ಈಗ ತೀರ್ಪು ಬಂದಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುತ್ತಿರುವ ಈ ಪರೀಕ್ಷೆ ಮಾರ್ಚ್‌ 11ರಂದು ಆರಂಭಗೊಂಡು ಮಾರ್ಚ್‌ 18ಕ್ಕೆ ಮುಗಿಯಬೇಕಾಗಿತ್ತು.

ಮಾರ್ಚ್‌ 12ರಂದು ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿ ಹೈಕೋರ್ಟ್‌ಗೆ ಹೋಗುವಂತೆ ಸೂಚಿಸಿದಾಗ ಸರ್ಕಾರ ತಕ್ಷಣವೇ ಹೈಕೋರ್ಟ್‌ ಬಾಗಿಲು ತಟ್ಟುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಈ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಯದ ಶಿಕ್ಷಣ ಇಲಾಖೆ ಮತ್ತು ಅಧಿಕಾರಿಗಳು ಒಂದೆರಡು ದಿನ ತಡವಾಗಿ ಹೈಕೋರ್ಟ್‌ ಮೊರೆ ಹೊಕ್ಕಿದ್ದರು. ಇದೀಗ ಹೈಕೋರ್ಟ್‌ನಲ್ಲಿ ಕಳೆದ ಕೆಲವು ದಿನಗಳಿಂದ ವಿಚಾರಣೆ ನಡೆಯುತ್ತಿದೆ. ಶಿಕ್ಷಣ ಇಲಾಖೆಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ಅಧಿಕಾರವಿಲ್ಲ ಮತ್ತು ಅದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ ಎಂಬ ವಾದದೊಂದಿಗೆ ಖಾಸಗಿ ಶಾಲೆಗಳ ಸಂಘಟನೆ ರುಪ್ಸಾ ವಾದ ಮಂಡಿಸುತ್ತಿದೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭ ಎರಡೂ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್‌, ನ್ಯಾಯಮೂರ್ತಿ ಕೆ. ರಾಜೇಶ್‌ ರೈ ಅವರನ್ನು ಒಳಗೊಂಡ ವಿಭಾಗೀಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಶುಕ್ರವಾರ ಈ ಬಗ್ಗೆ ತೀರ್ಪು ನೀಡಿದೆ.

Categories
ಚಿಕ್ಕಮಗಳೂರು

ಟಾಪ್ ನ್ಯೂಸ್ ಚಿಕ್ಕಮಗಳೂರು

ನೀರಿನ ಹೊಂಡಕ್ಕೆ ಬಿದ್ದ ಬಾಲಕ ಸಾವು
– ಹುಲಿ ದಾಳಿಗೆ ಐದು ಹಸುಗಳು ಬಲಿ
– ಆನೆಗಳ ಹಾವಳಿಯಿಂದ ಬೆಳೆ ನಾಶ
– ಹೆಣ್ಣಿಗಾಗಿ ದೇವರ ಮೊರೆ ಹೋದ ಯುವಕರು

NAMMUR EXPRESS NEWS
ಬೀರೂರು : ತೋಟದಲ್ಲಿ ತೆಂಗಿನ ಗರಿ ತರಲು ಹೋಗಿದ್ದ ಬಾಲಕನೋರ್ವ ನೀರಿನ ಹೊಂಡಕ್ಕೆ ಬಿದ್ದು ಅಸುನೀಗಿದ ಘಟನೆ ಮುಂಡ್ರೆಕೊಪ್ಪಲು ಗ್ರಾಮದಲ್ಲಿ ಬುಧವಾರ ನಡೆದಿದೆ. ಎಂ.ಎ. ತರುಣ್(15) ಮೃತ ದುರ್ದೈವಿಯಾಗಿದ್ದು, ಮಧ್ಯಾಹ್ನ ಸಮಯದಲ್ಲಿ ಊರಿನ ಸಮೀಪದ ರವಿ ಎಂಬುವವರ ತೋಟಕ್ಕೆ ತನ್ನ ಅತ್ತೆಯ ಮಗನೊಂದಿಗೆ ತೆಂಗಿನಗರಿ ತರಲು ತೋಟಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ತೋಟದಲ್ಲಿದ್ದ ನೀರಿನ ಗುಂಡಿಯನ್ನು ಗಮನಿಸಿದೆ ಕಾಲುಜಾರಿ ಬಿದ್ದಿದ್ದಾರೆ. ನೀರಿನ ಗುಂಡಿಗೆ ಬಿದ್ದ ರಭಸಕ್ಕೆ ಸ್ಥಳದಲ್ಲೇ ತರುಣ್ ಮೃತಪಟ್ಟಿದ್ದಾನೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಹುಲಿ ದಾಳಿಗೆ ಐದು ಹಸುಗಳು ಬಲಿ

ಚಿಕ್ಕಮಗಳೂರು: ತಾಲೂಕಿನ ಆಲ್ಲೂರು ಸಮೀಪದ ಕಠಾರದಹಳ್ಳಿಯಲ್ಲಿ ಹೀಲಿಯ ದಾಳಿಗೆ 5 ಹಸುಗಳು ಬಲಿಯಾಗಿದ್ದು, 1 ಹಸುವನ್ನು ರಕ್ಷಿಸಲಾಗಿದೆ. ಸಾವನ್ನಪ್ಪಿರುವ ಹಸುಗಳು ಚಂದ್ರು ಮತ್ತು ಮುಳ್ಳಪ್ಪ ಎಂಬುವರಿಗೆ ಸೇರಿದ್ದು ಏನ್ಮಾಲಾಗುದೆ. ನಿನ್ನೆ ಮೇಯಲು ಹೋಗಿದ್ದ ಹಸುಗಳು ಮನೆಗೆ ಬಂದಿರಲಿಲ್ಲ. ಇಂದು ಕಾಫಿ ತೋಟದಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದೆ. ನಿತ್ರಾಣಗೊಂಡಿದ್ದ ಹಸುಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆನೆ ದಾಳಿಯಿಂದ ತತ್ತರಿಸಿದ್ದ ಮಲೆನಾಡಿಗರು ಈಗ ಹುಲಿಗೆ ಹೆದರುವಂತಾಗಿದೆ. ಮನೆಯಿಂದ ಹೊರಬಾರಲು ಜನ, ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

– ಆನೆಗಳ ಹಾವಳಿಯಿಂದ ಬೆಳೆ ನಾಶ

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ತೋಟಗಳಿಗೆ ಆನೆಗಳು ನುಗ್ಗಿ ದಾಂಧಲೆ ಮಾಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ ಮಾಡಿವೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ರೈತ ನವೀನ್ ಎಂಬುವವರ ತೋಟಕ್ಕೆ ನುಗ್ಗಿದ ಕಾಡಾನೆಯು ಅಡಿಕೆ, ಬಾಳೆ, ಕಾಫಿ ಬೆಳೆಯನ್ನು ಹಾಳು ಮಾಡಿವೆ. ಕೊಟ್ಟಿಗೆ ಹಾರ ಸುತ್ತಮುತ್ತ ಗ್ರಾಮಗಳಲ್ಲಿ ಆನೆಗಳ ದಾಳಿಯು ಆತಂಕವನ್ನು ಸೃಷ್ಟಿಸಿದೆ. ಕಾಫಿ ತೋಟಕ್ಕೆ ಕೂಲಿ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳೆ ನಷ್ಟದ ಜತೆಗೆ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. 3-4 ತಿಂಗಳಿಂದ ಮೂಡಿಗೆರೆಯಲ್ಲಿ ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಿದೆ. ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಜನರು ಆಕ್ರೋಶಿಸಿದ್ದಾರೆ.

– ಹೆಣ್ಣಿಗಾಗಿ ದೇವರ ಮೊರೆ ಹೋದ ಯುವಕರು

ಚಿಕ್ಕಮಗಳೂರು: ಜಿಲ್ಲೆ ತಾಲೂಕು ಖಂಡ್ಯ ಹೋಬಳಿ ಬಿದರೆ ಅಂಚೆ ಬ್ಯಾಡಿಗೆರೆ ಗ್ರಾಮದಲಿ ನಡೆದ ಒಂದು ವಿಶೇಷ ಘಟನೆ. ಇದು ಅಚ್ಚರಿಯಾದರೂ ಸತ್ಯ ಸಂಗತಿ. ಇತ್ತೀಚಿಗೆ ಇದೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ 3ದಿನಗಳ ಕಾಲ ಸುಗ್ಗಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು 4ನೇ ದಿನ ಗ್ರಾಮದ ಹಿರಿಯರು ಮುಖ್ಯಸ್ಥರು ಹಾಗೂ ಪರದೇಶಪ್ಪ ಮಠದ ಗುರುಗಳಾದ ಮಧುಕುಮಾರ್ ಶಾಸ್ತ್ರಿ ಸೇರಿ ಅನೇಕ ಯುವಕರು ಎಲ್ಲಾರೂ ಸೇರಿ ಗ್ರಾಮದ 101 ಕೋಟಿ ಗಣಗಳ ಹೊಂದಿರುವ ಹಾಗೂ ಕಳಸ ಇರುವ ಗಿರಿ ಹತ್ತಿ ಮಳೆಗಾಗಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಗಿರಿಯಿಂದ ಕೆಳಗೆ ಇಳಿಯುವಾಗ ಗುಡುಗಿನ ಸದ್ದು ಮಾಡಿ ಮಳೆಯ ಮನ್ಸೂಚನೆ ನೀಡಿದ್ದು ಗ್ರಾಮಸ್ಥರಿಗೆ ಅಚ್ಚರಿ ಹಾಗೂ ಸಂತಸ ತಂದಿತ್ತು.

ಇದೆ ಸಂದರ್ಭದಲ್ಲಿ ಗ್ರಾಮದ ಅನೇಕ 25ರಿಂದ 38ವರ್ಷದ ಯುವಕರಿಗೆ ಇನ್ನು ಮದುವೆ ಆಗದ್ದನ್ನು ಕಂಡ ಊರಿನ ಮುಖ್ಯಸ್ಥರು ಹಾಗೂ ಪರದೇಶಪ್ಪ ಮಠದ ಗುರುಗಳಾದ ಮಧು ಕುಮಾರ್ ಶಾಸ್ತ್ರಿ ಅವರು ಯುವಕರೆಲ್ಲರನ್ನು ಸೇರಿಸಿ ಮದುವೆಯಾಗದ ಯುವಕರ ಪಟ್ಟಿ ಮಾಡಿ ಶ್ರೀ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಅಜ್ಜಯ್ಯ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನ್ನವರಿಗೆ ಗ್ರಾಮದ ಎಲ್ಲ ಯುವಕರಿಗೆ ಆದಷ್ಟು ಬೇಗ ಹುಡುಗಿ ಸಿಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಯುವಕರ ಪಟ್ಟಿಯನ್ನು ಕಾಣಿಕೆ ಹುಂಡಿಗೆ ಹಾಕಿ ಇನ್ನೊಂದು ಪಟ್ಟಿಯನ್ನು ಪರದೇಶಪ್ಪನ ಮಠಕ್ಕೆ ಕಳುಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಯುವಕರು ಹಾಸ್ಯ ಚಟಾಕಿ ಹಾರಿಸಿ ಹುಡುಗಿ ಸಿಗದೇ ಇದ್ದ ಸಂದರ್ಭದಲ್ಲಿ ಮಠಕ್ಕೆ ಸೇರಿಕೊಳ್ಳುವುದಾಗಿ ಪರದೇಶಪ್ಪ ಮಠದ ಗುರುಗಳಾದ ಮಧು ಕುಮಾರ್ ಶಾಸ್ತ್ರಿಯವರಿಗೆ ತಿಳಿಸಿದ್ದಾರೆ.